Tag: Surgical Attack

  • ನಾಗಾ ಉಗ್ರರ ಮೇಲೆ ನಡೆಸಿದ್ದು ಸರ್ಜಿಕಲ್ ದಾಳಿಯೇ? ಸೇನೆ ತಿಳಿಸಿದ್ದು ಹೀಗೆ

    ನಾಗಾ ಉಗ್ರರ ಮೇಲೆ ನಡೆಸಿದ್ದು ಸರ್ಜಿಕಲ್ ದಾಳಿಯೇ? ಸೇನೆ ತಿಳಿಸಿದ್ದು ಹೀಗೆ

    ನವದೆಹಲಿ: ಭಾರತದ ಸೇನೆ ನಾಗಾ ಭಯೋತ್ಪಾದಕರ ವಿರುದ್ಧ ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ದಾಳಿ ನಡೆಸಿ ಹಲವು ಉಗ್ರರನ್ನು ಹೊಡೆದು ಹಾಕಿವೆ.

    ಬುಧವಾರ ಮುಂಜಾನೆ 4 ಗಂಟೆಯ ವೇಳೆಗೆ ದಾಳಿ ನಡೆದಿದ್ದು ಸುಮಾರು 70 ಪ್ಯಾರಾ ಕಮಾಂಡ್‍ಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಈ ದಾಳಿಯಲ್ಲಿ ಭಾರತದ ಯಾವುದೇ ಸೈನಿಕರು ಸಾವನ್ನಪ್ಪಿಲ್ಲ ಎಂದು ವರದಿಯಾಗಿದೆ.

    ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಹಿರಿಯ ಕಮಾಂಡರ್ ಒಬ್ಬರು, ದಾಳಿಯನ್ನು ನಡೆಸುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

    ಭಾರತೀಯ ಸೈನಿಕರ ಮೇಲೆ ಗುರುತು ಸಿಗದ ತಂಡದಿಂದ ದಾಳಿಯು ನಡೆದಿತ್ತು, ಪ್ರತಿದಾಳಿಯಾಗಿ ಭಾರತದ ಸೈನಿಕರು ದಾಳಿಯನ್ನು ನಡೆಸಿದ್ದಾಗಿ ಪೂರ್ವ ರಕ್ಷಣಾ ಕಮಾಂಡರ್ ತಿಳಿಸಿದ್ದಾರೆ.

    ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಳೆದ ವರ್ಷ ನಡೆದ ಸರ್ಜಿಕಲ್ ದಾಳಿಯಂತೆ ಈ ದಾಳಿ ನಡೆದಿದೆ ಎನ್ನುವ ಸುದ್ದಿಯನ್ನು ಭಾರತೀಯ ಸೇನೆ ನಿರಾಕರಿಸಿದೆ.

    ಈ ಹಿಂದೆ ಮ್ಯಾನ್ಮಾರ್ ಗಡೀ ಪ್ರದೇಶದಲ್ಲಿ 20015ರ ಜೂನ್ 10 ರಂದು ನಾಗಾ ಭಯೋತ್ಪಾದಕರ ವಿರುದ್ಧ ಈ ರೀತಿಯ ದಾಳಿ ನಡೆಸಲಾಗಿತ್ತು. ಈ ದಾಳಿಯಿಂದಾಗಿ ನಾಗಾ ಭಯೋತ್ಪಾದನಾ ಶಿಬಿರಗಳ ಮೇಲೆ ಭಾರೀ ಹಾನಿಯಾಗಿದೆ ಎಂದು ಸೇನೆ ತಿಳಿಸಿದೆ.

    ಕಳೆದ ಆರು ದಿನಗಳ ಹಿಂದೆ ಮಣಿಪುರದ ಚಂದೇಲ್ ಜಿಲ್ಲೆಯ ಎನ್‍ಎಸ್‍ಸಿಎನ್(ಕೆ) ಶಿಬಿರ ಮೇಲೆ ದಾಳಿ ನಡೆದು 18 ಸೈನಿಕರು ಮೃತಪಟ್ಟ ನಂತರ ಈ ಕಾರ್ಯಚರಣೆಯನ್ನು ಸಿದ್ಧಪಡಿಸಿ ದಾಳಿಯನ್ನು ನಡೆಸಲಾಗಿದೆ.