Tag: suresh angadi

  • 39 ಸಾವಿರ ಕೋಟಿ ಅನುದಾನದಲ್ಲಿ ಕರ್ನಾಟಕದಲ್ಲಿ ರೈಲ್ವೆ ಕೆಲಸ ಆರಂಭ: ಸೋಮಣ್ಣ

    39 ಸಾವಿರ ಕೋಟಿ ಅನುದಾನದಲ್ಲಿ ಕರ್ನಾಟಕದಲ್ಲಿ ರೈಲ್ವೆ ಕೆಲಸ ಆರಂಭ: ಸೋಮಣ್ಣ

    – ಸಿದ್ದರಾಮಯ್ಯರನ್ನು ಯಾರಾದ್ರೂ ಮುಟ್ಟೋಕೆ ಆಗುತ್ತಾ?

    ಬೆಳಗಾವಿ: ಬೆಂಗಳೂರಿಗೆ ನೀಡಿದಷ್ಟು ಬೆಳಗಾವಿಗೂ (Belagavi) ಹೆಚ್ಚಿನ ಆದ್ಯತೆ ಕೊಡುತ್ತೇವೆ. ಬೆಳಗಾವಿ ಸೇರಿ ರಾಜ್ಯಾದ್ಯಂತ 39 ಸಾವಿರ ಕೋಟಿ ರೂ. ಅನುದಾನದಲ್ಲಿ ರೈಲ್ವೆ ಕಾಮಗಾರಿಗಳ (Railway Works) ಕೆಲಸ ಆರಂಭಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ (Somanna) ತಿಳಿಸಿದರು.

    ಬೆಳಗಾವಿ-ಧಾರವಾಡ (Belagavi-Dharawada) ನೇರ ರೈಲ್ವೆ ಮಾರ್ಗ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗ ದಿ. ಸುರೇಶ್‌ ಅಂಗಡಿ (Suresh Angadi) ಅವರ ಕನಸಾಗಿದೆ. ರೈಲು ಹಳಿ ನಿರ್ಮಾಣಕ್ಕೆ ಒಟ್ಟು 888 ಎಕರೆ ಜಮೀನು ಬೇಕಾಗುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ 660 ಎಕರೆ, ಧಾರವಾಡದಲ್ಲಿ 228 ಎಕರೆ ಜಮೀನು ಬೇಕು. 446 ಎಕರೆ ಜಮೀನನ್ನು ಮುಂದಿನ ತಿಂಗಳು ಹಸ್ತಾಂತರ ಮಾಡುವ ಬಗ್ಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ‌ ಮಾರ್ಗ ಸುಮಾರು 73 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಧಾರವಾಡದ ಕ್ಯಾರಕೊಪ್ಪದಿಂದ ಬೆಳಗಾವಿ ದೇಸೂರದವರೆಗೆ ರೈಲು ಹಳಿ ಮಾಡುವ ಗುರಿ ಇದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಅಭಿವೃದ್ಧಿ ಮಾಡಬಹುದು. ಜಿಲ್ಲಾಧಿಕಾರಿಗಳು ಒಂದು ವರ್ಷದ ಕೆಲಸವನ್ನು ಒಂದು ತಿಂಗಳಲ್ಲಿ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡ್ರಾ ಯೋಗೇಶ್ವರ್‌?

    ಜನವರಿ, ಫೆಬ್ರುವರಿಯಲ್ಲಿ ಭೂಸ್ವಾಧೀನಪಡಿಸಿಕೊಂಡು ಕಾಮಗಾರಿ ಆರಂಭಿಸುತ್ತೇವೆ. ಬೆಳಗಾವಿ ಧಾರವಾಡ ರೈಲು ಮಾರ್ಗವನ್ನು 18 ರಿಂದ 20 ತಿಂಗಳಲ್ಲಿ ಕೆಲಸ ಮುಗಿಸಲಾಗುವುದು. ಜಿಲ್ಲಾಧಿಕಾರಿಗಳು ಜೊತೆ ಸೇರಿಕೊಂಡು ಕೆಲಸ ಮಾಡುವಂತೆ ನಮ್ಮ ಅಧಿಕಾರಿಗಳಿಗೆ ತಿಳಿಸುತ್ತೇನೆ. ಇನ್ನು ರಾಜ್ಯದಲ್ಲಿ 11 ಯೋಜನೆಗಳು ಬಾಕಿ ಇದ್ದವು. ಅದರಲ್ಲಿ 9 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. 39 ಸಾವಿರ ಕೋಟಿ ಅನುದಾನ ಒದಗಿಸಿದ್ದೇವೆ. ಐವತ್ತು ವರ್ಷದಲ್ಲಿ ಆಗದೇ ಇರುವ ಕೆಲಸಗಳು ಈ ಹತ್ತು ವರ್ಷದಲ್ಲಿ ಮಾಡಿದ್ದೇವೆ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.

    ಧಾರವಾಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಜೊತೆಗೂ ಮಾತಾಡಿದ್ದೇನೆ. 950 ಕೋಟಿ ರೂ. ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಜಂಟಿ ಸರ್ವೇ, ಗಡಿ ನಿಗದಿಯಾಗಿದೆ. ಸ್ಟೇಶನ್ ಗಳನ್ನು ಎಲ್ಲೆಲ್ಲಿ ನಿರ್ಮಿಸಬೇಕು ಎಂಬ ಬಗ್ಗೆಯೂ ಚರ್ಚಿಸಲಾಗಿದೆ. ಬೆಳಗಾವಿಯ ತಾಲೂಕಿನ ಕೆಕೆಕೊಪ್ಪ, ಬಡಾಲ ಅಂಕಲಗಿ, ನಾಗೇನಟ್ಟಿ, ನಂದಿಹಳ್ಳಿ, ಗರ್ಲಗುಂಜಿ ಸೇರಿ ಮತ್ತಿತರ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಮೀನು ತೆಗೆದುಕೊಳ್ಳುವ ಕೆಲಸ‌ ಡಿಸಿ ಮಾಡಿದ್ದಾರೆ. ಅಲ್ಲದೇ ಬೆಳಗಾವಿ ಹೃದಯ ಭಾಗದಲ್ಲಿ 11ನೇ ಕ್ರಾಸ್ ನಲ್ಲಿ‌ 6 ಆರ್‌.ಒ.ಬಿ ಮತ್ತು ಆರ್.ಯು.ಬಿ. ತೆರೆಯಲು ನಿರ್ಧರಿಸಲಾಗಿದ್ದು, ಒಟ್ಟಾರೆ ಬೆಳಗಾವಿಗೆ ಪ್ರಧಾನಿ ಮೋದಿ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದು ಸೋಮಣ್ಣ ಹೇಳಿದರು.

     

    ರಾಯಚೂರು, ಯಾದಗಿರಿ, ಕುಡಚಿ ಸೇರಿ ಹಲವು ಕಡೆ ಕೆಲಸ ಆರಂಭಿಸಿದ್ದೇವೆ‌. ಯೋಜನೆಗಳನ್ನು ರೂಪಿಸಲು ಜಾಗ ಬೇಕು. ನೀವು ಜಾಗ ಕೊಟ್ಟರೆ ನಾವು ಕೆಲಸ ಮಾಡುತ್ತೇವೆ. ಜಾಗ ಸಿಗಲಿಲ್ಲ ಎಂದರೆ ಯೋಜನೆ ಯೋಜನಗೆಳಾಗಿ ಉಳಿಯುತ್ತವೆ. ಅವಶ್ಯಕತೆ ಇರುವ ಕೆಲಸಗಳಿಗೆ ಆದ್ಯತೆ ಕೊಡುತ್ತೇನೆ. ಲೋಕಾಪೂರ ರಾಮದುರ್ಗ ರೈಲು, ಸವದತ್ತಿ ಯಲ್ಲಮ್ಮಗುಡ್ಡ ರೈಲು ಯೋಜನೆ ಕುರಿತು ಪರಿಶೀಲಿಸುತ್ತೇವೆ ಎಂದರು.

    ಮುಟ್ಟೋಕೆ ಆಗುತ್ತಾ?
    ಸಿದ್ದರಾಮಯ್ಯರನ್ನು (Siddaramaiah) ಯಾರಾದ್ರೂ ಮುಟ್ಟೋಕೆ ಆಗುತ್ತಾ? ಯಾರಾದ್ರು ಸಿಎಂ ಅವರನ್ನು ಮುಟ್ಟಿದ್ರೆ ಪೊಲೀಸರು ಕೇಸ್ ಹಾಕುತ್ತಾರೆ ಎಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ (Somanna) ವ್ಯಂಗ್ಯವಾಡಿದರು. ನನನ್ನು ಮುಟ್ಟಿದ್ರೆ ರಾಜ್ಯದ ಜನ ಸುಮ್ನೆ ಬಿಡಲ್ಲ ಎಂಬ ಸಿಎಂ ಹೇಳಿಕೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಸಿದ್ದರಾಮಯ್ಯ ಅನುಭವಿ ರಾಜಕಾರಣಿ. ಅವರು ಏನ್ ಮಾತಾಡ್ತಾರೆ ಎನ್ನುವುದು ಅವರಿಗೆ ಬಿಡುತ್ತೇನೆ. ಅವರನ್ನು ಯಾರು ಮುಟ್ಟುವುದು ಬೇಡ. ಸಾಮಾನ್ಯ ಜನರ ಭಾವನೆಗೆ ತದ್ವಿರುದ್ಧವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ರಾಜ್ಯ ಸರ್ಕಾರದ ಕಾರ್ಯ ವೈಖರಿ ಸರಿಯಿಲ್ಲ ಎಂದು ದೂರಿದರು.

     

  • ಒಂದೂವರೆ ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಬಿಜೆಪಿ ನಾಯಕರ ನಿಧನ

    ಒಂದೂವರೆ ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಬಿಜೆಪಿ ನಾಯಕರ ನಿಧನ

    – ಕೊನೆಗೂ ಈಡೇರಲಿಲ್ಲ ಮಾಮನಿ ಕನಸು
    – ಐತಿಹಾಸಿಕ ಕಿತ್ತೂರು ಉತ್ಸವ ಮೇಲೆ ಸೂತಕದ ಛಾಯೆ

    ಬೆಳಗಾವಿ: ಒಂದೂವರೆ ವರ್ಷದ ಅವಧಿಯಲ್ಲಿ ಬೆಳಗಾವಿಯ ಮೂವರು ಪ್ರಭಾವಿ ಬಿಜೆಪಿ (BJP) ನಾಯಕರ ಅಕಾಲಿಕವಾಗಿ ನಿಧನರಾಗಿದ್ದು ಚುನಾವಣೆ ವರ್ಷದಲ್ಲೇ ಬೆಳಗಾವಿ (Belagavi) ಜಿಲ್ಲಾ ಬಿಜೆಪಿಗೆ ದೊಡ್ಡ ಆಘಾತವೇ ಎದುರಾಗಿದ್ದು ಒಂದೆಡೆಯಾದರೆ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಐತಿಹಾಸಿಕ ಕಿತ್ತೂರು ಉತ್ಸವ (Kittur Utsav) ದ ಮೇಲೆ ಸೂತಕದ ಛಾಯೆ ಬಿದ್ದಿದೆ.

    ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಬಿಜೆಪಿ ನಾಯಕರ ವಿಧಿವಶರಾಗಿದ್ದಾರೆ. ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದ್ದ ದಿ. ಕೇಂದ್ರ ಸಚಿವ ಸುರೇಶ್ ಅಂಗಡಿ (Suresh Angadi), ಅರಣ್ಯ ಸಚಿವ ಉಮೇಶ್ ಕತ್ತಿ (Umesh Katti) ಬಳಿಕ ಈಗ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ (Anand Mamani) ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿ (Corona Virus) ಗೆ ತುತ್ತಾಗಿದ್ದ ಸುರೇಶ್ ಅಂಗಡಿ ಚಿಕಿತ್ಸೆ ಫಲಿಸದೇ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಒಂದೂವರೆ ತಿಂಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ಸಾವನ್ನಪ್ಪಿದರು. ಇದೀಗ ಲೀವರ್ (Liver Problem) ಸಮಸ್ಯೆಯಿಂದ ಬಳಲುತ್ತಿದ್ದ ಆನಂದ ಮಾಮನಿ ಕೂಡ ಚಿಕಿತ್ಸೆ ಫಲಿಸದೇ ನಿನ್ನೆ ನಿಧನರಾಗಿದ್ದಾರೆ. ಚುನಾವಣೆ ವರ್ಷ ಇದ್ದಂತಹ ಸಂದರ್ಭದಲ್ಲಿ ಮೂವರು ಬಿಜೆಪಿ ಪ್ರಭಾವಿ ನಾಯಕರು ಸಾವು ಬಿಜೆಪಿಗೆ ಬರಸಿಡಿಲು ಬಡಿದಂತಾಗಿದೆ.

    ಡೆಪ್ಯೂಟಿ ಸ್ಪೀಕರ್ (Deputy Speaker) ಆಗಿದ್ದಾಗಲೇ ಅಂದು ತಂದೆ, ಇಂದು ಪುತ್ರ ಸಾವು: ಬೆಳಗಾವಿ ಜಿಲ್ಲೆಯ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ ಅವರ ತಂದೆ ಚಂದ್ರಶೇಖರ ಮಾಮನಿ ಸಹ ಡೆಪ್ಯುಟಿ ಸ್ಪೀಕರ್ ಆಗಿದ್ದಾಗಲೇ ಮೃತಪಟ್ಟಿದ್ರು. 1995-1999 ಅವಧಿಯಲ್ಲಿ ಉಪಸಭಾಧ್ಯಕ್ಷ ಸ್ಥಾನ ನಿಭಾಯಿಸಿದ್ದಾಗ ಸಾವನ್ನಪ್ಪಿದ್ದರು. ಇದೀಗ ಅದೇ ಗತ್ತಿನಲ್ಲೇ ಉಪಸಭಾಧ್ಯಕ್ಷನ ಹುದ್ದೆ ನಿಭಾಯಿಸುತ್ತಿದ್ದ ಆನಂದ ಮಾಮನಿ ಕೂಡ ಉಪಸಭಾಧ್ಯಕ್ಷರಾಗಿದ್ದಾಗಲೇ ಕಾಕತಾಳೀಯ ಎಂಬಂತೆ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ

    ಕೊನೆಗೂ ಈಡೇರಲಿಲ್ಲ ಸಚಿವರಾಗಬೇಕೆಂಬ ಕನಸು: ಬೆಳಗಾವಿ ಜಿಲ್ಲೆಯ ಹಿರಿಯ ಲಿಂಗಾಯತ ಪಂಚಮಸಾಲಿ ನಾಯಕರಾಗಿದ್ದ ಆನಂದ ಮಾಮನಿ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಬಿಎಸ್‍ವೈ ಸಿಎಂ ಆಗಿದ್ದಾಗಲೇ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಅವರಿಗೆ ಡೆಪ್ಯೂಟಿ ಸ್ಪೀಕರ್ ಹುದ್ದೆ ನೀಡಿ ಹಿಂದಿನ ಮುಖ್ಯಮಂತ್ರಿ ಬಿಎಸ್‍ವೈ ಸಮಾಧಾನಪಡಿಸಿದ್ದರು. ಇದೀಗ ಬಸವರಾಜ ಬೊಮ್ಮಾಯಿ (Basavaraj Bommai) ಸಿಎಂ ಆಗಿದ್ದಾಗಲೂ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಆನಂದ ಮಾಮನಿ ಮಂತ್ರಿ ಸ್ಥಾನ ಕೊಡದಿದ್ರೆ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಾರಿಯೂ ಆನಂದ ಮಾಮನಿ ಅವರನ್ನ ಸಿಎಂ ಬಸವರಾಜ ಬೊಮ್ಮಾಯಿ ಮನವೊಲಿಸಿದ್ದರು. ಇದನ್ನೂ ಓದಿ: ಶೀಘ್ರದಲ್ಲೇ ಜನಸೇವೆಗೆ ಬರುತ್ತೇನೆ- ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಮಾಮನಿ!

    ಐತಿಹಾಸಿಕ ಕಿತ್ತೂರು ಉತ್ಸವ ಮೇಲೆ ಸೂತಕದ ಛಾಯೆ: ಸವದತ್ತಿ ಬಿಜೆಪಿ ಶಾಸಕ, ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ(56) ನಿಧನ ಹಿನ್ನೆಲೆ ಐತಿಹಾಸಿಕ ಕಿತ್ತೂರು ಉತ್ಸವ ಮೇಲೆ ಸೂತಕದ ಕರಿಛಾಯೆ ಬಿದ್ದಿದೆ. ಐತಿಹಾಸಿಕ ಕಿತ್ತೂರು ಉತ್ಸವ ರದ್ದಾಗುತ್ತಾ? ಮುಂದೂಡಲಾಗುತ್ತಾ? ಎಂಬ ರಾಜ್ಯ ಸರ್ಕಾರದ ನಿರ್ಧಾರಕ್ಕಾಗಿ ಬೆಳಗಾವಿ ಜಿಲ್ಲಾಡಳಿತ ಕಾಯುತ್ತಿದೆ. ಇದೇ ಮೊದಲ ಬಾರಿಗೆ ಇಂದಿನಿಂದ ಮೂರು ದಿನಗಳ ಕಾಲ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿತ್ತು. ಅದರಂತೆ ಇಂದು ಸಂಜೆ ನಡೆಯುವ ಕಿತ್ತೂರು ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದರು. ಮೂರು ದಿನಗಳ ಕಾಲ ನಡೆಯುವ ಉತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಬೆಳಗಾವಿ ಜಿಲ್ಲೆ ಸವದತ್ತಿ ಶಾಸಕ ಆನಂದ ಮಾಮನಿ ವಿಧಿವಶ ಹಿನ್ನೆಲೆ ಕಿತ್ತೂರು ಉತ್ಸವ ಆಚರಣೆ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರಕ್ಕಾಗಿ ಬೆಳಗಾವಿ ಜಿಲ್ಲಾಡಳಿತ ಕಾಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರೈಲಿಗೆ ದಿವಂಗತ ಸುರೇಶ್ ಅಂಗಡಿ ಹೆಸರಿಡರಲು ಶಿಫಾರಸ್ಸು ಮಾಡ್ತೇನೆ: ಬೊಮ್ಮಾಯಿ

    ರೈಲಿಗೆ ದಿವಂಗತ ಸುರೇಶ್ ಅಂಗಡಿ ಹೆಸರಿಡರಲು ಶಿಫಾರಸ್ಸು ಮಾಡ್ತೇನೆ: ಬೊಮ್ಮಾಯಿ

    ಬೆಳಗಾವಿ: ದಿವಂಗತ ಸಂಸದ ಸುರೇಶ್ ಅಂಗಡಿ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು, ಬೆಳಗಾವಿ – ಬೆಂಗಳೂರು ಮಧ್ಯೆ ಓಡಾಡುವ ರೈಲಿಗೆ ಸುರೇಶ್ ಅಂಗಡಿ ಹೆಸರಿಡಲು ಶಿಫಾರಸ್ಸು ಮಾಡುತ್ತೇನೆ ಎಂದು ಹೇಳಿದ್ದಾರೆ.

    ಬೆಳಗಾವಿ ಸಾವಗಾಂವನಲ್ಲಿರುವ ಸುರೇಶ್ ಅಂಗಡಿ ಕಾಲೇಜಿನಲ್ಲಿ ಇಡಲಾಗಿದ್ದ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುರೇಶ್ ಅಂಗಡಿಯವರು ಅಜಾತ ಶತ್ರು, ಎಲ್ಲರ ಪ್ರೀತಿ ಗಳಿಸುವ ವ್ಯಕ್ತಿತ್ವ ಅವರದ್ದಾಗಿದೆ. ಸುರೇಶ್ ಅಂಗಡಿ ಮನೆಯಲ್ಲಿ ಅವರ ತಾಯಿಮಾಡುತ್ತಿದ್ದ ಬಿಸಿ ರೊಟ್ಟಿ ಹಾಗೂ ಅವರ ತಾಯಿ ಆಶೀರ್ವಾದ ಕೂಡ ನಮಗೆ ಸಿಕ್ಕಿದೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಒಳ್ಳೆಯ ಕೆಲಸ ಮಾಡಿದ್ದರೆ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಇಳಿಸುತ್ತಿರಲಿಲ್ಲ: ಡಿಕೆಶಿ

    ಇದೇ ವೇಳೆ ಸುರೇಶ್‍ಗೆ ಹಿಂದೂತ್ವದ ಬಗ್ಗೆ ಬಹಳ ಅಭಿಮಾನ ಇತ್ತು. ಅಧಿಕಾರ ಕೊಟ್ಟರೆ ಅವರ ಸಾಮರ್ಥ್ಯ ಗೊತ್ತಾಗುತ್ತದೆ. ಸುರೇಶ್ ಅಂಗಡಿಗೆ ಅಧಿಕಾರ ಕೊಟ್ಟ ಕೆಲವೇ ದಿನಗಳಲ್ಲಿ ರೈಲ್ವೆ ಸುಧಾರಿಸಿದರು. ಯಡಿಯೂರಪ್ಪನವರು ಸಹ ಸುರೇಶ್ ಅಂಗಡಿಗೆ ಎಷ್ಟು ಕೆಪ್ಯಾಸಿಟಿ ಇದೆ ಎಂದು ಮಾತನಾಡಿದ್ದರು. ಅಲ್ಲದೇ ರೈಲ್ವೆ ಬೋರ್ಡ್‍ನಲ್ಲಿ ಕೂಡಾ ಪ್ರಭಾವ ಬೀರಿದ್ದರು ಎಂದು ಹೇಳಿದ್ದಾರೆ.

    ಉತ್ತರ ಕರ್ನಾಟಕದ ಮೇಲೆ ಸುರೇಶ್ ಅವರಿಗೆ ಬಹಳ ಅಭಿಮಾನ ಇತ್ತು. ಅವರು ಸಿದ್ದಾರೂಢರ ಭಕ್ತರಾಗಿದ್ದರು. ಈ ಹಿಂದೆ ಖಂಡಿತವಾಗಿಯೂ ಧಾರವಾಡ ಬೆಳಗಾವಿ ರೈಲ್ವೆ ಯೋಜನೆಗೆ ಸಹಕಾರ ಕೊಡುತ್ತೇವೆ ಎಂದಿದ್ದರು. ಆದರೆ ಸುರೇಶ್ ಅಂಗಡಿಯವರು ಬಹಳ ಪ್ರೀತಿ ಕೊಟ್ಟು ಹೋಗಿದ್ದಾರೆ. ನಾವು ಅದನ್ನು ಉಳಿಸಬೇಕು ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಬಿಕಿನಿ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಹೆಬ್ಬುಲಿ ಬೆಡಗಿ

  • ದೆಹಲಿಯಲ್ಲಿ ದಿ.ಸುರೇಶ್ ಅಂಗಡಿ ಮೂರ್ತಿ ಪ್ರತಿಷ್ಠಾಪನೆ – ಕುಟುಂಬಸ್ಥರಿಂದ ನಮನ

    ದೆಹಲಿಯಲ್ಲಿ ದಿ.ಸುರೇಶ್ ಅಂಗಡಿ ಮೂರ್ತಿ ಪ್ರತಿಷ್ಠಾಪನೆ – ಕುಟುಂಬಸ್ಥರಿಂದ ನಮನ

    ನವದೆಹಲಿ: ಕೊರೊನಾದಿಂದ ಮೃತಪಟ್ಟ ಕೇಂದ್ರ ಸಚಿವ ದಿ.ಸುರೇಶ್ ಅಂಗಡಿ ಮೂರ್ತಿಯನ್ನು ದೆಹಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.

    ದೆಹಲಿಯಲ್ಲಿರುವ ವೀರಶೈವ ರುದ್ರಭೂಮಿ ಬಳಿ ದಿ.ಸುರೇಶ್ ಅಂಗಡಿ ಕುಟುಂಬಸ್ಥರಿಂದ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಸಂಸದೆ ಮಂಗಳಾ ಅಂಗಡಿ ಪತಿಯ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ.

    ಸಂಸದರಾದ ಡಿ.ವಿ.ಸದಾನಂದಗೌಡ, ನಳಿನ್ ಕುಮಾರ್ ಕಟೀಲು, ರಮೇಶ್ ಜಾರಕಿಹೊಳಿ ಸೇರಿದಂತೆ ರಾಜ್ಯದ ಸಂಸದರು ಈ ವೇಳೆ ಭಾಗಿಯಾಗಿದ್ದರು. ಇದನ್ನೂ ಓದಿ: ಒಬ್ಬಳೇ ಮಹಿಳಾ ಅಥ್ಲೀಟ್, ಪುರುಷರೊಂದಿಗೆ ಕ್ರೀಡಾಕೂಟಕ್ಕೆ ಕಳಿಸಲ್ಲ

    ಇಂದು ನವದೆಹಲಿಯಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಶ್ರೀ ಸುರೇಶ್ ಅಂಗಡಿ ಅವರ ಸಮಾಧಿ ಸ್ಥಳದಲ್ಲಿ ಶ್ರೀ ಸುರೇಶ್ ಅಂಗಡಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲ್, ಸಂಸದರು ಹಾಗೂ ಶ್ರೀ ಸುರೇಶ್ ಅಂಗಡಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು ಎಂದು ಸಂಸದರಾದ ಡಿ.ವಿ.ಸದಾನಂದಗೌಡ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಹಿತಿ ಹಂಚಿಕೊಂಡಿದ್ದಾರೆ.

  • ಕುರ್ಚಿ ದಾಹ ಬಿಡ್ರಿ, ಸರಿಯಾಗಿ ಕೆಲಸ ಮಾಡಿ: ಎಂ.ಬಿ.ಪಾಟೀಲ್ ಕಿಡಿ

    ಕುರ್ಚಿ ದಾಹ ಬಿಡ್ರಿ, ಸರಿಯಾಗಿ ಕೆಲಸ ಮಾಡಿ: ಎಂ.ಬಿ.ಪಾಟೀಲ್ ಕಿಡಿ

    ಹಾವೇರಿ: ಕೊರೊನಾ ಸಂಕಷ್ಟದ ಸಮಯದಲ್ಲಿ ಕೊರೊನಾ ನಿರ್ವಹಣೆ ಬಿಟ್ಟು ಅಧಿಕಾರ ದಾಹ ಪ್ರದರ್ಶನ ಮಾಡುತ್ತಿದ್ದಾರೆ. ಕುರ್ಚಿ ದಾಹ ಬಿಡ್ರಿ, ಸರಿಯಾಗಿ ಕೆಲಸ ಮಾಡಿ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಒಬ್ಬರಿಗೊಬ್ಬರು ತಾಳ ಮೇಳ ಇಲ್ಲ. ಸಿಎಂ ಬದಲಾವಣೆ ಮಾಡಬೇಕು ಅಂತಾರೆ. ಪರಸ್ಪರ ಸಹಕಾರವಿಲ್ಲ. ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಸೋ ಕೆಲಸ ಮಾಡಬೇಕು ಎಂದು ಎಂ.ಬಿ.ಪಾಟೀಲ್ ಅವರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ಕೋವಿಡ್‍ನಲ್ಲಿ ಸುರೇಶ್ ಅಂಗಡಿಯವರನ್ನ ಕಳೆದುಕೊಂಡಿದ್ದೇವೆ. ಡಿಸಿಎಂ ಲಕ್ಷ್ಮಣ ಸವದಿಯವರ ಮನೆಯಲ್ಲಿ ಅವರ ಸಹೋದರರನ್ನ ಕಳೆದುಕೊಂಡಿದ್ದೇವೆ. ಕುರ್ಚಿ ಬಿಡ್ರಿ, ನಿಮ್ಮ ಮನೆ, ನಮ್ಮ ಮನೆಯಲ್ಲೂ ನೋವಾಗಿವೆ. ಸರಿಯಾಗಿ ಕೆಲಸ ಮಾಡಿ ಎಂದರು.

    ನರ್ಸ್, ವೈದ್ಯರು ಗಂಟೆಗಟ್ಟಲೆ ಪಿಪಿಇ ಕಿಟ್ ಹಾಕೊಕೊಂಡು ನಮಗಾಗಿ ಕೆಲಸ ಮಾಡಿದ್ದಾರೆ. ಕೊರೊನಾದಲ್ಲಿ ವೈಫಲ್ಯ, ಬೆಲೆ ಏರಿಕೆ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧಿಕಾರದ ಮದದಲ್ಲಿವೆ. ಇವರು ಜನರ ಒಳಿತು ಬಯಸಿಲ್ಲ. ಈ ಸರ್ಕಾರಗಳು ತೊಲಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯೋ ನೈತಿಕ ಹಕ್ಕಿಲ್ಲ. ಲಕ್ಷಾಂತರ ಜನರ ಜೀವ ಕಳೆದಿದ್ದೀರಿ, ಲಕ್ಷಾಂತರ ಮಕ್ಕಳನ್ನ ಅನಾಥರನ್ನಾಗಿ ಮಾಡಿದ್ದೀರಿ, ಲಕ್ಷಾಂತರ ಕುಟುಂಬಗಳನ್ನ ಮುರಿದಿದ್ದೀರಿ. ಇದೆಲ್ಲದರ ಜೊತೆಗೆ ಜನರ ಮೇಲೆ ಭಾರ ಹಾಕಿದ್ದೀರಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರಿಗೆ ವರುಣಾ ಕ್ಷೇತ್ರ ಬಿಟ್ಟು ಹೋಗ್ಬೇಡಿ ಅಂದಿದ್ದೆ: ಸುಧಾಕರ್

  • ಐ ಡೋಂಟ್ ವಾಂಟ್ ಟು ರಿಯಾಕ್ಟ್ ವಿಜಯೇಂದ್ರ : ಸಿದ್ದರಾಮಯ್ಯ

    ಐ ಡೋಂಟ್ ವಾಂಟ್ ಟು ರಿಯಾಕ್ಟ್ ವಿಜಯೇಂದ್ರ : ಸಿದ್ದರಾಮಯ್ಯ

    ಕೊಪ್ಪಳ: ಐ ಡೋಂಟ್ ವಾಂಟ್ ಟು ರಿಯಾಕ್ಟ್ ವಿಜಯೇಂದ್ರ. ನಾನು ಯಾವುದೇ ಕಾರಣಕ್ಕೂ ವಿಜಯೇಂದ್ರ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದಾರೆ.

    ಕೊಪ್ಪಳದ ಕಾರಟಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಜಯೇಂದ್ರಗೆ ಯಾವ ಅರ್ಹತೆ ಇದೆ? ಅವರೇನಾದ್ರೂ ಸಚಿವರಾಗಿದ್ರಾ ಅಥವಾ ಸಿಎಂ ಆಗಿದ್ರಾ? ಯಡಿಯೂರಪ್ಪನವರ ಮಗ ಅನ್ನೋದು ಬಿಟ್ರೆ ಬೇರೆ ಯಾವ ಕ್ವಾಲಿಫಿಕೇಶನ್ ಇದೆ? ವಿಜಯೇಂದ್ರ ರಾಜಕೀಯದಲ್ಲಿ ಏನೂ ಅಲ್ಲ ಎಂದು ಹೇಳಿದರು.

    ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಒಬ್ಬ ಪೆದ್ದ. ಅವನಿಗೆ ಬ್ರೈನ್‍ಗೂ ನಾಲಿಗೆಗೂ ಲಿಂಕ್ ಇಲ್ಲ. ಬಾಯಿಗೆ ಬಂದಂತೆ ಮಾತಾಡ್ತಾನೆ. ನಾನು ಹೇಗೆ ಕಾಂಗ್ರೆಸ್ ಪಾರ್ಟಿ ಸೇರಿದೆ ಎಂದು ನಿಮಗೆ ಗೊತ್ತಾ? ನನ್ನನ್ನು ಜೆಡಿಎಸ್‍ನಿಂದ ಹೊರಹಾಕಿದರು. ಬಳಿಕ ನಾನು ಒಂದು ವರ್ಷ ಅಹಿಂದಾ ಸಂಘಟನೆ ಮಾಡುತ್ತಿದ್ದೆ. ಆಮೇಲೆ ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ನನಗೆ ಕಾಂಗ್ರೆಸ್ ಸೇರಲು ಆಹ್ವಾನ ನೀಡಿದ ಮೇಲೆ ನಾನು ಕಾಂಗ್ರೆಸ್ ಪಕ್ಷ ಸೇರಿಕೊಂಡೆ. ಬಿಜೆಪಿ ವಿರುದ್ಧ ಹೋರಾಡಲು ನಾನು ಕಾಂಗ್ರೆಸ್ ಪಕ್ಷ ಸೇರಿಕೊಂಡೆ. ಈಶ್ವರಪ್ಪನಿಗೆ ಇದ್ಯಾವುದೂ ಗೊತ್ತಿಲ್ಲ ಎಂದು ಟೀಕಿಸಿದರು.

    ಕೊರೊನಾ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ಒಂದೇ ದಿನ 10 ಸಾವಿರಕ್ಕೂ ಅಧಿಕ ಕೇಸ್ ಬಂದಿವೆ. ಸರ್ಕಾರ ಬಿಗಿ ಕ್ರಮ ಕೈಗೊಂಡಿಲ್ಲ. ಸರ್ಕಾರದ ತಪ್ಪಿನಿಂದ ಎರಡನೇ ಅಲೆಯಲ್ಲಿ ಕೇಸ್‍ಗಳು ಹೆಚ್ಚುತ್ತಿವೆ. ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ. ಬಿಗಿ ಕ್ರಮ ಕೈಗೊಳ್ಳಬೇಕು. ಸರಿಯಾಗಿ ಕೋವಿಡ್ ಟೆಸ್ಟ್ ನಡೆಸಬೇಕು. ಗಡಿ ಭಾಗಗಳಲ್ಲಿ ಸರಿಯಾಗಿ ಟೆಸ್ಟ್ ನಡೆಸುತ್ತಿಲ್ಲ. ಮಹಾರಾಷ್ಟ್ರ, ಕೇರಳದಿಂದ ಬರುತ್ತಿರುವವರಿಗೆ ಸರಿಯಾಗಿ ಕೋವಿಡ್ ಟೆಸ್ಟ್ ಮಾಡುತ್ತಿಲ್ಲ. ಸರ್ಕಾರ ದುಡ್ಡು ಹೊಡೆಯೋದ್ರಲ್ಲಿ ಕಾಲಹರಣ ಮಾಡುತ್ತಿದೆ ಎಂದು ದೂರಿದರು.

    ನಳೀನ್ ಕುಮಾರ್ ಕಟೀಲ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಳೀನ್ ಕುಮಾರ್ ಕಟೀಲ್ ಒಬ್ಬ ವಿಧೂಷಕ. ಜೋಕರ್ ಇದ್ದ ಹಾಗೆ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.

    ಮಂಗಳಾ ಅಂಗಡಿ ಬಗ್ಗೆ ಸಿದ್ದರಾಮಯ್ಯ ಮಾತನಾಡಿ, ನಾನು ಮಂಗಳಾ ಅಂಗಡಿಯವರಿಗೆ ಅವಮಾನ ಮಾಡಿಲ್ಲ. ಸುರೇಶ್ ಅಂಗಡಿಯೇ ರಾಜ್ಯ ಸರ್ಕಾರಕ್ಕೆ ಬರಬೇಕಾದ ಹಣವನ್ನು ಕೇಳಿಲ್ಲ. ಇನ್ನೂ ಈ ಅಮ್ಮ ಎಲ್ಲಿ ಕೇಳ್ತಾರೆ ಎಂದು ಹೇಳಿದ್ದೆ ಅಷ್ಟೇ. ಸುರೇಶ್ ಅಂಗಡಿಗೆ 4 ಬಾರಿ ವೋಟ್ ಹಾಕಿದ್ದೀರಿ. ಈ ಬಾರಿ ಬದಲಾವಣೆ ಇರಲಿ ಎಂದು ಸತೀಶ್ ಜಾರಕಿಹೊಳಿಗೆ ವೋಟ್ ಹಾಕಿ ಎಂದಿದ್ದೆ. ಈ ಬಗ್ಗೆ ಜಗದೀಶ್ ಶೆಟ್ಟರ್ ಏನೇ ಹೇಳಬಹುದು. ಅದಕ್ಕೆಲ್ಲಾ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ನಾನು ಸ್ಟೇಟ್ ಮೆಂಟ್ ನೀಡುವುದು ಜನರಿಗೆ, ಶೆಟ್ಟರ್‍ ಗಳಲ್ಲ ಎಂದರು.

  • ಸುರೇಶ್‌ ಅಂಗಡಿ ಪತ್ನಿಗೆ ಟಿಕೆಟ್‌- ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ನಿವೃತ್ತ ಸಿಎಸ್‌ ರತ್ನಪ್ರಭಾ

    ಸುರೇಶ್‌ ಅಂಗಡಿ ಪತ್ನಿಗೆ ಟಿಕೆಟ್‌- ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ನಿವೃತ್ತ ಸಿಎಸ್‌ ರತ್ನಪ್ರಭಾ

    ನವದೆಹಲಿ: ಬೆಳಗಾವಿ ಉಪಚುನಾವಣೆಯಲ್ಲಿ ದಿ. ಸುರೇಶ್‌ ಅಂಗಡಿ ಅವರ ಪತ್ನಿ ಮಂಗಳಾ ಸುರೇಶ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

    ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ಬಿಜೆಪಿ ಇಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಂಗಳಾ ಸುರೇಶ್‌ ಅಂಗಡಿ, ಬಸವಕಲ್ಯಾಣಕ್ಕೆ ಶರಣು ಸಲಗಾರ್‌, ಮಸ್ಕಿಗೆ ಪ್ರತಾಪ್‌ ಗೌಡ ಪಾಟೀಲ್‌ ಅವರಿಗೆ ಟಿಕೆಟ್‌ ನೀಡಿದೆ.

    ದಿವಂಗತ ಸುರೇಶ್ ಅಂಗಡಿ ಪುತ್ರಿ, ಜಗದೀಶ್ ಶೆಟ್ಟರ್ ಸೊಸೆ ಶ್ರದ್ಧಾ ಅವರಿಗೆ ಟಿಕೆಟ್ ಸಿಗಬಹುದು ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಬಿಜೆಪಿ ಹೈಕಮಾಂಡ್‌ ಅಚ್ಚರಿ ನಡೆ ಅನುಸರಿಸಿದ್ದು ಸುರೇಶ್‌ ಅಂಗಡಿ ಪತ್ನಿಗೆ ಟಿಕೆಟ್‌ ನೀಡಿದೆ.

    ಬಸವಕಲ್ಯಾಣಕ್ಕೆ ಶರಣು ಸಲಗಾರ್ ಹೆಸರನ್ನು ಯಡಿಯೂರಪ್ಪ ಸೂಚಿಸಿದ್ದರು. ಕಳೆದ ಬಾರಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖೂಬಾಗೆ ಟಿಕೆಟ್ ನಿರಾಕರಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಏ.17 ರಂದು ಉಪಚುನಾವಣೆ ನಡೆಯಲಿದೆ.

    ಕರ್ನಾಟಕದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನ ಪ್ರಭಾಗೆ ಬಿಜೆಪಿ ಟಿಕೆಟ್‌ ನೀಡಿದ್ದು, ತಿರುಪತಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

  • ಹೈ ಕಮಾಂಡ್ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ: ಶ್ರದ್ಧಾ ಶೆಟ್ಟರ್

    ಹೈ ಕಮಾಂಡ್ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ: ಶ್ರದ್ಧಾ ಶೆಟ್ಟರ್

    ಬೆಳಗಾವಿ: ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಿದ್ದೇವೆ, ಹೈಕಮಾಂಡ್ ಟಿಕೆಟ್ ನೀಡಿದರೆ ನಮ್ಮ ಕುಟುಂಬದವರು ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ದಿ.ಸುರೇಶ್ ಅಂಗಡಿ ಪುತ್ರಿ, ಜಗದೀಶ್ ಶೆಟ್ಟರ್ ಸೊಸೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿರುವ ಶ್ರದ್ಧಾ ಶೆಟ್ಟರ್ ಹೇಳಿದ್ದಾರೆ.

    ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಲೋಕಭಾ ಉಪಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧರಿದ್ದೇವೆ. ಕೋರ್ ಕಮಿಟಿ ಸಭೆಯಲ್ಲೂ ಕುಟುಂಬಕ್ಕೆ ಟಿಕೆಟ್ ನೀಡುವ ಬಗ್ಗೆ ಚರ್ಚೆಯಾಗಿದೆ. ಬೇರೆ ಅಭ್ಯರ್ಥಿಗಳ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಹೈಕಮಾಂಡ್ ನಿರ್ಧಾರವೇ ಅಂತಿಮ. ಚುನಾವಣೆಗೆ ಸ್ಪರ್ಧಿಸಬೇಕೆಂದು ಅಭಿಮಾನಿಗಳ ಒತ್ತಾಯ ಇದ್ದು, ಹೈಕಮಾಂಡ್‍ಗೂ ಇದನ್ನು ತಿಳಿಸಿದ್ದೇವೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ತಿಳಿಸಿದರು.

    ಇನ್ನೆರಡು ದಿನಗಳಲ್ಲಿ ಈ ಬಗ್ಗೆ ತಿಳಿಯಲಿದೆ. ನಾನು ದೆಹಲಿಗೆ ಹೋಗಿರಲಿಲ್ಲ, ಬೆಂಗಳೂರಿನಲ್ಲಿದ್ದೆ. ಹೈಕಮಾಂಡ್ ಅಥವಾ ಪಕ್ಷದ ವರಿಷ್ಠರು ಇನ್ನೂ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ, ಟಿಕೆಟ್ ಬಗ್ಗೆ ಏನೂ ಚರ್ಚೆ ಆಗಿಲ್ಲ. ಕುಟುಂಬಕ್ಕೆ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇವೆ ಎಂದು ತಿಳಿಸಿದ್ದೇವೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಿದ್ದೇವೆ. ನಮ್ಮ ತಂದೆ ಜನರ ಜೊತೆ ಒಳ್ಳೆಯ ಸಂಪರ್ಕ ಹೊಂದಿದ್ದರು. ಅಭಿಮಾನಿಗಳು ಕರೆದ ಸಮಾರಂಭಗಳಿಗೆ ಹೋಗುತ್ತಿದ್ದೇನೆ. ಮುಂದೆಯೂ ಅಭಿಮಾನಿಗಳ ಜೊತೆ ಸಂಪರ್ಕ ಬೆಳೆಸಿಕೊಂಡು ಹೋಗುತ್ತೇವೆ. ತಂದೆಯವರ ಜೊತೆಗಿದ್ದ ಎಲ್ಲರ ಜೊತೆಗೂ ನಾವು ಇರುತ್ತೇವೆ ಎಂದರು.

  • ಸುರೇಶ್ ಅಂಗಡಿ ತಾಯಿ ವಿಧಿವಶ

    ಸುರೇಶ್ ಅಂಗಡಿ ತಾಯಿ ವಿಧಿವಶ

    ಬೆಳಗಾವಿ: ದಿವಂಗತ ಸುರೇಶ್ ಅಂಗಡಿ ಅವರ ತಾಯಿ ಸೋಮವ್ವ ಅಂಗಡಿ (90) ಇಂದು ವಿಧಿವಶರಾಗಿದ್ದಾರೆ.

    ಸೋಮವ್ವ ಅಂಗಡಿಯವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪುತ್ರನ ನಿಧನದಿಂದ ಆಘಾತಕ್ಕೊಳಗಾಗಿದ್ದ ಸೋಮವ್ವ ಅಂಗಡಿಯವರ ಆರೋಗ್ಯಕ್ಕೆ ಕ್ಷೀಣಿಸುತ್ತಾ ಬಂದಿತ್ತು. ಮಗನ ನಿಧನದ ವಿಷಯ ತಿಳಿದಾಗ ಪುತ್ರ ಮನೆಗೆ ಬರ್ತಾನೆ ಬಾಗಿಲು ತೆರೆಯಿರಿ ಎಂದು ಕಣ್ಣೀರು ಹಾಕಿದ್ದರು. ಪುತ್ರ ನಿಧನ ಹೊಂದಿದ ಆರೇ ತಿಂಗಳಲ್ಲಿ ಸೋಮವ್ವ ಅವರು ವಿಧಿವಶರಾಗಿದ್ದಾರೆ.

    ಇಂದು ಸಂಜೆ ಕೆಕೆ ಕೊಪ್ಪ ಗ್ರಾಮದಲ್ಲಿ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಸಂಬಂಧಿ ಸಚಿವ ಜಗದೀಶ್ ಶೆಟ್ಟರ್ ಆಂತ್ಯಕ್ರಿಯೆ ಭಾಗಿಯಾಗಲಿದ್ದಾರೆ.

  • ಸುರೇಶ್ ಅಂಗಡಿಯವರ ಕನಸಿನ ಯೋಜನೆಗೆ ಬಜೆಟ್‍ನಲ್ಲಿ ಅನುದಾನ

    ಸುರೇಶ್ ಅಂಗಡಿಯವರ ಕನಸಿನ ಯೋಜನೆಗೆ ಬಜೆಟ್‍ನಲ್ಲಿ ಅನುದಾನ

    ಬೆಂಗಳೂರು: ತಮ್ಮ ಬಜೆಟ್‍ನಲ್ಲಿ ಸಿಎಂ ಯಡಿಯೂರಪ್ಪನವರು ನಿಧನರಾಗಿರುವ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿಯವರ ಕನಸಿನ ಯೋಜನೆಗೆ ಅನುದಾನ ಪ್ರಕಟಿಸಿದ್ದಾರೆ.

    ಸುರೇಶ್ ಅಂಗಡಿಯವರ ಒತ್ತಾಸೆಯ ಫಲವಾಗಿ ಧಾರವಾಡ-ಕಿತ್ತೂರು-ಬೆಳಗಾವಿ 73 ಕಿ.ಮೀ. ಉದ್ದ ಹೊಸ ರೈಲು ಮಾರ್ಗವನ್ನು 927 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾರಂಭಿಸುವುದಾಗಿ ಸಿಎಂ ಹೇಳಿದ್ದಾರೆ.

    2020-21 ನೇ ಸಾಲಿನ ಕೇಂದ್ರ ಆಯವ್ಯಯದಲ್ಲಿ ಈ ಯೋಜನೆಯ ಒಟ್ಟು ವೆಚ್ಚದ ಶೇ.50 ರಷ್ಟನ್ನು ಮತ್ತು ಭುಸ್ವಾಧಿನ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಈ ಹೊಸ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರವು 463 ಕೋಟಿ ರೂ.ಗಳನ್ನು ಅನುದಾನವಾಗಿ ನೀಡಲಿದೆ.