Tag: surarai potru

  • ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯನ್ನೇ ಬಿಡಲಿಲ್ಲ ಬಾಡಿ ಶೇಮಿಂಗ್‌ ಭೂತ

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯನ್ನೇ ಬಿಡಲಿಲ್ಲ ಬಾಡಿ ಶೇಮಿಂಗ್‌ ಭೂತ

    ಕಾಲಿವುಡ್‌ನ `ಸೂರರೈ ಪೋಟ್ರು’ (Surarai Potru) ಚಿತ್ರದ ಮೂಲಕ ಗಮನ ಸೆಳೆದ ನಟಿ ಅಪರ್ಣಾ ಬಾಲಮುರಳಿ(Aparna Balamurali) ಮತ್ತೆ ಸುದ್ದಿಯಲ್ಲಿದ್ದಾರೆ. `ಸೂರರೈ ಪೋಟ್ರು’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯ ಗರಿ (National Award Winner) ಮುಡಿಗೇರಿಸಿಕೊಂಡಿದ್ದರು. ಈಗ ಬಾಡಿ ಶೇಮಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ದಪ್ಪಗಾಗಿದ್ದಾರೆ ಎಂದು ಟ್ರೋಲ್ ಮಾಡಿದವರಿಗೆ ಖಡಕ್ ಆಗಿ ನಟಿ ತಿರುಗೇಟು ನೀಡಿದ್ದಾರೆ.

    ತೆಲುಗು ಮತ್ತು ತಮಿಳು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟಿ ಅಪರ್ಣಾ ಬಾಲಮುರಳಿ ಅವರು ಸುಧಾ ಕೊಂಗರ ನಿರ್ದೇಶನದ `ಸೂರರೈ ಪೋಟ್ರು’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಬಾಚಿಕೊಂಡರು. ಸೂರ್ಯ ಅವರ ಪತ್ನಿಯ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದರು. ಈಗ ಸಾಲು ಸಾಲು ಚಿತ್ರಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.

    ಇನ್ನು ಮೊದಲಿಂದಲೂ ಗುಂಡಗಿದ್ದ ನಟಿ ಅಪರ್ಣಾ ಈಗ ಮತ್ತಷ್ಟು ದಪ್ಪಗಾಗಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಬಾಡಿ ಶೇಮಿಂಗ್ ಕಾಟ ಶುರುವಾಗಿದೆ. ಇತ್ತೀಚೆಗೆ `ನೀತಂ ಒರು ವಾನಂ’ ಅಪರ್ಣಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ. ನಟಿಯ ಹುಟ್ಟುಹಬ್ಬ ಸಂದರ್ಭದಲ್ಲಿ ಲಂಗ ದಾವಣಿ ಲುಕ್‌ನಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿರುವ ಪೋಸ್ಟರ್‌ವೊಂದನ್ನ ರಿಲೀಸ್ ಮಾಡಲಾಗಿತ್ತು. ಅಪರ್ಣಾ ಲುಕ್ ನೋಡಿ ಕೆಲ ನೆಟ್ಟಿಗರು, ಅದೆಷ್ಟು ದಪ್ಪಗಾಗಿದ್ದೀರಾ ನೀವು ಬರೀ ತಾಯಿಯ ಪಾತ್ರಕ್ಕೆ ಲಾಯಕ್ಕು ಎಂದು ನಟಿಗೆ ಟೀಕೆ ಮಾಡಿದ್ದಾರೆ. ಅವರ ಫೋಟೋಗಳನ್ನ ಕೂಟ ಟ್ರೋಲ್ ಮಾಡಿದ್ದಾರೆ. ಇದನ್ನೂ ಓದಿ:‘ಮೀಟು’ ಅನ್ನೋದು ಕಾಮನ್ ಆಗಿದೆ, ಊರು ಅಂದ್ಮೇಲೆ ಸಮಸ್ಯೆ ಇರುತ್ತೆ: ನಿರ್ದೇಶಕ ಶಶಾಂಕ್

    ಇದೀಗ ಟ್ರೋಲಿಗರಿಗೆ ನಟಿ ಅಪರ್ಣಾ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ದೇಹದ ತೂಕಕ್ಕೂ ಟ್ಯಾಲೆಂಟ್‌ಗೂ ಯಾವುದೇ ಸಂಬಂಧವಿಲ್ಲ. ದೇಹದಲ್ಲಿನ ಕೆಲ ಸಮಸ್ಯೆಗಳಿಂದ ವ್ಯಕ್ತಿಯ ತೂಕ ಹೆಚ್ಚಿಸುತ್ತದೆ. ನನಗೆ ತಾಯಿ ಪಾತ್ರ ಮಾಡುವಷ್ಟು ವಯಸ್ಸಾಗಿಲ್ಲ. ತೆಳ್ಳಗಿರುವುದು ನಟಿಯಾಗಲು ಇರಬೇಕಾದ ಅರ್ಹತೆಗಳಲ್ಲಿ ಒಂದಲ್ಲ ಎಂದು ಅಪರ್ಣಾ ತಿರುಗೇಟು ನೀಡಿದ್ದಾರೆ. ನಟಿಯ ಪ್ರತಿಕ್ರಿಯೆ ಅಭಿಮಾನಿಗಳ  ಮೆಚ್ಚುಗೆಗೆ ಪಾತ್ರವಾಗಿದೆ.

    Live Tv
    [brid partner=56869869 player=32851 video=960834 autoplay=true]

  • 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ಅತ್ಯುತ್ತಮ ಚಲನಚಿತ್ರ ʻಸೂರರೈ ಪೊಟ್ರುʼ

    68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ಅತ್ಯುತ್ತಮ ಚಲನಚಿತ್ರ ʻಸೂರರೈ ಪೊಟ್ರುʼ

    2020ನೇ ಸಾಲಿನ ಸಿನಿಮಾಗಳಿಗೆ ಇಂದು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 68ನೇ ನ್ಯಾಷನಲ್ ಫಿಲ್ಮ್ಂ ಫೆಸ್ಟಿವಲ್‌ಗೆ 30 ಭಾಷೆಗಳಲ್ಲಿ 400ಕ್ಕೂ ಅಧಿಕ ಸಿನಿಮಾಗಳ ಅರ್ಜಿ ಸಲ್ಲಿಸಿದ್ದವು. ಇಂದು ನವದೆಹಲಿಯಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    1954ರಿಂದ ರಾಷ್ಟ್ರ ಪ್ರಶಸ್ತಿ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಈಗ 68ನೇ ನ್ಯಾಷನಲ್ ಫಿಲ್ಮ್ಂ ಫೆಸ್ಟಿವಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಭಾರತ ಸರ್ಕಾರವು ಚಲನಚಿತ್ರೋತ್ಸವ ಜವಬ್ದಾರಿ ಹೊತ್ತುಕೊಂಡಿದೆ. ಕೋವಿಡ್‌ನಿಂದ ರಾಷ್ಟ್ರ ಪ್ರಶಸ್ತಿ ಕಾರ್ಯವನ್ನ ಮುಂದೂಡಲಾಗಿತ್ತು. 2020ರ ಸಾಲಿನಲ್ಲಿ ಸಾಧನೆ ಮಾಡಿದ ಪ್ರತಿಭೆಗೆ ಗುರುತಿಸಿ, ಗೌರವಿಸಲಾಗಿದೆ. ಇದನ್ನೂ ಓದಿ: Breaking- 68ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ : ಡೊಳ್ಳು, ತಲೆದಂಡ, ನಾದದ ನವನೀತ ಸಿನಿಮಾಗಳಿಗೆ ರಾಷ್ಟ್ರ ಗರಿ

    ಚಲನಚಿತ್ರ ನಿರ್ಮಾಪಕರಾದ ವಿಪುಲ್ ಶಾ ಮತ್ತು ಅನುರಾಗ್ ಠಾಕೂರ್ ಅವರನ್ನ ಭೇಟಿ ಮಾಡಿ, 68ನೇ ರಾಷ್ಟ್ರ ಪ್ರಶಸ್ತಿಯ ಕುರಿತು ವರದಿ ಸಲ್ಲಿಸಲಾಯಿತು. ಯಾರಿಗೆಲ್ಲಾ ರಾಷ್ಟ್ರ ಪ್ರಶಸ್ತಿ ಬಂದಿದೆ. ಈ ಕುರಿತ ಡಿಟೈಲ್ಸ್ ಇಲ್ಲಿದೆ.

    ಅತ್ಯುತ್ತಮ ಚಲನಚಿತ್ರ: ಸೂರರೈ ಪೋಟ್ರು

    ಅತ್ಯುತ್ತಮ ನಿರ್ದೇಶಕ: ಸಚಿ, ಅಯ್ಯಪ್ಪನಂ ಕೊಶಿಯಮ್

    ಅತ್ಯುತ್ತಮ ಮನರಂಜನೆ ಚಿತ್ರ: ತಾನ್ಹಾಜಿ

    ಅತ್ಯುತ್ತಮ ನಟ: ಸೂರ್ಯ (ಸೂರರೈ ಪೋಟ್ರು)
    ಅಜಯ್ ದೇವಗನ್ ( ತಾನ್ಹಾಜಿ)

    ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ( ಸೂರರೈ ಪೋಟ್ರು)

    ಅತ್ಯುತ್ತಮ ಪೋಷಕ ನಟಿ: ಬಿಜು ಮೆನನ್( ಅಯ್ಯಪ್ಪನಂ ಕೋಶಿಯಂ)

    Live Tv
    [brid partner=56869869 player=32851 video=960834 autoplay=true]

  • ʻಹೊಂಬಾಳೆ ಫಿಲ್ಮ್ಸ್‌ʼ ಹೊಸ ಸಿನಿಮಾ ಅನೌನ್ಸ್: ಭರ್ಜರಿ ಅವಕಾಶ ಗಿಟ್ಟಿಸಿಕೊಂಡ `ಸೂರರೈ ಪೋಟ್ರು’ ನಿರ್ದೇಶಕಿ

    ʻಹೊಂಬಾಳೆ ಫಿಲ್ಮ್ಸ್‌ʼ ಹೊಸ ಸಿನಿಮಾ ಅನೌನ್ಸ್: ಭರ್ಜರಿ ಅವಕಾಶ ಗಿಟ್ಟಿಸಿಕೊಂಡ `ಸೂರರೈ ಪೋಟ್ರು’ ನಿರ್ದೇಶಕಿ

    ದೇಶಾದ್ಯಂತ ಸಂಚಲನ ಮೂಡಿಸುತ್ತಿರುವ `ಹೊಂಬಾಳೆ ಫಿಲ್ಮ್ಸ್‌ʼ ಸಂಸ್ಥೆ `ಕೆಜಿಎಫ್ ಚಾಪ್ಟರ್ 2′ ಯಶಸ್ಸಿನಿಂದ ಸದ್ಯ ಭಾರೀ ಸುದ್ದಿ ಮಾಡ್ತಿದೆ. ಹೀಗೆ ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡ್ತಿರೋ ಹೊಂಬಾಳೆ ಬ್ಯಾನರ್‌ನಿಂದ ನಿರ್ದೇಶಕಿ ಸುಧಾ ಕೊಂಗರ ಅವರಿಗೆ ಚಿತ್ರ ಮಾಡುವ ಅವಕಾಶ ಸಿಕ್ಕಿದೆ. ಈ ಬಗ್ಗೆ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.

    ಸಿನಿಮಾರಂಗದಲ್ಲಿ ಮೈಲಿಗಲ್ಲು ನಿರ್ಮಾಣ ಮಾಡಿರುವ ಸಂಸ್ಥೆಯಿಂದ ಅನೇಕ ಚಿತ್ರಗಳು ನಿರ್ಮಾಣವಾಗುತ್ತಿದೆ. ಈಗ ಚಿತ್ರ ಕೂಡ ಅನೌನ್ಸ್ ಮಾಡಲಾಗಿದೆ. ಮತ್ತೊಂದು ವಿಶೇಷ ಅಂದ್ರೆ, ಈ ಬಾರಿ ʻಹೊಂಬಾಳೆ ಫಿಲ್ಮ್ಸ್‌ʼ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ದೇಶನ ಮಾಡುವ ಅವಕಾಶವನ್ನು ಕಾಲಿವುಡ್ ಲೇಡಿ ನಿರ್ದೇಶಕಿ ಸುಧಾ ಕೊಂಗರ ಗಿಟ್ಟಿಸಿಕೊಂಡಿದ್ದಾರೆ.

    ನಿರ್ದೇಶಕಿ ಸುಧಾ ಕೊಂಗರ ಅವರು ಮೂಲತಃ ಆಂಧ್ರ ಪ್ರದೇಶದವರಾಗಿದ್ದು, ಅವರು ತಮಿಳು ಸಿನಿಮಾರಂಗದಲ್ಲಿ ಸಾಧನೆ ಮಾಡಿದ್ದಾರೆ. ಡಿಫರೆಂಟ್ ಸಬ್‌ಜೆಕ್ಟ್ಗಳನ್ನ ತೆರೆಯ ಮೇಲೆ ತೋರಿಸುವಲ್ಲಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ಸೂರ್ಯ ನಟನೆಯ `ಸೂರರೈ ಪೋಟ್ರು’ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು. ಇದನ್ನೂ ಓದಿ:ನನ್ನಿಂದ ತಪ್ಪಾಯ್ತು – ತಂಬಾಕು ಬ್ರ್ಯಾಂಡ್ ಅಂಬಾಸಿಡರ್ ಪಟ್ಟ ತ್ಯಜಿಸಿದ ಅಕ್ಷಯ್

    ಕಾಲಿವುಡ್ ಪ್ರತಿಭಾವಂತ ನಿರ್ದೇಶಕಿ ಸುಧಾ ಕೊಂಗರ ಅವರ ಕೆಲಸ ಗುರುತಿಸಿ ಇದೀಗ ಹೊಂಬಾಳೆ ಸಂಸ್ಥೆಯಡಿ ನಿರ್ದೇಶನ ಮಾಡುವ ಅವಕಾಶವನ್ನು ಕೊಟ್ಟಿದ್ದಾರೆ. ಹಾಗಂತ ಅಧಿಕೃತವಾಗಿ `ಹೊಂಬಾಳೆ ಫಿಲ್ಮ್ಸ್‌ʼ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಸುಧಾ ಕೊಂಗರ ಅವರಿಗೆ `ಹೊಂಬಾಳೆ ಫಿಲ್ಮ್ಸ್‌’ ಮೂಲಕ ವಿಜಯ್ ಕಿರಗಂದೂರು ಸಾಥ್‌ ನೀಡಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.