Tag: surgical strike 2

  • ಭಾರತ, ಪಾಕಿಸ್ತಾನ ವಾಯು ಮಾರ್ಗಗಳು ಬಂದ್!

    ಭಾರತ, ಪಾಕಿಸ್ತಾನ ವಾಯು ಮಾರ್ಗಗಳು ಬಂದ್!

    ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಎರಡು ದೇಶಗಳ ವಾಯು ಮಾರ್ಗದಲ್ಲಿ ಹಾರಾಟ ನಡೆಸುವ ವಿಮಾನಗಳ ಸಂಚಾರ ಬಂದ್ ಆಗಿದೆ.

    ಶ್ರೀನಗರ, ಜಮ್ಮು, ಲೇಹ್, ಚಂಡೀಗಢ, ಅಮೃತಸರ, ಧರ್ಮಶಾಲಾ, ಡೆಹ್ರಡೂನ್‍ನಲ್ಲಿ ವಾಣಿಜ್ಯ ವಿಮಾನಗಳ ಹಾರಾಟವನ್ನು ಬಂದ್ ಮಾಡಲಾಗಿದೆ.

    ಮುಂದಿನ ಮೇ ತಿಂಗಳವರೆಗೆ ಬಂದ್ ಮಾಡಿದ್ದು, ಪರ್ಯಾಯ ಮಾರ್ಗ ಉಪಯೋಗಿಸುತ್ತಿದೆ. ಮೇ 27ರ ರಾತ್ರಿ 11.55ರವರೆಗೆ ಭಾರತ ತನ್ನ ವಾಯುಮಾರ್ಗ ಬಂದ್ ಮಾಡಿದೆ.

    ಪಾಕಿಸ್ತಾನ ಈಗ ಮುಲ್ತಾನ್, ಲಾಹೋರ್, ಫೈಸಲಾಬಾದ್, ಸಿಯಾಲಟ್ ಕೋಟ್ ನಲ್ಲಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ವಾಣಿಜ್ಯ ವಿಮಾನಗಳ ಹಾರಾಟವನ್ನು ಬಂದ್ ಮಾಡಿದೆ. ದಿಢೀರ್ ಎಂದು ನಿಲ್ದಾಣಗಳು ಬಂದ್ ಆಗಿದ್ದರಿಂದ ಮಾರ್ಗವನ್ನು ಬದಲಿಸಲಾಗಿದೆ. ಕೆಲ ವಿಮಾನಗಳು ಇಂಧನ ಕೊರತೆಯಿಂದಾಗಿ ಹಾರಾಟ ನಡೆಸಿಲ್ಲ. ಎರಡು ದೇಶಗಳ ವಾಯುಮಾರ್ಗ ಬಂದ್ ಆಗಿದ್ದರಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ಏರುಪೇರಾಗಿದೆ.

    ಪಾಕಿಸ್ತಾನ ತನ್ನ ವಾಯುಮಾರ್ಗವನ್ನು ಕರಾಚಿ ಮತ್ತು ಲಾಹೋರ್ ಎಂದು ಎರಡು ಭಾಗವಾಗಿ ವಿಂಗಡಿಸಿದೆ. ಸದ್ಯ ಲಾಹೋರ್ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಪಾಕಿಸ್ತಾನ ಫೆ.28 ರಾತ್ರಿ 11.59ರವರೆಗೆ ತನ್ನ ವಾಯುಮಾರ್ಗವನ್ನು ಬಂದ್ ಮಾಡಿದೆ.

    ಇಂದು ಬೆಳಗ್ಗೆ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭಾರತೀಯ ವಾಯುಸೇನೆಯ ಜೆಟ್ ಪತನಗೊಂಡಿದ್ದು, ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ. ಭಾರತದ ವಾಯುಸೇನೆಯ ಸರ್ಜಿಕಲ್ ಸ್ಟ್ರೈಕ್ ಬಳಿಕ ಪ್ರತಿದಾಳಿ ನಡೆಸಿದ್ದ ಪಾಕಿಸ್ತಾನದ ಎಫ್ -16 ವಿಮಾನ ಇಂದು ಬೆಳಗ್ಗೆ ಗಡಿ ನಿಯಂತ್ರಣ ರೇಖೆಯನ್ನು ಪ್ರವೇಶಿಸಿತ್ತು. ಗಡಿಯನ್ನು ದಾಟಿ 3 ಕಿ.ಮೀ ಪ್ರವೇಶಿಸಿದ ವಿಮಾನವನ್ನು ಭಾರತ ಹೊಡೆದು ಉರುಳಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ತಾತ್ಕಲಿಕವಾಗಿ ಎಲ್ಲ ನಾಗರೀಕ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದೆ ಎಂದು ಶ್ರೀನಗರದ ಏರ್ ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲ್ಲವನ್ನು ಮೊದ್ಲೇ ಹೇಳಲ್ಲ, ಮುಂದೆ ನಿಮ್ಗೆ ಗೊತ್ತಾಗುತ್ತೆ: ಪ್ರಧಾನಿ ಮೋದಿ

    ಎಲ್ಲವನ್ನು ಮೊದ್ಲೇ ಹೇಳಲ್ಲ, ಮುಂದೆ ನಿಮ್ಗೆ ಗೊತ್ತಾಗುತ್ತೆ: ಪ್ರಧಾನಿ ಮೋದಿ

    ನವದೆಹಲಿ: ಇಂದು ನಾನು ಎಲ್ಲವನ್ನು ಮೊದಲೇ ಹೇಳಲು ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ನಿಮಗೆ ಎಲ್ಲವೂ ಗೊತ್ತಾಗಲಿದೆ. ಇಂದು ಭಾರತಕ್ಕೆ ದೊಡ್ಡ ಜಯ ಸಿಕ್ಕಿದೆ ಎಂದು ವಾಯುದಾಳಿಯ ವಿಜಯದ ಸಂತೋಷವನ್ನು ಪರೋಕ್ಷವಾಗಿ ಪ್ರಧಾನಿ ಮೋದಿ ಯುವಕರೊಂದಿಗೆ ಹಂಚಿಕೊಂಡರು.

    ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ `ನ್ಯಾಷನಲ್ ಯೂತ್ ಫೆಸ್ಟಿವಲ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ, ಯುವ ಪೀಳಿಗೆ ಜೊತೆ ಸಂವಾದ ನಡೆಸಿದರು. ಸಂವಾದಕ್ಕೂ ಮುನ್ನ ಮಾತನಾಡಿ ಅವರು, ಇಂದಿನ ಯುವಕರು ಪ್ರತಿಯೊಂದರಲ್ಲಿಯೂ ಹೊಸತನವನ್ನು ಹುಡುಕುತ್ತಾರೆ. ಇಂದಿನ ಪೀಳಿಗೆಯವರು ತುಂಬಾ ಚಾಣಕ್ಷರಾಗಿರುತ್ತಾರೆ. ಕೆಲವರಿಗೆ ವಯಸ್ಸು ಆಗುತ್ತಿದೆ ಆದ್ರೆ ಬುದ್ಧಿ ಬೆಳೆಯಲ್ಲ ಅಂತಹವರನ್ನು ನಾವೆಲ್ಲ ನೋಡಿದ್ದೇವೆ. ನಿಮ್ಮ ಮನೆಯಲ್ಲಿರುವ ಮಕ್ಕಳನ್ನೇ ನೋಡಿ, ನಿಮಗಿಂತ ಚುರುಕಾಗಿರುತ್ತವೆ ಎಂದರು.

    ಇಂದಿನ ಯುವ ಪೀಳಿಗೆ ಮಲ್ಟಿ ಟಾಸ್ಕಿಂಗ್ ಗಾಗಿ ಸಿದ್ಧವಿರುತ್ತದೆ. ಹಾಗಾಗಿ ಹಲವು ಕೆಲಸಗಳನ್ನು ಏಕಕಾಲದಲ್ಲಿ ಮಾಡಿ ಯಶಸ್ವಿಯಾಗುತ್ತಾರೆ. ಗುರಿಗಳನ್ನು ಬೇಗ ತಲುಪುವುದಕ್ಕಾಗಿ ಹೆಚ್ಚಿನ ಶ್ರಮ ಹಾಕುತ್ತಾರೆ. ಇದುವೇ ಹೊಸ ಭಾರತದ ಆಧಾರವಾಗಿದೆ. ಹಾಗಾಗಿ ಯುವಕರಿಗೆ ಎಲ್ಲ ವಿಭಾಗದಲ್ಲಿ ಅವಕಾಶ ಸಿಗಬೇಕು ಮತ್ತು ಪ್ರೋತ್ಸಾಹ ದೊರೆಯಬೇಕು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಗ್ರರನ್ನು ಚೆಂಡಾಡಿದ ಭಾರತಕ್ಕೆ ಪಾಕ್ ಚಾಲೆಂಜ್

    ಉಗ್ರರನ್ನು ಚೆಂಡಾಡಿದ ಭಾರತಕ್ಕೆ ಪಾಕ್ ಚಾಲೆಂಜ್

    ಇಸ್ಲಾಂಬಾದ್: ಫೆಬ್ರವರಿ 26ರ ಬೆಳಗ್ಗಿನ ಜಾವ ಪಾಕಿಸ್ತಾನದಲ್ಲಿರುವ ಜೈಷ್ ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸುವ ಮೂಲಕ ಪುಲ್ವಾಮ ದಾಳಿಗೆ ಪ್ರತಿಕಾರ ತೆಗೆದುಕೊಂಡಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಕಿಸ್ತಾನ ಸೇನೆಯೆ ವಕ್ತಾರ ಆಸಿಫ್ ಗಫೂರ್ ಭಾರತಕ್ಕೆ ಚಾಲೆಂಜ್ ಹಾಕಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಭಾರತದ ಮಾಧ್ಯಮಗಳ ಕೆಲ ಸುದ್ದಿಯ ಚಿತ್ರಗಳನ್ನು ಪ್ರದರ್ಶಿಸಿದ ಆಸಿಫ್ ಗಫೂರ್, ಭಾರತೀಯ ವಾಯುಸೇನೆ ಬಾಲ್ ಕೋಟ್, ಮುಜಾಫರ್‍ಬಾದ್ ಮತ್ತು ಚಿಕೋಟಿಯಲ್ಲಿ ದಾಳಿ ನಡೆಸಿದೆಯಂತೆ. ಬರೋಬ್ಬರಿ 21 ನಿಮಿಷಗಳ ಕಾಲ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಈ ಕಾರ್ಯಾಚರಣೆ ನಡೆಸಿವೆ ಎಂದು ನೆರೆಯ ದೇಶದ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸುತ್ತಿವೆ. ಇದೊಂದು ದೊಡ್ಡ ಸುಳ್ಳಾಗಿದ್ದು, ಧೈರ್ಯವಿದ್ದರೆ ಪಾಕ್ ವಾಯುನೆಲೆಯಲ್ಲಿ ಭಾರತದ ವಿಮಾನಗಳು ಹಾರಾಟ ನಡೆಸಲಿ ಎಂದು ಆಸಿಫ್ ಗಫೂರ್ ಚಾಲೆಂಜ್ ಹಾಕಿದ್ದಾರೆ.

    ವಾಯುಸೇನೆಯ ಜೆಟ್‍ಗಳು ಯಾವಾಗಲೂ ಹಾರಾಡುವುದಿಲ್ಲ. ಆದ್ರೆ ಗಡಿರೇಖೆಯ ನಮ್ಮ ನಿಗಾ ಯಾವಾಗಲೂ ಇರುತ್ತದೆ. ಫೆಬ್ರವರಿ 14ರ ಬಳಿಕ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

    ಭಾರತ ಪಾಕಿಸ್ತಾನದ ಸೈನಿಕರು ಇಲ್ಲದ ಜಾಗದಲ್ಲಿ ದಾಳಿ ನಡೆಸಲು ಸಂಚು ರೂಪಿಸಿತ್ತು. ಸೈನಿಕರಲ್ಲದ ಸಾಮಾನ್ಯ ಜನರು ವಾಸವಾಗಿರುವ ಸ್ಥಳದಲ್ಲಿ ಬಾಂಬ್ ಹಾಕಲು ಪ್ಲಾನ್ ಮಾಡಿತ್ತು. ಸಾಮಾನ್ಯ ಜನರ ಮೇಲೆ ದಾಳಿ ನಡೆಸುವ ಮೂಲಕ ನಾವು ಉಗ್ರರನ್ನು ಕೊಂದಿದ್ದೇವೆ ಎಂದು ಹೇಳಿಕೊಳ್ಳಲು ಭಾರತ ಪ್ಲಾನ್ ಮಾಡಿತ್ತು ಎಂದು ಗಫೂರ್ ಆರೋಪಿಸಿದ್ದಾರೆ.

    ಭಾರತದ ಯುದ್ಧವಿಮಾನಗಳು ನಮ್ಮತ್ತ ಪ್ರವೇಶಿಸುತ್ತಿದ್ದಂತೆ ನಮ್ಮವರು ದಾಳಿ ನಡೆಸಿದಾಗ ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಎಸೆದು ಪರಾರಿಯಾದ್ರು. ಭಾರತ ತಾವು 200ರಿಂದ 300 ಉಗ್ರರನ್ನು ಕೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • #Surgicalstrike2 ವಿಶ್ವದಲ್ಲೇ ನಂಬರ್ ಒನ್ ಟ್ರೆಂಡಿಂಗ್

    #Surgicalstrike2 ವಿಶ್ವದಲ್ಲೇ ನಂಬರ್ ಒನ್ ಟ್ರೆಂಡಿಂಗ್

    ಬೆಂಗಳೂರು: ಟ್ವಿಟ್ಟರ್‌ನಲ್ಲಿ ಸರ್ಜಿಕಲ್‍ಸ್ಟ್ರೈಕ್ 2 ವಿಶ್ವದಲ್ಲೇ ನಂಬರ್ ಒನ್ ಟ್ರೆಂಡಿಂಗ್ ಸ್ಥಾನದಲ್ಲಿದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಭಾರತೀಯ ವಾಯುಪಡೆ ಜೈಸ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂರು ನೆಲೆಗಳ ಮೇಲೆ ದಾಳಿ ಮಾಡಿದೆ. ಈ ದಾಳಿಯು ಪಾಕಿಸ್ತಾನ ಹಾಗೂ ಉಗ್ರರಲ್ಲಿ ನಡುಕ ಹುಟ್ಟಿಸಿದೆ. ಉಗ್ರರಿಗೆ ಬಿಸಿ ಮುಟ್ಟಿಸಿದ ಭಾರತೀಯ ವಾಯುಪಡೆಗೆ ಅನೇಕ ರಾಜಕೀಯ ನಾಯಕರು, ಜನರು ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

    #Surgicalstrike2, #IndianAirForce, #IndiaStrikesBack ಹ್ಯಾಷ್ ಟ್ಯಾಗ್‍ಗಳನ್ನು ಬಳಸಿ ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ. ಈ ಮೂಲಕ #ಸರ್ಜಿಕಲ್ ಸ್ಟ್ರೈಕ್ 2 ವಿಶ್ವಮಟ್ಟದಲ್ಲಿ ನಂಬರ್ ಒನ್ ಟ್ರೆಂಡಿಂಗ್ ಸ್ಥಾನ ಪಡೆದಿದ್ದು, ಪುಲ್ವಾಮಾ ದಾಳಿಯ ಪ್ರತಿಕಾರದ ದಾಳಿಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಕೆಲ ಪಾಕಿಸ್ತಾನದ ನಾಯಕರು, ರಾಜಕಾರಣಿಗಳು ಸರ್ಜಿಕಲ್ ಸ್ಟ್ರೈಕ್ 2 ವಿರುದ್ಧ ಧ್ವನಿ ಎತ್ತಿದ್ದು, ಭಾರತದ ವಿರುದ್ಧ ಯುದ್ಧ ಘೋಷಿಸಬೇಕು ಎಂದು ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಒತ್ತಾಯಿಸುತ್ತಿದ್ದಾರೆ.

    ಜನ ಏನು ಹೇಳುತ್ತಿದ್ದಾರೆ?:
    ಬೆಂಗಳೂರಿನಲ್ಲಿ ಆರಂಭವಾದ ಏರ್ ಶೋ ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ದಾಳಿ ಮಾಡುವ ಮೂಲಕ ಮುಕ್ತಾಯವಾಗಿದೆ ಎಂದು ನೆಟ್ಟಿಗರೊಬ್ಬರು ಫೇಸ್‍ಬುಕ್‍ನಲ್ಲಿ ಪಾಕಿಸ್ತಾನದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕರ್ನಾಟಕಕ್ಕೆ ಮೋಸ ಮಾಡುತ್ತಿದ್ದಾರೆ. ಏರ್ ಶೋ ಬೆಂಗಳೂರಿನಲ್ಲಿ ಎಂದು ಹೇಳಿ, ಇವಾಗ ಏರ್ ಶೋವನ್ನು ಪಾಕಿಸ್ತಾನದಲ್ಲಿ ನಡೆಸುತ್ತಿದ್ದಾರೆ ಎಂದು ರಾಮಚಂದ್ರ ಗೌಡ ಕಮೆಂಟ್ ಮಾಡಿದ್ದಾರೆ.

    ಇದೇನ್ ಗುರು ಏರ್ ಶೋ ಬೆಂಗಳೂರಿನಲ್ಲಿ ಅಂತ ಹೇಳಿ ಪಾಕಿಸ್ತಾನದತ್ತ ಹೊರಟವರೇ ಎಂದು ನಾಗರಾಜ್ ಆರ್ ರಾವ್ ಫೇಸ್‍ಬುಕ್‍ನಲ್ಲಿ ಕಮೆಂಟ್ ಮಾಡಿದ್ದಾರೆ.

    ಮೂಲಗಳ ಪ್ರಕಾರ ಮೊದಲು 20 ಕೆಜಿ ಟೊಮೆಟೊ ಎಸೆಯಲಾಯಿತಂತೆ. ಹೆಕ್ಕಲು ಮುಗಿಬಿದ್ದ ಉಗ್ರರ ಮೇಲೆ ಸಾವಿರ ಕೆಜೆ ಬಾಂಬ್ ಹಾಕಲಾಯಿತು ಎಂದು ವ್ಯಂಗ್ಯವಾಗಿ  ಕಮೆಂಟ್ ಮಾಡಿದ್ದಾರೆ.

    ಪ್ರಧಾನಿ ಮೋದಿ: ವಾಯು ದಾಳಿ ನಡೆಸಿದ್ದೇವೆ!,
    ಪಾಕ್ ಪ್ರಧಾನಿ ಇಮ್ರಾನ್ ಖಾನ್: ಸಮಾಧಾನ ಆಯ್ತಾ? ಈಗಲಾದರೂ ಟೊಮೆಟೋ, ನೀರು ಬಿಡಿ ಪ್ಲೀಸ್! ಎಂದು ವ್ಯಂಗ್ಯವಾಗಿ ಗೊರಾ ನರಸಿಂಹ ಮೂರ್ತಿ ಫೆಸ್‍ಬುಕ್‍ನಲ್ಲಿ ಕಮೆಂಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್‍ನ 3 ಉಗ್ರರ ಕೇಂದ್ರಗಳು ಉಡೀಸ್- ಭಾರತದ ಬಾಂಬ್ ದಾಳಿಯ ಪ್ಲಾನ್ ಹೀಗಿತ್ತು

    ಪಾಕ್‍ನ 3 ಉಗ್ರರ ಕೇಂದ್ರಗಳು ಉಡೀಸ್- ಭಾರತದ ಬಾಂಬ್ ದಾಳಿಯ ಪ್ಲಾನ್ ಹೀಗಿತ್ತು

    ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರ, ಭಾರತೀಯ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿ 40 ಮಂದಿ ಸೈನಿಕರನ್ನು ಬಲಿ ಪಡೆದ ಮರುದಿನವೇ ಭಾರತ, ಪಾಕ್ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿತ್ತು.

    ಯೋಧರನ್ನು ಕಳೆದುಕೊಂಡ ಬಳಿಕ ಇಡೀ ಭಾರತ ದುಃಖಿಸುತ್ತಿದ್ದು, ಪಾಕ್ ವಿರುದ್ಧ ಪ್ರತಿಕಾರ ತೀರಿಸಲೇಬೇಕು ಎಂದು ಜನ ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದರು. ಆದರೆ ಇದೇ ಸಂದರ್ಭದಲ್ಲಿ ಪಾಕ್ ವಿರುದ್ಧ ಯಾವ ರೀತಿ ಸೇಡು ತೀರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಭಾರತ ಸೈನ್ಯದ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು.

    ಭಾರತ ರೂಪಿಸಿದ್ದ ಪ್ಲಾನ್ ಹೀಗಿತ್ತು:
    ಫೆಬ್ರವರಿ 15:
    ಫೇಬ್ರವರಿ 14 ಪ್ರೇಮಿಗಳ ದಿನಂದೇ ಉಗ್ರರು ಯೋಧರ ಮೇಲೆ ದಾಳಿ ನಡೆಸಿದ್ದು, ಅದರ ಮರುದಿನವೇ ವಾಯು ಸೇನಾ ಮುಖ್ಯಸ್ಥ ಬೀರೇಂದರ್ ಸಿಂಗ್  ಧನೋವಾ ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಇದಕ್ಕೆ ಮೋದಿ ಸರ್ಕಾರ ಒಪ್ಪಿಗೆಯನ್ನೂ ಸೂಚಿಸಿತ್ತು. ಇದನ್ನೂ ಓದಿ: ಭಾರತದ ಬಾಂಬ್ ದಾಳಿಗೆ ಜೈಷ್ ಉಗ್ರರ ಅತಿ ದೊಡ್ಡ ಕ್ಯಾಂಪ್ ಧ್ವಂಸ

    ಫೆ. 16ರಿಂದ 20:
    ಉಗ್ರರ ಕೇಂದ್ರ ಸ್ಥಳಗಳನ್ನು ಪತ್ತೆ ಹಚ್ಚಲು ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭೂಸೇನೆ ಮತ್ತು ವಾಯುಸೇನೆ 4 ದಿನ ವೈಮಾನಿಕ ಸಮೀಕ್ಷೆ ನಡೆಸಿತ್ತು. ಇಸ್ರೇಲ್ ನಿರ್ಮಿತ ಹೆರಾನ್ ಹೆಸರಿನ ಮಾನವರಹಿತ ವೈಮಾನಿಕ ಸರ್ವೇಕ್ಷಣಾ ವಾಹನ ಬಳಸಿ ಈ ಸರ್ವೆ ಮಾಡಲಾಗಿತ್ತು.

    ಫೆ. 20-22:
    ಎಲ್ಲಿ ದಾಳಿ ನಡೆಯಬೇಕೆಂಬ ಬಗ್ಗೆ 2 ದಿನ ಚರ್ಚೆ ನಡೆಸಲಾಗಿತ್ತು. ಗುಪ್ತಚರ ದಳ, ವಾಯುಸೇನೆ ಅಧಿಕಾರಿಗಳ ಮಧ್ಯೆ ಮಹತ್ವದ ಚರ್ಚೆ ನಡೆಸಲಾಯಿತು. ಈ ವೇಳೆ ಅಧಿಕಾರಿಗಳು ದಾಳಿ ನಡೆಸುವ ಸ್ಥಳಗಳನ್ನು ಗುರುತು ಹಾಕೊಂಡಿದ್ದರು. ಇದನ್ನೂ ಓದಿ: ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ ಸೇನೆ!

    ಫೆ. 21:
    ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಏರ್ ಸ್ಟ್ರೈಕ್ ನಡೆಸುವ ಬಗ್ಗೆ ವಿವರಗಳನ್ನು ನೀಡಿದ್ರು. ಈ ಸಂದರ್ಭದಲ್ಲಿ ಅವರು ಕೆಲ ಸಲಹೆಗಳನ್ನುಕೂಡ ನೀಡಿದರು.

    ಫೆ.22:
    ವಾಯುಸೇನೆಯ `ಟೈಗರ್’ ಮತ್ತು `ಬ್ಯಾಟಲ್ ಆ್ಯಕ್ಸೆಸ್’ ಸ್ಕ್ವಾಡರ್ನ್ ನ 12 ಗೆ ದಾಳಿಯ ಹೊಣೆ ಹೊರಿಸಲಾಗಿತ್ತು. ಇದನ್ನೂ ಓದಿ: ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ

    ಫೆ.24
    ಪಂಜಾಬ್ ನ ಭಟಿಂಡಾದಲ್ಲಿ ಮಿರಾಜ್ ಯುದ್ಧ ವಿಮಾನದ ಮೂಲಕ ವಾಯು ಸೇನೆ ಟ್ರಯಲ್ ನೋಡಿತ್ತು. ಬಳಿಕ ಮಿರಾಜ್ ಯುದ್ಧ ವಿಮಾನಗಳು ಆಗ್ರಾದಲ್ಲಿ ಇಂಧನ ತುಂಬಿಸಿಕೊಂಡಿದ್ದವು.

    ಫೆ.25-26
    ಕಾರ್ಯಾಚರಣೆ ಆರಂಭ ಮಾಡಲಾಗಿತ್ತು. ಮಿರಾಜ್-2000 ವಿಮಾನವು ಗ್ವಾಲಿಯಾರ್ ನಿಂದ ಟೇಕಾಫ್ ಆಗಿತ್ತು. ಈ ಯುದ್ಧ ವಿಮಾನಗಳು 1000 ಕೆ.ಜಿ ತೂಕದ 10 ಲೇಸರ್ ಗೈಡೆಡ್ ಬಾಂಬ್‍ಗಳಿಂದ ತುಂಬಿದ್ದವು. ಇದನ್ನೂ ಓದಿ: `How is The Josh Sir’- ಭಾರತೀಯ ವೀರಯೋಧರಿಗೆ ಬಿಗ್ ಸೆಲ್ಯೂಟ್

    ಮಿರಾಜ್ ಪೈಲಟ್ ಕೊನೆಯದಾಗಿ ಟಾರ್ಗೆಟ್ ಮಾಡಿದ ಸ್ಥಳಗಳನ್ನು ಮತ್ತೊಮ್ಮೆ ಪರಿಶೀಲಿಸಿದ್ದಾರೆ. ನಂತರ ಮುಜಾಫರ್ ಬಾದ್ ನಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಮುಂದಾಗಿದ್ದಾರೆ. ಈ ಕಾರ್ಯಾಚರಣೆ ನಸುಕಿನ ಜಾವ 3.20, 3.30ರ ಸುಮಾರಿಗೆ ನಡೆದಿದ್ದು, ಉಗ್ರರ 3 ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv