Tag: Superstitious

  • ನಡುಗುವ ಚಳಿಯಲ್ಲಿ ಬಾಣಂತಿ, ಮಗು – ರಾಮನಗರದಲ್ಲಿ ಮೂಢ ನಂಬಿಕೆ

    ನಡುಗುವ ಚಳಿಯಲ್ಲಿ ಬಾಣಂತಿ, ಮಗು – ರಾಮನಗರದಲ್ಲಿ ಮೂಢ ನಂಬಿಕೆ

    ರಾಮನಗರ: 2021ನೇ ವರ್ಷ ಶುರುವಾಗಿದೆ. ಆದ್ರೆ 21ನೇ ಶತಮಾನದಲ್ಲೂ ಮೂಢನಂಬಿಕೆಗಳಿಗೆ ಕೊನೆ ಇಲ್ಲವಾಗಿದೆ. ಹೆರಿಗೆಯನ್ನು ಸೂತಕವೆಂದು ಭಾವಿಸಿ ಬಾಣಂತಿಯನ್ನು ಊರ ಹೊರಗೆ ಗುಡಿಸಲಲ್ಲಿ ಇರಿಸುವ ಸಂಪ್ರದಾಯ ಇನ್ನೂ ರಾಮನಗರದಲ್ಲಿ ಜೀವಂತವಾಗಿದೆ.

    ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯನ್ನು ಗ್ರಾಮದ ಹೊರಗೆ ಸಣ್ಣ ಗುಡಿಸಲು ಮಾಡಿ ಅದರಲ್ಲಿ ವಾಸಿಸಲು ಹೇಳಿದ್ದಾರೆ. ನಡುಗುವ ಚಳಿಯಲ್ಲಿ ಬಾಣಂತಿ ಪರದಾಡುತ್ತಿದ್ದಾಳೆ. ಮಾಗಡಿ ತಾಲೂಕಿನ ಗೊಲ್ಲರಹಟ್ಟಿಯ ಕೋಮಲಾ ಅವರು ಗುಡಿಸಲಲ್ಲಿ ವಾಸಿಸುತ್ತಿದ್ದಾರೆ. 2 ವರ್ಷದ ಹಿಂದೆ ಚಂದ್ರಯ್ಯ ಜೊತೆ ಇವರ ಮದುವೆ ಆಗಿತ್ತು. ಸೂತಕ ದೂರ ಮಾಡಲು ಬಾಣಂತಿ ಮತ್ತು ಮಗುವನ್ನು ಒಂದೂವರೆ ತಿಂಗಳು ಮನೆಯಿಂದ ದೂರ ಇಡಬೇಕು, ಇಲ್ಲವಾದ್ರೆ ಹುಲಿಗಪ್ಪ, ಜಿಂಜಪ್ಪ ದೇವರು ತಮ್ಮ ಮನೆತನಕ್ಕೆ ಕೆಡಕು ಮಾಡುತ್ತಾರೆ ಎನ್ನುವುದು ನಂಬಿಕೆ.

    ಊಟ ತಂದು ಗುಡಿಸಿಲಿನಿಂದ ದೂರವೇ ಇಟ್ಟುಹೋಗುತ್ತಾರೆ. ಯಾರೂ ಆಕೆಯನ್ನು ಮುಟ್ಟುವುದಿಲ್ಲ. ಆ ಚಿಕ್ಕ ಗುಡಿಸಿನಲ್ಲಿ ಬಾಣಂತಿ ವಾಸ ಮಾಡಿ 15 ದಿವಸ ಕಳೆದಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿಯಿದ್ದರೂ ಕುಟುಂಬಸ್ಥರಿಗೆ ತಿಳುವಳಿಕೆ ನೀಡುವ ಪ್ರಯತ್ನ ಮಾಡಿಲ್ಲ.

  • ಗೋರಿ ಮೇಲೆ ಕಾಗೆಗೆ ಇಟ್ಟಿದ್ದ ಪಿಂಡ ತಿಂದ ಯುವಕರು

    ಗೋರಿ ಮೇಲೆ ಕಾಗೆಗೆ ಇಟ್ಟಿದ್ದ ಪಿಂಡ ತಿಂದ ಯುವಕರು

    ಚಿಕ್ಕೋಡಿ: ಮೃತ ಮಹಿಳೆಯ ಗೋರಿ ಮೇಲೆ ಕಾಗೆಗೆ ಇಟ್ಟಿದ್ದ ಪಿಂಡವನ್ನು ಕಾಗೆ ತಿನ್ನಲಿಲ್ಲ ಎಂದು ಕೆಲ ಯುವಕರೇ ತಿಂದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಜಲಾಲಪೂರ ಗ್ರಾಮದಲ್ಲಿ ನಡೆದಿದೆ.

    ಜಲಾಲಪೂರ ಗ್ರಾಮದ ಸೇವಂತಿ ಕರುಣೆ ಮೂರು ದಿನದ ಹಿಂದೆ ಸಾವನ್ನಪ್ಪಿದ್ದರು. ಹೀಗಾಗಿ ಕಾಗೆಗೆ ಪಿಂಡ ಇಡುವ ಕಾರ್ಯಕ್ರಮ ಇಂದು ಇಡಲಾಗಿತ್ತು. ಆದರೆ ಯುವಕರು ಕಾಗೆ ಪಿಂಡವನ್ನು ತಾವೇ ತಿಂದು ಮೂಢನಂಬಿಕೆ ವಿರುದ್ಧ ಜಾಗೃತಿಗೆ ಮುಂದಾಗಿದ್ದಾರೆ.

    ಕಾಗೆಗೋಸ್ಕರ ಸತತ ಒಂದು ಗಂಟೆ ಕಾದರೂ ಕಾಗೆಗಳು ಬರಲಿಲ್ಲ. ಈ ವೇಳೆ ದಲಿತ ಸಂಘರ್ಷ ಸಮಿತಿಯ ಭೀಮವಾದ ಕಾರ್ಯಕರ್ತರು ಅಲ್ಲಿಯೇ ಇದ್ದರು. ಕಾಗೆಗಳು ಬರದೆ ಇರುವುದುನ್ನು ಗಮನಿಸಿ ಯುವಕರು ಪಿಂಡ ಪ್ರಧಾನಕ್ಕೆ ಇಟ್ಟಿದ್ದ ಆಹಾರವನ್ನು ಸೇವಿಸಿದ್ದಾರೆ. ಈ ಮೂಲಕ ಯುವ ಸೇನೆಯು ಮೂಢನಂಬಿಕೆ ವಿರುದ್ಧ ಹೊಸ ಕ್ರಾಂತಿಯನ್ನು ಮಾಡಿದೆ. ಯುವಕರು ಗೋರಿಯ ಮೇಲಿದ್ದ ಆಹಾರ ಸೇವಿಸಿದ್ದು ಜನರಲ್ಲಿ ಆಶ್ಚರ್ಯ ಮೂಡಿಸಿದೆ.