Tag: Suraj Revanna Case

  • ನನಗ್ಯಾಕೆ ಪ್ರಶ್ನೆ ಕೇಳ್ತೀರಿ? ಸೂರಜ್ ರೇವಣ್ಣ ಬಗ್ಗೆ ನಾನು ಪ್ರತಿಕ್ರಿಯಿಸುವ ಅಗತ್ಯ ಇಲ್ಲ: ಹೆಚ್‍ಡಿಕೆ

    ನನಗ್ಯಾಕೆ ಪ್ರಶ್ನೆ ಕೇಳ್ತೀರಿ? ಸೂರಜ್ ರೇವಣ್ಣ ಬಗ್ಗೆ ನಾನು ಪ್ರತಿಕ್ರಿಯಿಸುವ ಅಗತ್ಯ ಇಲ್ಲ: ಹೆಚ್‍ಡಿಕೆ

    ಬೆಂಗಳೂರು: ಸೂರಜ್ ರೇವಣ್ಣ (Suraj Revanna Case) ವಿಚಾರವಾಗಿ ನನಗ್ಯಾಕೆ ಪ್ರಶ್ನೆ ಕೇಳ್ತೀರಿ? ನೀವು ನನಗೆ ಬೆದರಿಕೆ ಹಾಕುತ್ತಿದ್ದೀರಿ? ಈ ರೀತಿಯ ವಿಚಾರಗಳಿಗೆ ನಾನು ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ನನಗೆ ಯಾಕೆ ಈ ಬಗ್ಗೆ ಪ್ರಶ್ನೆ ಕೇಳ್ತೀರಾ? ಕಾನೂನು ಅದರ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದಾರೆ. ಇದನ್ನೂ ಓದಿ: ಇಳಿವಯಸ್ಸಲ್ಲೂ ದೇವೇಗೌಡರಿಗೆ ಕೊಡಬಾರದ ನೋವು ಕೊಡ್ತಿದ್ದಾರೆ: ಹೆಚ್‍ಡಿಕೆ

    ಚನ್ನಪಟ್ಟಣಕ್ಕೆ (Channapatna) ಭೇಟಿ ಹಾಗೂ ಅಭ್ಯರ್ಥಿ ಆಯ್ಕೆ ವಿಚಾರವಾಗಿ, ಯಾವ ಅಭ್ಯರ್ಥಿ ಬಗ್ಗೆಯೂ ಚರ್ಚೆ ಮಾಡಲ್ಲ. ನಿಧಾನವಾಗಿ ಆಯ್ಕೆ ಮಾಡೋಣ ನನಗೇನು ಆತುರ ಇಲ್ಲ ಎಂದಿದ್ದಾರೆ.

    ಡಿ.ಕೆ ಶಿವಕುಮಾರ್ ಚನ್ನಪಟ್ಟಣಕ್ಕೆ ಭೇಟಿಕೊಡುವ ವಿಚಾರವಾಗಿ, ಅವರನ್ನು ಹಿಡಿದುಕೊಂಡಿರುವವರು ಯಾರು? ಹೋದರೆ ತಪ್ಪೇನಿದೆ? ಅವರೊಬ್ಬ ಮಂತ್ರಿಗಳಿದ್ದಾರೆ, ಉಪಮುಖ್ಯಮಂತ್ರಿಗಳು ಬೇರೆ, ಅಲ್ಲದೇ ಡಿಫ್ಯಾಕ್ಟೊ ಚೀಫ್ ಮಿನಿಸ್ಟರ್ ಬೇರೆ. ಅವರನ್ನ ಹೋಗಬೇಡಿ ಅಂತ ಹೇಳೋಕೆ ಆಗುತ್ತಾ? ಚನ್ನಪಟ್ಟಣದ ಬಗ್ಗೆ ಈಗಲಾದ್ರೂ ಗಮನಹರಿಸಿದ್ದಕ್ಕೆ ಅವರಿಗೆ ಅಭಿನಂದಿಸೋಣ. ಇನ್ನೂ ಬೆಂಗಳೂರು ಗ್ರಾಮಾಂತರ ಸೋಲಿಗೆ ಚನ್ನಪಟ್ಟಣ ಗೆದ್ದು ಸೋಲು ತೀರಿಸುಕೊಳ್ಳುವ ವಿಚಾರವಾಗಿ, ಅವರು ರಾಜಕಾರಣ ಮಾಡಲಿ ಎಂದಿದ್ದಾರೆ.

    ಹೆಚ್‍ಎಂಟಿ ಕಂಪನಿಯ ವಿಚಾರವಾಗಿ, ಅದು ಅತ್ಯಂತ ಪ್ರತಿಷ್ಠಿತ ಉದ್ಯಮ. ಸಾವಿರಾರು ಕುಟುಂಬಗಳು ಇದರಿಂದ ಜೀವನ ನಡೆಸುತ್ತಿವೆ. ಅದನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿದ್ದಾರೆ. ಅದರ ಅಂಗ ಸಂಸ್ಥೆಗಳಿಗೆ ಒಂದು ತಿಂಗಳು ಸಮಯ ಕೊಟ್ಟಿದ್ದೇನೆ. ಒಂದು ಕಾಲದಲ್ಲಿ ಎನ್‍ಜಿಇಎಫ್, ಹೆಚ್‍ಎಂಟಿ, ಐಟಿಐ ಮುಂತಾದ ಕಂಪನಿಗಳಿಗೆ ಬಸ್‍ಗಳಲ್ಲಿ ಕೆಲಸಗಾರರು ಬರುತ್ತಿದ್ದರು. ಈ ಸರ್ಕಾರ ಇದಕ್ಕೆ (ಕಂಪನಿಗಳ ಪನರುಜ್ಜೀವನಕ್ಕೆ) ಸಹಕಾರ ಕೊಡುವ ನಂಬಿಕೆ ಇಲ್ಲ. ಸಾರ್ವಜನಿಕ ಉದ್ದಿಮೆಗಳ ಆಸ್ತಿ ಮಾರಾಟ ಮಾಡುವುದು ಅವರ ಜೇಬು ತುಂಬಿಸಿಕೊಳ್ಳುವುದನ್ನು ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗಣಿಗಾರಿಕೆಗೆ ಸಹಿ‌ ಹಾಕಿರೋದು ಸರ್ಕಾರದ ಸಂಸ್ಥೆ, ಅವರು ಕಿಕ್‌ಬ್ಯಾಕ್ ನೀಡಲ್ಲ: ರಾಜ್ಯ ಸರ್ಕಾರದ ವಿರುದ್ಧ ಸಿಟಿ ರವಿ ಕಿಡಿ

  • ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ – ಸಂತ್ರಸ್ತನಿಗಿಂದು ಬೆಂಗ್ಳೂರಲ್ಲಿ ಮೆಡಿಕಲ್‌ ಟೆಸ್ಟ್‌!

    ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ – ಸಂತ್ರಸ್ತನಿಗಿಂದು ಬೆಂಗ್ಳೂರಲ್ಲಿ ಮೆಡಿಕಲ್‌ ಟೆಸ್ಟ್‌!

    ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ (Suraj Revanna) ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ದೂರು ದಾಖಲಿಸಿರುವ ಸಂತ್ರಸ್ತ ಯುವಕನಿಗೆ ಭಾನುವಾರ (ಇಂದು) ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ (Bowring Hospital) ವೈದ್ಯಕೀಯ ಪರೀಕ್ಷೆ ನಡೆಯಲಿದೆ.

    ಶನಿವಾರ ತಡರಾತ್ರಿಯೇ ಸಂತ್ರಸ್ತನನ್ನು ಹಾಸನದಿಂದ ಬೌರಿಂಗ್‌ ಆಸ್ಪತ್ರೆಗೆ ಕರೆತಂದಿರುವ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ವೈದ್ಯಕೀಯ ಪರೀಕ್ಷೆಗೆ (Medical Test) ನಿರಾಕರಿಸಿದ ಹಿನ್ನೆಲೆ ಸಂತ್ರಸ್ತನ ಮನವಿ ಮೇರೆಗೆ ಬೆಂಗಳೂರಿನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಹೊಳೆನರಸೀಪುರ ಪೊಲೀಸರು ತಡರಾತ್ರಿ 2 ಗಂಟೆಗೆ ಸಂತ್ರಸ್ತ ಯುವಕನನ್ನು ಬೌರಿಂಗ್ ಆಸ್ಪತ್ರೆಗೆ ಕರೆತಂದಿದ್ದಾರೆ.

    ಸದ್ಯಕ್ಕೆ ಕೌನ್ಸೆಲಿಂಗ್‌ ಮುಗಿಸಿರುವ ಕರ್ತವ್ಯ ನಿರತ ವೈದ್ಯರು, ಮುಂದಿನ ಪರೀಕ್ಷೆಗಳಿಗೆ ಹಿರಿಯ ವೈದ್ಯರ ಆಗಮನಕ್ಕೆ ಕಾಯುತ್ತಿದ್ದಾರೆ. ಭಾನುವಾರ (ಇಂದು) ಬೆಳಗ್ಗೆ 10 ಗಂಟೆ ನಂತರ ವೈದ್ಯಕೀಯ ಪರೀಕ್ಷೆಯ ಬೆಳವಣಿಗೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಮೊದಲ ದಿನ ಕಳೆದ ದರ್ಶನ್‌ – ʻದಾಸʼನ ಜೈಲು ದಿನಚರಿ ಹೇಗಿದೆ?

    ಸಂತ್ರಸ್ತ ಲೈಂಗಿಕ ಕ್ರಿಯೆಗೆ ಸಮರ್ಥನಾಗಿದ್ದಾನಾ ಅನ್ನೋ ಪರೀಕ್ಷೆ ಇದಾಗಿದೆ. ಸದ್ಯ ಸಂತ್ರಸ್ತನಿಗೆ ರಕ್ತದೊತ್ತಡ, ಶುಗರ್, ಇಸಿಜಿ, ದೇಹದ ಮೇಲೆ ಕಚ್ಚಿರುವ ಕಲೆಗಳ ಬಗ್ಗೆ ತಪಾಸಣೆ ನಡೆಸಲಾಗಿದೆ. ಹಿರಿಯ ವೈದ್ಯರ ಸಮ್ಮುಖದಲ್ಲಿ ಲೈಂಗಿಕ ಕ್ರಿಯೆ ಸಾಮರ್ಥ್ಯ ಪರೀಕ್ಷೆ ನಡೆಲಿದೆ. ಹೊಳೆನರಸೀಪುರ ಪೊಲೀಸರು ಸ್ಥಳದಲ್ಲಿ ಇದ್ದಾರೆ ಎಂದು ಬೌರಿಂಗ್‌ ಆಸ್ಪತ್ರೆ ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ. ಇದನ್ನೂ ಓದಿ: Breaking: ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಬಂಧನ

    ರೇವಣ್ಣ ವಿರುದ್ಧ ಕೇಸ್‌:
    ಶನಿವಾರ ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ ) ಹಾಗೂ 506 (ಬೆದರಿಕೆ) ಅಡಿಯಲ್ಲಿ ಕೇಸ್‌ ದಾಖಲಾಗಿತ್ತು. ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದ ಸಂತ್ರಸ್ತ ಹಾಸನ ಎಸ್‌ಪಿಗೂ ದೂರಿನ ಪ್ರತಿಯನ್ನು ಇ-ಮೇಲ್ ಮಾಡಿದ್ದ. ಮೇಲ್ ಆಧರಿಸಿ ಸಂತ್ರಸ್ತನನ್ನ ಕರೆಸಿ ಮಾಹಿತಿ ಪಡೆದ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.

    ಸೂರಜ್‌ ಲಾಕ್‌ ಆಗಿದ್ದು ಹೇಗೆ?
    ಶನಿವಾರ ರಾತ್ರಿ ತನ್ನ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದ ಸಂತ್ರನ ವಿರುದ್ಧ ಪ್ರತಿದೂರು ನೀಡಲು ಸಂಜೆ 6 ಗಂಟೆ ವೇಳೆಗೆ ಹಾಸನದ ಸೆನ್‌ ಪೊಲೀಸ್‌ ಠಾಣೆಗೆ ತೆರಳಿದ್ದರು. ಅಲ್ಲಿಯೇ ಅವರನ್ನು ಬಂಧಿಸಿದ್ದ ಪೊಲೀಸರು ರಾತ್ರಿ ಸುಮಾರು 11:30ರ ವರೆಗೂ ವಿಚಾರಣೆ ನಡೆಸಿದ್ದರು. ಬಳಿಕ ಸೂರಜ್‌ ಜೊತೆಗೆ ನಿಗೂಢ ಸ್ಥಳಕ್ಕೆ ತೆರಳಿದ್ದ ಪೊಲೀಸರು ತಡರಾತ್ರಿ 1:30ರ ವರೆಗೂ ವಿಚಾರಣೆ ಮುಂದುವರಿಸಿದ್ದರು. ಪ್ರಕರಣದ ತನಿಖಾಧಿಕಾರಿ ಆಗಿರುವ ಸಕಲೇಶಪುರ ಡಿವೈಎಸ್‌ಪಿ ಪ್ರಮೋದ್‌ ಕುಮಾರ್‌ ಅವರು ಸೂರಜ್‌ ರೇವಣ್ಣ ಅವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದರು.