Tag: supremecourt

  • ಕೇಜ್ರಿವಾಲ್ ಜಾಮೀನು ಅರ್ಜಿ ಸೆ. 5ಕ್ಕೆ ಮುಂದೂಡಿಕೆ

    ಕೇಜ್ರಿವಾಲ್ ಜಾಮೀನು ಅರ್ಜಿ ಸೆ. 5ಕ್ಕೆ ಮುಂದೂಡಿಕೆ

    – ಪ್ರಕರಣ ರಾಜಕೀಯಗೊಳಿಸಲು ಯತ್ನ, ಸಿಬಿಐ ಆರೋಪ

    ನವದೆಹಲಿ: ಸಿಬಿಐ ಬಂಧನ ಪ್ರಶ್ನಿಸಿ, ಜಾಮೀನು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ (Supremecourt) ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಬಿಐ ಸಮಯ ಕೇಳಿದ ಹಿನ್ನಲೆ ಒಂದು ವಾರದ ಕಾಲಾವಕಾಶ ನೀಡಿದೆ.

    ಇದಕ್ಕೂ ಮುನ್ನ ಸಿಬಿಐ(Central Bureau Of Investigation)  ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಂಟರ್ ಅಫಿಡವಿಟ್ ಸಲ್ಲಿಸಿದೆ. ಇದರಲ್ಲಿ ವಿವಾದಾತ್ಮಕ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ, ಕೇಜ್ರಿವಾಲ್ ಅವರ ಬಂಧನವು ಕಾನೂನುಬದ್ಧವಾಗಿದೆ, ದೆಹಲಿ ಹೈಕೋರ್ಟ್(Delhi Highcourt) ಈಗಾಗಲೇ ಕೇಜ್ರಿವಾಲ್ ಅವರ ರಿಟ್ ಅರ್ಜಿಯನ್ನು ವಜಾಗೊಳಿಸಿದೆ ಎಂದು ಹೇಳಿದೆ. ಇದನ್ನೂ ಓದಿ: ರಾಜಕೀಯ ಪ್ರವೇಶದ ಬಳಿಕವೂ ಯಶಸ್ವಿ ಆಪರೇಷನ್ – ಮಂಜುನಾಥ್ ಕೆಲಸಕ್ಕೆ ಮೆಚ್ಚುಗೆ

    ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಒಳಗೊಳ್ಳುವಿಕೆಯನ್ನು ಸೂಚಿಸುವ ಗಣನೀಯ ಪುರಾವೆಗಳನ್ನು ನೀಡಲಾಗಿದೆ. ಅವರ ಕ್ರಮಗಳು ಕಾನೂನುಬಾಹಿರ ಮಾತ್ರವಲ್ಲ, ಗಮನಾರ್ಹ. ಹಣಕಾಸಿನ ಅಕ್ರಮಗಳು ಮತ್ತು ಸಾರ್ವಜನಿಕ ಕಚೇರಿಯ ದುರುಪಯೋಗವನ್ನು ಒಳಗೊಂಡಿರುವ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಸಿಬಿಐ ಪ್ರತಿಪಾದಿಸಿದೆ. ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿ ವಿವಾದ: ತಮ್ಮಂದಿರಿಂದಲೇ ಅಣ್ಣನ ಕೊಲೆ

    ಕೇಜ್ರಿವಾಲ್ ಪ್ರಕರಣವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಅವರು ಅಪರಾಧಗಳ ಆಯೋಗದ ಬಗ್ಗೆ ಪ್ರಾಥಮಿಕವಾಗಿ ತೃಪ್ತರಾಗಿರುವ ವಿವಿಧ ನ್ಯಾಯಾಲಯಗಳು ಪದೇಪದೆ ಆದೇಶಗಳನ್ನು ನೀಡಿದ್ದರೂ ಈ ಗೌರವಾನ್ವಿತ ನ್ಯಾಯಾಲಯದ ಮುಂದೆ ಪ್ರಕರಣವನ್ನು ರಾಜಕೀಯವಾಗಿ ಸಂವೇದನಾಶೀಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬಂಧನವು ಯಾವುದೇ ಸಮರ್ಥನೀಯವಲ್ಲ ಎಂದು ಹೇಳಲಾಗುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಮುಡಾ ಸೈಟ್ ಪಡೆಯಲು ಸಿಎಂ ಪತ್ನಿ ಡಿಮ್ಯಾಂಡ್ – ಸಿಎಂ ವಿರುದ್ಧ ಹೆಚ್‌ಡಿಕೆ ಕಿಡಿ

    ಆರೋಪಿಗಳ ಹಾರ್ಡ್ ಡ್ರೈವ್‌ಗಳು ಮತ್ತು ಮೊಬೈಲ್ ಫೋನ್‌ಗಳಿಂದ ಪಡೆದ ಡೇಟಾವು ಕೇಜ್ರಿವಾಲ್ ಅವರ ಒಳಗೊಳ್ಳುವಿಕೆಯನ್ನು ದೃಢಪಡಿಸುತ್ತದೆ ಎಂದು ಅಫಿಡವಿಟ್ ಉಲ್ಲೇಖಿಸಿದೆ. ಇದರಲ್ಲಿ ವಾಟ್ಸಾಪ್ ಚಾಟ್‌ಗಳು, ಸ್ಕ್ರೀನ್‌ಶಾಟ್‌ಗಳು, ಕೇಜ್ರಿವಾಲ್ ಅವರನ್ನು ಹಣಕಾಸು ವಹಿವಾಟುಗಳಿಗೆ ಲಿಂಕ್ ಮಾಡುವ ಸಂಪರ್ಕ ವಿವರಗಳು ಮತ್ತು ಪರಿಶೀಲನೆಯಲ್ಲಿರುವ ನೀತಿ ನಿರ್ಧಾರಗಳು ಸೇರಿವೆ. ಈ ದಾಖಲೆಗಳು ಕೇಜ್ರಿವಾಲ್ ಮತ್ತು ಅಕ್ರಮ ಚಟುವಟಿಕೆಗಳ ನಡುವಿನ ನೇರ ಸಂಪರ್ಕವನ್ನು ಸೂಚಿಸುತ್ತವೆ ಎಂದು ಸಿಬಿಐ ಆರೋಪಿಸಿದೆ. ಇದನ್ನೂ ಓದಿ: ಮೋದಿ ಉತ್ತರಾಧಿಕಾರಿ ಯಾರು? ಅಮಿತ್‌ ಶಾ, ಗಡ್ಕರಿ, ಯೋಗಿ.. ಯಾರಿಗೆ ಹೆಚ್ಚು ಜನರ ಒಲವು?

  • ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರಿಗೆ ಸುಪ್ರೀಂನಿಂದ ತಾತ್ಕಾಲಿಕ ರಿಲೀಫ್

    ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರಿಗೆ ಸುಪ್ರೀಂನಿಂದ ತಾತ್ಕಾಲಿಕ ರಿಲೀಫ್

    ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಮತ್ತು ಖುದ್ದು ಹಾಜರಾಗಲು ಕೆಳಹಂತದ ನ್ಯಾಯಾಲಯ ನೀಡಿದ ಸಮನ್ಸ್‌ಗೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಹೃಷಿಕೇಶ್ ನೇತೃತ್ವದ ದ್ವಿ ಸದಸ್ಯ ಪೀಠ, ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿ ಆರು ವಾರದಲ್ಲಿ ಉತ್ತರಿಸಲು ಸೂಚನೆ ನೀಡಿದೆ.

    ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ರಾಜೀನಾಮೆಗೆ ಒತ್ತಾಯಿಸಿ 2022 ರಲ್ಲಿ ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿನ್ನೆಲೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಎಂ.ಬಿ‌. ಪಾಟೀಲ್, ರಾಮಲಿಂಗಾರೆಡ್ಡಿ, ರಣದೀಪ್ ಸಿಂಗ್ ಸುರ್ಜೇವಾಲ ವಿರುದ್ಧ ಕ್ರಿಮಿನಲ್‌ ಕೇಸ್ ದಾಖಲಿಸಲಾಗಿತ್ತು. ಇದನ್ನೂ ಓದಿ: ಧೈರ್ಯವಾಗಿ ಪ್ರಶ್ನಿಸಿ ಅಂದಿದ್ದು ತಪ್ಪಿಲ್ಲ- ಕುವೆಂಪು ಬರಹ ಬದಲಿಕೆಗೆ ಪ್ರಿಯಾಂಕ್ ಖರ್ಗೆ ಸಮರ್ಥನೆ

    ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯ ಆರೋಪಿಗಳು ನ್ಯಾಯಾಲಯದ ಮುಂದೆ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶಿಸಿತ್ತು. ಈ ಆದೇಶವನ್ನು ರದ್ದುಗೊಳಿಸಲು ಹೈಕೋರ್ಟ್ ಗೆ (High Court) ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್, ಅರ್ಜಿದಾರರಿಗೆ ತಲಾ 10,000 ವೆಚ್ಚ ಭರಿಸಲು ಆದೇಶಿಸಿತ್ತು. ಈ ಹಿನ್ನೆಲೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಮತ್ತು ಇತರೆ ನಾಯಕರು ಸುಪ್ರೀಂಕೋರ್ಟ್ ಗೆ (Supreme Court) ಮೇಲ್ಮನವಿ ಅರ್ಜಿ ಸಲ್ಲಿಸಿ ಪ್ರಕರಣ ರದ್ದು ಕೋರಿದ್ದರು.

    ಇಂದು ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿತು. ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನುಸಿಂಘ್ವಿ, ಇದೊಂದು ರಾಜಕೀಯ ಪ್ರತಿಭಟನೆಯಾಗಿದ್ದು, ಕ್ರಿಮಿನಲ್ ಮೊಕದ್ದಮೆಯು ಸಂವಿಧಾನದ 19(1)(ಎ) ವಿಧಿಯಡಿ ಪ್ರತಿಭಟಿಸುವ ಹಕ್ಕಿನ ಉಲ್ಲಂಘನೆಯಾಗಿದೆ. ಯಾವುದೇ ಕ್ರಿಮಿನಲ್ ಉದ್ದೇಶವಿಲ್ಲದೆ ಶಾಂತಿಯುತವಾಗಿ ನಡೆಸಿದ ರಾಜಕೀಯ ಪ್ರತಿಭಟನೆಯನ್ನು ದಂಡದ ನಿಬಂಧನೆಗಳನ್ನು ಬಳಸಿ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಇತ್ತ ರಣದೀಪ್ ಸುರ್ಜೆವಾಲ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್, ಇಂತಹ ಬೆಳವಣಿಗೆ ತುಂಬಾ ಅಪಾಯಕಾರಿ. ಈ ನಿಯಮಗಳಿಂದ ಪ್ರತಿ ಸಾರ್ವಜನಿಕ ಪ್ರತಿಭಟನೆಯು ಕಾನೂನುಬಾಹಿರವಾಗಿರುತ್ತದೆ ಎಂದು ವಾದಿಸಿದರು.

    ವಾದ ಆಲಿಸಿದ ಪೀಠ, ಆರು ವಾರಗಳಲ್ಲಿ ಉತ್ತರಿಸುವಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ ಪ್ರಕರಣದ ಮುಂದಿನ ವಿಚಾರಣೆಗೆ ತಡೆ ನೀಡಿತು. ಇದೇ ವೇಳೆ ಅರ್ಜಿದಾರರಿಗೆ ತಲಾ 10,000 ರೂ.ಗಳ ವೆಚ್ಚವನ್ನು ವಿಧಿಸಿದ ಕರ್ನಾಟಕ ಹೈಕೋರ್ಟ್‌ನ ಆದೇಶಕ್ಕೂ ತಡೆ ನೀಡಿತು. ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಿಂದಾಗಿ ಫೆ.26 ರಂದು ಕೋರ್ಟ್ ಹಾಜರಾಗಬೇಕಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

  • ರಾಜ್ಯ ಸರ್ಕಾರ ಕರ್ನಾಟಕದ ಜನತೆಯನ್ನ ಬಲಿ ಕೊಡ್ತಿದೆ – ಶೋಭಾ ಕರಂದ್ಲಾಜೆ ಆಕ್ರೋಶ

    ರಾಜ್ಯ ಸರ್ಕಾರ ಕರ್ನಾಟಕದ ಜನತೆಯನ್ನ ಬಲಿ ಕೊಡ್ತಿದೆ – ಶೋಭಾ ಕರಂದ್ಲಾಜೆ ಆಕ್ರೋಶ

    – ತಮಿಳುನಾಡಿಗೆ ನೀರು ಹರಿಸೋದಕ್ಕೆ ಕೇಂದ್ರ ಸಚಿವೆ ವಿರೋಧ

    ಚಿಕ್ಕಮಗಳೂರು: ರಾಜ್ಯ ಸರ್ಕಾರ (Government Of Karnataka) ತನ್ನೊಳಗಿನ ಗೊಂದಲಗಳಿಂದಾಗಿ ರಾಜ್ಯದ ಜನರನ್ನ ಬಲಿ ಕೊಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಆಕ್ರೋಶ ಹೊರಹಾಕಿದ್ದಾರೆ.

    ಚಿಕ್ಕಮಗಳೂರಿನಲ್ಲಿಂದು (Chikkamagaluru) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತಮಿಳುನಾಡಿಗೆ ನೀರು ಬಿಡುವ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡ್ಯಾಂನಲ್ಲಿ ತುಂಬಿ ಹಿಡಿದಿಟ್ಟುಕೊಳ್ಳಲು ಆಗದೇ ಇದ್ದಾಗ ತಮಿಳುನಾಡಿಗೆ ನೀರು ಬಿಟ್ಟಿದ್ವಿ: ಹೆಚ್‍ಡಿಕೆ

    ದೇಶದಲ್ಲಿ ಇದ್ದಾರೆಂಬ ಕಾರಣಕ್ಕೆ ಒತ್ತಡದಿಂದ ನೀರು ಬಿಟ್ಟಿದ್ದಾರೆ. ಆದ್ರೆ ರಾಜ್ಯದಲ್ಲಿ ಮಳೆ ಕಡಿಮೆ ಇದ್ದು, ಬಹಳ ಜಿಲ್ಲೆಗಳಲ್ಲಿ ಬರದ ವಾತಾವರಣವಿದೆ. ತಮಿಳುನಾಡು ಸರ್ಕಾರ ಹಾಗೂ ವ್ಯವಸ್ಥೆಗೆ ಈ ಬಗ್ಗೆ ಮನವರಿಕೆ ಮಾಡಬೇಕಿತ್ತು. ನಮ್ಮ ರೈತರು, ಬೆಂಗಳೂರಿನ ಜನಕ್ಕೆ ಕುಡಿಯೋಕು ನೀರಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತೆ. ಈಗಾಗಲೇ ಬೆಂಗಳೂರು ನಗರಕ್ಕೆ (Bengaluru City) ಅಗತ್ಯಕ್ಕೆ ತಕ್ಕಷ್ಟು ನೀರು ಬಿಡುತ್ತಿಲ್ಲ. ಸರಿಯಾಗಿ ವಿದ್ಯುತ್ ಇಲ್ಲ, ನೀರಿಲ್ಲ, ಮಳೆ ಇಲ್ಲ ಎಲ್ಲಾ ಕಾರಣದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ (Mandya) ಜನರಿಗೆ ಕುಡಿಯುವ ನೀರಿಗೂ ತತ್ವಾರ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಜನರ ಬಗ್ಗೆ ಯೋಚಿಸ್ತಿಲ್ಲ, ಅವರವರ ಒಳ ರಾಜಕೀಯದ ಬಗ್ಗೆ ಯೋಚಿಸ್ತಿದೆ. ಸರ್ಕಾರ ತನ್ನೊಳಗಿನ ಗೊಂದಲಗಳಿಂದಾಗಿ ಕರ್ನಾಟಕದ ಜನರನ್ನ ಬಲಿ ಕೊಡ್ತಿದೆ ಎಂದು ಕಿಡಿ ಕಾರಿದ್ದಾರೆ.

    ದೇಶಕ್ಕೆ ಮೋದಿ ಬೇಕು:
    ಪಕ್ಷ ಬಿಟ್ಟು ಹೋದವರನ್ನ ಮತ್ತೆ ಸೇರಿಸಿಕೊಂಡು ಬಿಜೆಪಿಯನ್ನ ಗಟ್ಟಿ ಮಾಡಬೇಕು. ಮೋದಿಯನ್ನ ಮತ್ತೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸಬೇಕು. ದೇಶಕ್ಕೆ ಮೋದಿ ಬೇಕಾಗಿದೆ, ವಿಶ್ವಕ್ಕೆ ಮೋದಿ ಬೇಕಾಗಿದೆ. ವಿಶ್ವದ ಹಲವು ದೇಶ ಭಾರತ, ಮೋದಿಯನ್ನ ನೋಡ್ತಿವೆ. ಭಾರತವನ್ನು ಮತ್ತಷ್ಟು ಗಟ್ಟಿ ಮಾಡಲು ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: KRSನಿಂದ ತಮಿಳುನಾಡಿಗೆ ಗುರುವಾರವೂ ಭಾರೀ ಪ್ರಮಾಣದ ನೀರು – ಇಂದು ರೈತಸಂಘ ಪ್ರತಿಭಟನೆ

    ಬಿಜೆಪಿ (BJP) ಸರ್ಕಾರ ರಚನೆ ಮಾಡಲು ಶಾಸಕರು, ಮುಖಂಡರು ಬಿಜೆಪಿ ಸೇರಿದ್ದರು. ಅವರಿಗೆ ಬಿಜೆಪಿ ಅತ್ಯಂತ ಗೌರವದಿಂದ ನಡೆದುಕೊಂಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಅವರಿಗೆ ದೊಡ್ಡ ಖಾತೆಗಳನ್ನೇ ಕೊಟ್ಟಿದೆ. ಅವರನ್ನ ದೊಡ್ಡ-ದೊಡ್ಡ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ಮಾಡಿದೆ. ಪಕ್ಷದ ಎಲ್ಲಾ ಚಟುವಟಿಕೆಯಲ್ಲಿ ಅವರನ್ನ ತೊಡಗಿಸಿಕೊಳ್ಳಲಾಗಿತ್ತು. ಇವತ್ತು ಸರ್ಕಾರ ಇಲ್ಲ, ಬಿಜೆಪಿ ಸೋತಿದೆ. ಆ ಸೋಲಿನಲ್ಲೂ ಎಲ್ಲರ ಪಾಲು ಇದೆ. ಮತ್ತೆ ಬಿಜೆಪಿಯನ್ನ ಕಟ್ಟಬೇಕು ಅನ್ನೋದು ನಮ್ಮ ಅಪೇಕ್ಷೆ. ಅಂದು ನಮ್ಮ ಪಕ್ಷದ ತತ್ವ-ಸಿದ್ಧಾಂತಗಳನ್ನ ಒಪ್ಪಿಕೊಂಡು ಪಕ್ಷ ಸೇರಿದ್ದರು. ಅವರು ಖಂಡಿತವಾಗಿಯೂ ಪಕ್ಷದಲ್ಲೇ ಇರ್ತಾರೆ ಅನ್ನೋ ವಿಶ್ವಾಸವಿದೆ. ಅಧಿಕಾರಕ್ಕಾಗಿ ಬಂದ್ರು, ಅಧಿಕಾರ ಇಲ್ಲದಾಗ ಹೋದ್ರು ಎಂಬ ಕೆಟ್ಟ ಹೆಸರನ್ನ ಯಾರೂ ತೆಗೆದುಕೊಳ್ಳಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಗೆ ಪರೋಕ್ಷವಾಗಿ ಆಹ್ವಾನ ಕೊಟ್ಟ ಸಚಿವೆ, ಮೋದಿಗಾಗಿ ಪಕ್ಷ ಬಿಟ್ಟು ಹೋದವರಿಗೂ ಆಹ್ವಾನವಿದೆ. ಪಕ್ಷ ಬಿಟ್ಟೋದವರ ಜೊತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲ. ಮೋದಿಯಂತ ನಾಯಕ ಈ ದೇಶಕ್ಕೆ ಮತ್ತೆ ಸಿಗಲ್ಲ. ದೇಶದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಮೋದಿಯಂತಹ ನಾಯಕ ಯಾವ ಪಕ್ಷದಲ್ಲೂ ಸಿಗೋದಿಲ್ಲ. ಇಡೀ ವಿಶ್ವವೇ ಅವರನ್ನ ಒಪ್ಪುತ್ತಿದೆ. ಅವರನ್ನ ಪಿಎಂ ಮಾಡಬೇಕು ಅದಕ್ಕಾಗಿ ಯಾರೇ ಪಾರ್ಟಿ ಬಿಟ್ಟಿದರೂ ವಾಪಸ್ ಬರಲು ವಿನಂತಿ. ಮೋದಿಗಾಗಿ, ದೇಶಕ್ಕಾಗಿ, ಮುಂದಿನ ಪೀಳಿಗೆಗಾಗಿ ಬರಬೇಕಿದೆ. ಪಕ್ಷಕ್ಕೆ ವಾಪಸ್ ಬನ್ನಿ. ವಿಶ್ವದ ಶಾಂತಿಗಾಗಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಬಿಜೆಪಿಯನ್ನು ದೇಶದಲ್ಲಿ ಇನ್ನಷ್ಟು ಬಲಿಷ್ಠಗೊಳಿಸೋಣ ಎಂದು ಕರೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • KRSನಿಂದ ತಮಿಳುನಾಡಿಗೆ ಗುರುವಾರವೂ ಭಾರೀ ಪ್ರಮಾಣದ ನೀರು – ಇಂದು ರೈತಸಂಘ ಪ್ರತಿಭಟನೆ

    KRSನಿಂದ ತಮಿಳುನಾಡಿಗೆ ಗುರುವಾರವೂ ಭಾರೀ ಪ್ರಮಾಣದ ನೀರು – ಇಂದು ರೈತಸಂಘ ಪ್ರತಿಭಟನೆ

    ಮಂಡ್ಯ: ಕೆಆರ್‌ಎಸ್ ಡ್ಯಾಂನಿಂದ (KRS Dam) ತಮಿಳುನಾಡಿಗೆ ಬಿಡುಗಡೆಯಾಗುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನವೇ ಕಾವೇರಿ ನೀರಾವರಿ ನಿಗಮದ (Cauvery Irrigation Corporation) ಅಧಿಕಾರಿಗಳು ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸುತ್ತಿದ್ದಾರೆ.

    ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಬುಧವಾರ ಕೆಆರ್‌ಎಸ್‌ನಿಂದ 9,136 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ (TamilNadu) ಹರಿಸಲಾಗಿತ್ತು, ಗುರುವಾರ (ಆ.17) 13,473 ಕ್ಯೂಸೆಕ್‌ ಹರಿಸಲಾಗುತ್ತಿದೆ. ಒಂದೇ ದಿನಕ್ಕೆ 4,337 ಕ್ಯೂಸೆಕ್ ನೀರು ಹೆಚ್ಚುವರಿ ಹರಿಸಲಾಗಿದೆ. ಇದನ್ನೂ ಓದಿ: KRSನಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುಗಡೆ

    ಭಾನುವಾರ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ 5,238 ಕ್ಯೂಸೆಕ್ ನೀರು ಬಿಡುಗಡೆಯಾದರೆ, ಸೋಮವಾರ 5,243 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಮಂಗಳವಾರ 8,590 ಕ್ಯೂಸೆಕ್ ನೀರು, ಬುಧವಾರ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ 9,136 ಕ್ಯೂಸೆಕ್ ನೀರು ಬಿಡುಗಡೆಯಾಗಿತ್ತು . ಗುರುವಾರವಾದ ಇಂದು 13,473 ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ಇದನ್ನೂ ಓದಿ: ಸಿನಿಮೀಯ ಸ್ಟೈಲ್‌ನಲ್ಲಿ ದೇವಸ್ಥಾನದಲ್ಲಿ ಜೆಡಿಎಸ್‌ ಮುಖಂಡನ ಹತ್ಯೆಗೆ ಯತ್ನ – ಕೊಲೆಗೆ ಸ್ನೇಹಿತನಿಂದಲೇ ಸ್ಕೆಚ್‌

    ಕೆಆರ್‌ಎಸ್‌ನಿಂದ ರಾಜ್ಯಕ್ಕೆ ನೀರು ಬಿಡುಗಡೆಗಾಗಿ ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನವೇ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ದಿನೇ ದಿನೇ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ತಮಿಳುನಾಡಿಗೆ ಹೆಚ್ಚಿನ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಧಾರದ ವಿರುದ್ಧ ರೈತ ಸಂಘ ಪ್ರತಿಭಟನೆಗೆ ಮುಂದಾಗಿದೆ. ಕೆಆರ್‌ಎಸ್ ಮುಖ್ಯದ್ವಾರದ ಬಳಿಯೇ ಪ್ರತಿಭಟನೆ ಹಮ್ಮಿಕೊಂಡಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಟಿಕ್‌ಟಾಕ್ ಸುಂದರಿಗೆ ಕಂಟಕವಾಯ್ತು ಮೊಬೈಲ್ ಗೀಳು – ಪ್ರೀತಿಸಿ ಮದ್ವೆಯಾಗಿದ್ದ ಮಡದಿಯನ್ನೇ ಕೊಂದ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಎಲೆಕ್ಷನ್- ಒಬಿಸಿ ಕೋಟಾಕ್ಕೆ ಸುಪ್ರೀಂ ಸಮ್ಮತಿ

    ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಎಲೆಕ್ಷನ್- ಒಬಿಸಿ ಕೋಟಾಕ್ಕೆ ಸುಪ್ರೀಂ ಸಮ್ಮತಿ

    ಭೋಪಾಲ್: ಹಿಂದುಳಿದ ವರ್ಗ (OBC)ಗಳಿಗೆ ಮೀಸಲಾತಿಯೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಮಧ್ಯಪ್ರದೇಶಕ್ಕೆ ಅನುಮತಿ ನೀಡಿದೆ.

    ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸುವಂತೆಯೂ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗವು ತನ್ನ ವರದಿಯನ್ನು ಮಂಡಿಸಿದ್ದು, ಅದರಲ್ಲಿ ‘ತ್ರಿವಳಿ ಪರೀಕ್ಷೆ’ ಅನುಸರಿಸಲಾಗಿದೆ ಎಂದು ಹೇಳಿದೆ.

    ನಿಖರ ಅಂಕಿ ಅಂಶಗಳ ಆಧಾರದ ಮೇಲೆ ಪರಿಶೀಲನೆ ನಡೆಸಬೇಕು. ಆ ಬಳಿಕವೇ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗದ ಜನರಿಗೆ ಶೇ. 27ರಷ್ಟು ಮೀಸಲಾತಿ ನೀಡಬೇಕು ಎಂದು ಕೋರ್ಟ್ ಹೇಳಿತ್ತು. ಇದನ್ನೂ ಓದಿ: ಮೋದಿ ಎಂದಿಗೂ ನಾನೇ ನೀಡಿದ್ದು ಎಂದು ಹೇಳಿರಲಿಲ್ಲ: ಸಿದ್ದುಗೆ ಟಾಂಗ್ ನೀಡಿದ ಸಿಟಿ ರವಿ

    ಮಧ್ಯಪ್ರದೇಶದಲ್ಲಿ 2 ವರ್ಷಗಳಿಂದ 23,000 ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆ ಸ್ಥಾನಗಳು ಖಾಲಿ ಇದ್ದು ಚುನಾವಣೆಗಾಗಿ ಕಾಯುತ್ತಿವೆ.

  • ವಲಸೆ ಕಾರ್ಮಿಕರ ನೋಂದಣಿ ಮಾಡ್ಕೊಂಡು ರಾಜ್ಯ ಸರ್ಕಾರಗಳು ಕೆಲಸ ನೀಡ್ಬೇಕು- ಸುಪ್ರೀಂಕೋರ್ಟ್

    ವಲಸೆ ಕಾರ್ಮಿಕರ ನೋಂದಣಿ ಮಾಡ್ಕೊಂಡು ರಾಜ್ಯ ಸರ್ಕಾರಗಳು ಕೆಲಸ ನೀಡ್ಬೇಕು- ಸುಪ್ರೀಂಕೋರ್ಟ್

    ನವದೆಹಲಿ: ಇತರೆ ರಾಜ್ಯಗಳಿಂದ ತವರು ರಾಜ್ಯಗಳಿಗೆ ವಲಸೆ ಹೋಗುತ್ತಿರುವ ವಲಸೆ ಕಾರ್ಮಿಕರಿಗೆ ಆಯಾ ರಾಜ್ಯ ಸರ್ಕಾರಗಳು ಕೆಲಸ ನೀಡಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

    ಇಂದು ಲಾಕೌಡೌನ್ ನಲ್ಲಿ ವಲಸೆ ಕಾರ್ಮಿಕರ ಅನಾನುಕೂಲಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ.ಎಸ್.ಎ ಬೊಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ಹೊಸ ನಿರ್ದೇಶನಗಳನ್ನು ನೀಡಿದೆ. ಕಾರ್ಮಿಕರು ಇಚ್ಛೆ ಪಟ್ಟಲ್ಲಿ ಮುಂದಿನ 15 ದಿನಗಳಲ್ಲಿ ಅವರನ್ನು ತವರು ರಾಜ್ಯಗಳಿಗೆ ವಾಪಸ್ ಕಳುಹಿಸುವ ವ್ಯವಸ್ಥೆ ಮಾಡಬೇಕು. ಜಿಲ್ಲಾಡಳಿತ ಬ್ಲಾಕ್ ಮಟ್ಟದಲ್ಲಿ ವಲಸೆ ಕಾರ್ಮಿಕರ ನೋಂದಣಿ ಆರಂಭಿಸಿ ಅವರಿಗೆ ದಿನನಿತ್ಯ ಕೆಲಸ ನೀಡಬೇಕು ಎಂದು ಆದೇಶಿಸಿದೆ.

    ಇಂದು ವಿಚಾರಣೆ ಈ ವೇಳೆ ಅರ್ಜಿಯಲ್ಲಿ ಭಾಗಿದಾರನ್ನಾಗಿ ಮಾಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸುಪ್ರೀಂಕೋರ್ಟಿಗೆ ಮನವಿ ಮಾಡಿತು. ಕೆಲವು ಸಲಹೆಗಳೊಂದಿಗೆ ಬಂದಿದ್ದು ತಮ್ಮನ್ನು ಪರಿಗಣಿಸಲು ಮನವಿ ಮಾಡಿದರು. ಆದರೆ ಇದಕ್ಕೆ ನಿರಾಕರಿಸಿದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆವರೆಗೂ ಕಾಯುವಂತೆ ಸೂಚನೆ ನೀಡಿದೆ.

    ಈ ಹಿಂದೆ ವಿಚಾರಣೆ ವೇಳೆ ವಲಸೆ ಕಾರ್ಮಿಕರಿಂದ ಪ್ರಯಾಣದ ದರ ಪಡೆಯದೇ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಬೇಕು ಹಾಗೂ ಪ್ರಯಾಣದ ವೇಳೆ ರಾಜ್ಯ ಸರ್ಕಾರಗಳು ಆಹಾರದ ವ್ಯವಸ್ಥೆ ಮಾಡಬೇಕು ಮಾಡಬೇಕು ಎಂದು ಸೂಚಿಸಿತ್ತು.

  • ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಪ್ರಕರಣ ದಾಖಲು

    ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಪ್ರಕರಣ ದಾಖಲು

    ಮಡಿಕೇರಿ: ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಕೊಡಗು ಜಿಲ್ಲೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆದೇಶವೇ ಇಲ್ಲದೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಮತ್ತು ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಕಾವೇರಿ ನದಿಯ ಹೂಳು ತೆಗೆಯುವ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

    ಏನಿದು ಘಟನೆ..?
    ಕುಶಾಲನಗರ ಪಟ್ಟಣದ ರಸೂಲ್ ಬಡಾವಣೆ ಭಾಗದಲ್ಲಿ ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿತ್ತು. ಈ ಹೂಳು ತುಂಬಿರುವುದರಿಂದ ಕಳೆದ ಎರಡು ವರ್ಷಗಳಿಂದಲೂ ಕಾವೇರಿ ನದಿಯಲ್ಲಿ ಪ್ರವಾಹ ಎದುರಾಗಿ ಕುಶಾಲನಗರ ಪಟ್ಟಣದ ಹಲವು ಬಡಾವಣೆಗಳು ಮುಳುಗಡೆಯಾಗುತ್ತಿದ್ದವು. ಹೀಗಾಗಿ ಈ ಹೂಳು ತೆರವುಗೊಳಿಸಿದರೆ ಪ್ರವಾಹ ಪರಿಸ್ಥಿತಿ ತಪ್ಪುತ್ತದೆ ಎಂದು ಕುಶಾಲನಗರದ ಕಾವೇರಿ ನದಿ ಸಂರಕ್ಷಣಾ ವೇದಿಕೆ ಮುಖಂಡರು ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಬಳಿಕ ಹಾರಂಗಿ ಹೂಳು ತೆಗೆಯಲು ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 130 ಕೋಟಿ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಈ ಅನುದಾನ ಬಿಡುಗಡೆಯಾದ 89 ಕೋಟಿಯನ್ನು ಬಳಸಿ ಕಾವೇರಿಯ ಹೂಳು ತೆಗೆಯಲು ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಮೂರು ದಿನಗಳ ಹಿಂದೆಯಷ್ಟೇ ಕಾಮಗಾರಿಗೆ ಚಾಲನೆ ನೀಡಿದ್ದರು.

    ಆದರೆ ಕಾಮಗಾರಿ ನಡೆಸುವುದಕ್ಕೆ ಯಾವುದೇ ಟೆಂಡರ್ ಅಥವಾ ಅಧಿಕೃತ ಆದೇಶವೇ ಆಗಿಲ್ಲ. ಆದರೂ ಅನಧಿಕೃತವಾಗಿ ಕಾಮಗಾರಿಯನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಕುಶಾಲನಗರ ನಿವಾಸಿ ಕೊಡಗು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಎಸ್ ಅಶೋಕ್ ಎಂಬವರು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಕಾವೇರಿ ನದಿಯಲ್ಲಿ ಯಾವುದೇ ಭಾರೀ ಯಂತ್ರಗಳನ್ನು ಬಳುಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶವಿದ್ದರೂ ಹಿಟಾಚಿ ಟಿಪ್ಪರ್ ವಗಳನ್ನು ಬಳಸಿ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದ ಪಕ್ಕದಲ್ಲೇ ಇರುವ ಸೇತುವೆಗೂ ತೊಂದರೆ ಆಗಲಿದೆ ಎಂದು ಅರೋಪಿಸಿ ದೂರು ನೀಡಿದ್ದಾರೆ.

    ಮತ್ತೊಂದೆಡೆ ಬಸವಣ್ಣ ದೇವರ ಬನ ಟ್ರಸ್ಟ್ ಹೆಸರಿನಲ್ಲಿ ಪರಿಸರವಾದಿಗಳು ಕೂಡ ಶಾಸಕ ಅಪ್ಪಚ್ಚು ರಂಜನ್, ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಪುರುಷೋತ್ತಮ ರೈ, ಕಾವೇರಿ ನದಿ ಸಂರಕ್ಷಣಾ ವೇದಿಕೆ ಮುಖಂಡ ಚಂದ್ರಮೋಹನ್, ಎಂ.ಎಂ ಚರಣ್ ಸೇರಿದಂತೆ ಐವರ ವಿರುದ್ಧ ಅರಣ್ಯ ಇಲಾಖೆಗೂ ದೂರು ನೀಡಲಾಗಿದೆ.

  • ಗಣಿಗಾರಿಕೆ ಪುನರಾರಂಭಿಸುವ ಬಗ್ಗೆ ರಾಜ್ಯ ಸರ್ಕಾರವೇ ನಿರ್ಧರಿಸಲಿ: ಸುಪ್ರೀಂಕೋರ್ಟ್

    ಗಣಿಗಾರಿಕೆ ಪುನರಾರಂಭಿಸುವ ಬಗ್ಗೆ ರಾಜ್ಯ ಸರ್ಕಾರವೇ ನಿರ್ಧರಿಸಲಿ: ಸುಪ್ರೀಂಕೋರ್ಟ್

    ನವದೆಹಲಿ: ರಾಜ್ಯದ ಹಲವು ಭಾಗಗಳಲ್ಲಿ ಗಣಿಗಾರಿಕೆ ಪುನರ್ ಆರಂಭಿಸಲು ಪರವಾನಗೆ ನೀಡುವ ಬಗ್ಗೆ ರಾಜ್ಯ ಸರ್ಕಾರವೇ ನಿರ್ಧರಿಸಲಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ಗಣಿಗಾರಿಕೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ರಾಜ್ಯ ಸರ್ಕಾರಕ್ಕೆ ಈ ಸೂಚನೆ ನೀಡಿದೆ.

    ವಿಚಾರಣೆ ವೇಳೆ ರಾಜ್ಯದಲ್ಲಿ ಗಣಿಗಾರಿಕೆಗೆ ತಡೆ ನೀಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಗಣಿಗಾರಿಕೆ ಆರಂಭಿಸಲು ಪುನರ್ ಅವಕಾಶ ನೀಡಬೇಕು ಎಂದು ಗಣಿ ಕಂಪನಿಗಳ ಮಾಲೀಕರು ಸುಪ್ರೀಂಕೋರ್ಟಿಗೆ ಮನವಿ ಮಾಡಿದರು. ಆದರೆ ಇದಕ್ಕೆ ಗಣಿ ಗುತ್ತಿಗೆಗಳ ಪುನರ್ ಹಂಚಿಕೆ ಮೇಲುಸ್ತುವಾರಿ ಸಮಿತಿ ಆಕ್ಷೇಪ ವ್ಯಕ್ತಪಡಿಸಿತು. ಮತ್ತು ಗಣಿಗಾರಿಕೆಗೆ ಅವಕಾಶ ನೀಡದಂತೆ ಮನವಿ ಮಾಡಿತು.

    ಈ ವೇಳೆ ಮಧ್ಯಪ್ರವೇಶಿಸಿದ ನ್ಯಾ.ಎನ್.ವಿ ರಮಣ, ಪರವಾನಿಗೆ ನೀಡುವ ಬಗ್ಗೆ ರಾಜ್ಯ ಸರ್ಕಾರವೇ ತಿರ್ಮಾನ ಮಾಡಲಿ ಗಣಿಗಾರಿಕೆಗೆ ಗುತ್ತಿಗೆ ನೀಡಬೇಕೋ, ಬೇಡವೋ ಎಂಬುದು ರಾಜ್ಯ ಸರ್ಕಾರ ಮಾರ್ಚ್ 16ರೊಳಗೆ ನಿರ್ಧಾರ ಮಾಡಿ ಸುಪ್ರೀಂಕೋರ್ಟಿಗೆ ತಿಳಿಸುವಂತೆ ಸೂಚಿಸಿದರು.

    ಗಣಿಗಾರಿಕೆ ಪುನರ್ ಆರಂಭಿಸಲು ಪರವಾನಿಗೆ ಸುಪ್ರೀಂಕೋರ್ಟ್ ನೀಡುವಂತೆ ಗಣಿ ಕಂಪನಿಗಳ ಮಾಲೀಕರ ಪರ ವಕೀಲರ ಒತ್ತಡ ಹಾಕಿದರು. ಇದಕ್ಕೆ ಸಿಡಿಮಿಡಿಗೊಂಡ ನ್ಯಾಯಮೂರ್ತಿಗಳು ಪರವಾನಿಗೆ ನೀಡಲು ಆದೇಶ ನೀಡುವಂತೆ ಒತ್ತಡ ಹಾಕದಂತೆ ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿದರು.

  • ವಿರುಪಾಪುರ ಗಡ್ಡೆಯಲ್ಲಿ ಅಕ್ರಮ ರೆಸಾರ್ಟ್‍ಗಳ ತೆರವು ಕಾರ್ಯಾಚರಣೆ

    ವಿರುಪಾಪುರ ಗಡ್ಡೆಯಲ್ಲಿ ಅಕ್ರಮ ರೆಸಾರ್ಟ್‍ಗಳ ತೆರವು ಕಾರ್ಯಾಚರಣೆ

    – ಅಧಿಕಾರಿಗಳ ಮುಂದೆ ಕೈ ಮುಗಿದ ಕಣ್ಣೀರಿಟ್ಟ ಮಾಲೀಕರು

    ಕೊಪ್ಪಳ: ವಿದೇಶಿಗರ ಸ್ವರ್ಗ ಎನಿಸಿಕೊಂಡಿರುವ ಕೊಪ್ಪಳದ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ರೆಸಾರ್ಟ್ ಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.

    ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 25ಕ್ಕೂ ಹೆಚ್ಚು ಅಕ್ರಮ ರೆಸಾರ್ಟ್ ತೆರವು ಕಾರ್ಯಾಚರಣೆ ಪ್ರಾರಂಭವಾಗಿದ್ದು, ಫೆಬ್ರವರಿ 11ರಂದು ಒಂದು ತಿಂಗಳ ಒಳಗೆ ತೆರವು ಮಾಡಲು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ರೆಸಾರ್ಟ್ ಮಾಲೀಕರು ಮೇಲ್ಮನವಿ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಫೆಬ್ರವರಿ 24ರವರೆಗೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

    ತಡೆಯಾಜ್ಞೆ ತೆರವಾದ ಹಿನ್ನೆಲೆಯಲ್ಲಿ ಇಂದು ಅಕ್ರಮ ರೆಸಾರ್ಟ್ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಮತ್ತು ಎಸ್‍ಪಿ ಜಿ ಸಂಗೀತಾ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ರೆಸಾರ್ಟ್‍ಗಳ ತೆರವು ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

    ವಿರುಪಾಪುರಗಡ್ಡೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ತೆರವು ಮಾಡುವ ವೇಳೆ ವಿರುಪಾಪುರ ಗಡ್ಡೆ ನಿವಾಸಿಗಳು ಮನೆಗಳ ತೆರವು ಮಾಡದಂತೆ ಜಿಲ್ಲಾಧಿಕಾರಿಯನ್ನು ಕೈ ಮುಗಿದು ಬೇಡಿಕೊಂಡು ಕಣ್ಣೀರು ಹಾಕಿದರು. ಆದರೆ ಜಿಲ್ಲಾಧಿಕಾರಿ ಮಾತ್ರ ಯಾವುದೇ ಸೊಪ್ಪು ಹಾಕದೆ ತೆರವು ಕಾರ್ಯಾಚರಣೆ ಮುಂದುವರಿಸಿದರು.

    ತಡೆ ನೀಡಲ್ಲ:
    ವಿರುಪಾಪುರ ಗಡ್ಡೆಯಲ್ಲಿ ಅಕ್ರಮ ರೆಸಾರ್ಟ್‍ಗಳ ತೆರವು ಕಾರ್ಯ ಸಂಬಂಧ ಸುಪ್ರೀಂಕೋರ್ಟಿನಲ್ಲಿ ತೆರವು ಕಾರ್ಯಕ್ಕೆ ತಡೆ ನೀಡುವಂತೆ ನ್ಯಾ. ಮೋಹನ ಶಾಂತಗೌಡರ್ ನೇತೃತ್ವದ ದ್ವಿಸದಸ್ಯ ಪೀಠದೆದರು ರೆಸಾರ್ಟ್ ಮಾಲೀಕರ ಪರವಾಗಿ ವಕೀಲ ಸಂಜಯ್ ನೂಲಿ ಮನವಿ ಮಾಡಿದರು.

    ರೆಸಾರ್ಟ್‍ಗಳ ಜೊತೆಯಲ್ಲಿ ಮನೆಗಳಿದ್ದು ಜನರಿಗೆ ತೊಂದರೆಯಾಗಲಿದೆ. ಕೆಲ ಕಾಲ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ವಿಚಾರಣೆ ವೇಳೆ ಯಾವುದೇ ಕಾರಣಕ್ಕೂ ತಡೆ ನೀಡಲು ಸಾಧ್ಯವಿಲ್ಲ ಪೀಠ ಸ್ಪಷ್ಟವಾಗಿ ತಿಳಿಸಿತು.

  • ಸಂಸದ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್

    ಸಂಸದ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್

    ನವದೆಹಲಿ: ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ನಕಲಿ ಪ್ರಮಾಣ ಪತ್ರ ಸಲ್ಲಿಕೆ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಇಂದು ಸಂಸದ ಪ್ರಜ್ವಲ್ ರೇವಣ್ಣಗೆ ನೋಟಿಸ್ ನೀಡಿದೆ.

    ಮಾಜಿ ಸಚಿವ ಎ. ಮಂಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ನೋಟಿಸ್ ನೀಡಿದ್ದು, ನಾಲ್ಕು ವಾರದಲ್ಲಿ ಉತ್ತರಿಸುವಂತೆ ಸೂಚಿಸಿದೆ.

    ಈ ಹಿಂದೆ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದ ಎ.ಮಂಜು, ಚುನಾವಣಾ ಆಯೋಗಕ್ಕೆ ನಕಲಿ ಪ್ರಮಾಣ ಪತ್ರ ಸಲ್ಲಿಸಿರುವುದಾಗಿ ಆರೋಪಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಮೈಕಲ್ ಡಿ ಕುನ್ಹಾ ಪೀಠ ಪ್ರಮಾಣ ಪತ್ರ ಸಲ್ಲಿಸಲು ಎ.ಮಂಜು ಗೆ ಸೂಚಿಸಿತ್ತು. ಆದರೆ ಪ್ರಮಾಣ ಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಈ ಅರ್ಜಿಯನ್ನು ವಜಾ ಮಾಡಲಾಗಿತ್ತು.

    ಈ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಎ.ಮಂಜು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಎ.ಮಂಜು ಪರ ವಕೀಲ ಅಶೋಕ್ ಬನ್ನಿದಿನ್ನಿ ವಾದ ಮಂಡಿಸಿದರು. ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ – ಎ ಮಂಜು ಸ್ಫೋಟಕ ಆರೋಪ