Tag: supremecourt

  • ಸುಪ್ರೀಂನಲ್ಲಿಂದು ಅನರ್ಹರ ಅರ್ಜಿ ಪ್ರಸ್ತಾಪ – ತುರ್ತು ವಿಚಾರಣೆಗೆ ಮೌಖಿಕ ಮನವಿ ಸಾಧ್ಯತೆ

    ಸುಪ್ರೀಂನಲ್ಲಿಂದು ಅನರ್ಹರ ಅರ್ಜಿ ಪ್ರಸ್ತಾಪ – ತುರ್ತು ವಿಚಾರಣೆಗೆ ಮೌಖಿಕ ಮನವಿ ಸಾಧ್ಯತೆ

    ಬೆಂಗಳೂರು: ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ ಪಡಿಸುವಂತೆ ಇಂದು ಅನರ್ಹ ಶಾಸಕರು ಮನವಿ ಮಾಡಿಕೊಳ್ಳಲಿದ್ದಾರೆ.

    ಅನರ್ಹ ಶಾಸಕರ ಪರ ವಕೀಲ ಮುಕುಲ್ ರೊಹ್ಟಗಿ, ನ್ಯಾ.ಎನ್ ವಿ ರಮಣ ನೇತೃತ್ವದ ದ್ವಿ ಸದಸ್ಯ ಪೀಠದ ಮುಂದೆ ಮನವಿ ಮಾಡಿಕೊಳ್ಳಲಿದ್ದಾರೆ. ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ವಿಚಾರಣೆಗೆ ಬಂದಿಲ್ಲ. ಹೀಗಾಗಿ ಶೀಘ್ರ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ರೊಹ್ಟಗಿ ಮನವಿ ಮಾಡಲಿದ್ದಾರೆ.

    ಈಗಾಗಲೇ ಒಮ್ಮೆ ತುರ್ತು ವಿಚಾರಣೆ ಮನವಿ ಮಾಡಿ ಹಿನ್ನಡೆ ಅನುಭವಿಸಿದ್ದ ಅನರ್ಹ ಶಾಸಕರು, ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. ವಿಚಾರಣೆ ವಿಳಂಬ ಆಗುತ್ತಿದ್ದಂತೆಯೇ ದೆಹಲಿಗೆ ಆಗಮಿಸಿದ್ದ ಅನರ್ಹ ಶಾಸಕರು ವಕೀಲ ಮುಕುಲ್ ರೊಹ್ಟಗಿ ಭೇಟಿಯಾಗಿ ಚರ್ಚೆ ನಡೆಸಿದರು. ವಿಚಾರಣೆ ವಿಳಂಬ ಸಂಬಂಧ ಮಾತುಕತೆ ನಡೆಸಿದ ಅವರು ಮತ್ತೊಮ್ಮೆ ಮನವಿ ಮಾಡುವಂತೆ ರೊಹ್ಟಗಿಗೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಕುಲ್ ರೊಹ್ಟಗಿ ಮತ್ತೊಂದು ಪ್ರಯತ್ನ ಮಾಡಲಿದ್ದು ನ್ಯಾ. ಎನ್.ವಿ ರಮಣ ಮುಂದೆ ಮನವಿ ಮಾಡಲಿದ್ದಾರೆ. ಒಂದು ವೇಳೆ ವಿಚಾರಣೆಗೆ ನ್ಯಾ. ಎನ್.ವಿ ರಮಣ ಒಪ್ಪದಿದ್ದರೆ ನಾಳೆ ಮು.ನ್ಯಾ ರಂಜನ್ ಗೊಗಯ್ ಪೀಠಕ್ಕೆ ವಾಪಸ್ ಹೋಗುವ ಬಗ್ಗೆ ವಕೀಲರು ತಿರ್ಮಾನಿಸಿದ್ದಾರೆ.

    ಅಯೋಧ್ಯೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ನ್ಯಾ.ಎನ್ ವಿ ರಮಣ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಯಿತು. ಮಂಗಳವಾರ ರಂಜನ್ ಗೊಗಯ್ ಕೆಲಕಾಲ ಬೇರೆ ಅರ್ಜಿಗಳ ವಿಚಾರಣೆ ನಡೆಸಲಿದ್ದು, ಈ ವೇಳೆ ಅನರ್ಹ ಶಾಸಕರ ಅರ್ಜಿ ವಿಚಾರಣೆ ಸಂಬಂಧ ಪ್ರಸ್ತಾಪ ಮಾಡುವ ಬಗ್ಗೆ ವಕೀಲರು ಚಿಂತಿಸಿದ್ದಾರೆ.

  • ದೋಸ್ತಿಗಳ ವಿಶ್ವಾಸಮತ ವಿಳಂಬಕ್ಕೆ ವಿರೋಧ- ವಿಧಾನಸಭೆಯಲ್ಲೇ ಬಿಜೆಪಿಯಿಂದ ಧರಣಿ

    ದೋಸ್ತಿಗಳ ವಿಶ್ವಾಸಮತ ವಿಳಂಬಕ್ಕೆ ವಿರೋಧ- ವಿಧಾನಸಭೆಯಲ್ಲೇ ಬಿಜೆಪಿಯಿಂದ ಧರಣಿ

    ಬೆಂಗಳೂರು: ವಿಶ್ವಾಸಮತ ಯಾಚನೆಯ ವಿಳಂಬ ಖಂಡಿಸಿ ಬಿಜೆಪಿ ಶಾಸಕರು ವಿಧಾಸಭೆಯಲ್ಲಿಯೇ ಅಹೋರಾತ್ರಿ ಧರಣಿ ನಡೆಸಿದೆ.

    ಗುರುವಾರ ರಾತ್ರಿಯಿಡೀ ಸದನದಲ್ಲೇ ಉಳಿದ ಬಿಜೆಪಿ ಶಾಸಕರು ಮೊದಲಿಗೆ ಯಡಿಯೂರಪ್ಪ ನೇತೃತ್ವದಲ್ಲಿ ಮಾತುಕತೆ ನಡೆಸಿದ್ದಾರೆ. ಇಂದು ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು, ದೋಸ್ತಿಗಳು ಯಾವ ನಿರ್ಧಾರ ಕೈಗೊಳ್ಳಬಹುದು, ಸುಪ್ರೀಂಕೋರ್ಟ್ ಮೊರೆ ಹೋಗ್ಬೇಕಾ ಬೇಡ್ವಾ ಅನ್ನೋ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದ ರಾತ್ರಿ ಊಟಕ್ಕೆ ಚಪಾತಿ ಮತ್ತು ಅನ್ನ, ಸಾಂಬಾರು ನೀಡಲಾಗಿತ್ತು. ಜೊತೆಗೆ ಮಲಗಲು ಹಾಸಿಗೆ, ದಿಂಬು, ಚಾಪೆ ಮತ್ತು ಹೊದಿಕೆ ಪೂರೈಸಲಾಗಿತ್ತು. ಊಟದ ಬಳಿಕ ಶಾಸಕ ಎಸ್ ಆರ್ ವಿಶ್ವನಾಥ್ ಎಲ್ಲ ಶಾಸಕರಿಗೂ ಸೀಬೆಹಣ್ಣು ಹಂಚಿದ್ದಾರೆ. ನಂತರ ಬಿಎಸ್‍ವೈ ಸೇರಿದಂತೆ ಎಲ್ಲಾ ಬಿಜೆಪಿ ಶಾಸಕರು ಸದನದಲ್ಲೇ ನಿದ್ದೆ ಮಾಡಿದ್ದಾರೆ.

    ಇಂದು ಬೆಳಗ್ಗೆ ಎದ್ದು ವಾಕಿಂಗ್, ಜಾಗಿಂಗ್ ಕೂಡ ಮಾಡಿದರು. ವಾಕಿಂಗ್ ವೇಳೆ ಮಾತನಾಡಿದ ಯಡಿಯೂರಪ್ಪ, ಬಹುಷಃ ದೋಸ್ತಿ ಸರ್ಕಾರಕ್ಕೆ ಇವತ್ತೇ ಕೊನೆಯ ದಿನ ಎಂದು ಹೇಳಿದರು. ನಿನ್ನೆ ದೋಸ್ತಿ ನಾಯಕರು ವ್ಯವಸ್ಥಿತವಾಗಿಯೇ ಸದನದಲ್ಲಿ ಕಾಲಹರಣ ಮಾಡಿದ್ದಾರೆ. ನಮ್ಮನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ. ಮೈತ್ರಿ ಸರ್ಕಾರವೇನಾದ್ರೂ ಸುಪ್ರೀಂಕೋರ್ಟ್ ಮೊರೆ ಹೋದ್ರೆ ಛೀಮಾರಿ ಹಾಕುತ್ತದೆ ಎಂದು ಎಚ್ಚರಿಕೆ ನೀಡಿದರು.

  • ವಿಶ್ವಾಸಮತ ಯಾಚನೆಗೆ ಹೋಗಲೇಬೇಕೆಂದಿಲ್ಲ- ಅತೃಪ್ತರ ಮುಂದಿನ ನಡೆಯೇನು?

    ವಿಶ್ವಾಸಮತ ಯಾಚನೆಗೆ ಹೋಗಲೇಬೇಕೆಂದಿಲ್ಲ- ಅತೃಪ್ತರ ಮುಂದಿನ ನಡೆಯೇನು?

    ಬೆಂಗಳೂರು: ವಿಶ್ವಾಸಮತ ಯಾಚನೆಗೆ ಅತೃಪ್ತ ಶಾಸಕರು ಹೋಗಲೇ ಬೇಕೆಂದಿಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಮಧ್ಯಂತರ ಆದೇಶ ಪ್ರಕಟಿಸಿದೆ. ಈ ಬೆನ್ನಲ್ಲೇ ಅತೃಪ್ತರು ಕೂಡ ನಾವು ವಾಪಸ್ ಬೆಂಗಳೂರಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಿದ್ರೆ ಅತೃಪ್ತ ಮುಂದಿನ ನಡೆಯೇನು ಎಂಬುದು ಇದೀಗ ಕುತೂಹಲ ಹುಟ್ಟಿಸಿದೆ.

    ಹೌದು. ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆಯೇ ಅತೃಪ್ತ ಶಾಸಕರೆಲ್ಲರೂ ಮುಂಬೈನಲ್ಲಿ ಹೋಟೆಲ್ ನಲ್ಲಿ ಒಟ್ಟಿಗೆ ನಿಂತು, ಸುಪ್ರೀಂಕೋರ್ಟ್ ತೀರ್ಪನ್ನು ನಾವು ಗೌರವಿಸುತ್ತೇವೆ ಮತ್ತು ಸಂತೋಷಗೊಂಡಿದ್ದೇವೆ. ನಾವೇನು ನಿರ್ಧಾರ ಮಾಡಿದ್ದೇವೆ ಅದಕ್ಕೆ ಬದ್ಧವಾಗಿದ್ದೇವೆ. ಯಾವುದೇ ಕಾರಣಕ್ಕೂ ನಾವು ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ನಾವು ಅಧಿವೇಶನಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

    ಹಾಗಿದ್ರೆ ಮುಂದಿನ ನಡೆಯೇನು?
    ಸ್ಪೀಕರ್ ವಿಚಾರಣೆಗೆ ಕರೆದರೆ ಹಾಜರಾಗಲು ಸಮಯ ಕೇಳಬಹುದು. ವಿಶ್ವಾಸಮತ ಮುಗಿಯುವ ತನಕ ಮುಂಬೈನಲ್ಲೇ ಇರಬಹುದು. ವಿಪ್ ಜಾರಿಗೊಳಿಸಿದರೂ ಸುಪ್ರೀಂಕೋರ್ಟ್ ಮಧ್ಯಂತರ ಆದೇಶವನ್ನೇ ರಕ್ಷಣೆಯಾಗಿ ಪಡೆಯಬಹುದು. ಅನರ್ಹತೆಯ ಅಸ್ತ್ರ ಪ್ರಯೋಗಿಸಿದರೂ ರಾಜೀನಾಮೆ ನೀಡಿದ ನಂತರ ತಮ್ಮನ್ನು ಬೆದರಿಸಲು ಅನರ್ಹತೆ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಕಾರಣ ನೀಡಿ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಬಹುದು. ವಿಚಾರಣೆ ನಡೆಸದೇ ಅನರ್ಹತೆ ಮಾಡಲು ಸಾಧ್ಯವಿಲ್ಲ ಎನ್ನುವ ಅಂಶವನ್ನು ಪ್ರಸ್ತಾಪಿಸಿ ಕಾನು ಸಮರ ಆರಂಭಿಸಬಹುದು.

    ತೀರ್ಪು ಏನು?
    ಗುರುವಾರ ವಿಶ್ವಾಸಮತಯಾಚನೆ ಮಾಡಬಹುದು. ರಾಜೀನಾಮೆ ನೀಡಿರುವ 15 ಶಾಸಕರು ಕಲಾಪಕ್ಕೆ ಭಾಗವಹಿಸುವುದು ಕಡ್ಡಾಯವಲ್ಲ. ಹಾಜರಾಗಬೇಕೋ ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅತೃಪ್ತ ಶಾಸಕರನ್ನು ಒತ್ತಾಯಪೂರ್ವಕವಾಗಿ ಕರೆತರುವ ಹಾಗಿಲ್ಲ ಎಂದು ಸುಪ್ರೀಂ ಮಧ್ಯಂತರ ಆದೇಶವನ್ನು ಪ್ರಕಟಿಸುವ ಮೂಲಕ ಅತೃಪ್ತರಿಗೆ ಬಿಗ್ ರಿಲೀಫ್ ನೀಡಿದೆ.

    ತನ್ನ ಆದೇಶಲ್ಲಿ ಶಾಸಕರ ಅನರ್ಹತೆಯ ಬಗ್ಗೆ ಯಾವುದೇ ವಿಚಾರವನ್ನು ಪ್ರಸ್ತಾಪ ಮಾಡದ ಕೋರ್ಟ್ ಶಾಸಕರ ರಾಜೀನಾಮೆಯನ್ನು ನಿಗದಿತ ಅವಧಿಯ ಒಳಗಡೆ ಇತ್ಯರ್ಥ ಮಾಡಬೇಕು ಎಂದು ಸ್ಪೀಕರ್ ಅವರಿಗೆ ಸೂಚಿಸಿದೆ. ಈ ಮೂಲಕ ರಮೇಶ್ ಕುಮಾರ್ ಅವರಿಗೆ ಕೋರ್ಟ್ ಪೂರ್ಣ ಅಧಿಕಾರವನ್ನು ನೀಡಿದ್ದು ಸ್ಪೀಕರ್ ರಾಜೀನಾಮೆ ಅಂಗೀಕರಿಸುತ್ತಾರೋ ಅಥವಾ ಅನರ್ಹತೆ ನಿರ್ಧಾರ ಪ್ರಕಟಿಸುತ್ತಾರೋ ಎನ್ನುವ ಕುತೂಹಲ ಹೆಚ್ಚಾಗಿದೆ.

    ರಾಜೀನಾಮೆ ಅಂಗೀಕರಿಸಿಲ್ಲ ಎಂದು ಸ್ಪೀಕರ್ ವಿರುದ್ಧ 15 ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಂಗಳವಾರ ಸುಮಾರು 212 ನಿಮಿಷ ನಡೆದಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ದೀಪಕ್ ಗುಪ್ತಾ ಹಾಗೂ ಅನಿರುದ್ಧ್ ಬೋಸ್ ಅವರಿದ್ದ ತ್ರಿಸದಸ್ಯ ಪೀಠದ ಎದುರು ಮುಕುಲ್ ರೊಹ್ಟಗಿ, ಅಭಿಷೇಕ್ ಸಿಂಘ್ವಿ, ರಾಜೀವ್ ಧವನ್ ನಡುವೆ ಅಕ್ಷರಶಃ ವಾಗ್ಯುದ್ಧವೇ ನಡೆದಿತ್ತು. ಸುಮಾರು 3 ಗಂಟೆ 45 ನಿಮಿಷಗಳ ವಾದ ವಿವಾದಗಳನ್ನು ಆಲಿಸಿದ ತ್ರಿಸದಸ್ಯ ಪೀಠ ತೀರ್ಪನ್ನು ಬುಧವಾರ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿತ್ತು.

  • ಸುಪ್ರೀಂ ತೀರ್ಪು ಸ್ವಾಗತಿಸಿ ಶಾಸಕರಲ್ಲಿ ಡಿಕೆಶಿ ಮನವಿ

    ಸುಪ್ರೀಂ ತೀರ್ಪು ಸ್ವಾಗತಿಸಿ ಶಾಸಕರಲ್ಲಿ ಡಿಕೆಶಿ ಮನವಿ

    ಬೆಂಗಳೂರು: ಅತೃಪ್ತ ಶಾಸಕರ ಪರ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದು, ಈ ತೀರ್ಪನ್ನು ಸಚಿವ ಡಿಕೆ ಶಿವಕುಮಾರ್ ಅವರು ಸ್ವಾಗತಿಸಿದ್ದಾರೆ. ಅಲ್ಲದೆ ಇದೇ ವೇಳೆ ಅತೃಪ್ತ ಶಾಸಕರಲ್ಲಿ ಸಚಿವರು ಮನವಿ ಕೂಡ ಮಾಡಿಕೊಂಡಿದ್ದಾರೆ.

    ತೀರ್ಪು ಹೊರ ಬಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಅದನ್ನು ನಾನು ಸಚಿವ ಅಲ್ಲ ಓರ್ವ ಶಾಸಕನಾಗಿ ಗೌರವಿಸುತ್ತೇನೆ. ನ್ಯಾಯಾಲಯ ಸ್ಪೀಕರ್ ಅಧಿಕಾರ ಏನು ಅನ್ನೋದನ್ನ ಎತ್ತಿ ಹಿಡಿದಿದೆ ಎಂದರು.

    ಶಾಸಕರು ಕಲಾಪಕ್ಕೆ ಹೋಗಬಹುದು ಬಿಡಬಹುದು. ಆದರೆ, ಪಕ್ಷದ ಕೈಯಲ್ಲಿ ವಿಪ್ ಇದೆಯಲ್ಲ. ಅನರ್ಹತೆಯೇ ಬೇರೆಯ ಕಾನೂನಾಗಿದ್ದು, ನಾನು ನನ್ನ ಶಾಸಕರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

    ಮನವಿಯೇನು?
    ಬೇರೆಯವರ ನಂಬಿ ಹೋಗಬೇಡಿ. ನಿಮ್ಮ ಮೇಲೆ ಮಂಗನ ಟೋಪಿ ಹಾಕುತ್ತಾರೆ. ಅನರ್ಹತೆ ಅನ್ನೋದು ಒಂದು ಇದೆ ಅಲ್ವಾ. ಅನರ್ಹ ಆದರೆ ನೀವು ಮತ್ತೆ ಮಂತ್ರಿ ಆಗಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮನ್ನು ಗೆಲ್ಲಿಸಿರುವ ಜನರ ಮುಖ, ನಿಮ್ಮ ಕುಟುಂಬದವರ ಮುಖ ನೋಡಿ ನೀವು ಅನರ್ಹತೆಯ ಅಸ್ತ್ರಕ್ಕೆ ಬಲಿಯಾಗಬೇಡಿ. ವಿಶ್ವಾಸ ಮತದ ಬಗ್ಗೆ ನಾಳೆ ಮಾತನಾಡೋಣ ಎಂದು ಶಾಸಕ ಮಿತ್ರರಲ್ಲಿ ಮನವಿ ಮಾಡುವ ಮೂಲಕ ಡಿಕೆಶಿ ಅವರು ಪರೋಕ್ಷವಾಗಿ ಅನಹರ್ತೆಯ ಭಯ ಹುಟ್ಟಿಸಿದ್ದಾರೆ.

    ತೀರ್ಪು ಏನು?
    ಗುರುವಾರ ವಿಶ್ವಾಸಮತಯಾಚನೆ ಮಾಡಬಹುದು. ರಾಜೀನಾಮೆ ನೀಡಿರುವ 15 ಶಾಸಕರು ಕಲಾಪಕ್ಕೆ ಭಾಗವಹಿಸುವುದು ಕಡ್ಡಾಯವಲ್ಲ. ಹಾಜರಾಗಬೇಕೋ ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅತೃಪ್ತ ಶಾಸಕರನ್ನು ಒತ್ತಾಯಪೂರ್ವಕವಾಗಿ ಕರೆತರುವ ಹಾಗಿಲ್ಲ ಎಂದು ಸುಪ್ರೀಂ ಮಧ್ಯಂತರ ಆದೇಶವನ್ನು ಪ್ರಕಟಿಸುವ ಮೂಲಕ ಅತೃಪ್ತರಿಗೆ ಬಿಗ್ ರಿಲೀಫ್ ನೀಡಿದೆ.

    ತನ್ನ ಆದೇಶಲ್ಲಿ ಶಾಸಕರ ಅನರ್ಹತೆಯ ಬಗ್ಗೆ ಯಾವುದೇ ವಿಚಾರವನ್ನು ಪ್ರಸ್ತಾಪ ಮಾಡದ ಕೋರ್ಟ್ ಶಾಸಕರ ರಾಜೀನಾಮೆಯನ್ನು ನಿಗದಿತ ಅವಧಿಯ ಒಳಗಡೆ ಇತ್ಯರ್ಥ ಮಾಡಬೇಕು ಎಂದು ಸ್ಪೀಕರ್ ಅವರಿಗೆ ಸೂಚಿಸಿದೆ. ಈ ಮೂಲಕ ರಮೇಶ್ ಕುಮಾರ್ ಅವರಿಗೆ ಕೋರ್ಟ್ ಪೂರ್ಣ ಅಧಿಕಾರವನ್ನು ನೀಡಿದ್ದು ಸ್ಪೀಕರ್ ರಾಜೀನಾಮೆ ಅಂಗೀಕಾರಿಸುತ್ತಾರೋ ಅಥವಾ ಅನರ್ಹತೆ ನಿರ್ಧಾರ ಪ್ರಕಟಿಸುತ್ತಾರೋ ಎನ್ನುವ ಕುತೂಹಲ ಹೆಚ್ಚಾಗಿದೆ.

    ರಾಜೀನಾಮೆ ಅಂಗೀಕರಿಸಿಲ್ಲ ಎಂದು ಸ್ಪೀಕರ್ ವಿರುದ್ಧ 15 ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಂಗಳವಾರ ಸುಮಾರು 212 ನಿಮಿಷ ನಡೆದಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ದೀಪಕ್ ಗುಪ್ತಾ ಹಾಗೂ ಅನಿರುದ್ಧ್ ಬೋಸ್ ಅವರಿದ್ದ ತ್ರಿಸದಸ್ಯ ಪೀಠದ ಎದುರು ಮುಕುಲ್ ರೊಹ್ಟಗಿ, ಅಭಿಷೇಕ್ ಸಿಂಘ್ವಿ, ರಾಜೀವ್ ಧವನ್ ನಡುವೆ ಅಕ್ಷರಶಃ ವಾಗ್ಯುದ್ಧವೇ ನಡೆದಿತ್ತು. ಸುಮಾರು 3 ಗಂಟೆ 45 ನಿಮಿಷಗಳ ವಾದ ವಿವಾದಗಳನ್ನು ಆಲಿಸಿದ ತ್ರಿಸದಸ್ಯ ಪೀಠ ತೀರ್ಪನ್ನು ಬುಧವಾರ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿತ್ತು.

  • ಶುರುವಾಗಲಿದೆ ಶಬರಿಮಲೆ ಮೂವ್‍ಮೆಂಟ್- ಕರ್ನಾಟಕದ ಚಳುವಳಿಗೆ ಕೃಷ್ಣನೂರೇ ವೇದಿಕೆ..!

    ಶುರುವಾಗಲಿದೆ ಶಬರಿಮಲೆ ಮೂವ್‍ಮೆಂಟ್- ಕರ್ನಾಟಕದ ಚಳುವಳಿಗೆ ಕೃಷ್ಣನೂರೇ ವೇದಿಕೆ..!

    ಉಡುಪಿ: ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರ ಪ್ರವೇಶ ವಿಚಾರ ಸಾಕಷ್ಟು ವಿವಾದ ಸೃಷ್ಟಿಮಾಡಿದೆ. ಸುಪ್ರೀಂ ಕೋರ್ಟ್ ಆದೇಶನ ನಂತರ ವೃತಾಚರಣೆ ಮಾಡದ ಹೋರಾಟಗಾರ್ತಿಯರು ಸನ್ನಿಧಾನಕ್ಕೆ ತೆರಳಲು ಯತ್ನಿಸಿ ಹೈಡ್ರಾಮ ಸೃಷ್ಟಿಸಿದ್ದರು. ಇದೀಗ ಅಯ್ಯಪ್ಪ ಭಕ್ತರು ಐದು ರಾಜ್ಯಗಳಲ್ಲಿ ಲಕ್ಷ ಜನ ಸೇರಿಸಿ ತಮ್ಮ ಅಭಿಪ್ರಾಯವನ್ನು ಹೊರಹಾಕಲಿದ್ದಾರೆ. ಈ ಮೂಲಕ ದೇಶಾದ್ಯಂತ ಶಬರಿಗಿರಿ ಮೂವ್‍ಮೆಂಟ್ ಶುರುವಾಗಿದೆ.


    ವೀರ ಮಣಿಕಂಠನ ಸನ್ನಿಧಾನ ಶಬರಿಮಲೆ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಸುಪ್ರೀಂಕೋರ್ಟ್ ಆದೇಶ ಕೊಟ್ರೂ ಮಹಿಳೆಯರು ದೇಗುಲ ಪ್ರವೇಶಿಸಲು ಆಗ್ತಿಲ್ಲ. ಈ ನಡುವೆ ಹರಿಹರ ಸುತನ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ತಡೆಯಲು ಅಯ್ಯಪ್ಪನ ಭಕ್ತರು ದೇಶಾದ್ಯಂತ ಜನಾಂದೋಲನ ಮಾಡಲು ಹೊರಟಿದ್ದಾರೆ. ಕರ್ನಾಟಕದ ಜನಾಂದೋಲನಾ ಜಾಥಾ ಮತ್ತು ಸಭೆ ಕೃಷ್ಣನೂರು ಉಡುಪಿಯಲ್ಲಿ ನಡೆಯಲಿದ್ದು, ನವೆಂಬರ್ 1ಕ್ಕೆ ಡೇಟ್ ಫಿಕ್ಸ್ ಆಗಿದೆ. ಈ ಸಂಬಂಧ ಉಡುಪಿಯ ಕೃಷ್ಣಮಠದಲ್ಲಿ ಪೂರ್ವಭಾವಿ ಸಭೆ ನಡೀತು. ಇದ್ರಲ್ಲಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ, ಅಯ್ಯಪ್ಪ ಭಕ್ತರ ಬಳಿ ಅಭಿಪ್ರಾಯ ಪಡೆಯಲಾಯ್ತು.

    ನವೆಂಬರ್ 1ಕ್ಕೆ ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆಯಲಿರುವ ಸಾಂಪ್ರದಾಯಿಕ ರೀತಿಯ ಪ್ರತಿಭಟನೆಯಲ್ಲಿ ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಜನಾಂದೋಲನ ಮತ್ತು ಕಾನೂನಾತ್ಮಕವಾಗಿ ಯಾವ ರೀತಿ ಹೋರಾಟ ಮಾಡಬೇಕು ಎಂಬ ಬಗ್ಗೆಯೂ ನಿರ್ಧಾರವಾಗಲಿದೆ. ಈ ಜನಾಂದೋಲನ ಜಾಥಾದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ರೀತಿಯ ಜನಾಂದೋಲನ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಲ್ಲೂ ನಡೆಯಲಿದೆ ಅಂತ ಅಯ್ಯಪ್ಪ ಸೇವಾ ಸಮಾಜಂ ಸಂಚಾಲಕ ಗಿರೀಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಿಂದ ತಲಾ 20 ಸಾವಿರ ಜನರಂತೆ ಒಂದು ಲಕ್ಷ ಜನ ಸೇರುವ ಸಾಧ್ಯತೆಯಿದೆ. ಮೈದಾನದಲ್ಲಿ ಅಯ್ಯಪ್ಪನಿಗೆ ಸಹಸ್ರ ಅರ್ಚನೆ ನಡೆಯಲಿದ್ದು ಇದಕ್ಕಾಗಿ 10 ಲಕ್ಷ ರೂಪಾಯಿಯನ್ನು ಭಕ್ತರೇ ದೇಣಿಗೆ ರೂಪದಲ್ಲಿ ಸಂಗ್ರಹಿಸುವ ನಿರ್ಧಾರ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಬರಿಮಲೆಯಲ್ಲಿ ಮಹಿಳೆಯರಿಬ್ಬರಿಂದ ಐತಿಹಾಸಿಕ ಹೆಜ್ಜೆ!

    ಶಬರಿಮಲೆಯಲ್ಲಿ ಮಹಿಳೆಯರಿಬ್ಬರಿಂದ ಐತಿಹಾಸಿಕ ಹೆಜ್ಜೆ!

    ತಿರುವನಂತಪುರಂ: ಪುರಾತನ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಇಬ್ಬರು ಮಹಿಳೆಯರು ಇಂದು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದಾರೆ.

    ಸುಮಾರು 200 ಪೊಲೀಸರ ಸರ್ಪಗಾವಲಿನಲ್ಲಿ ಕೊಚ್ಚಿ ಮೂಲದ ಇಬ್ಬರು ಮಹಿಳೆಯರು ದೇಗುಲದತ್ತ ಹೆಜ್ಜೆ ಹಾಕಿದ್ದಾರೆ. ಪೊಲೀಸರಂತೆ ಹೆಲ್ಮೆಟ್ ಹಾಗೂ ಸಮವಸ್ತ್ರ ಧರಿಸಿ ಭಾರೀ ಸೆಕ್ಯೂರಿಟಿಯ ಮೂಲಕ ದೇವಾಲಯದತ್ತ ತೆರಳಿದ್ದಾರೆ.

    ಸದ್ಯ ಮಹಿಳೆಯರ ದೇಗುಲ ಪ್ರವೇಶ ಯತ್ನದ ಬೆನ್ನಲ್ಲೇ ಅಯ್ಯಪ್ಪ ಭಕ್ತರ ಆಕ್ರೋಶ ಭುಗಿಲೆದ್ದಿದೆ. ಇದನ್ನೂ ಓದಿ: ಹಿಂಸಾರೂಪಕ್ಕೆ ತಿರುಗಿದ ಶಬರಿಮಲೆ ಪ್ರತಿಭಟನೆ: ಗುಂಡಾಗಿರಿ ಪ್ರದರ್ಶಿಸಿದ ಪೊಲೀಸರು!

    ಸೆ.28ರಂದು 10ರಿಂದ-50 ವರ್ಷದವರೆಗಿನ ಎಲ್ಲರೂ ಶಬರಿಮಲೆ ದೇಗುಲಕ್ಕೆ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆಯಬಹುದೆಂಬ ಮಹತ್ವದ ತೀರ್ಪು ನೀಡಿತ್ತು. ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆಯೇ ಎಲ್ಲಾ ಕಡೆಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೇ ಪ್ರತಿಭಟನೆಗಳ ಕಾವು ಏರಿದ್ದೂ ಕೆಲವೆಡೆ ಹಿಂಸಾಚಾರಗಳು ನಡೆದಿತ್ತು. ಇದನ್ನೂ ಓದಿ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಓಕೆ ಎಂದ ಕೇರಳ ಸರ್ಕಾರ

    ಇದನ್ನೂ ಓದಿ:  ಸ್ತ್ರೀಯನ್ನು ದೇವತೆಯಾಗಿ ಕಾಣುವ ಏಕೈಕ ಧರ್ಮ ನಮ್ದು, ಮುಟ್ಟಿಗೂ ಇದಕ್ಕೂ ಏನೂ ಸಂಬಂಧವಿಲ್ಲ: ಪ್ರತಾಪ್ ಸಿಂಹ

    ಇದನ್ನೂ ಓದಿ: ಶಬರಿಮಲೆ ಶಿಷ್ಟಾಚಾರ ಉಲ್ಲಂಘನೆ ಮಾಡೋದು ಸರಿಯಲ್ಲ -ಸಿಎಂ ಎಚ್‍ಡಿಕೆ

    https://www.youtube.com/watch?v=l5k_Ni3_05U

     

     

    https://www.youtube.com/watch?v=6q2-ybd2T0A

  • ಮಹದಾಯಿ ನ್ಯಾಯಾಧೀಕರಣದ ಐತೀರ್ಪಿಗೆ ಗೋವಾ-ಮಹಾರಾಷ್ಟ್ರ ವಿರೋಧ

    ಮಹದಾಯಿ ನ್ಯಾಯಾಧೀಕರಣದ ಐತೀರ್ಪಿಗೆ ಗೋವಾ-ಮಹಾರಾಷ್ಟ್ರ ವಿರೋಧ

    – ಸೂರಲ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

    ನವದೆಹಲಿ: ಮಹದಾಯಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ಮಹತ್ವದ ತೀರ್ಪಿಗೆ ಗೋವಾ-ಮಹಾರಾಷ್ಟ್ರ ವಿರೋಧ ವ್ಯಕ್ತಪಡಿಸಿವೆ. ಈ ಸಂಬಂಧ ಅಲ್ಲಿನ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಿದ್ದು, ಈ ಬೆನ್ನಲ್ಲೇ ಗೋವಾದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.

    ಮಾಂಡೋವಿ ಬಚಾವೋ ಆಂದೋಲನದ ಕಾರ್ಯಕರ್ತರು ಕರ್ನಾಟಕ- ಗೋವಾ ಗಡಿಭಾಗದ ಸೂರಲ್ ನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ಮಹದಾಯಿ ತೀರ್ಪು ಸ್ವಲ್ಪ ಕರ್ನಾಟಕದ ಪರ ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ರೈತರು ಸಂಭ್ರಮಿಸಿದ್ದಾರೆ.

    ನ್ಯಾಯಾಧಿಕರಣದ ಐತೀರ್ಪಿನಲ್ಲಿ ಒಟ್ಟು 13.05 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಿದೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಒಟ್ಟು 13.05 ಟಿಎಂಸಿ ನೀರಿನಲ್ಲಿ, 5.5 ಟಿಎಂಸಿ ನೀರು ಕುಡಿಯುವ ಬಳಕೆಗೆ ಸಿಕ್ಕಿದರೆ, 8 ಟಿಎಂಸಿ ನೀರು ನೀರಾವರಿಗೆ ಸಿಕ್ಕಿದೆ. ಈ ಸಂಬಂಧ ಪಬ್ಲಿಕ್ ಟಿವಿಗೆ ರಾಜ್ಯದ ವಕೀಲ ಮೋಹನ್ ಕಾತರಕಿ ಪ್ರತಿಕ್ರಿಯಿಸಿ, ನನಗೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಒಟ್ಟು 13.05 ಟಿಎಂಸಿ ನೀರು ಸಿಕ್ಕಿದೆ. ಪೂರ್ಣವಾಗಿ ನಾನು ತೀರ್ಪು ಓದಿಲ್ಲ. ಈ ತೀರ್ಪು ಸ್ವಲ್ಪ ಸಮಧಾನ, ಸ್ವಲ್ಪ ಬೇಸರ ತಂದಿದೆ ಎಂದು ಹೇಳಿದರು.

    ಕರ್ನಾಟಕಕ ಪರ ವಾದ ಏನಾಗಿತ್ತು?
    ಹುಬ್ಬಳ್ಳಿ- ಧಾರವಾಡಕ್ಕೆ ಕುಡಿಯುವ ನೀರಿಗೆ ಸೂಕ್ತ ಪರ್ಯಾಯವಿಲ್ಲ. ಕೇಂದ್ರ ಜಲ ಆಯೋಗದ ಪ್ರಕಾರ ಕುಡಿಯುವ ನೀರಿಗೆ ಅತಿ ಹೆಚ್ಚಿನ ಆದ್ಯತೆ ನೀಡಬೇಕು. ಕರ್ನಾಟಕಕ್ಕೆ ತನ್ನ ಪಾಲಿನ 14.98 ಟಿಎಂಸಿ ನೀರು ಬಳಕೆ ಮಾಡಲು ಅವಕಾಶ ನೀಡಬೇಕು. ಅಲ್ಲದೇ ಹೆಚ್ಚುವರಿಯಾಗಿ ಹುಬ್ಬಳ್ಳಿ ಧಾರವಾಡಕ್ಕೆ ಕುಡಿಯಲು 7.56 ಟಿಎಂಸಿ ನೀರು ಬೇಕು. ಮಹದಾಯಿಯ ನೀರು ಹು-ಧಾ ಕ್ಕೆ ಕುಡಿಯಲು ಸಿಕ್ಕರೆ ಮಲಪ್ರಭದ ಮೇಲಿನ ಒತ್ತಡ ಕಡಿಮೆ ಆಗಿ ಅದರ ನೀರನ್ನು ನೀರಾವರಿಗೆ ಬಳಸಬಹುದು.

    ಗೋವಾ ಸರ್ಕಾರ 113 ಟಿಎಂಸಿ ನೀರು ಮಹದಾಯಿಯಲ್ಲಿದೆ ಎನ್ನುತ್ತದೆ. ಆದರೆ 173 ಟಿಎಂಸಿ ಮಹದಾಯಿ ನೀರಿಗೆ ಬೇಡಿಕೆ ಸಲ್ಲಿಸುತ್ತದೆ. ಗೋವಾ ಮಂಡಿಸಿರುವ ವಾದ ಸರಿಯಲ್ಲ ಮತ್ತು ತಪ್ಪು ದಾರಿಗೆಳೆಯುತ್ತಿದೆ. ಅಂತಾರಾಜ್ಯ ನದಿಗಳಲ್ಲಿ ನೀರಿನ ಬಳಕೆಗೆ ಸಂಬಂಧಿಸಿದಂತೆ ಯಾವುದೇ ರಾಜ್ಯವು ಇನ್ನೊಂದು ರಾಜ್ಯದ ಅನುಮತಿ ಪಡೆಯಬೇಕು ಎಂಬುದಿಲ್ಲ. ಆದರೆ ಮತ್ತೊಂದು ರಾಜ್ಯವು ಯೋಜನೆಯಿಂದ ತನಗೆ ಹಾನಿ ಆಗುತ್ತದೆ ಎಂದರೆ ಮಾತ್ರ ದೂರು ಸಲ್ಲಿಸಬಹುದು ಎಂದು ವಾದ ಮಂಡಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಬಲಿಗರಿಲ್ಲದೇ ಬಣಗುಟ್ಟುತ್ತಿದೆ ಮಾಜಿ ಸಿಎಂ ಮನೆ – ಮೌನಕ್ಕೆ ಶರಣಾದ ಯಡಿಯೂರಪ್ಪ

    ಬೆಂಬಲಿಗರಿಲ್ಲದೇ ಬಣಗುಟ್ಟುತ್ತಿದೆ ಮಾಜಿ ಸಿಎಂ ಮನೆ – ಮೌನಕ್ಕೆ ಶರಣಾದ ಯಡಿಯೂರಪ್ಪ

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಫುಲ್ ಗಿಜಿ ಗಿಜಿ ಅಂತಿದ್ದ ಬಿಎಸ್ ಯಡಿಯೂರಪ್ಪ ನಿವಾಸ ಈಗ ಬಿಕೋ ಅಂತಿದೆ.

    ಫಲಿತಾಂಶದ ಬಳಿಕ ಧವಳಗಿರಿ ನಿವಾಸದಲ್ಲಿ ಸಭೆಗಳ ಮೇಲೆ ಸಭೆಗಳು ನಡೆದಿತ್ತು. ರಾಜಕೀಯ ನಾಯಕರು, ಬೆಂಬಲಿಗರಿಂದ ಬಿಎಸ್‍ವೈ ನಿವಾಸ ತುಂಬಿ ಹೋಗಿತ್ತು. ಆದ್ರೆ ಶನಿವಾರ ಸಂಜೆ ಬಿಎಸ್‍ವೈ ರಾಜೀನಾಮೆ ನೀಡಿದ ಬಳಿಕ ಮನೆ ಖಾಲಿಯಾಗಿದೆ.

    ಇತ್ತ ನಾನೇ ಮುಖ್ಯಮಂತ್ರಿ ಅಂತ ಸಿಎಂ ಪಟ್ಟ ಅಲಂಕರಿಸಿದ್ದ ಕೇವಲ 55 ಗಂಟೆಗಳಲ್ಲೇ ಯಡಿಯೂರಪ್ಪ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡು ಇದೀಗ ಮೌನಕ್ಕೆ ಶರಣಾಗಿದ್ದಾರೆ.

    ಚುನಾವಣಾ ಫಲಿತಾಂಶಕ್ಕೂ ಮೊದಲೇ ಫುಲ್ ಜೋಶ್ ನಿಂದ ನಾನೇ ಮುಂದಿನ ಸಿಎಂ ಅಂತ ಹೇಳಿದ್ದರು. ಫಲಿತಾಂಶದಲ್ಲೂ ಬಿಜೆಪಿ ಬಹುಮತ ಪಡೆದಿತ್ತು. ಆದ್ರೆ ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ ತರಾತುರಿಯಾಗಿ ರಾಜ್ಯಪಾಲರ ಅನುಮತಿಯಂತೆ ಬಿಎಸ್ ಯಡಿಯೂರಪ್ಪ ಅವರು ಪ್ರಮಾಣ ವಚನ ಮಾಡಿಯೇ ಬಿಟ್ಟರು.

    ಬಿಎಸ್‍ವೈ ಪ್ರಮಾಣವಚನವನ್ನು ಪ್ರಶ್ನಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬಿಜೆಪಿ ಶನಿವಾರ ಸಂಜೆಯೊಳಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡುವಂತೆ ಸೂಚನೆ ನೀಡಿತ್ತು. ಈ ನಡುವೆ ರಾಜ್ಯ ರಾಜಕಾರಣದಲ್ಲಿ ಹಲವು ಹೈಡ್ರಾಮಾಗಳೇ ನಡೆದು ಹೋದವು. ಕೊನೆಗೆ ಬಿಎಸ್ ವೈ ಅವರು ವಿಶ್ವಾಸ ಮತ ಸಾಬೀತು ಮಾಡಲು ಸಾಧ್ಯವಾಗದೇ ಭಾವನಾತ್ಮಕ ಭಾಷಣ ಮಾಡಿ ವಿಧಾನಸಭೆಯಿಂದ ನೇರವಾಗಿ ರಾಜ್ಯಪಾಲರ ಬಳಿ ತೆರಳಿ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.

     

    ಒಟ್ಟಿನಲ್ಲಿ ಕರ್ನಾಟಕದಲ್ಲಿ ಇದೀಗ ನಡೆಯುತ್ತಿರುವ ಬೆಳವಣಿಗೆಗಳು ರಾಷ್ಟ್ರ ರಾಜಕಾರಣದಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿಯಾಗುವ ಸಾಧ್ಯತೆಗಳು ಹೆಚ್ಚಾಗಿ ಕಾಣಿಸುತ್ತಿದೆ. ಮುಂದಿನ ಲೋಕಸಭೆಗೆ ಚುನಾವಣೆ ವೇಳೆಗೆ ಬಿಜೆಪಿಯೇತರ ಪಕ್ಷಗಳು ಒಟ್ಟಾಗುವ ಸಂಭವ ಹೆಚ್ಚಿದೆ. ಇದಕ್ಕೆ ಪೂರಕವಾಗಿ ಕಂಠೀರವ ಸ್ಟೇಡಿಯಂನಲ್ಲಿ ಹೆಚ್‍ಡಿಕೆ ಪ್ರಮಾಣವಚನ ಸಮಾರಂಭಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಮಾಯಾವತಿ, ಶರದ್ ಪವಾರ್, ಚಂದ್ರಬಾಬು ನಾಯ್ಡು, ಕೆ ಚಂದ್ರಶೇಖರ್ ರಾವ್ ಸೇರಿದಂತೆ ಹಲವು ಪಕ್ಷಗಳ ಪ್ರಮುಖರು ಹಾಜರಾಗುವ ಸಾಧ್ಯತೆ ಇದೆ.

    ಬಿಜೆಪಿ ಸೋಲಿಸಲು ಇತರೆ ಪಕ್ಷಗಳ ಜೊತೆ ಕೈಜೋಡಿಸಲು ಕಾಂಗ್ರೆಸ್ ಸಿದ್ಧ ಎಂದು ರಾಹುಲ್ ಗಾಂದಿ ಕೂಡ ಘೋಷಿಸಿದ್ರು. ಇನ್ನು ರಾಜ್ಯದಲ್ಲಿ ನಡೆಯಬೇಕಿರೋ ಮೂರು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುಂದುವರೆಸಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.

  • ಗೋ ಹತ್ಯೆ ನಿಷೇಧ: ಕೇಂದ್ರದ ಆಧಿಸೂಚನೆಗೆ ಸುಪ್ರೀಂ ತಡೆ

    ಗೋ ಹತ್ಯೆ ನಿಷೇಧ: ಕೇಂದ್ರದ ಆಧಿಸೂಚನೆಗೆ ಸುಪ್ರೀಂ ತಡೆ

    ನವದೆಹಲಿ: ಮಾಂಸದ ಉದ್ದೇಶಕ್ಕಾಗಿ ಜಾನುವಾರು ಮಾರಾಟ ಮತ್ತು ಖರೀದಿ ಮೇಲೆ ನಿರ್ಬಂಧ ಹೇರಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

    ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ಈ ಹಿಂದೆ ಈ ಅಧಿಸೂಚನೆಗೆ 4 ವಾರಗಳ ತಡೆ ನೀಡಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾ. ಖೇಹರ್ ಅವರಿದ್ದ ಪೀಠ ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದುದಿದು ದೇಶಾದ್ಯಂತ ಅನ್ವಯಿಸಲಿದೆ ಎಂದು ಹೇಳಿದೆ.

    ಮಾಂಸದ ಉದ್ದೇಶಕ್ಕಾಗಿ ಜಾನುವಾರು ಮಾರಾಟ ಮತ್ತು ಖರೀದಿ ಮೇಲೆ ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರ ಮೇ 26ರಂದು ಅಧಿಸೂಚನೆ ಹೊರಡಿಸಿತ್ತು. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದನ್ನು ಪ್ರಶ್ನಿಸಿ ಹೈದರಾಬಾದ್ ಮೂಲದ ಫಾಹಿಮ್ ಖುರೇಷಿ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದರು.

    ಕೇಂದ್ರ ಸರ್ಕಾರದ ನಿರ್ಧಾರ ಅಸಂವಿಧಾನಿಕವಾಗಿದ್ದು, ಈ ನಿರ್ಧಾರದಿಂದ ಮಾಂಸ ವ್ಯಾಪಾರೋದ್ಯಮಿಗಳಿಗೆ ಸಮಸ್ಯೆ ಆಗುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದ್ದು, ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

  • 2016ರಲ್ಲಿ ಕರ್ನಾಟಕದಿಂದ ಬಿಡುಗಡೆಯಾಗಬೇಕಿದ್ದ ನೀರು ಹರಿಸಲು ಆದೇಶಿಸಿ: ತಮಿಳುನಾಡು ಅರ್ಜಿ

    2016ರಲ್ಲಿ ಕರ್ನಾಟಕದಿಂದ ಬಿಡುಗಡೆಯಾಗಬೇಕಿದ್ದ ನೀರು ಹರಿಸಲು ಆದೇಶಿಸಿ: ತಮಿಳುನಾಡು ಅರ್ಜಿ

    ನವದೆಹಲಿ: ಕಾವೇರಿ ವಿಚಾರವಾಗಿ ತಮಿಳುನಾಡು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕಳೆದ ವರ್ಷ ಬಾಕಿ ಉಳಿಸಿಕೊಂಡಿರುವ ನೀರನ್ನು ಹರಿ ಬಿಡಲು ಕರ್ನಾಟಕ ರಾಜ್ಯಕ್ಕೆ ಸೂಚಿಸುವಂತೆ ತಮಿಳುನಾಡು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.

    ಕರ್ನಾಟಕ 5.96 ಟಿಎಂಸಿ ನೀರನ್ನು ಬಾಕಿ ಉಳಿಸಿಕೊಂಡಿದ್ದು, ಬರ ಇರುವ ಹಿನ್ನೆಲೆಯಲ್ಲಿ ಕುಡಿಯುವ ಉದ್ದೇಶಕ್ಕಾಗಿ ನೀರನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಮನವಿ ಮಾಡಿಕೊಂಡಿದೆ.

    ಅರ್ಜಿಯಲ್ಲಿ ಏನಿದೆ?
    ಕಳೆದ ವರ್ಷ ವಿಚಾರಣೆ ವೇಳೆ ಸುಪ್ರಿಂ ಕೋರ್ಟ್ 15 ಸಾವಿರ, 12 ಸಾವಿರ, 6 ಸಾವಿರ ಕ್ಯೂಸೆಕ್ ನಂತೆ ಒಟ್ಟು 22.55 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ರಾಜ್ಯದಲ್ಲೂ ಸಾಕಷ್ಟು ಪ್ರತಿಭಟನೆಗಳ ನಡುವೆ ಇದ್ದ ಅಲ್ಪ ನೀರಿನಲ್ಲಿ 16.58 ಟಿಎಂಸಿ ನೀರನ್ನು ಹರಿಸಲಾಗಿತ್ತು. ಕೆಆರ್‍ಎಸ್ ನಲ್ಲೂ ನೀರಿನ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ಕರ್ನಾಟಕ 5.96 ಟಿಎಂಸಿ ನೀರನ್ನು ಬಾಕಿ ಉಳಿಸಿಕೊಂಡಿದ್ದು, ಈ ಬಾಕಿ ನೀರನ್ನು ತಮಿಳುನಾಡು ಗೆ ಹರಿಸುವಂತೆ ಕೋರಲಾಗಿದೆ.

    ಭೀಕರ ಭರ ಆವರಿಸಿದ್ದು, ಕುಡಿಯುವ ನೀರು ಒದಗಿಸುವ ಸಲುವಾಗಿ ನೀರು ಬಿಡಬೇಕು. ಕಳೆದ ವರ್ಷ ನೀಡಿದ್ದ ತೀರ್ಪನ್ನು ಪಾಲಿಸದೇ ಕರ್ನಾಟಕ ಸರ್ಕಾರ ಉಲ್ಲಂಘಿಸಿದೆ. ಕೂಡಲೇ ನೀರು ಹರಿಸಲು ಸೂಚಿಸುವಂತೆ ಅರ್ಜಿಯಲ್ಲಿ ತಮಿಳುನಾಡು ಮನವಿ ಮಾಡಿಕೊಂಡಿದೆ.

    ಇತ್ತ ರಾಜ್ಯದಲ್ಲೂ ಹಿಂಗಾರು ಮತ್ತು ಮುಂಗಾರು ಕೈಕೊಟ್ಟಿದ್ದು ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಯಾವುದೇ ಜಲಾಶಯಗಳು ಭರ್ತಿಯಾಗಿಲ್ಲ. ಮತ್ತೇ ಬರದ ಆತಂಕ ಎದುರಾಗಿದೆ. ಜುಲೈ ಎರಡನೇ ವಾರದಲ್ಲಿ ಕಾವೇರಿ ಅರ್ಜಿಗಳು ಮತ್ತೆ ವಿಚಾರಣೆಗೆ ಬರಲಿದೆ. ಈ ನಡುವೆ ಇದೊಂದು ಅರ್ಜಿ ಹೆಚ್ಚುವರಿಯಾಗಿ ಸೆರ್ಪಡೆಯಾಗಿದೆ. ಜೊತೆಗೆ ಪ್ರತಿನಿತ್ಯ ಎರಡು ಸಾವಿರ ನೀರು ಹರಿಸುವ ಆದೇಶ ಇದ್ದು ರಾಜ್ಯಕ್ಕೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

    ಈಗಾಗಲೇ ಕಾವೇರಿ ಕಾನೂನು ತಂಡ ತಯಾರಿ ನಡೆಸುತ್ತಿದ್ದು ಮಲೆನಾಡಿನ ಕಾವೇರಿ ಕೊಳ್ಳದ ಮಳೆ ಪ್ರಮಾಣದ ಅಂಕಿ ಅಂಶಗಳನ್ನು ಕಲೆಹಾಕಲಾಗುತ್ತಿದೆ. ರಾಜ್ಯದ ಈ ವರ್ಷದ ಪರಿಸ್ಥಿತಿ ಯನ್ನು ಸುಪ್ರೀಂಕೋರ್ಟ್ ಮುಂದೆ ಇಡಲಿದೆ. ಈ ವರ್ಷವೂ ಎರಡು ರಾಜ್ಯಗಳಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದು ಮತ್ತೆ ಕಾವೇರಿಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಕಾದಾಟ ಆರಂಭವಾಗಿದೆ.

     

     

     

    ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
    ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತ್ತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10, ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ಟಿಎಂಸಿ ನೀರನ್ನು ಹಂಚಲಾಯಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶಿಸಿತು. (ನ್ಯಾಯಾಲಯಗಳು ವಿಚಾರಣೆ ನಡೆಸಿ ತೀರ್ಪು ನೀಡುತ್ತವೆ. ನ್ಯಾಯಾಧಿಕರಣಗಳು ವಿಚಾರಣೆ ನಡೆಸಿ ನೀಡುವ ಮಧ್ಯಂತರ/ಅಂತಿಮ ತೀರ್ಪಿಗೆ ಐತೀರ್ಪು ಎಂದು ಕರೆಯಲಾಗುತ್ತದೆ)

    ಯಾವ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು?
    ಜೂನ್ 10, ಜುಲೈ 34, ಅಗಸ್ಟ್ 50, ಸೆಪ್ಟೆಂಬರ್ 40, ಅಕ್ಟೋಬರ್ 22, ನವೆಂಬರ್ 15, ಡಿಸೆಂಬರ್ 8, ಜನವರಿ 3, ಫೆಬ್ರವರಿ 2.5, ಮಾರ್ಚ್ 2.5, ಏಪ್ರಿಲ್ 2.5, ಮೇ 2.5 ಸೇರಿ ಒಟ್ಟು 192 ಟಿಎಂಸಿ ನೀರನ್ನು ಕನಾಟಕ ಪ್ರತಿವರ್ಷ ತಮಿಳುನಾಡಿಗೆ ಹರಿಸಬೇಕು.

    ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?
    ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನ ಅಧಿಕಾರಿಗಳು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.