ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ (Suhas Shetty Murder Case) ಸಂಬಂಧಿಸಿದಂತೆ ಮಂಗಳೂರಿನ (Mangaluru) ಬಜಪೆ ಹಾಗೂ ಸುರತ್ಕಲ್‌ನ 14 ಕಡೆ ಎನ್‌ಐಎ (NIA) ದಾಳಿ ನಡೆಸಿದೆ.
ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ 10 ಕಡೆ, ಸುರತ್ಕಲ್ (Surathkal) ಪೊಲೀಸ್ ಠಾಣಾ ವ್ಯಾಪ್ತಿಯ 4 ಕಡೆ ಎನ್‌ಐಎ ದಾಳಿ ಮಾಡಿದೆ. ಕೊಲೆ ಆರೋಪಿಗಳು ಹಾಗೂ ಎಸ್‌ಡಿಪಿಐ ಮುಖಂಡರ ಮನೆಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಇಡೀ ರಾಷ್ಟ್ರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ: ಬಿ.ಕೆ ಹರಿಪ್ರಸಾದ್ ಬಾಂಬ್
ಮೇ 1 ರಂದು ಫಾಜಿಲ್ ಹತ್ಯೆಯ ಆರೋಪಿ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ದೇಶ, ವಿದೇಶಗಳಿಂದ ಫಂಡಿಂಗ್ ಆಗಿದೆ. ರಾಜ್ಯದ ಪೊಲೀಸ್ ಇಲಾಖೆಯಿಂದ ನಿಸ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಎನ್‌ಐಎಗೆ ಒಪ್ಪಿಸಬೇಕೆಂದು ಆಗ್ರಹಿಸಿ ಬಿಜೆಪಿ, ಸೇರಿದಂತೆ ಹಿಂದೂಪರ ಕಾರ್ಯರ್ತರು ಆಗ್ರಹಿಸಿದ್ದರು. ಸುಹಾಸ್ ಶೆಟ್ಟಿ ಹತ್ಯೆ ಕೇಸ್‌ನಲ್ಲಿ ಈಗಾಗಲೇ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬಾವಿಯಲ್ಲಿ ಶವವಾಗಿ ಪತ್ತೆ
ಮಂಗಳೂರು: ವಿಷಾನಿಲ ಸೋರಿಕೆಯಿಂದ (Toxic Gas Leak) ಮಂಗಳೂರು ಹೊರವಲಯದ ಸುರತ್ಕಲ್‌ನ (Surathkal) ಎಂಆರ್‌ಪಿಎಲ್ (MRPL) ಘಟಕದ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ದೀಪ ಚಂದ್ರ ಭಾರ್ತಿಯಾ ಮತ್ತು ಬಿಜಿಲ್ ಪ್ರಸಾದ್ ಸಾವನ್ನಪ್ಪಿದ ಸಿಬ್ಬಂದಿ. ಮಂಗಳೂರು ತೈಲ ಶುದ್ಧೀಕರಣ ಘಟಕದ ಆಯಿಲ್ ಮೂವ್‌ಮೆಂಟ್ ವಿಭಾಗದಲ್ಲಿ ಘಟನೆ ನಡೆದಿದೆ. ಆಯಿಲ್ ಮೂವ್‌ಮೆಂಟ್ ವಿಭಾಗದಲ್ಲಿ ದೋಷ ಕಂಡು ಬಂದ ಹಿನ್ನೆಲೆ ಪರಿಶೀಲನೆಗೆಂದು ಸಿಬ್ಬಂದಿ ತೆರಳಿದ್ದರು. ಟ್ಯಾಂಕ್ ಮೇಲ್ಛಾವಣಿಗೆ ಹೋದ ಬೆನ್ನಲ್ಲೇ ಇಬ್ಬರೂ ಅಸ್ವಸ್ಥಗೊಂಡಿದ್ದಾರೆ. ತಕ್ಷಣದ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಿದರೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಾಕಿಂಗ್ ಮಾಡುವಾಗ ಹೃದಯಾಘಾತ – ನರ್ಸಿಂಗ್ ಹೋಮ್ ಮಾಲೀಕ ಸಾವು
ಇಬ್ಬರ ರಕ್ಷಣೆಗೆ ಮುಂದಾಗಿದ್ದ ಮತ್ತೊಬ್ಬ ಸಿಬ್ಬಂದಿ ವಿನಾಯಕ ಮಯಗೇರಿ ಎಂಬವರ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಂಆರ್‌ಪಿಎಲ್ ಆಡಳಿತ ಘಟನೆಯ ತನಿಖೆಗೆ ಸಮಿತಿ ರಚಿಸಿದೆ. ಗ್ರೂಪ್ ಜನರಲ್ ಮ್ಯಾನೇಜರ್‌ಗಳನ್ನೊಳಗೊಂಡ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ ಮಾಡಲಾಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಪೊಲೀಸರ ವಿರುದ್ಧ ಎಫ್‌ಐಆರ್‌ಗೆ ಶಿಫಾರಸು
ಮಂಗಳೂರು: ಸುರತ್ಕಲ್‌ನಿಂದ ಬಿ.ಸಿ.ರೋಡ್‌ವರೆಗಿನ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ, ಮರು ಡಾಂಬರೀಕರಣ ಹಾಗೂ ಸುರಕ್ಷತಾ ವ್ಯವಸ್ಥೆ ಅಳವಡಿಕೆ, ರಸ್ತೆ ಇಕ್ಕೆಲಗಳ ಸ್ವಚ್ಛತಾ ಕಾರ್ಯ ಸಂಬಂಧಪಟ್ಟ ಕಾಮಗಾರಿಗಳಿಗೆ ದಕ್ಷಿಣಕನ್ನಡ (Dakshina Kannada) ಸಂಸದ ಕ್ಯಾ.ಬ್ರಿಜೇಶ್ ಚೌಟ (Brijesh Chowta) ಅವರು ಚಾಲನೆ ನೀಡಿದ್ದಾರೆ.
ಸುರತ್ಕಲ್‌ನ (Surathkal) ಗೋವಿಂದದಾಸ್ ಕಾಲೇಜಿನ ಸಮೀಪದ ಹೆದ್ದಾರಿ ಬಳಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಪ್ರಮುಖ ಬಂದರು ರಸ್ತೆಗಳಲ್ಲಿ ಒಂದಾಗಿರುವ ಸುರತ್ಕಲ್‌ನಿಂದ ಬಿ.ಸಿ.ರೋಡ್‌ವರೆಗಿನ ಈ ಮಾರ್ಗದ ನವೀಕರಣ ಸೇರಿ ಇತರ ಕಾಮಗಾರಿಗಳಿಗೆ ಇದೀಗ ಚಾಲನೆ ದೊರೆತಿದೆ. ಮಳೆಗಾಲಕ್ಕೂ ಮೊದಲು ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಜ್ಞಾನೋದಯ – ಕ್ಷಮೆಯಾಚಿಸಿದ ಬಂಡಿಸಿದ್ದೇಗೌಡ
ಸುರತ್ಕಲ್‌ನಿಂದ ಎಪಿಎಂಸಿ ಯಾರ್ಡ್‌ವರೆಗೆ, ಕುಳೂರಿನಿಂದ ಎ.ಜೆ ಆಸ್ಪತ್ರೆವರೆಗೆ ಹಾಗೂ ನಂತೂರಿನಿಂದ ಪಡೀಲ್‌ವರೆಗೆ ಒಟ್ಟು 11 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಡಾಮರೀಕರಣ ಹಾಗೂ ತುಂಬೆ ಬಳಿ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಾಸ್ ಡ್ರೈನೇಜ್ ವ್ಯವಸ್ಥೆ ಮುಂತಾದ ಕಾಮಗಾರಿಗಳು ನಡೆಯಲಿದೆ. ಈ ರಸ್ತೆಯನ್ನು ಅಭಿವೃದ್ದಿಪಡಿಸುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುವ ಜತೆಗೆ ಬಂದರಿನಿಂದ ಸರಕು ಸಾಗಾಟ ವಾಹನಗಳ ಸಂಚಾರವೂ ಸುಗಮವಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ ? – ರಾಹುಲ್‌ಗೆ ಸುಪ್ರೀಂ ತರಾಟೆ
ಬಂದರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳು ಸೂಕ್ತ ನಿರ್ವಹಣೆಯಿಲ್ಲದೆ, ಸರಕು ಸಾಗಣೆ ವಾಹನಗಳು ಹಾಗೂ ಇತರೆ ವಾಹನ ಸವಾರರ ಸುಗಮ, ಸುರಕ್ಷಿತ ಸಂಚಾರಕ್ಕೂ ಹಲವು ರೀತಿಯ ಸಮಸ್ಯೆ ಎದುರಾಗಿದ್ದವು. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಗಮನಕ್ಕೆ ಹಾಗೂ ಸಚಿವಾಲಯದ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಿ ಸರಿಯಾದ ನಿರ್ವಹಣೆಯಿಲ್ಲದೇ ಸೊರಗಿದ್ದ ಹೆದ್ದಾರಿಗಳ ಕಾಯಕಲ್ಪಕ್ಕೆ ಪ್ರಯತ್ನಿಸಿದ್ದು, ಇಂದಿನಿಂದ ಹೆದ್ದಾರಿಗಳ ರಿಪೇರಿ ಕೆಲಸ ಶುರುವಾಗಲಿದೆ. ಈ ಹಿನ್ನಲೆಯಲ್ಲಿ ವಿಶೇಷ ಅನುದಾನ ಒದಗಿಸಿ ಕೊಟ್ಟ ಪ್ರಧಾನಮಂತ್ರಿ ಮೋದಿ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ: ಅಮಾಯಕರ ಹತ್ಯೆಯಿಂದ ಆಘಾತವಾಗಿದೆ ಎಂದ ಆಮೀರ್ ಖಾನ್
ಈ ಹೆದ್ದಾರಿ ಕಾಮಗಾರಿಯನ್ನು ಮುಗ್ರೋಡಿ ಕನ್ಸ್ಟ್ರಕ್ಷನ್ ನಡೆಸಲಿದ್ದು, ಸುರತ್ಕಲ್‌ನಿಂದ ನಂತೂರು, ಬಿ.ಸಿ.ರೋಡ್‌ನಿಂದ ಪಡೀಲ್ ಹಾಗೂ ನಂತೂರು ಜಂಕ್ಷನ್‌ನಿಂದ ಪಡೀಲ್‌ವರೆಗಿನ ಬೈಪಾಸ್ ರಸ್ತೆ ಸೇರಿದಂತೆ ಒಟ್ಟು 37.42 ಕಿಮೀ. ದೂರದ ಹೆದ್ದಾರಿಗಳ ರಿಪೇರಿ, ಮರುಡಾಂಬರೀಕರಣ ಹಾಗೂ ನಿರ್ವಹಣೆ ಕೆಲಸಗಳು ಒಟ್ಟು 28.58 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ಇದನ್ನೂ ಓದಿ: ರನ್ಯಾರಾವ್ ವಿರುದ್ಧ ಕಾಫಿಪೋಸಾ ಜಾರಿ – ಒಂದು ವರ್ಷ ಜೈಲೇ ಗತಿ
ಕಾರ್ಯಕ್ರಮದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಮಾಜಿ ಮೇಯರ್‌ಗಳಾದ ದಿವಾಕರ್ ಪಾಂಡೇಶ್ವರ್, ಜಯಾನಂದ್ ಅಂಚನ್, ಮನೋಜ್ ಕುಮಾರ್, ಎನ್‌ಹೆಚ್‌ಎಐ ಅಧಿಕಾರಿಗಳು ಮುಗ್ರೋಡಿ ಕನ್ಸ್ಟ್ರಕ್ಷನ್‌ನ ಸುಧಾಕರ್ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.
ಮಂಗಳೂರು: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ಮಂಗಳೂರು (Mangaluru) ಹೊರವಲಯದ ಸುರತ್ಕಲ್‌ನ (Surathkal) ಎನ್‌ಐಟಿಕೆ ಬೀಚ್‌ನಲ್ಲಿ (NITK Beach) ನಡೆದಿದೆ.
ಬುಧವಾರ ಸೂರಿಂಜೆಯ ಕುಟುಂಬವೊಂದರ ಮನೆಯಲ್ಲಿ ವಿವಾಹ ಕಾರ್ಯಕ್ರಮವಿದ್ದುದರಿಂದ ಕುಟುಂಬದ ಸದಸ್ಯರು ಮುಂಬೈನಿAದ ಬಂದಿದ್ದರು. ಮದುಮಗಳ ಸಹೋದರನ ಜೊತೆಗೆ ಹತ್ತು ಮಂದಿ ಸಂಜೆ ಬೀಚ್‌ಗೆ ತೆರಳಿದ್ದರು. ಈ ವೇಳೆ ಬಾಲಕರಿಬ್ಬರು ಸಮುದ್ರ ಪಾಲಾಗಿದ್ದಾರೆ. ಇದನ್ನೂ ಓದಿ: Haveri | ಬಿರುಗಾಳಿ ಸಹಿತ ಮಳೆ – 20ಕ್ಕೂ ಅಧಿಕ ಮರಗಳು ಧರಾಶಾಹಿ, ಕಾರುಗಳು ಜಖಂ
ತಕ್ಷಣ ಲೈಫ್ ಗಾರ್ಡ್‌ಗಳು ಧ್ಯಾನ್‌ನನ್ನ ರಕ್ಷಿಸಿದರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸದ್ಯ ಹನೀಶ್ ಸಮುದ್ರ ಪಾಲಾಗಿದ್ದು, ಈಜುಗಾರರ ತಂಡದಿಂದ ಹುಡುಕಾಟ ನಡೆಯುತ್ತಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಈ ಬಾರಿಯ ಚುನಾವಣೆ ವೇಳೆ ಭಾರೀ ಸುದ್ದು ಮಾಡಿದ ಟೋಲ್ ಪ್ಲಾಜಾ ಅಂದ್ರೆ ಅದು ಸುರತ್ಕಲ್ ಟೋಲ್. ಇದು ಅನದಿಕೃತ ಟೋಲ್, ಇದನ್ನು ರದ್ದು ಮಾಡಬೇಕು ಅಂತಾ ಸಾಕಷ್ಟು ಸಂಘಟನೆಗಳು ಹೋರಾಟ ಮಾಡಿದವು. ಕರಾವಳಿಗರ ಭಾರೀ ಹೋರಾಟದಿಂದ ಇದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಬಂದ್ ಮಾಡಲಾಯ್ತು. ಬಳಿಕ ಇದರ ಕ್ರೆಡಿಟ್ ಕಿತ್ತಾಟ ಕೂಡ ನಡೆಯಿತು. ಆದರೆ ಈಗ ಈ ಟೋಲ್ ಮತ್ತೆ ಕಾರ್ಯಾರಂಭವಾಗುವ ಲಕ್ಷಣಗಳು ಕಾಣುತ್ತಿದೆ.
ಮಂಗಳೂರು ಹೊರವಲಯದ ಸುರತ್ಕಲ್ ಟೋಲ್ (Surathakl Toll) ನಿಂದ ಸಾಕಷ್ಟು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹ ಮಾಡುತ್ತಿತ್ತು. ಆದರೆ ಇದು ಅಕ್ರಮ ಟೋಲ್ ಅಂತಾ ಇದರ ವಿರುದ್ಧ ಸಾಕಷ್ಟು ಸಂಘಟನೆಗಳು, ರಾಜಕೀಯ ಪಕ್ಷಗಳು ನಿರಂತರ ಪ್ರತಿಭಟನೆಗಳನ್ನು ಮಾಡಿದ್ವು. ಚುನಾವಣಾ ವರ್ಷವನ್ನು ಗುರಿಯಿಟ್ಟುಕೊಂಡು ಮಾಡಿದ ಬೃಹತ್ ಪ್ರತಿಭಟನೆಯಿಂದಾಗಿ ಸಂಸದ ನಳೀನ್ ಕುಮಾರ್ ಕಟೀಲ್ ಈ ಟೋಲ್ ರದ್ದು ಮಾಡಲಾಗಿದೆ ಅಂತಾ ಒಂದು ನೋಟಿಫಿಕೇಷನ್ ನ್ನು ಮಾಡಿಸಿದ್ರು. ಆ ಬಳಿಕ ಟೋಲ್ ನಲ್ಲಿ ಹಣ ಸಂಗ್ರಹ ನಿಲ್ಲಿಸಲಾಗಿತ್ತು. ಇನ್ನೇನು ಈ ಟೋಲ್ ಪ್ಲಾಜಾವನ್ನು ತೆರವುಗೊಳಿಸುತ್ತಾರೆ. ಅನ್ನುವಷ್ಟರಲ್ಲಿ ಈಗ ಮತ್ತೆ ಟೋಲ್ ಸಂಗ್ರಹದ ಆತಂಕ ಎದುರಾಗಿದೆ. ಇದನ್ನೂ ಓದಿ: ರಾಮನಗರದಲ್ಲೇ ಮೆಡಿಕಲ್ ಕಾಲೇಜು ಉಳಿಯುತ್ತೆ, ವಿಪಕ್ಷಗಳು ರಾಜಕೀಯಕ್ಕೆ ಗೊಂದಲ ಮಾಡ್ತಿವೆ: ಇಕ್ಬಾಲ್ ಹುಸೇನ್
ಎಂಟು ತಿಂಗಳಿಂದೀಚೆಗೆ ಈ ಟೋಲ್ ಪ್ಲಾಜಾ ನಿರ್ವಹಣೆಯಿಲ್ಲದೆ ಶಿಥಿಲವಾಗಿತ್ತು. ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿ ಹಲವು ಅಪಘಾತಗಳಿಗೂ ಕಾರಣವಾಗಿತ್ತು. ಶಿಥಿಲ ಟೋಲ್ ಪ್ಲಾಜಾದ ಅವಶೇಷಗಳು ಕುಸಿದು ಅವಘಡ ಸಂಭವಿಸುವ ಸಾಧ್ಯತೆಯೂ ಇತ್ತು. ಹಾಗಾಗಿ ತೆರವುಗೊಳಿಸುವಂತೆ ನಾಗರಿಕರ ಆಗ್ರಹವೂ ಕೇಳಿಬಂದಿತ್ತು. ಆದರೆ ಈಗ ಈ ಟೋಲ್ ಪ್ಲಾಜಾವನ್ನು ತೆರವುಗೊಳಿಸುವ ಬದಲು ಭರದಿಂದ ದುರಸ್ತಿಗೊಳಿಸಲಾಗುತ್ತಿದೆ. ವಾಹನಗಳು ಗುದ್ದಿ ಮುರಿದು ಬಿದ್ದಿದ್ದ ಕಂಬ, ಶಿಥಿಲ ಛಾವಣಿಯನ್ನು ರಿಪೇರಿ ಮಾಡಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಟೋಲ್ ಹೋರಾಟ ಸಮಿತಿಯ ಸದಸ್ಯರು ಟೋಲ್ ಪ್ಲಾಜಾ ಬಳಿ ಭೇಟಿ ನೀಡಿದ್ರು.
ಇನ್ನು ಈ ಟೋಲ್ ನ ಕಲೆಕ್ಷನ್ ನಿಲ್ಲಸಲು ಸಾದ್ಯವಿಲ್ಲ ಅನ್ನೊದೇ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ವಾದವಾಗಿತ್ತು. ಆದ್ರಿಂದ ಹೆಜಮಾಡಿ ಟೋಲ್ ಗೆ ಇದನ್ನು ಮರ್ಜ್ ಮಾಡುವ ಭರವಸೆ ಮೇಲೆ ಈ ಟೋಲ್ ನ್ನು ರದ್ದು ಮಾಡಲಾಗಿತ್ತು. ಆದರೆ ಹೆಜಮಾಡಿಯಲ್ಲಿರೋ ನವಯುಗ ಟೋಲ್ ಗೆ ಇದನ್ನು ಮರ್ಜ್ ಮಾಡಲು ಸಾಧ್ಯವಾಗಿಲ್ಲ. ಅಲ್ಲದೇ ಸುರತ್ಕಲ್ ನಿಂದ ಬಿ.ಸಿ.ರೋಡ್ ವರೆಗೂ ರಸ್ತೆ ನಿರ್ವಹಣೆಯನ್ನು ಇದೇ ಟೋಲ್ ನಲ್ಲಿ ಸಂಗ್ರಹವಾದ ಹಣದಿಂದ ಮಾಡಬೇಕು. ಆದರಿಂದ ಟೋಲ್ ಮತ್ತೆ ಆರಂಭಿಸಲು ಎನ್.ಹೆಚ್.ಎ.ಐ ಹುನ್ನಾರ ನಡೆಸಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.
ಈ ಬಗ್ಗೆ ದೂರುಗಳು ಬಂದಿದೆ. ಆದ್ರೆ ಟೋಲ್ ಪುನಃ ತೆರೆಯುವ ಯೋಚನೆ ಸದ್ಯಕ್ಕಿಲ್ಲ. ಸುರತ್ಕಲ್‍ನ ಟೋಲ್ ಪ್ಲಾಜಾವನ್ನು ಹೆಜಮಾಡಿಯ ಪ್ಲಾಜಾದೊಂದಿಗೆ ವಿಲೀನಗೊಳಿಸಲು ರಾಜ್ಯ ಸರಕಾರದ ಸಹಕಾರ ಅಗತ್ಯವಿದೆ.ವಿಲೀನ ಆಗುವ ಪ್ರಕ್ರಿಯೆ ಹಾಗೂ ಕಾರ್ಯದ ರೂಪುರೇಷೆ ಸೂಕ್ತ ನಿರ್ಧಾರಕ್ಕೆ ಬರುವವರೆಗೆ ಸುರತ್ಕಲ್ ಟೋಲ್ ಕೇಂದ್ರವನ್ನು ಯಥಾಸ್ಥಿತಿಯಲ್ಲಿ ಇರಿಸಿಕೊಳ್ಳಲು ದುರಸ್ತಿ ಮಾಡುತ್ತಿದ್ದೇವೆ. ವಿಲೀನದ ಅನುಮತಿಗಾಗಿ ಕಾಯುತ್ತಿದ್ದೇವೆ.
ಸದ್ಯ ರಸ್ತೆ ನಿರ್ವಣೆಗಾಗಿ ಹಾಗೂ ಟೋಲ್ ವಿಲೀನವಾಗದ ಕಾರಣ ಇದನ್ನು ರಿಓಪನ್ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ ಸೈಡ್ ವರ್ಕ್ ಮಾಡುತ್ತಿದೆ ಅನ್ನೊ ಗುಸುಗುಸು ಕೇಳುತ್ತಿದೆ. ಹೀಗಾಗಿ ಮತ್ತೆ ಪ್ರಯಾಣಿಕರ ಜೇಬಿಗೆ ಬರೆ ಬೀಳೋ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ಪತಿ ಸ್ವಲ್ಪ ತಡವಾಗಿ ಕಾರ್ಯಕ್ರಮದಿಂದ ಹೊರಟು ಬಂದರು. ಮನೆಗೆ ಬಂದಾಗಿ ದಿವ್ಯಾ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ.
ಪ್ರೀತಿಸಿ ಮದುವೆ: ಮೃತ ದಿವ್ಯಾ ಮೆಡಿಕಲ್ ಶಾಪ್ (Medical Shop) ನಲ್ಲಿ ಕೆಲಸ ಮಾಡಿಕೊಂಡಿದ್ದರು. ಪತಿ ಹರೀಶ್ ಆಟೋ ಚಾಲಕರಾಗಿ ದುಡಿಯುತ್ತಿದ್ದರು. ವರ್ಷಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು.
Live Tv
[brid partner=56869869 player=32851 video=960834 autoplay=true]
ಮಂಗಳೂರು: ಉದ್ಯೋಗಕ್ಕೆಂದು ತೆರಳಿದ್ದ ಯುವತಿ ಮನೆಗೆ ವಾಪಸ್ ಬರದೆ ನಾಪತ್ತೆಯಾದ ಘಟನೆ ಮಂಗಳೂರಿನ ಸುರತ್ಕಲ್ (Surathkal Mangaluru) ನಲ್ಲಿ ನಡೆದಿದೆ.
ಸುರತ್ಕಲ್‍ನ 3ನೇ ಬ್ಲಾಕ್ ನಿವಾಸಿ 20 ವರ್ಷದ ಶಿವಾನಿ ನಾಪತ್ತೆಯಾದ ಯುವತಿ. ಈಕೆ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದು, ಇಂದು ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ತೆರಳಿದ್ದ ಯುವತಿ (Young Woman) ನಾಪತ್ತೆಯಾಗಿದ್ದಾಳೆ. ಇದನ್ನೂ ಓದಿ: ಕುಡಿತದ ಚಟವಿರುವವರು ಕೆಟ್ಟವರಲ್ಲ, ಅವರ ಕುಡಿತ ಕೆಟ್ಟದ್ದು: ವೀರೇಂದ್ರ ಹೆಗ್ಗಡೆ
ಸದ್ಯ ಯುವತಿಯ ಮೊಬೈಲ್ ಸ್ವಿಚ್ಛ್ ಆಫ್ (Mobile Switch Off) ಆಗಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂಸ್ಥೆಯ ಇತರೆ ಸಿಬ್ಬಂದಿಯಿಂದಲೂ ಯುವತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ಇಲ್ಲಿನ ಸುರತ್ಕಲ್ (Surathkal) ನ ಕಾಟಿಪಳ್ಳದಲ್ಲಿ ನಡೆದ ಜಲೀಲ್ ಕೊಲೆ ಪ್ರಕರಣದ ಆರೋಪಿಗಳು ಅಂದರ್ ಆಗಿದ್ದಾರೆ. ಕೊಲೆ ಮಾಡಿದ ಇಬ್ಬರು ಸಹಕರಿಸಿದ ಓರ್ವ ಬಂಧನವಾದರೆ, ಮತ್ತೋರ್ವ ಪರಾರಿಯಾಗಿದ್ದಾನೆ.
ಮಂಗಳೂರು (Mangaluru) ಹೊರವಲಯದ ಸುರತ್ಕಲ್ ಬಳಿಯ ಕಾಟಿಪಳ್ಳ ಎಂಬಲ್ಲಿ ಮೊನ್ನೆ ರಾತ್ರಿ ಭೀಕರ ಹತ್ಯೆ ನಡೆದಿತ್ತು. ಕೃಷ್ಣಾಪುರ ನಿವಾಸಿ ಕಾಟಿಪಳ್ಳ ಬಳಿ ಅಂಗಡಿ ಇಟ್ಟುಕೊಂಡಿದ್ದ ಅಬ್ದುಲ್ ಜಲೀಲ್ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಹತ್ಯೆ ಪ್ರಕಣ ಸಂಬಂಧ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಕೃಷ್ಣಾಪುರ ನೈತಂಗಡಿ ನಿವಾಸಿ ಶೈಲೇಶ್ ಅಲಿಯಾಸ್ ಶೈಲೇಶ್ ಪೂಜಾರಿ, ಉಡುಪಿ (Udupi) ಜಿಲ್ಲೆ, ಹೆಜಮಾಡಿ ನಿವಾಸಿ ಸವಿನ್ ಕಾಂಚನ್, ಕಾಟಿಪಳ್ಳ ನಿವಾಸಿ ಪವನ್ ಅಲಿಯಾಸ್ ಪಚ್ಚು ಬಂಧಿತರು. ಶೈಲೇಶ್ ಮತ್ತು ಸವಿನ್ ಕೊಲೆ ಮಾಡಿದರೆ ಪವನ್ ಕೊಲೆ ಮಾಡಿದವರಿಗೆ ಬೈಕ್ನಲ್ಲಿ ಡ್ರಾಪ್ ಕೊಟ್ಟಿದ್ದಾನೆ. ಮತ್ತೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಜಲೀಲ್ ಹತ್ಯೆ ಕೇಸ್ – ಇಬ್ಬರು ಮಹಿಳೆಯರ ವಿಚಾರಣೆ, ಗಾಂಜಾ ಮಾಫಿಯಾದ ವಾಸನೆ
ಶೈಲೇಶ್ ಮತ್ತು ಸವಿನ್ ಇಬ್ಬರೂ ಕೂಡ ರೌಡಿಶೀಟರ್‍ಗಳಾಗಿದ್ದು 2021ರಲ್ಲಿ ನಟೋರಿಯಸ್ ರೌಡಿಶೀಟರ್ ಪಿಂಕಿ ನವಾಜ್ ಕೊಲೆ ಯತ್ನದ ಆರೋಪಿಗಳಾಗಿದ್ದರು. ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಕೊಲೆಗೆ ಕಾರಣ ಏನು ಅಂತ ತನಿಖೆ ನಡೆಸುತ್ತಿದ್ದಾರೆ.
ಬಂಧಿತ ಮೂವರು ಆರೋಪಿಗಳನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮುಂದಿನ ಹತ್ತು ದಿನಗಳ ಕಾಲ ಪೊಲೀಸರ ಕಷ್ಟಡಿಗೆ ಆರೋಪಿಗಳನ್ನು ನೀಡಲಾಗಿದೆ. ಇನ್ನು ಸುರತ್ಕಲ್ ಭಾಗದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಡಿಸೆಂಬರ್ 29 ಬೆಳಗ್ಗೆ 6 ಗಂಟೆವರೆಗೂ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಮತ್ತು ಮದ್ಯ ಮಾರಾಟವನ್ನೂ ಬಂದ್ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ಸುರತ್ಕಲ್(Surathkal) ಕಾಟಿಪಳ್ಳದಲ್ಲಿ ವ್ಯಕ್ತಿಯ ಕೊಲೆ ನಡೆದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144ರ(Section 144) ಅನ್ವಯ ನಿಷೇಧಾಜ್ಞೆ ಜಾರಿಯಾಗಿದೆ.
ಡಿ.27ರ ಮುಂಜಾನೆ 6 ಗಂಟೆಯವರೆಗೆ ಸುರತ್ಕಲ್, ಪಣಂಬೂರು, ಕಾವೂರು, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಮಂಗಳೂರು(Mangaluru) ನಗರ ಪೊಲೀಸ್ ಕಮಿಷನರ್ ಶಶಿಕುಮಾರ್(Shashi Kumar) ಆದೇಶ ಪ್ರಕಟಿಸಿದ್ದಾರೆ.
ಇಬ್ಬರು ದುಷ್ಕರ್ಮಿಗಳು ಜಲೀಲ್(40) ಅವರ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಶನಿವಾರ ಸಂಜೆ ಜಲೀಲ್(Jaleel) ಅಂಗಡಿಯಲ್ಲಿ ಕುಳಿತಿದ್ದಾಗ ಅಂಗಡಿಯ ಪಕ್ಕದ ರಸ್ತೆಯಲ್ಲಿ ದ್ವಿಚಕ್ರವಾಹನವನ್ನು ಇಟ್ಟು ಏಕಾಏಕಿ ಚೂರಿ ಇರಿದು ಪರಾರಿಯಾಗಿದ್ದರು. ಇದನ್ನೂ ಓದಿ: ಸೆಟ್‌ನಲ್ಲೇ ಸೀರಿಯಲ್ ಖ್ಯಾತ ನಟಿ ಆತ್ಮಹತ್ಯೆ
ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಲೀಲ್ ಅವರ ಎದೆಯ ಭಾಗ ಮತ್ತು ಬೆನ್ನಿಗೆ ಹರಿತವಾದ ಚೂರಿಯಿಂದ ಇರಿದಿದ್ದು, ಅವರ ಬೆನ್ನಿನಲ್ಲಿದ್ದ ಚೂರಿಯನ್ನು ತೆಗೆದ ಫಾರೂಕ್ ಅವರು ತಕ್ಷಣ ಕಾರಿನಲ್ಲಿ ಮುಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಜಲೀಲ್ ಮೃತಪಟ್ಟಿದ್ದಾರೆ.
ಮೃತ ಜಲೀಲ್ ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿಯಾಗಿದ್ದು ನೈತಂಗಡಿಯಲ್ಲಿ ಫ್ಯಾನ್ಸಿ ಮತ್ತು ಚಪ್ಪಲಿಯ ಅಂಗಡಿ ನಡೆಸುತ್ತಿದ್ದರು.
Live Tv
[brid partner=56869869 player=32851 video=960834 autoplay=true]
ಮಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಹಿಂದೂಸ್ತಾನ್ ಪೆಟ್ರೋಲಿಯಂ (ಹೆಚ್‌ಪಿಸಿಎಲ್) ಏಥರ್ ಕಂಪೆನಿಯ ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆಯು ಶನಿವಾರದಿಂದ ತನ್ನ ಒಡೆತನದ ಪೆಟ್ರೋಲ್ ಪಂಪ್ ಆಗಿರುವ ಇಲ್ಲಿನ ವಿಜಯ ಫ್ಯೂಲ್ ಪಾರ್ಕ್‌ನಲ್ಲಿ ಪ್ರಾರಂಭಿಸಿತು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ವೈ. ಭರತ್ ಶೆಟ್ಟಿ (Bharat Shetty) ಅವರು ಉದ್ಘಾಟನೆ ನೆರವೇರಿಸಿದರು.
ಬಳಿಕ ಮಾತಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಚಾರ್ಜಿಂಗ್ ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಏಥರ್ ಕಂಪೆನಿಯ ಸಹಭಾಗಿತ್ವದಲ್ಲಿ ದ್ವಿಚಕ್ರ ಚಾರ್ಜಿಂಗ್ ಸ್ಟೇಷನ್ ಅನ್ನು ಹೆಚ್‌ಪಿಸಿಎಲ್ (HPCL) ಸುರತ್ಕಲ್‌ನಲ್ಲಿ (Surathkal) ಪ್ರಾರಂಭಿಸಿದ್ದು, ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲಿದೆ. ಡಿಸೆಂಬರ್ ಅಂತ್ಯದವರೆಗೆ ಫ್ರೀ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದರು.
ಹೆಚ್‌ಪಿಸಿಎಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್ ಎಂ.ಜಿ. ಮಾತನಾಡಿ, ಹಿಂದೂಸ್ತಾನ್ ಪೆಟ್ರೋಲಿಯಂ ದೇಶದಲ್ಲೇ ಮೊದಲ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಅಳವಡಿಸಿದ್ದು ಮುಂದಿನ ದಿನಗಳಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಪಂಪ್ ನ ಆಯ್ದ ಪಂಪ್‌ಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುವುದು. ಸದ್ಯ ಒಂದು ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯಿದ್ದು ಉಳಿದಂತೆ ನಾರ್ಮಲ್ ಚಾರ್ಜಿಂಗ್ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್‍ನವರಿಗೆ ಧ್ಯಾನ ಅಂದ್ರೆ ಸೋನಿಯಾ, ರಾಹುಲ್ ಗಾಂಧಿಯೇ ಆಗಿದೆ: ಪ್ರಹ್ಲಾದ್ ಜೋಶಿ
ಹೆಚ್‌ಪಿಸಿಎಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್ ಎಂ.ಜಿ., ಮಂಗಳೂರು ಟರ್ಮಿನಲ್ ಇನ್ಸ್ಟಾಲೇಷನ್ ವಿಭಾಗದ ಡಿಜಿಎಂ ಬೊಪ್ಪೆ ಸೂರ್ಯಲಿಂಗಂ, ಏರಿಯಾ ಸೇಲ್ಸ್ ಮೆನೇಜರ್ ಕೆ. ಉದಯ್ ಶಂಕರ್ ಶೆಟ್ಟಿ, ರಿಟೇಲ್ ವಿಭಾಗದ ಸೀನಿಯರ್ ಮೆನೇಜರ್ ಪ್ರದೀಪ್ ಕುಮಾರ್, ಮೆನೇಜರ್ ವಸಂತ ಬಿ. ಶೆಟ್ಟಿ, ಸೀನಿಯರ್ ಮೆನೇಜರ್ ಪಿ. ಪ್ರಕಾಶ್, ರೆಂಜಿತ್ ರಾಜನ್, ಹೆಚ್ ಪಿಸಿಎಲ್ ಗುತ್ತಿಗೆದಾರ ಶಿವಪ್ರಸಾದ್ ಶೆಟ್ಟಿ, ಏಥರ್ ಸಂಸ್ಥೆಯ ಟೀಮ್ ಮೆನೇಜರ್ ಭರತ್ ಕುಮಾರ್, ವಿಜಯ ಫ್ಯೂಲ್ ಪಾರ್ಕ್ ಮಾಲಕ ಡಿ. ದಯಾನಂದ ಶೆಟ್ಟಿ, ಹರ್ಷಿಣಿ ಶೆಟ್ಟಿ, ಕಾರ್ಪೋರೇಟರ್ ಗಳಾದ ಶ್ವೇತಾ ಪೂಜಾರಿ, ನಯನ ಕೋಟ್ಯಾನ್, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಪ್ರದೀಪ್, ಮೀರಾ ಶೆಟ್ಟಿ, ಪ್ರಶಾಂತ್ ಮುಡಾಯಿಕೋಡಿ ಉಪಸ್ಥಿತರಿದ್ದರು. ಇದನ್ನೂ ಓದಿ: ಕುಸಿದ ಬೆಲೆ- ರಸ್ತೆಗೆ ಹೂವು ಚೆಲ್ಲಿ ರೈತ ಕಣ್ಣೀರು
Live Tv
[brid partner=56869869 player=32851 video=960834 autoplay=true]