Tag: Suresh Gopi

  • ಜಾನಕಿ V v/s ಸ್ಟೇಟ್ ಆಫ್ ಕೇರಳ ಚಿತ್ರ ಸ್ಟ್ರೀಮಿಂಗ್: ಸ್ವಾತಂತ್ರ್ಯ ದಿನಕ್ಕೆ ಗಿಫ್ಟ್

    ಜಾನಕಿ V v/s ಸ್ಟೇಟ್ ಆಫ್ ಕೇರಳ ಚಿತ್ರ ಸ್ಟ್ರೀಮಿಂಗ್: ಸ್ವಾತಂತ್ರ್ಯ ದಿನಕ್ಕೆ ಗಿಫ್ಟ್

    ಲಯಾಳಂ ನಟ, ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ (Suresh Gopi) ನಟನೆಯ ‘ಜಾನಕಿ v/s ಸ್ಟೇಟ್ ಆಫ್ ಕೇರಳ’ ಚಿತ್ರಕ್ಕೆ ಒಟಿಟಿ ಎಂಟ್ರಿಗೆ ಸಜ್ಜಾಗಿದೆ. ಸ್ವಾತಂತ್ರ್ಯ ದಿನದಂದು ಈ ಚಿತ್ರ ZEE5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಪ್ರವೀಣ್ ನಾರಾಯಣನ್ ಕಥೆ ಬರೆದು ಚಿತ್ರ ನಿರ್ದೇಶಿಸಿದ್ದಾರೆ. ಜೆ ಫಣೀಂದ್ರ ಕುಮಾರ್ ನಿರ್ಮಿಸಿದ್ದಾರೆ. ಸೇತುರಾಮನ್ ನಾಯರ್ ಕಂಕೋಲ್ ಸಹ-ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

    ಸುರೇಶ್ ಗೋಪಿ ಅವರು ವಕೀಲ ಡೇವಿಡ್ ಅಬೆಲ್ ಡೊನೊವನ್ ಪಾತ್ರದಲ್ಲಿ ಮತ್ತು ಅನುಪಮಾ ಪರಮೇಶ್ವರನ್ (Anupama Parameshwaran) ಜಾನಕಿ ಪಾತ್ರದಲ್ಲಿ ನಟಿಸಿದ್ದಾರೆ. ದಿವ್ಯ ಪಿಳ್ಳೈ, ಶ್ರುತಿ ರಾಮಚಂದ್ರನ್, ಅಸ್ಕರ್ ಅಲಿ, ಮಾಧವ್ ಸುರೇಶ್ ಗೋಪಿ ಮತ್ತು ಬೈಜು ಸಂತೋಷ್ ಚಿತ್ರದಲ್ಲಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ಸ್ಟ್ರೀಮಿಂಗ್ ಆಗಲಿದೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಯುವ ನಟ ಸಂತೋಷ್ ಬಾಲರಾಜ್ ನಿಧನ

    ಕೇರಳ ಕಾನೂನು ವ್ಯವಸ್ಥೆಯ ಬಗ್ಗೆ ಸಿನಿಮಾ ಇದೆ. ಜಾನಕಿ (ಅನುಪಮಾ) ಬಾಳಲ್ಲಿ ಒಂದು ಘಟನೆ ನಡೆಯುತ್ತದೆ. ಈ ವೇಳೆ ಆಕೆ ನ್ಯಾಯಕ್ಕಾಗಿ ಹೋರಾಡುತ್ತಾಳೆ. ಇದು ಚಿತ್ರದ ತಿರುಳು.

    ZEE5 ನ ತಮಿಳು ಮತ್ತು ಮಲಯಾಳಂ ಮಾರ್ಕೆಟಿಂಗ್ ಮುಖ್ಯಸ್ಥ ಲಾಯ್ಡ್ ಸಿ ಕ್ಸೇವಿಯರ್ ಮಾತನಾಡಿ, ಈ ಸ್ವಾತಂತ್ರ್ಯ ದಿನದಂದು ನಮ್ಮ ಪ್ರೇಕ್ಷಕರಿಗೆ ಜಾನಕಿ v/s ರಾಜ್ಯ ಕೇರಳವನ್ನು ಪ್ರಸ್ತುತಪಡಿಸಲು ನಾವು ಹೆಮ್ಮೆಪಡುತ್ತೇವೆ. ಸುರೇಶ್ ಗೋಪಿ ಮತ್ತು ಅನುಪಮಾ ಪರಮೇಶ್ವರನ್ ನೇತೃತ್ವದ ತಾರಾಗಣ ಚಿತ್ರದಲ್ಲಿದೆ.

    ಇದೊಂದು ಕೋರ್ಟ್ ಡ್ರಾಮಾವಾಗಿದ್ದು, ಇದು ಮನರಂಜನೆ ನೀಡುವುದಲ್ಲದೆ, ಇದು ಚಿಂತನೆಯನ್ನು ಪ್ರಚೋದಿಸುತ್ತದೆ. ರೂಢಿಗಳನ್ನು ಸವಾಲು ಮಾಡುತ್ತದೆ ಮತ್ತು ಅನೇಕರು ಎದುರಿಸಲು ಹಿಂಜರಿಯುವ ವಾಸ್ತವಗಳನ್ನು ಪ್ರತಿಬಿಂಬಿಸುತ್ತದೆ. ಕೇರಳದಲ್ಲಿ ಬೇರೂರಿರುವ ಈ ಕಥೆ ಈಗ ಇಡೀ ರಾಷ್ಟ್ರದೊಂದಿಗೆ ಮಾತನಾಡುತ್ತದೆ ಎಂಬುದು ನಮಗೆ ಹೆಚ್ಚು ರೋಮಾಂಚನಕಾರಿಯಾಗಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದರು.

    ಸುರೇಶ್ ಗೋಪಿ ಮಾತನಾಡಿ, ʻಜಾನಕಿ v/s ಸ್ಟೇಟ್ ಆಫ್ ಕೇರಳʼ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಸಿಕ್ಕ ಪ್ರತಿಕ್ರಿಯೆ ಅಗಾಧವಾಗಿ ಭಾವನಾತ್ಮಕವಾಗಿದೆ, ಪ್ರೇಕ್ಷಕರು ಈ ಕಥೆಯನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ನಮ್ಮ ಕಥೆ ಹೇಳುವಿಕೆಯ ಮೇಲೆ ಅವರು ಇಟ್ಟಿರುವ ನಂಬಿಕೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಮತ್ತು ಈಗ ZEE5 ನಲ್ಲಿ ಜಗತ್ತು ಅದನ್ನು ಅನುಭವಿಸಲು ನಾನು ಕಾಯಲು ಸಾಧ್ಯವಿಲ್ಲ. ಡಿಜಿಟಲ್‌ಗೆ ಈ ಹೆಜ್ಜೆ ಇಟ್ಟರೆ ಜಾನಕಿಯ ಧ್ವನಿ, ಅವರ ಹೋರಾಟ, ಅವರ ನೋವು ಮತ್ತು ಅವರ ಧೈರ್ಯವು ಅಂತಿಮವಾಗಿ ಭಾರತದಾದ್ಯಂತ ಮನೆಗಳನ್ನು ತಲುಪುತ್ತದೆ ಎಂದು ಹೇಳಿದರು.

    ನಟಿ ಅನುಪಮಾ ಪರಮೇಶ್ವರನ್ ಮಾತನಾಡಿ, ಜಾನಕಿಯ ಪಾತ್ರವು ನನ್ನ ವೃತ್ತಿಜೀವನದ ಅತ್ಯಂತ ಭಾವನಾತ್ಮಕವಾಗಿ ಬೇಡಿಕೆಯ ಮತ್ತು ಪ್ರತಿಫಲದಾಯಕ ಪ್ರಯಾಣಗಳಲ್ಲಿ ಒಂದಾಗಿದೆ. ಅವರು ಲೆಕ್ಕವಿಲ್ಲದಷ್ಟು ಕೇಳದ ಧ್ವನಿಗಳ ಸಂಕೇತ, ಮತ್ತು ಅವರ ಕಥೆಯನ್ನು ಪ್ರಾಮಾಣಿಕತೆ ಮತ್ತು ಸಹಾನುಭೂತಿಯಿಂದ ಜೀವಂತಗೊಳಿಸುವಲ್ಲಿ ನಾನು ಅಪಾರ ಜವಾಬ್ದಾರಿಯನ್ನು ಅನುಭವಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ನಮಗೆ ದೊರೆತ ಪ್ರೀತಿ ಮತ್ತು ಬೆಂಬಲ ಅಗಾಧವಾಗಿತ್ತು, ಮತ್ತು ಈಗ, ದೇಶಾದ್ಯಂತ ಪ್ರೇಕ್ಷಕರು ZEE5 ನಲ್ಲಿ ಜಾನಕಿ V v/s ಕೇರಳ ರಾಜ್ಯವನ್ನು ಅನುಭವಿಸುತ್ತಾರೆ ಎಂದು ನನಗೆ ನಂಬಲಾಗದಷ್ಟು ಉತ್ಸುಕವಾಗಿದೆ. ಇದು ಆತ್ಮದೊಂದಿಗೆ ಮಾತನಾಡುವ ಕಥೆಯಾಗಿದೆ. ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಜಗತ್ತು ನಿಮ್ಮನ್ನು ಮೌನಗೊಳಿಸಲು ಪ್ರಯತ್ನಿಸಿದಾಗಲೂ ಎದ್ದು ನಿಲ್ಲುವ ಬಗ್ಗೆ. ಜಾನಕಿಯ ಧೈರ್ಯವು ನೋಡುವ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.

  • Wayanad Landslides | ವಯನಾಡಿಗೆ ಮೋದಿ ಭೇಟಿ – ದುರಂತ ಭೂಮಿಯಲ್ಲಿ ವೈಮಾನಿಕ ಸಮೀಕ್ಷೆ

    Wayanad Landslides | ವಯನಾಡಿಗೆ ಮೋದಿ ಭೇಟಿ – ದುರಂತ ಭೂಮಿಯಲ್ಲಿ ವೈಮಾನಿಕ ಸಮೀಕ್ಷೆ

    ವಯನಾಡು: ಇತ್ತೀಚೆಗೆ ಕೇರಳದ ವಯನಾಡಿನಲ್ಲಿ (Wayanad) ಭೂಕುಸಿತ ಸಂಭವಿಸಿದ್ದ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಭೇಟಿ ನೀಡಿದ್ದಾರೆ. ವಿಪತ್ತು ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿರುವ ಪ್ರಧಾನಿ, ಸರ್ಕಾರ ಕೈಗೊಂಡ ಪರಿಹಾರ ಮತ್ತು ಪುನರ್ವಸತಿ ಕ್ರಮಗಳ ಕುರಿತು ಪರಿಶೀಲಿಸಿದ್ದಾರೆ.

    ಇದಕ್ಕೂ ಮುನ್ನ ಬೆಳಗ್ಗೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು, ಕೇರಳ ಸಿಎಂ ಪಿಣರಾಯಿ ವಿಜಯನ್‌ (Pinarayi Vijayan) ಸರಳ, ಸಾಂಪ್ರದಾಯಿಕವಾಗಿ ಕೈಮುಗಿದು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಉಪಸ್ಥಿತರಿದ್ದರು. ಸ್ವಾಗತ ಸ್ವೀಕರಿಸಿ ಬಳಿಕ ಮೋದಿ, ಸಿಎಂ ಜೊತೆಗೂಡಿ ವೈಮಾನಿಕ ಸಮೀಕ್ಷೆ (Aerial Survey) ನಡೆಸಿದರು. ಇದನ್ನೂ ಓದಿ: ಶೀಘ್ರವೇ ಭಾರತದ ದೊಡ್ಡ ಸುದ್ದಿ: ಬ್ರೇಕಿಂಗ್‌ ನ್ಯೂಸ್‌ ಕೊಟ್ಟ ಹಿಂಡನ್‌ಬರ್ಗ್‌

    Wayanad landslides

    ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಭೂಕುಸಿತದಿಂದ ಧ್ವಂಸಗೊಂಡ ಚೂರಲ್ಮಲಾ (Chooralmala), ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಕುಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಸಮೀಕ್ಷೆ ಮುಗಿದ ಬಳಿಕ ಇಲ್ಲಿನ ಕಲ್ಪೆಟ್ಟಾದ ಎಸ್‌ಕೆಎಂಜೆ ಹೈಯರ್ ಸೆಕೆಂಡರಿ ಶಾಲೆಗೆ ಬಂದಿಳಿಯಲಿದ್ದು, ಅಲ್ಲಿಂದ ರಸ್ತೆ ಮೂಲಕ ಭೂಕುಸಿತ ಪೀಡಿತ ಪ್ರದೇಶಗಳಿಗೆ ಮೋದಿ ತೆರಳಲಿದ್ದಾರೆ. ಇದನ್ನೂ ಓದಿ: 530 ದಿನಗಳ ಬಳಿಕ ಜೈಲಿನಿಂದ ಹೊರಬಂದ AAP ನಾಯಕ ಮನೀಶ್‌ ಸಿಸೋಡಿಯಾ

    ಕಳೆದ ಜು.30 ರಂದು ವಯನಾಡಲ್ಲಿ ಭೂಕುಸಿತ ಸಂಭವಿಸಿದ ನಂತರ ಕನಿಷ್ಠ 226 ಜನರು ಸಾವನ್ನಪ್ಪಿದ್ದರು. ಅನೇಕರು ಈ ದುರಂತದಲ್ಲಿ ನಾಪತ್ತೆಯಾಗಿದ್ದಾರೆ. ಇದು ಕೇರಳಕ್ಕೆ ಅಪ್ಪಳಿಸಿದ ಅತಿದೊಡ್ಡ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ. ವಿಪತ್ತು ಪೀಡಿತ ಪ್ರದೇಶಗಳಿಗೆ ಪುನರ್ವಸತಿ ಹಾಗೂ ಪರಿಹಾರ ಕಲ್ಪಿಸಿಕೊಡಲು ಕೇರಳ ಸರ್ಕಾರ, ಕೇಂದ್ರದ ಬಳಿ 2,000 ಕೋಟಿ ರೂ. ನೆರವು ನೀಡುವಂತೆ ಮನವಿ ಮಾಡಿತ್ತು. ಈ ಬೆನ್ನಲ್ಲೇ ಖುದ್ದು ಪ್ರಧಾನಿ ಅವರೇ ಭೇಟಿ ನೀಡಿ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಇದನ್ನೂ ಓದಿ: ಎಸ್ಸಿ-ಎಸ್ಟಿ: ಕೆನೆಪದರ ಮೀಸಲಾತಿಗೆ ನೂರಾರು ಸಂಸದರ ವಿರೋಧ

  • ಇಂದಿರಾ ಗಾಂಧಿ ‘ಭಾರತ ಮಾತೆ’: ಕೇಂದ್ರ ಸಚಿವ ಸುರೇಶ್‌ ಗೋಪಿ ಬಣ್ಣನೆ

    ಇಂದಿರಾ ಗಾಂಧಿ ‘ಭಾರತ ಮಾತೆ’: ಕೇಂದ್ರ ಸಚಿವ ಸುರೇಶ್‌ ಗೋಪಿ ಬಣ್ಣನೆ

    – ಮಾರ್ಕ್ಸ್‌ವಾದಿ ನಾಯನಾರ್‌ ನನ್ನ ರಾಜಕೀಯ ಗುರು ಎಂದ ಬಿಜೆಪಿ ನಾಯಕ

    ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ‘ಭಾರತ ಮಾತೆ’ ಹಾಗೂ ಕಾಂಗ್ರೆಸ್‌ನ ಮಾಜಿ ಸಿಎಂ ದಿವಂಗತ ಕೆ.ಕರುಣಾಕರನ್‌ ‘ಧೈರ್ಯಶಾಲಿ ಆಡಳಿತಗಾರ’ ಎಂದು ಕೇಂದ್ರ ಸಚಿವ ಸುರೇಶ್‌ ಗೋಪಿ (Suresh Gopi) ನೀಡಿರುವ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ.

    ಇಲ್ಲಿನ ಪುಂಕುನ್ನಂನಲ್ಲಿರುವ ಕರುಣಾಕರನ್ ಅವರ ಸ್ಮಾರಕ ‘ಮುರಳಿ ಮಂದಿರಂ’ಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರುಣಾಕರನ್‌ ಮತ್ತು ಮಾರ್ಕ್ಸ್‌ವಾದಿ ಇ.ಕೆ.ನಾಯನಾರ್‌ ನನ್ನ ರಾಜಕೀಯ ಗುರುಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷ ಬಿಟ್ಟುಹೋದವರನ್ನ ಮತ್ತೆ ಸೇರಿಸಲ್ಲ – ಉದ್ಧವ್ ಠಾಕ್ರೆ ಗುಡುಗು

    ಕರುಣಾಕರನ್ ಸ್ಮಾರಕಕ್ಕೆ ಭೇಟಿ ನೀಡಿದ ಬಗ್ಗೆ ಯಾವುದೇ ರಾಜಕೀಯ ಅರ್ಥವನ್ನು ಕಲ್ಪಿಸಬೇಡಿ. ನನ್ನ ಗುರುಗಳಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಬಿಜೆಪಿ ನಾಯಕ ಸ್ಪಷ್ಟಪಡಿಸಿದ್ದಾರೆ.

    ಸುರೇಶ್‌ ಗೋಪಿ ಅವರು ತ್ರಿಶೂರ್‌ ಲೋಕಸಭಾ ಕ್ಷೇತ್ರದಲ್ಲಿ ಕೇರಳ ಕೇರಳ ಸಿಎಂ ಆಗಿದ್ದ ದಿ. ಕರುಣಾಕರನ್‌ ಅವರ ಪುತ್ರ ಕಾಂಗ್ರೆಸ್‌ ಅಭ್ಯರ್ಥಿ ಮುರಳೀಧರನ್‌ ಅವರನ್ನು ಮಣಿಸಿದ್ದರು. 74,686 ಮತಗಳ ಅಂತರದಿಂದ ಸುರೇಶ್‌ ಗೋಪಿ ಗೆಲುವು ದಾಖಲಿಸಿದ್ದರು. ಇದನ್ನೂ ಓದಿ: ತಿರುಪತಿಗೆ ತೆರಳಿ ದೇವರ ದರ್ಶನ ಪಡೆದ ಹೆಚ್‌ಡಿಕೆ

  • Modi 3.0 Cabinet: 72 ಸಚಿವರಲ್ಲಿ 61 ಮಂದಿ ಬಿಜೆಪಿಗರು – ಮಿತ್ರಪಕ್ಷಗಳಲ್ಲಿ ಯಾರಿಗೆ ಎಷ್ಟು ಸ್ಥಾನ?

    Modi 3.0 Cabinet: 72 ಸಚಿವರಲ್ಲಿ 61 ಮಂದಿ ಬಿಜೆಪಿಗರು – ಮಿತ್ರಪಕ್ಷಗಳಲ್ಲಿ ಯಾರಿಗೆ ಎಷ್ಟು ಸ್ಥಾನ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಂದು ಖಾತೆ ಹಂಚಿಕೆ ಮಾಡಿದ ಸಚಿವರ ಪೈಕಿ 72 ಸಚಿವರಲ್ಲಿ 61 ಮಂದಿ ಬಿಜೆಪಿಗರಿಗೆ ಸ್ಥಾನ ಸಿಕ್ಕಿದೆ. ಉಳಿದ 11 ಸ್ಥಾನ ಎನ್‌ಡಿಎ (NDA) ಮಿತ್ರಪಕ್ಷಗಳ ಪಾಲಾಗಿದೆ. ಎನ್‌ಡಿಎ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ (Modi Cabinet Meeting) ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ.

    3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರಿಂದು ತಮ್ಮ ನಿವಾಸದಲ್ಲಿ ಮೊದಲ ಸಂಪುಟ ಸಭೆ ನಡೆಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 36 ರಾಜ್ಯ ಖಾತೆ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

    ಮೋದಿ ಸಂಪುಟದ ವಿಶೇಷತೆ ಏನು?
    ಪ್ರಧಾನಿ ಮೋದಿ ಸಂಪುಟದಲ್ಲಿ 72 ಸಚಿವರಲ್ಲಿ 61 ಮಂದಿ ಬಿಜೆಪಿಗರು ಸ್ಥಾನ ಪಡೆದುಕೊಂಡಿದ್ದಾರೆ. ಮಿತ್ರಪಕ್ಷಗಳ 11 ಸಂಸದರಿಗೆ ಮಂತ್ರಿಭಾಗ್ಯ ಸಿಕ್ಕಿದೆ. ಇದನ್ನೂ ಓದಿ: Modi Cabinet: ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ – ಬಲಿಷ್ಠ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಲಿಸ್ಟ್

    ಖಾತೆ ಪಡೆದ ಸಚಿವರ ಪೈಕಿ ಉತ್ತರ ಪ್ರದೇಶಕ್ಕೆ ಗರಿಷ್ಠ ಸಚಿವ ಸ್ಥಾನ ಸಿಕ್ಕಂತಾಗಿದೆ ಸಂಪುಟ ದರ್ಜೆಯ 9 ಮಂದಿಗೆ ಮಂತ್ರಿ ಭಾಗ್ಯ ದೊರೆತಿದೆ. ಬಿಹಾರದ 8 ಸಂಸದರು, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನದ ಐವರು, ಆಂಧ್ರ, ತಮಿಳುನಾಡಿನ ತಲಾ ಮೂವರು (ನಿರ್ಮಲಾ,ಜೈಶಂಕರ್, ಮುರುಗನ್), ಕೇರಳದಲ್ಲಿ ಖಾತೆ ತೆರೆಯಲು ಕಾರಣವಾದ ಸುರೇಶ್‌ ಗೋಪಿ ಅವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಸಿನಿಮಾ ಕಾರಣಕ್ಕಾಗಿ ಸಚಿವ ಸ್ಥಾನ ತಿರಸ್ಕಾರಕ್ಕೆ ಮುಂದಾಗಿದ್ದ ಸುರೇಶ್‌ ಗೋಪಿ ಅವರು ಕೊನೆಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

    ಅಲ್ಲದೇ ಹರಿಯಾಣದಲ್ಲಿ ಗೆದ್ದ ಐವರಲ್ಲಿ ಮೂವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಇನ್ನೂ 9 ಸ್ಥಾನಗಳು ಮೋದಿ ಸಂಪುಟದಲ್ಲಿ ಖಾಲಿಯಿದ್ದು, ಮುಂದೆ ಎನ್‌ಸಿಪಿ, ಜನಸೇನೆ ಇತರೆ ಪಕ್ಷಗಳಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೋದಿಗೆ ಬಾಹ್ಯಾಕಾಶ, ಅಮಿತ್‌ ಶಾಗೆ ಗೃಹ ಖಾತೆ – ಜೆ.ಪಿ ನಡ್ಡಾಗೆ ಆರೋಗ್ಯ ಖಾತೆ ಗಿಫ್ಟ್

  • ನನ್ನ ಬಗ್ಗೆ ತಪ್ಪು ವರದಿಯಾಗಿದೆ, ಕೇರಳದ ಅಭಿವೃದ್ಧಿಗೆ ಬದ್ಧ: ರಾಜೀನಾಮೆ ವಿಚಾರಕ್ಕೆ ಸುರೇಶ್‌ ಗೋಪಿ ಸ್ಪಷ್ಟನೆ

    ನನ್ನ ಬಗ್ಗೆ ತಪ್ಪು ವರದಿಯಾಗಿದೆ, ಕೇರಳದ ಅಭಿವೃದ್ಧಿಗೆ ಬದ್ಧ: ರಾಜೀನಾಮೆ ವಿಚಾರಕ್ಕೆ ಸುರೇಶ್‌ ಗೋಪಿ ಸ್ಪಷ್ಟನೆ

    ನವದೆಹಲಿ: ನನ್ನ ಬಗ್ಗೆ ಕೆಲ ಮಾಧ್ಯಮಗಳಲ್ಲಿ ತಪ್ಪು ವರದಿ ಬರುತ್ತಿದೆ ಎಂದು ತ್ರಿಶೂರು (Thrissur) ಬಿಜೆಪಿ ಸಂಸದ ಸುರೇಶ್‌ ಗೋಪಿ (Suresh Gopi) ಹೇಳಿದ್ದಾರೆ.

    ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು ನಾನು ಕೌನ್ಸಿಲ್‌ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಇದು ತಪ್ಪು. ಪಿಎಂ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದಲ್ಲಿ ನಾವು ಕೇರಳದ ಅಭಿವೃದ್ಧಿ ಮತ್ತು ಸಮೃದ್ಧಿಗೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.


    ಸುರೇಶ್‌ ಗೋಪಿ ಅವರು ಭಾನುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಇಂದು ನನಗೆ ಮಂತ್ರಿ ಸ್ಥಾನ ಬೇಡ ಎಂದು ಹೇಳಿರುವುದಾಗಿ ವರದಿಯಾಗಿತ್ತು.

    ತ್ರಿಶೂರ್ ಜನರಿಗಾಗಿ ಸಂಸದನಾಗಿ ಕೆಲಸ ಮಾಡಲು ನಾನು ಬಯಸುತ್ತೇನೆ. ಸಂಸದನಾಗಿ ಕೆಲಸ ಮಾಡುವುದೇ ನನ್ನ ಗುರಿ, ನಾನು ಏನನ್ನೂ ಕೇಳಿಲ್ಲ, ನನಗೆ ಈ ಹುದ್ದೆ ಬೇಕಾಗಿಲ್ಲ ಎಂದು ಹೇಳಿರುವಾಗಿ ವರದಿ ತಿಳಿಸಿತ್ತು. ಇದನ್ನೂ ಓದಿ: ನನಗೆ ಯಾರೂ ಹಿತಶತ್ರುಗಳಿಲ್ಲ, ನನಗೆ ನಾನೇ ಶತ್ರು, ಸೋಲಿಗೆ ನಾನೇ ಹೊಣೆ: ಡಿಕೆ ಸುರೇಶ್

    ಸುರೇಶ್‌ ಗೋಪಿ ಈಗಾಗಲೇ ಕೆಲ ಚಲನಚಿತ್ರಗಳಿಗೆ ಸಹಿ ಹಾಕಿದ್ದಾರೆ. ಸಹಿ ಹಾಕಿದ ಎಲ್ಲಾ ಚಲನ ಚಿತ್ರಗಳ ಕೆಲಸ ಪೂರ್ಣಗೊಂಡ ನಂತರ ಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ವರದಿಯಾಗಿದೆ.

     

  • ಕೇರಳದಲ್ಲಿ ಮೊದಲ ಬಾರಿಗೆ ಅರಳಿದ ಕಮಲ – ಸುರೇಶ್‌ ಗೋಪಿಗೆ ಗೆಲುವು

    ಕೇರಳದಲ್ಲಿ ಮೊದಲ ಬಾರಿಗೆ ಅರಳಿದ ಕಮಲ – ಸುರೇಶ್‌ ಗೋಪಿಗೆ ಗೆಲುವು

    ತಿರುವನಂತಪುರಂ: ಕೇರಳದಲ್ಲಿ (Kerala) ಮೊದಲ ಬಾರಿಗೆ ಕಮಲ ಅರಳಿದೆ. ತ್ರಿಶ್ಯೂರ್‌ನಲ್ಲಿ (Thrissur) ಸುರೇಶ್‌ ಗೋಪಿ (Suresh Gopi) ಜಯಗಳಿಸಿದ್ದಾರೆ.

    74 ಸಾವಿರ ಮತಗಳ ಅಂತರದಿಂದ ಸುರೇಶ್‌ ಗೋಪಿ ಜಯಗಳಿಸಿದ್ದಾರೆ. ಸುರೇಶ್‌ ಗೋಪಿ 4,09,302 ಮತಗಳನ್ನು ಪಡೆದರೆ ಸಮೀಪದ ಪ್ರತಿ ಸ್ಪರ್ಧಿ ಸಿಪಿಐ ವಿಎಸ್‌ ಸುನಿಲ್‌ ಕುಮಾರ್‌ 3,34,462 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ (Congress) ಕೆ ಮುರಳೀಧರನ್‌ 3,22,102 ಮತಗಳನ್ನು ಗಳಿಸಿದ್ದಾರೆ.

    2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪನ್‌ ಜಯಗಳಿಸಿದ್ದರು. ಸುರೇಶ್‌ ಗೋಪಿ 2,93,822 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.

    ಕೇರಳದಲ್ಲಿ ಬಿಜೆಪಿ ಗೆಲ್ಲಿಸಲೇಬೇಕೆಂದು ಸುರೇಶ್‌ ಗೋಪಿ ಅವರಿಗೆ ಬಿಜೆಪಿ ರಾಜ್ಯಸಭಾ ಸ್ಥಾನಮಾನ ನೀಡಿತ್ತು. 2016 ರಿಂದ 2022ವರೆಗೆ ಸುರೇಶ್‌ ಗೋಪಿ ರಾಜ್ಯಸಭಾ ಸದಸ್ಯರಾಗಿ ಈ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದರು.

  • ಖ್ಯಾತನಟ ಸುರೇಶ್ ಗೋಪಿ ಪುತ್ರಿಯ ಮದುವೆಯಲ್ಲಿ ಪ್ರಧಾನಿ ಮೋದಿ

    ಖ್ಯಾತನಟ ಸುರೇಶ್ ಗೋಪಿ ಪುತ್ರಿಯ ಮದುವೆಯಲ್ಲಿ ಪ್ರಧಾನಿ ಮೋದಿ

    ಲಯಾಳಂ ಖ್ಯಾತ ನಟ, ರಾಜ್ಯಸಭಾ ಮಾಜಿ ಸಂಸದ ಸುರೇಶ್ ಗೋಪಿ (Suresh Gopi) ಅವರ ಪುತ್ರಿ ಭಾಗ್ಯ ಸುರೇಶ್ (Bhagya Suresh) -ಶ್ರೇಯಸ್ ಮೋಹನ್ ವಿವಾಹಕ್ಕೆ (Marriage) ಪ್ರಧಾನಿ ನರೇಂದ್ರ ಮೋದಿ (Narendra Modi) ಸಾಕ್ಷಿಯಾಗಿದ್ದಾರೆ.

    ಅತ್ಯಂತ ಮಾದರಿಯಾಗಿ ನಡೆದ ಮದುವೆಯಲ್ಲಿ ಪಾಳ್ಗೊಂಡಿದ್ದ ಮೋದಿ, ವಧುವರರಿಗೆ ಶುಭ ಕೋರಿದರು. ಇದೇ ವೇಳೆ ದೇವಸ್ಥಾನದಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಳಿದ ಜೋಡಿಗೂ ಮೋದಿ ಶುಭ ಹಾರೈಸಿದರು.

    ಗುರುವಾಯೂರ್ ಶ್ರೀಕೃಷ್ಣ ದೇಗುಲದಲ್ಲಿ ನಡೆದ ವಿವಾಹಕ್ಕೆ ಮಲಯಾಳಂ ಚಿತ್ರರಂಗದ ಗಣ್ಯರಾದ ಮೋಹನ್ ಲಾಲ್, ಮಮ್ಮುಟ್ಟಿ, ದಿಲೀಪ್, ಬಿಜು ಮೆನನ್, ಜಯರಾಂ, ಪಾರ್ವತಿ, ಖುಷ್ಬೂ, ಶಾಜಿ ಕೈಲಾಸ್, ಹರಿಹರನ್, ರಚನಾ ನಾರಾಯಣನ್ ಕುಟ್ಟಿ, ಸರಯೂ ಭಾಗಿ ಮೊದಲಾದವರು ಆಗಮಿಸಿದ್ದರು.

    ಸುರೇಶ್ ಗೋಪಿ ಮಲಯಾಳಂ ಸಿನಿಮಾ ರಂಗ ಕಂಡ ಅತ್ಯಂತ ಪ್ರತಿಭಾವಂತ ನಟ, ಅಲ್ಲದೇ ಮಾದರಿಯ ಬದುಕನ್ನು ನಡೆಸಿದವರು. ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

     

    ಸಮಾಜಸೇವೆಯಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ತಮ್ಮ ಬದುಕಿನಂತೆಯೇ ಮಗಳ ಮದುವೆಯೂ ಸರಳವಾಗಿ ಇರಲಿ ಎನ್ನುವುದು ಅವರ ಉದ್ದೇಶವಾಗಿತ್ತು.