Tag: super queens

  • ಪ್ರೀತಿಯ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ರು ನಟಿ ರಜಿನಿ: ಮದುವೆ ಯಾವಾಗ ಅಂತಿದ್ದಾರೆ ಫ್ಯಾನ್ಸ್‌

    ಪ್ರೀತಿಯ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ರು ನಟಿ ರಜಿನಿ: ಮದುವೆ ಯಾವಾಗ ಅಂತಿದ್ದಾರೆ ಫ್ಯಾನ್ಸ್‌

    ಕಿರುತೆರೆಯ ಸೂಪರ್ ಹಿಟ್ ಸೀರಿಯಲ್ `ಅಮೃತವರ್ಷಿಣಿ’ (Amruthavarshini) ಮೂಲಕ ಕರ್ನಾಟಕ ಜನತೆಯ ಮನಗೆದ್ದ ಚಲುವೆ ನಟಿ ರಜಿನಿ (Actress Rajini) ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪ್ರೀತಿಯ ಹುಡುಗನ ಬಗ್ಗೆ ನಟಿ ಮಾತನಾಡಿದ್ದಾರೆ.

    ಕೆಲ ವರ್ಷಗಳ `ಅಮೃತವರ್ಷಿಣಿ’ ಎಂಬ ಸೀರಿಯಲ್ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಧಾರಾವಾಹಿಯಲ್ಲಿ ರಜಿನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ಸಿನಿಮಾಗಳ ಜೊತೆ ʻಸೂಪರ್ ಕ್ವೀನ್ಸ್ʼಎಂಬ ರಿಯಾಲಿಟಿ ಶೋನಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಸಂಕ್ರಾಂತಿ ಹಬ್ಬದ ಶುಭ ವೇಳೆಯಲ್ಲಿ ರಜಿನಿ ತಮ್ಮ ಫ್ಯಾನ್ಸ್ ಸಿಹಿಸುದ್ದಿ ಕೊಟ್ಟಿದ್ದಾರೆ.

     

    View this post on Instagram

     

    A post shared by Rajini (@rajiniiofficial)

    `ಸೂಪರ್ ಕ್ವೀನ್ಸ್’ ಶೋನಲ್ಲಿ ತಮ್ಮ ಬದುಕಿನ ಕೆಲ ವಿಚಾರಗಳನ್ನ ನಟಿ ಹಂಚಿಕೊಂಡಿದ್ದಾರೆ. ಹಾಗೆಯೇ ಈಗ ತಮ್ಮ ಹುಡುಗನ ಬಗ್ಗೆ ನಟಿ ಹಿಂಟ್ ಕೊಟ್ಟಿದ್ದಾರೆ. ʻಹಿಟ್ಲರ್ ಕಲ್ಯಾಣʼ ಧಾರಾವಾಹಿಯಲ್ಲಿ ಅಂತರ ಎಂಬ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಇದರಲ್ಲಿ ತಮ್ಮ ಪತ್ನಿ ಅಂತರಳನ್ನ ಎಜೆ ಪ್ರೀತಿಸುವ ರೀತಿಯನ್ನ ತೋರಿಸಲಾಗಿದೆ. ಇದನ್ನೂ ಓದಿ: ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ಹಾಗಾಗಿ ಶೋನಲ್ಲಿ `ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಅಂತಾರಳನ್ನು ಎಜೆ ಪ್ರೀತಿಸುವ ರೀತಿ ನಿಮ್ಮನ್ನು ಪ್ರೀತಿಸುವ ವ್ಯಕ್ತಿ ಇದ್ದಾರಾ ಎಂದು ರಜಿನಿಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ನಟಿ ಹೌದು ಎಂದು ಹೇಳಿದ್ದಾರೆ. ಆದರೆ, ಯಾರವರು, ಮದುವೆ ಯಾವಾಗ ಎಂಬ ಯಾವ ವಿಚಾರವನ್ನು ಹೇಳಿಲ್ಲ. ಒಟ್ನಲ್ಲಿ ರಜಿನಿ ಅವರು ತಮ್ಮ ಪ್ರೀತಿಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಈ ವಿಚಾರ ತಿಳಿದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ಅನ್ನೋದು ಒಂದು ಜವಾಬ್ದಾರಿ: ಎರಡನೇ ಮದುವೆ ಬಗ್ಗೆ ನಟಿ ಅಪೂರ್ವ ಮಾತು

    ಮದುವೆ ಅನ್ನೋದು ಒಂದು ಜವಾಬ್ದಾರಿ: ಎರಡನೇ ಮದುವೆ ಬಗ್ಗೆ ನಟಿ ಅಪೂರ್ವ ಮಾತು

    ಕಿರುತೆರೆ `ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಮನೆ ಮಾತಾಗಿರುವ ಪುಷ್ಪ ಪಾತ್ರಧಾರಿ ಅಪೂರ್ವ ಅವರು ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ವೇಳೆ ಅಮ್ಮ ಮತ್ತು ಮಗಳ ರೌಂಡ್ ನಡೆಯುತ್ತಿದ್ದು, ಅಪೂರ್ವ (Apoorva) ಅವರಿಗೆ ಮಗಳ ಬಿಗ್ ಸರ್ಪ್ರೈಸ್ (Surprise) ಕೊಟ್ಟಿದ್ದಾರೆ. ಮಗಳ ಗಿಫ್ಟ್ ನೋಡಿ ಅಪೂರ್ವ ಖುಷಿಯಾಗಿದ್ದಾರೆ.

    ಸೂಪರ್ ಕ್ವೀನ್ಸ್ (Super Queens) ಮೂಲಕ ತಮ್ಮ ಜೀವನದ ತೆರೆಹಿಂದಿನ ಕಥೆಯನ್ನ ಸ್ಪರ್ಧಿಗಳು ಬಿಚ್ಚಿಟ್ಟಿದ್ದಾರೆ. ಹಾಗೆಯೇ ನಟಿ ಅಪೂರ್ವ ಅವರ ಜೀವನದ ಕಥೆ ಪ್ರೇಕ್ಷಕರನ್ನು ಕೂಡ ಭಾವುಕರನ್ನಾಗಿಸಿದೆ. ಇನ್ನೂ ಅಮ್ಮ -ಮಗಳ ರೌಂಡ್‌ನಲ್ಲಿ ಮಗಳು, ಕೆಲವು ಪ್ರಶ್ನೆಗಳನ್ನ ತಾಯಿ ಅಪೂರ್ವಗೆ ಕೇಳಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ

    ನನ್ನ ಮೊದಲ ಪ್ರಶ್ನೆ ಇದು. ಯಾವತ್ತಾದ್ದರೂ ಅನಿಸಿದ್ಯಾ ನನ್ನ ಮಗಳು ಇಲ್ಲದಿದ್ದರೆ ನಾನು ಖುಷಿಯಾಗಿರುತ್ತಿದ್ದೆ ಅಥವಾ ಗಂಡು ಮಗು ಆಗಿದ್ದರೆ ಇನ್ನೂ ಖುಷಿಯಾಗಿರುತ್ತಿದ್ದೆ ಕಷ್ಟ ಪಡುತ್ತಿರಲಿಲ್ಲ ಅನಿಸಿದ್ಯಾ ಎಮದು. ಆಗ 100ರಲ್ಲಿ 1% ನನಗೆ ಈ ರೀತಿ ಅನಿಸಿಲ್ಲ. ಎಷ್ಟೋ ದೇವರಲ್ಲಿ ಹರಿಕೆ ಕಟ್ಟಿಕೊಂಡು ಮೊದಲು ಹೆಣ್ಣು ಮಗು ಆಗಬೇಕು ಎಂದು ಹುಟ್ಟಿರುವ ಮಗು ನೀನು ಎಂದು ಅಪೂರ್ವ ಉತ್ತರಿಸಿದ್ದಾರೆ.

    ಮತ್ತೆ ಮದುವೆ ಆಗಬೇಕು ಎಂದು ಯೋಚನೆ ಕೂಡ ಮಾಡಿಲ್ಲ ಯಾಕೆ ಎಂದು ಅಮ್ಮನಿಗೆ ಕೇಳಿದ್ದಾರೆ. ಮದುವೆ ಅಂದ್ರೆ ಏನು ಅದರ ಮಹತ್ವ ಎಲ್ಲ ಅರ್ಥ ಆಗೋಕು ಮುಂಚೆ ಮದುವೆ ಆಗಿದ್ದು ಎಷ್ಟೊಂದು ಸಮಸ್ಯೆ ನೋಡ್ಬಿಟ್ಟು ಮದುವೆ ಆಗಬೇಕು ಅನಿಸಲಿಲ್ಲ. ಕೈಯಲ್ಲಿ ಒಂದು ಹೆಣ್ಣು ಮಗುವಿಗೆ ಬರುವ ಜನರ ಮೆಂಟಾಲಿಟಿ ಹೇಗೆ ಇರುತ್ತೆ. ಏನೇ ಆಗಲಿ ಫಸ್ಟ್ ತಪ್ಪು ಎಂದು ಹೇಳುವುದು ಹೆಣ್ಣು ಮಕ್ಕಳ ಮೇಲೆ ಹೀಗಾಗಿ ಯೋಚನೆ ಮಾಡಿಲ್ಲ ಮಾಡುವ ಯೋಚನೆ ಮಾಡಲ್ಲ. ಮದುವೆ ಅನ್ನೋದು ಒಂದು ಜವಾಬ್ದಾರಿ ರೀತಿ ಬಂದವರನ್ನು ನಾವು ಚೆನ್ನಾಗಿ ನೋಡಿಕೊಂಡಿಲ್ಲ ಅಂದ್ರೆ ಹೇಗೆ ಎಂದು ನಟಿ ಅಪೂರ್ವ ಮಾತನಾಡಿದ್ದಾರೆ.

    ಇನ್ನೂ ಈ ವೇಳೆ ಅಮ್ಮನಿಗೆ ಚಿನ್ನದ ಮಾಂಗಲ್ಯ ಗಿಫ್ಟ್ ಮಾಡಿದ್ದಾರೆ. ತನಗೆ ಕಾರು ಖರಿದೀಸಲು ಎಂದು ಇಟ್ಟ ಹಣದಲ್ಲಿ ತಾಯಿಗೆ ಚಿನ್ನದ ಮಾಂಗಲ್ಯ ಕಾಣಿಕೆಯಾಗಿ ನೀಡಿದ್ದಾರೆ. ಮಗಳ ಪ್ರೀತಿಗೆ ನಟಿ ಅಪೂರ್ವ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿನ್ನ ಯಾರು ಮದುವೆ ಆಗ್ತಾರೆ ಎಂದು ಗೇಲಿ ಮಾಡಿದವರಿಗೆ ಗೀತಾ ಭಟ್ ಖಡಕ್ ಉತ್ತರ

    ನಿನ್ನ ಯಾರು ಮದುವೆ ಆಗ್ತಾರೆ ಎಂದು ಗೇಲಿ ಮಾಡಿದವರಿಗೆ ಗೀತಾ ಭಟ್ ಖಡಕ್ ಉತ್ತರ

    ಕಿರುತೆರೆಯ `ಬ್ರಹ್ಮಗಂಟು'(Bhramagantu) ಸೀರಿಯಲ್‌ನ ಗುಂಡಮ್ಮ ಆಗಿ ಮನಗೆದ್ದ ನಟಿ ಗೀತಾ ಭಾರತಿ ಭಟ್(Geetha Bharathi Bhat) ಬಳಿಕ ಬಿಗ್ ಬಾಸ್‌ನಲ್ಲಿ ಮಿಂಚಿದ್ದರು. ಇದೀಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ತಮ್ಮ ಜೀವನ ಕಥೆ ಹೇಳಿ ವೇದಿಕೆಯ ಮೇಲೆ ನಟಿ ಭಾವುಕರಾಗಿದ್ದಾರೆ.

    ಗೀತಾ(Geetha Bhat) ಕಿರುತೆರೆ ಲಗ್ಗೆ ಇಟ್ಟಿದ್ದೇ ಅನಿರೀಕ್ಷಿತವಾಗಿ ಆದರೆ ಇವರು ಎದುರಿಸಿದ ಕಷ್ಟಗಳು ಅದೆಷ್ಟೋ ಜನರಿಗೆ ಸ್ಪೂರ್ತಿ ಎಂದೇ ಹೇಳಬಹುದು. ಅಂದು ದಪ್ಪಗಿದ್ದ ಗುಂಡಮ್ಮ ಇಂದು ಸಣ್ಣಮ್ಮ ಆಗಿದ್ದಾರೆ. ದಪ್ಪಗಿದ್ದ ಸಮಯದಲ್ಲಿ ನಿನ್ನ ಯಾರು ಮದುವೆಯಾಗುತ್ತಾರೆ ಎಂದು ಹೀಯಾಳಿಸಿದ ಅದೆಷ್ಟೋ ಜನರಿಗೆ ಖಾಸಗಿ ವಾಹಿನಿಯ `ಸೂಪರ್ ಕ್ವೀನ್'(Super Queens) ವೇದಿಕೆಯ ಮೂಲಕ ನಟಿ ಉತ್ತರ ಕೊಟ್ಟಿದ್ದಾರೆ.

    ಕಾಲೇಜಿನಲ್ಲಿ ಇದ್ದಾಗ, ಸ್ಕೂಲ್‌ನಲ್ಲಿ ಇದ್ದಾಗ ನಾನು ಈ ರೀತಿ ದಪ್ಪ ಇರುವುದರಿಂದ ತುಂಬಾ ಜನ ಗೇಲಿ ಮಾಡ್ತಾ ಇದ್ರು. ತುಂಬಾ ಜನ ತಮಾಷೆ ಮಾಡ್ತಾ ಇದ್ರು. ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಿದ್ರು. ಡುಮ್ಮಿ, ಆಲದ ಮರ, ಪೂರಿ ಮೂಟೆ ಏನೇನೋ ಹೇಳ್ತಾ ಇದ್ರು. ಯಾವ ರೇಷನ್ ಅಕ್ಕಿ ತಿನ್ನಿಸುತ್ತೀರಾ, ನಿಮ್ಮ ಮಗಳಿಗೆ ಎಂದು ನಮ್ಮ ಅಪ್ಪ ಅಮ್ಮನ ಬಳಿ ಕೇಳ್ತಾ ಇದ್ರು. ನಿನ್ನ ಯಾರು ಮದುವೆ ಆಗ್ತಾರೆ ಎಂದು ಕೇಳ್ತಾ ಇದ್ರು. ಇದನ್ನೂ ಓದಿ:ತಿರುಪತಿಯಲ್ಲಿ ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯ ಜಗದೀಶ್ ದಂಪತಿ

    ಆಗ ನನಗೆ ಮನಸ್ಸಿಗೆ ಒಂದು ರೀತಿ ಹಿಂಸೆ ಆಗ್ತಾ ಇತ್ತು. ಆದ್ರೆ ಈ ತರದ್ದು ಒಂದು ಅವಕಾಶ ಬರುತ್ತೆ. ನನಗೆ ಇರೋ ಒಂದು ಮೈನಸ್ ಪ್ಲಸ್ ಆಗಿ ಬದಲಾಗುತ್ತೆ ಅಂತ ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಅಲ್ಲಿಂದ ಇಲ್ಲಿಗೆ ಬರೋಕೆ ಒಂದು ಜರ್ನಿ ಇತ್ತಲ್ಲ, ಆ ಜರ್ನಿಯಲ್ಲಿ ತುಂಬಾ ಕಲಿತಿದ್ದೇನೆ. ತುಂಬಾ ವಿಷಯಗಳನ್ನು ಕಳ್ಕೊಂಡಿದೀನಿ, ಪಡೆದುಕೊಂಡಿದ್ದೇನೆ. ನಾನು 30 ಕೆ.ಜಿ ತೂಕ ಕಳೆದುಕೊಂಡಿದ್ದೇನೆ. ಇನ್ನೂ 30 ಕೆಜಿ ತೂಕ ಕಳೆದುಕೊಳ್ಳುವ ಗೋಲ್ ಇದೆ ಎಂದು ಗೀತಾ ಭಟ್ ಹೇಳಿದ್ದಾರೆ. ಚಿಕ್ಕ ವಯಸ್ಸಿನಿಂದ ನನಗೆ ಇರೋ ವಿಶ್ ಅಂದ್ರೆ ಅಪ್ಪನನ್ನು ಹಗ್ ಮಾಡಬೇಕು ಎನ್ನುವುದಂತೆ. ನಾನು ಇಲ್ಲಿಯವರೆಗೂ ಅಪ್ಪನನ್ನು ಒಂದು ಸಲವೂ ಹಗ್ ಮಾಡಿಲ್ಲ. ಅಪ್ಪನನ್ನು ಹಗ್ ಮಾಡಿ ಭಾವುಕರಾಗಿದ್ದಾರೆ.

    ರೂಪೇಶ್ ಶೆಟ್ಟಿ ಜೊತೆ `ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರದಲ್ಲಿ ನಾಯಕಿಯಾಗಿ ಗೀತಾ ನಟಿಸಿದ್ದಾರೆ. ಸಂತೋಷ್ ಕೊಡಂಕೇರಿ ನಿರ್ದೇಶನದ ಚಿತ್ರದಲ್ಲೂ ಗೀತಾ ಫೀಮೇಲ್ ಲೀಡ್ ಆಗಿ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]