Tag: Super Model

  • ಭಾರತದಲ್ಲಿ ಮುಸ್ಲಿಮರ ಮೇಲಿನ ಹಿಂಸಾಚಾರ ನೋಡಿ ಬೇಸರವಾಗಿದೆ: ಸೂಪರ್‌ ಮಾಡೆಲ್‌ ಪದ್ಮಾ ಲಕ್ಷ್ಮೀ

    ಭಾರತದಲ್ಲಿ ಮುಸ್ಲಿಮರ ಮೇಲಿನ ಹಿಂಸಾಚಾರ ನೋಡಿ ಬೇಸರವಾಗಿದೆ: ಸೂಪರ್‌ ಮಾಡೆಲ್‌ ಪದ್ಮಾ ಲಕ್ಷ್ಮೀ

    ಮುಂಬೈ: ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರ ನೋಡಿ ಬೇಸರವಾಯಿತು ಎಂದು ಭಾರತ ಮೂಲದ ಅಮೆರಿಕ ಸೂಪರ್‌ ಮಾಡೆಲ್‌ ಹಾಗೂ ಲೇಖಕಿ ಪದ್ಮಾ ಲಕ್ಷ್ಮೀ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಟ್ವೀಟ್‌ ಮಾಡಿರುವ ಅವರು, ಭಾರತದಲ್ಲಿ ಅಥವಾ ಬೇರೆಲ್ಲಿಯೂ ಹಿಂದೂ ಧರ್ಮಕ್ಕೆ ಯಾವುದೇ ಬೆದರಿಕೆ ಇಲ್ಲ. ಈ ಪ್ರಾಚೀನ ಮತ್ತು ವಿಶಾಲವಾದ ಭೂಮಿಯಲ್ಲಿ ಎಲ್ಲಾ ಧರ್ಮಗಳ ಜನರು ಶಾಂತಿಯುತವಾಗಿ ಬದುಕಲು ಸಾಧ್ಯವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಲಾಲ್‌ ಮಾಂಸ, ಮಸೀದಿಗಳಲ್ಲಿ ಧ್ವನಿವರ್ಧಕ ಏಕೆ ನಿಷೇಧಿಸಬೇಕು: ಒಮರ್‌ ಅಬ್ದುಲ್ಲಾ ಪ್ರಶ್ನೆ

    ದೇಶದಲ್ಲಿ ವ್ಯಾಪಕ ಮುಸ್ಲಿಂ ವಿರೋಧಿ ವಾಕ್ಚಾತುರ್ಯವಿದೆ. ಹಿಂದೂಗಳು ಈ ಭಯ ಉತ್ತೇಜಕ ಮತ್ತು ಪ್ರಚಾರಕ್ಕೆ ಬಲಿಯಾಗುವುದಿಲ್ಲ ಎಂದು ಹೇಳಿದ್ದಾರೆ.

    ವ್ಯಾಪಕವಾದ ಮುಸ್ಲಿಂ ವಿರೋಧಿ ವಾಕ್ಚಾತುರ್ಯವು ಜನರನ್ನು ವಿಷಪೂರಿತಗೊಳಿಸುತ್ತದೆ. ಈ ಪ್ರಚಾರವು ಅಪಾಯಕಾರಿ ಮತ್ತು ಹಾನಿಕಾರಕ. ನೀವು ಯಾರನ್ನಾದರೂ ತುಚ್ಛವಾಗಿ ಕಂಡರೆ ದಬ್ಬಾಳಿಕೆಗೆ ದಾರಿ ಮಾಡಿಕೊಟ್ಟಂತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇವಾಲಯಗಳನ್ನು ಧ್ವಂಸಗೊಳಿಸಿ ಶಾಂತಿಯನ್ನು ಕದಡುತ್ತಿದೆ: ಕಾಂಗ್ರೆಸ್ ವಿರುದ್ಧವೇ ಮುಸ್ಲಿಮರಿಂದ ದೂರು

    ಹಿಂದೂಗಳೇ, ಈ ಭಯ ಹುಟ್ಟಿಸುವವರಿಗೆ ಮಣಿಯಬೇಡಿ. ಭಾರತದಲ್ಲಿ ಅಥವಾ ಬೇರೆಲ್ಲಿಯೂ ಹಿಂದೂ ಧರ್ಮಕ್ಕೆ ಯಾವುದೇ ಅಪಾಯವಿಲ್ಲ. ನಿಜವಾದ ಆಧ್ಯಾತ್ಮಿಕತೆಯು ಯಾವುದೇ ರೀತಿಯ ದ್ವೇಷವನ್ನು ಬಿತ್ತುವುದಿಲ್ಲ ಎಂದಿದ್ದಾರೆ.

  • ವಯಸ್ಸು ಅರವತ್ತಾದರೂ ಸೂಪರ್ ಮಾಡೆಲ್- ದಿನೇಶ್ ಮೋಹನ್ ಫಿಟ್‍ನೆಸ್‍ಗೆ ಎಲ್ಲರೂ ಫಿದಾ

    ವಯಸ್ಸು ಅರವತ್ತಾದರೂ ಸೂಪರ್ ಮಾಡೆಲ್- ದಿನೇಶ್ ಮೋಹನ್ ಫಿಟ್‍ನೆಸ್‍ಗೆ ಎಲ್ಲರೂ ಫಿದಾ

    ಚಂಡೀಗಢ್: ವಯಸ್ಸು ಅರವತ್ತಾದರೂ ಯುವ ಮಾಡೆಲ್‍ಗಳೇ ನಾಚುವಂತೆ ಮಾಡೆಲಿಂಗ್ ಕ್ಷೇತ್ರದಲ್ಲಿ ಹರ್ಯಾಣದ ದಿನೇಶ್ ಮೋಹನ್ ಮಿಂಚುತ್ತಿದ್ದಾರೆ. ಸರ್ಕಾರಿ ಉದೋಗ್ಯದಲ್ಲಿದ್ದವರು ಈಗ ಸೂಪರ್ ಮಾಡೆಲ್ ಆಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.

    60ರ ವಯಸ್ಸಿನಲ್ಲೂ ಕಟ್ಟುಮಸ್ತಾಗಿ ದೇಹ ಮಾಡಿಕೊಂಡಿರುವ ಸೂಪರ್ ಮಾಡೆಲ್ ದಿನೇಶ್ ಮೋಹನ್ ಈಗ ಎಲ್ಲರ ಗಮನ ಸೆಳೆದಿದ್ದಾರೆ. ಈ ಹಿಂದೆ ದಿನೇಶ್ ಮೋಹನ್ ಹರ್ಯಾಣ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಕೆಲಸ ಒತ್ತಡದಿಂದ ಹಾಗೂ ಸರಿಯಾಗಿ ಆರೋಗ್ಯ ನೋಡಿಕೊಳ್ಳದ ಕಾರಣಕ್ಕೆ ಅತಿಯಾದ ದಪ್ಪವಾಗಿ ಹಾಸಿಗೆ ಹಿಡಿದಿದ್ದರು.

    ಬಳಿಕ ವೈದ್ಯರ ಸಲಹೆ ಪಡೆದು ಆರೋಗ್ಯವನ್ನು ಚೇತರಿಸಿಕೊಂಡು, ದಢೂತಿ ದೇಹವನ್ನು ಇಳಿಸಿಕೊಂಡರು. ಬರೋಬ್ಬರಿ 50 ಕೆ.ಜಿ. ತೂಕ ಕಡಿಮೆ ಮಾಡಿಕೊಂಡರು. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿ ಸಾಕಾಗಿ, ತಮಗೆ ಇಷ್ಟವಾಗಿದನ್ನ ಮಾಡಬೇಕೆಂದು ನಿರ್ಧಾರ ಮಾಡಿದರು. ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಅವರು 2016ರಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಹೊಸ ಜರ್ನಿ ಶುರು ಮಾಡಿದರು.

    ಅಂದಿನಿಂದ ಉತ್ತಮ ಆರೋಗ್ಯ, ಕಟ್ಟುಮಸ್ತಾದ ದೇಹವನ್ನು ಮಾಡಿಕೊಂಡು ಸೂಪರ್ ಮಾಡೆಲ್ ಆದರು. ಹಲವು ರ್ಯಾಂಪ್ ವಾಕ್, ಫೋಟೋಶೂಟ್‍ನಲ್ಲಿ ಮಿಂಚಿ ಹೆಸರು ಮಾಡಿದರು. ಸದ್ಯ ಇಳಿ ವಯಸ್ಸಿನಲ್ಲೂ ತಮ್ಮ ಖಡಕ್ ಲುಕ್ ಮೂಲಕ ದಿನೇಶ್ ಅವರು ಎಲ್ಲರ ಮನ ಗೆದ್ದಿದ್ದಾರೆ. ಯುವ ಮಾಡೆಲ್‍ಗಳೇ ನಾಚುವಂತೆ ರ್ಯಾಂಪ್ ವಾಕ್‍ನಲ್ಲಿ ಮಿಂಚಿ ಎಲ್ಲರ ಫೆವರೆಟ್ ಆಗಿಬಿಟ್ಟಿದ್ದಾರೆ.

    ಇವರು ಕೇವಲ ಯುವಕರಿಗೆ ಮಾತ್ರವಲ್ಲ ವಯಸ್ಸಾದವರಿಗೂ ಕೂಡ ಮಾದರಿಯಾಗಿದ್ದಾರೆ. ಯಾವ ವಯಸ್ಸಿನಲ್ಲಿ ಬೇಕಿದ್ದರೂ ಫಿಟ್‍ನೆಸ್ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಮನೋಬಲ ದೃಢವಾಗಿದ್ದರೆ ವಯಸ್ಸು ಲೆಕ್ಕಕ್ಕೆ ಬರಲ್ಲ, ನಾವು ಅಂದುಕೊಂಡಿರುವುದನ್ನು ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.