Tag: super hero

  • ಮಿನ್ನಲ್ ಮುರಳಿ ಸೂಪರ್ ಹೀರೋ ಅವತಾರದಲ್ಲಿ ಕಂಗೊಳಿಸಿದ ಮದುಮಗ

    ಮಿನ್ನಲ್ ಮುರಳಿ ಸೂಪರ್ ಹೀರೋ ಅವತಾರದಲ್ಲಿ ಕಂಗೊಳಿಸಿದ ಮದುಮಗ

    ತಿರುವನಂತಪುರಂ: ಟೋವಿನೋ ಥಾಮಸ್ ಅವರ ಚಿತ್ರ ಮಿನ್ನಲ್ ಮುರಳಿಯಿಂದ ಪ್ರೇರಿತನಾದ ವರನೊಬ್ಬ ತನ್ನ ಮದುವೆಗೆ ಸೂಪರ್ ಹೀರೋ ಅವತಾರದಲ್ಲಿ ಕಂಗೊಳಿಸಿ ವೈರಲ್ ಆಗಿದ್ದಾರೆ. ವರ ಅಮಲ್ ರವೀಂದ್ರನ್ ಮದುವೆಯ ಬಳಿಕ ಸಿನಿಮಾದಲ್ಲಿ ಹೀರೋ ಧರಿಸಿರುವ ಕೆಂಪು ನೀಲಿ ಬಣ್ಣದ ಸಿಗ್ನೇಚರ್ ಧಿರಿಸನ್ನು ತೊಟ್ಟು ಫೋಟೋಶೂಟ್‍ಗೆ ಪೋಸ್ ನೀಡಿದ್ದಾರೆ.

    ಕೇರಳದ ಕೊಟ್ಟಾಯಂ ಮೂಲದ ದಂಪತಿ ಈ ಹಿಂದೆ ಮಿನ್ನಾಲ್ ಮುರಳಿ ಚಿತ್ರದಿಂದ ಪ್ರೇರಿತರಾಗಿ ಮದುವೆಗೂ ಮುನ್ನ ಪ್ರೀ-ವೆಡ್ಡಿಂಗ್ ಚಿತ್ರೀಕರಣ ಮಾಡಿದ್ದರು. ಇರದಿಂದ ಅವರ ಕುಟುಂಬ ಹಾಗೂ ಸ್ನೇಹಿತರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ತಮ್ಮ ಮದುವೆಯ ಬಳಿಕವೂ ವೀಡಿಯೋ ಚಿತ್ರೀಕರಣ ಮಾಡಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಈ ಹಿಂದೆ ಕೇರಳ ಆರೋಗ್ಯ ಇಲಾಖೆ ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ ಮೂಡಿಸಲು ಮಿನ್ನಾಲ್ ಮುರಳಿ ಥೀಮ್ ಬಳಸಿದ್ದರು. ಬಳಿಕ ಮೋಟಾರು ವಾಹನ ಇಲಾಖೆ ಅತೀ ವೇಗದ ಚಾಲನೆಯ ವಿರುದ್ಧ ಪ್ರಚಾರದ ವೀಡಿಯೋದಲ್ಲಿ ಚಲನಚಿತ್ರದ ತುಣುಕುಗಳನ್ನು ಬಳಸಿದ್ದರು. ಇದೀಗ ಮದುಮಗನ ಗೆಟಪ್ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ: ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಕೇರಳ ಸಚಿವ – ರಾಜೀನಾಮೆಗೆ ಬಿಜೆಪಿ ಆಗ್ರಹ