Tag: suratkal

  • ಜಲೀಲ್ ಯಾವುದೇ ಗಲಾಟೆಗೆ ಹೋಗದ ಬಡಪಾಯಿ : ಸಹೋದರ ಮಹಮ್ಮದ್

    ಜಲೀಲ್ ಯಾವುದೇ ಗಲಾಟೆಗೆ ಹೋಗದ ಬಡಪಾಯಿ : ಸಹೋದರ ಮಹಮ್ಮದ್

    ಮಂಗಳೂರು: ಜಲೀಲ್ ಯಾವುದೇ ಗಲಾಟೆಗೆ ಹೋಗದ ಬಡಪಾಯಿಯಾಗಿದ್ದು, ರಾಜಕಾರಣಕ್ಕಾಗಿ ಆತನನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಜಲೀಲ್ ಸಹೋದರ ಮಹಮ್ಮದ್ ಆರೋಪಿಸಿದರು.

    ಆಸ್ಪತ್ರೆ ಬಳಿ ಮಾತನಾಡಿದ ಅವರು, ನಾವು ಮನೆಯಲ್ಲಿ ಇದ್ದ ವೇಳೆ ಜಲೀಲ್ ಕೊಲೆಯಾಗಿದೆ. ಆದರೆ ಅವನು ಯಾವುದೇ ಗಲಾಟೆಗೆ ಹೋಗದ ಬಡಪಾಯಿಯಾಗಿದ್ದು, ಬೆಳಿಗ್ಗೆ ಅಂಗಡಿಗೆ ಬಂದು ವ್ಯವಹಾರ ಮಾಡಿ ರಾತ್ರಿ ಮನೆಗೆ ಹೋಗುತ್ತಿದ್ದ. ಆತ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರಿಗೂ ಬೇಕಾದವನಾಗಿದ್ದ. ಯಾವುದೇ ಚಟುವಟಿಕೆಗೆ ಹೋಗದ ಆತ ಶಾಂತಿಪ್ರಿಯನಾಗಿದ್ದ. ಯಾರ ಜೊತೆಗೂ ಜೋರಾಗಿಯೂ ಮಾತನಾಡದಂತ ಅವನನ್ನೇ ಬಿಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಇಬ್ಬರು ಬೈಕ್‍ನಲ್ಲಿ ಬಂದು ಜಲೀಲ್‌ನನ್ನು ಕೊಲೆ ಮಾಡಿ ಹೋಗಿದ್ದಾರೆ. ಅವನು ಪತ್ನಿ ಮತ್ತು ಮಗನ ಜೊತೆ ಮನೆಯಲ್ಲಿ ವಾಸವಾಗಿದ್ದ. ಕಾಟಿಪಳ್ಳ ನಾಲ್ಕನೇ ಬ್ಲಾಕ್‍ನಲ್ಲಿ ಅವನ ಮನೆ ಇತ್ತು. ಆದರೆ ಅವನು ಯಾವುದೇ ಸಂಘಟನೆ, ರಾಜಕೀಯದಲ್ಲಿ ಇರಲಿಲ್ಲ. ಸುಮಾರು 10-15 ವರ್ಷದಿಂದ ಅವನು ಅಲ್ಲಿ ಅಂಗಡಿ ನಡೆಸ್ತಾ ಇದ್ದ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸುರತ್ಕಲ್ ಬಳಿ ಚಾಕು ಇರಿದು ವ್ಯಕ್ತಿ ಕೊಲೆ – 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

    ಅವನಿಗೆ ಶತ್ರುಗಳು ಅಂತ ಯಾರೂ ಇರಲೇ ಇಲ್ಲ. ಇದು ರಾಜಕಾರಣಕ್ಕಾಗಿ ಅಮಾಯಕನ ಕೊಲೆಯಾಗಿದೆ. ನಮಗೆ ಸರ್ಕಾರ ನ್ಯಾಯ ಕೊಡಬೇಕು, ನೈಜ ಆರೋಪಿ ಬಂಧಿಸಬೇಕು. ಯಾರ‍್ಯಾರನ್ನೋ ಹಿಡಿಯೋ ಅಗತ್ಯವಿಲ್ಲ, ನೈಜ ಆರೋಪಿಗಳನ್ನು ಹಿಡಿಯಿರಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕೈ ನಾಯಕ ಅಲ್ತಾಫ್‌ ಖಾನ್ ಮನೆ ಬಳಿ ಹೊಂಚು ಹಾಕಿದ್ದ ಮೂವರು ವಶಕ್ಕೆ

    ಘಟನೆಯೇನು?: ಇಬ್ಬರು ದುಷ್ಕರ್ಮಿಗಳು ಜಲೀಲ್‌(40) ಅವರ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಶನಿವಾರ ಸಂಜೆ ಜಲೀಲ್‌(Jaleel) ಅಂಗಡಿಯಲ್ಲಿ ಕುಳಿತಿದ್ದಾಗ ಅಂಗಡಿಯ ಪಕ್ಕದ ರಸ್ತೆಯಲ್ಲಿ ದ್ವಿಚಕ್ರವಾಹನವನ್ನು ಇಟ್ಟು ಏಕಾಏಕಿ ಚೂರಿ ಇರಿದು ಪರಾರಿಯಾಗಿದ್ದರು.

    ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಲೀಲ್‌ ಅವರ ಎದೆಯ ಭಾಗ ಮತ್ತು ಬೆನ್ನಿಗೆ ಹರಿತವಾದ ಚೂರಿಯಿಂದ ಇರಿದಿದ್ದು, ಅವರ ಬೆನ್ನಿನಲ್ಲಿದ್ದ ಚೂರಿಯನ್ನು ತೆಗೆದ ಫಾರೂಕ್ ಅವರು ತಕ್ಷಣ ಕಾರಿನಲ್ಲಿ ಮುಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಜಲೀಲ್ ಮೃತಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಣ ಕೇಳಿದ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ

    ಹಣ ಕೇಳಿದ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ

    ಮಂಗಳೂರು: ನಗರದ ಹೊರವಲಯದ ಸುರತ್ಕಲ್ ನ ಟೋಲ್ ಸಿಬ್ಬಂದಿ ಮೇಲೆ ಏಳು ಮಂದಿ ಕಾರು ಸವಾರರು ಹಲ್ಲೆ ನಡೆಸಿದ್ದಾರೆ.

    ಭಟ್ಕಳ ನೋಂದಣಿ ನಂಬರ್ ಕಾರು ಸುರತ್ಕಲ್ ಟೋಲ್ ನಲ್ಲಿ ಹಣ ಪಾವತಿಸಲು ನಿರಾಕರಿಸಿದ್ದರು. ಈ ವೇಳೆ ಟೋಲ್ ಸಿಬ್ಬಂದಿ ಹಣ ಪಾವತಿಸಲು ತಿಳಿಸಿದ್ದಾರೆ. ಹಣ ಪಾವತಿ ಮಾಡೋದಿಲ್ಲ ಎಂದು ತಗಾದೆ ತೆಗೆದು ಟೋಲ್ ಸಿಬ್ಬಂದಿಗೆ ಏಳು ಮಂದಿ ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಲ್ಲೆಯಿಂದಾಗಿ ಟೋಲ್ ಸಿಬ್ಬಂದಿಯ ಕೈ ಮುರಿತಕ್ಕೊಳಗಾಗಿದ್ದು, ಬಳಿಕ ಹಲ್ಲೆ ನಡೆಸಿದ ಆರೋಪಿಗಳು ಕಾರಿನ ಸಮೇತ ಪರಾರಿಯಾಗಿದ್ದಾರೆ.

    ಹಲ್ಲೆಯ ದೃಶ್ಯ ಟೋಲ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ಬಗ್ಗೆ ಎನ್‍ಹೆಚ್‍ಎಐ ಟೋಲ್ ಸಿಬ್ಬಂದಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

  • ಮಂಗಳೂರಿನ ಸುರತ್ಕಲ್ ಬಳಿ ಹಿಂಜಾವೇ ಮುಖಂಡನ ಹತ್ಯೆಗೆ ಯತ್ನ

    ಮಂಗಳೂರಿನ ಸುರತ್ಕಲ್ ಬಳಿ ಹಿಂಜಾವೇ ಮುಖಂಡನ ಹತ್ಯೆಗೆ ಯತ್ನ

    ಮಂಗಳೂರು: ದೀಪಕ್ ರಾವ್ ಮತ್ತು ಬಶೀರ್ ಹತ್ಯೆಯ ಬಳಿಕ ಸೋಮವಾರ ರಾತ್ರಿ ಸುಮಾರು 8 ಗಂಟೆಗೆ ಹಿಂದೂ ಜಾಗರಣ ವೇದಿಕೆಯ ಮುಖಂಡರೊಬ್ಬರ ಕೊಲೆಯ ಯತ್ನಿಸಲಾಗಿದೆ.

    ಹಿಂಜಾವೇ ಮುಖಂಡರಾಗಿರುವ ಭರತ್ ಅಗರಮೇಲು ಅವರ ಕೊಲೆಯ ಯತ್ನ ಮಾಡಲಾಗಿದೆ. ರಾತ್ರಿ ತಮ್ಮ ಮನೆಯತ್ತ ಭರತ್ ತೆರಳುತ್ತಿದ್ದರು, ಈ ವೇಳೆ ಮಾರ್ಗ ಮಧ್ಯೆ ದುಷ್ಕರ್ಮಿಗಳು ಬೈಕ್ ಹಿಡಿದುಕೊಂಡು ಬಂದಿದ್ದಾರೆ. ಬೈಕಿನ ಹೈಡ್ ಲೈಟ್ ಬೆಳಕಿನಿಂದ ದುಷ್ಕರ್ಮಿಗಳನ್ನು ಗಮನಿಸಿದ ಭರತ್ ಕೂಡಲೇ ಬೈಕ್ ಬಿಟ್ಟು ತಪ್ಪಿಸಿಕೊಂಡಿದ್ದಾರೆ.

    ನಾಲ್ವರು ದುಷ್ಕರ್ಮಿಗಳು ಎದುರಿಗೆ ಬರುತ್ತಿದ್ದಂತೆ ನಾನು ಬೈಕ್ ಬಿಟ್ಟು ತಪ್ಪಿಸಿಕೊಂಡೆ. ದುಷ್ಕರ್ಮಿಗಳ ಕೈಯಲ್ಲಿ ತಲ್ವಾರ್‍ಗಳಿದ್ದರಿಂದ ನಾನು ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಅಂತಾ ಭರತ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ದೂರು ದಾಖಲಿಸಿಕೊಂಡ ಪೊಲೀಸರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ದೀಪಕ್ ಹತ್ಯೆ ಖಂಡಿಸಿ ಇಂದು ಸುರತ್ಕಲ್ ಬಂದ್- ಪೊಲೀಸ್ ನಿರ್ಬಂಧದ ನಡುವೆಯೂ ಶವಯಾತ್ರೆಗೆ ಸಿದ್ಧತೆ

    ದೀಪಕ್ ಹತ್ಯೆ ಖಂಡಿಸಿ ಇಂದು ಸುರತ್ಕಲ್ ಬಂದ್- ಪೊಲೀಸ್ ನಿರ್ಬಂಧದ ನಡುವೆಯೂ ಶವಯಾತ್ರೆಗೆ ಸಿದ್ಧತೆ

    ಮಂಗಳೂರು: ಬಜರಂಗದಳ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆಗಳು ಇಂದು ಸುರತ್ಕಲ್ ಮತ್ತು ಕಾಟಿಪಳ್ಳ ಬಂದ್‍ಗೆ ಕರೆ ಕೊಟ್ಟಿವೆ.

    ಸುರತ್ಕಲ್ ಕೋಮು ಸೂಕ್ಷ್ಮತೆಯ ಪ್ರದೇಶವಾಗಿದ್ದು, ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಜೊತೆಗೆ ಬುಧವಾರ ರಾತ್ರಿಯಿಂದ ಇಂದು ರಾತ್ರಿ 10 ಗಂಟೆಯವರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಆಕ್ಟ್ 35ರ ಪ್ರಕಾರ ನಿರ್ಬಂಧಕಾಜ್ಞೆ ಜಾರಿ ಮಾಡಲಾಗಿದೆ. ನಿರ್ಬಂಧಕಾಜ್ಞೆ ಯ ಪ್ರಕಾರ ಸಭೆ, ಮೆರವಣಿಗೆಗೆ ಅನುಮತಿ ಇಲ್ಲ. ಮಂಗಳೂರು ನಗರ ಪೊಲೀಸ್ ಕಮೀಷನರ್ ಟಿಆರ್ ಸುರೇಶ್ ನಿರ್ಬಂಧಕಾಜ್ಞೆ ಜಾರಿಗೊಳಿಸಿ ಆದೇಶ ನೀಡಿದ್ದಾರೆ.

    ಪೊಲೀಸ್ ನಿರ್ಬಂಧದ ಹೊರತಾಗಿಯೂ ದೀಪಕ್ ಶವಯಾತ್ರೆ ನಡೆಸಲು ಹಿಂದೂ ಸಂಘಟನೆಗಳಿಂದ ಸಿದ್ಧತೆ ನಡೆದಿದೆ. ಬೆಳಗ್ಗೆ 10 ಗಂಟೆ ವೇಳೆಗೆ ದೀಪಕ್ ರಾವ್ ಶವಯಾತ್ರೆ ಆರಂಭವಾಗಲಿದ್ದು, ಎಜೆ ಆಸ್ಪತ್ರೆಯ ಶವಗಾರದಿಂದ ಕಾಟಿಪಳ್ಳದಲ್ಲಿರುವ ದೀಪಕ್ ಮನೆ ತನಕ ಯಾತ್ರೆ ಸಾಗಲಿದೆ. ಶವಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿರುವ ನಿರೀಕ್ಷೆ ಇದೆ.  ಮಧ್ಯಾಹ್ನದ ವೇಳೆಗೆ ಸುರತ್ಕಲ್‍ನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

    ಪ್ರಕರಣ ಸಂಬಂಧ ನೌಶಾದ್, ರಿಜ್ವಾನ್, ಪಿಂಕಿ ನವಾಜ್ ಹಾಗೂ ನಿರ್ಷಾನ್ ಎಂಬ ನಾಲ್ವರು ಆರೋಪಿಗಳನ್ನು ಮುಲ್ಕಿ ಮತ್ತು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರ ವಶಕ್ಕೆ ನೀಡುವ ವೇಳೆ ಪರಾರಿಯಾಗಲು ಯತ್ನಿಸಿದ್ದು, ರಿಜ್ವಾನ್ ಮತ್ತು ನೌಶಾದ್ ಕಾಲಿಗೆ ಗುಂಡು ಹಾರಿಸಿರುವ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಏನಿದು ಪ್ರಕರಣ?: ಡೊಕೊಮೊ ಮೊಬೈಲ್ ಕಂಪನಿಯಲ್ಲಿ ಕರೆನ್ಸಿ ಡಿಸ್ಟ್ರಿಬ್ಯೂಟರ್ ಆಗಿದ್ದ ಕೃಷ್ಣಾಪುರದ ಗಣೇಶ್ ಪುರ ನಿವಾಸಿ ದೀಪಕ್ ಅವರನ್ನು ಕಾಟಿಪಳ್ಳದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಕಾರಿನಲ್ಲಿ ಬಂದ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಕಲೆಕ್ಷನ್ ಹಣವನ್ನು ಅಂಗಡಿಗೆ ಕೊಟ್ಟು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಸ್ವಿಫ್ಟ್ ಕಾರಿನಲ್ಲಿ ಬಂದವರು ಬೈಕನ್ನು ಅಡ್ಡಗಟ್ಟಿ ಮೂಡಾಯಿಕೋಡಿ ಎಂಬಲ್ಲಿ ಅಡ್ಡಗಟ್ಟಿ ಈ ಕೃತ್ಯ ಎಸಗಿದ್ದರು.

    ಕೊಲೆ ಮಾಡಿ ಸ್ವಿಫ್ಟ್ ಕಾರಿನಲ್ಲಿ ಮೂಡುಬಿದಿರೆ ಮೂಲಕ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಮೂಲ್ಕಿ ಸಬ್ ಇನ್ಸ್ ಪೆಕ್ಟರ್ ಶೀತಲ್ ಕುಮಾರ್ ಸಿನಿಮೀಯ ರೀತಿ ಬೆನ್ನಟ್ಟಿ ಮಿಜಾರು ಎಂಬಲ್ಲಿ ಅಡ್ಡಗಟ್ಟಿ ಬಂಧಿಸಿದ್ದಾರೆ.  ಪೂರ್ವ ದ್ವೇಷದಿಂದ ಕೃತ್ಯ ನಡೆದಿರುವ ಶಂಕೆಯಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಹೇಳಿಕೆ ನೀಡಿದ್ದಾರೆ. ಕೊಲೆ ನಡೆದ ಬಳಿಕ ಸುರತ್ಕಲ್‍ನಲ್ಲಿ ಕಿಡಿಗೇಡಿಗಳು ಖಾಸಗಿ ಬಸ್ ಮೇಲೆ ಕಲ್ಲು ಎಸೆದಿದ್ದು, ಬಸ್ಸಿನ ಮುಂದಿನ ಗಾಜು ಪುಡಿಪುಡಿಯಾಗಿದೆ.