Tag: supervisor

  • ಗುತ್ತಿಗೆದಾರನ ಸೂಪರ್‌ವೈಸರ್ ನೇಣುಬಿಗಿದು ಆತ್ಮಹತ್ಯೆಗೆ ಶರಣು

    ಗುತ್ತಿಗೆದಾರನ ಸೂಪರ್‌ವೈಸರ್ ನೇಣುಬಿಗಿದು ಆತ್ಮಹತ್ಯೆಗೆ ಶರಣು

    ಚಿಕ್ಕಮಗಳೂರು: ಬೆಳಗಾವಿ ಮೂಲದ ಗುತ್ತಿಗೆದಾರನ ಮೇಲ್ವಿಚಾರಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಲಾಡ್ಜ್ ನಲ್ಲಿ ನಡೆದಿದೆ.

    ಬಸವರಾಜ್ ಲಿಂಗಪ್ಪ (47) ಮೃತ ವ್ಯಕ್ತಿ. ಲಿಂಗಪ್ಪ ಅವರು ದೊಡ್ಡ ವಾಟರ್ ಟ್ಯಾಂಕ್ ಕಟ್ಟುವ ಗುತ್ತಿಗೆದಾರನ ಬಳಿ ಕೆಲಸ ಮಾಡುತ್ತಿದ್ದರು. ಅವರು ಕಳೆದ 10 ದಿನಗಳಿಂದ ಬಾಳೆಹೊನ್ನೂರಿನಲ್ಲಿ ಕೆಲಸ ಮಾಡುತ್ತಿದ್ದರು. ಆರು ವರ್ಷದ ಕೆಲಸದ ಸಂಬಳ ನೀಡದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಪೊಲೀಸ್ ಠಾಣೆ ಮುಂಭಾಗದಲ್ಲೇ ಏರ್‌ ಫೈರ್ – ವೆಬ್ ಡಿಸೈನರ್ ಕಿಡ್ನಾಪ್

    ಆತ್ಮಹತ್ಯೆಗೂ ಮುನ್ನ ಲಿಂಗಪ್ಪ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಮೃತ ಬಸವರಾಜ್ ಅವರ ಕುಟುಂಬಸ್ಥರಿಗಾಗಿ ಕಾಯುತ್ತಿದ್ದಾರೆ. ಲಾಡ್ಜ್ ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಲಾಲ್‌ ಮಾಂಸ, ಮಸೀದಿಗಳಲ್ಲಿ ಧ್ವನಿವರ್ಧಕ ಏಕೆ ನಿಷೇಧಿಸಬೇಕು: ಒಮರ್‌ ಅಬ್ದುಲ್ಲಾ ಪ್ರಶ್ನೆ

  • ಬೃಹತ್ ಪೈಪ್ ಬಿದ್ದು ಸೂಪರ್ ವೈಸರ್ ಸಾವು

    ಬೃಹತ್ ಪೈಪ್ ಬಿದ್ದು ಸೂಪರ್ ವೈಸರ್ ಸಾವು

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ನೀರು ಪೊರೈಕೆ ಮಾಡುವ ಕಾಮಗಾರಿಯ ಪೈಪಲೈನ್ ನ ಬೃಹತ್ ಪೈಪ್ ಬಿದ್ದು ಕಾಮಗಾರಿ ನೋಡಿಕೊಳ್ಳುತ್ತಿದ್ದ ಸೂಪರ್ ವೈಸರ್ ಸಾವನ್ನಪ್ಪಿದ ಘಟನೆ ನಡೆದಿದೆ.

    ನಗರದಲ್ಲಿ ನಡೆಯುತ್ತಿರುವ ನೀರು ಪೊರೈಕೆ ಕಾಮಗಾರಿಯ ಪೈಪ್ ಲೈನ್ ಜೋಡಣೆಗಾಗಿ ಎಪಿಎಂಸಿಯಲ್ಲಿ ಬೃಹತ್ ಪೈಪ್ ಗಳನ್ನು ಸಂಗ್ರಹಿಸಿಡಲಾಗುತ್ತಿದೆ. ಇಂದು ಲಾರಿಯಲ್ಲಿ ಬಂದ ಪೈಪ್ ಗಳನ್ನು ಇಳಿಸುವ ವೇಳೆ ಕಾಮಗಾರಿ ನೋಡಿಕೊಳ್ಳುತ್ತಿದ್ದ ಸೂಪರ್ ವೈಸರ್ ಮೇಲೆ ಬೃಹತ್ ಪೈಪ್ ಬಿದ್ದಿದೆ. ಪರಿಣಾಮ ಸೂಪರ್ ವೈಸರ್ ವಿಜಯಾನಂದ ಹದ್ದಣ್ಣನವರ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: 1200 ರೂಪಾಯಿಗೆ ಡಿಎಪಿ ಗೊಬ್ಬರ – ಜೋಶಿ ಮನವಿಗೆ ಸ್ಪಂದಿಸಿದ ಸರ್ಕಾರ

    ವಿಜಯಾನಂದ ಹದ್ದಣ್ಣನವರ ಮೇಲೆ ಪೈಪ್ ಬೀಳುತ್ತಿದ್ದಂತೆ ತೀವ್ರವಾಗಿ ಗಾಯಗೊಂಡಿದ್ದು, ಬಳಿಕ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸೂಪರ್ ವೈಸರ್ ಸಾವಿಗೀಡಾಗಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಎಪಿಎಂಸಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

  • ಡೆಲಿವರಿ ಬಾಯ್‍ಯಿಂದ ಥಳಿತ – 10 ದಿನದ ಬಳಿಕ ಸೂಪರ್‌ವೈಸರ್‌ ಸಾವು

    ಡೆಲಿವರಿ ಬಾಯ್‍ಯಿಂದ ಥಳಿತ – 10 ದಿನದ ಬಳಿಕ ಸೂಪರ್‌ವೈಸರ್‌ ಸಾವು

    ಹೈದರಾಬಾದ್: ಡೆಲಿವರಿ ಹುಡುಗನಿಂದ ಥಳಿತಕ್ಕೊಳಗಾಗಿದ್ದ ಸೂಪರ್‌ವೈಸರ್‌ 10 ದಿನಗಳ ನಂತರ ಸಾವನ್ನಪ್ಪಿರುವ ಘಟನೆ ಹೈದರಾಬಾದ್‍ನ ಗೋಲ್ಕೊಂಡದಲ್ಲಿ ನಡೆದಿದೆ.

    ಎಎಸ್‍ಸಿಎ ಮ್ಯಾನೇಜ್‍ಮೆಂಟ್ ಸರ್ವಿಸಸ್ ಕಂಪನಿಯಲ್ಲಿ ಸೂಪರ್‌ವೈಸರ್‌ ಆಗಿ ಕೆಲಸ ಮಾಡುತ್ತಿದ್ದ 20 ವರ್ಷದ ಶಿವರಾಮ್ ಮೃತ ದುರ್ದೈವಿ. ಇದೇ ಕಂಪನಿಯಲ್ಲಿ ಡೆಲಿವರಿ ಹುಡುಗನಾಗಿ ಕೆಲಸ ಮಾಡುತ್ತಿದ್ದ ಮುನೀರ್ ಡಿಸೆಂಬರ್ 20 ರಂದು ಶಿವರಾಮ್ ಮೇಲೆ ಹಲ್ಲೆ ಮಾಡಿದ್ದ.

    ಸರಿಯಾದ ಸಮಯಕ್ಕೆ ಮುನೀರ್ ಡೆಲಿವರಿ ನೀಡುವುದಿಲ್ಲ ಎಂದು ಶಿವರಾಮ್ ಕಂಪನಿಯ ಮ್ಯಾನೇಜರ್ ಗೆ ದೂರು ನೀಡಿದ್ದರು. ಇದನ್ನೇ ಮನಸ್ಸಿನಲ್ಲಿ ಇಟ್ಟಿಕೊಂಡಿದ್ದ ಮುನೀರ್ ಡಿಸೆಂಬರ್ 20 ರಂದು ಆಫೀಸ್‍ನಲ್ಲಿ ಶಿವರಾಮ್ ಜೊತೆ ಜಗಳ ಮಾಡಿದ್ದಾನೆ. ಈ ನಡುವೆ ಮುನೀರ್ ಶಿವರಾಮ್‍ಗೆ ತಲೆಗೆ ಹೊಡೆದಿದ್ದಾನೆ. ಆ ಸಮಯದಲ್ಲಿ ಆಫೀಸ್‍ನಲ್ಲಿದ್ದ ಕೆಲವರು ಶಿವರಾಜ್ ಅವರನ್ನು ಬಿಡಿಸಿ ಮನೆಗೆ ಕಳುಹಿಸಿದ್ದಾರೆ.

    ಘಟನೆಯ ನಂತರ ಶಿವರಾಮ್ ತಾನು ತಂಗಿದ್ದ ಪಿಜಿಗೆ ವಾಪಸ್ ಬಂದಿದ್ದಾರೆ. ಅವರ ತಲೆಗೆ ತೀವ್ರವಾದ ಗಾಯವಾದ ಕಾರಣ ಪಿಜಿಯಲ್ಲಿ ತಲೆನೋವು ಎಂದು ಬಿದ್ದು ಪ್ರಜ್ಞೆ ತಪ್ಪಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ತಲೆಗೆ ತೀವ್ರವಾದ ಗಾಯವಾಗಿದೆ ಎಂದು ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ. ಇದಾದ ನಂತರ 10 ದಿನಗಳ ಕಾಲ ಕೋಮಾದಲ್ಲಿದ್ದ ಶಿವರಾಮ್ ಮೃತಪಟ್ಟಿದ್ದಾರೆ.

    ಮುನೀರ್ ಶಿವರಾಮ್‍ಗೆ ಥಳಿಸಿರುವ ದೃಶ್ಯ ಆಫೀಸಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡು, ಆರೋಪಿ ಮುನೀರ್ ನನ್ನು ಬಂಧಿಸಿದ್ದಾರೆ.

  • ಹೆಸರಾಂತ ಬ್ಲಡ್ ಬ್ಯಾಂಕ್‍ನಲ್ಲೇ ಅಕ್ರಮ ಮಾರಾಟ- 13 ಲಕ್ಷ ರೂ. ಮೋಸ..!

    ಹೆಸರಾಂತ ಬ್ಲಡ್ ಬ್ಯಾಂಕ್‍ನಲ್ಲೇ ಅಕ್ರಮ ಮಾರಾಟ- 13 ಲಕ್ಷ ರೂ. ಮೋಸ..!

    – ಬ್ಲಡ್ ಬ್ಯಾಂಕ್ ಮೇಲ್ವಿಚಾರಕನಿಂದಲೇ ಅಕ್ರಮ ದಂಧೆ

    ಚಿಕ್ಕಬಳ್ಳಾಪುರ: ರಾಜ್ಯದಲ್ಲೇ ಹೆಸರಾಂತ ಬ್ಲಡ್ ಬ್ಯಾಂಕ್‍ನಲ್ಲೇ ಸಂಸ್ಥೆಯ ಮೇಲ್ವಿಚಾರಕನೊರ್ವ ಲಕ್ಷಾಂತರ ರೂಪಾಯಿ ಮೌಲ್ಯದ ರಕ್ತದ ಉತ್ಪನ್ನ ಪ್ಲಾಸ್ಮಾವನ್ನು ಅಕ್ರಮವಾಗಿ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ.

    ಜಿಲ್ಲೆಯ ರೆಡ್‍ಕ್ರಾಸ್ ಸಂಸ್ಥೆಯ ರಕ್ತನಿಧಿ ಕೇಂದ್ರ ರಾಜ್ಯದಲ್ಲೇ ಮಾದರಿ ಕೇಂದ್ರ ಎಂದು ಹೆಸರುವಾಸಿ. ಇಂತಹ ಮಾದರಿ ಬ್ಲಡ್ ಬ್ಯಾಂಕ್‍ನಲ್ಲೇ ಸಂಸ್ಥೆಯ ಮೇಲ್ವಿಚಾರಕ ರವಿ ಲಂಬಾಣಿ ಎಂಬಾತ ಬರೋಬ್ಬರಿ 13 ಲಕ್ಷ ರೂಪಾಯಿ ಮೌಲ್ಯದ ರಕ್ತದ ಉತ್ಪನ್ನ ಪ್ಲಾಸ್ಮಾವನ್ನು ಅಕ್ರಮವಾಗಿ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ರು ಅನ್ನೋ ಹಾಗೆ ಆಡಳಿತ ಮಂಡಳಿ ಈ ಕುರಿತು ತಡವಾಗಿ ಎಚ್ಚೆತ್ತಿದ್ದು, ಕೊನೆಗೆ ದುಡ್ಡು ಕೊಡಿಸುವಂತೆ ಪೋಲಿಸರ ಮೊರೆ ಹೋಗಿದೆ.

    ಮನುಷ್ಯರ ಜೀವ ಉಳಿಸೋ ಜೀವಾಮೃತವನ್ನೇ ಕದಿಯೋ ಅಕ್ರಮ ದಂಧೆ ಬೆಳಕಿಗೆ ಬಂದಿದೆ. ರವಿ ಲಂಬಾಣಿ ರಕ್ತದಿಂದ ಬೇರ್ಪಡಿಸುವ ದುಬಾರಿ ಮೌಲ್ಯದ ಪ್ಲಾಸ್ಮಾವನ್ನು ಅಕ್ರಮವಾಗಿ ಕೆಲವು ಕಂಪನಿಗಳಿಗೆ ಮಾರಾಟ ಮಾಡಿ, ಬರೋಬ್ಬರಿ 13 ಲಕ್ಷ ರೂಪಾಯಿಗಳನ್ನು ನುಂಗಿ ನೀರು ಕುಡಿದಿದ್ದಾನೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಆರೋಪಿಸಿದೆ.

    ರಕ್ತನಿಧಿ ಕೇಂದ್ರದಲ್ಲಿ ಪ್ಲಾಸ್ಮಾ ಬೇರ್ಪಡಿಸಿದ ನಂತರ ರಿಲಯನ್ಸ್ ಕಂಪನಿಗೆ ಕೆಜಿ ಲೆಕ್ಕದಲ್ಲಿ ಮಾರಾಟವಾಗ್ತಿತ್ತು. ಆದ್ರೆ ಆರೋಪಿ ರವಿ ಹೆಮರಸ್ ಅನ್ನೋ ಹೈದರಾಬಾದ್ ಮೂಲದ ಕಂಪನಿಗೆ ಪ್ಲಾಸ್ಮಾ ಮಾರಾಟಕ್ಕೆ ಒಪ್ಪಂದ ಮಾಡಿಸಿದ್ದಾನೆ. 2015 ರಿಂದ 2016ರವರೆಗೆ 1726 ಲೀಟರ್ ಬ್ಲಡ್ ಪ್ಲಾಸ್ಮಾ ಉತ್ಪಾದನೆಯಾಗಿದ್ರೂ, ರವಿ 880 ಲೀಟರ್ ಪ್ಲಾಸ್ಮಾ ಮಾತ್ರ ಉತ್ಪಾದನೆಯಾಗಿದೆ ಅಂತ ಲೆಕ್ಕ ತೋರಿಸಿ ದುಡ್ಡು ನುಂಗಿದ್ದಾನೆ. ಈ ಕುರಿತು ಪ್ರಶ್ನಿಸಿದ್ರೆ ನನ್ನದೇನು ತಪ್ಪಿಲ್ಲ, ಹಿಂದಿನ ಕಾರ್ಯದರ್ಶಿಗಳು ಹೇಳಿದಂತೆ ಮಾಡಿದ್ದೇನೆ ಅಂತ ಉತ್ತರಿಸುತ್ತಿದ್ದಾನೆ.

    ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರೆಡ್‍ಕ್ರಾಸ್ ಆಡಳಿತ ಮಂಡಳಿ, ತಮಗೆ ನಷ್ಟವಾಗಿರುವ ಹಣ ಕೊಡಿಸಿ, ಆರೋಪಿ ರವಿ ಲಂಬಾಣಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಕುರಿತು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv