Tag: superstition

  • ದೇವರಿಗೆ ನಾಲಿಗೆಯನ್ನೇ ಕತ್ತರಿಸಿ ದಾನ ಕೊಟ್ಟ ಭೂಪ

    ದೇವರಿಗೆ ನಾಲಿಗೆಯನ್ನೇ ಕತ್ತರಿಸಿ ದಾನ ಕೊಟ್ಟ ಭೂಪ

    ಬಳ್ಳಾರಿ: ದೇವರನ್ನು ಒಲಿಸಿಕೊಳ್ಳಲು ವ್ಯಕ್ತಿಯೊಬ್ಬ (Man) ತನ್ನ ನಾಲಿಗೆಯನ್ನೇ (Tongue) ಕತ್ತರಿಸಿ ದಾನ ಕೊಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಬಳ್ಳಾರಿ (Bellary) ಜಿಲ್ಲೆ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದ ವೀರೇಶ್ ತನ್ನ ನಾಲಿಗೆಯನ್ನು ಕತ್ತರಿಸಿ ದಾನ ಕೊಟ್ಟಿದ್ದಾನೆ. ಆತ ದೇವರ ನಾಲಿಗೆ ಕೇಳಿದೆ ಎಂದು ಚಾಕುವಿನಿಂದ ತನ್ನ ನಾಲಿಗೆಯನ್ನು ಕತ್ತರಿಸಿದ್ದಾನೆ. ಆತ ಶಂಕರಪ್ಪ ತಾತನಿಗಾಗಿ ನಾಲಿಗೆ ಕತ್ತರಿಸಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಪರೀಕ್ಷೆ ದಿನವೇ ಗುಜರಾತ್‍ನ ಜೂನಿಯರ್ ಕ್ಲರ್ಕ್ ಪ್ರಶ್ನೆಪತ್ರಿಕೆ ಸೋರಿಕೆ – ಓರ್ವ ವಶ

    ವೀರೇಶ್ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡ ಬಳಿಕ ತುಂಡಾದ ನಾಲಿಗೆ ಸಮೇತ ಆಸ್ಪತ್ರೆಗೆ ಧಾವಿಸಿದ್ದಾನೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಿಷಬ್ ಶೆಟ್ಟಿ ವಿಚಾರವಾದಿ ಆಗದಿದ್ದರೆ ಮೂರ್ಖ ಜನ ಸುಮ್ಮನೆ ಬಿಡ್ತಿರ್ಲಿಲ್ಲ: ಸಾಹಿತಿ ಬಿ.ಟಿ.ಲಲಿತಾ ನಾಯಕ್

    ರಿಷಬ್ ಶೆಟ್ಟಿ ವಿಚಾರವಾದಿ ಆಗದಿದ್ದರೆ ಮೂರ್ಖ ಜನ ಸುಮ್ಮನೆ ಬಿಡ್ತಿರ್ಲಿಲ್ಲ: ಸಾಹಿತಿ ಬಿ.ಟಿ.ಲಲಿತಾ ನಾಯಕ್

    ಕಾಂತಾರ (Kantara) ಸಿನಿಮಾ ವಿಚಾರವಾಗಿ ನಟ ಚೇತನ್ ಸೇರಿದಂತೆ ಹಲವರು, ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ, ವಿಚಾರವಾದಿ, ಸಾಹಿತಿ ಬಿ.ಟಿ.ಲಲಿತಾ ನಾಯಕ್ (B.T Lalitha Naik) ಈ ಸಿನಿಮಾವನ್ನು ಮತ್ತೊಂದು ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ರಿಷಬ್ ಶೆಟ್ಟಿ (Rishabh Shetty) ಅವರನ್ನು ವಿಚಾರವಾದಿ ಎಂದು ಕರೆದಿದ್ದಾರೆ. ದೈವ ನರ್ತಕರಿಗೆ ಸರಕಾರ ಎರಡು ಸಾವಿರ ರೂಪಾಯಿ ನೀಡಬಾರದಿತ್ತು ಎಂದು ಮಾತನಾಡಿದ್ದಾರೆ.

    ರಿಷಬ್ ಶೆಟ್ಟಿ ಅವರು ಹಿಂದೂತ್ವವಾದಿ ಎಂದು ಒಂದು ಗುಂಪು ಮಾತನಾಡುತ್ತಿದ್ದರೆ, ಬಿ.ಟಿ ಲಲಿತಾ ನಾಯಕ್, ರಿಷಬ್ ಅವರನ್ನು ವಿಚಾರವಾದಿ ಲಿಸ್ಟ್ ಗೆ ಸೇರಿಸಿದ್ದಾರೆ. ಅಲ್ಲದೇ, ರಿಷಬ್ ಮಾಡಿರುವ ಕಾಂತಾರ ಸಿನಿಮಾದ ಬಗ್ಗೆಯೂ ಮಾತನಾಡಿರುವ ಅವರು, ‘ಭೂತಾರಾಧನೆ ಸಮಯದಲ್ಲಿ ದೇವರು ಬರೋದು ಸತ್ಯ ಅಲ್ಲವೇ ಅಲ್ಲ. ದೈವ ನರ್ತಕರು ಓಹೋ ಅಂತ ಚಿರಾಡುವುದು, ಕುಣಿಯುವುದು, ದೇವರು ಮೈಮೇಲೆ ಬರುವುದರಿಂದ ಅಲ್ಲ. ಅದಕ್ಕೆ ಬೇರೆ ಕಾರಣವಿದೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ:ಶೂಟಿಂಗ್‌ಗೆ ಬ್ರೇಕ್, ತಾಂಜಾನಿಯಾ ಕಾಡಿನಲ್ಲಿ ಪತ್ನಿ ಜೊತೆ ರಾಮ್‌ಚರಣ್

    ರಿಷಬ್ ಶೆಟ್ಟಿ ಬಗ್ಗೆ ಅನುಕಂಪವನ್ನೂ ತೋರಿಸಿರುವ ಲಲಿತಾ ನಾಯಕ್, ‘ರಿಷಬ್ ತನ್ನ ವಿಚಾರವನ್ನು ನೇರವಾಗಿ ಹೇಳಿ ಹೊಡಿಸಿಕೊಳ್ಳಲು ತಯಾರಿಲ್ಲ. ಹೀಗಾಗಿ ಈ ಮಾರ್ಗ ಅನುಸರಿಸಿದ್ದಾನೆ. ಆತ ತನ್ನ ವಿಚಾರವನ್ನು ನೇರವಾಗಿ ಹೇಳಿದ್ರೆ ಈ ಮೂರ್ಖ ಜನರು ಆತನನ್ನು ಹಿಡಿದು ಹೊಡೆಯುತ್ತಾರೆ, ಪರದೆಗೆ ಬೆಂಕಿ ಹಚ್ಚುತ್ತಾರೆ. ಕೆಲವು ಜನರ ತಲೆ ಅಷ್ಟರಮಟ್ಟಿಗೆ ಕೆಟ್ಟಿದೆ. ಸತ್ಯವನ್ನು ನೇರವಾಗಿ ಹೇಳಿದರೇ ಆತನನ್ನು ಕೊಂದ ಹಾಕುತ್ತಾರೆ. ಇದು ಆತನಿಗೆ ಬೇಕಿಲ್ಲ. ಆತ ಇನ್ನೂ ಬದುಕು ಬೇಕು ಅಂತ ಬಹಳಷ್ಟು ಬುದ್ದಿವಂತಿಕೆಯಿಂದ ಸಿನಿಮಾ ಮಾಡಿದ್ದಾನೆ’ ಎಂದಿದ್ದಾರೆ.

    ಕಾಂತಾರ ಸಿನಿಮಾ ನೋಡಲು ಬಹಳಷ್ಟು ಬುದ್ಧಿವಂತಿಕೆ ಬೇಕು. ಕಾಂತಾರ ಕಾಡಿನ ಜನರ ನೋವಿನ ಕಥೆ. ಅವರಿಗೆ ಜಮೀನ್ದಾರಿ ಪದ್ಧತಿಯ ಮೂಲಕ ಒಕ್ಕಲೆಬ್ಬಿಸಲು ನೋಡಿದರು. ಅವರಿಗೆ ಬಹಳಷ್ಟು ಚಿತ್ರಹಿಂಸೆ ನೀಡಿದರು. ಹೀಗಾಗಿ ಅವರು ತಮ್ಮ ಉಳಿವಿಗಾಗಿ ಪೊಲೀಸರ ಮತ್ತು ಸರ್ಕಾರದ ಮೊರೆ ಹೋದರು. ಅವರಿಂದ ನ್ಯಾಯ ಸಿಗದೆ  ಚಿರಾಡಿ ಚಿರಾಡಿ ತಮ್ಮ ನೋವು ಹೊರಹಾಕಿದರು. ಅದನ್ನೇ ದೈವ ಅಂತ ನಂಬಲಾಗುತ್ತಿದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೂಢನಂಬಿಕೆಗೆ ಮಗಳು ಬಲಿ – ಹೊಡೆದು ಕೊಂದ ಪೋಷಕರು ಈಗ ಅಂದರ್‌

    ಮೂಢನಂಬಿಕೆಗೆ ಮಗಳು ಬಲಿ – ಹೊಡೆದು ಕೊಂದ ಪೋಷಕರು ಈಗ ಅಂದರ್‌

    ಮುಂಬೈ: ಮಗಳ ಮೇಲೆ ದುಷ್ಟ ಶಕ್ತಿಯಿದೆ ಎಂದು ನಂಬಿದ ಪೋಷಕರು ನಾಗ್ಪುರದಲ್ಲಿ ತಮ್ಮ ಅಪ್ರಾಪ್ತ ಮಗಳನ್ನು ಹೊಡೆದು ಸಾಯಿಸಿದ್ದಾರೆ.

    ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ದುಷ್ಟ ಶಕ್ತಿಗಳನ್ನು ಓಡಿಸಲು ಐದು ವರ್ಷದ ಬಾಲಕಿಯ ಮೇಲೆ ಪೋಷಕರು ದುಷ್ಟ ಶಕ್ತಿ ಓಡಿಸಬೇಕು ಎಂದು ಕೆಲವು  ಪ್ರಯೋಗ ಮಾಡಿದ್ದಾರೆ. ಆದರೆ ಇದನ್ನು ತಡೆದುಕೊಳ್ಳಲು ಶಕ್ತಿಯಿಲ್ಲದ ಆ ಬಾಲಕಿ ಸಾವನ್ನಪ್ಪಿದ್ದಾಳೆ. ಪೊಲೀಸರು ಬಾಲಕಿಯ ತಂದೆ ಸಿದ್ಧಾರ್ಥ್ ಚಿಮ್ನೆ(45), ತಾಯಿ ರಂಜನಾ(42) ಮತ್ತು ಚಿಕ್ಕಮ್ಮ ಪ್ರಿಯಾ ಬನ್ಸೋದ್(32) ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ:  ಮಳೆಗೆ ಕೊಟ್ಟಿಗೆ ಗೋಡೆ ಕುಸಿತ – ಇಬ್ಬರು ಮಕ್ಕಳ ದುರ್ಮರಣ 

    ಏನಿದು ಘಟನೆ?
    ಹಿರಿಯ ಪೊಲೀಸ್ ಅಧಿಕಾರಿ ಈ ಕುರಿತು ಮಾಹಿತಿ ಕೊಟ್ಟಿದ್ದು, ಯೂಟ್ಯೂಬ್‍ನಲ್ಲಿ ಸ್ಥಳೀಯ ಸುದ್ದಿ ವಾಹಿನಿಯನ್ನು ನಡೆಸುತ್ತಿರುವ ಸುಭಾಷ್ ನಗರದ ನಿವಾಸಿ ಚಿಮ್ನೆ, ಕಳೆದ ತಿಂಗಳು ಗುರು ಪೂರ್ಣಿಮೆಯಂದು ತನ್ನ ಪತ್ನಿ ಮತ್ತು 5 ಮತ್ತು 16 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ತಕಲ್‍ಘಾಟ್ ಪ್ರದೇಶದ ದರ್ಗಾಕ್ಕೆ ಹೋಗಿದ್ದರು ಎಂದು ತಿಳಿಸಿದ್ದಾರೆ.

    ಸುಭಾಷ್ ತನ್ನ ಕಿರಿಯ ಮಗಳ ವರ್ತನೆಯ ಬದಲಾವಣೆಗಳನ್ನು ಅನುಮಾನಿಸಿದ್ದು, ಕೆಲವು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾಳೆ ಎಂದು ನಂಬಿದ್ದಾನೆ. ಈ ಹಿನ್ನೆಲೆ ದುಷ್ಟ ಶಕ್ತಿಯನ್ನು ಓಡಿಸಬೇಕು ಎಂದು ಮೂಢನಂಬಿಕೆ ಹಿಂದೆ ಬಿದ್ದಿದ್ದಾರೆ.

    ಈ ಹಿನ್ನೆಲೆ ರಾತ್ರಿ ಇಡೀ ಬಾಲಕಿಗೆ ಪೋಷಕರು ಮತ್ತು ಚಿಕ್ಕಮ್ಮ ದುಷ್ಟ ಶಕ್ತಿ ಓಡಿಸಬೇಕು ಎಂದು ಕೆಲವು ಪೂಜೆ ಮಾಡಿದ್ದು, ಆಕೆಗೆ ಚೆನ್ನಾಗಿ ಹೊಡೆದಿದ್ದಾರೆ. ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಈ ಕ್ಲಿಪ್ ಪೊಲೀಸರಿಗೆ ಸಿಕ್ಕಿದ್ದು, ಆರೋಪಿಗಳು ಬಾಲಕಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿರುವುದು ಕಂಡುಬಂದಿದೆ. ಆದರೆ ಆ ಪುಟ್ಟ ಬಾಲಕಿಗೆ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕೆ ಉತ್ತರಿಸಲಿಲ್ಲ. ಈ ವೇಳೆ ಮೂವರು ಬಾಲಕಿಗೆ ಕಪಾಳಮೋಕ್ಷ ಮಾಡಿ ತೀವ್ರವಾಗಿ ಥಳಿಸಿದ್ದಾರೆ. ನಂತರ ಅವಳು ಪ್ರಜ್ಞಾಹೀನಳಾಗಿ ನೆಲದ ಮೇಲೆ ಕುಸಿದು ಬಿದ್ದಿದ್ದಾಳೆ ಎಂದು ವಿವರಿಸಿದ್ದಾರೆ.

    ಆಸ್ಪತ್ರೆಯಲ್ಲಿ ಬಿಟ್ಟು ಪೋಷಕರು ಪರಾರಿ
    ಆರೋಪಿಗಳು ಬೆಳಗ್ಗೆ ಬಾಲಕಿಯನ್ನು ದರ್ಗಾಕ್ಕೆ ಕರೆದೊಯ್ದಿದ್ದಾರೆ. ಬಳಿಕ ಆಕೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಓಡಿ ಹೋಗಿದ್ದಾರೆ. ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಅನುಮಾನಗೊಂಡು ಅವರ ಕಾರಿನ ಫೋಟೋ ತೆಗೆದುಕೊಂಡಿದ್ದಾರೆ. ನಂತರ ಆಸ್ಪತ್ರೆಯ ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಒಟ್ಟಿಗೆ ಓದಿದ್ರೂ ಅತ್ಯಾಚಾರ ಮಾಡಲು ಸಹಾಯ – ಕೃತ್ಯದ ವೀಡಿಯೋ ಅತ್ತೆಗೆ ಕಳಿಸಿದ ಕಿರಾತಕರು 

    ಪೊಲೀಸರು ತನಿಖೆ ಮಾಡಿದ್ದು, ಕಾರಿನ ಫೋಟೋದಿಂದ ಆರೋಪಿಗಳನ್ನು ಗುರುತಿಸಲಾಗಿದೆ. ರಾಣಾ ಪ್ರತಾಪ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಗಳ ಮನೆಗೆ ತಲುಪಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆರು ಕುರಿ ಬಲಿ- ಲಾಕ್‍ಡೌನ್‍ನಲ್ಲೂ ನಿಲ್ಲದ ಧಾರ್ಮಿಕ ಆಚರಣೆಗಳು

    ಆರು ಕುರಿ ಬಲಿ- ಲಾಕ್‍ಡೌನ್‍ನಲ್ಲೂ ನಿಲ್ಲದ ಧಾರ್ಮಿಕ ಆಚರಣೆಗಳು

    ರಾಯಚೂರು: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಹೇರಿದ್ದರೂ ಜಿಲ್ಲಾಡಳಿತಕ್ಕೆ ಮಾತ್ರ ಸಿಮಿತವಾಗಿದೆ, ಜನ ತಲೆಕೆಡಿಸಿಕೊಳ್ಳದೇ ತಮ್ಮಪಾಡಿಗೆ ತಾವು ಓಡಾಡಿಕೊಂಡಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ದೇವರಿಗೆ ಹರಕೆ ತೀರಿಸಲು ನಗರದ ತಹಶೀಲ್ದಾರ್ ಕಚೇರಿ ಮುಂದೆಯೇ ಕುರಿಬಲಿ ಕೊಟ್ಟಿದ್ದಾರೆ.

    ಬೆಳಗಿನ ಜಾವ ಡೊಳ್ಳು, ನಗಾರಿ ಸಹಿತ ಮೆರವಣಿಗೆ ಬಂದು ಆರು ಕುರಿಗಳನ್ನ ಬಲಿ ನೀಡಿ ದೇವರಿಗೆ ಹರಕೆ ತೀರಿಸಿದ್ದಾರೆ. ಲಾಕ್‍ಡೌನ್ ವೇಳೆ ಧಾರ್ಮಿಕ ಆಚರಣೆಗಳಿಗೆ ನಿಷೇಧವಿದ್ದರೂ ನಿಷೇಧಿತ ಮೂಢನಂಬಿಕೆ ಆಚರಣೆಗಳಿಗೆ ಜನ ಮುಂದಾಗಿದ್ದಾರೆ. ತಹಶಿಲ್ದಾರ್ ಕಚೇರಿ ಮುಂದೆ 6 ಕಡೆಗಳಲ್ಲಿ ರಕ್ತದ ಗುರುತುಗಳು ಇದ್ದು. ಬೇವಿನ ಸೊಪ್ಪು, ಕುಂಕುಮ, ಬಲಿ ಪೂಜೆ ಮಾಡಿರುವ ಎಲ್ಲಾ ಗುರುತುಗಳಿವೆ.

    ಹಕರೆ ತೀರಿಸಲು ನಡು ರಸ್ತೆಯಲ್ಲಿ ಕುರಿಬಲಿ ನೀಡಿರುವ ಭಕ್ತರು ಕೋವಿಡ್ ನಿಯಮಗಳನ್ನೂ ಉಲ್ಲಂಘಿಸಿದ್ದಾರೆ. ಈಗ ಮದುವೆ ಮುಹೂರ್ತಗಳು ಹೆಚ್ಚಾಗಿರುವುದರಿಂದ ಮದುವೆ ನಿಶ್ಚಯವಾದವರು, ಮದುವೆಯಾದವರು ಮಾರೆಮ್ಮ, ಜಮಲಮ್ಮದೇವಿಗೆ ಹರಕೆ ತೀರಿಸಲು ಕುರಿ ಬಲಿ ನೀಡುತ್ತಾರೆ. ಪ್ರಾಣಿಗಳ ಬಲಿ ನಿಷೇಧವಿದ್ದರೂ ರಾಯಚೂರಿನಲ್ಲಿ ಮಾತ್ರ ಪದ್ದತಿ ಮುಂದುವರೆದಿದೆ.

  • ಕೊರೊನಾ ದೂರವಾಗಲು ನೂರಾರು ಕೆಜಿ ಅನ್ನ ಮಣ್ಣುಪಾಲು – ಮೂಢನಂಬಿಕೆಯಲ್ಲಿ ಜನ

    ಕೊರೊನಾ ದೂರವಾಗಲು ನೂರಾರು ಕೆಜಿ ಅನ್ನ ಮಣ್ಣುಪಾಲು – ಮೂಢನಂಬಿಕೆಯಲ್ಲಿ ಜನ

    ಬಳ್ಳಾರಿ: ಹಳ್ಳಿ ಹಳ್ಳಿಗೂ ಸೋಂಕು ಹಬ್ಬಿದ ಹಿನ್ನೆಲೆಯಲ್ಲಿ ಮೌಢ್ಯದ ಕಡೆ ಮುಖ ಮಾಡಿದ ಗ್ರಾಮೀಣ ಭಾಗದ ಜನ, ಇದೀಗ ನೂರಾರು ಕೆಜಿ ಅನ್ನ ಮಣ್ಣುಪಾಲು ಮಡಿರುವ ಘಟನೆ ಬಳ್ಳಾರಿ ತಾಲೂಕಿನ ಡಿ ಕಗ್ಗಲ್ಲು ಗ್ರಾಮದಲ್ಲಿ ನಡೆದಿದೆ.

    ಕೊರೊನಾ ದೂರವಾಗಲಿ ಅಂಥಾ ನೂರಾರು ಕೆಜಿ ಅನ್ನ ಮಣ್ಣುಪಾಲು ಮಾಡಿದ್ದಾರೆ. ಮನೆ ಮನೆಯಲ್ಲಿ ಅನ್ನ ಮಾಡಿಸಿ ರಾತ್ರಿ ವೇಳೆಯಲ್ಲಿ ಊರ ಆಚೆ ಚೆಲ್ಲಿ ಬಂದಿದ್ದಾರೆ. ಗ್ರಾಮದಲ್ಲಿ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಹಳ್ಳಿ ಜನತೆ ಮೂಢನಂಬಿಕೆ ಕಡೆ ಮುಖ ಮಾಡಿದ್ದಾರೆ.

    ಬಳ್ಳಾರಿ ತಾಲೂಕಿನ ಡಿ ಕಗ್ಗಲ್ಲು ಗ್ರಾಮದಲ್ಲಿ ಪ್ರತಿ ಮನೆಯಲ್ಲಿ 5 ಕೆ.ಜಿ ಅನ್ನ ಮಾಡಿ ಒಂದು ಕಡೆ ಸಂಗ್ರಹ ಮಾಡುತ್ತಾರೆ. ಬಳಿಕ ಗ್ರಾಮದ ಹೊರಭಾಗದಲ್ಲಿ ಹೋಗಿ ನೆಲಕ್ಕೆ ಸುರಿದು ಬಂದಿದ್ದಾರೆ. ಒಂದು ಕಡೆ ತುತ್ತು ಅನ್ನಕ್ಕಾಗಿ ಪರದಾಡುವ ಜನ, ಮತ್ತೊಂದು ಕಡೆ ಮೂಢನಂಬಿಕೆಯಿಂದ ನೂರಾರು ಕೆ.ಜಿ ಅನ್ನ ಮಣ್ಣುಪಾಲಾಗಿದೆ.

  • ಶಿವ ಇವರನ್ನ ಕರೆಯುತ್ತಿದ್ದಾನೆ- ತನ್ನ ಮಕ್ಕಳನ್ನೇ ಕೊಂದ ಹೆತ್ತ ತಾಯಿ

    ಶಿವ ಇವರನ್ನ ಕರೆಯುತ್ತಿದ್ದಾನೆ- ತನ್ನ ಮಕ್ಕಳನ್ನೇ ಕೊಂದ ಹೆತ್ತ ತಾಯಿ

    – ಮತ್ತೆ ಬದುಕಿ ಬರ್ತಾರೆ ನಂಬಿ ಕೊಲೆ

    ಕೋಲಾರ: ವಿದ್ಯಾವಂತ ಪೋಷಕರು ಮೂಢನಂಬಿಕೆಗೆ ಬಲಿಯಾಗಿ ತಮ್ಮ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಘಟನೆ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ನಡೆದಿದೆ.

    ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ಅಲೈಕ್ಯ(27) ಮತ್ತು ಬಿಬಿಎ ಕಲಿಯುತ್ತಿದ್ದ ಸಾಯಿದಿವ್ಯ (22) ಹೆತ್ತವರಿಂದಲೇ ಹತ್ಯೆಯಾದವರು. ಸಾಯಿದಿವ್ಯ ಎ.ಆರ್‍ರೆಹಮಾನ್ ಮ್ಯೂಸಿಕ್ ಅಕಾಡೆಮಿ ವಿದ್ಯಾರ್ಥಿ ಕೂಡಾ ಆಗಿದ್ದಾರೆ.

    ತಂದೆ ಪುರುಷೋತ್ತಮ್ ನಾಯ್ಡು ಸರ್ಕಾರಿ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಮತ್ತು ತಾಯಿ ಪದ್ಮಜಾ ಅವರು ಖಾಸಗಿ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷವಷ್ಟೇ ಹೊಸ ಮನೆ ಗೃಹ ಪ್ರವೇಶ ಮಾಡಿದ್ದರು. ವಿದ್ಯೆ ಇದ್ದರೂ ಮನೆಯಲ್ಲಿ ನಿತ್ಯ ಮಾಟ-ಮಂತ್ರದಂತಹ ಪೂಜೆಗಳು ನಡೆಯುತ್ತಿದ್ದವಂತೆ. ಇದೀಗ ಎಂದಿನಂತೆ ಪೂಜೆ ಮಾಡುತ್ತಿದ್ದ ಪೋಷಕರು, ಶಿವ ತಮ್ಮ ಮಕ್ಕಳು ಕರೆಯುತ್ತಿದ್ದಾನೆ. ಮಕ್ಕಳು ಮತ್ತೆ ಹುಟ್ಟಿ ಬರುತ್ತಾರೆ ಎಂಬ ನಂಬಿಕೆಯಿಂದ ಅವರನ್ನು ಕಳೆದ ರಾತ್ರಿ ಹತ್ಯೆ ಮಾಡಿದ್ದಾರೆ.

    ಪೋಷಕರಿಬ್ಬರೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ ಮದನಪಲ್ಲಿ ಡಿವೈಎಸ್ಪಿ ರವಿ ಮನೋಹರಾಚಾರಿ, ಚಿತ್ತೂರು ಎಸ್ಪಿ ಸುನಿಲ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಸದ್ಯ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಪುರುಷೋತ್ತಮ್ ಹಾಗೂ ಪದ್ಮಜಾ ಅವರನ್ನು ಬಂಧಿಸಿಲ್ಲ. ಮಾನಸಿಕ ತಜ್ಞರ ಕೌನ್ಸಿಲಿಂಗ್ ನಂತರ ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

  • ಪತ್ನಿ, ಐವರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ- ನಾಲ್ವರು ಸಾವು, ಇಬ್ಬರು ಗಂಭೀರ

    ಪತ್ನಿ, ಐವರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ- ನಾಲ್ವರು ಸಾವು, ಇಬ್ಬರು ಗಂಭೀರ

    – ನಾನು ಕೊಂದಿಲ್ಲ, ದೆವ್ವದ ಕೆಲಸ ಎಂದ ಪಾಪಿ

    ಪಾಟ್ನಾ: ಪತಿಯೋರ್ವ ಪತ್ನಿ ಸೇರಿದಂತೆ ಐವರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಪತ್ನಿ ಮತ್ತು ಮಗ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬಿಹಾರದ ಸಿವಾನ್ ಜಿಲ್ಲೆಯ ಭಗವಾನಪುರದಲ್ಲಿ ಈ ಘಟನೆ ನಡೆದಿದೆ.

    ಅವಧೇಶ್ ಚೌಧರಿ ಮಕ್ಕಳನ್ನ ಕೊಂದ ರಾಕ್ಷಸ. ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಮನೆಯಲ್ಲಿದ್ದ ಆರು ಜನರ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದ ಅವಧೇಶ್, ನಾನು ಕೊಲೆ ಮಾಡಿಲ್ಲ. ದೆವ್ವ ನನ್ನ ಕೈಯಲ್ಲಿಂದ ಮಾಡಿಸಿದೆ ಎಂದು ನಾಟಕ ಆಡುತ್ತಿದ್ದಾನೆ. ಇದನ್ನೂ ಓದಿ: 8 ದಿನ ಉಪವಾಸ ವ್ರತ ಆಚರಿಸಿ 9ನೇ ದಿನ ಪತ್ನಿ ಕೊಂದು ನರಬಲಿ ನೀಡಿದ!

    ಅವಧೇಶ್ ಪತ್ನಿ ಮತ್ತು ಐದು ಮಕ್ಕಳ (ಎರಡು ಹೆಣ್ಣು, ಮೂರು ಗಂಡು) ಜೊತೆ ಭಗವಾನಪುರದಲ್ಲಿ ವಾಸವಾಗಿದ್ದನು. ಯಾವುದೋ ಸಣ್ಣ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆದಿದೆ. ಕೋಪಗೊಂಡ ಅವಧೇಶ್ ಮನೆಯಲ್ಲಿದ್ದ ಕೊಡಲಿಯಿಂದ ಎಲ್ಲರ ಮೇಲೆ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ನಾಲ್ಕು ಮಕ್ಕಳು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ತಂತ್ರ ಮಂತ್ರದ ಮೊರೆಗಾಗಿ 8 ವರ್ಷದ ಮಗಳನ್ನ ಕೊಂದ ತಾಯಿ

    ದೆವ್ವದ ಕಥೆ: ನಾನು ಗೇಟ್ ತೆಗೆದು ಮನೆಗೆ ಬರುತ್ತಿದ್ದಂತೆ ನನ್ನ ದೇಹವನ್ನ ಭೂತ ಪ್ರವೇಶಿಸಿತು. ಅದು ಎದುರಿಗೆ ಸಿಕ್ಕವರ ಮೇಲೆ ದಾಳಿ ನಡೆಸಬೇಕೆಂದು ಹೇಳಿತ್ತು. ಮನೆಯಲ್ಲಿ ಕುಟುಂಬಸ್ಥರೇ ಎದುರಾಗಿದ್ದರಿಂದ ಎಲ್ಲರ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದೇನೆ ಎಂದು ಅವಧೇಶ್ ಚೌಧರಿ ಹೇಳಿದ್ದಾನೆ.

    ಘಟನೆಯಿಂದ ಇಡೀ ಭಗವಾನಪುರದಲ್ಲಿ ಭಯ ವಾತಾವರಣ ನಿರ್ಮಾಣವಾಗಿದೆ. ಆರೋಪಿ ಅವಧೇಶ್ ಮಾನಸಿಕ ಖಿನ್ನತೆಯಿಂದ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹಾಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನ ಮರೋಣತ್ತರ ಶವ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇನ್ನ ಗಂಭೀರವಾಗಿ ಗಾಯಗೊಂಡಿರುವ ಪತ್ನಿ ಮತ್ತು ಮಗುವಿಗೆ ಚಿಕಿತ್ಸೆ ಕೊಡಿಸಲಾಗ್ತಿದೆ ಎಂದು ಎಎಸ್‍ಐ ಶಶಿಭೂಷನ್ ಕುಮಾರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪತ್ನಿಯ ಕುತ್ತಿಗೆ ಕೊಯ್ದು ಕುಲದೇವತೆಗೆ ಬಲಿ ನೀಡಿದ ಗಂಡ

  • ಚಾಮರಾಜನಗರಕ್ಕೆ ಭೇಟಿ ಕೊಡಲು ಸಿಎಂ ಹಿಂದೇಟು – ಮೂಢನಂಬಿಕೆಗೆ ಜೋತು ಬಿದ್ರಾ ಬಿಎಸ್‍ವೈ?

    ಚಾಮರಾಜನಗರಕ್ಕೆ ಭೇಟಿ ಕೊಡಲು ಸಿಎಂ ಹಿಂದೇಟು – ಮೂಢನಂಬಿಕೆಗೆ ಜೋತು ಬಿದ್ರಾ ಬಿಎಸ್‍ವೈ?

    ಚಾಮರಾಜನಗರ: ಸಿಎಂ ಯಡಿಯೂರಪ್ಪ ಮೂಢನಂಬಿಕೆಗೆ ಕಟ್ಟುಬಿದ್ದಿದ್ದಾರಾ? ಹೌದು ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕಾರಣ ಅಧಿಕಾರ ವಹಿಸಿಕೊಂಡು 16 ತಿಂಗಳು ಕಳೆದರು ಸಿಎಂ ಚಾಮರಾಜನಗರದತ್ತ ತಲೆ ಹಾಕಿಲ್ಲ. ಆದರೆ ಇದೇ ತಿಂಗಳು 25ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಾಗಿ ಜಿಲ್ಲೆಯ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿರುವ ಯಡಿಯೂರಪ್ಪ ಚಾಮರಾಜನಗರಕ್ಕೆ ಭೇಟಿ ನೀಡುತ್ತಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ.

    2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸುಮಾರು ಮೂರು ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಒಮ್ಮೆಯೂ ಚಾಮರಾಜನಗರಕ್ಕೆ ಭೇಟಿ ನೀಡಿರಲಿಲ್ಲ. ಇದೀಗ ಅದೇ ಪರಿಪಾಠ ಮುಂದುವರಿಸಿದ್ದು, ಚಾಮರಾಜನಗರ ಪಟ್ಟಣಕ್ಕೆ ಬಾರದೆ ಇದೇ ತಿಂಗಳು 25ರಂದು ಜಿಲ್ಲೆಯ ಮಹದೇಶ್ವರ ಬೆಟ್ಟಕ್ಕೆ ಬಂದು ಹೋಗುತ್ತಿದ್ದಾರೆ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತೆ ಎಂಬ ಮೂಢನಂಬಿಕೆಗೆ ಯಡಿಯೂರಪ್ಪ ಜೋತುಬಿದ್ದಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

    ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್ ಬೊಮ್ಮಾಯಿ ಹಾಗೂ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗಿದ್ದ ವೇಳೆ ಚಾಮರಾಜನಗರಕ್ಕೆ ಬಂದಿದ್ದರು. ಆದರೆ ಇಲ್ಲಿಂದ ಹೋದ ಮೇಲೆ ಆರು ತಿಂಗಳ ಒಳಗೆ ಬೇರೆ ಬೇರೆ ಕಾರಣಗಳಿಂದ ಅಧಿಕಾರ ಕಳೆದುಕೊಂಡರು. ಹೀಗಾಗಿ ಮುಖ್ಯಮಂತ್ರಿಗಳಾದವರು ಚಾಮರಾಜನಗರ ಬಂದರೆ ಆರು ತಿಂಗಳ ಒಳಗೆ ಅವರ ಅಧಿಕಾರ ಹೋಗುತ್ತೆ ಎಂಬ ಮೂಢನಂಬಿಕೆ ಹುಟ್ಟಿಕೊಂಡಿತು. ಎಸ್. ಬಂಗಾರಪ್ಪ, ವೀರಪ್ಪಮೊಯ್ಲಿ, ಹೆಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಸ್. ಎಂ. ಕೃಷ್ಣ, ಧರಂಸಿಂಗ್ ಚಾಮರಾಜನಗರದತ್ತ ಸುಳಿಯಲಿಲ್ಲ.

    ಸುಮಾರು 16 ವರ್ಷಗಳ ನಂತರ ಹೆಚ್.ಡಿ ಕುಮಾರಸ್ವಾಮಿ ಮೂಢನಂಬಿಕೆ ಧಿಕ್ಕರಿಸಿ 2007ರ ಮೇ ತಿಂಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಆದರೆ ಕುಮಾರಸ್ವಾಮಿ ಸಹ ಕಾಕತಾಳಿಯವೆಂಬಂತೆ ಪದಚ್ಯುತಿಗೊಂಡರು. ಇದರಿಂದ ಚಾಮರಾಜನಗರಕ್ಕೆ ಮತ್ತೆ ಅದೇ ಕಳಂಕ ಅಂಟಿಕೊಂಡಿತು. ನಂತರದಲ್ಲಿ ಸಿಎಂ ಆದ ಯಡಿಯೂರಪ್ಪ ನಗರಕ್ಕೆ ಬರಲಿಲ್ಲ. ಸದಾನಂದಗೌಡರು ಚಾಮರಾಜನಗಕ್ಕೆ ಭೇಟಿ ನೀಡಲು ಹಿಂಜರಿದರು. ಆದರೆ ಜಗದೀಶ್ ಶೆಟ್ಟರ್ ತಮ್ಮ ಅಧಿಕಾರದ ಕೊನೆ ದಿನಗಳಲ್ಲಿ ಚಾಮರಾಜನಗರಕ್ಕೆ ಆಗಮಿಸಿದ್ದರು. ನಂತರ ಸಿಎಂ ಆದ ಸಿದ್ದರಾಮಯ್ಯ 10ಕ್ಕೂ ಹೆಚ್ಚು ಬಾರಿ ಭೇಟಿ ನೀಡುವ ಮೂಲಕ ಮೂಢನಂಬಿಕೆಗೆ ಇತಿಶ್ರೀ ಹಾಡಿದರು.

    ಸಿಎಂ ಭೇಟಿ ಕುರಿತು ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ಕಳೆದ 58 ವಾರದಲ್ಲಿ 49 ಬಾರಿ ನಾನು ಜಿಲ್ಲೆಗೆ ಭೇಟಿ ಕೊಟ್ಟಿದ್ದೇನೆ. ನನಗೆ ಜಿಲ್ಲೆಗೆ ಆಗಮಿಸಿದರೆ ಅಧಿಕಾರ ಹೋಗುತ್ತೆ ಎಂಬ ಭಯವಿಲ್ಲ. ಅದೇ ರೀತಿ ಯಡಿಯೂರಪ್ಪ ಕೂಡ ಚಾಮರಾಜನಗರಕ್ಕೆ ಭೇಟಿ ಕೊಡುತ್ತಾರೆ. ಅವರಿಗೆ ಅಧಿಕಾರ ಹೋಗುವ ಭಯವಿಲ್ಲ, ಶೀಘ್ರದಲ್ಲೇ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಾರೆ ಎಂಬ ಹಾರಿಕೆ ಉತ್ತರ ಕೊಡುತ್ತಿದ್ದಾರೆ.

    ಈಗ ಯಡಿಯೂರಪ್ಪ ಮತ್ತೆ ಅದೇ ಮೂಢನಂಬಿಕೆಗೆ ಜೋತು ಬಿದ್ದಿದ್ದು ಚಾಮರಾಜನಗರಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮುಖ್ಯಮಂತ್ರಿ ಆಗಿದ್ದವರು ಅಧಿಕಾರ ಕಳೆದುಕೊಂಡ ಇದುವರೆಗಿನ ಘಟನೆಗಳು ಕೇವಲ ಕಾಕತಾಳೀಯ ಅಷ್ಟೇ. ರಾಜಕೀಯ ಕಾರಣಗಳಿಗೆ ಅಧಿಕಾರ ಕಳೆದುಕೊಂಡರೆ ಚಾಮರಾಜನಗರಕ್ಕೆ ಆ ಕಳಂಕವನ್ನು ಅಂಟಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

  • ಪುತ್ರ ವ್ಯಾಮೋಹ – 6 ವರ್ಷದ ಮಗಳನ್ನ ಬಲಿ ನೀಡಿದ ತಂದೆ

    ಪುತ್ರ ವ್ಯಾಮೋಹ – 6 ವರ್ಷದ ಮಗಳನ್ನ ಬಲಿ ನೀಡಿದ ತಂದೆ

    – ಮನೆಯ ಅಂಗಳದಲ್ಲಿ ಪೂಜೆ ನಡೆಸಿ ಬಲಿ
    – ಮೂಢನಂಬಿಕೆಗೆ ಬಲಿಯಾದ ಬಾಲಕಿ

    ರಾಂಚಿ: ತಂದೆಯೋರ್ವ ಪುತ್ರ ವ್ಯಾಮೋಹದ ಹಿನ್ನೆಲೆ ಆರು ವರ್ಷದ ಮಗಳನ್ನ ಬಲಿ ನೀಡಿರುವ ಘಟನೆ ಜಾರ್ಖಂಡ್ ರಾಜ್ಯದ ಪೇಶರಾರ ಪ್ರಖಂಡ ಪಂಚಾಯ್ತು ವ್ಯಾಪ್ತಿಯ ಬೋಂಡೋಬಾರ್ ಗ್ರಾಮದಲ್ಲಿ ನಡೆದಿದೆ.

    26 ವರ್ಷದ ಸುಮನ್ ನಗೆಸಿಯಾ ಮಗಳನ್ನ ಕೊಂದ ತಂದೆ. ಸುಮನ್ ಅನಕ್ಷರಸ್ಥನಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಮದುವೆ ಬಳಿಕ ಮೊದಲ ಮಗು ಹೆಣ್ಣಾಗಿತ್ತು. ಹೆಣ್ಣು ಮಗು ಬಳಿಕ ಸುಮನ್ ಗೆ ಮತ್ತೆ ಮಕ್ಕಳಾಗಿರಲಿಲ್ಲ. ಆದ್ರೆ ಗಂಡು ಮಗು ನಿರೀಕ್ಷೆಯಲ್ಲಿದ್ದ ಸುಮನ್ ಮಂತ್ರವಾದಿಯ ಬಳಿ ಹೋಗಿದ್ದನು.

    ಮಂತ್ರವಾದಿ ಬಳಿ ತನಗೆ ಮಗ ಬೇಕಾಗಿರುವ ಬಗ್ಗೆ ಚರ್ಚೆ ನಡೆಸಿದ್ದಾನೆ. ಆಗ ಮಂತ್ರವಾದಿ ಇದ್ದ ಮಗಳನ್ನ ಬಲಿ ನೀಡಿದ್ರೆ ಮುಂದೆ ಗಂಡು ಮಗುವಿನ ಜನನವಾಗಲಿದೆ ಎಂದು ಸುಮನ್ ಕಿವಿ ತುಂಬಿದ್ದಾನೆ. ಮೂಢನಂಬಿಕೆಗೆ ಒಳಗಾದ ಸುಮನ್ ಪತ್ನಿ ಮನೆಯಲಕ್ಲಿ ಇಲ್ಲದ ವೇಳೆ ಮಗಳ ಬಲಿಗೆ ಸಿದ್ಧಪಡಿಸಿದ್ದನು.

    ಮಂತ್ರವಾದಿಯ ನೇತೃತ್ವದಲ್ಲಿ ಮನೆಯ ಮುಂಭಾಗದಲ್ಲಿಯೇ ಪೂಜೆ ಮಾಡಿದ ಮಗಳನ್ನ ಕೊಂದಿದ್ದಾನೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಂತ್ರವಾದಿ ಗ್ರಾಮದಿಂದ ಎಸ್ಕೇಪ್ ಆಗಿದ್ದಾನೆ.

    ಗ್ರಾಮಸ್ಥರು ಸುಮನ್ ನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇನ್ನು ಘಟನೆ ಬಳಿಕ ಎಸ್ಕೇಪ್ ಆಗಿರೊ ಮಂತ್ರವಾದಿ ಮತ್ತು ಆತನ ಸಹಚರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

  • ತಂತ್ರ ಮಂತ್ರದ ಮೊರೆಗಾಗಿ 8 ವರ್ಷದ ಮಗಳನ್ನ ಕೊಂದ ತಾಯಿ

    ತಂತ್ರ ಮಂತ್ರದ ಮೊರೆಗಾಗಿ 8 ವರ್ಷದ ಮಗಳನ್ನ ಕೊಂದ ತಾಯಿ

    -ನನ್ನಲ್ಲಿ ದಿವ್ಯಶಕ್ತಿ ಇದೆ ಎಂದ ಮಹಿಳೆ

    ಲಕ್ನೋ: ತಂತ್ರ ಮಂತ್ರದ ಮೊರೆಗಾಗಿ ಮಹಿಳೆ ತನ್ನ ಎಂಟು ವರ್ಷದ ಮಗಳನ್ನ ಕೊಲೆಗೈದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫರೀದಾಬಾದ್ ನಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಮಗು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿಯನ್ನ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧನಕ್ಕೊಳಾಗದ ಮಹಿಳೆ ಆರಂಭದಲ್ಲಿ ತನಗೆ ದಿವ್ಯಶಕ್ತಿಯ ಬಲವಿದೆ ಎಂಬಿತ್ಯಾದಿ ಮಾತುಗಳನ್ನಾಡಿದ್ದಾಳೆ. ನಂತರ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಗಳನ್ನ ಕೊಂದು ಶವವನ್ನ ಬಿಸಾಡಿರುವ ರಸ್ತೆಯನ್ನ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಮಗಳ ಮನೆಗೆ ಬಂದು ಏಕಾಏಕಿ ಪುತ್ರಿ, ಅಳಿಯನ ಮೇಲೆ ಗುಂಡು ಹಾರಿಸಿದ ತಂದೆ

    ಪಲ್ವಲ್ ವ್ಯಾಪ್ತಿಯ ಬಗೋಲಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಆರಂಭದಲ್ಲಿ ಮೂಢನಂಬಿಕೆ ಮಾತುಗಳನ್ನಾಡಿದ್ದ ಮಹಿಳೆ ಕೊನೆಗೆ ತಪ್ಪೊಪ್ಪಿಕೊಂಡಿದ್ದಾಳೆ. ಈ ಮೊದಲು ನೀರಿನ ಟ್ಯಾಂಕ್ ನಲ್ಲಿ ಮಗಳನ್ನ ಮುಳುಗಿಸಿ ಕೊಲ್ಲಲುಪ್ರಯತ್ನಿಸಿದ್ದಳು. ಆದ್ರೆ ಜನರು ಬಂದು ಬಾಲಕಿಯನ್ನ ರಕ್ಷಣೆ ಮಾಡಿದ್ದರು. ಇದನ್ನೂ ಓದಿ: ಫೋನ್ ಕರೆ ಸ್ವೀಕರಿಸಲು ಗೆಳತಿ ನಕಾರ- ಮನನೊಂದು ಯುವಕ ಆತ್ಮಹತ್ಯೆಗೆ ಯತ್ನ

    ಮೂರು ದಿನಗಳ ಮಗಳು ಕಾಣೆಯಾಗಿರುವ ಬಗ್ಗೆ ಬಾಲಕಿಯ ತಂದೆ ರಾಜೇಶ್, ಸಂಜಯ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರಿಗೆ ಆತನ ಪತ್ನಿಯ ಮೇಲೆ ಅನುಮಾನ ವ್ಯಕ್ತವಾಗಿತ್ತು. ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೂಢನಂಬಿಕೆಯಲ್ಲಿರುವ ತಾಯಿ ತಂತ್ರ ಮಂತ್ರಗಳ ಮೊರೆಗಾಗಿ ಮಗಳನ್ನ ಕೊಲೆ ಮಾಡಿರೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಕ್ರೈಂ ಬ್ರಾಂಚ್ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.  ಇದನ್ನೂ ಓದಿ: ಸ್ನೇಹಿತನ ಪತ್ನಿಗೆ ಮತ್ತು ಬರೋ ಔಷಧಿ ನೀಡಿ ರೇಪ್ – ಗೆಳೆಯನ ಮಗಳನ್ನೂ ಬಿಡದ ಕಾಮುಕ