Tag: Suresh Babu

  • ಎಲ್ಲಾ ಹಗರಣವನ್ನು ಬಿಚ್ಚಿಡುತ್ತೇನೆ – ಮಾಧುಸ್ವಾಮಿ ವಿರುದ್ಧ ಸಿಡಿದೆದ್ದ ಮಾಜಿ ಶಾಸಕ ಸುರೇಶ್ ಬಾಬು

    ಎಲ್ಲಾ ಹಗರಣವನ್ನು ಬಿಚ್ಚಿಡುತ್ತೇನೆ – ಮಾಧುಸ್ವಾಮಿ ವಿರುದ್ಧ ಸಿಡಿದೆದ್ದ ಮಾಜಿ ಶಾಸಕ ಸುರೇಶ್ ಬಾಬು

    ತುಮಕೂರು: ವಿಧಾನಸಭಾ ಚುನಾವಣಾ (Karnataka Assembly Election 2023) ಕಾವು ತುಮಕೂರಿನಲ್ಲೂ (Tumakuru) ಜೋರಾಗಿದೆ. ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ (J.C Madhuswamy) ಮತ್ತು ಮಾಜಿ ಶಾಸಕ ಸುರೇಶ್ ಬಾಬು (Suresh Babu) ಪರಸ್ಪರ ವಾಕ್ಸಮರಕ್ಕೆ ಇಳಿದಿದ್ದಾರೆ.

    ಮಾಧುಸ್ವಾಮಿ ನನ್ನನ್ನು ವೈಯಕ್ತಿಕವಾಗಿ ನಿಂದನೆ ಮಾಡುತಿದ್ದು ಅದು ಅವರ ಸಂಸ್ಕೃತಿ ತೋರಿಸುತ್ತಿದೆ. ಇದೇ ರೀತಿ ವೈಯಕ್ತಿಕ ನಿಂದನೆ ಮಾಡುತ್ತಿದ್ದರೆ ಮಾಧುಸ್ವಾಮಿ ಅವರ ಒಂದೊಂದು ಹಗರಣವನ್ನು ಬಿಚ್ಚಿಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಒಕ್ಕಲಿಗರ ಭದ್ರಕೋಟೆಯಲ್ಲಿ ಮತ್ತೆ ಡಿಕೆಶಿ ಸಿಎಂ ಜಪ- ಬಸವನ ಕಿವಿಯಲ್ಲಿ ತಮ್ಮ ಕೋರಿಕೆ ಹೇಳಿದ್ರಾ ಶಿವಕುಮಾರ್?

    ನೀವು ಕೆಎಂಎಫ್‍ನಲ್ಲಿ (KMF) ಇದ್ದಾಗಿನಿಂದ ಹಿಡಿದು, ಏನೇನಾಯ್ತು ಎಲ್ಲಾ ಮಾಹಿತಿ ಇದೆ. ನಿಮ್ಮನ್ನು ಯಾರು ರಾಜಕೀಯಕ್ಕೆ ತಂದ್ರು, ನೀವೇನು ಹುಟ್ಟುತ್ತಲೇ ಬೃಹಸ್ಪತಿ ಅಲ್ಲ. ನಾಗಮಂಗಲದ ಒಬ್ಬ ಮುಖಂಡ ಇದ್ರು, ಅವರ ಹೆಸರು ಕೂಡ ಗೊತ್ತು. ಅವರು ನಿಮಗೆ ಏನೇನು ಧಾರೆ ಎರೆದ್ರು ಎಲ್ಲವೂ ಕೂಡ ನನಗೆ ಗೊತ್ತಿದ್ದು ನೀವು ಇದೇ ರೀತಿ ವೈಯಕ್ತಿಕ ನಿಂದನೆ ಮುಂದುವರಿಸಿದರೆ ಎಲ್ಲಾ ರಹಸ್ಯವನ್ನೂ ಬಿಚ್ಚಿಡಬೇಕಾಗುತ್ತದೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಎಲ್ಲಾ ನಾನೇ ನಿರ್ಧಾರ ಮಾಡ್ತೀನಿ- ದೊಡ್ಡಗೌಡ್ರ ಗುಟುರಿಗೆ ಎಲ್ಲರೂ ಗಪ್ ಚಿಪ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾಧನೆಯ ಹಾದಿಯಲ್ಲಿ ಛಾಯಾಗ್ರಾಹಕ ಸುರೇಶ್ ಬಾಬು..!

    ಸಾಧನೆಯ ಹಾದಿಯಲ್ಲಿ ಛಾಯಾಗ್ರಾಹಕ ಸುರೇಶ್ ಬಾಬು..!

    ಸುರೇಶ್ ಬಾಬು (ಅರುಣ್ ಸುರೇಶ್), ಚಂದನವನದಲ್ಲಿ ಹೆಸರು ಮಾಡುತ್ತಿರುವ ಪ್ರತಿಭಾವಂತ ಛಾಯಾಗ್ರಾಹಕ. ಜಸ್ಟ್ ಲವ್ ಸಿನಿಮಾ ಮೂಲಕ ಸ್ವತಂತ್ರ ಛಾಯಾಗ್ರಾಹಕನಾಗಿ ಗುರುತಿಸಿಕೊಂಡ ಸುರೇಶ್ ಬಾಬು ಕೈ ತುಂಬಾ ಈಗ ಅವಕಾಶಗಳ ಸಾಲು. ತಂತ್ರಜ್ಞನಾಗಿ ಚಿತ್ರರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಹೊಸತನದ ಹಾದಿಯಲ್ಲಿ ಸಾಗುತ್ತಿರುವ ಸುರೇಶ್ ಬಾಬು ಆರಂಭಿಕ ದಿನಗಳು ಶುರುವಾಗಿದ್ದೇ ಒಂದು ರೋಚಕ ಕಥೆ.

    ಹೌದು, ಸುರೇಶ್ ಬಾಬು ಆರಂಭಿಕ ಜೀವನ ಶುರುವಾಗಿದ್ದು ಹತ್ತೊಂಬತ್ತು ವರ್ಷಗಳ ಹಿಂದೆ ಚಿತ್ರರಂಗದಲ್ಲಿ ಜನರೇಟರ್ ಕ್ಲೀನರ್ ಆಗಿ. ಅಂದು ಊಟ, ಸಂಬಳ ಸಿಕ್ಕಿದ್ರೆ ಸಾಕು ಎಂಬ ಪರಿಸ್ಥಿತಿಯಲ್ಲಿದ್ದ ಸುರೇಶ್ ಬಾಬು ಇಂದು ಛಾಯಾಗ್ರಾಹಕನಾಗಿ ಹೆಸರು ಮಾಡುವುದರ ಜೊತೆಗೆ ಒಂದಿಷ್ಟು ಪ್ರತಿಭೆಗಳಿಗೆ ಕೆಲಸ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಇದೆಲ್ಲದರ ಹಿಂದೆ ಇದ್ದಿದ್ದು ಅವರ ಪರಿಶ್ರಮ ಹಾಗೂ ಛಲ. ಜನರೇಟರ್ ಕ್ಲೀನಿಂಗ್ ಕೆಲಸ ಮಾಡುತ್ತಲೇ ಕ್ಯಾಮೆರಾ ಸೆಳೆತಕ್ಕೆ ಒಳಗಾಗಿ ಕ್ಯಾಮೆರಾ ನಿರ್ವಹಣೆಯ ಒಳ ಹೊರಗನ್ನು ಕಲಿತುಕೊಂಡ ಸುರೇಶ್ ಬಾಬು ನಂತರ ಸಿನಿಮಾ, ಧಾರಾವಾಹಿಗಳಲ್ಲಿ ಲೈಟ್ ಬಾಯ್ ಆಗಿ, ಕ್ಯಾಮೆರಾ ಅಸಿಸ್ಟೆಂಟ್ ಆಗಿ ದುಡಿದಿದ್ದಾರೆ.

    ಕ್ಯಾಮೆರಾ ನಿರ್ವಹಣೆ ಕುರಿತಂತೆ ಕೆಲವೊಂದನ್ನು ನೋಡಿ, ಕೆಲವೊಂದನ್ನು ಬೇರೆಯವರಿಂದ ಕೇಳಿ ಕಲಿಯುತ್ತಾ ಇಂದು ಸಿನಿಮಾ ಛಾಯಾಗ್ರಾಹಕನಾಗಿ ಬೆಳೆದಿದ್ದಾರೆ. ಜೆಕೆ ಅಭಿನಯದ ‘ಜಸ್ಟ್ ಲವ್’ ಸಿನಿಮಾ ಮೂಲಕ ಛಾಯಾಗ್ರಾಹಕನಾಗಿ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟ ಸುರೇಶ್ ಬಾಬು, ಚಂದ್ರಿಕಾ, ವಜ್ರ, ದೇವರಂತ ಮನುಷ್ಯ, ಗಿರ್ ಗಿಟ್ಲೆ ಸಿನಿಮಾಗಳಿಗೆ ಕ್ಯಾಮೆರಾ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಸದ್ಯ ವಾವ್ ಹಾಗೂ ನಕ್ಷೆ ಸಿನಿಮಾಗಳನ್ನು ಸೆರೆಹಿಡಿಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಇವುಗಳ ಜೊತೆ ಹಲವು ಸಿನಿಮಾಗಳ ಆಫರ್ ಗಳೂ ಸುರೇಶ್ ಬಾಬು ಅವರನ್ನರಸಿ ಬರುತ್ತಿವೆ.

    19 ವರ್ಷಗಳ ಪಯಣದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಸುರೇಶ್ ಬಾಬು ಇಂದು ತಮ್ಮದೇ ಆದ ಸಿನಿಮಾ ಕ್ಯಾಮೆರಾ, ಯೂನಿಟ್‍ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ `ಬಾನವಿ ಕ್ಯಾಪ್ಚರ್’ ಎಂಬ ಸಂಸ್ಥೆಯನ್ನು ತೆರೆದಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಅಪಾರ ಆಸಕ್ತಿ ಇಟ್ಟುಕೊಂಡಿರುವ ಸುರೇಶ್ ಬಾಬು ಪ್ರೊಡಕ್ಷನ್ ಹೌಸ್ ತೆರೆಯುವ ಯೋಜನೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟಿರುವ ಇವರು ಪಬ್ಲಿಕ್ ಟಾಯ್ಲೆಟ್ ಎಂಬ ಕಿರುಚಿತ್ರ ನಿರ್ಮಾಣವನ್ನೂ ಮಾಡಿದ್ದಾರೆ. ಹೀಗೆ ಸ್ವಂತ ಪರಿಶ್ರಮ, ಛಲ, ಸ್ನೇಹಿತರು, ಕುಟುಂಬಸ್ಥರ ಸಹಕಾರದಿಂದ ಸಾಧನೆಯ ಹಾದಿಯಲ್ಲಿ ಗೆಲುವಿನ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿದ್ದಾರೆ ಛಾಯಾಗ್ರಾಹಕ ಸುರೇಶ್ ಬಾಬು.

  • ಮಾಜಿ ಶಾಸಕರ 1.50 ಕೋಟಿ ಬೆಲೆಯ ಕಾರನ್ನು 75 ಲಕ್ಷ ರೂ.ಗೆ ಖರೀದಿಸಿದ್ದ ಯುವರಾಜ್ ಸ್ವಾಮಿ

    ಮಾಜಿ ಶಾಸಕರ 1.50 ಕೋಟಿ ಬೆಲೆಯ ಕಾರನ್ನು 75 ಲಕ್ಷ ರೂ.ಗೆ ಖರೀದಿಸಿದ್ದ ಯುವರಾಜ್ ಸ್ವಾಮಿ

    – ಮಾಜಿ ಶಾಸಕ ಸುರೇಶ್ ಬಾಬುಗೆ ಸೇರಿದ ಕಾರು
    – 8 ಜನ ನಟಿಯರ ಜೊತೆ ನಂಟು

    ಬೆಂಗಳೂರು: ಆಡಿಯೋ ಸುದ್ದಿ ಬಳಿಕ ಇದೀಗ ಕಾರು ಖರೀದಿ ಬಗ್ಗೆ ಅನುಮಾನ ಹುಟ್ಟಿಕೊಂಡಿದ್ದು, ಒಂದೂವರೆ ಕೋಟಿ ರೂಪಾಯಿ ಬೆಲೆ ಬಾಳುವ ಕಾರನ್ನು ಕೇವಲ 75 ಲಕ್ಷ ರೂ.ಗೆ ಯುವರಾಜ್ ಸ್ವಾಮಿ ಖರೀದಿಸಿದ್ದನಾ ಎಂಬ ಪ್ರಶ್ನೆ ಇದೀಗ ಎದ್ದಿದೆ. ಈ ಕಾರು ತುಮಕೂರಿನ ಮಾಜಿ ಶಾಸಕ ಸುರೇಶ್‍ಬಾಬ್‍ಗೆ ಸೇರಿದ್ದು, ಯಾಮಾರಿಸಿ ದುಬಾರಿ ಕಾರು ಖರೀದಿಸಿದ್ದನಾ ಎಂಬ ಅನುಮಾನ ಇದೀಗ ಮೂಡಿದೆ.

    ಸಿಸಿಬಿ ಜಪ್ತಿ ಮಾಡಿರುವ 2 ಕಾರಲ್ಲಿ ಒಂದು ರಾಜಕಾರಣಿಯದ್ದಾಗಿದೆ. ತುಮಕೂರಿನ ಮಾಜಿ ಶಾಸಕ ಸುರೇಶ್‍ಬಾಬ್‍ಗೆ ಸೇರಿದ ಕಾರು ಇದಾಗಿದ್ದು, ಸುರೇಶ್‍ಬಾಬುಗೆ ಯಾಮಾರಿಸಿ ಯುವರಾಜ್ ಸ್ವಾಮಿ ಈ ದುಬಾರಿ ಕಾರು ಖರೀದಿಸಿದ್ನಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿಯ ರೇಂಜ್ ರೋವರ್ ಕಾರನ್ನು 75 ಲಕ್ಷಕ್ಕೆ ಕೊಡಲಾಗಿದೆಯೇ ಎಂಬ ಅನುಮಾನ ಇದೀಗ ಎದ್ದಿದೆ.

    ಇತ್ತ 60+15 ಲಕ್ಷ ರೂಪಾಯಿ ಪಡೆದ ನಟಿ ರಾಧಿಕಾ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದ್ದು, ನಟಿ ರಾಧಿಕಾಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಸಿಸಿಬಿ ಪೊಲೀಸರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಸಾಕ್ಷ್ಯಾಧಾರವಿದ್ದರೂ ಒತ್ತಡದಿಂದ ಸಿಸಿಬಿ ಪೊಲೀಸರು ಸುಮ್ಮನಿದ್ದರು. ಇದೀಗ ಹಣದ ಬಗ್ಗೆ ಸ್ವತಃ ರಾಧಿಕಾ ಬಾಯ್ಬಿಟ್ಟಿರುವುದರಿಂದ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಹಣದ ಮೂಲ, ಯುವರಾಜ್ ಜೊತೆಗಿನ ನಂಟಿನ ಬಗ್ಗೆ ವಿಚಾರಣೆ ನಡೆಸಬಹುದು ಎನ್ನಲಾಗಿದೆ. ಅಲ್ಲದೆ ಹಿರಿಯ ಅಧಿಕಾರಿಗಳ ಜೊತೆ ಸಿಸಿಬಿ ಅಧಿಕಾರಿಗಳು ಈಗಾಗಲೇ ಮಾತುಕತೆಯನ್ನು ಸಹ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ನಟಿ ರಾಧಿಕಾ ಮಾತ್ರವಲ್ಲದೆ 8 ನಟಿಯರಿಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಾವುದೇ ಕ್ಷಣದಲ್ಲಿ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ. ಯುವರಾಜ್ ಸ್ವಾಮಿ ಬಳಿ ಹಣ ಪಡೆದ ನಟಿಯರಿಗೆ ಈಗ ಢವಢವ ಶುರುವಾಗಿದೆ. ಸ್ಟಾರ್ ನಟಿಯರನ್ನು ಸಹ ವಿಚಾರಣೆ ನಡೆಸುವ ಸಾಧ್ಯತೆ ಇದೆ.

  • ಶಾಸಕ ಸುರೇಶ್ ಬಾಬು ಜೊತೆ ಉಪಹಾರ ಸೇವಿಸಿದ ಕೋತಿ!

    ಶಾಸಕ ಸುರೇಶ್ ಬಾಬು ಜೊತೆ ಉಪಹಾರ ಸೇವಿಸಿದ ಕೋತಿ!

    ತುಮಕೂರು: ಕೋತಿಯೊಂದು ಶಾಸಕರ ಜೊತೆ ಉಪಹಾರ ಸೇವಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರು ಎಂದಿನಿಂತೆ ಇಂದು ಬೆಳಗ್ಗೆ ಉಪಹಾಸ ಸೇವಿಸಲು ಕುಳಿತಿದ್ದರು. ಈ ವೇಳೆ ಇದ್ದಕ್ಕಿದ್ದಂತೆಯೇ ಕೋತಿಯೊಂದು ನೇರವಾಗಿ ಬಂದು ಸುರೇಶ್ ಬಾಬು ಅವರು ಕುಳಿತಿದ್ದ ಡೈನಿಂಗ್ ಟೇಬಲ್ ಮೇಲೆ ಬಂದು ಕುಳಿತಿದೆ.

    ಕೋತಿ ಕುಳಿತಿದ್ದಂತೆಯೇ ಶಾಸಕರು ತನ್ನ ತಟ್ಟೆಯಲ್ಲಿದ್ದ ಉಪಹಾರವನ್ನು ಕೋತಿಗೂ ತಿನ್ನಿಸಿದ್ದಾರೆ. ಹೀಗೆ ತಿಂದು ಹೊಟ್ಟೆ ತುಂಬಿದ ಬಳಿಕ ಕೋತಿ ಅಲ್ಲಿಂದ ವಾಪಸ್ಸಾಗಿದೆ ಎಂದು ತಿಳಿದುಬಂದಿದೆ.

    ಸಿ.ಬಿ. ಸುರೇಶ್ ಬಾಬು ಅವರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. 2004ರಲ್ಲಿ ಗೆದ್ದರೂ ನಂತರ ಸೋಲು ಅನುಭವಿಸಿದ್ದ ಅವರು 2009 ಹಾಗೂ 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸಿ.ಬಿ.ಸುರೇಶ್‍ಬಾಬು, 2018ರ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

  • ಶಾಸಕ ಸುರೇಶ್ ಬಾಬುರಿಂದ ಕ್ಷೇತ್ರದ ಮತದಾರರಿಗೆ ಮತ್ತೊಂದು ಗಿಫ್ಟ್- ಸೀರೆಗಾಗಿ ಮುಗಿಬಿದ್ದ ಮಹಿಳೆಯರು

    ಶಾಸಕ ಸುರೇಶ್ ಬಾಬುರಿಂದ ಕ್ಷೇತ್ರದ ಮತದಾರರಿಗೆ ಮತ್ತೊಂದು ಗಿಫ್ಟ್- ಸೀರೆಗಾಗಿ ಮುಗಿಬಿದ್ದ ಮಹಿಳೆಯರು

    ತುಮಕೂರು: ಕೆಲ ದಿನಗಳ ಹಿಂದೆ ಕ್ಷೇತ್ರದ ಮಹಿಳೆಯರಿಗೆ ಕುಕ್ಕರ್ ಕೊಟ್ಟಿದ್ದ ಚಿಕ್ಕನಾಯನಕನಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬು ಇದೀಗ ಕ್ಷೇತ್ರದ ಮಹಿಳಾ ಮತದಾರರಿಗೆ ಸೀರೆ ಗಿಫ್ಟ್ ನೀಡಿದ್ದಾರೆ.

    ಶುಕ್ರವಾರ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಮಹಿಳೆಯರಿಗೆ ಮಡಿಲು ತುಂಬುವ ಹಾಗೂ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಮಹಿಳಾ ಮತದಾರರಿಗೆ ಸೀರೆ ಗಿಫ್ಟ್ ನೀಡಲಾಗಿದೆ. ಶಾಸಕರು ತಮ್ಮ ಬೆಂಬಲಿಗರ ಮೂಲಕ ಚಿಕ್ಕನಾಯಕಯನಹಳ್ಳಿ ಕ್ಷೇತ್ರದ ಮಹಿಳಾ ಮತದಾರರಿಗೆ ಸೀರೆ ಕೂಪನ್ ವಿತರಿಸಿದ್ದರು. ಹೀಗಾಗಿ ಸೀರೆ ಸಿಗುವ ಆಸೆಯಿಂದ ಸಾವಿರಾರು ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

    ಕಾರ್ಯಕ್ರಮ ಮುಗಿದ ಬಳಿಕ ಸೀರೆ ಹಂಚಿಕೆ ಮಾಡಲಾಯ್ತು. ಸೀರೆ ಪಡೆಯಲು ಮಹಿಳೆಯರು ದೌಡಾಯಿಸಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ನೂಕುನುಗ್ಗಲು ಉಂಟಾಗಿತ್ತು. ಕೆಲವರು ಕೂಪನ್ ಕೊಟ್ಟು ಮಹಿಳೆಯರು ಸೀರೆ ಪಡೆದು ಮನೆಯತ್ತ ನಡೆದರೆ ಮತ್ತೆ ಕೆಲವರು ಸೀರೆ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು.

  • ಯಾರ ಮನೆಯ ಬಾಗಿಲು ತಟ್ಟಿಲ್ಲ, ನಮ್ಮ ಮನೆಯ ಬಾಗಿಲು ಗಟ್ಟಿಯಾಗಿದೆ: ಕಂಪ್ಲಿ ಶಾಸಕ ಸುರೇಶ್ ಬಾಬು

    ಯಾರ ಮನೆಯ ಬಾಗಿಲು ತಟ್ಟಿಲ್ಲ, ನಮ್ಮ ಮನೆಯ ಬಾಗಿಲು ಗಟ್ಟಿಯಾಗಿದೆ: ಕಂಪ್ಲಿ ಶಾಸಕ ಸುರೇಶ್ ಬಾಬು

    ಬಳ್ಳಾರಿ: ಕಾಂಗ್ರೆಸ್ ಸೇರುವ ವಿಚಾರ ಎಲ್ಲಾ ಸುಳ್ಳು ವದಂತಿ. ನಾನು ಕಾಂಗ್ರೆಸ್ ಸೇರುವುದಾಗಿ ಎಲ್ಲಿಯೂ ಹೇಳಿಲ್ಲ. ನನ್ನ ಜೀವವಿರುವವರೆಗೂ ನಾನು ಬಿಜೆಪಿ ಬಿಡುವುದಿಲ್ಲವೆಂದು ಕಂಪ್ಲಿ ಶಾಸಕ ಸುರೇಶ್‍ಬಾಬು ಹೇಳಿದ್ದಾರೆ.

    ಶ್ರೀರಾಮುಲು ಸೋದರಳಿಯ ಸಹ ಕಾಂಗ್ರೆಸ್ ಸೇರ್ತಾರೆ ಅನ್ನೋ ಉಹಾಪೋಹಕ್ಕಿಂದು ಸ್ಪಷ್ಟನೆ ನೀಡಿದ ಸುರೇಶ್ ಬಾಬು, ನಾನು ಯಾರ ಮನೆಯ ಬಾಗಿಲು ತಟ್ಟಿಲ್ಲ. ನಮ್ಮ ಮನೆಯ ಬಾಗಿಲು ಗಟ್ಟಿಯಾಗಿದೆ. ನಾನು ಸ್ವಾಮಿ ನಿಷ್ಠೆಯಾಗಿ ಕೆಲಸಮಾಡುತ್ತೇವೆ ಹೊರತು ಸ್ವಾಮಿ ದ್ರೋಹಿಗಳಲ್ಲ ಅಂದ್ರು.

    ಬಳ್ಳಾರಿ ಜಿಲ್ಲೆಯಲ್ಲಿ ಸಂಸದ ಶ್ರಿರಾಮುಲು ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಅಲ್ಲದೇ ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ಮಾನಸಿಕ ಒತ್ತಡ ಹೆಚ್ಚಾಗಿದೆ. ಡಿಕೆಶಿಯವರಿಗೂ ನನಗೂ ವೈಯುಕ್ತಿಕವಾಗಿ ಸ್ನೇಹವಿಲ್ಲ. ಡಿಕೆ ಶಿವಕುಮಾರ್ ಬರೀ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆಂದು ಸುರೇಶ್ ಬಾಬು ಕೈ ನಾಯಕರ ವಿರುದ್ಧ ಕಿಡಿಕಾರಿದ್ರು.

    ಬಿಜೆಪಿ ಪಕ್ಷ ನನಗೆ ಯಾವ ಜವಾಬ್ದಾರಿಯನ್ನು ನೀಡಿದರೂ ನಿಭಾಯಿಸುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರ್ಪಡೆಗೆ ವಿಚಾರವನ್ನು ಅವರು ತಳ್ಳಿ ಹಾಕಿದರು.

  • ತನ್ವೀರ್ ಸೇಠ್ ಆಯ್ತು, ಈಗ ಶಾಸಕ ಸುರೇಶ್ ಬಾಬುಗೆ 10 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ

    ತನ್ವೀರ್ ಸೇಠ್ ಆಯ್ತು, ಈಗ ಶಾಸಕ ಸುರೇಶ್ ಬಾಬುಗೆ 10 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ

    ತುಮಕೂರು: ಕೆಲವು ದಿನಗಳ ಹಿಂದೆ ಸಚಿವ ತನ್ವೀರ್ ಸೇಠ್‍ಗೆ 10 ಕೋಟಿ ರೂ. ನೀಡುವಂತೆ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಹಾಕಿದ್ದ. ಇದೀಗ ತುಮಕೂರಿನ ಚಿಕ್ಕನಾಯಕಹಳ್ಳಿ ಶಾಸಕ ಸುರೇಶ್ ಬಾಬುಗೆ ರವಿ ಪೂಜಾರಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.

    ಕೂಡಲೇ 10 ಕೋಟಿ ರೂ. ಕೊಡಬೇಕು. ಇಲ್ಲದಿದ್ರೆ ನಿನ್ನ ಪ್ರಾಣಕ್ಕೆ ಅಪಾಯ ಅಂತಾ ಜೀವ ಬೆದರಿಕೆ ಹಾಕಿದ್ದಾನೆ. ಸುರೇಶ್ ಬಾಬು ಜೊತೆ ಹಿಂದಿಯಲ್ಲಿ ಮಾತನಾಡಿರುವ ರವಿಪೂಜಾರಿ, ಕರೆ ಬಳಿಕ ಮೆಸೇಜ್ ಕೂಡ ಮಾಡಿ ಬೆದರಿಕೆ ಹಾಕಿದ್ದಾನೆ. ಶಾಸಕರು ಬೆಂಗಳೂರಿನ ಬಸವೇಶ್ವರ ನಗರದ ನಿವಾಸದಲ್ಲಿದ್ದಾಗ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಹೌದು, ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಹಾಕಿದ್ದು ನಾನೇ: ರವಿ ಪೂಜಾರಿ

    10 ಕೋಟಿ ರೂಪಾಯಿ ಕೊಡು, ಇಲ್ಲಾಂದ್ರೆ ಗುಂಡಿಟ್ಟು ಸಾಯಿಸ್ತೀವಿ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಬಂದಿತ್ತು. ನಾನು ಕಿಶೋರ್ ಪೂಜಾರಿ, ಆರ್‍ಪಿ ಗ್ರೂಪಿನವನು. 10 ಕೋಟಿ ರೂ. ಕೊಡಬೇಕು. ಇಲ್ಲವಾದ್ರೆ ಗುಂಡಿಟ್ಟು ಸಾಯಿಸ್ತೀವಿ ಎಂದು ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಸಚಿವ ಸೇಠ್ ಸೈಬರ್ ಕ್ರೈಂ ವಿಭಾಗಕ್ಕೆ ದೂರನ್ನು ನೀಡಿದ್ದರು. ಇದನ್ನೂ ಓದಿ: ತೀರ್ಥಹಳ್ಳಿಯ ಚಿನ್ನ-ಬೆಳ್ಳಿ ವರ್ತಕನಿಗೆ ರವಿ ಪೂಜಾರಿ ಬೆದರಿಕೆ- ಅಬ್ಬಾ ಇಷ್ಟು ಹಣಕ್ಕೆ ಬೇಡಿಕೆ!

    https://www.youtube.com/watch?v=CVoLaIKwhk0