Tag: Super market

  • ಕೆಲಸದ ನೆಪದಲ್ಲಿ ಕರೆದೊಯ್ದು ಕಾರಿನಲ್ಲಿ ಕಿರುಕುಳ- ಬೈಕಲ್ಲಿ ಬಂದವ್ರಿಂದ ಮಹಿಳೆ ರಕ್ಷಣೆ

    ಕೆಲಸದ ನೆಪದಲ್ಲಿ ಕರೆದೊಯ್ದು ಕಾರಿನಲ್ಲಿ ಕಿರುಕುಳ- ಬೈಕಲ್ಲಿ ಬಂದವ್ರಿಂದ ಮಹಿಳೆ ರಕ್ಷಣೆ

    ಮಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ (Sexual harassment) ನೀಡಿರುವ ಆರೋಪವೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಉಜಿರೆಯಲ್ಲಿ ನಡೆದಿದೆ.

    ಮಹಾವೀರ ಟೆಕ್ಸ್ ಟೈಲ್ ಹಾಗೂ ಮಹಾವೀರ ಸೂಪರ್ ಮಾರ್ಕೆಟ್ ಮಾಲೀಕ ಪ್ರಭಾಕರ್ ಹೆಗ್ಡೆ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಪ್ರಭಾಕರ್ ಹೆಗ್ಡೆಯು 20 ವರ್ಷದ ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಕಾರಿನಲ್ಲಿ ಕಿರುಕುಳ ನೀಡುವಾಗ ಮಹಿಳೆ ಜೋರಾಗಿ ಕಿರುಚಾಡಿದ್ದಾರೆ. ಈ ವೇಳೆ ಬೈಕ್ ನಲ್ಲಿ ಬಂದ ಯುವರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

    ಹೆಗ್ಡೆ ತನ್ನ ಸೂಪರ್ ಮಾರ್ಕೆಟ್‍ (Super Market) ನ ಬಿಲ್ಲಿಂಗ್ ತೋರಿಸೋದಾಗಿ ಕಾರಿನಲ್ಲಿ ಕರೆದೊಯ್ದು, ಮೈಗೆ ಕೈ ಹಾಕಿ ಲೈಂಗಿಕ ಕಿರಿಕುಳ ನೀಡಿರುವುದಾಗಿ ಮಹಿಳೆ ಮತ್ತು ಆಕೆಯ ಗಂಡ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಶೂಟಿಂಗ್ ವೇಳೆ ಸಾಹಸ ನಿರ್ದೇಶಕ ರವಿವರ್ಮಗೆ ಗಾಯ

  • ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ – ತಾಯಿ ಮಗಳ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

    ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ – ತಾಯಿ ಮಗಳ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

    ಬಳ್ಳಾರಿ: ತಾಯಿ ಮಗಳು ಇಬ್ಬರು ಸೇರಿ ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ ಮಾಡಿರುವ ಘಟನೆ ಗಣಿ ನಾಡಿನಲ್ಲಿ ನಡೆದಿದೆ.

    ಸಾಮಾನ್ಯವಾಗಿ ಮಕ್ಕಳು ಕಳ್ಳತನ ಮಾಡಿದರೆ, ತಪ್ಪು ದಾರಿ ಹಿಡಿದರೆ ಹೆತ್ತವರು ಮಕ್ಕಳನ್ನು ಸರಿದಾರಿಗೆ ತರಬೇಕು. ಆದರೆ ಬಳ್ಳಾರಿ ಇನ್ ಫ್ಯಾಂಟ್ರಿ ರಸ್ತೆಯಲ್ಲಿ ಇರುವ ಸೂಪರ್ ಮಾರ್ಕೆಟ್‌ನಲ್ಲಿ ವ್ಯತಿರಿಕ್ತ ಎನ್ನುವಂತೆ ಮಗಳಿಗೆ ತಾಯಿ ಕಳ್ಳತನ ಮಾಡಲು ಸಾಥ್ ಕೊಟ್ಟಿದ್ದಾಳೆ. ಇವರಿಬ್ಬರು ವಸ್ತುಗಳ ಖರೀದಿ ನೆಪದಲ್ಲಿ ಅಂಗಡಿ ಒಳಗೆ ಬಂದಿದ್ದಾರೆ.

    ಬಳಿಕ ತಮಗೆ ಬೇಕಾದ ವಸ್ತುಗಳನ್ನು ಹುಡುಕಿದ್ದಾರೆ. ಹುಡುಕಾಟ ನೆಪದಲ್ಲಿ ಬೇಕಾದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ತಾಯಿ ಬೇಕಾದ ವಸ್ತುಗಳನ್ನು ಕದ್ದು ಮಗಳ ಬಳಿ ನೀಡಿದ್ದಾರೆ. ಆಗ ಮಗಳು ಅದನ್ನು ಬಟ್ಟೆಯಲ್ಲಿ ಹಾಕಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಯನ್ನು ಬಚಾವ್ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದ ತಂದೆ ಅರೆಸ್ಟ್!

    ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಅಂಗಡಿಯಲ್ಲಿ ಹಾಕಲಾದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಇದು ಮೊದಲನೇ ಬಾರಿ ಮಾಡಿದ ಕಳ್ಳತನವಲ್ಲ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ. ಇದೇ ತಿಂಗಳ ಡಿ. 17ರಂದು ಇದೇ ರೀತಿ ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ ಮಾಡಿದ್ದರು. ನಂತರ ಮರುದಿನ ಅವರೇ ಅದೇ ಅಂಗಡಿಗೆ ಬಂದು ಮತ್ತೊಂದು ಸಾರಿ ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: ಪಂಜಾಬ್‍ನ ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ – 2 ಸಾವು, 4 ಮಂದಿಗೆ ಗಾಯ

    ಈ ಬಗ್ಗೆ ಅಂಗಡಿ ಮಾಲೀಕರು ಬಳ್ಳಾರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತಾಯಿ, ಮಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ.

  • ಸೂಪರ್ ಮಾರ್ಕೆಟ್‍ನಲ್ಲೇ ಅಂಡರ್‌ವೇರ್ ಕಳಚಿ ಮಾಸ್ಕ್ ಮಾಡ್ಕೊಂಡ ಯುವತಿ – ವೀಡಿಯೋ ವೈರಲ್

    ಸೂಪರ್ ಮಾರ್ಕೆಟ್‍ನಲ್ಲೇ ಅಂಡರ್‌ವೇರ್ ಕಳಚಿ ಮಾಸ್ಕ್ ಮಾಡ್ಕೊಂಡ ಯುವತಿ – ವೀಡಿಯೋ ವೈರಲ್

    ಕೇಪ್‍ಟೌನ್: ಮಹಾಮಾರಿ ಕೊರೊನಾ ವೈರಸ್ ಬಂದ ಬಳಿಕ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದ್ದು, ಇದರಿಂದ ಅನೇಕ ರೀತಿಯ ತಮಾಷೆಯ ಘಟನೆಗಳು ನಡೆದಿವೆ. ಕೆಲವರಂತೂ ಮಾಸ್ಕ್ ಹಾಕೋದನ್ನೇ ಮರೆತು ಬಿಡುತ್ತಾರೆ. ಅಂತೆಯೇ ಇದೀಗ ಯುವತಿಯೊಬ್ಬಳು ಸೂಪರ್ ಮಾರ್ಕೆಟ್ ನಲ್ಲಿ ತನ್ನ ಒಳಉಡುಪನ್ನೇ ಮಾಸ್ಕ್ ಆಗಿ ಮಾಡಿಕೊಳ್ಳುವ ಮೂಲಕ ಪೇಚಿಗೆ ಸಿಲುಕಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

    ಹೌದು. ಯುವತಿಯೊಬ್ಬಳು ನಗರದ ಸೂಪರ್ ಮಾರ್ಕೆಟ್ ಗೆ ಮಾಸ್ಕ್ ಮರೆತು ಬಂದಿದ್ದಳು. ಈಕೆಯನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ಮಾಸ್ಕ್ ಯಾಕೆ ಧರಿಸಿಲ್ಲ ಎಂದು ಕೇಳಿದ್ದಾರೆ. ಇದರಿಂದ ಗಲಿಬಿಲಿಗೊಂಡ ಯುವತಿ ಕೂಡಲೇ ತನ್ನ ಅಂಡರ್‍ವೇರ್ ಕಳಚಿ ಅದನ್ನೇ ಮಾಸ್ಕ್ ನಂತೆ ಬಳಸಿಕೊಂಡಿದ್ದಾಳೆ. ಸದ್ಯ ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ವೀಡಿಯೋದಲ್ಲಿ ಸೂಪರ್ ಮಾರ್ಕೆಟ್ ಸೆಕ್ಯೂರಿಟಿ ಗಾರ್ಡ್ ಯುವತಿ ಬಳಿ ಬಂದು ಮಾಸ್ಕ್ ಧರಿಸದ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೆ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದೇ ಅಂಗಡಿ ಒಳಕ್ಕೆ ಬರಲು ಬಿಡುವುದಿಲ್ಲ. ನೀವು ಹೇಗೆ ಒಳಗೆ ಬಂದ್ರಿ ಎಂದು ಗದರಿಸಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಬೈಗುಳದಿಂದ ಆತಂಕಗೊಂಡ ಯುವತಿ ಎಲ್ಲರ ಮುಂದೆಯೇ ಕೂಡಲೇ ತನ್ನ ಅಂಡರ್ ವೇರ್ ಕಳಚಿದ್ದಾಳೆ. ಅಲ್ಲದೆ ನಂತರ ಅದನ್ನೇ ಮಾಸ್ಕ್ ಆಗಿ ಮುಖಕ್ಕೆ ಕಟ್ಟಿಕೊಂಡಿದ್ದನ್ನು ಕಾಣಬಹುದಾಗಿದೆ.

    ಈ ವೈರಲ್ ವೀಡಿಯೋ ನೋಡಿದ ನೆಟ್ಟಿಗರು ಏನಿದು..? ಇಲ್ಲಿ ಏನು ನಡೀತಾ ಇದೆ ಎಂದೆಲ್ಲ ಪ್ರಶ್ನಿಸಿದ್ದಾರೆ. ಘಟನೆಗೆ ಸಾಕ್ಷಿಯಾದ ಮಹಿಳೆಯೊಬ್ಬರು ಯುವತಿಯ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ಆಕೆ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಒಳ ಉಡುಪಿಗಿಂದ ಹೆಚ್ಚು ಬ್ಯಾಕ್ಟೀರಿಯಾ ನಾವು ಧರಿಸುವ ಮಾಸ್ಕ್ ಮೇಲೆಯೇ ಇರುತ್ತದೆ. ಹೀಗಾಗಿ ಯುವತಿ ಉತ್ತಮ ಕೆಲಸವನ್ನೇ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.

    https://twitter.com/YB_JLN/status/1364253718904979462

  • ಕೊರೊನಾ ಬೆನ್ನಲ್ಲೇ ನಗರದ ಹಲವೆಡೆ ಫಾಗಿಂಗ್

    ಕೊರೊನಾ ಬೆನ್ನಲ್ಲೇ ನಗರದ ಹಲವೆಡೆ ಫಾಗಿಂಗ್

    -ಸೂಪರ್ ಮಾರ್ಕೆಟ್‍ಗೆ ಬಿಬಿಎಂಪಿ ಗೈಡ್‍ಲೈನ್

    ಬೆಂಗಳೂರು: ನಗರದ ಹಲವೆಡೆ ಸೋಂಕು ಹರಡದಿರಲಿ ಎಂದು ಔಷಧಿಗಳ ಸಿಂಪಡನೆ ಆರಂಭವಾಗಿದೆ. ಅದರಲ್ಲೂ ತಗ್ಗು ಪ್ರದೇಶ, ಜನನಿಬಿಡ ಇರುವ ಕಡೆ ಹೆಚ್ಚು ಗಮನ ಕೇಂದ್ರಿಕರಿಸಲಾಗಿದೆ. ಇದು ಬಿಬಿಎಂಪಿ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಿ ಸೋಂಕು ನಿಯಂತ್ರಿಸುವ ಕೆಲಸ ನಡೆಯುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.

    ಸೊಳ್ಳೆ, ನೊಣ ನಿಯಂತ್ರಣಕ್ಕೆ ಹೆಚ್ಚು ಗಮನ ಕೇಂದ್ರಿಕರಿಸಲಾಗಿದೆ. ಮುಖ್ಯವಾಗಿ ಎಲ್ಲ ಮಾರ್ಕೆಟ್, ಬ್ಲಾಕ್ ಸ್ಪಾರ್ಟ್‍ಗಳ ಬಳಿ ಬ್ಲಿಚಿಂಗ್ ಪೌಡರ್ ಬಳಸಲಾಗುತ್ತದೆ. ಇಮಿಗೇಶನ್ ಮಾಡಿದರೆ ಹೆಚ್ಚು ಸಮಯ ಪಡೆಯಲಿದೆ. ಹಾಗಾಗಿ ಮಾಸ್ ಇಮಿಗೇಶನ್ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಚೈನಾದಂತೆ ಔಷಧಿ ಸಿಂಪಡನೆಗೆ ನಮ್ಮಲ್ಲಿ ಅಗತ್ಯ ಸಲಕರಣೆಗಳ ಕೊರತೆ ಇದೆ. ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಕೂಡಲೇ ಕ್ರಮಕೈಗೊಳ್ಳಲಿದೆ ಎಂದರು.

    ಇತ್ತ ನಗರದ ಎಸಿ ಸೂಪರ್ ಮಾರುಕಟ್ಟೆಗಳಿಗೆ ಬಿಬಿಎಂಪಿ ಗೈಡ್‍ಲೈನ್‍ಗಳನ್ನು ಸೂಚಿಸಿದೆ. ಈ ಪ್ರಕಾರ ಪಾಲಿಸದಿದ್ದರೆ ಮಾರ್ಕೆಟ್ ಬಂದ್ ಮಾಡಬೇಕಾಗುತ್ತದೆ. ಈ ಭಯ ಸೂಪರ್ ಮಾರ್ಕೆಟ್‍ಗಳಲ್ಲೂ ಕಾಡುತ್ತಿದೆ. ಮಲ್ಲೇಶ್ವರಂ ಬಿಗ್ ಬಜಾರಿನಲ್ಲಿ ಹೊಸ ಕೌಂಟರ್‍ಗಳನ್ನು ತೆರೆಯಲಾಗಿದೆ. ಗ್ರಾಹಕರಿಗೆ ಯಾವುದೇ ಹೊಸ ಆಫರ್ ನೀಡಿಲ್ಲ. ಕಾರಣ ಅದಕ್ಕಾಗಿ ಜನ ಜಾಸ್ತಿ ಸಂಖ್ಯೆಯಲ್ಲಿ ಸೇರಬಾರದೆಂದು ಈ ನಿಯಮ ಹಾಕಲಾಗಿದೆ. ಸ್ಯಾನಿಟೈಜರ್, ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಸಿಬ್ಬಂದಿಗೆ ಸಮಸ್ಯೆಯಾದರೆ ಕಡ್ಡಾಯ ರಜೆಗೂ ಸೂಪರ್ ಮಾರ್ಕೆಟ್ ಸಜ್ಜಾಗಿದೆ.

    ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್, ಸೂಪರ್ ಮಾರ್ಕೆಟ್, ಪಾರ್ಕ್ ಗಳು ಹೆಚ್ಚಿನ ನಿಗಾ ಇಡಲು ಗೈಡ್‍ಲೈನ್ ಘೋಷಣೆ ಮಾಡಲಾಗಿದೆ. ಜನ ಸಮೂಹ ಅನುಸರಿಬೇಕಾದ ನಿಯಮಗಳ ಹೇಳಲಾಗಿದೆ. ಜನರು ವ್ಯಾಯಾಮ ಮಾಡಲು ಅಡ್ಡಿ ಇಲ್ಲ ಆದರೆ ಪಾರ್ಕ್ ನಲ್ಲಿ ಸೇರುವುದು ಬೇಡ ಎಂದು ಪಾರ್ಕ್ ನಿಯಮಗಳ ಬಗ್ಗೆ ಸಹ ಉಲ್ಲೇಖಿಸಿದರು.

  • ಸೂಪರ್ ಮಾರ್ಕೆಟ್‍ನಲ್ಲಿ ಹಾವು, ಹೌಹಾರಿದ ಸಿಬ್ಬಂದಿ- ಫೋಟೋ ವೈರಲ್

    ಸೂಪರ್ ಮಾರ್ಕೆಟ್‍ನಲ್ಲಿ ಹಾವು, ಹೌಹಾರಿದ ಸಿಬ್ಬಂದಿ- ಫೋಟೋ ವೈರಲ್

    ಆಸ್ಟಿನ್: ಸೂಪರ್ ಮಾರ್ಕೆಟ್‍ವೊಂದರ ಶಾಪಿಂಗ್ ಕಾರ್ಟ್‍ನಲ್ಲಿ ಪತ್ತೆಯಾಗಿದ್ದ ಹಾವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಅಮೆರಿಕದ ಟೆಕ್ಸಾಸ್‍ನ ವಾಲ್‍ಮಾರ್ಟ್ ಸೂಪರ್ ಮಾರ್ಕೆಟ್‍ನಲ್ಲಿ ಹಾವು ಕಾಣಿಸಿಕೊಂಡಿದೆ. ಸೂಪರ್ ಮಾರ್ಕೆಟ್‍ನ ಶಾಪಿಂಗ್ ಕಾರ್ಟ್ ಇಡುವ ಸ್ಥಳದಲ್ಲಿ ಈ ಹಾವು ಪತ್ತೆಯಾಗಿತ್ತು. ಎರಡು ಕಾರ್ಟ್‍ಗಳ ನಡುವೆ ಸಿಲುಕಿಕೊಂಡಿದ್ದ ಹಾವನ್ನು ನೋಡಿ ಸಿಬ್ಬಂದಿ ಮೊದಲು ಭಯಗೊಂಡು ಕೂಗಾಡಿದ್ದಾರೆ. ಆಗ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಾರ್ವಜನಿಕರು ಹಾವನ್ನು ನೋಡಿ ಗಾಬರಿಯಾಗಿದ್ದಾರೆ. ಈ ವೇಳೆ ಅಲ್ಲೆ ಇದ್ದ ಉರಗ ತಜ್ಞರೊಬ್ಬರು ಸುರಕ್ಷಿತವಾಗಿ ಹಾವನ್ನು ಸೆರೆಹಿಡಿದು ರಕ್ಷಿಸಿದ್ದಾರೆ.

    ಈ ಬಗ್ಗೆ ಯುಎಸ್‍ನ ಈಶಾನ್ಯ ಪೊಲೀಸ್ ಇಲಾಖೆ ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಬರೆದು ಹಾವಿನ ಫೋಟೋವನ್ನು ಹಾಕಿ ಅಪ್ಲೋಡ್ ಮಾಡಿದೆ. ಶನಿವಾರದಂದು ಇಲಾಖೆ ಹಾವಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈವರೆಗೆ ಈ ಪೋಸ್ಟ್ ಅನ್ನು ಸಾವಿರಾರು ಮಂದಿ ಶೇರ್ ಹಾಗೂ ಲೈಕ್ ಮಾಡಿದ್ದಾರೆ.

    ಈ ಬಗ್ಗೆ ಪೊಲೀಸರು ಮಾತನಾಡಿ, ಸ್ಥಳದಲ್ಲಿ ತುಂಬಾ ಮಳೆ ಬಂದ ಕಾರಣಕ್ಕೆ ಅದರಿಂದ ರಕ್ಷಣೆಗಾಗಿ ಹಾವು ಸೂಪರ್ ಮಾರ್ಕೆಟ್ ಒಳಗೆ ಬಂದಿದೆ. ಈ ವೇಳೆ ಶಾಪಿಂಗ್ ಕಾರ್ಟ್‍ನಲ್ಲಿ ಸೇರಿಕೊಂಡಿರಬಹುದು ಎಂದು ಊಹಿಸಿದ್ದಾರೆ.

    ಸೂಪರ್ ಮಾರ್ಕೆಟ್‍ನಲ್ಲಿ ಹಾವು ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2017ರಲ್ಲಿ ಮಹಿಳೆಯೊಬ್ಬರು ಸೂಪರ್ ಮಾರ್ಕೆಟ್‍ನಲ್ಲಿ ಫ್ರೀಜ್ಡ್ ನಲ್ಲಿ ಇರಿಸಿದ್ದ ಮೊಸರು ತೆಗೆದುಕೊಳ್ಳುವ ವೇಳೆ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು.

    https://www.facebook.com/NortheastPD/posts/1024911421052498