Tag: Supermarket

  • ಒಂದು ಮೊಟ್ಟೆಗೆ 30 ರೂಪಾಯಿ- ಶ್ರೀಲಂಕಾದಲ್ಲಿ ದಿನಸಿ ಬೆಲೆ ಏರಿಕೆ

    ಒಂದು ಮೊಟ್ಟೆಗೆ 30 ರೂಪಾಯಿ- ಶ್ರೀಲಂಕಾದಲ್ಲಿ ದಿನಸಿ ಬೆಲೆ ಏರಿಕೆ

    ಕೊಲಂಬೊ: ಹಣದುಬ್ಬರದಿಂದಾಗಿ ಶ್ರೀಲಂಕಾದಲ್ಲಿ ಸರಕುಗಳ ಬೆಲೆಗಳನ್ನು ಗಗನಕ್ಕೇರಿದೆ. ಜನರು ಇಂಧನ, ಆಹಾರ ಮತ್ತು ಔಷಧಿಗಳನ್ನು ಖರೀದಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.

    ಶ್ರೀಲಂಕಾದಲ್ಲಿ ತರಕಾರಿಗಳ ಬೆಲೆಗಳು ದ್ವಿಗುಣಗೊಂಡಿವೆ. ಆದರೆ ಅಕ್ಕಿ ಮತ್ತು ಗೋಧಿಯಂತಹ ಪ್ರಮುಖ ಪದಾರ್ಥಗಳು ಕ್ರಮವಾಗಿ ಕೆಜಿಗೆ 220 ರೂ. ಮತ್ತು ಕೆಜಿಗೆ 190 ರೂ.ಗೆ ಮಾರಾಟವಾಗುತ್ತಿವೆ. ಒಂದು ಕೆಜಿ ಸಕ್ಕರೆ ಬೆಲೆ 240 ರೂ. ಆಗಿದ್ದು  1 ಲೀಟರ್‌ ತೆಂಗಿನ ಎಣ್ಣೆ  850 ರೂ. ಆಗಿದೆ. ಒಂದು ಮೊಟ್ಟೆಯ ಬೆಲೆ 30 ಹಾಗೂ 1 ಕೆಜಿ ಹಾಲಿನ ಪುಡಿಯ ಪ್ಯಾಕ್ ಈಗ 1,900 ರೂ.ಗೆ ಮಾರಾಟವಾಗುತ್ತದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಶ್ರೀಲಂಕಾ ಜನತೆ- ಪ್ರತಿಭಟನೆಗೆ ಪ್ರಮುಖ ಕಾರಣಗಳೇನು?

    ಫೆಬ್ರವರಿಯಲ್ಲಿಯೇ ಶ್ರೀಲಂಕಾದ ಚಿಲ್ಲರೆ ಹಣದುಬ್ಬರವು ಶೇಕಡಾ 17.5 ಕ್ಕೆ ತಲುಪಿದೆ ಮತ್ತು ಆಹಾರ ಹಣದುಬ್ಬರವು ಶೇಕಡಾ 25 ಕ್ಕಿಂತ ಹೆಚ್ಚಿದೆ. ಇದು ಆಹಾರ ಮತ್ತು ಧಾನ್ಯಗಳ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಔಷಧಿಗಳು ಮತ್ತು ಹಾಲಿನ ಪುಡಿಯ ದೊಡ್ಡ ಕೊರತೆಯೂ ಇದೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆಯೇ ಹಿಂಸಾತ್ಮಕ ಪ್ರತಿಭಟನೆ – ವಾಹನಗಳು ಸುಟ್ಟು ಭಸ್ಮ

    ಅಗತ್ಯ ವಸ್ತುಗಳ ಕೊರತೆ ಮತ್ತು ದೀರ್ಘಾವಧಿಯ ವಿದ್ಯುತ್ ಕಡಿತಕ್ಕೆ ಸರ್ಕಾರ ವಿರುದ್ಧ ಸಾರ್ವಜನಿಕರ ಆಕ್ರೋಶ ಹೊರಹಾಕುತ್ತಿದ್ದಾರೆ. ಶ್ರೀಲಂಕಾ ಪ್ರಸ್ತುತ ಇತಿಹಾಸದಲ್ಲಿ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ.

  • ವೈನ್ ಮಾರಾಟ ವಿರೋಧಿಸಿ ಫೆ.14ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಿರುವ ಅಣ್ಣಾ ಹಜಾರೆ

    ವೈನ್ ಮಾರಾಟ ವಿರೋಧಿಸಿ ಫೆ.14ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಿರುವ ಅಣ್ಣಾ ಹಜಾರೆ

    ನವದೆಹಲಿ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಮದ್ಯವನ್ನು ಸೂಪರ್ ಮಾರ್ಕೆಟ್ ಮತ್ತು ವಾಕ್-ಇನ್ ಸ್ಟೋರ್ ಗಳಲ್ಲಿ ಮಾರಾಟ ಮಾಡಬಹುದು ಎಂಬ ಸರ್ಕಾರದ ಆದೇಶವನ್ನು ವಿರೋಧಿಸಿ ಫೆ.14 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮಾಡುವುದಾಗಿ ಘೋಷಿಸಿದ್ದಾರೆ.

    ಜನವರಿ 27 ರಂದು, ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿನ ಸೂಪರ್ ಮಾರ್ಕೆಟ್‍ಗಳಲ್ಲಿ ಮತ್ತು ವಾಕ್-ಇನ್ ಅಂಗಡಿಗಳಲ್ಲಿ ವೈನ್ ಮಾರಾಟ ಮಾಡಲು ಅನುಮತಿ ನೀಡಲಾಗಿತ್ತು. ಈ ಹಿನ್ನೆಲೆ ಶನಿವಾರ ಅಣ್ಣಾ ಹಜಾರೆ ಅವರು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಜ್ಞಾಪನೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಇತ್ತೀಚೆಗೆ ಮದ್ಯ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ವಿರೋಧಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಕಿನಿ ಹಾಕಿಕೊಳ್ಳಿ ಎಂದು ಸಂದೇಶ ಕೊಡ್ತಿರಲ್ಲಾ, ನಾಚಿಕೆಯಾಗಬೇಕು: ಪ್ರಿಯಾಂಕಾ ವಿರುದ್ಧ ಮುತಾಲಿಕ್ ಕಿಡಿ

    ಅಣ್ಣಾ ಹಜಾರೆ ಅವರ ಈ ಪತ್ರಕ್ಕೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಸರ್ಕಾರದ ಮದ್ಯದ ವಿಷಯದಲ್ಲಿ ಮಾಡಿರುವ ಫೋಷಣೆ ರಾಜ್ಯದ ಪಾಲಿಗೆ ದುರದೃಷ್ಟಕರ ಮತ್ತು ಇದು ಮುಂದಿನ ಪೀಳಿಗೆಗೆ ಅಪಾಯಕಾರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಸಿಎಂ ಕಛೇರಿ ಹೊರಡಿಸಿದ ಹೇಳಿಕೆಯ ಪ್ರಕಾರ, 1,000 ಚದರ ಅಡಿ ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿರುವ ಮಹಾರಾಷ್ಟ್ರದ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿರುವ ಸೂಪರ್ ಮಾರ್ಕೆಟ್‍ಗಳು ಮತ್ತು ಮಳಿಗೆಗಳಲ್ಲಿ ‘ಶೆಲ್ಫ್-ಇನ್-ಶಾಪ್’ ವಿಧಾನವನ್ನು ಅಳವಡಿಸಿಕೊಳ್ಳಬಹುದು ಎಂದು ತಿಳಿಸಲಾಗಿತ್ತು. ಇದನ್ನೂ ಓದಿ: ನಾನು ಭಯ ಯಾಕೆ ಪಡಬೇಕು, ಧರ್ಮ ಪಾಲನೆ ಮಾಡಿದ್ದೇನೆ: ಮಂಡ್ಯ ವಿದ್ಯಾರ್ಥಿನಿ

    ಪೂಜಾ ಸ್ಥಳಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಮೀಪವಿರುವ ಸೂಪರ್ ಮಾರ್ಕೆಟ್‍ಗಳಲ್ಲಿ ವೈನ್ ಮಾರಾಟ ಮಾಡಲು ಅನುಮತಿ ನೀಡಲಾಗುವುದಿಲ್ಲ. ಇದಲ್ಲದೆ, ನಿಷೇಧ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ವೈನ್ ಮಾರಾಟವನ್ನು ಅನುಮತಿಸಲಾಗುವುದಿಲ್ಲ. ಸೂಪರ್ ಮಾರ್ಕೆಟ್‍ಗಳು ವೈನ್ ಮಾರಾಟ ಮಾಡಲು ಪರವಾನಗಿಗಾಗಿ 5,000 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಈ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

  • ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

    ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

    ಮುಂಬೈ: ಮಹಾರಾಷ್ಟ್ರ ಕ್ಯಾಬಿನೆಟ್ ರಾಜ್ಯದ ಸೂಪರ್ ಮಾರ್ಕೆಟ್ ಮತ್ತು ವಾಕ್-ಇನ್ ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡುವ ಪ್ರಸ್ತಾಪವನ್ನು ಅಂಗೀಕರಿಸಿದೆ.

    ಸುಮಾರು 1,000 ಚದರ ಅಡಿ ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿರುವ ಮಹಾರಾಷ್ಟ್ರದ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿರುವ ಸೂಪರ್ ರ್ಮಾರ್ಕೆಟ್‍ಗಳು ಮತ್ತು ಮಳಿಗೆಗಳಲ್ಲಿ “ಶೆಲ್ಫ್-ಇನ್-ಶಾಪ್” ವಿಧಾನವನ್ನು ಅಳವಡಿಸಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಕೇರಳದ ಬಾಲಿಕಾ ಗೃಹದಿಂದ 6 ಹುಡುಗಿಯರು ನಾಪತ್ತೆ – ಒಬ್ಬಳು ಬೆಂಗ್ಳೂರಿನಲ್ಲಿ ಪತ್ತೆ

    ಸೂಪರ್ ಮಾರ್ಕೆಟ್ ಸಮೀಪದಲ್ಲಿ ದೇವಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿದ್ದರೆ ವೈನ್ ಮಾರಾಟ ಮಾಡಲು ಅನುಮತಿ ನೀಡಲಾಗುವುದಿಲ್ಲ ಮತ್ತು ಮದ್ಯ ನಿಷೇಧ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ಕೂಡ ವೈನ್ ಮಾರಾಟಕ್ಕೆ ಅನುಮತಿ ನೀಡಲಾಗುವುದಿಲ್ಲ. ಇನ್ನೂ ಸೂಪರ್ ಮಾರ್ಕೆಟ್‍ನಲ್ಲಿ ವೈನ್ ಮಾರಾಟ ಮಾಡಲು ಪರವಾನಗಾಗಿ 5,000 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದನ್ನೂ ಓದಿ: ಮಗಳನ್ನು ಒಳ್ಳೆ ಶಾಲೆಗೆ ಸೇರಿಸಬೇಕೆಂದು ಎಟಿಎಂ ದರೋಡೆಗೆ ಯತ್ನಿಸಿದ ಕಾರ್ಮಿಕ

    ರೈತರಿಗೆ ಹೆಚ್ಚುವರಿ ಆದಾಯ ನೀಡುವ ಹಣ್ಣು ಆಧಾರಿತ ವೈನ್‍ಗಳಿಗೆ ಉತ್ತೇಜನ ನೀಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಕೌಶಲ್ಯಾಭಿವೃದ್ಧಿ ಸಚಿವ ನವಾಬ್ ಮಲಿಕ್ ತಿಳಿಸಿದ್ದಾರೆ. ಆದರೆ ಪ್ರತಿಪಕ್ಷಗಳು ಬಿಜೆಪಿಯ ಈ ನಿರ್ಧಾರವನ್ನು ಖಂಡಿಸಿದ್ದು, ರಾಜ್ಯ ಸರ್ಕಾರವು ಮದ್ಯ ಸೇವನೆಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದೆ.

  • ಡ್ರ್ಯಾಗನ್ ಫ್ರೂಟ್‍ನಲ್ಲಿ ಕೊರೊನಾ!

    ಡ್ರ್ಯಾಗನ್ ಫ್ರೂಟ್‍ನಲ್ಲಿ ಕೊರೊನಾ!

    ಬೀಜಿಂಗ್: ಮುಂದಿನ ತಿಂಗಳಿಂದ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾ ಆಯೋಜನೆಗೆ ಚೀನಾ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳಲಾದ ಡ್ರ್ಯಾಗನ್ ಹಣ್ಣುಗಳಲ್ಲೂ ಕೊರೊನಾ ವೈರಸ್‌ ಅಂಶ ಇರುವುದು ಪತ್ತೆಯಾಗಿದೆ.

    ಈ ಹಣ್ಣುಗಳನ್ನು ಖರೀದಿಸಿದ ಎಲ್ಲಾ ಸೂಪರ್ ಮಾರ್ಕೆಟ್‍ಗಳನ್ನು ಚೀನಾ ಸರ್ಕಾರ ಬಂದ್ ಮಾಡಿಸಿದೆ. ಅಲ್ಲದೆ ಜನವರಿ 26ರವರೆಗೆ ವಿಯೆಟ್ನಾಂನಿಂದ ಹಣ್ಣುಗಳ ಆಮದಿಗೆ ನಿರ್ಬಂಧ ಹೇರಲಾಗಿದೆ. ಈ ಹಣ್ಣು ಖರೀದಿಸಿರುವವರು ಮನೆಯಲ್ಲೇ ಕ್ವಾರಂಟೈನ್ ಆಗುವಂತೆ ಸೂಚಿಸಿಲಾಗಿದೆ. ಇದನ್ನೂ ಓದಿ: ಪ್ರಧಾನ ಮಂತ್ರಿ ಭದ್ರತಾ ಸಿದ್ಧತೆ ಹೇಗಿರುತ್ತೆ ಗೊತ್ತಾ?

    ಝೇಜಿಯಾಂಗ್ ಮತ್ತು ಜಿಯಾಂಗ್‍ಕ್ಸಿ ಪ್ರಾಂತ್ಯ ಸೇರಿದಂತೆ 9 ನಗರಗಳಿಂದ ಸಂಗ್ರಹಿಸಲಾದ ಡ್ರ್ಯಾಗನ್ ಹಣ್ಣುಗಳಲ್ಲಿ ವೈರಸ್ ಇರುವುದು ಪತ್ತೆಯಾಗಿರುವುದು ಖಚಿತವಾಗಿದೆ ಎಂದು ವರದಿಯೊಂದು ತಿಳಿಸಿದೆ. ಇದನ್ನೂ ಓದಿ: ಪ್ರಧಾನಿ ಕಾರು ಸಿಲುಕಿದ್ದ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರ ದಂಡು – ವೀಡಿಯೋ ವೈರಲ್‌

    ಹಣ್ಣುಗಳಿಂದ ಕೊರೊನಾ ವ್ಯಾಪಿಸುವ ಬಗ್ಗೆ ಸಾಕ್ಷ್ಯಾಧಾರಗಳು ಇಲ್ಲ. ಆದರೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ವಿದೇಶದಿಂದ ಆಮದು ಮಾಡಿಕೊಳ್ಳಲಾದ ಎಲ್ಲಾ ಆಹಾರ ಪದಾರ್ಥಗಳು ಮತ್ತು ಹಣ್ಣುಗಳನ್ನು ತೀವ್ರ ಪರೀಕ್ಷೆಗೊಳಪಡಿಸಲಾಗುತ್ತಿದೆ.

  • ಸೂಪರ್ ಮಾರ್ಕೆಟ್‍ನಿಂದ ತಂದ ತರಕಾರಿ ಜೊತೆಗೆ ಸತ್ತ ಇಲಿನೂ ತಿಂದ

    ಸೂಪರ್ ಮಾರ್ಕೆಟ್‍ನಿಂದ ತಂದ ತರಕಾರಿ ಜೊತೆಗೆ ಸತ್ತ ಇಲಿನೂ ತಿಂದ

    ಮ್ಯಾಡ್ರಿಡ್: ವ್ಯಕ್ತಿಯೊರ್ವ ಆಕಸ್ಮಿಕವಾಗಿ ತರಕಾರಿ ಹಾಗೂ ಆಲೂಗಡ್ಡೆಯೊಂದಿಗೆ ತಿಳಿಯದೇ ಸತ್ತ ಇಲಿಯನ್ನು ಸೇವಿಸಿರುವ ಘಟನೆ ಸ್ಪೇನ್‍ನಲ್ಲಿ ನಡೆದಿದೆ.

    ಜುವಾನ್ ಜೋಸ್ ಅವರು ಸೂಪರ್ ಮಾರ್ಕೆಟ್‍ನಿಂದ ತರಕಾರಿ ಹಾಗೂ ಆಲೂಗಡ್ಡೆ ಪ್ಯಾಕೆಟ್ ಖರೀದಿಸಿ ಮನೆಗೆ ಬಂದು ಬೇಯಿಸಿ ನಂತರ ಅದನ್ನು ತಟ್ಟೆಗೆ ಬಡಿಸಿಕೊಂಡಿದ್ದಾರೆ. ಈ ವೇಳೆ ಯಾವುದೋ ಭಾರದಂತಿರುವ ವಸ್ತು ತಟ್ಟೆಯೊಳಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಚಮಚದ ಮೂಲಕ ತಿನ್ನಲು ಆರಂಭಿಸಿದಾಗ ಯಾವುದೋ ವಿಚಿತ್ರವಾಗಿರುವ ಕುರುಕುಲಾಗಿರುವ ಪದಾರ್ಥವನ್ನು ಅಗಿಯುತ್ತಿರುವಂತೆ ಫೀಲ್ ಆಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಸುಳ್ಳಿನ ದೆವ್ವ ಮೆಟ್ಟಿಕೊಂಡಿದೆ: ಸಿ.ಟಿ ರವಿ ವ್ಯಂಗ್ಯ

    ನಂತರ ತಟ್ಟೆಯನ್ನು ಗಮನಿಸಿದಾಗ ಸತ್ತ ಇಲಿಯ ತಲೆಯನ್ನು ನೋಡಿ ಶಾಕ್ ಆಗಿದ್ದಾರೆ. ತರಕಾರಿಯೊಂದಿಗೆ ಇಲಿಯ ತಲೆಯಲ್ಲಿ ಕಣ್ಣು ಮತ್ತು ಮೀಸೆ ಸಮೇತ ಹಾಕಿರುವುದನ್ನು ಕಂಡಿದ್ದಾರೆ. ನಂತರ ತಾವು ತಿಂದಿದ್ದು, ತರಕಾರಿ ಅಲ್ಲ ಬದಲಿಗೆ ಇಲಿ ಎಂದು ಖಚಿತಪಡಿಸಿಕೊಂಡ ಬಳಿಕ ಸೂಪರ್ ಮಾರ್ಕೆಟ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಅರೆಸ್ಟ್ – ಪ್ರಜಾಪ್ರಭುತ್ವದ ಕೊಲೆ ಎಂದ ಜೆ.ಪಿ.ನಡ್ಡಾ

     

    ಕ್ರಿಸ್‍ಮಸ್ ಹಬ್ಬದಂದು ತರಕಾರಿಯನ್ನು ಜುವಾನ್ ಜೋಸ್ ಖರೀದಿಸಿದ್ದರು. ಸದ್ಯ ಈ ಘಟನೆ ಕುರಿತಂತೆ ಸೂಪರ್ ಮಾರ್ಕೆಟ್, ತಯಾರಕರು ಮತ್ತು ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದು, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗ್ರಾಹಕರಿಗೆ ತಿಳಿಸಿದೆ.

  • ನಿಯಮ ಉಲ್ಲಂಘಿಸಿದವರ ಮೇಲೆ ಬಿತ್ತು ಕೇಸ್ – ಸೂಪರ್ ಮಾರ್ಕೆಟ್ ಪರವಾನಿಗೆ ರದ್ದು

    ನಿಯಮ ಉಲ್ಲಂಘಿಸಿದವರ ಮೇಲೆ ಬಿತ್ತು ಕೇಸ್ – ಸೂಪರ್ ಮಾರ್ಕೆಟ್ ಪರವಾನಿಗೆ ರದ್ದು

    ಕಾರವಾರ: ನಗರಸಭೆ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಕಾರವಾರದ ಸಾಯಿ ಸೂಪರ್ ಮಾರ್ಕೆಟ್ ನ ಪರವಾನಿಗೆ ರದ್ದು ಮಾಡಲಾಗಿದೆ.

    ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆ ಅಂಗಡಿ ತೆರೆಯದಂತೆ ಕಾರವಾರ ನಗರಸಭೆ ಆದೇಶ ಹೊರಡಿಸಿತ್ತು. ಆದರೆ ಆದೇಶ ಉಲ್ಲಂಘನೆ ಮಾಡಿದ್ದಲ್ಲದೇ ದಿನಸಿ ಪದಾರ್ಥಗಳಿಗೆ ಹೆಚ್ಚಿನ ದರ ವಿಧಿಸುತ್ತಿದ್ದಾರೆ ಎಂದು ಸಾಯಿ ಸೂಪರ್ ಮಾರ್ಕೆಟ್ ವಿರುದ್ಧ ಸಾರ್ವಜನಿಕರು ನೀಡಿದ್ದರು. ಈ ಹಿನ್ನೆಲೆ ಇಂದು ನಗರಸಭೆ ಸಾಯಿ ಸೂಪರ್ ಮಾರ್ಕೆಟ್ ನ ಪರವಾನಿಗೆ ರದ್ದು ಪಡಿಸಿ ಆದೇಶ ಹೊರಡಿಸಿದೆ.

    ಕಾರವಾರ ತಾಲೂಕಿನಲ್ಲಿ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿದ 179 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. 179 ಪ್ರಕರಣಗಳಿಂದ 94,500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಒಂದು ವಾಹನ ಜಪ್ತಿ ಮಾಡಿ, ಎರಡು ಕರ್ಫ್ಯೂ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿದೆ.

  • ಸೂಪರ್ ಮಾರ್ಕೆಟ್ ನಲ್ಲೇ ಸೆಕ್ಸ್ – ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ!

    ಸೂಪರ್ ಮಾರ್ಕೆಟ್ ನಲ್ಲೇ ಸೆಕ್ಸ್ – ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ!

    ಮಾಸ್ಕೋ: ಜನಸಂದಣಿಯಿಂದ ಇದ್ದ ಸೂಪರ್ ಮಾರ್ಕೆಟ್ ನಲ್ಲಿಯೇ ಜೋಡಿಯೊಂದು ಅಸಭ್ಯವಾಗಿ ಸೆಕ್ಸ್ ಮಾಡಲು ಮುಂದಾಗಿದ್ದ ಘಟನೆ ರಷ್ಯಾದಲ್ಲಿ ನಡೆದಿದೆ.

    ನೈಋತ್ಯ ರಷ್ಯಾದ ಕ್ರಾಸ್ನೋಡರ್ ಕ್ರೈ ಪ್ರದೇಶದಲ್ಲಿನ ಉಡಾಚಾ ಸೂಪರ್ ಮಾರುಕಟ್ಟೆ ಜೋಡಿಯೊಂದು ಜನರು ಇದ್ದ ಸ್ಥಳದಲ್ಲಿಯೇ ಅಸಭ್ಯವಾಗಿ ಸೆಕ್ಸ್ ಮಾಡಲು ಮುಂದಾಗಿದ್ದರು. ಇವರಿಬ್ಬರ ರಾಸಲೀಲೆ ಮಾರ್ಕೆಟ್ ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಕ್ಯಾಶ್ ಕೌಂಟರ್ ಬಳಿ ಮಹಿಳೆಯೊಬ್ಬಳು ನಿಂತಿದ್ದು, ಆಕೆಯ ಹಿಂದೆ ವ್ಯಕ್ತಿಯೊಬ್ಬ ನಿಂತುಕೊಂಡಿದ್ದನು. ಯಾರು ಇಲ್ಲದೇ ಇರುವುದನ್ನ ಗಮನಿಸಿ ಆಕೆಯ ಜೊತೆ ಸೆಕ್ಸ್ ಮಾಡಲು ಮುಂದಾಗಿದ್ದನು. ಈ ವೇಳೆ ಯಾರೋ ಕ್ಯಾಶ್ ಕೌಂಟರ್ ಬಳಿ ಬಂದಿದ್ದಾರೆ. ಆಗ ಮಹಿಳೆ ತನ್ನ ಬಟ್ಟೆಯನ್ನು ಸರಿ ಮಾಡಿಕೊಂಡಿದ್ದಾಳೆ. ಬಳಿಕ ಇಬ್ಬರು ಶಾಪ್ ನಲ್ಲಿದ್ದ ಪ್ರೀಡ್ಜ್ ಬಳಿ ಹೋಗಿ ಅಲ್ಲಿ ತಮ್ಮ ರಾಸಲೀಲೆಯನ್ನು ಮುಂದುವರಿಸಿದ್ದಾರೆ.

    ಈ ಎಲ್ಲ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಅನೇಕರು ಈ ವಿಡಿಯೋ ಬಗ್ಗೆ ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ. ಈ ಕುರಿತು ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ಸೂಪರ್ ಮಾರುಕಟ್ಟೆ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.