Tag: surarai potru film

  • 70 ಕೋಟಿ ಮೊತ್ತದ ದುಬಾರಿ ಫ್ಲಾಟ್‌ ಖರೀದಿಸಿದ ಸೂರ್ಯ- ಜ್ಯೋತಿಕಾ ದಂಪತಿ

    70 ಕೋಟಿ ಮೊತ್ತದ ದುಬಾರಿ ಫ್ಲಾಟ್‌ ಖರೀದಿಸಿದ ಸೂರ್ಯ- ಜ್ಯೋತಿಕಾ ದಂಪತಿ

    ಕಾಲಿವುಡ್‌ನ (Kollywood) ಸ್ಟಾರ್ ಕಪಲ್ ಸೂರ್ಯ – ಜ್ಯೋತಿಕಾ (Jyothika) ತಮ್ಮ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದಾರೆ. ತೆರೆಯ ಮೇಲೆ ಕಮಾಲ್ ಮಾಡಿರುವ ಈ ಜೋಡಿ, ತೆರೆ ಹಿಂದೆ ಕೂಡ ಅದೆಷ್ಟೋ ಅಭಿಮಾನಿಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ. ಸೂರ್ಯ (Suriya) ದಂಪತಿ ಇದೀಗ ಹೊಸ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಮುಂಬೈ ಐಷಾರಾಮಿ ಫ್ಲಾಟ್ ಖರೀದಿಸಿದ್ದಾರೆ. ಈ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

    ಸೂರರೈ ಪೊಟ್ರು, ಜೈ ಭೀಮ್ (Jai Bheem) ಚಿತ್ರಗಳ ಮೂಲಕ ಸೂರ್ಯ ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಿದ್ದರೆ, ಜ್ಯೋತಿಕಾ ಅವರು ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ.ಇದನ್ನೂ ಓದಿ: ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ : ನಟನ ನಿವಾಸಕ್ಕೆ ಫುಲ್ ಸೆಕ್ಯೂರಿಟಿ

    ಇದೀಗ ಮುಂಬೈನಲ್ಲಿ ಬರೋಬ್ಬರಿ 70 ಕೋಟಿ ರೂ. ಮೊತ್ತದ ಅಪಾರ್ಟ್ಮೆಂಟ್ ಫ್ಲಾಟ್ ಅನ್ನು ನಟ ಸೂರ್ಯ ಖರೀದಿಸಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಗಾರ್ಡನ್ ಏರಿಯಾ, ಪಾರ್ಕಿಂಗ್, ಸ್ವಿಮ್ಮಿಂಗ್ ಫೂಲ್, ಜಿಮ್, ಥಿಯೇಟರ್ ಸೇರಿದಂತೆ ಎಲ್ಲಾ ಸೌಕರ್ಯ ಇರುವ ದುಬಾರಿ ಫ್ಲಾಟ್ ಇದಾಗಿದ್ದು, ಅಂದಾಜು 9 ಸಾವಿರ ಚದರ ಅಡಿ ವಿಸ್ತೀರ್ಣ ಇದೆಯಂತೆ. ಇನ್ನೂ 2016ರಲ್ಲಿ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ದಿಯಾ, ದೇವ್ ಎನ್ನುವ ಇಬ್ಬರು ಮಕ್ಕಳು ಇದ್ದಾರೆ.

    ಶೀಘ್ರದಲ್ಲೇ ಸೂರ್ಯ ದಂಪತಿ ಮುಂಬೈಗೆ ಶಿಫ್ಟ್ ಆಗುತ್ತಾರೆ ಎನ್ನಲಾಗ್ತಿದೆ. ಇನ್ನು ಪೋಷಕರ ಜೊತೆಗಿನ ಮನಸ್ತಾಪದಿಂದ ಸೂರ್ಯ- ಜ್ಯೋತಿಕಾ ಬೇರೆ ಕಡೆ ವಾಸಿಸುತ್ತಿದ್ದಾರೆ ಎನ್ನುವ ಗುಸುಗುಸು ಕೂಡ ಇತ್ತೀಚೆಗೆ ಕೇಳಿಬಂದಿತ್ತು. ಇದೀಗ ಇಬ್ಬರು ಮುಂಬೈಗೆ ಶಿಫ್ಟ್ ಆಗ್ತಾರಾ? ಎನ್ನುವ ಚರ್ಚೆ ಶುರುವಾಗಿದೆ. ಸದ್ಯ ಸೂರ್ಯ ಇನ್ನು ಹೆಸರಿಡದ ಐತಿಹಾಸಿಕ ಕಥಾಹಂದರ ಚಿತ್ರವೊಂದರಲ್ಲಿ ನಟಿಸ್ತಿದ್ದಾರೆ. ಇದರಲ್ಲಿ ವಿಭಿನ್ನ ಗೆಟಪ್‌ಗಳಲ್ಲಿ ದರ್ಶನ ಕೊಡಲಿದ್ದಾರೆ. ನಿರ್ದೇಶಕ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

  • ರತನ್ ಟಾಟಾ ಬಯೋಪಿಕ್‌ಗೆ ಸುಧಾ ಕೊಂಗರಾ ಆ್ಯಕ್ಷನ್ ಕಟ್

    ರತನ್ ಟಾಟಾ ಬಯೋಪಿಕ್‌ಗೆ ಸುಧಾ ಕೊಂಗರಾ ಆ್ಯಕ್ಷನ್ ಕಟ್

    `ಸೂರರೈ ಪೊಟ್ರು’ (Soorarai Pottru) ಚಿತ್ರದ ಭರ್ಜರಿ ಸಕ್ಸಸ್ ಬಳಿಕ ನಿರ್ದೇಶಕಿ ಸುಧಾ ಕೊಂಗರ ಈ ಚಿತ್ರವನ್ನ ಹಿಂದಿಗೂ ರಿಮೇಕ್ ಮಾಡುತ್ತಿದ್ದಾರೆ. ಇದರ ನಡುವೆ ಅವರ ಮುಂದಿನ ಚಿತ್ರದ ಬಗ್ಗೆ ಸೂಪರ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಯಶಸ್ವಿ ಉದ್ಯಮಿ ರತನ್ ಟಾಟಾ(Ratan Tata) ಬಯೋಪಿಕ್ ಮಾಡಲು ನಿರ್ದೇಶಕಿ ಸುಧಾ (Sudha Kongara) ಸಜ್ಜಾಗಿದ್ದಾರೆ.

    2020ರಲ್ಲಿ ಸೂರ್ಯ (Actor Surya) ನಟನೆಯ `ಸೂರರೈ ಪೊಟ್ರು’ ಸಿನಿಮಾಗೆ ಹಲವು ಪ್ರಶಸ್ತಿಗಳು ಲಭಿಸಿತ್ತು. ಇದರ ಹಿಂದಿ ರಿಮೇಕ್‌ನಲ್ಲಿ ಅಕ್ಷಯ್ ಕುಮಾರ್‌ಗೆ ಸುಧಾ ಡೈರೆಕ್ಷನ್ ಮಾಡ್ತಿದ್ದಾರೆ. ಇದರ ಜೊತೆ ಹೊಸ ಸಿನಿಮಾಗೂ ಪ್ಲ್ಯಾನ್‌ ಮಾಡಿದ್ದಾರೆ. ರತನ್ ಟಾಟಾ ಕಥೆಯನ್ನ ತೆರೆಯ ಮೇಲೆ ತರಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಕ್ಸಸ್‌ ಸಂಭ್ರಮದಲ್ಲಿ ʻಕಾಂತಾರʼ ಸಿನಿಮಾ ತಂಡ

    ರತನ್ ಟಾಟಾ ಅವರು ಈ ದೇಶ ಕಂಡ ಹೆಸರಾಂತ ಉದ್ಯಮಿ. ಅವರ ಕುರಿತು ಸಿನಿಮಾ ಮಾಡುವುದು, ಅದನ್ನು ಬೆಳ್ಳಿತೆರೆ ಮೇಲೆ ತರುವುದು ಎಲ್ಲರ ಹೆಮ್ಮೆ ಆಗಿದೆ. ರತನ್ ಟಾಟಾ ಅವರ ಕುರಿತು ಸಮಾಜಕ್ಕೆ ಗೊತ್ತಿರದ ಒಂದಷ್ಟು ವಿಶೇಷತೆಗಳನ್ನು ಈ ಸಿನಿಮಾದ ಮೂಲಕ ಹೇಳುವ ಉದ್ದೇಶವಿದೆ. ಸದ್ಯ ಸ್ಕ್ರಿಪ್ಟ್ ವರ್ಕ್ ಕೆಲಸ ಕೂಡ ಜಾರಿಯಲ್ಲಿದೆ. 2023ರ ನವೆಂಬರ್ ವೇಳೆ ಶೂಟಿಂಗ್ ಆರಂಭಿಸುವ ಕುರಿತು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಇನ್ನೂ ರತನ್ ಟಾಟಾ ಪಾತ್ರಕ್ಕೆ ಅಕ್ಷಯ್ ಕುಮಾರ್ ಅಥವಾ ತಮಿಳು ನಟ ಸೂರ್ಯ ಇಬ್ಬರಲ್ಲಿ ಒಬ್ಬರು ಈ ಪಾತ್ರ ಮಾಡಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಅದ್ಯಾವ ನಟ ರತನ್‌ ಟಾಟಾ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಹೊಂಬಾಳೆ ಬ್ಯಾನರ್ ಮುಂದಿನ ಚಿತ್ರಕ್ಕೆ `ಮಹಾನಟಿ’ ಕೀರ್ತಿ ಸುರೇಶ್ ನಾಯಕಿ

    ಹೊಂಬಾಳೆ ಬ್ಯಾನರ್ ಮುಂದಿನ ಚಿತ್ರಕ್ಕೆ `ಮಹಾನಟಿ’ ಕೀರ್ತಿ ಸುರೇಶ್ ನಾಯಕಿ

    ಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ `ಸರ್ಕಾರಿ ವಾರಿ ಪಾಟ’ ಚಿತ್ರದ ಸಕ್ಸಸ್ ನಂತರ ಪ್ರತಿಷ್ಠಿತ ಬ್ಯಾನರ್ ಹೊಂಬಾಳೆ ಬ್ಯಾನರ್‌ಗೆ ಕೀರ್ತಿ ಸುರೇಶ್ ಸಾಥ್ ನೀಡಿದ್ದಾರೆ. ಜತೆಗೆ ರಾಷ್ಟ್ರ ಪ್ರಶಸ್ತಿ ವಿಜೇತೆ ನಿರ್ದೇಶಕಿಯ ಡೈರೆಕ್ಷನ್‌ನಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಳ್ತಿದ್ದಾರೆ.

    ಸೌತ್ ಸಿನಿರಂಗದಲ್ಲಿ ಟಾಪ್ ನಟಿಮಣಿಯರಲ್ಲಿ ಒಬ್ಬರಾಗಿರುವ ಕೀರ್ತಿ ಸುರೇಶ್ ಸತತ ಸೋಲಿನಿಂದ ಕಂಗೆಟ್ಟಿದ್ದರು. ಈಗ `ಸರ್ಕಾರಿ ವಾರಿ ಪಾಟ’ ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇದೀಗ ಚಿತ್ರದ ಆಯ್ಕೆಯಲ್ಲೂ ಚ್ಯೂಸಿಯಾಗಿರುವ ಕೀರ್ತಿ ಸುರೇಶ್ ಸದ್ಯ ಹೊಂಬಾಳೆ ಬ್ಯಾನರ್ ನಿರ್ಮಾಣ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಇದನ್ನೂ ಓದಿ:ಸೋನು ಶ್ರೀನಿವಾಸ್ ಗೌಡಗೆ ಟ್ರೋಲ್ ಆಗಿ ಫೇಮಸ್ ಆಗುವ ಆಸೆ: ಉದಯ್ ಸೂರ್ಯ

    ರಾಷ್ಟ್ರ ವಿಜೇತೆ ಸುಧಾ ಕೊಂಗರ ನಿರ್ದೇಶನದ ಹೊಸ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಟಿಟೌನ್‌ನಲ್ಲಿ ಸದ್ದು ಮಾಡುತ್ತಿದೆ. ನಾಯಕ ಯಾರು ಎಂಬುದು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. `ಸೂರರೈ ಪೋಟ್ರು’ ಖ್ಯಾತಿಯ ನಿರ್ದೇಶಕಿ ಸುಧಾ ಕೊಂಗರ ಡೈರೆಕ್ಷನ್ ಕೀರ್ತಿ ಸುರೇಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]