Tag: Suresh Kotan

  • ಡಾಕ್ಟರ್ ಜತೆ ಇಂದು ‘ಸಪ್ತಪದಿ’ ತುಳಿದ ನಟಿ ಮಮತಾ ರಾವುತ್

    ಡಾಕ್ಟರ್ ಜತೆ ಇಂದು ‘ಸಪ್ತಪದಿ’ ತುಳಿದ ನಟಿ ಮಮತಾ ರಾವುತ್

    ಕಾಮಿಡಿ ಪಾತ್ರಗಳ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟು, ಸದ್ಯ ನಾಯಕಿಯಾಗಿ ನಟಿಸುತ್ತಿರುವ ಮಮತಾ ರಾವುತ್ ಅವರ ವಿವಾಹ ಇಂದು ಬೆಂಗಳೂರಿನಲ್ಲಿ ನಡೆಯಿತು. ವೃತ್ತಿಯಿಂದ ವೈದ್ಯರು ಮತ್ತು ನಿರ್ಮಾಪಕರು ಆಗಿರುವ ಸುರೇಶ್ ಕೋಟ್ಯಾನ್ ಅವರ ಜತೆ ಮಮತಾ ರಾಹುತ್ ಸಪ್ತಪದಿ ತುಳಿಯುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

    ಬೆಂಗಳೂರಿನ ಬಿಇಎಂಎಲ್ ಲೇಔಟ್ ಹುತ್ತದ ವೆಂಕಟರಮಣಸ್ವಾಮಿ ದೇವಸ್ಥಾನ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಎರಡು ಕುಟುಂಬಗಳ ಸದಸ್ಯರು, ಸಿನಿಮಾ ರಂಗದ ಹಲವು ಕಲಾವಿದರು ಮತ್ತು ಮಮತಾ ಸ್ನೇಹಿತರು ಭಾಗಿಯಾಗಿದ್ದರು. ಸೋಮವಾರದಿಂದಲೇ ಮದುವೆ ಕಾರ್ಯಗಳು ಶುರುವಾಗಿದ್ದು, ನಿನ್ನೆಯಷ್ಟೇ ನಿಶ್ಚಿತಾರ್ಥ ಕಾರ್ಯ ನೆರವೇರಿತ್ತು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

    ನಟಿಯರಾದ ಭೂಮಿಕಾ, ಶ್ರುತಿ ರಾಜ್, ಚೈತ್ರಾ ಕೋಟೂರು, ಸೋನು ಪಾಟೀಲ್, ನಟ ಧರ್ಮ ಕೀರ್ತಿರಾಜ್, ನಿರ್ದೇಶಕ ಧನಂಜಯ್, ಸುಧಾಕರ್ ಬನ್ನಂಜೆ ಸೇರಿದಂತೆ ಸಿನಿಮಾ ರಂಗದ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿ ವಧು ವರರಿಗೆ ಹಾರೈಸಿದರು. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    ಮಮತಾ ಕೈ ಹಿಡಿದಿರುವ ಸುರೇಶ್ ಕೋಟ್ಯಾನ್ ಈಗಾಗಲೇ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಸೈಕಿಯಾಟ್ರಿಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಮೂಲತಃ ಮಂಗಳೂರಿನ ಮುಲ್ಕಿ ನಿವಾಸಿಯಾದ ಇವರು, ಸದ್ಯ ಬೆಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.