Tag: Surapur

  • ಯಾದಗಿರಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು – ಪಾಕಿಸ್ತಾನಕ್ಕೆ ಕಾಲ್!

    ಯಾದಗಿರಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು – ಪಾಕಿಸ್ತಾನಕ್ಕೆ ಕಾಲ್!

    ಯಾದಗಿರಿ: ನಗರದಲ್ಲಿ ಮತ್ತೆ ಸ್ಯಾಟಲೈಟ್ ಪೋನ್ (Satellite Phone) ಸದ್ದು ಮಾಡಿದೆ. ಯಾದಗಿರಿ ಜಿಲ್ಲೆಯ ಸುರಪುರ (Surapura) ತಾಲೂಕಿನ ಶೆಳ್ಳಗಿಯಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಮೂಲಕ ಪಾಕಿಸ್ತಾನಕ್ಕೆ (Pakistan) ಕರೆ ಹೋಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಸೆಪ್ಟೆಂಬರ್ 17 ರಂದು ಶೆಳ್ಳಗಿ ಗ್ರಾಮದ ಕೃಷಿ ಪ್ರದೇಶವೊಂದರಿಂದ ನಸುಕಿನ ಜಾವ 3 ಗಂಟೆ ಸುಮಾರಿಗೆ ಕರೆ ಹೋಗಿದೆ. ಸೆಪ್ಟೆಂಬರ್ 17 ರಂದು ಪಾಕ್‌ಗೆ ಕರೆ ಹೋಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ದಿನದಂದೇ ಸ್ಯಾಟಲೈಟ್ ಪೋನ್ ಕರೆ ಹೋಗಿದ್ದು, ಚೀನಾ ನಿರ್ಮಿತ ಸ್ಯಾಟಲೈಟ್ ಪೋನ್‌ನಿಂದ ಕರೆ ಮಾಡಲಾಗಿದೆ. ಸೆಪ್ಟೆಂಬರ್ 19 ರಂದು ಈ ಬಗ್ಗೆ ಕೇಂದ್ರಕ್ಕೆ ಮಾಹಿತಿ ಸಿಕ್ಕಿದ್ದು, ಜಿಪಿಎಸ್ ಲೊಕೇಶನ್ ಆಧಾರದ ಮೇಲೆ ಕೇಂದ್ರ ಸಂಸ್ಥೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    2 ವರ್ಷದ ಹಿಂದೆ ಯಾದಗಿರಿ ತಾಲೂಕಿನ ಹೆಡಗಿಮದ್ರಾ ಗ್ರಾಮದ ಹೊರವಲಯದಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಹೋಗಿತ್ತು. 2021 ಏಪ್ರಿಲ್ ತಿಂಗಳಲ್ಲಿ ಹೆಡಗಿಮದ್ರಾದಿಂದ ಪಾಕ್‌ಗೆ ಸ್ಯಾಟಲೈಟ್ ಕರೆ ಮಾಡಲಾಗಿತ್ತು. ಅದೇ ರೀತಿ 2014 ರಲ್ಲಿ ಮೊಸ್ಟ್ ವಾಂಟೆಡ್ ಉಗ್ರರು ಯಾದಗಿರಿಯಲ್ಲಿ ಅಡಗಿದ್ದರು. 2014 ರಲ್ಲಿ ಮುಂಬೈ ಹಾಗೂ ಹೈದರಾಬಾದ್‌ನ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಯಾದಗಿರಿಗೆ ಭೇಟಿ ನೀಡಿದ್ದರು. ಇದನ್ನೂ ಓದಿ: ಹೊಸ ವರ್ಷಾಚರಣೆ – ಬ್ರಿಗೇಡ್‌ ರಸ್ತೆಯಲ್ಲಿ ಜೋಡಿಗಳಿಗೆ ಪ್ರತ್ಯೇಕ ಮಾರ್ಗ

    ಮಧ್ಯಪ್ರದೇಶ ಖಂಡ್ವಾ ಜೈಲಿನಿಂದ ತಪ್ಪಿಸಿಕೊಂಡಿದ್ದ ಸಿಮಿ ಉಗ್ರ ಮಹಿಬೂಬ ಗುಡ್ಡು ಸೇರಿದಂತೆ ಕೆಲವರು ಯಾದಗಿರಿಯಲ್ಲಿ ಅಡಗಿದ್ದರು. ಈಗ ಯಾದಗಿರಿಯಿಂದ ಮತ್ತೆ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಹೋಗಿರುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಂಸತ್‌ ಸ್ಮೋಕ್‌ ಬಾಂಬ್‌ ಕೇಸ್‌ – ಟಿಎಂಸಿ ಶಾಸಕನ ಜೊತೆ ಆರೋಪಿ – ಫೋಟೋ ಹರಿಬಿಟ್ಟ ಬಿಜೆಪಿ

  • 105ರ ಇಳಿವಯಸ್ಸಿನಲ್ಲೂ ಹುರುಪಿನಿಂದ ಮತ ಚಲಾಯಿಸಿದ ಶತಾಯುಷಿ

    105ರ ಇಳಿವಯಸ್ಸಿನಲ್ಲೂ ಹುರುಪಿನಿಂದ ಮತ ಚಲಾಯಿಸಿದ ಶತಾಯುಷಿ

    ಯಾದಗಿರಿ: ಸುರಪುರ (Surapur) ತಾಲೂಕಿನ ನಗನೂರಿನಲ್ಲಿ 105 ವರ್ಷದ ಅಜ್ಜಿಯೊಬ್ಬರು ಹುರುಪಿನಿಂದ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದ್ದಾರೆ.

    ದೇವಕ್ಕಮ್ಮ ಸಿದ್ದರಾಮರಡ್ಡಿ (105) ಎಂಬ ಅಜ್ಜಿ, ಮೊಮ್ಮಗನೊಂದಿಗೆ ಕಾರಿನಲ್ಲಿ ಬಂದು ಮತದಾನ (Vote) ಮಾಡಿದ್ದಾರೆ. ಈ ಮೂಲಕ ಮತದಾನಕ್ಕೆ ನಿರುತ್ಸಾಹ ತೋರುವ ಯುವ ಜನರಿಗೆ ಮಾದರಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ (Election) ವಯಸ್ಸಾದವರಿಗೆ ಮನೆಯಿಂದಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟತ್ತು. ಆದರೂ ಸಹ ಅಜ್ಜಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿ ತಮ್ಮ ಗಟ್ಟಿತನವನ್ನು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

  • ಬಿಜೆಪಿ ಶಾಸಕನ ಗೆಲುವಿಗೆ ವಿಚಿತ್ರ ಹರಕೆ – 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ ಫ್ಯಾನ್ಸ್

    ಬಿಜೆಪಿ ಶಾಸಕನ ಗೆಲುವಿಗೆ ವಿಚಿತ್ರ ಹರಕೆ – 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ ಫ್ಯಾನ್ಸ್

    ಯಾದಗಿರಿ: ಬಿಜೆಪಿ (BJP) ಶಾಸಕ ರಾಜುಗೌಡ (Raju Gowda) ಚುನಾವಣೆಯಲ್ಲಿ (Election) ಗೆಲ್ಲಬೇಕು ಎಂದು ಅಭಿಮಾನಿಗಳಿಬ್ಬರು ವಿಚಿತ್ರ ಹರಕೆ ಒಪ್ಪಿಸಿದ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ.

    ಸುಡುವ ಬಿಸಿಲನ್ನು ಲೆಕ್ಕಿಸದೆ ಅಭಿಮಾನಿಗಳಿಬ್ಬರು ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ. ಸುರಪುರ (Surapur) ಮತಕ್ಷೇತ್ರದ ಶಾಸಕ ರಾಜುಗೌಡ ಮತ್ತೊಮ್ಮೆ ಗೆದ್ದು ಬರಲಿ ಎಂದು ಕರ್ನಾಳ ಗ್ರಾಮದ ಮಲ್ಲನಗೌಡ ಹಾಗೂ ಭೀಮಣ್ಣ ಎಂಬ ಇಬ್ಬರು ಅಭಿಮಾನಿಗಳು ಗ್ರಾಮದಿಂದ ಸುರಪುರ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿಕೊಂಡು ಬಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಬಿಎಸ್‌ವೈ ಕಿಡಿ

    ನಂತರ ಅಭಿಮಾನಿಗಳು ದೇವಾಲಯದಲ್ಲಿ ತಮ್ಮ ನಾಯಕನ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅಭಿಮಾನಿಗಳು ಶಾಸಕ ರಾಜುಗೌಡ ಅವರ ಪೋಟೋ ಹಿಡಿದು ಅಭಿಮಾನ ಮೆರೆದಿದ್ದಾರೆ.

    ಹರಕೆ ಹೊತ್ತಿದ್ದ ಅಭಿಮಾನಿ ಮಲ್ಲನಗೌಡ ಸುದ್ದಿಗಾರೊಂದಿಗೆ ಮಾತನಾಡಿ, ಸುರಪುರ ಮತಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ರಾಜುಗೌಡ ಮತ್ತೊಮ್ಮೆ ಜನರಿಂದ ಆರಿಸಿ ಬರಬೇಕೆಂದು ಸಂಕಲ್ಪ ಮಾಡಿದ್ದೇವೆ. ಅವರು ಗೆದ್ದು ಬಂದ ನಂತರ ಮತ್ತೊಮ್ಮೆ ದೀರ್ಘದಂಡ ನಮಸ್ಕಾರ ಹಾಕುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಚುನಾವಣಾ ಪ್ರಚಾರಕ್ಕೆ ಅಮೆರಿಕಾ, ರಷ್ಯಾ ಪ್ರೆಸಿಡೆಂಟ್‍ನ್ನು ಕರ್ಕೊಂಡು ಬರಲಿ: ಹೆಚ್‍ಡಿ ರೇವಣ್ಣ ಟಾಂಗ್

  • ಹರಕೆಯ ನೆಪದಲ್ಲಿ ಮಹಿಳೆಯ ಶೋಷಣೆ – ದೇಹಕ್ಕೆ ಬೇವಿನ ಸೊಪ್ಪು ಕಟ್ಟಿ ಮೆರವಣಿಗೆ

    ಹರಕೆಯ ನೆಪದಲ್ಲಿ ಮಹಿಳೆಯ ಶೋಷಣೆ – ದೇಹಕ್ಕೆ ಬೇವಿನ ಸೊಪ್ಪು ಕಟ್ಟಿ ಮೆರವಣಿಗೆ

    ಯಾದಗಿರಿ: ರಾಜ್ಯದಲ್ಲಿ ಮೌಢ್ಯ ನಿರ್ಬಂಧ ಕಾಯ್ದೆ ಜಾರಿಯಲ್ಲಿದ್ದರೂ ದೇವರ ಹೆಸರಿನಲ್ಲಿ ಅಮಾಯಕರ ಶೋಷಣೆ ಮಾತ್ರ ನಿಲ್ಲುತ್ತಿಲ್ಲ. ಅನಾಗರಿಕ ಅನಿಷ್ಟ ಪದ್ಧತಿಗಳು ಇನ್ನೂ ರಾಜ್ಯದಲ್ಲಿ ತಂಡವಾಡುತ್ತಿದೆ ಎನ್ನುವುದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ.

    ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಹೊರ ವಲಯದಲ್ಲಿ ಹರಕೆಯ ನೆಪದಲ್ಲಿ ಮಹಿಳೆಯರ ಬೆತ್ತಲೆ ಸೇವೆ ನಡೆದಿದ್ದು, ಇದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಮಂಗಳವಾರ ಹಿನ್ನೆಲೆ ಕೆಲ ಸಮುದಾಯಗಳು ದೇವರಿಗೆ ಹರಕೆ ತೀರಿಸುವ ನೆಪದಲ್ಲಿ ಹೆಣ್ಣುಮಕ್ಕಳ ಅರೇ ಬೆತ್ತಲೆ ಮಾಡಿ ದೇಹಕ್ಕೆ ಬೇವಿನ ಸೊಪ್ಪನ್ನು ಕಟ್ಟಿ ಉರಿ ಬಿಸಿಲಿನಲ್ಲಿ ರಸ್ತೆಯಲ್ಲಿ ಮೆರವಣಿಗೆ ಸಹ ಮಾಡಿದ್ದಾರೆ. ಇಷ್ಟೇ ಅಲ್ಲದೇ ಸಾರ್ವಜನಿಕವಾಗಿ ಪ್ರಾಣಿಬಲಿ ಸಹ ನಡೆಸಲಾಗಿದೆ.

    ಜಿಲ್ಲೆಯ ಖಾನಾಪುರ, ಗುಂಡಗುರ್ತಿ, ಬಿಜಾಸಪುರ ಸೇರಿದಂತೆ ಬಹುತೇಕ ಕಡೆ ಇದೆ ರೀತಿಯ ಆಚರಣೆ ನಡೆದಿದೆ. ಸುರಪುರ ಪಟ್ಟಣದಲ್ಲಿಯೆ ಇಂತಹ ಅನಿಷ್ಟ ಪದ್ಧತಿಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತ್ತಿರುವುದು ವಿಪರ್ಯಾಸದ ಸಂಗತಿ.

  • ಶೌಚಾಲಯದಲ್ಲಿ ಬಿಟ್ಟು ಹೋಗಿದ್ದ ಹಸುಗೂಸಿನ ರಕ್ಷಣೆ

    ಶೌಚಾಲಯದಲ್ಲಿ ಬಿಟ್ಟು ಹೋಗಿದ್ದ ಹಸುಗೂಸಿನ ರಕ್ಷಣೆ

    ಯಾದಗಿರಿ: ಶೌಚಾಲಯಲ್ಲಿ ಬಿಟ್ಟು ಹೋಗಿದ್ದ ನವಜಾತ ಶಿಶುವನ್ನ ರಕ್ಷಣೆ ಮಾಡಲಾಗಿದೆ. ಸುರಪುರ ನಗರದ ಕಬಡಗೇರಾ ಓಣಿಯ ರಾಜ್ ಅಹ್ಮದ್ ಮನೆಯ ಹತ್ತಿರದ ಸರ್ಕಾರಿ ಶೌಚಾಲಯದಯಲ್ಲಿ 2 ದಿನಗಳ ಹಿಂದೆ ಜನಿಸಿದ ನವಜಾತ ಗಂಡು ಮಗು ಪತ್ತೆಯಾಗಿತ್ತು.

    ಶಿಶುವನ್ನು ಸಾರ್ವಜನಿಕರು ಕಾಪಾಡಿ ತಮ್ಮ ಮನೆಯಲ್ಲಿ ಸಂರಕ್ಷಣೆ ಮಾಡಿದ್ದರು. ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪ ನಿರ್ದೇಕರಾದ ಪ್ರಭಾಕರ್ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ಮತ್ತು ಪೊಲೀಸರ ಜೊತೆ ಮಗುವನ್ನು ವಶಕ್ಕೆ ಪಡೆದಿದ್ದಾರೆ.

    ಸದ್ಯ ಮಗುವಿಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ನಿಯಮಾನುಸಾರ ಮಗುವನ್ನು ಕಲಬುರಗಿಯ ಅಮೂಲ್ಯ ಶಿಶು ಗೃಹಕ್ಕೆ ಕಳುಹಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಮಕ್ಕಳ ರಕ್ಷಣಾ ಇಲಾಖೆಯವರು ತಿಳಿಸಿದ್ದಾರೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.