Tag: surgical strike

  • ಸರ್ಜಿಕಲ್ ಸ್ಟ್ರೈಕ್ ಮಾಡಿಲ್ಲ – ಆದ್ರೆ ಭಯೋತ್ಪಾದಕರನ್ನು ಕೊಲ್ಲಲಾಗಿದೆ: ರಕ್ಷಣಾ ಸಚಿವಾಲಯ ಸ್ಪಷ್ಟನೆ

    ಸರ್ಜಿಕಲ್ ಸ್ಟ್ರೈಕ್ ಮಾಡಿಲ್ಲ – ಆದ್ರೆ ಭಯೋತ್ಪಾದಕರನ್ನು ಕೊಲ್ಲಲಾಗಿದೆ: ರಕ್ಷಣಾ ಸಚಿವಾಲಯ ಸ್ಪಷ್ಟನೆ

    ನವದೆಹಲಿ: ಭಾರತ (India) ಪಾಕಿಸ್ತಾನದ (Pakistan) ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ (Surgical Strike) ನಡೆಸಿದೆ ಎಂದು ವರದಿಯಾದ ಕೆಲವೇ ಗಂಟೆಗಳ ಬಳಿಕ ರಕ್ಷಣಾ ಸಚಿವಾಲಯ (Defense Ministry) ಇದನ್ನು ಸುಳ್ಳು ಎಂದು ಸ್ಪಷ್ಟಪಡಿಸಿದೆ. ಆದರೆ ಜಮ್ಮು ಮತ್ತು ಕಾಶ್ಮೀರದ ಬಾಲಾಕೋಟ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ (LoC) ಪಾಕಿಸ್ತಾನದಿಂದ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರನ್ನು (Terrorists) ಕೊಲ್ಲಲಾಗಿದೆ ಎಂದು ತಿಳಿಸಿದೆ.

    ಸೋಮವಾರ ಬೆಳಗ್ಗೆ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಗುರುತಿಸಿ ಅವರನ್ನು ಕೊಲ್ಲಲಾಗಿದೆ. ಅವರು ಬಾಲಕೋಟ್ ವಲಯದ ಹಮೀರ್‌ಪುರ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ, ದಟ್ಟ ಮಂಜು, ದಟ್ಟ ಪೊದೆಗಳ ಅನುಕೂಲಗಳನ್ನು ಬಳಸಿಕೊಂಡು ಒಳನುಸುಳಲು ಪ್ರಯತ್ನಿಸುತ್ತಿದ್ದರು ಎಂದು ಸಚಿವಾಲಯ ತಿಳಿಸಿದೆ.

    ವರದಿ ಏನಿತ್ತು?
    ಮುಂಜಾನೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಭಾರತಿಯ ಸೇನೆ ಶನಿವಾರ ರಾತ್ರಿ ಎಲ್‌ಒಸಿಯಾದ್ಯಂತ 2.5 ಕಿ.ಮೀ ಮುಂದಕ್ಕೆ ಪ್ರವೇಶಿಸಿ ಪಾಕಿಸ್ತಾನಿ ಭಯೋತ್ಪಾದಕರ 4 ಲಾಂಚಿಂಗ್ ಪ್ಯಾಡ್‌ಗಳನ್ನು ನಾಶಪಡಿಸಿದೆ ಎಂದು ತಿಳಿಸಿತ್ತು. ಇದನ್ನೂ ಓದಿ: ಬುಧವಾರ ಆಗದಿದ್ರೆ ಆ.27ಕ್ಕೆ ಚಂದ್ರಯಾನ-3 ಲ್ಯಾಂಡಿಂಗ್

     

    ಈ ಸರ್ಜಿಕಲ್ ಸ್ಟ್ರೈಕ್‌ನಲ್ಲಿ 7-8 ಭಯೋತ್ಪಾದಕರು ಸಾವನ್ನಪ್ಪಿದ್ದು, ಕಾರ್ಯಾಚರಣೆ ಬಳಿಕ ಎಲ್ಲಾ ಸೈನಿಕರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ಹೇಳಿತ್ತು. ಆದರೆ ಬಳಿಕ ರಕ್ಷಣಾ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ಈ ವರದಿ ಸುಳ್ಳು ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಬೆಂಗಳೂರಿನ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಬಿಲ್ ಗೇಟ್ಸ್ ಫಿದಾ – ಡಿಜಿಟಲೀಕರಣಕ್ಕೆ ಮನಸೋತ ಪೋಸ್ಟ್ ವೈರಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿಗೆ ತಾಕತ್ತಿದ್ದರೆ ಚೀನಾ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಲಿ – ಓವೈಸಿ ಸವಾಲು

    ಬಿಜೆಪಿಗೆ ತಾಕತ್ತಿದ್ದರೆ ಚೀನಾ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಲಿ – ಓವೈಸಿ ಸವಾಲು

    ಹೈದರಾಬಾದ್: ಬಿಜೆಪಿಗೆ (BJP) ತಾಕತ್ತಿದ್ದರೆ ಚೀನಾದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸುವಂತೆ ಎಐಎಂಐಎಂ (AIMIM) ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಸವಾಲು ಹಾಕಿದ್ದಾರೆ. ಬಿಜೆಪಿ ಮುಖಂಡ ಬಂಡಿ ಸಂಜಯ್ ಕುಮಾರ್ ಅವರ ಸರ್ಜಿಕಲ್ ಸ್ಟ್ರೈಕ್ (Surgical Strike) ಹೇಳಿಕೆಗೆ ಓವೈಸಿ ಟಾಂಗ್ ಕೊಟ್ಟಿದ್ದಾರೆ.

    ಸಂಗಾರೆಡ್ಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡನ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮದೇ ದೇಶದ ನಗರದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡುವುದಾಗಿ ಅವರು ಹೇಳುತ್ತಾರೆ. ಧೈರ್ಯವಿದ್ದರೆ ಚೀನಾದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮೊಬೈಲ್ ನೀರಿಗೆ ಬಿದ್ದಿದ್ದಕ್ಕೆ ಡ್ಯಾಂ ಖಾಲಿ ಮಾಡಿಸಿದ್ದ ಅಧಿಕಾರಿಗೆ ಬಿತ್ತು 53 ಸಾವಿರ ದಂಡ!

    2020ರ ಹೈದರಾಬಾದ್ (Hyderabad) ಮುನ್ಸಿಪಲ್ ಚುನಾವಣೆಯ (Municipal Election) ವೇಳೆ ಬಂಡಿ ಸಂಜಯ್ ಕುಮಾರ್ ಅವರು, ಚುನಾವಣೆಯಲ್ಲಿ ಪಾಕಿಸ್ತಾನ (Pakistan), ಅಫ್ಘಾನಿಸ್ತಾನ ಅಥವಾ ರೋಹಿಂಗ್ಯಾ (Rohingya) ಸಮುದಾಯದ ಮತದಾರರನ್ನು ಒಳಗೊಂಡಿರಬಾರದು. ಒಮ್ಮೆ ನಾವು ಗೆದ್ದರೆ ನಗರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ ಎಂದಿದ್ದರು. ಇದಕ್ಕೆ ಓವೈಸಿ ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಿರುದ್ಧವೂ ವಾಗ್ದಾಳಿ ನಡೆಸಿದ ಓವೈಸಿ, ರಾಜ್ಯದ ದೇವಸ್ಥಾನಗಳಿಗೆ ಕೋಟ್ಯಂತರ ರೂ. ಮಂಜೂರಾಗಿದೆ. ಅದರ ಸ್ಟೇರಿಂಗ್ ನನ್ನ ಕೈಯಲ್ಲಿದೆ ಎಂದು ಅಮಿತ್ ಶಾ ಹೇಳುತ್ತಾರೆ. ಮತ್ಯಾಕೆ ಈ ಬಗ್ಗೆ ಅವರು ಚಿಂತಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ನಿರ್ಗತಿಕರನ್ನು ಕೆಲಸಕ್ಕೆಂದು ಕರೆದುಕೊಂಡು ಬಂದು ಕೂಡಿಹಾಕಿದ್ದ ದುರುಳ ಅರೆಸ್ಟ್ – 18 ಕಾರ್ಮಿಕರ ರಕ್ಷಣೆ

  • ತೆಲಂಗಾಣ ಸಿಎಂ ಪಾಕಿಸ್ತಾನ, ಚೀನಾ ಏಜೆಂಟ್‌ : ಬಿಜೆಪಿ

    ತೆಲಂಗಾಣ ಸಿಎಂ ಪಾಕಿಸ್ತಾನ, ಚೀನಾ ಏಜೆಂಟ್‌ : ಬಿಜೆಪಿ

    ಹೈದರಾಬಾದ್: ಸರ್ಜಿಕಲ್‌ ಸ್ಟ್ರೈಕ್‌ಗೆ ಸಂಬಂಧಿಸಿದಂತೆ ಪುರಾವೆ ತೋರಿಸಿ ಎಂದು ಕೇಳಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಕೆಸಿಆರ್‌ ಒಬ್ಬ ಪಾಕಿಸ್ತಾನ, ಚೀನಾ ಏಜೆಂಟ್‌ ಎಂದು ಗುಡುಗಿದೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಅವರು ಭಾರತೀಯ ಸೇನೆಯನ್ನು ದುರ್ಬಲಗೊಳಿಸಲು ದೇಶದ್ರೋಹಿಯಂತೆ ಮಾತನಾಡುತ್ತಿದ್ದಾರೆ. ಪಾಕಿಸ್ತಾನ ಮತ್ತು ಚೀನಾದ ಏಜೆಂಟ್‌ ಆಗಿರುವ ನಿಮ್ಮಂತಹ ದೇಶದ್ರೋಹಿ ತೆಲಂಗಾಣ ನೆಲದಲ್ಲಿರಲು ಅರ್ಹರಲ್ಲ. ತೆಲಂಗಾಣ ಜನತೆ ನಿಮ್ಮನ್ನು ಓಡಿಸುವುದು ಖಚಿತ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ರಾಹುಲ್ ವಿರುದ್ಧ ಹಿಮಂತ ಬಿಸ್ವಾ ವಿವಾದಾತ್ಮಕ ಹೇಳಿಕೆ – ತೆಲಂಗಾಣ ಕಾಂಗ್ರೆಸ್ ನಾಯಕರಿಂದ ದೂರು

    ಮುಖ್ಯಮಂತ್ರಿಗಳ ಹೇಳಿಕೆಗಳು ಜನರನ್ನು ಕೆರಳಿಸಿದ್ದು, ಅವರ ರಕ್ತ ಕುದಿಯುತ್ತಿದೆ. ಕೆಸಿಆರ್‌ ಅವರು ಭಾರತೀಯ ಸೇನೆಗೆ ಮಾಡಿದ ಅವಮಾನಕ್ಕೆ ಇಡೀ ಭಾರತವೇ ತಲೆತಗ್ಗಿಸುವಂತಾಗಿದೆ ಎಂದು ಹರಿಹಾಯ್ದಿದ್ದಾರೆ.

    ಸರ್ಜಿಕಲ್‌ ಸ್ಟ್ರೈಕ್‌ಗೆ ಸಂಬಂಧಿಸಿದ ಸಾಕ್ಷ್ಯವನ್ನು ಕೇಂದ್ರ ಸರ್ಕಾರ ತೋರಿಸಲಿ. ಈ ವಿಚಾರವಾಗಿ ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಮೊದಲು ಅವರು ಜನತೆಗೆ ಪುರಾವೆ ತೋರಿಸಲಿ ಎಂದು ಕೆಸಿಆರ್‌ ಆಗ್ರಹಿಸಿದ್ದರು. ಇದನ್ನೂ ಓದಿ: ಬಂಡಾಯ ಗುಂಪುಗಳ ಜೊತೆ ಮಾತನಾಡಲು ಸರ್ಕಾರ ಸಿದ್ಧವಿದೆ: ರಾಜನಾಥ್ ಸಿಂಗ್

    ಉರಿಯ ಮೂಲ ಶಿಬಿರದಲ್ಲಿ ಭಾರತೀಯ ಸೇನೆಯ 19 ಯೋಧರು ಹತರಾದ ನಂತರ ಭಾರತೀಯ ಸೇನೆಯು 2016ರ ಸೆಪ್ಟೆಂಬರ್‌ನಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿತ್ತು.

    ಬಳಿಕ 2019ರ ಫೆ.14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಸಿಆರ್‌ಪಿಎಫ್‌ ಬೆಂಗಾವಲು ಪಡೆಯ ಮೇಲಿನ ದಾಳಿಯಲ್ಲಿ 40 ಯೋಧರು ಹುತಾತ್ಮರಾದರು. ಪುಲ್ವಾಮಾ ದಾಳಿಯ ಮೂರನೇ ವರ್ಷಾಚಾರಣೆ ನಿನ್ನೆ ನಡೆಯಿತು. ದೇಶದ ಜನತೆ ಹುತಾತ್ಮ ಯೋಧರನ್ನು ಸ್ಮರಿಸಿದ್ದರು.

    ಸ್ಮರಿಸಿ

  • ಪಾಕ್ ಮೇಲೆ ಇರಾನ್ ಸರ್ಜಿಕಲ್ ಸ್ಟ್ರೈಕ್ – ಹಲವು ಉಗ್ರರು ಬಲಿ

    ಪಾಕ್ ಮೇಲೆ ಇರಾನ್ ಸರ್ಜಿಕಲ್ ಸ್ಟ್ರೈಕ್ – ಹಲವು ಉಗ್ರರು ಬಲಿ

    – ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಯಶಸ್ವಿ 3ನೇ ರಾಷ್ಟ್ರ
    – ಸೈನಿಕರನ್ನು ರಕ್ಷಿಸಲು, ಉಗ್ರರ ಗುಂಪನ್ನು ಗುರಿಯಾಗಿಸಿ ದಾಳಿ

    ಟೆಹರಾನ್: ಅಮೆರಿಕ, ಭಾರತದ ಬಳಿಕ ಇರಾನ್ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಒಳ ನುಗ್ಗಿ ನಡೆಸಿದ ದಾಳಿಗೆ ಹಲವು ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಫೆಬ್ರವರಿ 2ರ ರಾತ್ರಿ ಇರಾನ್‍ನ ಎಲೈಟ್ ರೆವಲ್ಯೂಶನರಿ ಗಾಡ್ರ್ಸ್(ಐಆರ್ ಜಿಸಿ) ಸೈನಿಕರು ದಾಳಿ ನಡೆಸಿದ್ದು, ಪಾಕ್‍ನ ಹಲವು ಸೇನಾಧಿಕಾರಿಗಳು ಈ ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇರಾನ್‍ನ ಇಬ್ಬರು ಸೈನಿಕರನ್ನು ಪಾಕಿಸ್ತಾನದ ಉಗ್ರರು ಮೂರು ವರ್ಷಗಳ ಹಿಂದೆ ಒತ್ತೆಯಾಳಾಗಿರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ಇರಾನ್ ಈ ಬೃಹತ್ ದಾಳಿ ನಡೆಸಿದ್ದು, ಭಯೋತ್ಪಾದಕರಿಗೆ ರಕ್ಷಣೆ ನೀಡಿದ್ದ ಹಲವು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಮಿಷನ್ ಸಕ್ಸಸ್‍ಫುಲ್ ಎಂದು ಫೆಬ್ರವರಿ 3ರಂದು ಐಆರ್ ಜಿಸಿ ಹೇಳಿಕೆ ಬಿಡುಗಡೆ ಮಾಡಿದ್ದು, ಕಿಡ್ನಾಪ್ ಆಗಿದ್ದ ಇಬ್ಬರು ಸೈನಿಕರನ್ನು ಸಹ ರಕ್ಷಿಸಲಾಗಿದೆ ಎಂದು ಹೇಳಿದೆ. ಎರಡೂವರೆ ವರ್ಷಗಳ ಹಿಂದೆ ಜೈಶ್ ಉಲ್-ಆಡ್ಲ್ ಸಂಘಟನೆಯಿಂದ ಅವರನ್ನು ಒತ್ತೆಯಾಳಾಗಿ ಮಾಡಿಕೊಳ್ಳಲಾಗಿತ್ತು. ಇದೀಗ ಸರ್ಜಿಕಲ್ ಸ್ಟ್ರೈಕ್ ವೇಳೆ ಅವರನ್ನು ರಕ್ಷಿಸಿ ಮರಳಿ ಇರಾನ್‍ಗೆ ಕರೆ ತರಲಾಗಿದೆ ಎಂದು ಐಆರ್ ಜಿಸಿ ಹೇಳಿಕೆ ನೀಡಿದೆ.

    ಅಕ್ಟೋಬರ್ 16,2018ರಲ್ಲಿ ಕನಿಷ್ಠ 12 ಐಆರ್ ಜಿಸಿ ಸೈನಿಕರನ್ನು ಜೈಶ್ ಉಲ್-ಆಡ್ಲ್ ಸಂಘಟನೆಯ ಉಗ್ರರು ಮರ್ಕಾವಾ, ಸಿಸ್ತಾನ್ ಹಾಗೂ ಬಲುಚಿಸ್ತಾನ್ ಪ್ರದೇಶದಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿತ್ತು. ಬಳಿಕ ಇವರನ್ನು ಬಿಡುಗಡೆ ಮಾಡಲು ಸೇನೆಯ ಅಧಿಕಾರಿಗಳು ಎರಡೂ ದೇಶಗಳ ಜಂಟಿ ಸಮಿತಿ ರಚಿಸಿದ್ದರು. ಇದರ ಫಲವಾಗಿ ಐವರನ್ನು ನವೆಂಬರ್ 15, 2018ರಲ್ಲಿ ಬಿಡುಗಡೆ ಮಾಡಲಾಗಿತ್ತು. ಮತ್ತೆ ನಾಲ್ವರು ಇರಾನಿ ಸೈನಿಕರನ್ನು ಮಾರ್ಚ್ 21, 2019ರಂದು ಪಾಕಿಸ್ತಾನಿ ಸೇನೆ ರಕ್ಷಣೆ ಮಾಡಿತ್ತು. ಇದೀಗ ಇರಾನ್ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಉಳಿದ ಇಬ್ಬರು ಸೈನಿಕರನ್ನು ರಕ್ಷಿಸಿದೆ.

  • 26 ನಿಗಮ ಮಂಡಳಿಗಳಿಗೆ ನೇಮಕ – ಯಾರಿಗೆ ಯಾವ ಹುದ್ದೆ?

    26 ನಿಗಮ ಮಂಡಳಿಗಳಿಗೆ ನೇಮಕ – ಯಾರಿಗೆ ಯಾವ ಹುದ್ದೆ?

    ಬೆಂಗಳೂರು: ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆಗೂ ಮೊದಲೇ ಯಡಿಯೂರಪ್ಪ ಮೂರು ಪಾಲು ಮಾಡಿ ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಪೊಲಿಟಿಕಲ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ.

    ಯಡಿಯೂರಪ್ಪ ನಂಬಿದವರ ಪಾಲು, ಪುತ್ರ ವಿಜಯೇಂದ್ರ ಆಪ್ತರ ಪಾಲು, ಪಕ್ಷದ ಪಾಲು ಎಂದು ವಿಂಗಡಿಸಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. 26 ನಿಗಮ ಮಂಡಳಿ ಸ್ಥಾನಗಳಲ್ಲಿ ಮೂವರು ಶಾಸಕರು, ನಾಲ್ವರು ವಿಜಯೇಂದ್ರ ಆಪ್ತರು, ನಾಲ್ವರು ಯಡಿಯೂರಪ್ಪ ಆಪ್ತರನ್ನು ನೇಮಕ ಮಾಡಲಾಗಿದೆ.

    ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವ ಶಾಸಕ ಎಸ್​ ಆರ್​ ವಿಶ್ವನಾಥ್​ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧ್ಯಕ್ಷ ಸ್ಥಾನ ನೀಡಲಾಗಿದೆ.

    ಯಾರಿಗೆ ಯಾವ ನಿಗಮ?
    ಎಸ್‌ಆರ್‌ ವಿಶ್ವನಾಥ್‌ – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
    ವಿಜುಗೌಡ ಪಾಟೀಲ್ – ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ
    ಲಿಂಗಾರೆಡ್ಡಿ – ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ
    ಎಸ್.ಇ.ಚಿಕ್ಕನಗೌಡ – ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ
    ರುದ್ರೇಶ್ – ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ

    ತಮ್ಮೇಶ್ ಗೌಡ – ಕರ್ನಾಟಕ ವಿದ್ಯುತ್‌ ಕಾರ್ಖಾನೆ
    ಕಿರಣ್ ಕುಮಾರ್ – ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ
    ನಟಿ ತಾರಾ – ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
    ಬಿ.ಸಿ.ನಾಗೇಶ್‍ – ಕಾರ್ಮಿಕ ಕಲ್ಯಾಣ ಮಂಡಳಿ
    ಬಿ.ಕೆ. ಮಂಜುನಾಥ್‍ – ನಾರು ಅಭಿವೃದ್ಧಿ ಮಂಡಳಿ

    ಎಸ್.ಆರ್.ಗೌಡ – ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ
    ಕೆ.ವಿ. ನಾಗರಾಜ್‍ಗೆ – ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ
    ಸವಿತಾ ವಿಶ್ವನಾಥ್ ಅಮರ್ ಶೆಟ್ಟಿ – ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
    ಚಂದು ಪಾಟೀಲ್‍ – ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಪಟ್ಟ
    ತಿಪ್ಪೇಸ್ವಾಮಿಗೆ – ತುಂಗಭದ್ರಾ ಕಾಲುವೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ)

    ಕಿರಣ್ ಕುಮಾರ್‌ – ಜೈವಿಕ ತಂತ್ರಜ್ಞಾನ ನಿಗಮದ ಅಧ್ಯಕ್ಷ ಸ್ಥಾನ
    ದುರ್ಯೋಧನ ಐಹೊಳೆ – ಅಂಬೇಡ್ಕರ್ ಅಭಿವೃದ್ಧಿ ನಿಗಮದ
    ಹೆಚ್ ಹನುಮಂತಪ್ಪ -ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
    ಎಂ ರಾಮಚಂದ್ರ – ಕೇಂದ್ರ ಪರಿಹಾರ ಸಮಿತಿ
    ಮುನಿಕೃಷ್ಣ – ಆದಿ ಜಾಂಬವ ಅಭಿವೃದ್ಧಿ ನಿಗಮ

    ರಘು ಆರ್ – ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
    ಬಾಬು ಪತ್ತಾರ್ – ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮ
    ಜಿಕೆ ಗಿರೀಶ್ ಉಪ್ಪಾರ್ – ಉಪ್ಪಾರ ಅಭಿವೃದ್ಧಿ ನಿಗಮ
    ಎಸ್ ನರೇಶ್ ಕುಮಾರ್ – ಸವಿತಾ ಸಮಾಜ ಅಭಿವೃದ್ಧಿ ನಿಗಮ
    ಎಲ್.ಆರ್.ಮಹದೇವಸ್ವಾಮಿ – ಮೈಸೂರು ಮೃಗಾಲಯ ಪ್ರಾಧಿಕಾರ
    ನಿತಿನ್ ಕುಮಾರ್ – ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ

  • ನೋಟು ನಿಷೇಧದ ಬಳಿಕ ಬಂಗಾರದ ಮೇಲೆ ಮೋದಿ ಸರ್ಕಾರದ ಸರ್ಜಿಕಲ್ ಸ್ಟ್ರೈಕ್

    ನೋಟು ನಿಷೇಧದ ಬಳಿಕ ಬಂಗಾರದ ಮೇಲೆ ಮೋದಿ ಸರ್ಕಾರದ ಸರ್ಜಿಕಲ್ ಸ್ಟ್ರೈಕ್

    – ಬಂಗಾರದ ಮೇಲೆ ಬೀಳುತ್ತೆ ಭಾರೀ ದಂಡ
    – ಕಪ್ಪುಹಣ ನಿಯಂತ್ರಣಕ್ಕೆ ಸರ್ಕಾರದ ಕ್ರಮ

    ನವದೆಹಲಿ: ನೋಟು ನಿಷೇಧದ ಬಳಿಕ ಮೋದಿ ಸರ್ಕಾರ ಕಪ್ಪು ಹಣ ನಿಯಂತ್ರಿಸಲು ಬಂಗಾರದ ಮೇಲೆ ಭಾರೀ ಪ್ರಮಾಣದ ತೆರಿಗೆ ಹೇರಲು ಚಿಂತನೆ ನಡೆಸಿದೆ.

    ಹೌದು. ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದ್ದು ಕಪ್ಪು ಹಣವನ್ನು ಸಕ್ರಮಗೊಳಿಸಲು ಹೇಗೆ ಯೋಜನೆ ತರಲಾಗಿತ್ತೋ ಅದೇ ರೀತಿಯಾಗಿ ದಾಖಲೆ ಇಲ್ಲದ ಚಿನ್ನವನ್ನು ನಿಗದಿ ಪಡಿಸಿದ ತೆರಿಗೆ ಪಾವತಿಸಿ ಸಕ್ರಮಗೊಳಿಸಲು ಮುಂದಾಗಿದೆ.

    ಆದಾಯ ತೆರಿಗೆ ಅಮ್ನೆಸ್ಟಿ ಸ್ಕೀಂ ಮಾದರಿಯಲ್ಲಿ ಕೇಂದ್ರ ಸರ್ಕಾರವು ಗೋಲ್ಡ್ ಅಮ್ನೆಸ್ಟಿ ಸ್ಕೀಮ್ ತರಲಿದೆ. ಈ ಸ್ಕೀಂ ಪ್ರಕಾರ ದಾಖಲೆ ಇಲ್ಲದ ಚಿನ್ನ ಅಕ್ರಮವಾಗಿದ್ದು ಈ ಚಿನ್ನವನ್ನು ಇಂತಿಷ್ಟು ಬೆಲೆ ತೆತ್ತು ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.

    ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಈ ಗೋಲ್ಡ್ ಅಮ್ನೆಸ್ಟಿ ಸ್ಕೀಂ ರೂಪಿಸಿದ್ದು ಆರಂಭದಲ್ಲಿ ಸರ್ಕಾರ ಚಿನ್ನ ಸಂಗ್ರಹಕ್ಕೆ ಒಂದು ಮಿತಿಯನ್ನು ನಿಗದಿ ಪಡಿಸುತ್ತದೆ. ಈ ಪ್ರಮಾಣಕ್ಕಿಂತ ಕಡಿಮೆ ಚಿನ್ನವನ್ನು ಹೊಂದಿದ್ದರೆ ಅದರ ವಿವರವನ್ನು ತೋರಿಸುವ ಅಗತ್ಯವಿಲ್ಲ. ಆದರೆ ಆ ಮಿತಿಗಿಂತ ಜಾಸ್ತಿ ಪ್ರಮಾಣದಲ್ಲಿ ಚಿನ್ನ ಸಂಗ್ರಹ ಇದ್ದರೆ ಮೂಲವನ್ನು ತಿಳಿಸಬೇಕಾಗುತ್ತದೆ. ಆಭರಣ ಖರೀದಿಸಿದ ರಸೀದಿಯನ್ನು ನೀಡಬೇಕಾಗುತ್ತದೆ. ಒಂದು ವೇಳೆ ದಾಖಲೆಯಿಲ್ಲದ ಚಿನ್ನವಿದ್ದರೆ ಅದರ ವಿವರವನ್ನು ಸರ್ಕಾರಕ್ಕೆ ತೋರಿಸಬೇಕಾಗುತ್ತದೆ. ನಂತರ ಸರ್ಕಾರವೇ ನಿಗದಿಪಡಿಸಿದ ದಂಡವನ್ನು ತೆತ್ತು ಈ ಚಿನ್ನವನ್ನು ಸಕ್ರಮ ಮಾಡಿಕೊಳ್ಳಬೇಕಾಗುತ್ತದೆ.

    ಅಕ್ಟೋಬರ್ ಎರಡನೇ ವಾರದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಯೋಜನೆಯ ಬಗ್ಗೆ ನಿರ್ಧಾರ ಪ್ರಕಟವಾಗಬೇಕಿತ್ತು. ಆದರೆ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ನಿಗದಿಯಾಗಿದ್ದರಿಂದ ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸುವ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ.

    ಚಿನ್ನದ ಮೇಲೆ ತೆರಿಗೆ ಯಾಕೆ?
    ನೋಟು ನಿಷೇಧದ ಬಳಿಕ ಹಣಕಾಸು ವ್ಯವಹಾರಗಳಿಗೆ ಕಠಿಣ ನೀತಿಯನ್ನು ತರಲಾಗಿದ್ದು ಬ್ಯಾಂಕಿನಿಂದ ನಗದು ಡ್ರಾ ಮಾಡಲು ಮಿತಿ ಹೇರಲಾಗಿದೆ. ಅಷ್ಟೇ ಅಲ್ಲದೇ ಆನ್‍ಲೈನ್ ವ್ಯವಹಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ವ್ಯವಹಾರಗಳು ದಾಖಲಾಗುತ್ತದೆ. ಇದರಿಂದ ಪಾರಾಗಲು ಕಪ್ಪು ಕುಳಗಳು ಭಾರೀ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿದ್ದಾರೆ. ಚಿನ್ನದ ಬೆಲೆ ವರ್ಷ ವರ್ಷ ಜಾಸ್ತಿ ಆಗುತ್ತಿರುವ ಕಾರಣ ಮತ್ತು ಇದನ್ನು ಸುಲಭವಾಗಿ ತೆಗೆದುಕೊಂಡು ಹೋಗಬಹುದಾದ ಆಸ್ತಿ ಆಗಿದ್ದರಿಂದ ಇದರ ಮೇಲೆಯೇ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿ ಚಿನ್ನದ ಆಭರಣ/ ಬಾರ್ ಗಳನ್ನು ಖರೀದಿಸುತ್ತಿದ್ದಾರೆ. ಚಿನ್ನ ನೀಡುವುದರ ಮೂಲಕವೂ ಭ್ರಷ್ಟಾಚಾರ ನಡೆಯುತ್ತದೆ. ಯಾರ ಬಳಿ ಎಷ್ಟು ಚಿನ್ನ ಇದೆ ಎನ್ನುವ ಮಾಹಿತಿಯೂ ಸರ್ಕಾರದ ಬಳಿ ಇಲ್ಲದ ಕಾರಣ ಕಪ್ಪು ಕುಳಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಸಂಗ್ರಹಿಸುತ್ತಿದ್ದಾರೆ. ಅದರಲ್ಲೂ ರಾಜಕಾರಣಿಗಳು ಮತ್ತು ಸರ್ಕಾರಿ ಉದ್ಯೋಗಿಗಳ ಮನೆ ಮೇಲೆ ದಾಳಿ ನಡೆದಾಗ ಕೆಜಿಗಟ್ಟಲೇ ಚಿನ್ನ ಇರುವುದು ಪತ್ತೆಯಾಗುತ್ತದೆ. ಹೀಗಾಗಿ ಅಕ್ರಮವಾಗಿ ಬಂದಿರುವ ಚಿನ್ನದ ಮೇಲೆ ನಿಗಾ ಇಡಲು ಸರ್ಕಾರ ಈಗ ತೆರಿಗೆ ಹೇರಲು ಮುಂದಾಗುತ್ತಿದೆ.

    ಗೊಂದಲವೂ ಇದೆ:
    ಹಿರಿಯರಿಂದ ಬಳುವಳಿಯಾಗಿ ಬಂದಿದ್ದ ಚಿನ್ನ ಸರ್ಕಾರ ನಿಗದಿ ಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿದ್ದರೆ ಅದು ಸಕ್ರಮವೋ? ಅಕ್ರಮವೋ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ. ಸದ್ಯ ಸರ್ಕಾರ ಚಿನ್ನದ ಮೇಲೆ ತೆರಿಗೆ ವಿಧಿಸಲು ಮುಂದಾಗುತ್ತಿದೆ ಎನ್ನುವ ವಿಚಾರ ಮಾತ್ರ ಪ್ರಕಟವಾಗಿದ್ದು, ಈ ಗೋಲ್ಡ್ ಅಮ್ನೆಸ್ಟಿ ಸ್ಕೀಂ ಯಾವ ರೀತಿ ಇರುತ್ತದೆ ಎನ್ನುವ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಸರ್ಕಾರ ಎಲ್ಲ ಮಾಹಿತಿಗಳನ್ನು ನೀಡುವ ಮೂಲಕ ಎದ್ದಿರುವ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಸಾಧ್ಯತೆಯಿದೆ.

  • ಪಾಕ್ ವಿರುದ್ಧ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ – ಉಗ್ರರ ನೆಲೆ ಮೇಲೆ ಬಾಂಬ್ ದಾಳಿ

    ಪಾಕ್ ವಿರುದ್ಧ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ – ಉಗ್ರರ ನೆಲೆ ಮೇಲೆ ಬಾಂಬ್ ದಾಳಿ

    ನವದೆಹಲಿ: ಪುಲ್ವಾಮಾ ದಾಳಿ ಬಳಿಕ ನಡೆದ ಏರ್ ಸರ್ಜಿಕಲ್ ಸ್ಟ್ರೈಕ್ ಪಾಕ್ ಆಕ್ರಮಿತ ಪ್ರದೇಶದಲ್ಲಿದ್ದ ಉಗ್ರರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿತ್ತು. ಬಳಿಕ ಭಾರತ ಮತ್ತೊಂದು ಬಹುದೊಡ್ಡ ದಾಳಿಯನ್ನು ಉಗ್ರರ ನೆಲೆಗಳ ಮೇಲೆ ನಡೆಸಿದೆ.

    ಪಾಕ್ ಆಕ್ರಮಿತ ಗಡಿ ಪ್ರದೇಶ 30 ಕಿಮೀ ಒಳ ಭಾಗದಲ್ಲಿ ನಿರ್ಮಿಸಲಾಗಿದ್ದ ಉಗ್ರರ ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಈ ಹಿಂದೆ ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ ಸೈನಿಕರು ದಾಳಿ ನಡೆಸಿದ್ದರು. ಆದರೆ ಈ ಬಾರಿ ಆರ್ಟಿಲರಿ ಗನ್ ಮೂಲಕ ಬಾಂಬ್ ದಾಳಿ ನಡೆಸಲಾಗಿದೆ. ಗುಪ್ತಚರ ಇಲಾಖೆ ನೀಡಿರುವ ಖಚಿತ ಮಾಹಿತಿ ಮೇಲೆ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ಕುರಿತು ಯಾವುದೇ ಮಾಹಿತಿ ಅಧಿಕೃತವಾಗಿ ಭಾರತ ಸೇನೆ ನೀಡಿಲ್ಲ.

    ಜಮ್ಮು ಕಾಶ್ಮೀರದ ನೀಲಂ ಜೇಲಂ ಪ್ರಾಜೆಕ್ಟ್ ಬಳಿ ದಾಳಿ ನಡೆಸಲಾಗಿದೆ. ಈ ಹಿಂದೆ ನಡೆದಿದ್ದ ಎಲ್ಲಾ ದಾಳಿಗಳಿಗಿಂತಲೂ ಈ ದಾಳಿ ಭಿನ್ನವಾಗಿದೆ. ಆದರೆ ಘಟನೆಯಲ್ಲಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿಲ್ಲ. ನೀಲಂ ಜೇಲಂ ಪ್ರಾಜೆಕ್ಟ್ ಪಾಕಿಸ್ತಾನ ಕೈಗೊಳ್ಳುತ್ತಿರುವ ಜಲ ವಿದ್ಯುತ್ ಯೋಜನೆ ಇದಾಗಿದ್ದು, ಈ ದಾಳಿಯಿಂದ ಯೋಜನೆಗೆ ಹಾನಿಯಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿಯನ್ನು ಮಾಡಿದೆ.

    ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಸತತ 1 ವಾರಗಳ ಕಾಲ ಸಿದ್ಧತೆ ನಡೆಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮು ಕಾಶ್ಮೀರಕ್ಕೆ ಹೆಚ್ಚುವರಿ ಸೈನ್ಯವನ್ನು ರವಾನೆ ಮಾಡಲಾಗಿತ್ತು. ಆದರೆ ಈ ದಾಳಿ ಬಗ್ಗೆ ಭಾರತ ಸೇನೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಈ ಮೂಲಕ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಈ ದಾಳಿಯ ಹಿನ್ನೆಲೆಯೇ ಅಮರನಾಥ ಯಾತ್ರೆಗೆ ತೆರಳಿದ್ದ ಭಕ್ತರಿಗೆ ತಡೆ ನೀಡಿ ವಾಪಸ್ ಕಳುಹಿಸಲಾಗಿತ್ತು. ಈ ದಾಳಿಯಿಂದ ಮುಂದೇ ಬರಬಹುದಾದ ಸವಾಲುಗಳನ್ನ ಎದುರಿಸಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

  • ಪಾಕ್ ದುಷ್ಕೃತ್ಯಕ್ಕೆ ಶಿಕ್ಷೆಯ ಮೂಲಕವೇ ಉತ್ತರ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

    ಪಾಕ್ ದುಷ್ಕೃತ್ಯಕ್ಕೆ ಶಿಕ್ಷೆಯ ಮೂಲಕವೇ ಉತ್ತರ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

    ನವದೆಹಲಿ: ಪಾಕಿಸ್ತಾನ ಸೇನೆ ಯಾವುದೇ ರೀತಿಯ ದುಷ್ಕೃತ್ಯ ನಡೆಸಿದಲ್ಲಿ ತಕ್ಕ ಶಿಕ್ಷೆ ನೀಡುವ ಮೂಲಕವೇ ಪ್ರತ್ಯುತ್ತರ ನೀಡಲಾಗುವುದು. ಭಯೋತ್ಪಾದನೆಯ ವಿರುದ್ಧದ ಹೋರಾಟದಿಂದ ಯಾವುದೇ ರೀತಿಯ ನಷ್ಟವಾಗುವುದಿಲ್ಲ ಎಂದು ಭಾರತೀಯ ಸೇನೆ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಸಿದ್ದಾರೆ.

    ಕಾರ್ಗಿಲ್ ಯುದ್ಧದ 20ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಸೇನೆ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದು, ಒಳ ನುಸುಳುವಿಕೆಗೆ ಅವಕಾಶ ನೀಡುವ ಕುರಿತು ಆಲೋಚಿಸುತಿದ್ದು, ಇದಕ್ಕೆ ಭಾರತ ತಕ್ಕ ಉತ್ತರ ನೀಡಲಿದೆ. ಭಯೋತ್ಪಾದಕರಿಗೆ ಶಿಕ್ಷೆ ನೀಡಿದರೆ, ಯಾವುದೇ ನಷ್ಟವಿಲ್ಲ ಹಾಗೂ ಯಾವುದೇ ದೇಶ ವಿರೋಧಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ನಮ್ಮ ಸೇನೆ ಶಸ್ತ್ರ ಸಜ್ಜಿತವಾಗಿ ನಮ್ಮ ಗಡಿ ರಕ್ಷಿಸಲು ಸನ್ನದ್ಧವಾಗಿದೆ. ಎದುರೇಟು ಹಾಗೂ ಶಿಕ್ಷೆಯ ಮೂಲಕ ಪ್ರತಿಕ್ರಿಯೆ ನೀಡಿ ದುಷ್ಕೃತ್ಯಗಳನ್ನು ಹತ್ತಿಕ್ಕುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ವಿದೇಶಿಗರ ಆಕ್ರಮಣ ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಡುವ ವಿಧಾನಗಳು ಬದಲಾಗಿವೆ. ಹೊಸ ವಿಧಾನಗಳನ್ನು ಅನುಸರಿಸಬೇಕಿದೆ. ಅಲ್ಲದೆ, ಸೈಬರ್ ಹಾಗೂ ಬಾಹ್ಯಾಕಾಶ ಕ್ಷೇತ್ರಗಳು ಇದೀಗ ಯುದ್ಧದ ಹೊಸ ರಣಾಂಗಣಗಳಾಗಿ ಮಾರ್ಪಟ್ಟಿದ್ದು, ಈ ಬಗ್ಗೆಯು ಅಧುನಿಕ ತಂತ್ರಜ್ಞಾನಗಳ ಮೂಲಕ ನಿಗಾ ವಹಿಸಬೇಕಿದೆ ಎಂದು ಬಿಪಿನ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.

    ಯಾವುದೇ ಭಯೋತ್ಪಾದಕ ಕೃತ್ಯದ ವಿರುದ್ಧದ ಹೋರಾಟಕ್ಕೆ ಶಿಕ್ಷೆಯಾಗುವುದಿಲ್ಲ. ಉರಿ ಮತ್ತು ಬಾಲಾಕೋಟ್‍ನಂತಹ ಸರ್ಜಿಕಲ್ ಸ್ಟ್ರೈಕ್‍ಗಳ ಮೂಲಕ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದ ಜಯವೇ ರಾಜಕೀಯ ಮತ್ತು ಸೈನ್ಯದ ಸಂಕಲ್ಪಕ್ಕೆ ಸಾಕ್ಷಿ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.

  • ಪಾಕ್ ಮೇಲೆ ಟೀಂ ಇಂಡಿಯಾ ಮತ್ತೊಂದು ಸ್ಟ್ರೈಕ್: ಅಮಿತ್ ಶಾ

    ಪಾಕ್ ಮೇಲೆ ಟೀಂ ಇಂಡಿಯಾ ಮತ್ತೊಂದು ಸ್ಟ್ರೈಕ್: ಅಮಿತ್ ಶಾ

    ನವದೆಹಲಿ: ಟೀಂ ಇಂಡಿಯಾ ತಂಡದಲ್ಲಿ ಆಟಗಾರರು ಬದಲಾದರು, ಕ್ರೀಡಾಂಗಣ ಬದಲಾದರೂ ವಿಶ್ವ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮನ್ನು ಸೋಲಿಸಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

    ಮ್ಯಾಂಚೆಸ್ಟರ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 89 ರನ್ (ಡಕ್ವರ್ಥ್ ಲೂಯಿಸ್ ನಿಯಮ) ಅಂತರದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಿರುವುದಕ್ಕೆ ಭಾರತದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊಹ್ಲಿ ಸೇನೆಯ ಈ ಗೆಲುವಿಗೆ ರಾಜಕೀಯ, ಸಿನಿಮಾ, ಕೀಡಾ ರಂಗದ ಹಲವು ದಿಗ್ಗಜರು ಶುಭ ಕೋರಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಟೀಂ ಇಂಡಿಯಾಗೆ ಶುಭ ಕೋರಿದ್ದು, ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಮಾಡಿರುವ ಮತ್ತೊಂದು ಸ್ಟ್ರೈಕ್ ಎಂದು ಬಣ್ಣಿಸುವ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಅಲ್ಲದೆ ಕೇಂದ್ರ ಸಚಿವರಾದ ರಾಜ್‍ನಾಥ್ ಸಿಂಗ್, ನಿತಿನ್ ಗಡ್ಕರಿ, ಕಿರಣ್ ರಿಜಿಜು, ಮಾಜಿ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ರಾಜವರ್ಧನ್ ಸಿಂಗ್ ರಾಥೋಡ್ ಸೇರಿದಂತೆ ಹಲವರು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು- ಟೀಂ ಇಂಡಿಯಾ ಬೌಲರ್ ಗಳ ಅಬ್ಬರಕ್ಕೆ ಪಾಕ್ ತತ್ತರ

    ಟ್ವೀಟ್‍ನಲ್ಲೇನಿದೆ?:
    ‘ಪಾಕಿಸ್ತಾನದ ಮೇಲೆ ಟೀಂ ಇಂಡಿಯಾ ಮಾಡಿದ ಮತ್ತೊಂದು ಸ್ಟ್ರೈಕ್. ಫಲಿತಾಂಶ ಒಂದೇ ಆಗಿದೆ. ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಅಭಿನಂದನೆ. ಈ ಗೆಲುವಿನಿಂದ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುತ್ತಾರೆ. ಗೆಲುವನ್ನು ಸಂಭ್ರಮದೊಂದಿಗೆ ಸ್ವೀಕರಿಸುತ್ತೇವೆ’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

    ‘ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಅದ್ಭುತ ವಿಜಯ ಪಡೆದ ಟೀಂ ಇಂಡಿಯಾಗೆ ಅಭಿನಂದನೆ. ಜೈ ಹಿಂದ್’ ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.

    ‘ರನ್ ಮಳೆ, ಅಂತಿಮವಾಗಿ ನಮ್ಮದೆ 7-0 ಅಧಿಪತ್ಯ. ಜೈಹಿಂದ್ ಎಂದು ಟೀಂ ಇಂಡಿಯಾ ಮಾಜಿ ಆಟಗಾರ, ಬಿಜೆಪಿ ಎಂಪಿ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.

  • 2016ಕ್ಕೂ ಮುನ್ನ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ – ಭಾರತೀಯ ಸೇನೆ

    2016ಕ್ಕೂ ಮುನ್ನ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ – ಭಾರತೀಯ ಸೇನೆ

    ನವದೆಹಲಿ: 2016ರ ಸೆಪ್ಟೆಂಬರ್‍ನಲ್ಲಿ ಉರಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್‍ನ್ನು ಬಿಟ್ಟರೆ ಅದಕ್ಕೂ ಮುನ್ನ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.

    2016 ಕ್ಕೂ ಮುನ್ನ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ. 2016ರ ಸೆಪ್ಟೆಂಬರ್ ನಲ್ಲಿ ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂದು ಭಾರತೀಯ ಸೇನೆಯ ಉತ್ತರ ಕಮಾಂಡಿನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

    ಸುದ್ದಿಗೋಷ್ಠಿ ವೇಳೆ ಮಾಧ್ಯಮಗಳು ಯುಪಿಎ ಅವಧಿಯಲ್ಲಿ 6 ಸರ್ಜಿಕಲ್ ಸ್ಟ್ರೈಕ್ ನಡೆದಿದ್ಯಾ ಎನ್ನುವ ಪ್ರಶ್ನೆ ಕೇಳಿದ್ದಕ್ಕೆ ಅವರು, ಕೆಲ ದಿನಗಳ ಹಿಂದೆ ಮಾಹಿತಿ ಹಕ್ಕು ಕಾಯಿದೆ (ಆರ್ ಟಿ ಐ) ಅಡಿಯಲ್ಲಿ ಬಂದ ಅರ್ಜಿಯೊಂದಕ್ಕೆ ಡೈರೆಕ್ಟರ್ ಆಫ್ ಜನರಲ್ ಮಿಲಿಟರಿ ಆಪರೇಷನ್ (ಡಿಜಿಎಂಒ) ಈ ಪ್ರಶ್ನೆಗೆ ಉತ್ತರ ನೀಡಿದೆ. ರಾಜಕೀಯ ಪಕ್ಷಗಳು ಏನು ಹೇಳಿದೆಯೋ ಅದು ನನಗೆ ಸಂಬಂಧಿಸಿದ ವಿಚಾರವಲ್ಲ. ಡಿಜಿಎಂಒ ಏನು ಉತ್ತರ ನೀಡಿದೆಯೋ ಅದನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದರು.

    ಜಮ್ಮು- ಕಾಶ್ಮೀರದ ಮಾಹಿತಿ ಹಕ್ಕು ಕಾರ್ಯಕರ್ತ ರೋಹಿತ್ ಚೌಧರಿ ಯುಪಿಎ ಆಡಳಿದ ಅವಧಿಯಲ್ಲಿ(2004 ರಿಂದ 2014) ಗಡಿ ದಾಟಿ ಉಗ್ರರ ಮೇಲೆ ಸರ್ಜಿಕಲ್ ದಾಳಿ ನಡೆಸಲಾಗಿತ್ತೆ? ದಾಳಿ ನಡೆದಿದ್ದರೆ ಈ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿದ್ದರು. ಈ ಪ್ರಶ್ನೆಗೆ ಡಿಜಿಎಂಒ ಲಭ್ಯವಿರುವ ದಾಖಲೆಗಳ ಪ್ರಕಾರ 2016ರ ಸೆ.29ಕ್ಕೂ ಮೊದಲು ಸರ್ಜಿಕಲ್ ದಾಳಿ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಉತ್ತರಿಸಿತ್ತು.

    ಮೇ 2 ರಂದು ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆಸಿದ 6 ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಈ ಮೂಲಕ ನಮ್ಮ ಸರ್ಕಾರದ ಕಾಲದಲ್ಲೂ ಉಗ್ರರ ಮರಣಹೋಮ ಮಾಡಿದ್ದೇವೆ. ಈ ದಾಳಿಯನ್ನು ನಾವು ರಾಜಕೀಯವಾಗಿ ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಅದರೆ ಮೋದಿ ಅವರ ಸರ್ಕಾರವು ಸೈನ್ಯದ ಶೌರ್ಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ ಎಂದು ದೂರಿದ್ದರು.

    2008 ರಿಂದ 2014ರ ವರೆಗೆ ನಡೆದಿರುವ 6 ಸರ್ಜಿಕಲ್ ಸ್ಟ್ರೈಕ್‍ಗಳ ವಿವರಗಳನ್ನು ಚಿತ್ರಗಳ ಸಮೇತ ಮಾಧ್ಯಮಗಳ ಮುಂದೆ ರಾಜೀವ್ ಶುಕ್ಲಾ ಬಿಡುಗಡೆ ಮಾಡಿದ್ದರು.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಕ್ರಿಯಿಸಿ, ಮೋದಿ ದೇಶದಲ್ಲಿ ಆಗಿರುವ ಆರ್ಥಿಕ ಹಿನ್ನಡೆಯನ್ನು ಮರೆಮಾಚಲು ಸೇನೆಯ ಶೌರ್ಯದ ಕಾರ್ಯಗಳ ಬಗ್ಗೆ ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು.

    ಜಮ್ಮು ಕಾಶ್ಮೀರದಲ್ಲಿರುವ ಉರಿ ಸೇನಾ ನೆಲೆಯ ಮೇಲಿನ ಉಗ್ರರ ದಾಳಿ ವೇಳೆ 19 ಯೋಧರು ಹುತಾತ್ಮರಾಗಿದ್ದರು. ಈ ದಾಳಿಗೆ ಪ್ರತೀಕಾರ ಎಂಬಂತೆ ಭಾರತೀಯ ಸೇನೆ ಸೆ.29 ರಂದು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿ ಬಂದಿತ್ತು.