Tag: Super Anaconda Train

  • 2 ಕಿ.ಮೀ. ಉದ್ದದ ಸೂಪರ್ ಅನಕೊಂಡ ರೈಲು- ವಿಡಿಯೋ ನೋಡಿ

    2 ಕಿ.ಮೀ. ಉದ್ದದ ಸೂಪರ್ ಅನಕೊಂಡ ರೈಲು- ವಿಡಿಯೋ ನೋಡಿ

    ನವದೆಹಲಿ: ಭಾರತೀಯ ರೈಲ್ವೇ 2 ಕಿಲೋ ಮೀಟರ್ ಉದ್ದದ ಗೂಡ್ಸ್ ಟ್ರೈನ್ ಗೆ ಚಾಲನೆ ನೀಡಿದೆ. ಈ ರೈಲ್ವೇಗೆ ಸೂಪರ್ ಅನಕೊಂಡ ಎಂದು ಹೆಸರಿಡಲಾಗಿದೆ. ರೈಲ್ವೇ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಕೇಂದ್ರ ಸಚಿವ ಪಿಯೂಶ್ ಗೋಯಲ್, ಸೂಪರ್ ಅನಕೊಂಡ ಎಂದು ಕರೆದಿದ್ದಾರೆ.

    ಆಗ್ನೇಯ ರೈಲ್ವೇ ಮೂರು ಗೂಡ್ಸ್ ರೈಲುಗಳನ್ನು ಜೋಡಿಸಿ ದೇಶದ ಮೊದಲ ಬಾರಿಗೆ ಸೂಪರ್ ಅನಕೊಂಡವನ್ನು ಹಳಿಯ ಮೇಲೆ ಇಳಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ. ಈ ರೈಲು ಓಡಿಶಾದ ಲಾಜಕುರಾ ಮತ್ತು ರೌಕುಲಾ ನಡುವೆ ಸಂಚರಿಸಲಿದೆ. ಈ ರೈಲು ಒಟ್ಟು ಮೂರು ಇಂಜಿನ್ ಹೊಂದಿದ್ದು, 15 ಸಾವಿರ ಟನ್ ತೂಕದ ಸಾಮಾನುಗಳನ್ನು ಸಾಗಿಸುತ್ತದೆ. ಸಮಯ ಉಳಿತಾಯಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಬಿಲಾಸಪುರ ಮತ್ತು ಚಕ್ರಧರಪುರ ವಿಭಾಗದ ಒಂದು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು 177 ವ್ಯಾಗನ್ ಗಳಲ್ಲಿ ಸಾಗಿಸಲಾಗುತ್ತಿದೆ. ಈ ಅನಕೊಂಡ ಸೂಪರ್ ರೈಲು ಪ್ರತಿ ಗಂಟೆಗೆ 60 ಕಿ.ಮೀ. ಚಲಿಸುತ್ತದೆ. ಲೋಕೋ ಪೈಲಟ್ ರಣಧೀರ್ ಕುಮಾರ್ ನೇತೃತ್ವದ 6 ಜನರ ತಂಡ, ಸಹಾಯಕ ಸಿಬ್ಬಂದಿ ಈ ರೈಲನ್ನು ಚಲಾಯಿಸಿದ್ದಾರೆ.