Tag: suprabhat abhiyan

  • 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌

    500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌

    ಬೆಳಗಾವಿ: ಮಸೀದಿಗಳಲ್ಲಿ ಅಜಾನ್ ಶಬ್ದದ ಕಿರಿಕಿರಿ ವಿರುದ್ಧ ಹಿಂದೂಪರ ಸಂಘಟನೆಗಳಿಂದ ಇಂದಿನಿಂದ ರಾಜ್ಯಾದ್ಯಂತ ಅಜಾನ್ ವಿರುದ್ಧ ದೇವಸ್ಥಾನಗಳಲ್ಲಿ ಸುಪ್ರಭಾತ, ಚಾಲಿಸಾ ಪಠಣ ಹಿನ್ನೆಲೆ ಬೆಳಗಾವಿಯಲ್ಲಿ 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

    ಇಂದು ಬೆಳಗ್ಗೆ 5ಕ್ಕೆ ಬೆಳಗಾವಿ ನಗರದ ಆರ್‌ಟಿಓ ವೃತ್ತದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಹನುಮಾನ್ ದೇವರ ಮೂರ್ತಿಗೆ ಆರತಿ ಮಾಡಿ, ಹನುಮಾನ ಚಾಲೀಸಾ ಪಠಣ ಮಾಡಿ ಸ್ಪೀಕರ್ ನಲ್ಲಿ ಭಜನೆ ಹಾಡು ಹಾಕಿದರು.

    ಹೀಗೆ ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ಭಜನೆ, ಹನುಮಾನ್ ಚಾಲೀಸಾ, ಮಂತ್ರ ಪಠಣ ಇಂದಿನಿಂದ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಳಗಾವಿ ನಗರದ ನೂರು, ಜಿಲ್ಲೆಯ 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರಿಂದ ತೀವ್ರ ಭದ್ರತೆ ವಹಿಸಲಾಗಿದೆ. ಇದನ್ನೂ ಓದಿ: ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ಇಂದಿನ ವಿಶೇಷ ಪೂಜೆಯ ಜೊತೆಗೆ ಮಂತ್ರಘೋಷ

    ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಸೀದಿಗಳಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲಿಯವರೆಗೆ ಪಾಲನೆ ಮಾಡೊದಿಲ್ಲವೋ ಅಲ್ಲಿಯವರೆಗೆ ನಮ್ಮ ಅಭಿಯಾನ ಮುಂದುವರಿಸುತ್ತೇವೆ ಎಂದು ಶ್ರೀರಾಮಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಹೇಳಿದರು. ಇದನ್ನೂ ಓದಿ: ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ: ಪ್ರಮೋದ್ ಮುತಾಲಿಕ್

  • ಸುಪ್ರಭಾತ ಅಭಿಯಾನ- ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು: ಪ್ರಹ್ಲಾದ್ ಜೋಶಿ

    ಸುಪ್ರಭಾತ ಅಭಿಯಾನ- ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಅಜಾನ್ ವಿರುದ್ಧ ನಾಳೆ ಭಜನೆ ಮತ್ತು ಸುಪ್ರಭಾತ ಅಭಿಯಾನದ ಹಿನ್ನೆಲೆಯಲ್ಲಿ ಸರ್ಕಾರ ಸುಮ್ಮನಿದೆ ಎಂದು ಭಾವಿಸಿ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

    ಶರೇವಾಡ ಗ್ರಾಮದಲ್ಲಿ ಮಾತನಾಡಿದ ಅವರು, ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಗಡುವು ಕೊಟ್ಟಿದ್ದು ಗೊತ್ತಿಲ್ಲ. ಕಾನೂನು ಪ್ರಕಾರ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಆದರೆ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದರು. ಇದನ್ನೂ ಓದಿ: ಬುರ್ಕಾ ಹಾಕ್ಕೊಂಡು ಓಡಾಡಿದ್ರೂ ಬಿಜೆಪಿಗೆ ಒಂದು ವೋಟು ಬರಲ್ಲ: ಮುತಾಲಿಕ್

    loud speaker

    ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಕಿಂಗ್‍ಪಿನ್ ಹೆಸರು ಬಹಿರಂಗ ಪಡಿಸಿದರೆ ಸರ್ಕಾರ ಉರುಳುತ್ತದೆ ಎನ್ನುವ ಹೆಚ್‍ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರವನ್ನು ಉರುಳಿಸೋದು, ಬಿಡುವುದು ಅವರ ಜವಾಬ್ದಾರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

    ಅಕ್ರಮ ನೇಮಕಾತಿಯ ಬಗ್ಗೆ ಯಾರ ಹತ್ತಿರ ಮಾಹಿತಿ ಇದೆ ಅದನ್ನು ಅವರು ಕೊಡಲಿ. ಸಿಐಡಿ ಈ ಕುರಿತು ಮುಂದಿನ ಕ್ರಮ ಕೈಗೊಳ್ಳುತ್ತದೆ. ಈಗಾಗಲೇ ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷನನ್ನೇ ಬಂಧಿಸಲಾಗಿದೆ ಎಂದರು. ಇದನ್ನೂ ಓದಿ: ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಅಳವಡಿಸುವುದು ಕಡ್ಡಾಯ: ಸುಧಾಕರ್