Tag: suri

  • ಅಂದು ವಿಜಯ್, ಇಂದು ಮಗಳಿಗೆ ದುನಿಯಾ ಸೂರಿ ಸಿನಿಮಾ

    ಅಂದು ವಿಜಯ್, ಇಂದು ಮಗಳಿಗೆ ದುನಿಯಾ ಸೂರಿ ಸಿನಿಮಾ

    ಟ ದುನಿಯಾ ವಿಜಯ್‍ (Duniya Vijay) ಗೆ ಲೈಫ್‍ ಕೊಟ್ಟ ಹೆಗ್ಗಳಿಗೆ ದುನಿಯಾ ಸೂರಿ (Suri) ಅವರದ್ದು. ದುನಿಯಾ ಸಿನಿಮಾ ಮೂಲಕ ವಿಜಯ್‍ ಅವನ್ನು ಹೀರೋ ಮಾಡಿದವರು ಸೂರಿ. ದುನಿಯಾ ಮೂಲಕ ವಿಜಯ್‍ ಗೆ ಸಿನಿಮಾ ಜಗತ್ತಿಗೆ ಹೀರೋ ಆಗಿ ಪರಿಚಯಿಸಿದವರು. ಈಗ ವಿಜಯ್ ಮಗಳನ್ನು ನಾಯಕಿಯನ್ನಾಗಿ ಮಾಡುತ್ತಿದ್ದಾರೆ ಸೂರಿ.

    ಕೆಂಡಸಂಪಿಗೆ ಸಿನಿಮಾದ ನಂತರ ಇದರ ಪಿಕ್ವೇಲ್ ಕಥೆಯನ್ನು ಹೇಳುವುದಾಗಿ ಒಂಬತ್ತು ವರ್ಷಗಳ ಹಿಂದೆಯೇ ಸೂರಿ ಪ್ರಕಟಿಸಿದ್ದರು. ಅದಕ್ಕೆ ಕಾಗೆ ಬಂಗಾರ ಅಂತಾನೂ ಹೆಸರು ಇಟ್ಟಿದ್ದರು. ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳನ್ನು ಸೂರಿ ಒಪ್ಪಿಕೊಂಡ ಕಾರಣದಿಂದಾಗಿ ಈ ಸಿನಿಮಾ ಮಾಡಿರಲಿಲ್ಲ. ಇದೀಗ ಕಾಗೆ ಬಂಗಾರಕ್ಕೆ ಮುಹೂರ್ತ ಕೂಡಿ ಬಂದಿದೆ.

    ವಿರಾಟ್ ಎಂಬ ಹೊಸ ಪ್ರತಿಭೆಗಾಗಿ ಸಿನಿಮಾ ಮಾಡಲು ಹೊರಟಿದ್ದರು ಸೂರಿ. ಈಗ ಅದೇ ಚಿತ್ರಕ್ಕೆ ದುನಿಯಾ ವಿಜಯ್ ಅವರ ಮಗಳು ರಿತಾನ್ಯಳನ್ನು (Ritanya) ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಕೇಳಿ ಬರುತ್ತಿದೆ. ಅಧಿಕೃತವಾಗಿ ಮಾಹಿತಿ ಕೊಡದೇ ಇದ್ದರೂ ಸುದ್ದಿ ಬಲವಾಗಿದೆ.

    ಅಂದು ವಿಜಯ್ ಜೊತೆ ಸಿನಿಮಾ ಮಾಡಿ ಯಶಸ್ಸು ತಂದುಕೊಟ್ಟಿದ್ದ ಸೂರಿ, ಇಂದು ವಿಜಯ್ ಮಗಳಿಗೂ ಅಂಥದ್ದೊಂದು ಯಶಸ್ಸು ಕೊಡ್ತಾರಾ ಕಾದು ನೋಡಬೇಕಿದೆ. ಒಟ್ನಲ್ಲಿ ಸುದ್ದಿಯಂತೂ ಭರ್ಜರಿಯಾಗಿದೆ.

  • ‘ಜಾಕಿ’ಯನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಫ್ಯಾನ್ಸ್

    ‘ಜಾಕಿ’ಯನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಫ್ಯಾನ್ಸ್

    ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ಜಾಕಿ (Jackie) ಸಿನಿಮಾವನ್ನು ಅವರ ಅಭಿಮಾನಿಗಳು ರಾಜ್ಯಾದ್ಯಂತ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಥಿಯೇಟರ್ ಮುಂದೆ ಆಳೆತ್ತರದ ಕಟೌಟ್ ಹಾಕಿ ಸಂಭ್ರಮಿಸಿದ್ದಾರೆ. ಅಪ್ಪು (Puneeth Rajkumar) ಹುಟ್ಟು ಹಬ್ಬಕ್ಕೆ (Birthday) ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ.

    ದುನಿಯಾ ಸೂರಿ (Duniya Vijay)  ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಚಿತ್ರ ಎಂದು ದಾಖಲಾಗಿದೆ. ಅಲ್ಲದೇ, ಈ ಸಿನಿಮಾದ ಹಾಡುಗಳು ಕೂಡ ಹೊಸ ರೀತಿಯಲ್ಲಿ ಕೇಳಿಸಿದ್ದವು. ಹಾಗಾಗಿ ಅಪ್ಪು ಡಾನ್ಸ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು.

    ಚಿತ್ರದ ಕಥೆ, ಅಪ್ಪು ಡಾನ್ಸ್, ಹಾಡು ಹಾಗೂ ಸಾಹಸ ಸನ್ನಿವೇಶಗಳಿಂದ ಜಾಕಿ ಸಿನಿಮಾ ಗಮನ ಸೆಳೆದಿತ್ತು. ವಿಚಿತ್ರ ವೇಷಗಳನ್ನೂ ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಹಾಕಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅಪ್ಪು ಜೊತೆ ಭಾವನಾ ನಾಯಕಿಯಾಗಿ ನಟಿಸಿದ್ದರು.

    ಜಾಕಿ ಚಿತ್ರವನ್ನು ಮತ್ತಷ್ಟು ಅಪ್ ಗ್ರೇಡ್ ಮಾಡಿ ಈ ಬಾರಿ ಥಿಯೇಟರ್ ಗೆ ತರಲಾಗುತ್ತಿದೆ. ಸೌಂಡ್, ರೆಸ್ಯುಲೇಷನ್ ಮತ್ತಷ್ಟು ಹೆಚ್ಚಿಸಲಾಗಿದೆಯಂತೆ. ಇನ್ನಷ್ಟು ಕಲರ್ ಫುಲ್ ನೊಂದಿಗೆ ಜಾಕಿ ಸಿನಿಮಾವನ್ನು ನೋಡಬಹುದಾಗಿದೆಯಂತೆ.

    ಬರೀ ಸಿನಿಮಾ ಮಾತ್ರವಲ್ಲ ಎಂದಿನಂತೆ ಅವರ ಅಭಿಮಾನಿಗಳು ಅನ್ನ ಸಂತರ್ಪಣೆ, ಕಣ್ಣುದಾನ, ರಕ್ತದಾನದಂತಹ ಶಿಬಿರಗಳನ್ನು ಅಪ್ಪು ಸಮಾಧಿ ಬಳಿ ಮಾಡಲು ರೆಡಿ ಆಗುತ್ತಿದ್ದಾರೆ. ಅಂದು ಯುವ ಸಿನಿಮಾದ ಇವೆಂಟ್ ಕೂಡ ಇರಲಿದೆ.

  • ನಾಳೆ ಅಪ್ಪು ನಟನೆಯ ‘ಜಾಕಿ’ ಸಿನಿಮಾ ರಿಲೀಸ್

    ನಾಳೆ ಅಪ್ಪು ನಟನೆಯ ‘ಜಾಕಿ’ ಸಿನಿಮಾ ರಿಲೀಸ್

    ಪುನೀತ್ ರಾಜ್ ಕುಮಾರ್ (Puneeth Rajkumar) ಹುಟ್ಟು ಹಬ್ಬಕ್ಕೆ (Birthday) ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮಾರ್ಚ್ 17ಕ್ಕೆ ಅಪ್ಪು ಹುಟ್ಟು ಹಬ್ಬ. ಹಾಗಾಗಿ ನಾಳೆ ಅಪ್ಪು ನಟನೆಯ ಜಾಕಿ (Jackie) ಸಿನಿಮಾ ರಿರೀಲಿಸ್ ಆಗುತ್ತಿದೆ. ಅದಕ್ಕಾಗಿ ಅನೇಕ ಚಿತ್ರಮಂದಿರಗಳು ಇಂದಿನಿಂದಲೇ ಸಿದ್ಧತೆ ಮಾಡಿಕೊಂಡಿವೆ.

    ದುನಿಯಾ ಸೂರಿ (Duniya Vijay)  ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಚಿತ್ರ ಎಂದು ದಾಖಲಾಗಿದೆ. ಅಲ್ಲದೇ, ಈ ಸಿನಿಮಾದ ಹಾಡುಗಳು ಕೂಡ ಹೊಸ ರೀತಿಯಲ್ಲಿ ಕೇಳಿಸಿದ್ದವು. ಹಾಗಾಗಿ ಅಪ್ಪು ಡಾನ್ಸ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು.

    ಚಿತ್ರದ ಕಥೆ, ಅಪ್ಪು ಡಾನ್ಸ್, ಹಾಡು ಹಾಗೂ ಸಾಹಸ ಸನ್ನಿವೇಶಗಳಿಂದ ಜಾಕಿ ಸಿನಿಮಾ ಗಮನ ಸೆಳೆದಿತ್ತು. ವಿಚಿತ್ರ ವೇಷಗಳನ್ನೂ ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಹಾಕಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅಪ್ಪು ಜೊತೆ ಭಾವನಾ ನಾಯಕಿಯಾಗಿ ನಟಿಸಿದ್ದರು.

    ಜಾಕಿ ಚಿತ್ರವನ್ನು ಮತ್ತಷ್ಟು ಅಪ್ ಗ್ರೇಡ್ ಮಾಡಿ ಈ ಬಾರಿ ಥಿಯೇಟರ್ ಗೆ ತರಲಾಗುತ್ತಿದೆ. ಸೌಂಡ್, ರೆಸ್ಯುಲೇಷನ್ ಮತ್ತಷ್ಟು ಹೆಚ್ಚಿಸಲಾಗಿದೆಯಂತೆ. ಇನ್ನಷ್ಟು ಕಲರ್ ಫುಲ್ ನೊಂದಿಗೆ ಜಾಕಿ ಸಿನಿಮಾವನ್ನು ನೋಡಬಹುದಾಗಿದೆಯಂತೆ.

    ಬರೀ ಸಿನಿಮಾ ಮಾತ್ರವಲ್ಲ ಎಂದಿನಂತೆ ಅವರ ಅಭಿಮಾನಿಗಳು ಅನ್ನ ಸಂತರ್ಪಣೆ, ಕಣ್ಣುದಾನ, ರಕ್ತದಾನದಂತಹ ಶಿಬಿರಗಳನ್ನು ಅಪ್ಪು ಸಮಾಧಿ ಬಳಿ ಮಾಡಲು ರೆಡಿ ಆಗುತ್ತಿದ್ದಾರೆ. ಅಂದು ಯುವ ಸಿನಿಮಾದ ಇವೆಂಟ್ ಕೂಡ ಇರಲಿದೆ.

  • ರಂಗಾಯಣ ರಘುಗೆ ‘ಅಭಿನಯಾಸುರ’ ಬಿರುದು

    ರಂಗಾಯಣ ರಘುಗೆ ‘ಅಭಿನಯಾಸುರ’ ಬಿರುದು

    ನ್ನಡದ ಹೆಸರಾಂತ ನಟ ರಂಗಾಯಣ ರಘು ಅವರಿಗೆ ಹೊಸ ಬಿರುದು ನೀಡಿ ಗೌರವಿಸಿದ್ದಾರೆ ಶಾಖಾಹಾರಿ ಚಿತ್ರತಂಡ. ಸಿನಿಮಾದ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸುಕ್ಕ ಸೂರಿ ವಿಶೇಷ ಅಥಿಯಾಗಿ ಆಗಮಿಸಿ ರಂಗಾಯಣ ರಘು ಅವರಿಗೆ ಅಭಿನಯಾಸುರು ಎಂಬ ಬಿರುದು ನೀಡಿ ಗೌರವಿಸಿತು. ಇಲ್ಲಿವರೆಗೂ ಯಾವುದೇ ಚಿತ್ರತಂಡ ಅವರಿಗೆ ಈ ರೀತಿ ಬಿರುದು ಕೊಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ  ಅವರ ಕಲಾಸೇವೆ ಚಿತ್ರತಂಡ ಈ ರೀತಿ ಗೌರವ ಸೂಚಿಸಿದೆ.

    ಇದೇ ವೇಳೆ ಮಾತನಾಡಿದ ನಿರ್ದೇಶಕ ದುನಿಯಾ ಸೂರಿ ಮಾತನಾಡಿ, ನಾನು ಈ ರೀತಿ ಮೈಕ್ ಹಿಡಿದು ಮಾತನಾಡುತ್ತಿದ್ದೇನೆ. ನನ್ನ ನಿರ್ದೇಶಕ ಅಂತಾ ಕರೆಯುತ್ತಾರೆ ಎಂದರೆ. ಈ ಹಿಂದೆ ನಾವು ಯೋಗರಾಜ್ ಮಣಿ ಅಂತಾ ಸಿನಿಮಾ ಮಾಡಬೇಕಾದರೆ ರಘು ಸರ್ ಸಿಕ್ತಾರೆ. ನಮಗೆ ಅಲ್ಲಿಂದ ದೊಡ್ಮನೆ ಹುಡುಗ ಸಿನಿಮಾದವರೆಗೂ ಜೊತೆಯಲಿ ಇದ್ದರು. ಈ ನಡುವೆ ಅಣ್ಣ ಮಾಡುವ ಪಾತ್ರ ಇಲ್ಲ ಎಂದು ಬಿಟ್ಟುಕೊಡುತ್ತೇವೆ. ನಾನು ಒಂದು ವಿಷಯ ತೆಗೆದುಕೊಂಡು ಹೋದರೆ ಅದಕ್ಕೊಂದು ಹಿನ್ನೆಲೆ ಹೇಳಿ ಗಟ್ಟಿ ಮಾಡುತ್ತಾರೆ. ಯೋಗರಾಜ್, ಸರ್ ನಮಗೆ ಗುರು. ಅನುಭವ ಹೇಳ್ತಾರೆ, ಹೆದರಬೇಡ ಅಂತಾರೇ. ನಾನು ಆಕ್ಷನ್ ಕಟ್ ಹೇಳಬಹುದು. ನಾನು ಇಂದು ಏನಾದ್ರೂ ಮಾಡಿದ್ದೇನೆ ಎಂದರೆ ಅದರಲ್ಲಿ ರಘು ಸರ್ ದ್ದೂ ದೊಡ್ಡ ಪಾಲು. ನಮ್ಮ ಬರವಣಿಗೆಯನ್ನು ಸ್ಕ್ರೀನ್ ಗೆ ತರುವುದು ಇದೆಯಲ್ಲ. ಅದಕ್ಕೆ ಕಲಾವಿದ ಜೀವ ತುಂಬಬೇಕು. ನನಗೆ ಅನಿಸುತ್ತದೆ ನಾವು ರಘು ಸರ್ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೇನೋ? ಅನಿಸುತ್ತೆ ಎಂದರು.

    ರಂಗಾಯಣ ರಘು ಮಾತನಾಡಿ, ನನ್ನ ಒಟ್ಟು ಜೀವನದಲ್ಲಿ ನನಗೆ ತುಂಬಾ ಅಮೂಲ್ಯ ನೆನಪು ಕೊಟ್ಟಂತಹವರು ಸೂರಿ ಅವರು ಹಾಗೂ ಅಶ್ವಿನಿ ಮೇಡಂ. ನಾನು ಇಂಡಸ್ಟ್ರಿಗೆ ಬಂದು ಸುಮಾರು 35 ವರ್ಷವಾಯ್ತು. ನಾನು ಒಂದ ಸಿನಿಮಾಗೋಸ್ಕರ ಬಂದವನು. 94 ರಿಂದ 2001ರವೆಗೆ ನಾನು ಮಾಡಿದ ಸಿನಿಮಾಗಳ ಬಗ್ಗೆ ಊರಲೆಲ್ಲಾ ಹಾಗೇ ಮಾಡಿದ್ದೇನೆ. ಹೀಗೆ ಮಾಡಿದ್ದೇನೆ  ಹೇಳಿಕೊಂಡು ಬರುತ್ತಿದ್ದೆ. ರಂಗಾಯಣದ ಬಗ್ಗೆ ನಾನು ಎಷ್ಟು ನೆನಪು ಮಾಡಿಕೊಂಡರೇ ಸಾಲದು. ನನ್ನದು 350 ಸಿನಿಮಾವಾಗಿದೆ. ಈ ರೀತಿ ಪಾತ್ರ ಮಾಡಬೇಕು ಎಂದು ನಾನು ಯೋಚಿಸಿಲ್ಲ ಅಪ್ಪು ಸರ್ ಋಣ ಜಾಸ್ತಿ ಇದೆ, ಮೇಡಂ ಬಂದಿರುವುದು ಅಷ್ಟೇ ಖುಷಿಯಾಗುತ್ತಿದೆ. ನಮಗೆ ದೊಡ್ಮನೆಯಿಂದ ದೊಡ್ಡ ಆಶೀರ್ವಾದ  ಸಿಕ್ಕಿದೆ. ಇಡೀ ಇಂಡಸ್ಟ್ರೀಯ ಎಲ್ಲಾ ನಟರ ಜೊತೆ ಮಾಡಿದ್ದೇನೆ. ಹೊಸಬರ ಜೊತೆಯೂ ಮಾಡಿದ್ದೇನೆ. ಹೊಸಬರು ಮತ್ತಷ್ಟು ಬರಲಿ ಎಂದರು.

  • ಡಿ.17ಕ್ಕೆ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದ ಟೀಸರ್

    ಡಿ.17ಕ್ಕೆ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದ ಟೀಸರ್

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಬಘೀರ (Bagheera) ಸಿನಿಮಾ ಟೀಮ್ ನಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡವು, ಅದರ ಮೊದಲ ನೋಟವನ್ನು ಪ್ರೇಕ್ಷಕರಿಗೆ ತೋರಿಸಲು ಮುಂದಾಗಿದೆ. ಇದೇ ಡಿಸೆಂಬರ್ 17ಕ್ಕೆ ಸಿನಿಮಾದ ಟೀಸರ್ (Teaser) ರಿಲೀಸ್ ಮಾಡುವುದಾಗಿ ನಿರ್ಮಾಣ ಸಂಸ್ಥೆ ಘೋಷಿಸಿದೆ.

    ಉಗ್ರಂ, ಭರಾಟೆ, ಮದಗಜ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಬಘೀರನಾಗಿ ಮಿಂಚಲು ರೆಡಿಯಾಗಿದ್ದಾರೆ. ಕೆಜಿಎಫ್’ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಬರೆದಿರುವ ಕಥೆಗೆ, ಡಾ.ಸೂರಿ ನಿರ್ದೇಶನ ಮಾಡುತ್ತಿದ್ದು, ಬಘೀರನಾಗಿ ಶ್ರೀಮುರಳಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ರಗಡ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಡಿಫರೆಂಟ್ ಸ್ಟೋರಿ ಮೂಲಕ ಮೋಡಿ ಮಾಡೋಕೆ ಶ್ರೀಮುರಳಿ ರೆಡಿಯಾಗಿದ್ದಾರೆ.

    ಈ ಹಿಂದೆಯೇ ಚಿತ್ರ ಫಸ್ಟ್ ಲುಕ್ ರಿವೀಲ್ ಆಗಿದ್ದು, ಶ್ರೀಮುರಳಿ ಸಖತ್ ಖಡಕ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ರು. ಈ ಲುಕ್ ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಹಾಗಾಗಿ ಟೀಸರ್ ಬಗ್ಗೆ ಕಾಯುವಂತಾಗಿದೆ. ಬಘೀರ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಕೂಡ ಶುರುವಾಗಿದೆ.

    ಶೂಟಿಂಗ್ ವೇಳೆ ಶ್ರೀಮುರಳಿಗೆ ಪೆಟ್ಟಾಗಿದ್ದರಿಂದ ಕೆಲ ಕಾಲ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಆರೋಗ್ಯ ಸುಧಾರಿಸಿಕೊಂಡು ಮತ್ತೆ ಮುರಳಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಇದೀಗ ಬಹುತೇಕ ಚಿತ್ರೀಕರಣ ಮುಗಿದೆ ಎಂದು ಹೇಳಲಾಗುತ್ತಿದೆ.

  • ‘ಜಿಗರ್’ ಚಿತ್ರದಲ್ಲಿ ಪ್ರವೀಣ್ ತೇಜ್ ಮಾಸ್: ಟೀಸರ್ ರಿಲೀಸ್

    ‘ಜಿಗರ್’ ಚಿತ್ರದಲ್ಲಿ ಪ್ರವೀಣ್ ತೇಜ್ ಮಾಸ್: ಟೀಸರ್ ರಿಲೀಸ್

    ಸ್ಯಾಂಡಲ್‌ವುಡ್ ನಟ ಪ್ರವೀಣ್ ತೇಜ್ (Praveen Tej) ಜಿಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಪ್ರವೀಣ್ ಈ ಬಾರಿ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ ಮೊದಲ ಬಾರಿಗೆ ಪ್ರವೀಣ್ ಆಕ್ಷನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈಗಾಗಲೇ ಸಿನಿಮಾದ ಮೊದಲ ಹಾಡನ್ನು ರಿಲೀಸ್ ಮಾಡಿದ್ದ ಸಿನಿಮಾತಂಡ ಇದೀಗ ಟೀಸರ್ (Teaser) ಮೂಲಕ ಎಂಟ್ರಿ  ಕೊಟ್ಟಿದ್ದಾರೆ.

    ಕರಾವಳಿ ಸುತ್ತ ಮುತ್ತ ಚಿತ್ರೀಕರಣಗೊಂಡಿರುವ ಜಿಗರ್ ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ. ರೊಮ್ಯಾಂಟಿಕ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರವೀಣ್ ಜಿಗರ್ ನಲ್ಲಿ ಚಾಕು ಚುಚ್ಚಿ ರಕ್ತ ಹರಿಸಿದ್ದನ್ನು ನೋಡಿ ಪ್ರೇಕ್ಷಕರು ಅಚ್ಚರಿ ಪಟ್ಟಿದ್ದಾರೆ. ಅಂದಹಾಗೆ ಚಿತ್ರಕ್ಕೆ ಸೂರಿ ಕುಂದರ್ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಸೂರಿ ಅವರಿಗೆ ಇದು ಮೊದಲ ಸಿನಿಮಾ.

    ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಸಿನಿಮಾಗಳಿಗೆ ಸಹಾಯಕ  ನಿರ್ದೇಶಕರಾಗಿ ಕೆಲಸ ಮಾಡಿದ್ದ ನಿರ್ದೇಶಕ ಸೂರಿ ಜಿಗರ್ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಮೊದಲ ಸಿನಿಮಾದ ಮೇಲೆ ನಿರ್ದೇಶಕ ಸೂರಿ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯು ಕೆ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣವಗಿದ್ದು ಪೂಜಾ ವಸಂತ್ ಚಿತ್ರಕ್ಕೆ  ಬಂಡವಾಳ ಹಾಕಿದ್ದಾರೆ ,

    ಇನ್ನೂ ಈ ಸಿನಿಮಾದಲ್ಲಿ ಪ್ರವೀಣ್‌ಗೆ ನಾಯಕಿಯಾಗಿ ವಿಜಯ್ ಶ್ರೀ ಕಾಣಿಸಿಕೊಂಡಿದ್ದಾರೆ. ವಿಜಯ್ ಶ್ರೀ (Vijay Sri) ಅವರಿಗೂ ಇದು ಮೊದಲ ಸಿನಿಮಾವಾಗಿದೆ.  ಚಿತ್ರಕ್ಕೆ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಲ್ಫೆ, ಮರುವಂತೆ, ಮಂಗಳೂರು ಸುತ್ತಮುತ್ತ ಜಿಗರ್ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಸಂಪೂರ್ಣ ಸಿನಿಮಾ ಕೂಡ ಇದೇ ಬ್ಯಾಕ್‌ಡ್ರಾಪ್‌ನಲ್ಲಿ ಇರಲಿದೆ.

    ಪ್ರವೀಣ್ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂದು ಎದುರುನೋಡುತ್ತಿದ್ದಾರೆ. ಕೊನೆಯದಾಗಿ ಪ್ರವೀಣ್ ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಗಮನ  ಸೆಳೆದಿರುವ ಜಿಗರ್ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಐ ಯ್ಯಾಮ್ ಇನ್ ಲವ್’ ಅಂತಿದ್ದಾರೆ ರಚಿತಾ ರಾಮ್

    ‘ಐ ಯ್ಯಾಮ್ ಇನ್ ಲವ್’ ಅಂತಿದ್ದಾರೆ ರಚಿತಾ ರಾಮ್

    ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟಿ ರಚಿತಾ ರಾಮ್ (Rachita Ram) ‘ಐ ಯ್ಯಾಮ್ ಇನ್ ಲವ್’ (I am In Love) ಅಂತಿದ್ದಾರೆ. ಅರೇ.. ಇದೇನಿದು ಹೊಸ ಸುದ್ದಿ ಅನಬೇಡಿ. ಅವರು ಹೇಳಿದ್ದು ಹಾಡಿನ ಮೂಲಕ. ಅದು ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಎನ್ನುವುದು ವಿಶೇಷ. ಇಂದು ರಚಿತಾ ರಾಮ್ ಮತ್ತು ಅಭಿಷೇಕ್ ಅಂಬರೀಶ್ ಅವರ ಹುಟ್ಟು ಹಬ್ಬ. ಇವರ ಹುಟ್ಟು ಹಬ್ಬಕ್ಕಾಗಿಯೇ ಬ್ಯಾಡ್ ಮ್ಯಾನರ್ಸ್ ಚಿತ್ರತಂಡ ‘ಐ ಯ್ಯಾಮ್ ಇನ್ ಲವ್’ ಹಾಡನ್ನು ರಿಲೀಸ್ ಮಾಡಿದೆ.

    ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ

    ಭಾವ ತುಂಬಿದ ಹಾಡುಗಳ ಮೂಲಕ ಫೇಮಸ್ ಆಗಿದ್ದ ಜಯಂತ್ ಕಾಯ್ಕಿಣಿ, ಇದೀಗ ಅಭಿಷೇಕ್ ಅಂಬರೀಶ್ (Abhishek Ambarish) ನಟನೆಯ ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾಗಾಗಿ ಮಾಸ್ ಗೀತೆಯೊಂದನ್ನು ಬರೆದಿದ್ದಾರೆ. ‘ಓಗ.. ಓಗ..’ ಎಂದು ಶುರುವಾಗುವ ಗೀತೆಯಲ್ಲಿ ಕೇಳದೇ ಇರುವಂಥ ಹಲವು ಪದಗಳನ್ನು ಬಳಸಲಾಗಿದೆ. ಅವೆಲ್ಲವೂ ಗ್ರಿಬಿಶ್ ಪದಗಳಾಗಿವೆಯಂತೆ. ಹೀಗಾಗಿ ಹಾಡು ಹೊಸ ರೀತಿಯಲ್ಲೇ ಕೇಳಿಸುತ್ತದೆ.

    ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡಿಗೆ ಜಯಂತ್ ಕಾಯ್ಕಿಣಿ (Jayant Kaykini) ಸಾಹಿತ್ಯ ಬರೆದಿದ್ದರೆ, ಕಪಿಲ್ ಕಪಿಲನ್ ಹಾಡಿದ್ದಾರೆ. ಅಭಿಷೇಕ್ ಅಂಬರೀಶ್ ಸಖತ್ತಾಗಿಯೇ ಗೀತೆಗೆ ಸ್ಟೆಪ್ ಹಾಕಿದ್ದಾರೆ. ಸೂರಿ (Suri) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಇದೇ ಮೊದಲ ಬಾರಿಗೆ ಅಭಿಷೇಕ್ ಮತ್ತು ಸೂರಿ ಈ ಸಿನಿಮಾದ ಮೂಲಕ ಒಂದಾಗಿದ್ದಾರೆ.

    ಈ ಹಿಂದೆ ಯುಗಾದಿ ದಿನದಂದು ಪೆಪ್ಪಿ ಸಾಂಗ್‌ಗೆ ರಿಲೀಸ್ ಆಗಿತ್ತು. ಆ ಹಾಡಿಗೆ ಧನಂಜಯ್ ರಾಜನ್ ಬೊಂಬಾಟ್ ಲಿರಿಕ್ಸ್ ಬರೆದಿದ್ದರು. ಬಾಲಿವುಡ್ ಖ್ಯಾತ ಗಾಯಕಿ ಉಷಾ ಉತ್ತುಪ್ ಹಾಗೂ ಆಕಾಶ್ ಜಾಕೋಬ್ ವಾಯ್ಸ್‌ನಲ್ಲಿ ಸಾಂಗ್ ಸಖತ್ ಮಜವಾಗಿತ್ತು. ಚಿತ್ರದಲ್ಲಿ ಅಭಿ ಪಾತ್ರ ಪರಿಚಯಿಸುವ ಸಾಂಗ್ ಇದಾಗಿದೆ.

    ಅಭಿಷೇಕ್- ರುದ್ರ ಎರಡನ್ನು ಸೇರಿಸಿ ಹಾಡಿನಲ್ಲಿ ರುದ್ರಾಭಿಷೇಕ ನಡೆಸಲಾಗಿದೆ. ಕೊಂಚ ಹಿಂದಿ, ಇಂಗ್ಲೀಷ್ ಪದಗಳನ್ನು ಹೆಚ್ಚೇ ಸೇರಿಸಿ ಸಾಲುಗಳನ್ನು ಪೋಣಿಸಲಾಗಿದೆ. `ಬ್ಯಾಡ್ ಮ್ಯಾನರ್ಸ್’ (Bad Manners) ಟೈಟಲ್ ಸಾಂಗ್‌ಗೆ ಧನಂಜಯ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಅಭಿಷೇಕ್ ಸಿಕ್ಕಾಪಟ್ಟೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಬ್ಯಾಡ್ ಮ್ಯಾನರ್ಸ್’ ಚಿತ್ರಕ್ಕೆ ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ

    ‘ಬ್ಯಾಡ್ ಮ್ಯಾನರ್ಸ್’ ಚಿತ್ರಕ್ಕೆ ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ

    ಭಾವ ತುಂಬಿದ ಹಾಡುಗಳ ಮೂಲಕ ಫೇಮಸ್ ಆಗಿದ್ದ ಜಯಂತ್ ಕಾಯ್ಕಿಣಿ, ಇದೀಗ ಅಭಿಷೇಕ್ ಅಂಬರೀಶ್ (Abhishek Ambarish) ನಟನೆಯ ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾಗಾಗಿ ಮಾಸ್ ಗೀತೆಯೊಂದನ್ನು ಬರೆದಿದ್ದಾರೆ. ‘ಓಗ.. ಓಗ..’ ಎಂದು ಶುರುವಾಗುವ ಗೀತೆಯಲ್ಲಿ ಕೇಳದೇ ಇರುವಂಥ ಹಲವು ಪದಗಳನ್ನು ಬಳಸಲಾಗಿದೆ. ಅವೆಲ್ಲವೂ ಗ್ರಿಬಿಶ್ ಪದಗಳಾಗಿವೆಯಂತೆ. ಹೀಗಾಗಿ ಹಾಡು ಹೊಸ ರೀತಿಯಲ್ಲೇ ಕೇಳಿಸುತ್ತದೆ.

    ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡಿಗೆ ಜಯಂತ್ ಕಾಯ್ಕಿಣಿ (Jayant Kaykini) ಸಾಹಿತ್ಯ ಬರೆದಿದ್ದರೆ, ಕಪಿಲ್ ಕಪಿಲನ್ ಹಾಡಿದ್ದಾರೆ. ಅಭಿಷೇಕ್ ಅಂಬರೀಶ್ ಸಖತ್ತಾಗಿಯೇ ಗೀತೆಗೆ ಸ್ಟೆಪ್ ಹಾಕಿದ್ದಾರೆ. ಸೂರಿ (Suri) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಇದೇ ಮೊದಲ ಬಾರಿಗೆ ಅಭಿಷೇಕ್ ಮತ್ತು ಸೂರಿ ಈ ಸಿನಿಮಾದ ಮೂಲಕ ಒಂದಾಗಿದ್ದಾರೆ. ಇದನ್ನೂ ಓದಿ:Gowri: ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ‌ ಚಂದು ಗೌಡ ವಿಲನ್

    ಈ ಹಿಂದೆ ಯುಗಾದಿ ದಿನದಂದು ಪೆಪ್ಪಿ ಸಾಂಗ್‌ಗೆ ರಿಲೀಸ್ ಆಗಿತ್ತು. ಆ ಹಾಡಿಗೆ ಧನಂಜಯ್ ರಾಜನ್ ಬೊಂಬಾಟ್ ಲಿರಿಕ್ಸ್ ಬರೆದಿದ್ದರು. ಬಾಲಿವುಡ್ ಖ್ಯಾತ ಗಾಯಕಿ ಉಷಾ ಉತ್ತುಪ್ ಹಾಗೂ ಆಕಾಶ್ ಜಾಕೋಬ್ ವಾಯ್ಸ್‌ನಲ್ಲಿ ಸಾಂಗ್ ಸಖತ್ ಮಜವಾಗಿತ್ತು. ಚಿತ್ರದಲ್ಲಿ ಅಭಿ ಪಾತ್ರ ಪರಿಚಯಿಸುವ ಸಾಂಗ್ ಇದಾಗಿದೆ.

    ಅಭಿಷೇಕ್- ರುದ್ರ ಎರಡನ್ನು ಸೇರಿಸಿ ಹಾಡಿನಲ್ಲಿ ರುದ್ರಾಭಿಷೇಕ ನಡೆಸಲಾಗಿದೆ. ಕೊಂಚ ಹಿಂದಿ, ಇಂಗ್ಲೀಷ್ ಪದಗಳನ್ನು ಹೆಚ್ಚೇ ಸೇರಿಸಿ ಸಾಲುಗಳನ್ನು ಪೋಣಿಸಲಾಗಿದೆ. `ಬ್ಯಾಡ್ ಮ್ಯಾನರ್ಸ್’ (Bad Manners) ಟೈಟಲ್ ಸಾಂಗ್‌ಗೆ ಧನಂಜಯ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಅಭಿಷೇಕ್ ಸಿಕ್ಕಾಪಟ್ಟೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟಗರು 2 ಚಿತ್ರಕ್ಕೆ ನಿರ್ದೇಶಕರು ಯಾರು?: ಶಿವಣ್ಣ ಕೊಟ್ಟರು ಉತ್ತರ

    ಟಗರು 2 ಚಿತ್ರಕ್ಕೆ ನಿರ್ದೇಶಕರು ಯಾರು?: ಶಿವಣ್ಣ ಕೊಟ್ಟರು ಉತ್ತರ

    ಶಿವರಾಜ್ ಕುಮಾರ್ (Shivaraj Kumar) ಹುಟ್ಟು ಹಬ್ಬದ ದಿನದಂದು ‘ಟಗರು 2’ (Tagaru 2) ಸಿನಿಮಾದ ಪೋಸ್ಟರ್ ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು ನಿರ್ಮಾಪಕ ಕೆ.ಪಿ ಶ್ರೀಕಾಂತ್ (KP Srikanth) . ಪೋಸ್ಟರ್ ನಲ್ಲಿ ಹೆಚ್ಚಿನ ಮಾಹಿತಿ ಇಲ್ಲದೇ ಇದ್ದರೂ, ಟಗರು 2 ಸಿನಿಮಾದ ಪೋಸ್ಟರ್ ಹಲವಾರು ಕುತೂಹಲಗಳನ್ನು ಹುಟ್ಟು ಹಾಕಿತ್ತು. ಕೇವಲ ನಿರ್ಮಾಪಕರ ಹೆಸರು ಇದ್ದ ಕಾರಣದಿಂದಾಗಿ ನಿರ್ದೇಶಕರು ಯಾರು ಎನ್ನುವ ಪ್ರಶ್ನೆ ಕೂಡ ಮೂಡಿತ್ತು.

    ಈ ಕುರಿತು ಸ್ವತಃ ಶಿವರಾಜ್ ಕುಮಾರ್ ಅವರ ಸ್ಪಷ್ಟನೆ ನೀಡಿದ್ದಾರೆ. ಟಗರು 2 ಸಿನಿಮಾ ಮಾಡಬೇಕು ಎನ್ನುವುದು ಈ ಹಿಂದೆಯೇ ನಿರ್ಧಾರವಾಗಿತ್ತು. ನಿರ್ದೇಶಕ ಸೂರಿ ಅವರು ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿಯಾದರು. ಟಗರು ಕಾನ್ಸೆಪ್ಟ್ ಸೂರಿ (Suri) ಅವರ ಕಲ್ಪನೆ. ಅದನ್ನು ಅವರೇ ಮಾಡಬೇಕು. ಬ್ಯಾಡ್‌ ಮ್ಯಾನರ್ಸ್ ನಂತರ ಭೇಟಿ ಮಾಡುವುದಾಗಿ ಹೇಳಿದ್ದಾರೆ. ಅವರೇ ಆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ಮಳೆ, ಕೊರೆವ ಚಳಿ ನಡುವೆ ಕಾಶ್ಮೀರದಲ್ಲಿ ಸಾನ್ಯ ಟ್ರೆಕ್ಕಿಂಗ್

    ಈ ಹಿಂದೆ ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಟಗರು ಸಿನಿಮಾ ಶಿವರಾಜ್ ಕುಮಾರ್ ವೃತ್ತಿ ಬದುಕಿಗೆ ವಿಭಿನ್ನ ಚಿತ್ರ ಎನಿಸಿತ್ತು. ಈ ಸಿನಿಮಾದಲ್ಲಿ ಶಿವಣ್ಣ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದರು. ಡಾಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದರು. ಇಂತಹ ಸಿನಿಮಾದ ಮುಂದುವರೆದ ಭಾಗ ಮುಂದೆ ಬರಲಿದೆ.

    ಪೋಸ್ಟರ್ ನಲ್ಲಿ ಸೂರಿ ಹೆಸರು ಹಾಕದೇ ಇದ್ದರೂ, ಟಗರಿನೊಂದಿಗೆ ಶಿವಣ್ಣ ಇರುವ ಪೋಸ್ಟರ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಟಗರು ಸಿನಿಮಾವನ್ನು ನಿರ್ಮಾಣ ಮಾಡಿದ್ದ ಕೆ.ಪಿ ಶ್ರೀಕಾಂತ್ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ಲಹರಿ ಫಿಲ್ಮ್ಸ್ ಕೂಡ ಕೈ ಜೋಡಿಸಿದೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಕುರಿತು ಮತ್ತಷ್ಟು ಮಾಹಿತಿ ಸಿಗಬಹುದು.

    ಮೊನ್ನೆ ಶಿವರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ (Birthday) ಹಲವಾರು ಚಿತ್ರಗಳು ಘೋಷಣೆ ಆಗಿವೆ. ಅದರಲ್ಲೂ ಮೂರು ಮಲ್ಟಿಸ್ಟಾರ್ ಚಿತ್ರಗಳು ಘೋಷಣೆ ಆಗುವ ಮೂಲಕ ಕುತೂಹಲ ಮೂಡಿಸುತ್ತಿವೆ.  ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಗಣೇಶ್, ಪ್ರಭುದೇವ, ಉಪೇಂದ್ರ, ರಾಜ್ ಬಿ ಶೆಟ್ಟಿ, ಅಜಯ್ ರಾವ್ ಅವರು ನಟಿಸುತ್ತಿರುವುದು ಮತ್ತಷ್ಟು ಕಾಯುವಂತೆ ಮಾಡಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಟಗರು 2’ ಬಂತು ಟಗರು: ಯಾವಾಗ ಅಂತಾರೆ ಶಿವಣ್ಣ ಫ್ಯಾನ್ಸ್

    ‘ಟಗರು 2’ ಬಂತು ಟಗರು: ಯಾವಾಗ ಅಂತಾರೆ ಶಿವಣ್ಣ ಫ್ಯಾನ್ಸ್

    ಶಿವರಾಜ್ ಕುಮಾರ್ (Shivaraj Kumar) ಹುಟ್ಟು ಹಬ್ಬದ ದಿನದಂದು ‘ಟಗರು 2’ ಸಿನಿಮಾದ ಪೋಸ್ಟರ್ ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ (KP Srikanth) . ಪೋಸ್ಟರ್ ನಲ್ಲಿ ಹೆಚ್ಚಿನ ಮಾಹಿತಿ ಇಲ್ಲದೇ ಇದ್ದರೂ, ಟಗರು 2 ಸಿನಿಮಾದ ಪೋಸ್ಟರ್ ಹಲವಾರು ಕುತೂಹಲಗಳನ್ನು ಹುಟ್ಟು ಹಾಕಿದೆ. ಈ ಸಿನಿಮಾ ಯಾವಾಗ ಬರುತ್ತದೆ ಎಂದು ಹೇಳದೇ ಇದ್ದರೂ, ಟಗರು 2 (Tagaru 2) ಸಿನಿಮಾ ಬರುವುದು ನಿಶ್ಚಿತ ಎಂದು ಗೊತ್ತಾಗಿದೆ.

    ಈ ಹಿಂದೆ ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಟಗರು ಸಿನಿಮಾ ಶಿವರಾಜ್ ಕುಮಾರ್ ವೃತ್ತಿ ಬದುಕಿಗೆ ವಿಭಿನ್ನ ಚಿತ್ರ ಎನಿಸಿತ್ತು. ಈ ಸಿನಿಮಾದಲ್ಲಿ ಶಿವಣ್ಣ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದರು. ಡಾಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದರು. ಇಂತಹ ಸಿನಿಮಾದ ಮುಂದುವರೆದ ಭಾಗ ಮುಂದೆ ಬರಲಿದೆ. ಇದನ್ನೂ ಓದಿ:ಕೊನೆಗೂ ಮದುವೆ ಬಗ್ಗೆ ಸಿಕ್ರೇಟ್ ಬಿಟ್ಟುಕೊಟ್ಟ ವಿಜಯ್ ದೇವರಕೊಂಡ

    ಪೋಸ್ಟರ್ ನಲ್ಲಿ ಸೂರಿ ಹೆಸರು ಹಾಕದೇ ಇದ್ದರೂ, ಟಗರಿನೊಂದಿಗೆ ಶಿವಣ್ಣ ಇರುವ ಪೋಸ್ಟರ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಟಗರು ಸಿನಿಮಾವನ್ನು ನಿರ್ಮಾಣ ಮಾಡಿದ್ದ ಕೆ.ಪಿ ಶ್ರೀಕಾಂತ್ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ಲಹರಿ ಫಿಲ್ಮ್ಸ್ ಕೂಡ ಕೈ ಜೋಡಿಸಿದೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಕುರಿತು ಮತ್ತಷ್ಟು ಮಾಹಿತಿ ಸಿಗಬಹುದು.

    ನಿನ್ನೆ ಶಿವರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ (Birthday) ಹಲವಾರು ಚಿತ್ರಗಳು ಘೋಷಣೆ ಆಗಿವೆ. ಅದರಲ್ಲೂ ಮೂರು ಮಲ್ಟಿಸ್ಟಾರ್ ಚಿತ್ರಗಳು ಘೋಷಣೆ ಆಗುವ ಮೂಲಕ ಕುತೂಹಲ ಮೂಡಿಸುತ್ತಿವೆ.  ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಗಣೇಶ್, ಪ್ರಭುದೇವ, ಉಪೇಂದ್ರ, ರಾಜ್ ಬಿ ಶೆಟ್ಟಿ, ಅಜಯ್ ರಾವ್ ಅವರು ನಟಿಸುತ್ತಿರುವುದು ಮತ್ತಷ್ಟು ಕಾಯುವಂತೆ ಮಾಡಿವೆ.