Tag: Surat Diamond Bourse

  • ನನ್ನ 3ನೇ ಅವಧಿಯಲ್ಲಿ ಭಾರತ ಟಾಪ್‌-3 ಆರ್ಥಿಕತೆಯಲ್ಲಿ ಒಂದಾಗಲಿದೆ: ಮೋದಿ ಮತ್ತೊಂದು ಗ್ಯಾರಂಟಿ

    ನನ್ನ 3ನೇ ಅವಧಿಯಲ್ಲಿ ಭಾರತ ಟಾಪ್‌-3 ಆರ್ಥಿಕತೆಯಲ್ಲಿ ಒಂದಾಗಲಿದೆ: ಮೋದಿ ಮತ್ತೊಂದು ಗ್ಯಾರಂಟಿ

    ಗಾಂಧಿನಗರ (ಸೂರತ್‌): ನನ್ನ 3ನೇ ಅವಧಿಯಲ್ಲಿ ಭಾರತ ದೇಶವು ವಿಶ್ವದ ಟಾಪ್‌-3 ಆರ್ಥಿಕತೆಗಳಲ್ಲಿ (Economies) ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಜನರಿಗೆ ಮತ್ತೊಂದು ಗ್ಯಾರಂಟಿ ನೀಡಿದ್ದಾರೆ.

    ಗುಜರಾತ್‌ನ ವಾಣಿಜ್ಯನಗರಿ ಸೂರತ್‌ನಲ್ಲಿ ಡೈಮಂಡ್‌ ಬೋರ್ಸ್‌ (Surat Diamond Bourse) ಕಚೇರಿ ಸಂಕೀರ್ಣ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಭಾರತವನ್ನು ವಿಶ್ವದ ಟಾಪ್‌-3 ಆರ್ಥಿಕತೆಗಳಲ್ಲಿ ಒಂದಾಗಲಿದೆ. ಅದಕ್ಕಾಗಿ ಸರ್ಕಾರವು ಮುಂಬರುವ 25 ವರ್ಷಗಳ ಗುರಿ ನಿಗದಿಪಡಿಸಿದೆ ಎಂದು ಹೇಳಿದ್ದಾರೆ.

    ಸೂರತ್‌ ಡೈಮಂಡ್‌ ಬೋರ್ಸ್‌ ʻನವ ಭಾರತದ ಶಕ್ತಿʼಯ ಸಂಕೇತ. ಈ ಸಂಕೀರ್ಣವು ರಾಷ್ಟ್ರದ ಪ್ರಗತಿಗಾಗಿ ನಮ್ಮ ಸರ್ಕಾರ ಕೈಗೊಂಡಿರುವ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ವಿಶ್ವದಾದ್ಯಂತ ಜನರು ಈ ಡೈಮಂಡ್‌ ಬೋರ್ಸ್‌ ಬಗ್ಗೆ ಮಾತನಾಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸಂಸತ್‌ ಮೇಲಿನ ದಾಳಿ ಗಂಭೀರವಾದದ್ದು; ಚರ್ಚೆ ಬೇಡ, ವಿಸ್ತೃತ ತನಿಖೆಯಾಗಲಿ: ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ

    ಬೋರ್ಸ್‌ ಭಾರತೀಯ ವಿನ್ಯಾಸ, ಭಾರತೀಯ ವಿನ್ಯಾಸಕಾರರು, ಭಾರತೀಯ ವಸ್ತು ಮತ್ತು ಭಾರತೀಯ ಪರಿಕಲ್ಪನೆಗಳ ಸಾಮರ್ಥ್ಯವನ್ನು ಇಲ್ಲಿ ಪ್ರದರ್ಶಿಸುತ್ತಿದೆ. ನಮ್ಮ ಈ ಕಚೇರಿ ಸಂಕೀರ್ಣದ ಎದುರು ಇತರ ಕಟ್ಟಡಗಳು ತಮ್ಮ ಹೊಳಪನ್ನೇ ಕಳೆದುಕೊಳ್ಳುತ್ತವೆ. ಈ ಹಿಂದೆ ಸೂರತ್‌ ನಗರವನ್ನು ʻಸೂರ್ಯನಗರʼಎಂದು ಕರೆಯಲಾಗುತ್ತಿತ್ತು. ಇಲ್ಲಿನ ಜನರ ಪರಿಶ್ರಮದಿಂದ ಈಗ ʻಡೈಮಂಡ್‌ ಸಿಟಿʼ ಆಗಿದೆ ಎಂದು ಶ್ಲಾಘಿಸಿದ್ದಾರೆ.

    ಮುಂದುವರಿದು, ಪರಿಸರ ವಿಜ್ಞಾನ ಮತ್ತು ವಾಸ್ತುಶಿಲ್ಪ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಒಮ್ಮೆ ಈ ಅದ್ಭುತ ಕಟ್ಟಡಕ್ಕೆ ಭೇಟಿ ನೀಡಬೇಕು. ಇಲ್ಲಿ ಪ್ರಯೋಗವಾಗಿರುವ ವಿನೂತನ ವಿನ್ಯಾಸವನ್ನು ಅಧ್ಯಯನಕ್ಕಾಗಿ ವಾಸ್ತುಶಿಲ್ಪದ ವಿದ್ಯಾರ್ಥಿಗಳನ್ನು ಕರೆತರಬೇಕು. ಪರಿಸರ ಅಧ್ಯಯನ ವಿದ್ಯಾರ್ಥಿಗಳು ಇಲ್ಲಿನ ಹಸಿರು ಪರಿಸರದ ಗಮನಾರ್ಹ ವೈಶಿಷ್ಟಗಳ ಬಗ್ಗೆ ತಳಿಯಲು ಭೇಟಿ ನೀಡಬೇಕು ಎಂಬ ಕಿವಿ ಮಾತನ್ನೂ ಹೇಳಿದ್ದಾರೆ.

    ನಂತರ 353 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೂರತ್‌ ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡವನ್ನೂ ಪ್ರಧಾನಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿ, ಸೂರತ್‌ನ ಜನರು, ಸಾರ್ವಜನಿಕರು, ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಇನ್ನೂ ಎರಡು ಊಡುಗೊರೆ ಸಿಕ್ಕಿದೆ. ಸೂರತ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆಯಾಗಿದೆ, ಜೊತೆಗೆ ಸೂರತ್ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಸ್ಥಾನಮಾನ ಪಡೆದುಕೊಂಡಿದೆ. ಇದು ಅತ್ಯಂತ ದೊಡ್ಡ ವಿಷಯ. ಈ ಹಿಂದೆ ನಾನು ಇಲ್ಲಿಗೆ ಭೇಟಿ ನೀಡಿದಾಗ ವಿಮಾನ ನಿಲ್ದಾಣವು ಹಳೆಯ ಬಸ್‌ ನಿಲ್ದಾಣದಂತೆ ಕಾಣುತ್ತಿತ್ತು. ಈಗ ಅದರ ರೂಪಾಂತರ ನೋಡಿದ್ರೆ ನಾವು ಎಲ್ಲಿಯವರೆಗೆ ಬಂದಿದ್ದೇವೆ ಎಂಬುದು ತಿಳಿಯುತ್ತದೆ ಎಂದು ಶ್ಲಾಘಿಸಿದ್ದಾರೆ.

    ಸೂರತ್ ಪ್ರಸ್ತುತ 14 ದೇಶೀಯ ನಗರಗಳಿಗೆ ಸಂಪರ್ಕ ಹೊಂದಿದೆ. ದೆಹಲಿ, ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್, ಗೋವಾ, ಗೋವಾ ಮೊಪಾ, ಬೆಳಗಾವಿ, ಪುಣೆ, ಜೈಪುರ, ಉದಯಪುರ, ಇಂದೋರ್, ದಿಯು ಮತ್ತು ಕಿಶನ್‌ಗಢ್ ಮತ್ತು ಅಂತಾರಾಷ್ಟ್ರೀಯವಾಗಿ ಶಾರ್ಜಾ ಮೂಲಕ ಪ್ರಪಂಚದ ಇತರ ಭಾಗಗಳಿಗೆ ಸಂಪರ್ಕ ಹೊಂದಿದೆ. ಇದು ವಾರಕ್ಕೆ 252ಕ್ಕೂ ಹೆಚ್ಚು ಪ್ರಯಾಣಿಕರ ವಿಮಾನ ಚಲನೆಗಳನ್ನು ನಿರ್ವಹಿಸುತ್ತಿದೆ. ಇದನ್ನೂ ಓದಿ: ವೈದ್ಯ, ಆರ್ಮಿ ಡಾಕ್ಟರ್‌, ಪ್ರಧಾನ ಮಂತ್ರಿ ಕಚೇರಿ ಅಧಿಕಾರಿ.. ನಾನಾ ವೇಶ – ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿ ಬಂಧನ

  • ಮೋದಿ ತವರಲ್ಲಿ Surat Diamond Bourse – ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ

    ಮೋದಿ ತವರಲ್ಲಿ Surat Diamond Bourse – ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ

    ಗಾಂಧಿನಗರ: ಅಮೆರಿಕದ ಪೆಂಟಗನ್ ಮೀರಿಸುವ ಹೊಸ ಕಚೇರಿ ಸಂಕೀರ್ಣವು ಭಾರತದಲ್ಲಿ ತಲೆ ಎತ್ತಿದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ನೆರವೇರಿಸಿದ್ದಾರೆ.

    ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರವಾದ `ಸೂರತ್ ಡೈಮಂಡ್ ಬೋರ್ಸ್’ (Surat Diamond Bourse) ಅನ್ನು ಮೋದಿ ಅವರು ಭಾನುವಾರ (ಇಂದು) ಉದ್ಘಾಟಿಸಿ ಶುಭಹಾರೈಸಿದ್ದಾರೆ. ಈ ಮೂಲಕ ಗುಜರಾತ್‌ನ (Gujarat) ಸೂರತ್ ನಗರವು ವಜ್ರದ ರಾಜಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಖಚಿತಪಡಿಸಿದೆ. ಇದನ್ನೂ ಓದಿ: ಸೀರೆಯ ಸೆರಗು ಮೆಟ್ರೋ ಬಾಗಿಲಿಗೆ ಸಿಲುಕಿ ಎಳೆದೊಯ್ದ ರೈಲು – ಮಹಿಳೆ ಸಾವು

    ಡೈಮಂಡ್ ಬೋರ್ಸ್ ವಿಶೇಷತೆ ಏನು?
    ಸೂರತ್‌ ಡೈಮಂಡ್ ಬೋರ್ಸ್ 35.54 ಎಕರೆ ಭೂಪ್ರದೇಶದಲ್ಲಿ, 3,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈ ಮೂಲಕ ಇದು 1943ರಲ್ಲಿ 6.5 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಪೆಂಟಗನ್ ಸಂಕೀರ್ಣ ಕಚೇರಿಯನ್ನೂ ಹಿಂದಿಕ್ಕಿದೆ. 4,500ಕ್ಕೂ ಹೆಚ್ಚು ನೆಟ್‌ವರ್ಕ್ ಕಚೇರಿಗಳನ್ನು ಒಳಗೊಂಡಿದ್ದು ವಿಶ್ವದಲ್ಲೇ ಅತಿದೊಡ್ಡ ಕಚೇರಿ ಸಂಕೀರ್ಣ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇದನ್ನೂ ಓದಿ: ಸಂಸತ್‌ನಲ್ಲಿನ ಭದ್ರತಾ ಲೋಪಕ್ಕೂ, ಸಂಸದರ ಅಮಾನತಿಗೂ ಸಂಬಂಧವಿಲ್ಲ: ಲೋಕಸಭಾ ಸ್ಫೀಕರ್‌ ಸ್ಪಷ್ಟನೆ

    ಸೂರತ್‌ನ ಡೈಮಂಡ್ ಬೋರ್ಸ್ ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ (Diamond And Jewellery) ವ್ಯಾಪಾರದ ಜಾಗತಿಕ ಕೇಂದ್ರವಾಗಲಿದೆ. 65,000ಕ್ಕೂ ಹೆಚ್ಚು ವಜ್ರದ ವ್ಯಾಪಾರಿಗಳಿಗೆ ಒನ್‌ಸ್ಟಾಪ್ ಡೆಸ್ಟಿನೇಶನ್ ಆಗಿದ್ದು, ಕಟ್ಟರ್, ಪಾಲಿಷರ್ ವಜ್ರಗಳು ಹಾಗೂ ವಜ್ರದ ಆಭರಣಗಳ ವ್ಯಾಪಾರ, ವಹಿವಾಟು ನಡೆಯಲಿದೆ. ಈ ಕಟ್ಟಡವು 175 ದೇಶಗಳ 4,200 ವ್ಯಾಪಾರಿಗಳನ್ನು ಒಳಗೊಂಡಿದೆ. ಆಮದು-ರಫ್ತಿಗಾಗಿ ಅತ್ಯಾಧುನಿಕ `ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್’ (Customs Clearance House) ಅನ್ನೂ ಹೊಂದಿದೆ. ಜೊತೆಗೆ ಚಿಲ್ಲರೆ ಆಭರಣ ವ್ಯಾಪಾರಕ್ಕಾಗಿ ಆಭರಣ ಮಳಿಗೆ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ವಾಲ್ಟ್ಸ್‌ಗಳ ಸೌಲಭ್ಯವೂ ಇಲ್ಲಿದೆ. ಮನರಂಜನಾ ವಲಯ ಮತ್ತು ಪಾರ್ಕಿಂಗ್‌ಗೆ 20 ಲಕ್ಷ ಚದರ ಅಡಿ ವಿಸ್ತೀರ್ಣ ಪ್ರದೇಶವನ್ನು ಮೀಸಲಿಡಲಾಗಿದೆ. ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ದಿನಗಣನೆ- ಅಂತಿಮ ಹಂತದಲ್ಲಿ ತಯಾರಿ, ವಿಶೇಷ ಸಾರಿಗೆ ವ್ಯವಸ್ಥೆ

    ವಜ್ರ ವಿನ್ಯಾಸಕ್ಕೆ ಭಾರತ ಫೇಮಸ್: ವಿಶ್ವದಲ್ಲಿಯೇ ಮೊದಲಿಗೆ ದಕ್ಷಿಣ ಭಾರತದಲ್ಲಿ ವಜ್ರದ ನಿಕ್ಷೇಪಗಳು 9ನೇ ಶತಮಾನದಲ್ಲಿ ಪತ್ತೆಯಾದವು. ಅಲ್ಲಿಂದ 18ನೇ ಶತಮಾನದ ಮಧ್ಯಭಾಗದವರೆಗೆ ಭಾರತವು ವಜ್ರದ ಏಕೈಕ ಉತ್ಪಾದಕ ರಾಷ್ಟ್ರವಾಗಿತ್ತು. ನಂತರ ಇಲ್ಲಿನ ನಿಕ್ಷೇಪಗಳು ಬರಿದಾಗತೊಡಗಿ ಬ್ರೆಜಿಲ್‌ನಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾಗಿ, ಅಲ್ಲಿ ಉತ್ಪಾದನೆ ಆರಂಭವಾಯಿತು. 1870ರ ದಶಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ವಜ್ರದ ಅದಿರು ಪತ್ತೆಯಾದ ಮೇಲೆ ವಜ್ರೋದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆಯಿತು. ಈಗ ಅಲ್ಲಿ ಮಾತ್ರವಲ್ಲದೆ ಕೆನಡಾ, ಜಿಂಬಾಬ್ವೆ, ಅಂಗೋಲ ಮತ್ತು ರಷ್ಯಾದಲ್ಲಿ ಸಹ ವಜ್ರದ ಗಣಿಗಳಿವೆ. ಇಲ್ಲಿನ ಸಿಗುವ ವಜ್ರಗಳನ್ನು ಭಾರತಕ್ಕೆ ಕಳುಹಿಸಿ ಅಲಂಕಾರಿಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ವಜ್ರದ ಹರಳುಗಳನ್ನು ವಿನ್ಯಾಸಗೊಳಿಸಲು ಭಾರತದ ಗುಜರಾತ್ ರಾಜ್ಯ ಫೇಮಸ್ ಆಗಿದೆ. ವಜ್ರಗಳನ್ನು ವಿನ್ಯಾಸಗೊಳಿಸಿ ಆಭರಣಗಳಾಗಿ ರೂಪಿಸಿ ಒದಗಿಸುವ ಕಾರ್ಯವನ್ನು ಭಾರತದಲ್ಲಿ ಸುಮಾರು 25 ಕಂಪನಿಗಳು ಮಾಡುತ್ತಿವೆ. ಇದೀಗ ಭಾರತದಲ್ಲೇ ಬೃಹತ್ ಕಚೇರಿ ಸಂಕೀರ್ಣ ತೆರೆಯುತ್ತಿರುವುದು ಮತ್ತೊಂದು ಗರಿಮೆ.

  • ಪೆಂಟಗನ್‌ ಮೀರಿಸುವ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ʻಸೂರತ್ ಡೈಮಂಡ್ ಬೋರ್ಸ್ʼ – ಭಾನುವಾರ ಪ್ರಧಾನಿ ಮೋದಿಯಿಂದ ಉದ್ಘಾಟನೆ

    ಪೆಂಟಗನ್‌ ಮೀರಿಸುವ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ʻಸೂರತ್ ಡೈಮಂಡ್ ಬೋರ್ಸ್ʼ – ಭಾನುವಾರ ಪ್ರಧಾನಿ ಮೋದಿಯಿಂದ ಉದ್ಘಾಟನೆ

    ಗಾಂಧಿನಗರ: ಅಮೆರಿಕದ ಪೆಂಟಗನ್‌ ಮೀರಿಸುವ ಹೊಸ ಕಚೇರಿ ಸಂಕೀರ್ಣವು ಭಾರತದಲ್ಲಿ ತಲೆ ಎತ್ತಿದ್ದು ಉದ್ಘಾಟನೆಗೆ ಸಜ್ಜಾಗಿದೆ. ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರವಾದ ‘ಸೂರತ್ ಡೈಮಂಡ್ ಬೋರ್ಸ್’ (Surat Diamond Bourse) ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಉದ್ಘಾಟಿಸಲಿದ್ದಾರೆ. ಈ ಮೂಲಕ ಗುಜರಾತ್‌ನ ಸೂರತ್‌ ನಗರವು ವಜ್ರದ ರಾಜಧಾನಿಯಾಗುವ ನಗರದ ಮಹತ್ವಾಕಾಂಕ್ಷೆಯನ್ನು ಖಚಿತಪಡಿಸಿದೆ.

    ಗುಜರಾತ್‌ನ ಸೂರತ್ ಡೈಮಂಡ್ ಬೋರ್ಸ್, 6.7 ಮಿಲಿಯನ್ ಚದರ ಅಡಿ (620,000 ಚದರ ಮೀಟರ್) ವಿಸ್ತೀರ್ಣ ಭೂ ಪ್ರದೇಶದಲ್ಲಿ, 32 ಶತಕೋಟಿ (384 ಮಿಲಿಯನ್ ಡಾಲರ್‌) ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಇದು 1943ರಲ್ಲಿ 6.5 ಮಿಲಿಯನ್‌ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಪೆಂಟಗನ್‌ ಸಂಕೀರ್ಣ ಕಚೇರಿಯನ್ನೂ ಹಿಂದಿಕ್ಕಿದೆ. ಈ ಕಚೇರಿ ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಪಾಂಡ್ಯ ನಾಯಕತ್ವ ವರವೋ ಶಾಪವೋ – ಕ್ಯಾಪ್ಟನ್‌ ಆದ ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ಮುಂಬೈ

    ಅಲ್ಲದೇ ಸೂರತ್‌ನ ಡೈಮಂಡ್‌ ಬೋರ್ಸ್‌ ಅಂತಾರಾಷ್ಟ್ರೀಯ ವಜ್ರ (Diamond) ಮತ್ತು ಆಭರಣ (Jewellery) ವ್ಯಾಪಾರದ ಜಾಗತಿಕ ಕೇಂದ್ರವಾಗಲಿದೆ. ಒರಟು ಮತ್ತು ನಯವಾಗಿ ವಿನ್ಯಾಸಗೊಳಿಸಿದ ಪಾಲಿಶ್‌ ವಜ್ರಗಳ ವ್ಯಾಪಾರ ನಡೆಯಲಿದೆ. ಆಮದು-ರಫ್ತಿಗಾಗಿ ಅತ್ಯಾಧುನಿಕ ʻಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್ʼ (Customs Clearance House), ಚಿಲ್ಲರೆ ಆಭರಣ ವ್ಯಾಪಾರಕ್ಕಾಗಿ ಆಭರಣ ಮಳಿಗೆ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ವಾಲ್ಟ್‌ಗಳ ಸೌಲಭ್ಯವನ್ನೂ ಬೋರ್ಸ್ ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ.

    ಬೋರ್ಸ್‌ ಸರಿಸುಮಾರು 175 ದೇಶಗಳ 4,200 ವ್ಯಾಪಾರಿಗಳನ್ನು ಇರಿಸುವ ಸಾಮರ್ಥ್ಯ ಹೊಂದಿದ್ದು, 1.5 ಲಕ್ಷ ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಚ್ಚರಿ ಬೆಳವಣಿಗೆಯಲ್ಲಿ ಮುಂಬೈ ಸಾರಥಿಯಾದ ಪಾಂಡ್ಯ – ಹಿಟ್‌ಮ್ಯಾನ್‌ ಸ್ಥಾನ ಏನು?

    ವಜ್ರ ವಿನ್ಯಾಸಕ್ಕೆ ಭಾರತ ಫೇಮಸ್: ವಿಶ್ವದಲ್ಲಿಯೇ ಮೊದಲಿಗೆ ದಕ್ಷಿಣ ಭಾರತದಲ್ಲಿ ವಜ್ರದ ನಿಕ್ಷೇಪಗಳು 9ನೇ ಶತಮಾನದಲ್ಲಿ ಪತ್ತೆಯಾದವು. ಅಲ್ಲಿಂದ 18ನೇ ಶತಮಾನದ ಮಧ್ಯಭಾಗದವರೆಗೆ ಭಾರತವು ವಜ್ರದ ಏಕೈಕ ಉತ್ಪಾದಕ ರಾಷ್ಟ್ರವಾಗಿತ್ತು. ನಂತರ ಇಲ್ಲಿನ ನಿಕ್ಷೇಪಗಳು ಬರಿದಾಗತೊಡಗಿ ಬ್ರೆಜಿಲ್‌ನಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾಗಿ, ಅಲ್ಲಿ ಉತ್ಪಾದನೆ ಆರಂಭವಾಯಿತು. 1870ರ ದಶಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ವಜ್ರದ ಅದಿರು ಪತ್ತೆಯಾದ ಮೇಲೆ ವಜ್ರೋದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆಯಿತು. ಈಗ ಅಲ್ಲಿ ಮಾತ್ರವಲ್ಲದೆ ಕೆನಡ, ಜಿಂಬಾಬ್ವೆ, ಅಂಗೋಲ ಮತ್ತು ರಷ್ಯಾಗಳಲ್ಲಿ ಸಹ ವಜ್ರದ ಗಣಿಗಳಿವೆ. ಇಲ್ಲಿನ ಸಿಗುವ ವಜ್ರಗಳನ್ನು ಭಾರತಕ್ಕೆ ಕಳುಹಿಸಿ ಅಲಂಕರಿಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ವಜ್ರದ ಹರಳುಗಳನ್ನು ವಿನ್ಯಾಸಗೊಳಿಸಲು ಭಾರತದ ಗುಜರಾತ್ ರಾಜ್ಯ ಫೇಮಸ್ ಆಗಿದೆ. ವಜ್ರಗಳನ್ನು ವಿನ್ಯಾಸಗೊಳಿಸಿ ಆಭರಣಗಳಾಗಿ ರೂಪಿಸಿ ಒದಗಿಸುವ ಕಾರ್ಯವನ್ನು ಭಾರತದಲ್ಲಿ ಸುಮಾರು 25 ಕಂಪನಿಗಳು ಮಾಡುತ್ತಿವೆ. ಇದೀಗ ಭಾರತದಲ್ಲೇ ಬೃಹತ್‌ ಕಚೇರಿ ಸಂಕೀರ್ಣ ತೆರೆಯುತ್ತಿರುವುದು ಮತ್ತೊಂದು ಗರಿಮೆ.