Tag: surathkal

  • ಕೊಲೆ ಮಾಡಿ, ಶವವನ್ನು ಗೋಣಿ ಚೀಲಕ್ಕೆ ತುಂಬಿ ಕಾಲುವೆಗೆ ಹಾಕಿದ್ರು!

    ಕೊಲೆ ಮಾಡಿ, ಶವವನ್ನು ಗೋಣಿ ಚೀಲಕ್ಕೆ ತುಂಬಿ ಕಾಲುವೆಗೆ ಹಾಕಿದ್ರು!

    ಮಂಗಳೂರು: ಸುರತ್ಕಲ್‍ದ ಚೊಕ್ಕಬೆಟ್ಟು ಸೇತುವೆ ಕೆಳಗೆ ಗೋಣಿ ಚೀಲದಲ್ಲಿ ಶವವೊಂದು ಪತ್ತೆಯಾಗಿದ್ದು, ಕಾಲುವೆ ಮೂಲಕ ಶವ ಹರಿದು ಬಂದಿದೆ ಎನ್ನಲಾಗಿದೆ.

    ಕೊಪ್ಪಳ ಜಿಲ್ಲೆಯ ಕಬ್ಬರಗಿ ನಿವಾಸಿ ಮರಿಯಪ್ಪ (50) ಶವವಾಗಿ ಪತ್ತೆಯಾಗಿದ್ದಾರೆ. ಮರಿಯಪ್ಪನನ್ನು ಬರ್ಬರವಾಗಿ ಹಲ್ಲೆ ಮಾಡಿ, ಕೊಂದು ಗೋಣಿಚೀಲದಲ್ಲಿ ಹಾಕಿ ಕಾಲುವೆಗೆ ಎಸೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

    ಘಟನಾ ಸ್ಥಳಕ್ಕೆ ಸುರತ್ಕಲ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮಂಗಳೂರಿನ ಶವಾಗಾರಕ್ಕೆ ಸಾಗಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

  • ಕಾರ್ಪೋರೇಟರ್ ಮೇಲೆ ದೀಪಕ್ ಹತ್ಯೆ ಆರೋಪ- ದೈವದ ಮೊರೆ ಹೋದ ತಿಲಕ್ ರಾಜ್, ಕೃಷ್ಣಾಪುರ ಗ್ರಾಮಸ್ಥರು

    ಕಾರ್ಪೋರೇಟರ್ ಮೇಲೆ ದೀಪಕ್ ಹತ್ಯೆ ಆರೋಪ- ದೈವದ ಮೊರೆ ಹೋದ ತಿಲಕ್ ರಾಜ್, ಕೃಷ್ಣಾಪುರ ಗ್ರಾಮಸ್ಥರು

    ಮಂಗಳೂರು: ಕಾಟಿಪಳ್ಳದ ದೀಪಕ್ ಹತ್ಯೆ ವಿಚಾರದಲ್ಲಿ ಕಾರ್ಪೋರೇಟರ್ ತಿಲಕ್ ರಾಜ್ ಬಗ್ಗೆ ಅಪಪ್ರಚಾರಗೈದವರಿಗೆ ತಕ್ಕ ಶಾಸ್ತಿಯಾಗಬೇಕೆಂದು ಮಂಗಳೂರಿನ ಕಾಟಿಪಳ್ಳ ಬಳಿಯ ಕೃಷ್ಣಾಪುರದ ಗ್ರಾಮಸ್ಥರು ತುಳುನಾಡಿನ ಕಾರಣಿಕ ದೈವದ ಮೊರೆ ಹೋಗಿದ್ದಾರೆ.

    ಕೃಷ್ಣಾಪುರದ ಕೋಡ್ದಬ್ಬು ದೈವಸ್ಥಾನದಲ್ಲಿ ಗ್ರಾಮಸ್ಥರು ಸೇರಿ ಈ ಪ್ರಾರ್ಥನೆ ಮಾಡಿದ್ರು. ಕಾರ್ಪೊರೇಟರ್ ತಿಲಕ್ ರಾಜ್, ಊರಿನ ಹಿರಿಯರು, ಅರ್ಚಕರು ಜೊತೆಯಾಗಿ ಭಕ್ತಿಪೂರ್ವಕ ಪ್ರಾರ್ಥನೆ ಸಲ್ಲಿಸಿ ಅಪಪ್ರಚಾರ ಮಾಡಿದವರಿಗೆ ಬುದ್ಧಿ ಕಲಿಸುವಂತೆ ಕೇಳಿಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸ್ಥಳೀಯ ಶಾಸಕ ಮೊಯ್ದೀನ್ ಬಾವಾ ವಿರುದ್ಧ ದೈವದ ಮೊರೆ ಹೋದಂತಾಗಿದೆ.

    ಮಾಜಿ ಸಿಎಂ ಕುಮಾರಸ್ವಾಮಿ, ದೀಪಕ್ ಹತ್ಯೆಯಲ್ಲಿ ಬಿಜೆಪಿ ಕಾರ್ಪೋರೇಟರ್ ಕೈವಾಡ ಇತ್ತೆಂದು ಬಹಿರಂಗ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ಕುಮಾರಸ್ವಾಮಿ ಹೇಳಿಕೆ ನೀಡಲು ಶಾಸಕ ಮೊಯ್ದೀನ್ ಬಾವಾ ಪಿತೂರಿಯೇ ಕಾರಣ ಅನ್ನೋದು ಬಿಜೆಪಿಯವರ ಮಾತಾಗಿತ್ತು.

    https://www.youtube.com/watch?v=AI_z5wUiDhM

    https://www.youtube.com/watch?v=45DpmlmPyps

    https://www.youtube.com/watch?v=p4Mfa77sfvE

    https://www.youtube.com/watch?v=Wh-Y-8UCcgQ

    https://www.youtube.com/watch?v=0vDJV9oPKaI

    https://www.youtube.com/watch?v=cWNV3kO7l5E

    https://www.youtube.com/watch?v=QZrnrHcPWig

  • ದೀಪಕ್ ರಾವ್, ಬಶೀರ್ ಮನೆಗೆ ಸಿಎಂ ಭೇಟಿ- ದೀಪಕ್ ರಾವ್ ತಮ್ಮನಿಗೆ ಎಂಆರ್ ಪಿಎಲ್ ನಲ್ಲಿ ಕೆಲಸ ನೀಡುವಂತೆ ಸೂಚನೆ

    ದೀಪಕ್ ರಾವ್, ಬಶೀರ್ ಮನೆಗೆ ಸಿಎಂ ಭೇಟಿ- ದೀಪಕ್ ರಾವ್ ತಮ್ಮನಿಗೆ ಎಂಆರ್ ಪಿಎಲ್ ನಲ್ಲಿ ಕೆಲಸ ನೀಡುವಂತೆ ಸೂಚನೆ

    ಮಂಗಳೂರು: ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದ ದೀಪಕ್ ರಾವ್ ಮತ್ತು ಬಶೀರ್ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಲೂಕಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ತೆರಳಿದ್ದ ಸಿಎಂ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮೃತರ ಕುಟುಂಬಗಳಿಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ದೀಪಕ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಪ್ರಥಮ್

    ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಹಾಡಹಗಲೇ ದುಷ್ಕರ್ಮಿಗಳ ಮಾರಣಾಂತಿಕ ದಾಳಿಯಿಂದ ಮೃತಪಟ್ಟಿದ್ದ ದೀಪಕ್ ರಾವ್ ಮನೆಗೆ ಭೇಟಿಯಿತ್ತ ಸಿಎಂ ಸಿದ್ದರಾಮಯ್ಯ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶ ನೀಡುತ್ತೇವೆ ಎಂದು ಹೇಳಿದ್ರು. ದೀಪಕ್ ತಮ್ಮನಿಗೆ ಎಂಆರ್ ಪಿಎಲ್ ನಲ್ಲಿ ಕೆಲಸ ನೀಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಇದನ್ನೂ ಓದಿ: ಬಿಜೆಪಿ ನಾಯಕ ಕೃಷ್ಣ ಪಾಲೇಮಾರ್ ವಿರುದ್ಧ ಬಶೀರ್ ಕುಟುಂಬಸ್ಥರ ಆಕ್ರೋಶ

    ದೀಪಕ್ ರಾವ್ ಮನೆಯಿಂದ ತೆರಳಿದ ಸಿದ್ದರಾಮಯ್ಯ, ಮಂಗಳೂರಿನ ಆಕಾಶಭವನದಲ್ಲಿರುವ ಬಶೀರ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಈ ವೇಳೆ ಸಿಎಂ ಗೆ ಸಚಿವರಾದ ರಮನಾಥ್ ರೈ, ಯು.ಟಿ ಖಾದರ್, ಮೊಯ್ದೀನ್ ಬಾವ, ಮೇಯರ್ ಕವಿತಾ ಸನಿಲ್ ಸಾಥ್ ನೀಡಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ರು. ಇದನ್ನೂ ಒದಿ: ಕರಾವಳಿಯಲ್ಲಿ ಹಿಂದೂಗಳು ಹತ್ಯೆ ಮಾಡ್ತಿದ್ದಾರೆ- ಸಿಎಂ ಎದುರೇ ರೈ ವಿವಾದಾತ್ಮಕ ಹೇಳಿಕೆ

    ಜ.3ರಂದು ಮಧ್ಯಾಹ್ನ 1.30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯದ್ವಾತದ್ವಾ ದೀಪಕ್ ರಾವ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಕೂಡಲೇ ಮಾಹಿತಿ ಪಡೆದ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದರು. ಸದ್ಯ ಅವರನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಅಬ್ದುಲ್ ಬಶೀರ್ ಕೊಲೆ ಯತ್ನ- ನಾಲ್ವರು ಆರೋಪಿಗಳ ಬಂಧನ

    ಇತ್ತ ಅದೇ ದಿನ ರಾತ್ರಿ ನಗರದ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ಹಿಂದುರುಗುತ್ತಿದ್ದ ಸಂದರ್ಭದಲ್ಲಿ ಆಕಾಶಭವನ ನಿವಾಸಿ ಬಶೀರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹಲ್ಲೆಯಿಂದ ತಲೆ, ಎದೆ ಹಾಗೂ ಗಂಟಲು ಭಾಗಕ್ಕೆ ಗಂಭೀರ ಗಾಯವಾಗಿದ್ದ ಅವರನ್ನು ಕೂಡಲೇ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ ಬಶೀರ್ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದರು.

     

     

  • ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬಶೀರ್ ಸಾವು

    ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬಶೀರ್ ಸಾವು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ದುಷ್ಕರ್ಮಿಗಳ ಮಾರಣಾಂತಿಕ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಬಶೀರ್ ಮೃತಪಟ್ಟಿದ್ದಾರೆ.

    ಜನವರಿ 3 ರಂದು ಹಲ್ಲೆಗೊಳಗಾಗಿದ್ದ ಬಶೀರ್ ನಗರದ ಎಜೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 8.10 ಕ್ಕೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

    ಸುರತ್ಕಲ್ ನ ಕಾಟಿಪಳ್ಳ ಎಂಬಲ್ಲಿ ಜನವರಿ 3ರಂದು ಮಧ್ಯಾಹ್ನ ಸುಮಾರು 1.30ಕ್ಕೆ ದುಷ್ಕರ್ಮಿಗಳ ತಂಡವೊಂದು ದೀಪಕ್ ರಾವ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಪರಿಣಾಮ ಗಂಭೀರ ಗಾಯಗೊಂಡ ದೀಪಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅಂದೇ ರಾತ್ರಿ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಬಶೀರ್ ಮೇಲೆ 7 ಜನರ ತಂಡವೊಂದು ತಲ್ವಾರ್ ದಾಳಿ ನಡೆಸಿತ್ತು. ಪರಿಣಾಮ ಗಂಟಲು, ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಬಶೀರ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಬಶೀರ್ ಆರೋಗ್ಯ ವಿಚಾರಿಸಲು ಶನಿವಾರ ಸಚಿವ ಯುಟಿ ಖಾದರ್ ಭೇಟಿ ನೀಡಿ ಆಸ್ಪತ್ರೆಯ ವೆಚ್ಚ ಭರಿಸುವ ಭರವಸೆ ನಿಡಿದ್ದರು. ಅಲ್ಲದೇ ಬಶೀರ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಬಶೀರ್ ಕೊನೆಯುಸಿರೆಳೆದಿದ್ದಾರೆ.

    https://www.youtube.com/watch?v=prf8LAzRcus

    https://www.youtube.com/watch?v=nqZ3ZShX1q0

    https://www.youtube.com/watch?v=82lslIp7u0w

    https://www.youtube.com/watch?v=XIln_78eJlQ

  • ಮೃತ ದೀಪಕ್ ರಾವ್ ಕುಟುಂಬಕ್ಕೆ ಕಾಣದ ಕೈಗಳ ಸಹಾಯಹಸ್ತ

    ಮೃತ ದೀಪಕ್ ರಾವ್ ಕುಟುಂಬಕ್ಕೆ ಕಾಣದ ಕೈಗಳ ಸಹಾಯಹಸ್ತ

    ಮಂಗಳೂರು: ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಮಂಗಳೂರಿನ ಸುರಕ್ತಲ್ ಸಮೀಪದ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ದಾಳಿಗೆ ತುತ್ತಾದ ದೀಪಕ್ ರಾವ್ ಕುಟುಂಬಕ್ಕೆ ಜನ ದೇಣಿಗೆಯನ್ನು ನೀಡುತ್ತಿದ್ದಾರೆ.

    ರಾಜ್ಯ, ದೇಶ ವಿದೇಶದಿಂದ ನೆರವಿನ ಹಸ್ತ ಹರಿದುಬರುತ್ತಿದೆ. ವಿವಿಧ ಸಂಘಟನೆಗಳು, ವೈಯಕ್ತಿಕ ದೇಣಿಗೆ, ಆ್ಯಪ್ ಗಳ ಮೂಲಕ ಜನ ಧನ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಒಂದೇ ದಿನದಲ್ಲಿ ದೀಪಕ್ ರಾವ್ ಕುಟುಂಬಕ್ಕೆ ಹರಿದುಬಂತು 17,43,859 ರೂ.!

    ಕಳೆದ ಮೂರು ದಿನಗಳ ಹಿಂದೆ ದೀಪಕ್ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದು ಬಹಳ ಪರಿಣಾಮಕಾರಿಯಾಗಿದೆ. ಈವರೆಗೆ ದೀಪಕ್ ತಾಯಿ ಪ್ರೇಮ ಅಕೌಂಟ್ ಗೆ ಬಿದ್ದಿರುವುದು 32 ಲಕ್ಷ ರುಪಾಯಿಗಳು. ಶುಕ್ರವಾರ ರಾತ್ರಿಯಷ್ಟೊತ್ತಿಗೆ 17 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಶನಿವಾರ ರಾತ್ರಿಯವರೆಗೆ 32 ಲಕ್ಷ ರೂಪಾಯಿ ಸಂಗ್ರಹವಾಗಿದೆ.

    ಘಟನೆ ಆಗುವ ಮೊದಲು ಎರಡೂವರೆ ಸಾವಿರ ರೂಪಾಯಿ ಪ್ರೇಮ ಅವರ ಖಾತೆಯಲ್ಲಿದ್ದ ಮೊತ್ತ. ಇದರ ಜೊತೆಗೆ ರಾಜ್ಯ ಸರ್ಕಾರ 5 ಲಕ್ಷ,ಜಿಲ್ಲಾಧಿಕಾರಿ ಪರಿಹಾರ ನಿಧಿಯಿಂದ 5 ಲಕ್ಷರುಪಾಯಿ ಕುಟುಂಬಕ್ಕೆ ಹಸ್ತಾಂತರವಾಗಿದೆ. ಚೆಕ್ಕನ್ನು ಇನ್ನೂ ಅಕೌಂಟಿಗೆ ಹಾಕಿಲ್ಲ. ಇದನ್ನು ಹೊರತುಪಡಿಸಿ ಬಿಜೆಪಿ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಒಟ್ಟು 52 ಲಕ್ಷ ರೂಪಾಯಿಯ ಆರ್ಥಿಕ ಸ್ಥೈರ್ಯ , ಧೈರ್ಯ ನೊಂದ ಕುಟುಂಬಕ್ಕೆ ಸಿಕ್ಕಿದೆ. ದೀಪಕ್‍ನ ನೂಂದ ಕುಟುಂಬಕ್ಕೆ ಎಲ್ಲಾ ಧರ್ಮದವರು ಸಹಾಯ ಹಸ್ತ ಚಾಚಿದ್ದಾರೆ. ಇಂದಿನವರೆಗೂ ಸಂದಾಯದ ಹಣ ಒಂದೂ ಕೋಟಿರೂಪಾಯಿಗೆ ತಲುಪಬಹುದು. ಇದನ್ನೂ ಓದಿ: ಇವತ್ಯಾಕೆ ಬಂದೆ..ನೀನ್ ಹೋಗು ಮೊದ್ಲು, ಚೆಕ್ ಬೇಡ ಏನು ಬೇಡ – ಶಾಸಕ ಬಾವಾಗೆ ದೀಪಕ್ ಕುಟುಂಬಸ್ಥರ ಬೈಯ್ಗುಳ

    ಪ್ರೇಮ
    ಸಿಂಡಿಕೇಟ್ ಬ್ಯಾಂಕ್ ಕಾಟಿಪಳ್ಳ- ಕೈಕಂಬ ಶಾಖೆ
    ದ.ಕ ಜಿಲೆ
    ಖಾತೆ ಸಂಖ್ಯೆ
    01672030000810

    ಕ್ಕೆ ಸಹಾಯಹಸ್ತ ನೀಡಬಹುದು. ಮನೆಯ ಸಾಲ, ಮೂಗ- ಕಿವುಡ ಸಹೋದರನ ಆರೋಗ್ಯದ ವೆಚ್ಚ, ತಾಯಿಯ ಜೀವನೋಪಾಯಕ್ಕೆ, ಈ ಮೊತ್ತ ವ್ಯಯಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    https://www.youtube.com/watch?v=h2ySxt7VrtE

    https://www.youtube.com/watch?v=0iJpHrCbDbc

  • ಇವತ್ಯಾಕೆ ಬಂದೆ..ನೀನ್ ಹೋಗು ಮೊದ್ಲು, ಚೆಕ್ ಬೇಡ ಏನು ಬೇಡ – ಶಾಸಕ ಬಾವಾಗೆ ದೀಪಕ್ ಕುಟುಂಬಸ್ಥರ ಬೈಯ್ಗುಳ

    ಇವತ್ಯಾಕೆ ಬಂದೆ..ನೀನ್ ಹೋಗು ಮೊದ್ಲು, ಚೆಕ್ ಬೇಡ ಏನು ಬೇಡ – ಶಾಸಕ ಬಾವಾಗೆ ದೀಪಕ್ ಕುಟುಂಬಸ್ಥರ ಬೈಯ್ಗುಳ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಸರತ್ಕಲ್ ನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ದೀಪಕ್ ರಾವ್ ಮನೆಗೆ ಇಂದು ದ.ಕ ಜಿಲ್ಲೆಯ ಸುರತ್ಕಲ್ ಶಾಸಕ ಮೊಯ್ದೀನ್ ಬಾವಾ ಭೇಟಿ ನೀಟಿದ್ರು.

    ಬಾವಾ ಅವರು ದೀಪಕ್ ಮನೆಗೆ ಭೇಟಿ ನೀಡುತ್ತಿದ್ದಂತೆಯೇ ಮೃತನ ಕುಟುಂಬಸ್ಥರು, ನಿನ್ನೆ, ಮೊನ್ನೆ ಎಲ್ಲಿದ್ರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ದೀಪಕ್ ಅವರ ತಾಯಿ ಪ್ರೇಮಾ ರಾವ್, ಮಗನನ್ನು ಕೊಂದವರಿಗೆ ಹೀಗೆಯೇ ಶಿಕ್ಷೆಯಾಗಬೇಕು. ಅವರಿಗೆ ಯಾರೂ ರಕ್ಷಣೆ ಕೊಡಬಾರದು ಅಂತ ಒತ್ತಾಯಿಸಿ ಶಾಸಕರ ಎದುರು ಕಣ್ಣೀರು ಹಾಕಿದ್ರು. ಈ ವೇಳೆ ದೀಪಕ್ ತಾಯಿಗೆ ಸಾಂತ್ವಾನ ಹೇಳಿದ ಬಾವಾ, ಭಗವಂತನಲ್ಲಿ ನಿಮ್ಮ ಕುಟಂಬಕ್ಕೆ ಪ್ರಾರ್ಥನೆ ಮಾಡುತ್ತೇನೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ನಾನು ಮಸೀದಿಯಲ್ಲಿ ನಮಾಜ್ ಸಂದರ್ಭ ಬೇಡುತ್ತೇನೆ. ದೀಪಕ್ ಕೊಲೆಯ ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಅಂದ್ರು.

    ಚೆಕ್ ನಿರಾಕರಣೆ: ಸಾಂತ್ವಾನ ಹೇಳಿದ ಬಳಿಕ ಬಾವಾ ಅವರು ದೀಪಕ್ ತಾಯಿಗೆ ಒತ್ತಾಯಪೂರ್ವಕವಾಗಿ ಚೆಕ್ ನೀಡಲು ಮುಂದಾದ್ರು. ಈ ವೇಳೆ ಪ್ರೇಮಾ ಅವರು ಚೆಕ್ ಬೇಡವೇ ಬೇಡ ಎಂದು ದೂರ ತಳ್ಳಿದ್ರು.

    ಈ ಸಂದರ್ಭದಲ್ಲಿ ನೆರೆದಿದ್ದ ದೀಪಕ್ ಕುಟುಂಬಸ್ಥರು ಹಾಗೂ ಸ್ಥಳೀಯರು ಶಾಸಕ ಅವರಿಗೆ ಬೈಗುಳದ ಸುರಿಮಳೆಗೈದ್ರು. ಅಲ್ಲದೇ ನಂತ್ರ ಮನೆಯಿಂದ ಹೊರ ಕಳುಹಿಸಿದ್ರು. ಶಾಸಕರ ಜೊತೆ ದಕ್ಷಿಣ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕೂಡ ಆಗಮಿಸಿದ್ದರು.

    https://www.youtube.com/watch?v=TmFE1kqWa2w

  • ಜಾಸ್ತಿ ಪೊಗರು ಮಾಡ್ಬೇಡ.. ಬೀದಿ ಹೆಣ ಆಗ್ತಿಯಾ – ಹಿಂದೂ ಯುವಕನಿಗೆ ಫೇಸ್‍ಬುಕ್ ಥ್ರೆಟ್

    ಜಾಸ್ತಿ ಪೊಗರು ಮಾಡ್ಬೇಡ.. ಬೀದಿ ಹೆಣ ಆಗ್ತಿಯಾ – ಹಿಂದೂ ಯುವಕನಿಗೆ ಫೇಸ್‍ಬುಕ್ ಥ್ರೆಟ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಹತ್ಯೆ ನಡೆದ ಬೆನ್ನಲ್ಲೇ ಮತ್ತೊಂದು ಕೊಲೆಗೆ ಫೇಸ್ಬುಕ್ ಮೂಲಕ ಬಹಿರಂಗ ಬೆದರಿಕೆ ಹಾಕಲಾಗಿದೆ.

    `ಟ್ರೂ ಮೀಡಿಯಾ ನೆಟ್ವರ್ಕ್’ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಸುಬ್ಬು ಎಂಬ ಯವಕನಿಗೆ ಈ ಬೆದರಿಕೆ ಹಾಕಲಾಗಿದೆ. ತೊಡೆಯಲ್ಲಿ ಕಾಲು ಕಿಲೊ ಮಾಂಸ ಇಲ್ಲ. ಪೊಗರು ಜಾಸ್ತಿ ಮಾಡ್ಬೇಡ. ನೀನು ಎಲ್ಲಾದ್ರು ಬೀದಿ ಹೆಣವಾಗ್ತೀಯ ಅಷ್ಟೇ. ಮರ್ಯಾದಿಯಾಗಿ ಕುಟುಂಬ ಸಾಕಲು ಕಲಿ. ಮತ್ತೆ ಮತ್ತೆ ಜಿಹಾದಿ ಜಿಹಾದಿ ಅಂತ ಬೊಬ್ಬೆ ಹೊಡೆದರೆ ತಾಳ್ಮೆ ಕಳೆದುಕೊಂಡು ನಿನ್ನ ಬೀದಿ ಹೆಣ ಮಾಡಿ ಬಿಸಾಕ್ತಾರೆ ಅಷ್ಟೇ ಎಂದು ಮತ್ತೊಬ್ಬ ಹಿಂದು ಕಾರ್ಯಕರ್ತನ ಹತ್ಯೆ ಮಾಡುವುದಾಗಿ ಬಹಿರಂಗ ಎಚ್ಚರಿಕೆ ನೀಡಿದ್ದು ಜಿಲ್ಲೆಯ ಜನರಲ್ಲಿ ಭಯದ ವಾತಾವರಣವನ್ನು ಉಂಟುಮಾಡಿದೆ.

    ಸಾಮಾಜಿಕ ಜಾಲತಾಣಗಳ ಅತಿರೇಕದ ವರ್ತನೆ ಬಗ್ಗೆ ಪೊಲೀಸರು ಗಮನಿಸಬೇಕಾಗಿದೆ. ದೀಪಕ್ ರಾವ್ ವಿರುದ್ಧವೂ ಹತ್ಯೆಗೆ ಮೊದಲೇ ಬೆದರಿಕೆ ಹಾಕಿದ್ದ ಅಂಶ ಬಯಲಾಗಿದೆ. ಇದೀಗ ಆ ವಿಚಾರದಲ್ಲಿ ವಿರುದ್ಧ ಕೋಮಿನವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಕಾದಾಡುತ್ತಿದ್ದಾರೆ.

  • ದೀಪಕ್ ರಾವ್ ಹತ್ಯೆಗೆ ಫಾರಿನ್ ಫಂಡಿಂಗ್- ಟಾರ್ಗೆಟ್ ಗ್ರೂಪ್ ಮೂಲಕ ಸುಪಾರಿ

    ದೀಪಕ್ ರಾವ್ ಹತ್ಯೆಗೆ ಫಾರಿನ್ ಫಂಡಿಂಗ್- ಟಾರ್ಗೆಟ್ ಗ್ರೂಪ್ ಮೂಲಕ ಸುಪಾರಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಹತ್ಯೆಗೆ ಸ್ಫೋಟಕ ತಿರುವೊಂದು ದೊರೆತಿದೆ.

    ದೀಪಕ್ ರಾವ್ ಹತ್ಯೆಗೆ ಫಾರಿನ್ ಫಂಡಿಂಗ್ ಬಂದಿದ್ದು, ಉಳ್ಳಾಲದ ಟಾರ್ಗೆಟ್ ಗ್ರೂಪ್ ಮೂಲಕ ಹತ್ಯೆಗೆ ಸುಪಾರಿ ಕೊಡಲಾಗಿತ್ತು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರೋ ನಾಲ್ವರು ಈ ಟಾರ್ಗೆಟ್ ಗ್ರೂಪ್ ಪ್ರಮುಖನ ಸಹಚರರಾಗಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

    ಟಾರ್ಗೆಟ್ ಗ್ರೂಪಿನಲ್ಲಿದ್ದ ಕಾಟಿಪಳ್ಳದ ಸಫ್ವಾನ್ ಸುರತ್ಕಲ್ ಪ್ರದೇಶದಲ್ಲಿ ಗ್ಯಾಂಗ್ ಕಟ್ಟಿಕೊಂಡಿದ್ದ. ಹೀಗಾಗಿ ಪೊಲೀಸರು ರೌಡಿ ಸಫ್ವಾನ್ ಬಂಧನಕ್ಕೆ ಬಲೆ ಬೀಸಿದ್ದರು. ಆದ್ರೆ ರಾಜಕಾರಣಿಗಳಿಂದ ಇದಕ್ಕೆ ತಡೆಹಿಡಿಯಲಾಗುತ್ತಿತ್ತು. ಎರಡು ತಿಂಗಳ ಹಿಂದೆಯಷ್ಟೇ ರೌಡಿ ತಂಡವೊಂದು ಸಫ್ವಾನ್ ನನ್ನು ಕೊಲೆ ಮಾಡಿತ್ತು. ಇತ್ತೀಚೆಗೆ ಚಾರ್ಮಡಿಯಲ್ಲಿ ಸಫ್ವಾನ್ ಎಂಬಾತನ ಶವ ಪತ್ತೆಯಾಗಿತ್ತು. ಆತನ ಕೊಲೆಯನ್ನು ಉಳ್ಳಾಲದ ಟಾರ್ಗೆಟ್ ಗುಂಪಿನ ಇನ್ನೊಬ್ಬ ಸಫ್ವಾನ್ ಎಂಬಾತ ನಡೆಸಿದ್ದ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿತ್ತು. ಸದ್ಯ ಆರೋಪಿ ಸಫ್ವಾನ್ ಜೈಲಿನಲ್ಲಿದ್ದಾನೆ ಅಂತ ಪಬ್ಲಿಕ್ ಟಿವಿಗೆ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ. ಇದನ್ನೂ ಓದಿ: ನಾನು ನಂಬಿದ ದೇವರು ಆರೋಪಿಗಳಿಗೆ ಶಿಕ್ಷೆ ನೀಡ್ತಾನೆ: ದೀಪಕ್ ತಾಯಿ ಕಣ್ಣೀರು

    ಟ್ರಾವೆಲ್ ಏಜೆನ್ಸಿ ಮೂಲಕ ತೆರೆದುಕೊಂಡಿದ್ದ ಟಾರ್ಗೆಟ್ ಗ್ರೂಪ್, ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಎಂಟು ವರ್ಷಗಳ ಹಿಂದೆ ಆರಂಭಗೊಂಡಿತ್ತು. ಸುರತ್ಕಲ್, ಮಂಗಳೂರು, ಉಳ್ಳಾಲದಲ್ಲಿ ಸಕ್ರಿಯವಾಗಿರುವ ಈ ತಂಡದಿಂದ ಮೂರು ತಿಂಗಳ ಹಿಂದೆ ಉಳ್ಳಾಲದಲ್ಲಿ ಬಿಜೆಪಿ ಕಾರ್ಯಕರ್ತ ಝುಬೈರ್ ಎಂಬವರನ್ನು ಕೊಲೆ ಮಾಡಲಾಗಿದೆ. ಇನ್ನು ಈ ಟಾರ್ಗೆಟ್ ಗ್ರೂಪ್ ಗೆ ಸೌದಿ, ದುಬೈನಿಂದ ಹಣಕಾಸಿನ ನೆರವು ಹರಿದುಬರುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 7 ವರ್ಷಗಳ ಕಾಲ ನನ್ನ ಜೊತೆಯಿದ್ದ ದೀಪಕ್ ಸಾವು ಊಹಿಸಲು ಸಾಧ್ಯವಿಲ್ಲ: ಮಾಲೀಕ ಮಜೀದ್

    ಬುಧವಾರ ಮಧ್ಯಾಹ್ನ ಸುಮಾರು 1.30ರ ಸಮಯಕ್ಕೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ರು. ಕೂಡಲೇ ಎಚ್ಚೆತ್ತ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

    https://www.youtube.com/watch?v=h2ySxt7VrtE

    https://www.youtube.com/watch?v=0iJpHrCbDbc

    ಝುಬೈರ್ ಕೊಲೆ ಆರೋಪಿಗಳು

                                                                                    

  • ಮಂಗ್ಳೂರು: ಸುರತ್ಕಲ್ ಬಳಿ ಮಾರಕಾಸ್ತ್ರದಿಂದ ಕಡಿದು ಯುವಕನ ಬರ್ಬರ ಕೊಲೆ

    ಮಂಗ್ಳೂರು: ಸುರತ್ಕಲ್ ಬಳಿ ಮಾರಕಾಸ್ತ್ರದಿಂದ ಕಡಿದು ಯುವಕನ ಬರ್ಬರ ಕೊಲೆ

    ಮಂಗಳೂರು: ನಗರದಲ್ಲಿ ಮತ್ತೆ ದುಷ್ಕರ್ಮಿಗಳು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ನಗರದ ಹೊರವಲಯದಲ್ಲಿ ದುಷ್ಕರ್ಮಿಗಳು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಈ ಘಟನೆ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ನಡೆದಿದೆ. ಮೃತ ದುರ್ದೈವಿ ಯುವಕನನ್ನು ಕೃಷ್ಣಾಪುರದ ಗಣೇಶ್ ಪುರ ನಿವಾಸಿ ದೀಪಕ್ (32) ಎಂದು ಗುರುತಿಸಲಾಗಿದೆ. ಮೃತ ದೀಪಕ್ ಮೊಬೈಲ್ ಕಂಪನಿಯೊಂದರಲ್ಲಿ ಕರೆನ್ಸಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಸ್ಥಳೀಯ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದನು ಎನ್ನಲಾಗಿದೆ.

    ದೀಪಕ್ ಕಾಟಿಪಳ್ಳದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ನಾಲ್ವರ ತಂಡವೊಂದು ಕಾರಿನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಬಳಿಕ ದುಷ್ಕರ್ಮಿಗಳು ಕಾರಿನಿಂದ ಇಳಿದು ನೇರವಾಗಿ ದೀಪಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಮುಸ್ಲಿಮರು ಕಲ್ಲೆಸೆದು ದುಷ್ಕರ್ಮಿಗಳನ್ನು ಓಡಿಸಿದ್ದಾರೆ. ಅಷ್ಟರಲ್ಲಿ ತೀವ್ರ ಗಾಯಗೊಂಡ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸುರತ್ಕಲ್ ಮತ್ತು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

  • ಸೆಲ್ಫಿ ತೆಗೆಯಲು ಸಮುದ್ರದ ದಡದಲ್ಲಿದ್ದ ಬಂಡೆಯೇರಿ ಪರದಾಡಿದ ಬೆಂಗ್ಳೂರಿನ ಟೆಕ್ಕಿಯ ರಕ್ಷಣೆ

    ಸೆಲ್ಫಿ ತೆಗೆಯಲು ಸಮುದ್ರದ ದಡದಲ್ಲಿದ್ದ ಬಂಡೆಯೇರಿ ಪರದಾಡಿದ ಬೆಂಗ್ಳೂರಿನ ಟೆಕ್ಕಿಯ ರಕ್ಷಣೆ

    ಮಂಗಳೂರು: ಸೆಲ್ಫಿ ತೆಗೆಯಲು ಸಮುದ್ರ ದಡದ ಪಕ್ಕದಲ್ಲಿದ್ದ ಬಂಡೆಕಲ್ಲು ಹತ್ತಿ ಬಳಿಕ ದಡ ಸೇರಲಾಗದೆ ಪರದಾಡುತ್ತಿದ್ದ ಟೆಕ್ಕಿಯನ್ನು ರಕ್ಷಣೆ ಮಾಡಿದ ಘಟನೆ ಸುರತ್ಕಲ್ ಬೀಚ್ ನಲ್ಲಿ ಇಂದು ನಡೆದಿದೆ.

    ಬೆಂಗಳೂರಿನ ಕೆ ಅರ್ ಪುರಂ ನಿವಾಸಿ ಭರತ್ ಮತ್ತು ಏಳು ಮಂದಿ ಗೆಳೆಯರ ತಂಡ ಸುರತ್ಕಲ್ ಲೈಟ್ ಹೌಸ್ ಬಳಿ ಸಮುದ್ರ ತೀರಕ್ಕೆ ಆಗಮಿಸಿದ್ರು. ಈ ವೇಳೆ ಟೆಕ್ಕಿ ಭರತ್ ಸಮುದ್ರದ ಸುಂದರ ದ್ರಶ್ಯದೊಂದಿಗೆ ತನ್ನ ಸೆಲ್ಫಿ ತೆಗೆಯಲು ಸಮುದ್ರದ ದಡದಲ್ಲಿದ್ದ ಬಂಡೆಕಲ್ಲಿನ್ನು ಏರಿದ್ದರು.

    ಈ ವೇಳೆ ಸಮುದ್ರದ ಅಲೆಗಳು ಹೆಚ್ಚಾಗಿರೋದ್ರಿಂದ ಕೆಳಗೆ ಇಳಿಯಲಾಗದೆ ಪರದಾಡಿದ್ದರು. ಇದನ್ನು ಗಮನಿಸಿದ ಸ್ಥಳಿಯರು ಶಾಸಕ ಮೊಯಿದ್ದೀನ್ ಬಾವನಿಗೆ ವಿಚಾರ ತಿಳಿಸಿದ್ದು ತಕ್ಷಣ ಜಾವೇದ್ & ಟೀಮ್ ಜೀವ ರಕ್ಷಕ ತಂಡಕ್ಕೆ ಕೂಡಲೇ ಮಾಹಿತಿ ರವಾನಿಸಿದ್ದರು. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದ ಜೀವ ರಕ್ಷಕ ತಂಡ ಟೆಕ್ಕಿ ಭರತ್ ನನ್ನು ರಕ್ಷಣೆ ಮಾಡಿದ್ದಾರೆ.

    https://www.youtube.com/watch?v=kWnBGOZd6Lk&feature=youtu.be