Tag: super star krishna

  • ಮಹೇಶ್ ಬಾಬು ಕುಟುಂಬದ ಮತ್ತೊಂದು ಕುಡಿ ಸಿನಿಮಾಗೆ ಎಂಟ್ರಿ

    ಮಹೇಶ್ ಬಾಬು ಕುಟುಂಬದ ಮತ್ತೊಂದು ಕುಡಿ ಸಿನಿಮಾಗೆ ಎಂಟ್ರಿ

    ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಕೃಷ್ಣ (Super Star Krishna) ಕುಟುಂಬದ 3ನೇ ತಲೆಮಾರಿನ ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಮಹೇಶ್ ಬಾಬು (Mahesh Babu) ಅಣ್ಣ ರಮೇಶ್ ಬಾಬು ಪುತ್ರ ಟಾಲಿವುಡ್‌ಗೆ ಎಂಟ್ರಿ ಕೊಡಲು ಬಗ್ಗೆ ಲೇಟೆಸ್ಟ್ ಅಪ್‌ಡೇಟ್ ಸಿಕ್ಕಿದೆ.

    ಸೂಪರ್ ಸ್ಟಾರ್ ಕೃಷ್ಣ ಅವರ ಮೊಮ್ಮಗ ಜಯ ಕೃಷ್ಣ (Jaya Krishna) ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾರೆ. ಅಮೆರಿಕದ ಫಿಲ್ಮ್ ಸ್ಕೂಲ್‌ನಲ್ಲಿ ದಿವಂಗತ ರಮೇಶ್ ಬಾಬು ಪುತ್ರ ಜಯ ಕೃಷ್ಣ ಅವರು ನಟನೆ ಜೊತೆ ಸಿನಿಮಾ ಮಾಡುವ ತರಬೇತಿಯನ್ನು ಪಡೆದುಕೊಂಡಿದ್ದಾರೆ. ನಾಯಕನಾಗಿ ಲಾಂಚ್ ಆಗಲು ಸಕಲ ರೀತಿಯಲ್ಲಿ ತಯಾರಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಹಿಂದಿ ಸಿನಿಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ: ರಿಷಬ್ ಶೆಟ್ಟಿ

    ಪ್ರಸ್ತುತ ಜಯ ಕೃಷ್ಣ ಹೊಸ ಬಗೆಯ ಕಥೆಗಳನ್ನು ಕೇಳುತ್ತಿದ್ದಾರೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಜಯ ಕೃಷ್ಣನ ಹೊಸ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಉತ್ತಮ ಕಥೆಯ ಹುಡುಕಾಟದಲ್ಲಿದ್ದಾರೆ ಜಯ ಕೃಷ್ಣ. ಇನ್ನೂ ಅಣ್ಣನ ಮಗನನ್ನು ಲಾಂಚ್ ಮಾಡಲು ಮಹೇಶ್ ಬಾಬು ಕೂಡ ಸಾಥ್ ನೀಡುತ್ತಿದ್ದಾರೆ.

  • ಪವಿತ್ರಾ ಜೊತೆಗಿನ ಸಂಬಂಧಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ರಾ ಕೃಷ್ಣ, ಮಹೇಶ್ ಬಾಬು- ನರೇಶ್ ಹೇಳೋದೇನು?

    ಪವಿತ್ರಾ ಜೊತೆಗಿನ ಸಂಬಂಧಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ರಾ ಕೃಷ್ಣ, ಮಹೇಶ್ ಬಾಬು- ನರೇಶ್ ಹೇಳೋದೇನು?

    ತೆಲುಗು- ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಫೇಮಸ್ ಆಗಿರುವ ನರೇಶ್- ಪವಿತ್ರಾ ಲೋಕೇಶ್ (Pavitra Lokesh) ಜೋಡಿ. ಇದೀಗ ತಮ್ಮ ಸಂಬಂಧದ ಬಗ್ಗೆ ಅಧಿಕೃತಗೊಳಿಸಿದ್ದಾರೆ. ಹೀಗಿರುವಾಗ ಇತ್ತೀಚಿನ ಸಂದರ್ಶನವೊಂದರಲ್ಲಿ ನರೇಶ್- ಪವಿತ್ರಾ ಸಂಬಂಧಕ್ಕೆ ಸೂಪರ್ ಸ್ಟಾರ್ ಕೃಷ್ಣ, ಸಹೋದರ ಮಹೇಶ್ ಬಾಬು (Mahesh Babu) ಅವರು ಓಕೆ ಅಂದಿದ್ರಾ ಎಂದು ನರೇಶ್ ಸ್ಪಷ್ಟನೆ ನೀಡಿದ್ದಾರೆ.

    ಕಳೆದ ವರ್ಷ ಅಂತ್ಯದಲ್ಲಿ ನರೇಶ್ ಅವರ 3ನೇ ಪತ್ನಿ ರಮ್ಯಾ ರಘುಪತಿ (Ramya Raghupathi) ಜೊತೆಗಿನ ಸಂಸಾರದ ಬಿರುಕು ಬೀದಿಯಲ್ಲಿ ಹರಾಜಾಗಿತ್ತು. ಪವಿತ್ರಾ ಲೋಕೇಶ್ ಜೊತೆಗಿನ ನರೇಶ್ ಸಂಬಂಧಕ್ಕೆ ಪತ್ನಿ ರಮ್ಯಾ ಕಿಡಿಕಾರಿದ್ದರು. ಇಷ್ಟೇಲ್ಲಾ ರಂಪ ರಾಮಾಯಣವನ್ನ ಜನತೆಯ ಕಣ್ಣಿಗೆ ಬಿದ್ದಿತ್ತು. ನರೇಶ್- ಪವಿತ್ರಾ ರಿಲೇಶನ್‌ಶಿಪ್‌ಗೆ ಮನೆಯಲ್ಲಿ ಏನಂತಾರೆ.? ಈ ಬಗ್ಗೆ ನಟ ನರೇಶ್ (Naresh) ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ಸಿನಿಮಾ ನಿರ್ಮಾಣ ಸಂಸ್ಥೆಯ ಬಳಿಕ ಹೊಸ ಉದ್ಯಮದತ್ತ ನಟಿ ನಯನತಾರಾ

    ಇಬ್ಬರ ಸಂಬಂಧ ಹೊರಬೀಳುತ್ತಿದ್ದಂತೆ ನರೇಶ್- ಪವಿತ್ರ ಲೋಕೇಶ್ ಮದುವೆ (Wedding) ಆಗುವುದಾಗಿಯೂ ಹೇಳಿಕೆ ಕೊಡುತ್ತಿದ್ದಾರೆ. ಅಲ್ಲದೆ, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲೂ ಇರುವುದಾಗಿ ಹೇಳಿಕೊಂಡಿದ್ದಾರೆ. ಸೂಪರ್‌ಸ್ಟಾರ್ ಕೃಷ್ಣ- ವಿಜಯ ನಿರ್ಮಲಾ ಅವರ ಪುತ್ರ ನರೇಶ್. ಹೀಗಾಗಿ ಚಿತ್ರರಂಗದ ಈ ಪ್ರತಿಷ್ಠಿತ ಕುಟುಂಬ ಇವರಿಬ್ಬರ ಸಂಬಂಧವನ್ನು ಒಪ್ಪಿದ್ದಾರೆಯೇ? ಅನ್ನೋ ಪ್ರಶ್ನೆಗೆ ನರೇಶ್ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ತೀರಿಕೊಂಡ ಮಹೇಶ್ ಬಾಬು ತಂದೆ ಕೃಷ್ಣ ಮತ್ತು ಸಹೋದರ ಮಹೇಶ್ ಬಾಬು ತಮ್ಮ- ಪವಿತ್ರಾ ಲೋಕೇಶ್ ಅವರ ಸಂಬಂಧವನ್ನು ಒಪ್ಪಿದ್ದರು ಎಂದು ಹೇಳಿಕೊಂಡಿದ್ದಾರೆ.

    ಇನ್ನೂ ಪವಿತ್ರಾ ಲೋಕೇಶ್ ಅವರ ಅಡುಗೆ ಕೈರುಚಿಯನ್ನ ಸೂಪರ್ ಸ್ಟಾರ್ ಕೃಷ್ಣ ಅವರು ಇಷ್ಟಪಟ್ಟಿದ್ದರು. ಅವರ ಕುಟುಂಬಕ್ಕೂ ಕೂಡ ಪವಿತ್ರಾ ಅಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ ಎಂದು ನರೇಶ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

  • ನೀವು ನನ್ನ ನಿಜವಾದ ಹೀರೋ, ಅಗಲಿದ ತಾತನ ನೆನೆದು ಮಹೇಶ್ ಬಾಬು ಪುತ್ರಿ ಭಾವುಕ

    ನೀವು ನನ್ನ ನಿಜವಾದ ಹೀರೋ, ಅಗಲಿದ ತಾತನ ನೆನೆದು ಮಹೇಶ್ ಬಾಬು ಪುತ್ರಿ ಭಾವುಕ

    ತೆಲುಗು ನಟ(Telagu Actor) ಮಹೇಶ್ ಬಾಬು(Mahesh Babu) ಅವರ ಕುಟುಂಬಕ್ಕೆ ಒಂದಾದ ಮೇಲೊಂದು ಆಘಾತ ಎದುರಾಗುತ್ತಿದೆ. ಮಹೇಶ್ ಬಾಬು ತಂದೆ ಕೃಷ್ಣ ಅವರ ಸಾವಿಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಇದೀಗ ಮಹೇಶ್ ಬಾಬು ಇಬ್ಬರು ಮಕ್ಕಳು ಸಿತಾರಾ ಮತ್ತು ಗೌತಮ್ ಕೂಡ ಅಗಲಿದ ತಾತನ ನೆನೆದು ಕಣ್ಣೀರಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪತ್ರದ ಮೂಲಕ ದುಃಖ ತೊಡಿಕೊಂಡಿದ್ದಾರೆ.

    ಮಹೇಶ್ ಬಾಬು ಅವರ ಕುಟುಂಬಕ್ಕೆ ದೊಡ್ಡ ಪೆಟ್ಟೆ ಬಿದ್ದಿದೆ. ಈ ವರ್ಷ ಶುರುವಿನಲ್ಲಿ ಮಹೇಶ್ ಬಾಬು ಅವರ ಸಹೋದರ ರಮೇಶ್ ಬಾಬು ನಿಧನರಾಗಿದ್ದರು. ಇತ್ತೀಚೆಗೆ ನಟನ ತಾಯಿ ಇಂದಿರಾ ದೇವಿ ಇಹಲೋಕ ತ್ಯಜಿಸಿದ್ದರು. ಈಗಾಗಲೇ ಶೋಕ ಸಾಗರದಲ್ಲಿ ಮುಳುಗಿರುವ ಈ ಕುಟುಂಬಕ್ಕೆ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ ಅವರ ಕೂಡ ಶಾಕ್ ಕೊಟ್ಟಿದೆ. ಹೀಗಿರುವಾಗ ಅಗಲಿದ ತಾತನನ್ನು ನೆನೆದು ಮಹೇಶ್ ಬಾಬು ಮಕ್ಕಳು ಪತ್ರವೊಂದನ್ನ ಬರೆದಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: 50 ದಿನ ಪೂರೈಸುವುದಕ್ಕೂ ಮೊದಲೇ `ಕಾಂತಾರ’ ಎತ್ತಂಗಡಿ ಆಗುತ್ತಾ? 

    ಪುತ್ರಿ ಸಿತಾರಾ ತನ್ನ ತಾತನ ಜೊತೆಯಿರುವ ಫೋಟೋ ಶೇರ್ ಮಾಡಿ, ಇನ್ನು ನಾವು ಒಟ್ಟಿಗೆ ಕೂತು ಊಟ ಮಾಡುವುದಕ್ಕೆ ಆಗಲ್ಲ. ನೀವು ನನಗೆ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದೀರಿ. ಪ್ರತಿನಿತ್ಯ ನಾನು ನಗುವಂತೆ ನೋಡಿಕೊಂಡಿದ್ದೀರಿ. ಇನ್ನು ಅವೆಲ್ಲಾ ನೆನಪು ಮಾತ್ರ. ನೀವು ನನ್ನ ನಿಜವಾದ ಹೀರೋ. ಒಂದು ದಿನ ನೀವು ಹೆಮ್ಮೆ ಪಡುವಂತೆ ಮಾಡುತ್ತೇನೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ತಾತ ಎಂದು ಸಿತಾರಾ ತನ್ನ ತಾತನೊಂದಿಗಿನ ಬಾಂಧವ್ಯವನ್ನು ಹಂಚಿಕೊಂಡಿದ್ದಾಳೆ.

    ಅದೇ ರೀತಿಯಾಗಿ ಮಹೇಶ್ ಬಾಬು ಪುತ್ರ ಗೌತಮ್ ಕೂಡ ಭಾವನಾತ್ಮಕ ಪತ್ರ ಹಂಚಿಕೊAಡಿದ್ದು, ನೀವು ಎಲ್ಲೇ ಇರಿ, ಹೇಗೆ ಇರಿ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನೀವು ಕೂಡ ನನ್ನನ್ನು ಪ್ರೀತಿಸುತ್ತೀರಾ ಎಂದು ಗೊತ್ತು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ತಾತ ಎಂದು ಗೌತಮ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ.

    ಇನ್ನೂ ಪದ್ಮಾಲಯ ಸ್ಟುಡಿಯೋದಲ್ಲಿ ನಟ ಕೃಷ್ಣ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಯಿತು. ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.

    Live Tv
    [brid partner=56869869 player=32851 video=960834 autoplay=true]