Tag: supply

  • Iran-Israel Conflict | ಕರ್ನಾಟಕಕ್ಕೆ ಬರುತ್ತಿದ್ದ ಮಸಾಲೆ, ಡ್ರೈಫ್ರೂಟ್ಸ್‌ ಸಪ್ಲೈ ಬಂದ್

    Iran-Israel Conflict | ಕರ್ನಾಟಕಕ್ಕೆ ಬರುತ್ತಿದ್ದ ಮಸಾಲೆ, ಡ್ರೈಫ್ರೂಟ್ಸ್‌ ಸಪ್ಲೈ ಬಂದ್

    ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇರಾನ್ (Iran) ಮತ್ತು ಇಸ್ರೇಲ್  (Israel) ನಡುವಿನ ಯುದ್ಧದ ಆತಂಕ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆ ಎರಡು ರಾಷ್ಟ್ರಗಳು ತುರ್ತು ಪರಿಸ್ಥಿತಿ ಘೋಷಣೆ ಮಾಡಿವೆ. ಜೊತೆಗೆ ತಮ್ಮ ವಾಯು ಹಾಗೂ ನೌಕಾ ನೆಲೆಗಳನ್ನು ಬಂದ್ ಮಾಡಿವೆ. ಹೀಗಾಗಿ ಇರಾನ್‌ನಿಂದ ಕರ್ನಾಟಕಕ್ಕೆ ಬರುತ್ತಿದ್ದ ಐಟಮ್ಸ್ಗಳ ಸರಬರಾಜು ನಿಂತಿದ್ದು, ವ್ಯಾಪಾರಿಗಳಲ್ಲಿ ಆತಂಕವನ್ನುಂಟು ಮಾಡಿದೆ.

    ಹೌದು, ಇರಾನ್ ದೇಶ ಮಧ್ಯಪ್ರಾಚ್ಯ ದೇಶಗಳಲ್ಲಿಯೇ ಹಣ್ಣಿನ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಕೇವಲ ಹಣ್ಣುಗಳು ಮಾತ್ರವಲ್ಲ, ಡ್ರೈಫ್ರೂಟ್ಸ್‌ ಹಾಗೂ ಮಸಾಲೆ ಪದಾರ್ಥಗಳು ಅತ್ಯಂತ ಗುಣಮಟ್ಟದಿಂದ ಕೂಡಿರುತ್ತವೆ. ಈ ಹಿನ್ನೆಲೆ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳು ಇರಾನ್‌ನಿಂದ ಡ್ರೈಫ್ರೂಟ್ಸ್‌ ಆಮದು ಮಾಡಿಕೊಳ್ಳುತ್ತವೆ. ಇದೀಗ ಇರಾನ್ ಹಾಗೂ ಇಸ್ರೇಲ್ ಯುದ್ಧದ ಪರಿಣಾಮ ಭಾರತದ ಮೇಲೆ ತಟ್ಟಿದೆ. ಪ್ರಮುಖವಾಗಿ ಇರಾನ್ ಬಂಡಾರ್ ಅಬ್ಬಾಸ್ ಬಂದರು ಬ್ಲಾಸ್ಟ್ ಆದ ಹಿನ್ನೆಲೆ ಇರಾನ್‌ನ ಸೇಬು, ಮಸಾಲೆ ಐಟಮ್ಸ್, ಡ್ರೈಫ್ರೂಟ್ಸ್‌ಗಳು ಬೆಂಗಳೂರಿಗೆ ರಫ್ತಾಗುವುದು ಬಂದ್ ಆಗಿದೆ.ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ – ಫಲ್ಗುಣಿ ನದಿ ತೀರದ ತಗ್ಗು ಪ್ರದೇಶಗಳಲ್ಲಿ ನೆರೆ

    ಏನೆಲ್ಲ ರಫ್ತು ಬಂದ್:
    ಇರಾನ್ ಸೇಬು
    ಮಸಾಲೆ ಪದಾರ್ಥ
    ಗಸಗಸೆ
    ಡ್ರೈಫ್ರೂಟ್ಸ್‌
    ಖರ್ಜೂರ
    ನೆಟಾಲ್ ಒಣದ್ರಾಕ್ಷಿ
    ಪಿಸ್ತಾ
    ಪೈನಾಬೀಜ

    ಇರಾನ್‌ನಿಂದ ಮುಸ್ಲಿಮರು ಹೆಚ್ಚಾಗಿ ಬಳಸುವ ಮುಜಪತಿ ಖರ್ಜೂರ, ಗಸಗಸೆ, ನೆಟಾಲ್ ಒಣದ್ರಾಕ್ಷಿ, ಪಿಸ್ತಾ, ಪೈನಾಬೀಜ, ಅಂಜೂರ, ಮೇಥಿ, ಮಾರ್ಮಾ ಬಾದಾಮಿ ಬೆಂಗಳೂರಿಗೆ ಸಪ್ಲೈ ಆಗುತ್ತಿಲ್ಲ. ಈ ಸರಬರಾಜು ಸ್ಥಗಿತದಿಂದ ಡಿಮ್ಯಾಂಡ್ ಹೆಚ್ಚಾಗಿದ್ದು, ಇವುಗಳ ಬೆಲೆ ಗಗನಕ್ಕೇರಲಿದೆ. ಪ್ರಮುಖವಾಗಿ ಕೆ.ಜಿ ಗಸಗಸಗೆ 2,500 ರೂ. ಆಗಿದೆ. ಪೈನಾಬೀಜಾ ಸಹ ಹತ್ತು ಸಾವಿರದ ಗಡಿ ದಾಟಿದೆ. ಇರಾನ್ ಸೇಬು ಪ್ರತಿದಿನ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ 70-80 ಕಂಟೇನರ್ ಬರುತ್ತಿತ್ತು. ಆದರೆ ಕಳೆದು ಮೂರು-ನಾಲ್ಕು ದಿನದಿಂದ ಬರುತ್ತಿಲ್ಲ ಎಂದು ಹಣ್ಣಿನ ವ್ಯಾಪಾರಿಗಳು ಹೇಳುತ್ತಿದ್ದಾರೆ.

    ಇರಾನ್-ಇಸ್ರೇಲ್ ಯುದ್ಧ ಗ್ರಾಹಕರ ಹೊರೆ ಹೆಚ್ಚಿಸಲಿದೆ. ವ್ಯಾಪಾರಿಗಳ ಮೇಲೆಯೂ ಇದೀಗ ಹೊಡೆತ ಬಿದ್ದಿದೆ.ಇದನ್ನೂ ಓದಿ: ಸಿಹಿ ಪ್ರಿಯರಿಗಾಗಿ ಮ್ಯಾಂಗೋ ರಸಗುಲ್ಲಾ ರೆಸಿಪಿ

  • ಆಕ್ಸಿಜನ್ ಸಿಲಿಂಡರ್‌ಗಳು ಬರಿದಾಗಲಿದ್ದು, ದಯವಿಟ್ಟು ಪೂರೈಸಿ: ಕೇಜ್ರಿವಾಲ್

    ಆಕ್ಸಿಜನ್ ಸಿಲಿಂಡರ್‌ಗಳು ಬರಿದಾಗಲಿದ್ದು, ದಯವಿಟ್ಟು ಪೂರೈಸಿ: ಕೇಜ್ರಿವಾಲ್

    ನವದೆಹಲಿ: ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆ ಉಂಟಾಗುತ್ತಿದೆ. ಆಮ್ಲಜನಕವನ್ನು ಪೂರೈಸಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

    ದೆಹಲಿಯಲ್ಲಿ ಆಮ್ಲಜನಕದ ಬಿಕ್ಕಟ್ಟು ವಿಪರೀತ ಹಂತ ತಲುಪಿದ್ದು, ಕೆಲವು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಆಮ್ಲಜನಕದ ಸಿಲಿಂಡರ್‌ಗಳು ಬರಿದಾಗಲಿವೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಆಮ್ಲಜನಕ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಆತಂಕ ವ್ಯಕ್ತಪಡಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

    ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ 8-10 ಗಂಟೆಗಳವರೆಗೆ ಲಭ್ಯವಿದೆ. ದೆಹಲಿಯ ಹೆಚ್ಚಿನ ಆಸ್ಪತ್ರೆಗಳಲ್ಲಿ, ಮುಂದಿನ 8 ರಿಂದ 12 ಗಂಟೆಗಳವರೆಗೆ ಮಾತ್ರ ಆಮ್ಲಜನಕ ಲಭ್ಯವಿದೆ. ದೆಹಲಿಗೆ ಆಮ್ಲಜನಕ ಪೂರೈಕೆ ಕೋಟಾವನ್ನು ಹೆಚ್ಚಿಸಲು ನಾವು ಒಂದು ವಾರದಿಂದ ಒತ್ತಾಯಿಸುತ್ತಿದ್ದೇವೆ.  ಆಮ್ಲಜನಕವು ಸಾಕಷ್ಟು ಪ್ರಮಾಣದಲ್ಲಿ ಆಸ್ಪತ್ರೆಗಳನ್ನು ತಲುಪದಿದ್ದರೆ, ಆಕ್ರೋಶ ಉಂಟಾಗುವ ಸಾಧ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ

    ದೆಹಲಿಯಲ್ಲಿ ನಿನ್ನೆ ರಾತ್ರಿ 10 ಗಂಟೆಗೆ ಪ್ರಾರಂಭವಾದ ಲಾಕ್‍ಡೌನ್ ಏಪ್ರಿಲ್ 26ರ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಇರಲಿದೆ. ಅಗತ್ಯ ಸೇವೆಗಳಿಗೆ ಮಾತ್ರ ಅನುವು ಮಾಡಿಕೊಡಲಾಗಿದೆ. ಆದರೆ ಜನರು ಭಯಗೊಂಡು ತಮ್ಮ ಊರುಗಳಿಗೆ ಪ್ರಯಾಣ ಮಾಡಿದ್ದಾರೆ.

  • ರಸಗೊಬ್ಬರ, ಔಷಧಿಗಳಿಗೆ ಯಾವುದೇ ತೊಂದರೆ ಇಲ್ಲ: ಡಿವಿಎಸ್

    ರಸಗೊಬ್ಬರ, ಔಷಧಿಗಳಿಗೆ ಯಾವುದೇ ತೊಂದರೆ ಇಲ್ಲ: ಡಿವಿಎಸ್

    – ಅವಶ್ಯಕತೆಗಿಂತ ಹೆಚ್ಚು ಪೂರೈಕೆ ಮಾಡ್ತಿದ್ದೇವೆ

    ನವದೆಹಲಿ: ದೆಹಲಿ, ಮಹಾರಾಷ್ಟ್ರ ತಮಿಳುನಾಡು ಸೇರಿ ಕೆಲವು ಪ್ರಮುಖ ರಾಜ್ಯಗಳಲ್ಲಿ ಹೆಚ್ಚು ಪ್ರಮಾಣದ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಲಾಕ್‍ಡೌನ್ ವಿಸ್ತರಣೆ ಅನಿವಾರ್ಯವಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಲಾಕ್‍ಡೌನ್ ವಿಸ್ತರಿಸಿದ್ದು ಸಮಸ್ಯೆ ಎದುರಿಸಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಕೇಂದ್ರ ಸಚಿವ ಡಿವಿ. ಸದಾನಂದಗೌಡ ಪ್ರತಿಕ್ರಿಯಿಸಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಸಂದರ್ಭದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಮಳೆಗಾಲ ಶುರುವಾಗಿದ್ದು ಬಿತ್ತನೆಗೆ ಬೇಕಾದ ಅವಶ್ಯಕ ವಸ್ತುಗಳು ಮತ್ತು ರಸಗೊಬ್ಬರಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಎಂದಿನಂತೆ ರಸಗೊಬ್ಬರ ದೊರೆಯಲಿದ್ದು ಯಾವುದು ಕಡಿಮೆಯಾಗದಂತೆ ನೋಡಿಕೊಳ್ಳಲಾಗುವುದು ಅಗತ್ಯಕ್ಕಿಂತ ಮೂರು ಪಟ್ಟು ಹೆಚ್ಚು ಸ್ಟಾಕ್ ನೀಡಲಾಗಿದೆ ಎಂದರು.

    ಔಷಧಿಗಳನ್ನು ಇಡಿ ದೇಶಕ್ಕೆ ನಾವು ಪೂರೈಕೆ ಮಾಡುತ್ತಿದ್ದೇವೆ. ದೇಶದ ಎಲ್ಲ ರಾಜ್ಯಗಳಲ್ಲೂ ಔಷಧಿ ಕಡಿಮೆಯಾಗದಂತೆ ನೋಡಿಕೊಳ್ಳಲಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಾಹನ ಸಂಚಾರ ಹಾಗೂ ಕಾರ್ಮಿಕರ ಸಮಸ್ಯೆಯಿಂದ ಸಾಗಾಣಿಕೆಯಲ್ಲಿ ಸ್ವಲ್ಪ ಏರುಪೇರಾಗಿ ಔಷಧೀಯ ಕೊರತೆ ಸೃಷ್ಟಿಯಾಗಿತ್ತು. ಆದರೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಈಗ ಈ ಸಮಸ್ಯೆ ಬಗೆಹರಿದಿದೆ. ಈಗ ಗೂಡ್ಸ್ ಟ್ರೇನ್ ಗಳ ಮೂಲಕ ಔಷಧಿಗಳ ಸಪ್ಲೇ ಆರಂಭವಾಗಿದ್ದು ಯಾವುದಕ್ಕೂ ತೊಂದರೆ ಇಲ್ಲ. ಏಪ್ರಿಲ್ 20ರ ಬಳಿಕ ಪರಿಸ್ಥಿತಿ ಅವಲೋಕಿಸಿ ಪ್ರಧಾನ ಮಂತ್ರಿಗಳ ಸೂಕ್ತ ಕ್ರಮ ತೆಗೆದುಕೊಳ್ಳಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

  • ಸಿಲಿಕಾನ್ ಸಿಟಿ ಜನರೇ ಎಚ್ಚರ – 2 ದಿನಗಳ ಕಾಲ ಕಾವೇರಿ ನೀರು ಸಿಗಲ್ಲ

    ಸಿಲಿಕಾನ್ ಸಿಟಿ ಜನರೇ ಎಚ್ಚರ – 2 ದಿನಗಳ ಕಾಲ ಕಾವೇರಿ ನೀರು ಸಿಗಲ್ಲ

    ಬೆಂಗಳೂರು: ಸಿಲಿಕಾನ್ ಸಿಟಿ ಜನರೆ ಎಚ್ಚರ, ನಗರದ ಬಹುತೇಕ ಪ್ರದೇಶಗಳಲ್ಲಿ 22 ಮತ್ತು 23 ರಂದು ಎರಡು ದಿನಗಳ ಕಾಲ ಕಾವೇರಿ ನೀರು ಸಿಗಲ್ಲ.

    ಬೆಂಗಳೂರು ಜಲಮಂಡಳಿ ಕಾವೇರಿ ನೀರು ಸರಬರಾಜು ಯೋಜನೆ 1 ಮತ್ತು 2ನೇ ಹಂತದ ಪಂಪಿಂಗ್ ಸ್ಟೇಷನ್‍ನಲ್ಲಿ ಹಾಗೂ ಡಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ 3ನೇ ಹಂತದ ದುರಸ್ಥಿತಿ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ 22 ಅಂದರೆ ಮಂಗಳವಾರ ಹಾಗೂ 23 ಬುಧವಾರದಂದು ನೀರು ಸರಬರಾಜು ಪೂರೈಕೆ ಸ್ಥಗಿತಗೊಳ್ಳಲಿದೆ.

    ಮಂಗಳವಾರ ರಾತ್ರಿ 11 ಗಂಟೆಯಿಂದ ಬುಧವಾರ ಸಂಜೆ 4 ಗಂಟೆಯವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಯಶವಂತಪುರ, ಮಲ್ಲೇಶ್ವರಂ, ಚಾಮರಾಜಪೇಟೆ, ಕೋರಮಂಗಲ, ಕತ್ರಿಗುಪ್ಪೆ, ಬಸವನಗುಡಿ, ಶಿವಾಜಿನಗರ, ಜೆಜೆನಗರ, ಸದಾಶಿವನಗರ, ಹೆಬ್ಬಾಳ, ಮಡಿವಾಳ, ಯಲಚೇನಹಳ್ಳಿ ಮತ್ತು ಬನಶಂಕರಿ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ನೀರು ಪೂರೈಕೆ ಇರಲ್ಲ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • CFTRI ನಿಂದ ಕೇರಳ, ಕೊಡಗಿಗೆ ಚಪಾತಿ, ಚಟ್ನಿ, ಉಪ್ಪಿಟ್ಟು, ಅವಲಕ್ಕಿ ಚಿತ್ರಾನ್ನ ರವಾನೆ

    CFTRI ನಿಂದ ಕೇರಳ, ಕೊಡಗಿಗೆ ಚಪಾತಿ, ಚಟ್ನಿ, ಉಪ್ಪಿಟ್ಟು, ಅವಲಕ್ಕಿ ಚಿತ್ರಾನ್ನ ರವಾನೆ

    ಮೈಸೂರು: ಕೊಡಗು ಹಾಗೂ ನೆರೆ ರಾಜ್ಯ ಕೇರಳದಲ್ಲಿ ಉಂಟಾಗಿರುವ ಭೀಕರ ಜಲ ಪ್ರಳಯಕ್ಕೆ ಅಕ್ಷರಶಃ ಅಲ್ಲಿನ ಜನರು ನಲುಗಿ ಹೋಗಿದ್ದಾರೆ. ಇದೀಗ ಅವರಿಗೆ ತಿನ್ನಲು ಆಹಾರ ಪದಾರ್ಥಗಳು ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನ ಸಂಸ್ಥೆ(ಸಿಎಫ್ ಟಿಆರ್‍ಐ) ನಿಂದ ಕೊಡಗು ಹಾಗೂ ಕೇರಳ ನಿರಾಶ್ರಿತರಿಗೆ ಆಹಾರ ಪದಾರ್ಥಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ.

    ಸಿಎಫ್‍ಟಿಆರ್ ಐನಿಂದ ಚಪಾತಿ, ಟೊಮೆಟೋ ಚಟ್ನಿ, ಉಪ್ಪಿಟ್ಟು, ಅವಲಕ್ಕಿ ಚಿತ್ರಾನ್ನ, ಎನರ್ಜಿ ಬಿಸ್ಕೇಟ್ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ತಯಾರಿಸಿ ಕಳುಹಿಕೊಡಲಾಗುತ್ತಿದೆ. ಈ ಆಹಾರ ಪದಾರ್ಥಗಳು 10 ರಿಂದ 15 ದಿನಗಳಾದರೂ ಕೆಡದ ರೀತಿಯಲ್ಲಿ ಸಂರಕ್ಷಣೆ ಮಾಡಲಾಗಿದ್ದು, ನಿರಾಶ್ರಿತರಿಗೆ ಆಹಾರ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

    ಕೊಡಗು ಹಾಗೂ ಕೇರಳದಲ್ಲಿ ರಸ್ತೆ ಸರಿ ಇರುವ ಪ್ರದೇಶಗಳಗೆ ಗೂಡ್ಸ್ ವಾಹನಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತದೆ. ರಸ್ತೆಗಳು ಇಲ್ಲದ ಸ್ಥಳಗಳಿಗೆ ಹೆಲಿಕಾಪ್ಟರ್ ಮೂಲಕ ಅಹಾರ ಪೂರೈಕೆ ಮಾಡುವ ಕೆಲಸ ಮಾಡಲಾಗುತ್ತಿದೆ. ಕಳೆದ ಶುಕ್ರವಾರದಿಂದ ಸಿಎಫ್‍ಟಿಆರ್‍ಐ ಈ ಕೆಲಸ ಮಾಡುತ್ತಿದೆ.

    ಈಗಾಗಲೇ ಕೊಡಗು ಪ್ರವಾಹ ಸಂತ್ರಸ್ತರಿಗೆ ರಾಜ್ಯದಾದ್ಯಂತ ಅಪಾರ ಪ್ರಮಾಣದ ದಾಸ್ತಾನುಗಳು ಪರಿಹಾರ ಕೇಂದ್ರಗಳಿಗೆ ತಲುಪಿವೆ. ಆದರೆ ಸಂತ್ರಸ್ತರು ಮಳೆ ನಿಂತ ಮೇಲೆ ನಾವು ನೆಲೆಸಲು ಒಂದು ಮನೆ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅನೇಕ ಜನರು ಆರ್ಥಿಕ ರೂಪದಲ್ಲಿ ಕೊಡಗು ಸಂತ್ರಸ್ತರಿಗೆ ದೇಣಿಗೆ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಡಿಯುವ ನೀರಿಗಾಗಿ ಪಿಡಿಓಗೆ ಘೇರಾವ್ ಹಾಕಿದ ಗ್ರಾಮಸ್ಥರು!

    ಕುಡಿಯುವ ನೀರಿಗಾಗಿ ಪಿಡಿಓಗೆ ಘೇರಾವ್ ಹಾಕಿದ ಗ್ರಾಮಸ್ಥರು!

    ಬೀದರ್: ಗ್ರಾಮಸ್ಥರು ಕುಡಿಯುವ ನೀರಿಗಾಗಿ ಆಗ್ರಹಿಸಿ ಪಿಡಿಓಗೆ ಘೇರಾವ್ ಹಾಕಿದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

    ಚಳಕಾಪುರ ಗ್ರಾಮದಲ್ಲಿ ಜನರು ಕಳೆದ ಮೂರು ತಿಂಗಳುಗಳಿಂದ ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತ ಗ್ರಾಮಸ್ಥರು ಇಂದು ಖಾಲಿ ಕೊಡಗಳನ್ನು ಹಿಡಿದು ಪಂಚಾಯಿತಿಯ ಪಿಡಿಓ ಹಾಗೂ ಅಧ್ಯಕ್ಷರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

    ಗ್ರಾಮಸ್ಥರ ಆಕ್ರೋಶಕ್ಕೆ ಗಲಿಬಿಲಿಯಾದ ಪಂಚಾಯಿತಿ ಪಿಡಿಓ ಗೀತಾ ನಿಡಮುಡಿ ಹಾಗೂ ಅಧ್ಯಕ್ಷ ರಾಮು ಕೊರವಿ, ಸಮಸ್ಯೆ ಭಗೆಹರಿಸುವುದಾಗಿ ಮನವಿ ಮಾಡಿಕೊಂಡರು. 8 ದಿನಗಳಲ್ಲಿ ಕುಡಿಯುವ ನೀರು ಪೂರೈಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸದಿದ್ದರೆ, ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಬೆಂಗ್ಳೂರಿಗೆ ಬರುತ್ತಿದೆ ವಿಷಯುಕ್ತ ಆಹಾರ ಪದಾರ್ಥ: ಖಾಸಗಿ ಸಂಸ್ಥೆಯ ವರದಿಯಲ್ಲಿ ಬಯಲು!

    ಬೆಂಗ್ಳೂರಿಗೆ ಬರುತ್ತಿದೆ ವಿಷಯುಕ್ತ ಆಹಾರ ಪದಾರ್ಥ: ಖಾಸಗಿ ಸಂಸ್ಥೆಯ ವರದಿಯಲ್ಲಿ ಬಯಲು!

    ಬೆಂಗಳೂರು: ನಗರಕ್ಕೆ ಪೂರೈಕೆ ಆಗುತ್ತಿರುವ ಆಹಾರ ಪದಾರ್ಥಗಳು ವಿಷಯುಕ್ತವಾಗಿವೆ ಎಂದು ಖಾಸಗಿ ಸಂಸ್ಥೆ ವರದಿ ಬಹಿರಂಗಪಡಿಸಿದೆ.

    ಹೌದು. ನಾವು-ನೀವು ತಿನ್ನೋ ಅನ್ನ, ತರಕಾರಿ, ಚಪ್ಪರಿಸಿ ತಿನ್ನೋ ಬೇಬಿಕಾರ್ನ್, ಅಮೃತ ಅಂತಾ ಕುಡಿಯೋ ಹಾಲು ಎಲ್ಲವೂ ವಿಷದಿಂದ ಕೂಡಿದೆ ಎಂದು ಖಾಸಗಿ ಸಂಸ್ಥೆ ವರದಿ ಮಾಡಿದೆ. ನಗರಕ್ಕೆ ಬರುತ್ತಿರುವ ಬೆಳೆಗಳನ್ನು ವಿಷಯುಕ್ತ ನೀರಿನಲ್ಲಿ ಬೆಳೆಯುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಏಟ್ರೀ ಅನ್ನುವ ನೀರಿನ ಗುಣಮಟ್ಟ ಪರೀಕ್ಷಿಸುವ ಸಂಸ್ಥೆಯೊಂದು ತಿಳಿಸಿದೆ.

    ಈ ಸಂಸ್ಥೆ ಆಹಾರ ಪದಾರ್ಥಗಳ ಮೇಲೆ ಅಧ್ಯಯನ ನಡೆಸಿ ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಬೆಳ್ಳಂದೂರಿಗಿಂತಲೂ ವಿಷವಾಗಿರುವ ವೃಷಾಭವತಿಯು ಬೈರಮಂಗಲದ ಮೂಲಕ ಹಾದು ಅರ್ಕಾವತಿ ಒಡಲು ಸೇರಿ, ಕಾವೇರಿಯಲ್ಲಿ ಒಂದಾಗುತ್ತಿದೆ. ಈ ನೀರಿನಲ್ಲಿ ಕ್ಯಾನ್ಸರ್ ಕಾರಕ ಸೀಸದ ಅಂಶ, ಜೀವಕ್ಕೆ ಮಾರಕವಾಗಬಲ್ಲ ಮ್ಯಾಗ್ನೇಶಿಯಂ, ಕ್ರೋಮಿಯಂ ಅಂಶ ಇರುವುದನ್ನು ಸಂಸ್ಥೆ ದೃಢಪಡಿಸಿದೆ.

    ಈ ವಿಷದ ನೀರಿನಿಂದಲೇ ಬೈರಮಂಗಲ, ಕನಕಪುರ, ರಾಮನಗರ ರೈತರು ಟೊಮ್ಯಾಟೋ, ಕ್ಯಾರೆಟ್ ಇನ್ನಿತರ ತರಕಾರಿ, ಸೊಪ್ಪು, ರಾಗಿ, ಬೇಬಿಕಾರ್ನ್, ಭತ್ತವನ್ನು ಬೆಳೆಸುತ್ತಿದ್ದಾರೆ. ಈ ವಿಷದ ನೀರಿನಲ್ಲಿ ಬೆಳೆದ ಮೇವು ತಿಂದು ಹಸುಗಳ ಹಾಲು ಕೂಡ ವಿಷವಾಗಿ ಮಾರ್ಪಾಡಾಗಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.

    ಈ ಸಂಬಂಧ ಸಂಸ್ಥೆಯು ಸರ್ಕಾರಕ್ಕೆ ವರದಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಲಮಂಡಳಿ ಸಹ ನೀರನ್ನು ಶುದ್ಧೀಕರಣ ಮಾಡುವತ್ತ ಗಮನ ಹರಿಸಿಲ್ಲ. ಬೆಳ್ಳಂದೂರಿಗಿಂತಲೂ ವಿಷವಾಗಿರುವ ವೃಷಾಭವತಿ ಕೆರೆಯ ನಿರ್ಲಕ್ಷ್ಯದ ಬಗ್ಗೆ ಪರಿಸರವಾದಿಗಳು ಎನ್‍ಜಿಟಿ(ನ್ಯಾಷನಲ್ ಗ್ರೀನ್ ಟ್ರೀಬುನಲ್)ಯ ಮೊರೆ ಹೋಗಲೂ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.