Tag: suraj nambiar

  • ಮದುವೆ ಬಳಿಕ ಹಾಟ್ ಲುಕ್‍ನಲ್ಲಿ ಕಾಣಿಸಿಕೊಂಡ ಮೌನಿ

    ಮದುವೆ ಬಳಿಕ ಹಾಟ್ ಲುಕ್‍ನಲ್ಲಿ ಕಾಣಿಸಿಕೊಂಡ ಮೌನಿ

    ಮುಂಬೈ: ಬಾಲಿವುಡ್ ಕಿರುತೆರೆ ನಾಗಿನ್ ಮೌನಿರಾಯ್ ಮದುವೆ ನಂತರ ಹಾಟ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

    ಪತಿ ಸೂರಜ್ ನಂಬಿಯಾರ್ ಅವರೊಂದಿಗೆ ಹನಿಮೂನ್‍ಗೆ ಕಾಶ್ಮೀರದ ಗುಲ್ಮಾರ್ಗ್‍ನಲ್ಲಿರುವ ಮೌನಿರಾಯ್ ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮೌನಿಯನ್ನು ನೋಡಿ ಫುಲ್ ಖುಷ್ ಆಗಿದ್ದಾರೆ.

     

    View this post on Instagram

     

    A post shared by mon (@imouniroy)

    ಇಂದು ಮೌನಿ ಪೂಲ್ ಬಳಿ ನಿಂತುಕೊಂಡಿದ್ದ ಹಾಟ್ ಫೋಟೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಚುಂಬನಗಳು ಸ್ನೋಫ್ಲೇಕ್‍ಗಳಾಗಿದ್ದರೆ ನಾನು ನಿಮಗೆ ಹಿಮಪಾತವನ್ನು ಕಳುಹಿಸುತ್ತೇನೆ ಎಂದು ಒಂದು ಪೋಸ್ಟ್ ಗೆ ಬರೆದುಕೊಂಡಿದ್ದಾರೆ. ಇದೇ ರೀತಿಯ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, ಬೇಬಿ, ಹೊರಗೆ ತಂಪಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕೊನೆಗೂ ನಮ್ಮ ಕನಸು ನನಸಾಗಿದೆ: ಆಲಿಯಾ ಹೀಗೆಂದಿದ್ದೇಕೆ?

    ಮೌನಿ ತನ್ನ ಮದುವೆಯಾದ ಬಳಿಕ, ಕೊನೆಗೂ ನಾನು ನನ್ನವನನ್ನು ಕಂಡುಕೊಂಡೆ. ಕೈ-ಕೈ ಹಿಡಿದು, ಕುಟುಂಬ ಮತ್ತು ಸ್ನೇಹಿತರ ಆಶೀರ್ವಾದ ಪಡೆದು ನಾವು ಮದುವೆಯಾಗಿದ್ದೇವೆ! ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಬೇಕು. ಸೂರಜ್ ಮತ್ತು ಮೌನಿ ಎಂದು ಮದುವೆಯಾದ ಬಳಿಕ ಮದುವೆ ಫೋಟೋ ಹಂಚಿಕೊಂಡಿದ್ದರು.

     

    View this post on Instagram

     

    A post shared by mon (@imouniroy)

    ಅದ್ಭುತವಾದ ಡ್ಯಾನ್ಸರ್ ಆಗಿರುವ ಮೌನಿ ಹಿಂದಿ ಕಿರುತೆರೆಯಲ್ಲಿ ಫುಲ್ ಫೇಮಸ್ ಆಗಿದ್ದು, ದೇವೊನ್ ಕೆ ದೇವ್ ಮಹಾದೇವ್, ಕಸ್ತೂರಿ, ಮತ್ತು ನಾಗಿನ್ ಸೀರಿಯಲ್ ಮೂಲಕ ಖ್ಯಾತಿಯನ್ನು ಪಡೆದುಕೊಂಡಿದ್ದರು. ಅದು ಅಲ್ಲದೇ ಅವರು ರಿಯಾಲಿಟಿ ಶೋ ಗಳಲ್ಲಿಯೂ ಭಾಗವಹಿಸಿದ್ದರು. ಇದನ್ನೂ ಓದಿ: ಇಂಟಿಮೇಟ್ ಸೀನ್ ಮಾಡಲು ರಣವೀರ್ ಅನುಮತಿ ಇತ್ತಾ? – ಖಡಕ್ ಉತ್ತರ ಕೊಟ್ಟ ದೀಪಿಕಾ

     

    View this post on Instagram

     

    A post shared by mon (@imouniroy)

    ಸಿನಿಮಾದಲ್ಲಿಯೂ ನಟಿಸಿರುವ ಇವರು, 2018ರ ಕ್ರೀಡೆಗೆ ಸಂಬಂಧಿಸಿದ ಸಿನಿಮಾ ‘ಗೋಲ್ಡ್’ ನಲ್ಲಿ ಅಕ್ಷಯ್ ಕುಮಾರ್ ಗೆ ಜೋಡಿಯಾಗಿ ನಟಿಸಿದ್ದಾರೆ. ‘ಮೇಡ್ ಇನ್ ಚೈನಾ’ ಸಿನಿಮಾದಲ್ಲಿ ರಾಜಕುಮಾರ್ ರಾವ್ ಜೊತೆ ನಟಿಸಿದ್ದಾರೆ. ಪ್ರಸ್ತುತ ಮೌನಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸಿದ್ದು, ಅದರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

  • ಸಂಗೀತ್ ಕಾರ್ಯಕ್ರಮದಲ್ಲಿ ಸೂರಜ್‍ ಜೊತೆ ಮೌನಿ ರಾಯ್ ಲಿಪ್‍ಲಾಕ್

    ಸಂಗೀತ್ ಕಾರ್ಯಕ್ರಮದಲ್ಲಿ ಸೂರಜ್‍ ಜೊತೆ ಮೌನಿ ರಾಯ್ ಲಿಪ್‍ಲಾಕ್

    ಮುಂಬೈ: ಕಳೆದ ರಾತ್ರಿ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಮೌನಿ ರಾಯ್ ಪತಿ ಸೂರಜ್ ನಂಬಿಯಾರ್‌ಗೆ ಲಿಪ್‍ಲಾಕ್ ಮಾಡಿದ್ದಾರೆ.

    ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ದಕ್ಷಿಣ ಭಾರತ ಮತ್ತು ಬಂಗಾಳಿ ಸಂಪ್ರದಾಯದಂತೆ ಗುರುವಾರ ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಳೆದ ರಾತ್ರಿ ಆಯೋಜಿಸಿದ ಸಂಗೀತ್ ಕಾರ್ಯಕ್ರಮದಲ್ಲಿ ನವ ಜೋಡಿ ಕುಣಿದು ಕುಪ್ಪಳಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ

     

    View this post on Instagram

     

    A post shared by Filmy_Gyaan (@filmy_gyaan1)

    ಸದ್ಯ ಸಂಗೀತ್ ಕಾರ್ಯಕ್ರಮದ ಕೆಲವು ವೀಡಿಯೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವೀಡಿಯೋ ಒಂದರಲ್ಲಿ ಮೌನಿರಾಯ್ ಹಾಗೂ ಸೂರಜ್ ನಂಬಿಯಾರ್ ಕೇಕ್ ಕತ್ತರಿಸುವ ಮುನ್ನ ಲಿಪ್‍ಲಾಕ್ ಮಾಡಿದ್ದಾರೆ. ಇನ್ನೂ ಈ ವೇಳೆ ಮೌನಿ ರಾಯ್ ಅವರು ಪಚ್ಚೆ ಆಭರಣ ಹಾಗೂ ಗೋಲ್ಡನ್ ಕಲರ್ ಲೆಹೆಂಗಾ ತೊಟ್ಟಿದ್ದರೆ, ಸೂರಜ್ ನಂಬಿಯಾರ್ ರಾಯಲ್ ನೀಲಿ ಶೆರ್ವಾನಿಯಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ: ಮದುವೆಗೂ ಮುನ್ನವೇ ವರನ ಜೊತೆಗಿರುವ ಫೋಟೋ ಶೇರ್ ಮಾಡಿದ ಮೌನಿ ರಾಯ್

    ಮತ್ತೊಂದು ವೀಡಿಯೋದಲ್ಲಿ ಮೌನಿ ರಾಯ್ ಅರ್ಜುನ್ ಬಿಜ್ಲಾನಿ, ರಾಹುಲ್, ಮನ್ಮೀತ್ ಸಿಂಗ್, ಪ್ರತೀಕ್ ಉಟೇಕರ್ ಮತ್ತು ಅಮಿತ್ ಕಪೂರ್ ಅವರೊಂದಿಗೆ ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದ ದೋಸ್ತಾನಾ ಸಿನಿಮಾದ ಫೇಮಸ್ ಸಾಂಗ್ ದೇಸಿ ಗರ್ಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿರಾಯ್

     

    View this post on Instagram

     

    A post shared by WeddingSaga (@wedding_reels77)

    ಇನ್ನೊಂದರಲ್ಲಿ ಮೌನಿ ರಾಯ್ ಪತಿ ಸೂರಜ್ ನಂಬಿಯಾರ್ ಅವರೊಂದಿಗೆ ಮಾರಿ-2 ಸಿನಿಮಾದ ರೌಡಿ ಬೇಬಿ ಹಾಡಿಗೆ ಟಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದಾರೆ. ಹೀಗೆ ಇನ್ನೂ ಹಲವಾರು ವೀಡಿಯೋಗಳು ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೆಂಗಾಲಿ ಸಂಪ್ರದಾಯ ಮದುವೆಯ ಫೋಟೋ ಶೇರ್ ಮಾಡಿದ ಮೌನಿ ರಾಯ್

  • ಬೆಂಗಾಲಿ ಸಂಪ್ರದಾಯ ಮದುವೆಯ ಫೋಟೋ ಶೇರ್ ಮಾಡಿದ ಮೌನಿ ರಾಯ್

    ಬೆಂಗಾಲಿ ಸಂಪ್ರದಾಯ ಮದುವೆಯ ಫೋಟೋ ಶೇರ್ ಮಾಡಿದ ಮೌನಿ ರಾಯ್

    ಮುಂಬೈ: ಬಾಲಿವುಡ್ ನಟಿ ಮೌನಿರಾಯ್ ತಮ್ಮ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಅವರೊಂದಿಗೆ ಗುರುವಾರ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಬೆಂಗಾಲಿ ಸಂಪ್ರದಾಯದ ಮದುವೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

    Mouni Roy

    ಮೌನಿರಾಯ್ ಅವರು ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಸೂರಜ್ ಅವರು ಬೆಂಗಳೂರಿನ ಮೂಲದವರಾಗಿದ್ದಾರೆ. ಅಲ್ಲದೇ ದುಬೈನಲ್ಲಿ ಬ್ಯಾಂಕರ್ ಹಾಗೂ ಉದ್ಯಮಿಯಾಗಿದ್ದಾರೆ. ಜನವರಿ 27ರಂದು ಮೌನಿರಾಯ್ ಅವರು ಬೆಳಗ್ಗೆ ಮಲಯಾಳಿ ಸಂಪ್ರದಾಯದಂತೆ ವಿವಾಹವಾಗಿದ್ದರು. ನಂತರ ಸಂಜೆ ಬಂಗಾಳಿ ಸಂಪ್ರದಾಯದ ಪ್ರಕಾರ ಮದುವೆಯಾದರು. ಇದೀಗ ಮೌನಿರಾಯ್ ಬಂಗಾಳಿ ಸಂಪ್ರದಾಯದ ವಿವಾಹದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಇಬ್ಬರೂ ಸಂಪ್ರದಾಯಿಕ ಉಡುಗೆಯಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋದಲ್ಲಿ ಸೂರಜ್ ಮೌನಿರಾಯ್ ಜೊತೆಗೆ ಕುಳಿತುಕೊಂಡಿರು, ಸಿಂಧೂರ ಇಡುತ್ತಿರುವ, ಚುಂಬಿಸುತ್ತಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿರಾಯ್

    Mouni Roy

    ಗೋವಾದ ಕ್ಯಾಂಡೋಲಿಮ್‍ನಲ್ಲಿರುವ ಹಿಲ್ಟನ್ ಗೋವಾ ರೆಸಾರ್ಟ್‍ನಲ್ಲಿ ಗುರುವಾರ ಬೆಳಗ್ಗೆ ಮಾಲಯಳಂ ಸಂಪ್ರದಾಯದಂತೆ ಸೂರಜ್ ನಂಬಿಯಾರ್ ಅವರೊಂದಿಗೆ ಮದುವೆಯಾಗಿದ್ದ ಮೌನಿ ರಾಯ್ ಅವರು ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಫೋಟೋದಲ್ಲಿ ಮೌನಿರಾಯ್ ಅವರು ಕೆಂಪು ಮತ್ತು ಚಿನ್ನದ ಕಸೂತಿ ಹೊಂದಿರುವ ಬಿಳಿ ಸೀರೆ ಮತ್ತು ಕಾಂಟ್ರಾಸ್ಟ್ ಕೆಂಪು ಕುಪ್ಪಸವನ್ನು ಧರಿಸಿದ್ದು, ದಕ್ಷಿಣ ಭಾರತದ ಸಂಪ್ರದಾಯಿಕ ಆಭರಣಗಳಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಮದುವೆಗೂ ಮುನ್ನವೇ ವರನ ಜೊತೆಗಿರುವ ಫೋಟೋ ಶೇರ್ ಮಾಡಿದ ಮೌನಿ ರಾಯ್

     

    View this post on Instagram

     

    A post shared by mon (@imouniroy)

    ಮೌನಿ ರಾಯ್ ಅವರು ಮೊದಲ ಬಾರಿಗೆ ಸೂರಜ್ ನಂಬಿಯಾರ್ ಅವರನ್ನು ದುಬೈನಲ್ಲಿ ಭೇಟಿಯಾದರು. ನಂತರ ಇಬ್ಬರು ಡೇಟಿಂಗ್ ಪ್ರಾರಂಭಿಸಿದರು. ಇಬ್ಬರು ಇಷ್ಟಪಡಲು ಆರಂಭಿಸಿದರು. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿರಾಯ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿರಾಯ್

    ಪಣಜಿ: ಬಾಲಿವುಡ್ ಕಿರುತೆರೆ ನಾಗಿನ್ ಮೌನಿರಾಯ್ ಇಂದು ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮೌನಿ ರಾಯ್ ಇಂದು ಗೋವಾದಲ್ಲಿ ಸೂರಜ್ ನಂಬಿಯಾರ್ ಅವರೊಂದಿಗೆ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ವಧು ಮೌನಿ ಫೋಟೋವನ್ನ ಗಾಯಕ ಮನ್ಮೀತ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಮೌನಿ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಫೋಟೋದಲ್ಲಿ ಮೌನಿರಾಯ್ ಅವರು ಕೆಂಪು ಮತ್ತು ಚಿನ್ನದ ಕಸೂತಿ ಹೊಂದಿರುವ ಬಿಳಿ ಸೀರೆ ಮತ್ತು ಕಾಂಟ್ರಾಸ್ಟ್ ಕೆಂಪು ಕುಪ್ಪಸವನ್ನು ಧರಿಸಿದ್ದು, ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣಗಳಲ್ಲಿ ಮುದ್ದಾಗಿ ಕಾಣಿಸುತ್ತಿದ್ದಾರೆ. ಇದನ್ನೂ ಓದಿ: ಮದುವೆಗೂ ಮುನ್ನವೇ ವರನ ಜೊತೆಗಿರುವ ಫೋಟೋ ಶೇರ್ ಮಾಡಿದ ಮೌನಿ ರಾಯ್

     

    View this post on Instagram

     

    A post shared by Arjun Bijlani (@arjunbijlani)

    ಮೌನಿ ಮದುವೆ ಫೋಟೋ ಮತ್ತು ವಿಡಿಯೋವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ, ಸೂರಜ್ ಕುರ್ತಾ ಮತ್ತು ಬಿಳಿ ಧೋತಿಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ನಾಗಿನ್ ಧಾರವಾಹಿಯ ಸಹನಟ ಅರ್ಜುನ್ ಬಿಜ್ಲಾನಿ, ಮೌನಿ ಮತ್ತು ಸೂರಜ್ ವರ್ಮಲಾ ಬದಲಾಯಿಸಿಕೊಳ್ಳುವ, ಮಂಗಳಸೂತ್ರ ಕಟ್ಟುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Mouni_Roy ???????? (@imouniroy76)

    ಮೌನಿರಾಯ್ ಅವರು ಮದುವೆಯಾಗುವ ಕೆಲವು ಗಂಟೆಗಳ ಹಿಂದೆ ಸೂರಜ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಸೂರಜ್ ಬಿಳಿ ಬಣ್ಣದ ಕುರ್ತಾ ಧರಿಸಿದ್ದರೆ, ಮೌನಿರಾಯ್ ಕೆಂಪು ಬಣ್ಣದ ಸೂಟ್ ಜೊತೆಗೆ ದುಪ್ಪಟ್ಟಾ ತೊಟ್ಟು ಮಿಂಚಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ

    ನಿನ್ನೆ ಮೌನಿ ಅದ್ದೂರಿಯಾಗಿ ಹಲ್ದಿ ಮತ್ತು ಮೆಹಂದಿ ಶಾಸ್ತ್ರ ಮಾಡಿಕೊಂಡಿದ್ದಾರೆ. ಈ ಸಮಾರಂಭದ ಅಮೂಲ್ಯ ಕ್ಷಣಗಳನ್ನು ಅರ್ಜುನ್ ಬಿಜ್ಲಾನಿ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.

  • ಮದುವೆಗೂ ಮುನ್ನವೇ ವರನ ಜೊತೆಗಿರುವ ಫೋಟೋ ಶೇರ್ ಮಾಡಿದ ಮೌನಿ ರಾಯ್

    ಮದುವೆಗೂ ಮುನ್ನವೇ ವರನ ಜೊತೆಗಿರುವ ಫೋಟೋ ಶೇರ್ ಮಾಡಿದ ಮೌನಿ ರಾಯ್

    ಮುಂಬೈ: ಹಿಂದಿ ಕಿರುತೆರೆಯ ನಾಗಿಣಿ ಧಾರಾವಾಹಿ ಖ್ಯಾತಿಯ ನಟಿ ಮೌನಿ ರಾಯ್ ವರ ಸೂರಜ್ ನಂಬಿಯಾರ್ ಅವರೊಂದಿಗೆ ಮೊದಲ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಗೋವಾದಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಮೌನಿರಾಯ್ ಅವರು ಮದುವೆಗೆ ಕೆಲವು ಗಂಟೆಗಳು ಇರುವ ಹೊತ್ತಿನಲ್ಲಿಯೇ ಸೂರಜ್ ನಂಬಿಯಾರ್ ಅವರೊಂದಿಗಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸೂರಜ್ ನಂಬಿಯಾರ್ ಬಿಳಿ ಬಣ್ಣದ ಕುರ್ತಾ ಧರಿಸಿದ್ದರೆ, ಮೌನಿರಾಯ್ ಕೆಂಪು ಬಣ್ಣದ ಸೂಟ್ ಜೊತೆಗೆ ದುಪ್ಪಟ್ಟಾ ತೊಟ್ಟು ಮಿಂಚಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ

     

    View this post on Instagram

     

    A post shared by mon (@imouniroy)

    ಮೌನಿ ರಾಯ್ ಹಾಗೂ ಸೂರಜ್ ಇಂದು ತಮ್ಮ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಮಲಯಾಳಿ ಹಾಗೂ ಬೆಂಗಾಲಿ ಸಂಪ್ರದಾಯದಂತೆ ವಿವಾಹವಾಗಲಿದ್ದಾರೆ. ಸದ್ಯ ಈ ಮುದ್ದಾದ ಜೋಡಿಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಮೌನಿರಾಯ್ ಬ್ಯಾಚುಲರ್ ಪಾರ್ಟಿ

    ಬುಧವಾರ ಮೌನಿರಾಯ್ ಅದ್ದೂರಿಯಾಗಿ ಹಳದಿ ಮತ್ತು ಮೆಹಂದಿ ಶಾಸ್ತ್ರ ಮಾಡಿಕೊಂಡಿದ್ದು, ಆ ಫೋಟೋಗಳನ್ನು ಜಿಯಾ ಮುಸ್ತಫಾ ಮತ್ತು ಓಂಕಾರ್ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.

  • ಕೆಜಿಎಫ್ ಬೆಡಗಿ ಮೌನಿರಾಯ್‍ಗೆ ಮದುವೆ

    ಕೆಜಿಎಫ್ ಬೆಡಗಿ ಮೌನಿರಾಯ್‍ಗೆ ಮದುವೆ

    ಮುಂಬೈ: ಕೆಜಿಎಫ್ ಚಾಪ್ಟರ್ 1 ಗಲಿ ಗಲಿ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದ ಮೌನಿ ರಾಯ್ ಅವರು ಸಾಕಷ್ಟು ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಮೌನಿ 2022ರ ಜನವರಿ ತಿಂಗಳಲ್ಲಿ ಬಾಯ್‍ಫ್ರೆಂಡ್ ಜೊತೆಗೆ ಮದುವೆ ಆಗಲಿದ್ದಾರಂತೆ. ಹೀಗೊಂದು ವಿಚಾರ ಬಾಲಿವುಡ್ ಅಂಗಳದಲ್ಲಿ ಜೋರಾಗಿದೆ.

    ಮೌನಿ ರಾಯ್ ಅವರು ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ರಿಲೇಶನ್‍ಶಿಪ್‍ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಾಗಲಿ ಅಥವಾ ಮಾಧ್ಯಮದ ಎದುರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಅವರ ಪ್ರೇಮ ವಿಚಾರ ಸದಾ ಸುದ್ದಿಯಲ್ಲಿರುತ್ತದೆ. ಜನವರಿಯಲ್ಲಿ ಮೌನಿ ಅವರು ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಈ ಬಗ್ಗೆ ಮೌನಿ ರಾಯ್ ಸೋದರ ಸಂಬಂಧಿ ವಿದ್ಯುತ್ ರಾಯ್‍ಸರ್ಕಾರ್ ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಾಂಜ್ರಾ ನದಿಗೆ ಮತ್ತೆ ಭಾರೀ ಪ್ರಮಾಣದ ನೀರು ಬಿಡುಗಡೆ – ನೆರೆ ಭೀತಿ

     

    View this post on Instagram

     

    A post shared by mon (@imouniroy)

    ದುಬೈ ಅಥವಾ ಇಟಲಿಯಲ್ಲಿ ಮದುವೆ ಆಗುವ ಆಲೋಚನೆ ನಟಿಯದ್ದು. ನಂತರ ಮೌನಿ ರಾಯ್ ಊರಾದ ಪಶ್ಚಿಮ ಬಂಗಾಳದ ಕೂಚ್ ಬೆಹರ್‍ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲು ಚಿಂತಿಸಲಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಪ್ರೇಮ ವೈಫಲ್ಯ, ಯುವಕ ಸಾವು- ಆತ್ಮಹತ್ಯೆಯೋ, ಕೊಲೆಯೋ?

     

    View this post on Instagram

     

    A post shared by Suraj Nambiar (@nambiar13)

    ಸೂರಜ್ ಜತೆ ಮೌನಿ ಡೇಟಿಂಗ್ ನಡೆಸೋಕೆ ಆರಂಭಿಸಿ ಎರಡು ವರ್ಷ ಕಳೆದಿದೆ. 2019ರಲ್ಲಿ ಮೌನಿ ಮತ್ತು ಸೂರಜ್ ಮೊಟ್ಟ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. 2020ರಲ್ಲಿ ಮೌನಿ ದುಬೈಗೆ ತೆರಳಿದ್ದರು. ಈ ವೇಳೆ ಕೆಲ ಸಮಯ ಅಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಜನವರಿಯಲ್ಲಿ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.