Tag: superintendent of police

  • ಇಬ್ಬರ ತಲೆಗೆ ಒಟ್ಟು 11 ಲಕ್ಷ ಘೋಷಣೆಯಾಗಿದ್ದ ನಕ್ಸಲರ ಎನ್‍ಕೌಂಟರ್

    ಇಬ್ಬರ ತಲೆಗೆ ಒಟ್ಟು 11 ಲಕ್ಷ ಘೋಷಣೆಯಾಗಿದ್ದ ನಕ್ಸಲರ ಎನ್‍ಕೌಂಟರ್

    ರೈಪುರ್: ಛತ್ತೀಸ್‍ಗಢ (Chhattisgarh) ಪೊಲೀಸರು ಸೋಮವಾರ ಮುಂಜಾನೆ ನಡೆಸಿದ ಎನ್‍ಕೌಂಟರ್‌ನಲ್ಲಿ (Encounter) ಮಹಿಳೆ ಸೇರಿ ಇಬ್ಬರು ಮಾವೋವಾದಿಗಳು (Maoists) ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದಂತೇಶಪುರಂ (Danteshpuram) ಸಮೀಪದ ಅರಣ್ಯದಲ್ಲಿ ನಕ್ಸಲರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಮುಂಜಾನೆ 5:30ರ ವೇಳೆಗೆ ದಾಳಿ ನಡೆಸಲಾಗಿದೆ. ಮೃತರನ್ನು ಎರ್ರಾ ಮತ್ತು ಭೀಮೆ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಎರ್ರಾ ಸುಳಿವಿಗೆ 8 ಲಕ್ಷ ರೂ. ಹಾಗೂ ಭಿಮೆ ಸುಳಿವಿಗೆ 3 ಲಕ್ಷ ರೂ. ಘೋಷಣೆ ಮಾಡಲಾಗಿತ್ತು ಎಂದು ಸುಕ್ಮಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (Superintendent of Police) ಸುನಿಲ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ದಾಂತೇವಾಡ ಸ್ಫೋಟ ಪ್ರಕರಣ- ಅಪ್ರಾಪ್ತರು ಸೇರಿ ನಾಲ್ವರು ಮಾವೋವಾದಿಗಳು ಅರೆಸ್ಟ್

    ಮೃತಪಟ್ಟ ಇಬ್ಬರು 24ಕ್ಕೂ ಹೆಚ್ಚು ದಾಳಿ ಹಾಗೂ ಹಿಂಸಾಚಾರದಲ್ಲಿ ಬೇಕಾಗಿದ್ದರು. ಅವರು ಅಡಗಿದ್ದ ಸ್ಥಳದಲ್ಲಿ ಸುಧಾರಿತ ಸ್ಫೋಟಕಗಳು ಹಾಗೂ ಸ್ವಯಂಚಾಲಿತ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಜಿಲ್ಲಾ ಮೀಸಲು ಪಡೆಯ (District Reserve Guard) ಹಾಗೂ ಸಿಆರ್‌ಪಿಎಫ್ (CRPF) ಸಿಬ್ಬಂದಿ ಅರಣ್ಯವನ್ನು ಸುತ್ತುವರಿದಾಗ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಮೃತರಾಗಿದ್ದಾರೆ. ಅಲ್ಲದೆ ಸಮೀಪದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಾಯುಸೇನೆಯ ವಿಮಾನ ಪತನ- ಮೂವರ ದುರ್ಮರಣ

  • 15 ವರ್ಷದ ಹುಡುಗಿ ಮೇಲೆ ಅತ್ಯಾಚಾರ- ಇಬ್ಬರು ಅಪ್ರಾಪ್ತರು ಸೇರಿ ನಾಲ್ವರ ಬಂಧನ

    ಕೋಲ್ಕತ್ತಾ: ಇತ್ತೀಚೆಗಷ್ಟೇ ಹಿಂಸಾಚಾರ ಕೃತ್ಯ ನಡೆದು, ತನಿಖೆ ಸಿಬಿಐ ಹಂತದಲ್ಲಿರುವಾಗಲೇ ಪಶ್ಚಿಮ ಬಂಗಳಾದ ಬೀರ್ಭುಮ್ ಜಿಲ್ಲೆಯಲ್ಲಿ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಏಪ್ರಿಲ್ 14ರ ರಾತ್ರಿ 15 ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ.

    CRIME 2

    ಘಟನೆಗೆ ಸಂಬಂಧಿಸಿದಂತೆ 14 ವರ್ಷದ ಇಬ್ಬರು ಹುಡುಗರು ಸೇರಿ ನಾಲ್ವರು ಆರೋಪಿಗಳನ್ನು ಬೀರ್ಭುಮ್ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು, ಆರೋಪಿಗಳು ಸ್ಥಳೀಯ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಲಕ್ಷ್ಮೀರಾಮ್ ಸೂರೇನ್ ಮತ್ತು ಸುನೀಲ್ ಇಬ್ಬರು ಯುವಕರನ್ನು ಭಾನುವಾರ ತಡರಾತ್ರಿ ಪರುಯಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಬಂಧಿಸಿದ ಕೆಲವೇ ಗಂಟೆಗಳಲ್ಲಿ ಅಪ್ರಾಪ್ತ ಬಾಲಕರನ್ನೂ ಪತ್ತೆಹಚ್ಚಲಾಗಿದೆ ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ತಂದೆಯನ್ನು ಕೊಂದ ಮಾನಸಿಕ ಅಸ್ವಸ್ಥೆ ಅರೆಸ್ಟ್

    ಹುಡುಗಿಯು ಇಲ್ಲಿನ ಶಾಂತಿನಿಕೇತನ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಸ್ಥಳೀಯ ಯುವಕನೊಂದಿಗೆ ಕುಳಿತಿದ್ದಾಗ, ಆತನನ್ನು ಗೆಳೆಯನೆಂದು ಭಾವಿಸಿ, ಕೆಲ ಯುವಕರು ಇಬ್ಬರ ಮೇಲೆ ಮೇಲೆ ಹಲ್ಲೆ ನಡೆಸಿ, ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.

    CRIME (1)

    ಸ್ಥಳೀಯ ನ್ಯಾಯಾಲಯವು ಸೋಮವಾರ ಇಬ್ಬರು ಯುವಕರನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಅಪ್ರಾಪ್ತ ಬಾಲಕರನ್ನು ರಿಮ್ಯಾಂಡ್ ರೂಂಗೆ ಕಳುಹಿಸಲಾಗಿದೆ. ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಅತ್ಯಾಚಾರದಲ್ಲಿ ನಾಲ್ವರು ಭಾಗಿಯಾಗಿದ್ದಾರೆಯೇ ಇಲ್ಲವೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಬಿರ್ಭೂಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಂದ್ರ ನಾಥ್ ತ್ರಿಪಾಠಿ ಎಚ್‌ಟಿಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    ಪಶ್ಚಿಮ ಬಂಗಾಳ ಮಹಿಳಾ ಆಯೋಗದ ಅಧ್ಯಕ್ಷೆ ಲೀನಾ ಗಂಗೋಪಾಧ್ಯಾಯ ಅವರು ಬಾಲಕಿಯನ್ನು ಭೇಟಿಯಾಗಿ, ಆಕೆಯ ಕುಟುಂಬಸ್ಥರು ಹಾಗೂ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದಾರೆ.

  • ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಕುಟುಂಬದ ವಿರುದ್ಧ ದೂರು

    ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಕುಟುಂಬದ ವಿರುದ್ಧ ದೂರು

    ಮಂಡ್ಯ: ಮಂಡ್ಯದ ಪದವಿ ಪೂರ್ವ ಕಾಲೇಜಿನಲ್ಲಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಮತ್ತು ಕುಟುಂಬದ ವಿರುದ್ಧ NIA  (ಕೇಂದ್ರೀಯ ತನಿಖಾ ದಳ) ತನಿಖೆ ನಡೆಸುವಂತೆ ಒತ್ತಾಯಿಸಿ ಅನಂತ ಕುಮಾರ್ ಅಭಿಮಾನಿಗಳ ಸಂಘವು ಒತ್ತಾಯಿಸಿದೆ.

    ಭಾರತದ ಆತಂರಿಕ ಭದ್ರತೆಗೆ ಅಪಾಯವಿದ್ದು, ಮುಸ್ಕಾನ್ ಕುಟುಂಬದ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸಂಘದ ಅನಿಲ್ ಮಂಡ್ಯ ಜಿಲ್ಲೆಯ ಎಸ್‌ಪಿಗೆ ದೂರು ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಮದ್ಯ ಸೇವನೆಗೆ ಹಣಕೊಡಲಿಲ್ಲವೆಂದು ತಂದೆಯನ್ನೆ ಕೊಂದ ಪಾಪಿ

    ALKHAIDA

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅನಿಲ್, ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ವಿದ್ಯಾರ್ಥಿನಿಗೆ ಹಲವಾರು ಮುಸ್ಲಿಂ ಮುಖಂಡರು ಹಣ, ಹುಡುಗೊರೆ ನೀಡಿ ವಿದ್ಯಾರ್ಥಿನಿಯನ್ನು ಬೆಂಬಲಿಸಿದ್ದಾರೆ. ಹೊರ ರಾಜ್ಯದವರೂ ಶಹಬ್ಬಾಸ್ ಗಿರಿ ನೀಡಿದ್ದಾರೆ. ಈ ನಡುವೆ ಆಲ್‌ಖೈದಾ ಸಹ ಬೆಂಬಲ ವ್ಯಕ್ತಪಡಿಸಿದ್ದು, ಇದರ ಹಿಂದೆ ಉಗ್ರ ಸಂಘಟನೆಗಳ ಕೈವಾಡವಿದೆ ಎನ್ನುವ ಆತಂಕ ಶುರುವಾಗಿದೆ. ಇದನ್ನು ತನಿಖೆ ಮೂಲಕ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ACಯ ವಿಷಾನಿಲ ಸೋರಿಕೆ- ಒಂದೇ ಕುಟುಂಬದ ನಾಲ್ವರು ಸಾವು

    ಈಚೆಗಷ್ಟೇ ಹೈಕೋರ್ಟ್ ನ್ಯಾಯಾಧೀಶರು ಸಹ ಆಲ್‌ಖೈದಾ ಪ್ರಸಂಶೆಯ ಹಿಂದೆ ದೊಡ್ಡ ಷಡ್ಯಂತರ ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಇದು ದೇಶದ ಆಂತರಿಕ ಭದ್ರತೆಯ ವಿಚಾರ ಆಗಿರುವುದರಿಂದ ಇದನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು. ಮುಸ್ಕಾನ್ ಕುಟುಂಬದವರ ಪಾಸ್‌ ಪೋರ್ಟ್‌ ಇದ್ದಲ್ಲಿ ವಶಪಡಿಸಿಕೊಂಡು ಅವರು ದೇಶದಿಂದ ಹೊರ ಹೋಗದಂತೆ ನೋಡಿಕೊಳ್ಳಬೇಕು. ಜೊತೆಗೆ ಅವರನ್ನು ಪ್ರಸಂಶಿಸಿದ ಮುಖಂಡರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

  • ಜಮೀನಿನಲ್ಲಿ ಅಕ್ರಮ ಗಾಂಜಾ ಬೆಳೆ ಜಪ್ತಿ – ಓರ್ವ ಬಂಧನ

    ಜಮೀನಿನಲ್ಲಿ ಅಕ್ರಮ ಗಾಂಜಾ ಬೆಳೆ ಜಪ್ತಿ – ಓರ್ವ ಬಂಧನ

    ಬಾಗಲಕೋಟೆ: ತೇರದಾಳ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ 13 ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿದ್ದು, ಪೊಲೀಸರು ಓರ್ವ ಜಮೀನು ಸಾಗುವಳಿದಾರನನ್ನು ಬಂಧಿಸಿದ್ದಾರೆ.

    ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜುಗಲಾಸಾರ, ಜಮಖಂಡಿ ಡಿವೈಎಸ್ ಪಿ ಎಂ. ಪಾಂಡುರಂಗಯ್ಯ ಮಾರ್ಗದರ್ಶನದಲ್ಲಿ ರಬಕವಿ-ಬನಹಟ್ಟಿ ತಹಶಿಲ್ದಾರ್ ಸಂಜಯ್ ಇಂಗಳೆ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ತೇರದಾಳ ಠಾಣಾಧಿಕಾರಿ ರಾಜು ಬೀಳಗಿ ಅವರ ತಂಡ ಈ ಶೋಧ ಕಾರ್ಯಮಾಡಿತ್ತು. ಈ ವೇಳೆ ತೇರದಾಳ ವ್ಯಾಪ್ತಿಯ ಜಮೀನಿನಲ್ಲಿ ಬೆಳೆದಿದ್ದ 13 ಗಾಂಜಾ ಗಿಡಗಳು ಒಟ್ಟು 7 ಕೆಜಿ, 490 ಗ್ರಾಂನ ರೂ. 37,450 ರೂ. ಬೆಲೆಬಾಳುವ ಗಾಂಜಾ ಬೆಳೆ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ:  ಮಲೆಮಹದೇಶ್ವರ ಬೆಟ್ಟ 5 ವರ್ಷಗಳಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಲಿದೆ: ಬೊಮ್ಮಾಯಿ

    ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬನಹಟ್ಟಿ ಪೊಲೀಸ್ ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ ಈ ಪ್ರಕರಣದ ತನಿಖೆ ಕೈಗೊಂಡಿದ್ದರು. ಈ ಪರಿಣಾಮ ಗಾಂಜಾ ಬೆಳೆದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ:  ಸೋಲೂರಿನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಹುಲ್ಲನ್ನು ಬಳಸಿ ಬಯೋ ಗ್ಯಾಸ್ ತಯಾರು – ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

    ಈ ಯಶಸ್ವಿ ಕಾರ್ಯಾಚರಣೆಯಲ್ಲಿ ತೇರದಾಳ ಠಾಣೆಯ ಸಿಬ್ಬಂದಿ ಕೆ.ಎಚ್.ಸನ್ನಟ್ಟಿ, ಎಂ.ಆರ್.ಕೆಂಚನ್ನವರ, ಎ.ಬಿ.ಸವದಿ, ಎಮ್.ಎಮ್.ಎತ್ತಿನಮನಿ, ಎಸ್.ಎಸ್.ಜಕಾತಿ, ಎಸ್.ಐ.ಸೋನಾವಣೆ, ಎಮ್.ಆರ್.ಗುರವ ಇದ್ದರು. ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜುಗಲಾಸರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಹಾಸನ ಜಿಲ್ಲಾಧಿಕಾರಿ ವರ್ಗಾವಣೆ ಬೆನ್ನಲ್ಲೇ ಪೊಲೀಸ್ ವರಿಷ್ಠಾಧಿಕಾರಿ ವರ್ಗ

    ಹಾಸನ ಜಿಲ್ಲಾಧಿಕಾರಿ ವರ್ಗಾವಣೆ ಬೆನ್ನಲ್ಲೇ ಪೊಲೀಸ್ ವರಿಷ್ಠಾಧಿಕಾರಿ ವರ್ಗ

    ಹಾಸನ: ಕಳೆದ ಐದು ದಿನಗಳ ಹಿಂದೆ ಹಾಸನ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆದಿದ್ದು, ಇಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎನ್ ಪ್ರಕಾಶ ಗೌಡ ಅವರನ್ನು ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ.

    ಕಳೆದ ವಾರವಷ್ಟೇ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರನ್ನ ವರ್ಗಾವಣೆ ಮಾಡಿದ್ದ ಚುನಾವಣಾ ಆಯೋಗ ನೂತನ ಡಿಸಿಯಾಗಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನ ನೇಮಕ ಮಾಡಿತ್ತು. ಈಗ ಹಾಸನ ಜಿಲ್ಲಾ ವರಿಷ್ಠಾಧಿಕಾರಿ ಡಾ.ಎನ್ ಪ್ರಕಾಶ್ ಗೌಡರ ಜಾಗಕ್ಕೆ ಎಫ್‍ಎಸ್‍ಎಲ್‍ನಲ್ಲಿ ನಿರ್ದೇಶಕರಾಗಿದ್ದ ಚೇತನ್ ಸಿಂಗ್ ರಾಥೋಡ್ ಅವರನ್ನ ನೇಮಕ ಮಾಡಿದೆ.

    ಸದ್ಯ ಪ್ರಕಾಶ್ ಗೌಡ ಅವರನ್ನು ಹಳೆ ಪ್ರಕರಣವೊಂದರ ಸಂಬಂಧ ವರ್ಗ ಮಾಡುವಂತೆ ಬಿಜೆಪಿ ದೂರು ನೀಡಿತ್ತು ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ. 2009ರ ಲೋಕಸಭಾ ಚುನಾವಣೆ ವೇಳೆ ಚನ್ನಪಟ್ಟಣ ಜೆಡಿಎಸ್ ಮುಖಂಡನ ಮನೆ ಅಕ್ರಮ ಹಣ ಸಿಕ್ಕಿತ್ತು. ಅಂದು ಡಿಎಸ್‍ಪಿ ಆಗಿದ್ದ ಪ್ರಕಾಶ್ ಗೌಡ ಅವರು ಸೂಕ್ತ ಕ್ರಮ ಕೈಗೊಳ್ಳದ ಆರೋಪವನ್ನು ಬಿಜೆಪಿ ಮಾಡಿತ್ತು. ಈ ಸಂಬಂಧ ಪ್ರಕಾಶ್ ಗೌಡ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ತನಿಖೆ ನಂತರ ಪ್ರಕಾಶ್ ಗೌಡ ಅಮಾನತುಗೊಂಡಿದ್ದರು. ಚನ್ನಪಟ್ಟಣದಂತೆ ಹಾಸನವೂ ಜೆಡಿಎಸ್ ಪ್ರಬಲ್ಯ ಇರುವ ಜಿಲ್ಲೆ. ಹೀಗಾಗಿ ಎಸ್‍ಪಿ ಅವರನ್ನು ವರ್ಗ ಮಾಡುವಂತೆ ಬಿಜೆಪಿ ಮನವಿ ಮಾಡಿತ್ತು.

    ಈ ಹಿಂದೆ ಬಿಜೆಪಿ ಶಾಸಕ ಪ್ರೀತಂಗೌಡ ಚುನಾವಣಾ ಆಯೋಗಕ್ಕೆ ದೂರು ನೀಡಿ ಡಿಸಿ ಅವರನ್ನು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರು. ಈ ದೂರನ್ನು ಆಯೋಗ ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿತ್ತು.