Tag: Supplementary Examination

  • SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

    SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ (SSLC Supplementary Examination) ಯ ವೇಳಾಪಟ್ಟಿ ಪ್ರಕಟಗೊಂಡಿದೆ.

    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ವೇಳಾಪಟ್ಟಿ ಪ್ರಕಟಗೊಂಡಿದ್ದು, ಜೂನ್ 12 ರಿಂದ ಜೂನ್ 19ರವರೆಗೆ ಪೂರಕ ಪರೀಕ್ಷೆಗಳು ನಡೆಯಲಿವೆ. ಇದನ್ನೂ ಓದಿ: ಬ್ಯಾರಿಕೇಡ್ ಯಾಕೆ ಹಾಕಿಲ್ಲ?- ಪೊಲೀಸರಿಗೆ ಸಿದ್ದರಾಮಯ್ಯ ಕ್ಲಾಸ್

    ಪೂರಕ ಪರೀಕ್ಷೆ ವೇಳಾಪಟ್ಟಿ ಇಂತಿದೆ..
    ಜೂನ್ 12- ಪ್ರಥಮ ಭಾಷೆ
    ಜೂನ್ 13- ವಿಜ್ಞಾನ
    ಜೂನ್ 14- ದ್ವಿತೀಯ ಭಾಷೆ
    ಜೂನ್ 15- ಸಮಾಜ ವಿಜ್ಞಾನ
    ಜೂನ್ 16- ತೃತೀಯ ಭಾಷೆ
    ಜೂನ್ 17- ಗಣಿತ

  • ದ್ವಿತೀಯ PUC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

    ದ್ವಿತೀಯ PUC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

    ಬೆಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.

    ಆಗಸ್ಟ್‌ 12ರಿಂದ 25ರ ವರೆಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ವೇಳಾಪಟ್ಟಿಯನ್ನು https://pue.karnataka.gov.in ಅಂತರ್ಜಾಲದಲ್ಲಿ ವೀಕ್ಷಿಸಬಹುದು. ಇದನ್ನೂ ಓದಿ: ಬಡವರ ಉದ್ಧಾರಕ್ಕಾಗಿ ಅಲ್ಲ, ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯೋತ್ಸವ: ಹಾಲಪ್ಪ ಕಿಡಿ

    ಪರೀಕ್ಷಾ ವೇಳಾಪಟ್ಟಿ ಹೀಗಿದೆ..
    ಕನ್ನಡ, ಅರೇಬಿಕ್ – ಆ.12
    ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ – ಆ.13
    ಹಿಂದಿ – ಆ.16
    ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲ ಗಣಿತ – ಆ.17
    ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ – ಆ.18
    ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ – ಆ.19
    ತರ್ಕಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ – ಆ.20
    ಇಂಗ್ಲಿಷ್‌ – ಆ.22
    ಅರ್ಥಶಾಸ್ತ್ರ, ಜೀವಶಾಸ್ತ್ರ – ಆ.23
    ಇತಿಹಾಸ, ಸಂಖ್ಯಾಶಾಸ್ತ್ರ – ಆ.24
    ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ – ಆ.25

    Live Tv
    [brid partner=56869869 player=32851 video=960834 autoplay=true]

  • ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

    ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

    ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪೂರಕ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ ಶೇಕಡಾ 30.04 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ.

    ಜೂನ್ ನಲ್ಲಿ ನಡೆದಿದ್ದ ಪೂರಕ ಪರೀಕ್ಷೆಗೆ 2,31,165 ವಿದ್ಯಾರ್ಥಿಗಳು ಹಾಜರಾಗಿದ್ದರು, ಇದರಲ್ಲಿ 69,148 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪಿಯುಸಿ ವೆಬ್ ಸೈಟ್ ಫಲಿತಾಂಶ ಲಭ್ಯವಿದ್ದು, ನಾಳೆ ಆಯಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

    ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ ಪತ್ರಿಯನ್ನು ಪಡೆಯಲು ಜುಲೈ 12 ಅಂತಿಮ ದಿನವಾಗಿದ್ದು, ಜುಲೈ 30 ಮರು ಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ.

    ಫಲಿತಾಂಶ ತಿಳಿಯಲು ಕೆಳಗಿನ ವೆಬ್‍ಸೈಟ್ ಲಿಂಗ್ ಮೇಲೆ ಕ್ಲಿಕ್ ಮಾಡಿ:  http://www.karresults.nic.in

  • ಗಮನಿಸಿ, ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಬದಲಾವಣೆ

    ಗಮನಿಸಿ, ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಬದಲಾವಣೆ

    ಬೆಂಗಳೂರು: ಜೂನ್ 8 ರಿಂದ ನಡೆಯಬೇಕಿದ್ದ ಪೂರಕ ಪರೀಕ್ಷೆಗಳ ದಿನಾಂಕ ಬದಲಾವಣೆಯಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಪಿಯು ಮಂಡಳಿ ತನ್ನ ವೆಬ್‍ಸೈಟ್ ನಲ್ಲಿ ಪ್ರಕಟಿಸಿದೆ.

    ಈ ಕುರಿತು ಪಿಯು ಬೋರ್ಡ್ ನಿರ್ದೇಶಕಿ ಶಿಖಾ ಅವರು ಆದೇಶ ನೀಡಿದ್ದು, ಬೆಂಗಳೂರು ನಗರದ ಜಯನಗರ ಕ್ಷೇತ್ರದ ವಿಧಾನಸಭಾ ಚುನಾವಣೆ ಹಾಗೂ ಪರಿಷತ್ ಚುನಾವಣೆ ಹಿನ್ನೆಲೆ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಜೂನ್ 8 ರಿಂದ ಪೂರಕ ಪರೀಕ್ಷೆ ದಿನಾಂಕ ನಿಗದಿಯಾಗಿತ್ತು. ಆದರೆ ಚುನಾವಣೆಗಳು ಹಾಗೂ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ಹಿನ್ನೆಲೆಯಲ್ಲಿ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಜೂನ್ 29 ರಿಂದ ದ್ವೀತಿಯ ಪಿಯುಸಿ ಪೂರಕ ಪರೀಕ್ಷೆ ಪ್ರಾರಂಭವಾಗಲಿದೆ.

    ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ: http://pue.kar.nic.in/