Tag: Suraj Rewanna

  • ಎರಡು ರಾಷ್ಟ್ರೀಯ ಪಕ್ಷಗಳು ನನ್ನ ಹೆಸರಿನ ವ್ಯಕ್ತಿಯಿಂದ ನಾಮಪತ್ರ ಹಾಕಿಸಿವೆ: ರೇವಣ್ಣ

    ಎರಡು ರಾಷ್ಟ್ರೀಯ ಪಕ್ಷಗಳು ನನ್ನ ಹೆಸರಿನ ವ್ಯಕ್ತಿಯಿಂದ ನಾಮಪತ್ರ ಹಾಕಿಸಿವೆ: ರೇವಣ್ಣ

    ಹಾಸನ: ಎರಡು ರಾಷ್ಟ್ರೀಯ ಪಕ್ಷಗಳು ನನ್ನ ಹೆಸರಿನ ವ್ಯಕ್ತಿಯಿಂದ ನಾಮಪತ್ರ ಹಾಕಿಸಿವೆ. ನಾವು ಅಷ್ಟೊಂದು ಫೇಮಸ್ ಆಗಿದ್ದೀವಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಗರಂ ಆಗಿದ್ದಾರೆ.

    bjp - congress

    ಎಂಎಲ್‍ಸಿ ಚುನಾವಣೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಜೆಡಿಎಸ್ ಗೆ ಅವಕಾಶ ಕೊಡಬೇಕು. ಕಳೆದ ಬಾರಿ ತಪ್ಪು ಮಾಡಿದ್ದೇವೆ, ಈ ಬಾರಿ ಸರಿಮಾಡಿಕೊಳ್ಳಬೇಕು ಎಂದು ಸದಸ್ಯರು ತೀರ್ಮಾನ ಮಾಡಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ನನ್ನ ಹೆಸರಿನ ವ್ಯಕ್ತಿಯಿಂದ ನಾಮಪತ್ರ ಹಾಕಿಸಿವೆ. ನಾವು ಅಷ್ಟೊಂದು ಫೇಮಸ್ ಆಗಿದ್ದೀವಿ. ಎರಡು ಪಕ್ಷಗಳಿಗೆ ಈ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಇತಿಹಾಸದಲ್ಲಿಯೇ ಮೊದಲಬಾರಿಗೆ ಅಂಟಾರ್ಟಿಕಾದಲ್ಲಿ ಏರ್ಬಸ್ ವಿಮಾನ

    ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡುತ್ತೇನೆ. ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪ್ರತಿಸ್ಪರ್ಧಿ ಎಂದು ಹೇಳುತ್ತಿದ್ದಾರೆ. ಜೆಡಿಎಸ್ ಏನು ಎಂದು ಈಗ ಎಲ್ಲರಿಗೂ ಗೊತ್ತಾಗಿದೆ. ನಮ್ಮ ಬಗ್ಗೆ ಮಾತನಾಡಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂದು ಗೊತ್ತಲ್ಲ. ನಾವೇನು ಅದರ ಬಗ್ಗೆ ಮಾತನಾಡಲ್ಲ ಎಂದು ಟೀಕಿಸಿದರು.

    ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿನ ಕೆಲವು ಲೀಡರ್ ಗಳಿಗಿಲ್ಲ. ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಐದು ವರ್ಷ ಸಿಎಂ ಆಗಿ ಅಂದಿದ್ದರು. ಕುಮಾರಸ್ವಾಮಿ ಅವರಿಗೆ ಒಳ್ಳೆಯ ಹೆಸರು ಬರುತ್ತೆ ಎಂದು ಸರ್ಕಾರವನ್ನು ಬೀಳಿಸಿದರು. ಇದೇ ರೀತಿ ದೇವೇಗೌಡರನ್ನು ಪ್ರಧಾನಿ ಮಾಡಿದ್ದರು. 10 ತಿಂಗಳಿಗೆ ಕೆಳಗೆ ಇಳಿಸಿದ್ರು. ಕುಮಾರಸ್ವಾಮಿ ಅವರ ವಿರುದ್ಧ ಯಾವುದೋ ಬುಡುಬುಡಿಕೆ ಕೈಯಲ್ಲಿ ಸ್ಟೇಟ್ ಮೆಂಟ್ ಕೊಡಿಸುತ್ತಿದ್ದಾರೆ ಎಂದು ಕಿಡಿಕಾಡಿದರು.  ಇದನ್ನೂ ಓದಿ: ಪುನೀತ್‍ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ: ವಿಜಯ ರಾಘವೇಂದ್ರ

    ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ ಎಸಿಬಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾಮಕಾವಾಸ್ಥೆಗೆ ಮಾಡೋದು ಬೇಡ. ಚುನಾವಣೆ ಬಂದಿದೆ ಎಂದು ದಾಳಿ ಮಾಡೋದು ಬೇಡ. ಭ್ರಷ್ಟರ ಮೇಲೆ ದಾಳಿ ಮಾಡಲಿ ಎಂದು ಹೇಳಿದರು.

  • ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧೆ ಕಷ್ಟ ಅನಿಸುತ್ತಿಲ್ಲ: ಎಂ.ಶಂಕರ್

    ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧೆ ಕಷ್ಟ ಅನಿಸುತ್ತಿಲ್ಲ: ಎಂ.ಶಂಕರ್

    ಹಾಸನ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧೆ ಕಷ್ಟ ಎಂದು ಅನಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಎಂ.ಶಂಕರ್ ಮನಸ್ಥೈರ್ಯ ವ್ಯಕ್ತಪಡಿಸಿದರು.

    ಹಾಸನದಲ್ಲಿ ತಮ್ಮ ಸ್ಪರ್ಧೆ ಬಗ್ಗೆ ಖಚಿತಪಡಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ನಾನು ನವೆಂಬರ್ 23 ರಂದು ನಮ್ಮ ಕಾಂಗ್ರೆಸ್ ಪಕ್ಷದ ನಾಯಕರು, ಜಿಲ್ಲೆಯ ಜನರ ಜೊತೆ ನಾಮಪತ್ರ ಸಲ್ಲಿಸುತ್ತೇನೆ. ನಾನು 30 ವರ್ಷದಿಂದ ಕಾಂಗ್ರೆಸ್ ನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧೆ ಕಷ್ಟ ಅಂತ ಅನಿಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ:  ಹೊಸ ಕೃಷಿ ಕಾಯ್ದೆ ಬಗ್ಗೆ ರೈತರಿಗೆ ತಿಳಿ ಹೇಳುವಲ್ಲಿ ವಿಫಲರಾಗಿದ್ದೇವೆ: ಗೋವಿಂದ ಕಾರಜೋಳ

    ನಾವು ಬೂತ್ ಮಟ್ಟದಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ. ಕಾರ್ಯಕರ್ತರು, ಮುಖಂಡರು ನಮ್ಮ ಪರ ಗಟ್ಟಿಯಾಗಿ ನಿಲ್ಲುತ್ತಾರೆ. ಜನ ಕೂಡ ಬದಲಾವಣೆ ಬಯಸುತ್ತಿದ್ದಾರೆ. ದೇವೇಗೌಡರ ಕುಟುಂಬದ ವಿರುದ್ಧ ಯಾರಿಗೆ ಮತ ಹಾಕಬೇಕು ಎಂದು ಮತದಾರರು ತೀರ್ಮಾನಿಸುತ್ತಾರೆ. ಈ ಚುನಾವಣೆಯಲ್ಲಿ ಮತ ಹಾಕುವವರು ಸಾಮಾನ್ಯ ಜನರಲ್ಲ. ಈಗಾಗಲೇ ಚುನಾಯಿತರಾದ ಪ್ರತಿನಿಧಿಗಳು ಮತ ಚಲಾಯಿಸುತ್ತಾರೆ. ಅವರು ಯೋಚಿಸಿ ಮತ ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಹಾಸನ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಎಂಎಲ್‍ಸಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಹೆಚ್.ಡಿ.ರೇವಣ್ಣ ಅವರ ಮಗ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಿರುವುದರಿಂದ ಹಾಸನ ಕ್ಷೇತ್ರದ ಎಂಎಲ್‍ಸಿ ಚುನಾವಣೆ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:  ರಸ್ತೆಯಲ್ಲಿದ್ದ ಸಸಿ ಕಿತ್ತುಕೊಂಡು ನೆಟ್ಟಿಗರ ಕಣ್ಣಿಗೆ ಗುರಿಯಾದ ಮಹಿಳೆಯರು – ವೀಡಿಯೋ ವೈರಲ್

  • MLC ಚುನಾವಣೆಗೆ ಜೆಡಿಎಸ್‍ನಿಂದ ಭವಾನಿ ರೇವಣ್ಣ, ಸೂರಜ್ ರೇವಣ್ಣ ಬಹುತೇಕ ಫಿಕ್ಸ್

    MLC ಚುನಾವಣೆಗೆ ಜೆಡಿಎಸ್‍ನಿಂದ ಭವಾನಿ ರೇವಣ್ಣ, ಸೂರಜ್ ರೇವಣ್ಣ ಬಹುತೇಕ ಫಿಕ್ಸ್

    ಹಾಸನ: ಜೆಡಿಎಸ್ ತವರು ನೆಲ ಹಾಸನ ಜಿಲ್ಲೆಯಲ್ಲಿ ಈಗ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು, ಜೆಡಿಎಸ್ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಹಾಗೂ ಯುವ ನಾಯಕ ಸೂರಜ್ ರೇವಣ್ಣ ಹೆಸರು ರೇಸ್ ನಲ್ಲಿ ಮೊದಲಿದೆ.

    ನಿನ್ನೆ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಬಹುತೇಕರು ಭವಾನಿ ರೇವಣ್ಣ ಅವರಿಗೆ ಜೈ ಅಂದ್ರೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತ್ರ ದೇವೇಗೌಡರು ಯಾರನ್ನೇ ನಿಲ್ಲಿಸಿದ್ರು ನನ್ನ ಸಹಮತ ಎಂದರು. ಬೇಲೂರು ಶಾಸಕ ಲಿಂಗೇಶ್, ಸೇರಿದಂತೆ ಬಹುತೇಕ ಜೆಡಿಎಸ್ ಶಾಸಕರು, ಕಾರ್ಯಕರ್ತರು ಭವಾನಿ ರೇವಣ್ಣ ಸ್ಪರ್ಧೆ ಮಾಡಲಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಗವಂತನ ಮೇಲೆ ಕೋಪ ಬರುತ್ತಿದೆ: ಸಾಯಿ ಕುಮಾರ್

    ಈ ಮಧ್ಯೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಿರಿಯ ಪುತ್ರ ಡಾ.ಸೂರಜ್ ರೇವಣ್ಣ ಈ ಬಾರಿ ವಿಧಾನ ಪರಿಷತ್ ಕಣಕ್ಕೆ ಇಳಿಸುತ್ತಾರೆ ಎನ್ನುವ ಗುಸು ಗುಸು ಹೆಚ್ಚಾಗಿದ್ದು, ಒಂದು ವೇಳೆ ಸೂರಜ್ ರೇವಣ್ಣ ಕಣಕ್ಕಿಳಿದ್ರೆ ರೇವಣ್ಣ ಅವರ ಇಬ್ಬರು ಪುತ್ರರು ರಾಜ್ಯ ರಾಜಕೀಯಕ್ಕೆ ಪ್ರವೇಶಿಸಿದಂತೆ ಆಗುತ್ತೆ. ಈಗಾಗಲೇ ಪ್ರಜ್ವಲ್ ರೇವಣ್ಣ ಸಂಸದ ಪಟ್ಟದಲ್ಲಿರೋ ಕಾರಣ ಸೂರಜ್ ರೇವಣ್ಣ ಮಾತ್ರ ರಾಜ್ಯ ರಾಜಕೀಯಕ್ಕೆ ಪ್ರವೇಶ ಕೊಡಲು ವಿಧಾನ ಪರಿಷತ್ ದಾರಿಯಾಗಲಿದೆ ಎನ್ನುವ ಹಲವು ಲೆಕ್ಕಚಾರವಿದೆ. ಇನ್ನೂ ಈ ಬಗ್ಗೆ ಸೂರಜ್ ಅವರನ್ನು ಕೇಳಿದ್ರೆ, ನನಗಿಂತ ನನ್ನ ತಾಯಿ ಭವಾನಿ ರೇವಣ್ಣ ಅವರೇ ಅಭ್ಯರ್ಥಿ ಆಗಲಿ ಎಂಬ ಕೂಗು 80% ಹೆಚ್ಚಿದೆ. ಹೀಗಾಗಿ ಯಾರೇ ಸ್ಪರ್ಧೆ ಮಾಡಿದ್ರು ಸರಿ ಎಂದು ತನ್ನ ತಾಯಿಯ ಕಡೆ ಬೆರಳು ತೋರಿದ್ದಾರೆ.

    ಜೆಡಿಎಸ್ ನಲ್ಲಿ ಯಾರನ್ನ ಅಭ್ಯರ್ಥಿ ಮಾಡಬೇಕು ಎಂದರೂ ದೇವೇಗೌಡರ ಸಮ್ಮತಿ ಮತ್ತು ಅವರ ರಾಜಕೀಯ ಲೆಕ್ಕಾಚಾರವೇ ಅಂತಿಮ. ಹೀಗಾಗಿ ಯಾರು ಏನೇ ಹೇಳಿದ್ರು ದೇವೇಗೌಡರು ಏನು ನಿರ್ಧಾರ ಮಾಡ್ತಾರೆ ಮತ್ತು ಜಿಲ್ಲೆಯ ಜೆಡಿಎಸ್ ಸ್ಥಳೀಯ ನಾಯಕರು ಏನು ಒತ್ತಡ ಏರುತ್ತಾರೆ ಎನ್ನುವುದರ ಮೇಲೆ ಇದೆಲ್ಲಾ ಅವಲಂಬನೆ ಆಗಿದೆ. ಇದನ್ನೂ ಓದಿ: ಚಿನ್ನಾಭರಣ ಕಳವು ಮಾಡಿರುವುದಾಗಿ ಮಗಳ ವಿರುದ್ಧವೇ ದೂರು ಕೊಟ್ಟ ತಾಯಿ

    ಇದೆಲ್ಲಾ ಏನೇ ಇರಲಿ ಸದ್ಯದ ಬೆಳವಣಿಗೆ ನೋಡಿದ್ರೆ ಭವಾನಿ ರೇವಣ್ಣ ಅಥವಾ ಸೂರಜ್ ರೇವಣ್ಣ ಇವರಿಬ್ಬರಲ್ಲಿ ಒಬ್ಬರು ಜೆಡಿಎಸ್ ಪಕ್ಷದಿಂದ ಹಾಸನದ ಕಣಕ್ಕಿಳಿಯೋದು ಪಕ್ಕಾ ಅನ್ನುವಂತಿದೆ. ಒಂದು ವೇಳೆ ತಾಯಿ ಮಗ ಇಬ್ಬರಲ್ಲಿ ಯಾರೇ ರೇಸಿಗೆ ಇಳಿದ್ರು, ಹಾಸನ ವಿಧಾನ ಪರಿಷತ್ ಚುನಾವಣೆ ರಾಜ್ಯಮಟ್ಟದಲ್ಲಿ ಬಾರಿ ಕುತೂಹಲ ಕ್ಷೇತ್ರದಲ್ಲಿ ಒಂದಾಗೋದಂತು ನಿಜ.