Tag: Suresh Nayak

  • ವಿಡಿಯೋ ಚಿತ್ರೀಕರಣ ಏಳೆಂಟು ತಿಂಗಳಿಂದ ನಡೆಯುತ್ತಿದೆ, ಯುವಕರು ಭಾಗಿ: ಸುರೇಶ್ ನಾಯಕ್

    ವಿಡಿಯೋ ಚಿತ್ರೀಕರಣ ಏಳೆಂಟು ತಿಂಗಳಿಂದ ನಡೆಯುತ್ತಿದೆ, ಯುವಕರು ಭಾಗಿ: ಸುರೇಶ್ ನಾಯಕ್

    ಉಡುಪಿ: ಉಡುಪಿ (Udupi) ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಏಕೈಕ ಘಟನೆ ಅಲ್ಲ, ಇದು ಏಳೆಂಟು ತಿಂಗಳಿಂದ ನಡೆಯುತ್ತಿದೆ ಎಂಬ ಸಂಶಯ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ (Suresh Nayak) ಅನುಮಾನ ವ್ಯಕ್ತಪಡಿಸಿದ್ದಾರೆ.

    ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ಸಂತ್ರಸ್ತರ ಬಾಯಿ ಮುಚ್ಚಿಸುವ ಕೆಲಸ ಪೊಲೀಸರಿಂದ ಆಗಿದೆ. ಹಿಜಾಬ್ (Hijab) ವಿವಾದಕ್ಕಿಂತ ಇದು ಹೇಯ ಕೃತ್ಯ. ಈ ಬಗ್ಗೆ ಪ್ರಶ್ನಿಸುವವರನ್ನು ಧಮನಿಸಲಾಗಿದೆ. ವಿಡಿಯೋ ಎಲ್ಲೆಲ್ಲಿ ಹರಿದಾಡಿದೆ ಎಂಬುದನ್ನು ತನಿಖೆ ಮಾಡಬೇಕು. ಮುಸ್ಲಿಂ ಯುವತಿಯರ ಜೊತೆ ಮುಸ್ಲಿಂ ಯುವಕರು ಒಳಗೊಂಡಿದ್ದಾರೆ. ಇದು ಉಡುಪಿಗೆ ಕಳಂಕ. ಪೊಲೀಸ್ ಇಲಾಖೆಯ ವರ್ತನೆ ಸರಿ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಉಡುಪಿ ವಿಡಿಯೋ ಚಿತ್ರೀಕರಣ ಕೇಸ್ – ವಿದ್ಯಾರ್ಥಿನಿಯರು, ಕಾಲೇಜ್ ವಿರುದ್ಧ ಎಫ್‌ಐಆರ್ ದಾಖಲು

    ಬಿಜೆಪಿ (BJP) ಪಕ್ಷ ಶುಕ್ರವಾರ ಉಡುಪಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಿದೆ. ಎಸ್ಪಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಇದು ಕೇರಳ ಸ್ಟೋರಿ ಮಾದರಿಯ ಘಟನೆ. ವಿಶೇಷ ತಂಡ, ಎಸ್‌ಐಟಿ ರಚನೆ ಮಾಡಿ ತನಿಖೆ ಮಾಡಿ. ಉಡುಪಿ ಎಸ್‌ಪಿ ನೇತೃತ್ವದಲ್ಲಿ ತನಿಖೆ ಬೇಡ ಎಂದು ಆಗ್ರಹಿಸಿದರು. ಇದನ್ನೂ ಓದಿ: ಯಾವ ಕೋಮಿನ ಬಗ್ಗೆಯೂ ಹೇಳಿಲ್ಲ, ಅಮಾಯಕರ ಬಿಡುಗಡೆಗೆ ಪ್ರಸ್ತಾಪ: ತನ್ವೀರ್ ಸೇಠ್

    ಕಾಂಗ್ರೆಸ್‌ಗೆ (Congress) ಅವರ ಮೇಲೆ ಅಷ್ಟು ಪ್ರೀತಿ ಯಾಕೆ? ಕಾಂಗ್ರೆಸ್‌ನವರು ಅವರ ಮನೆಯ ಮಕ್ಕಳನ್ನು ಶೂಟಿಂಗ್ ಮಾಡಲಿ. ಮೂರು ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಿದ್ದು ಯಾಕೆ? ಅದು ಸಾಮಾನ್ಯ ಮೊಬೈಲ್ ಅಲ್ಲ. ಒಂದು ಲಕ್ಷ ಮೌಲ್ಯದ ಮೊಬೈಲ್ ಅದು. ಅವರಿಗೆ ದುಬಾರಿ ಮೊಬೈಲ್ ಕೊಟ್ಟವರು ಯಾರು? ಎಸ್‌ಐಟಿ ಮೂಲಕ ಇದನ್ನು ತನಿಖೆ ಮಾಡಬಹುದು. ರಾಜ್ಯ ಸರ್ಕಾರ ಮಾಡದಿದ್ದರೆ ಕೇಂದ್ರದ ಗಮನ ಸೆಳೆಯುತ್ತೇವೆ. ಇದು ತಮಾಷೆಗೆ ಆದ ಘಟನೆ ಅಲ್ಲ. ಏಳೆಂಟು ತಿಂಗಳಿಂದ ಈ ರೀತಿ ಆಗುತ್ತಿದೆ. ಇದು ಗಂಭೀರ ವಿಚಾರವಾಗಿದ್ದು, ವಿದ್ಯಾರ್ಥಿನಿಯರು ಭಯ ಪಡುತ್ತಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ತನ್ವಿರ್ ಸೇಠ್ ಪತ್ರ ಬರೆದಿರುವುದು ನನಗೆ ಗೊತ್ತಿಲ್ಲ: ಪರಮೇಶ್ವರ್

    ಈ ಘಟನೆಯ ಹಿಂದೆ ಯಾವ ಶಕ್ತಿ ಇದೆ ಎಂದು ತನಿಖೆ ಆಗಬೇಕು. ರಾಜ್ಯ ಸರ್ಕಾರ ಪ್ರಕರಣ ಹಳ್ಳಹಿಡಿಸುವ ಪ್ರಯತ್ನ ಮಾಡುತ್ತಿದೆ. ಬೆಂಗಳೂರು (Bengaluru) ಭಯೋತ್ಪಾದಕರಿಗೆ (Terrorists) ಗೃಹ ಸಚಿವರು ಯಾವ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಗೊತ್ತು. ಗೃಹ ಸಚಿವರು ಈ ಪ್ರಕರಣದಲ್ಲಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದಾರೆ. ಪರಮೇಶ್ವರ್ (G.Parameshwara) ಹೇಳುವಷ್ಟು ಸಣ್ಣ ವಿಚಾರ ಇದಲ್ಲ. ಅವರಲ್ಲಿ ಇದಕ್ಕಿಂತ ದೊಡ್ಡ ವಿಚಾರಗಳಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರ ಮುಸ್ಲಿಂ ಓಲೈಕೆಗೆ ಸಂವಿಧಾನಬಾಹಿರವಾಗಿ ವರ್ತಿಸಿದ್ರೆ ಪರಿಣಾಮ ನೆಟ್ಟಗಿರಲ್ಲ: ಸುನೀಲ್ ಕುಮಾರ್

    ಬಳಿಕ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna), ಘಟನೆ ನಡೆದು ಒಂದು ವಾರದ ಬಳಿಕ ಪ್ರಕರಣ ಸಂಬಂಧ ಎಫ್‌ಐಆರ್ (FIR) ದಾಖಲಾಗಿದೆ. ವಿದ್ಯಾರ್ಥಿಗಳ ಎಲ್ಲಾ ಮೊಬೈಲ್ ವಶಕ್ಕೆ ಪಡೆದುಕೊಳ್ಳಬೇಕು. ಡಿಲೀಟ್ ಮಾಡಿದ ಫೋಟೋ ವಿಡಿಯೋಗಳನ್ನು ರಿಕವರ್ ಮಾಡಬೇಕು. ಹೈದರಾಬಾದ್‌ನಲ್ಲಿ ಇದಕ್ಕೆ ಸಂಬಂಧಪಟ್ಟ ಲ್ಯಾಬ್ ಇದೆ. ಮಹಿಳಾ ಆಯೋಗದ ಸೂಚನೆ ಮೇರೆಗೆ ಸೆಕ್ಷನ್ ಹಾಕಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ದೆಹಲಿ ಮೆಟ್ರೋದಲ್ಲಿ 2 ಮದ್ಯದ ಬಾಟಲಿ ಕೊಂಡ್ಯೊಯಲು ಅಬಕಾರಿ ಇಲಾಖೆಯ ಆಕ್ಷೇಪ

    ರಾಜ್ಯ ಮತ್ತು ಕೇಂದ್ರ ಜಂಟಿಯಾಗಿ ತನಿಖೆ ಮಾಡಬೇಕು. ಕಾಲೇಜಿನ 10 ದಿನದ ಸಿಸಿಟಿವಿ ಫೂಟೇಜ್ ಪಡೆದುಕೊಳ್ಳಬೇಕು. ಸೈಬರ್ ಕ್ರೈಂ ಬಗ್ಗೆ ಕಾಲೇಜಿನಲ್ಲಿ ಪೊಲೀಸರು ಮಾಹಿತಿ ನೀಡಿದ್ದು ಯಾಕೆ? ಬಹಳ ಮಾಹಿತಿ ಲಭ್ಯವಾಗುತ್ತಿದೆ. ಮನೆಯಿಂದಲೂ ಮಾಹಿತಿ ಪಡೆಯುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೈತ ಮಹಿಳೆಯ ಕಷ್ಟಕ್ಕೆ ಸ್ಪಂದಿಸಿದ ಸುರೇಶ್ ನಾಯ್ಕ್- ಚಿತ್ರದುರ್ಗದ ಈರುಳ್ಳಿಗೆ ಉಡುಪಿಯಲ್ಲಿ ಬೆಲೆ

    ರೈತ ಮಹಿಳೆಯ ಕಷ್ಟಕ್ಕೆ ಸ್ಪಂದಿಸಿದ ಸುರೇಶ್ ನಾಯ್ಕ್- ಚಿತ್ರದುರ್ಗದ ಈರುಳ್ಳಿಗೆ ಉಡುಪಿಯಲ್ಲಿ ಬೆಲೆ

    ಉಡುಪಿ: ಈರುಳ್ಳಿ ಬೆಳೆದು ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದ ಚಿತ್ರದುರ್ಗದ ರೈತ ಮಹಿಳೆಗೆ ನ್ಯಾಯ ಸಿಕ್ಕಿದೆ. ಉಡುಪಿಯ ಪ್ರಗತಿಪರ ರೈತ ಸುರೇಶ್ ನಾಯ್ಕ್ ಅವರು ಕಷ್ಟದಲ್ಲಿರುವ ರೈತ ಕುಟುಂಬದ ನೋವಿಗೆ ಸ್ಪಂದಿಸಿದ್ದಾರೆ.

    ರೈತ ಮಹಿಳೆ ಹಿರಿಯೂರಿನ ಕಾಟನಾಯಕಹಳ್ಳಿ ಗ್ರಾಮದ ವಸಂತ ಕುಮಾರಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಫೋನ್ ಮಾಡಿ ಆತ್ಮಸ್ಥೈರ್ಯ ತುಂಬಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಮಹಿಳೆಯ ಕಷ್ಟಕ್ಕೆ ಉಡುಪಿಯ ರೈತ ಸುರೇಶ ನಾಯ್ಕ್ ಸ್ಪಂದಿಸಿ ಅವರು ಬೆಳೆದ ಈರುಳ್ಳಿಗೆ ಉತ್ತಮ ದರ ನೀಡಿ ಎಲ್ಲವನ್ನೂ ಖರೀದಿಸಿದ್ದಾರೆ.

    ಪತಿ ಪ್ರತಾಪ್ ಜೊತೆಗೂಡಿ ವಸಂತಕುಮಾರಿ ಸುಮಾರು ಮೂರೂವರೆ ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಇವರಿಗೆ 130 ಚೀಲ ಇಳುವರಿ ಬಂದಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದ ಸರಿಯಾದ ಬೆಲೆ ಸಿಗದೆ ಮಾರಾಟ ಮಾಡಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಈ ಗ್ರಾಮದ ಬಹುತೇಕ ರೈತರು ಕೂಡ ಕಟಾವು ಮಾಡಿ ಬೆಲೆ ಸಿಗದೇ ಕಂಗಾಲಾಗಿದ್ದರು.

    ಖರೀದಿದಾರರು ಕ್ವಿಂಟಾಲ್‍ಗೆ ಕೇವಲ 150ರಿಂದ 250 ರೂ.ಗೆ ಕೇಳುತ್ತಿದ್ದರು. ಅವರ ಗ್ರಾಮದ ರೈತನೊಬ್ಬ ತಾನು ಬೆಳೆದ 80 ಗೋಣಿ 40 ಚೀಲ ಕೊಳೆತಿತ್ತು. ಮಹಿಳೆ ರೈತರ ನಿಜವಾದ ತೊಂದರೆಯನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದರು. 70 ಸಾವಿರ ರೂ. ವೆಚ್ಚ ಮಾಡಿದ್ದೇವೆ. ಈಗ ನೋಡಿದರೆ 200 ರಿಂದ 300 ರೂ. ರೇಟಿಗೆ ಕೇಳುತ್ತಿದ್ದಾರೆ. ಹೀಗಾದರೆ ವೆಚ್ಚಕ್ಕೂ ಸಾಲುವುದಿಲ್ಲ. ಇದನ್ನೇ ನಂಬಿ ಸಾಲ ಸೂಲ ಮಾಡಿದ್ದೇವೆ. ಆದರೆ ಈ ಬೆಲೆಗೆ ನಮ್ಮ ಸಾಲ ಕೂಡ ತೀರುವುದಿಲ್ಲ. ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ವಸಂತ ಕುಮಾರಿ ಒಂದು ವಿಡಿಯೋ ಮಾಡಿ ಬಿಟ್ಟಿದ್ದರು. ಈ ವಿಡಿಯೋ ಸಿಎಂ ಗಮನವನ್ನೂ ಸೆಳೆದಿತ್ತು.

    ಸಿಎಂ ಸೂಚನೆಯಂತೆ ತೋಟಗಾರಿಕಾ ಅಧಿಕಾರಿಗಳು ಕ್ರಮ ಕೈಗೊಂಡು ಉಡುಪಿಯ ಸುರೇಶ್ ನಾಯ್ಕ್ ಅವರಲ್ಲಿ ಈರುಳ್ಳಿ ಮಾರಿಕೊಡುವಂತೆ ವಿನಂತಿಸಿದ್ದಾರೆ. ಸುರೇಶ್ ನಾಯ್ಕ್ ಅವರು ಲಾಕ್‍ಡೌನ್ ನಡುವೆಯೂ ಟನ್‍ಗಟ್ಟಲೆ ತರಕಾರಿ ಹಣ್ಣು ಹಂಪಲು ಮಾರಾಟ ಮಾಡಿ ಸೈ ಎನಿಸಿ ಕೊಂಡಿದ್ದರು. ಸುರೇಶ್ ನಾಯ್ಕ್ ಅವರು 172 ಚೀಲ ಈರುಳ್ಳಿಯನ್ನು ಚೀಲಕ್ಕೆ 550 ರೂಪಾಯಿಯಂತೆ ಕೊಟ್ಟು ಖರೀದಿಸಿದ್ದಾರೆ. ನೂರೈವತ್ತು ಇನ್ನೂರಕ್ಕೂ ಬೇಡವಾಗಿದ್ದ ಈರುಳ್ಳಿ 550 ರೂ.ಗೆ ಮಾರಾಟ ಆಗಿರೋದ್ರಿಂದ ರೈತ ಮಹಿಳೆಗೆ ನ್ಯಾಯ ಸಿಕ್ಕಂತಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಸುರೇಶ್ ನಾಯ್ಕ್ ಅವರು, ಮಾಧ್ಯಮಗಳಲ್ಲಿ ಈರುಳ್ಳಿ ಬೆಳೆದ ರೈತ ಮಹಿಳೆಯ ನೋವು ನೋಡಿ ಬಹಳ ಬೇಸರವಾಯಿತು. ಕೆವಿಕೆಯಿಂದ ಮಾಹಿತಿ ಕೂಡ ಬಂತು. ಒಬ್ಬ ರೈತರ ಈರುಳ್ಳಿ ಖರೀದಿಸಿದ್ದೇನೆ. ರಾಜ್ಯದ ಕೆಲವರು ಈ ರೀತಿ ಖರೀದಿ ಮಾಡಿದರೆ ಮಣ್ಣನ್ನು ನಂಬಿದವರಿಗೆ ಶಕ್ತಿ ಬರುತ್ತದೆ ಎಂದರು.

    ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಚೈತನ್ಯ ಕುಮಾರ್ ಮಾತನಾಡಿ, ಕೊರೋನಾ ಸಮಯದಲ್ಲಿ ಮಾರುಕಟ್ಟೆಯನ್ನು, ದಲ್ಲಾಳಿಗಳನ್ನು ನಂಬಿ ಕೂತರೆ ಕಷ್ಟ. ಸಂದಿಗ್ಧ ಸ್ಥಿತಿಯನ್ನು ನಿಭಾಯಿಸಬೇಕು. ಅದಕ್ಕೇನಾದರು ಹೊಸ ಹೊಸ ಐಡಿಯಾಗಳನ್ನು ಮಾಡಬೇಕು ಎಂದು ಹೇಳಿದರು.