Tag: Super

  • ಬಾಲನಟ ಮಾಸ್ಟರ್ ಓಂಗೆ ‘ಕರ್ನಾಟಕ ಸೂಪರ್ ಟೀನ್ ಮಾಡೆಲ್’ ರಾಜ್ಯ ಬಾಲ ಪ್ರಶಸ್ತಿ

    ಬಾಲನಟ ಮಾಸ್ಟರ್ ಓಂಗೆ ‘ಕರ್ನಾಟಕ ಸೂಪರ್ ಟೀನ್ ಮಾಡೆಲ್’ ರಾಜ್ಯ ಬಾಲ ಪ್ರಶಸ್ತಿ

    ಗ್ಗೇಶ್ ನಟನೆಯ ಕಾಳಿದಾಸ ಕನ್ನಡ ಮೇಷ್ಟ್ರು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿರುವ, ಸಾಕಷ್ಟು ಜಾಹೀರಾತು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಹಾಗೂ ರೂಪದರ್ಶಿ ಆಗಿಯೂ ಸಾಕಷ್ಟು ಹೆಸರು ಮಾಡಿರುವ ಮಾಸ್ಟರ್ ಓಂ (Om) ಅವರಿಗೆ ಪ್ರತಿಷ್ಠಿತ ವೆಲೋಝ್ ಈವ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಗ್ಲಾಮರಸ್ ಸೂಪರ್  ಮಾಡೆಲ್ (Model) ಪೇಜೆಂಟ್ನಲ್ಲಿ ಕರ್ನಾಟಕ (Karnataka) ಸೂಪರ್ ಟೀನ್ ಮಾಡೆಲ್ ಟೈಟಲ್ ತನ್ನದಾಗಿಸಿಕೊಂಡಿದ್ದಾನೆ. ಜತೆಜತೆಗೆ  ಫ್ಯಾಷನ್, ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿನ  ಸೇವೆಯನ್ನು ಗುರುತಿಸಿ ನೀಡಲಾಗುವ  ರಾಜ್ಯ ಬಾಲ ಪ್ರಶಸ್ತಿ (Award) ಕೂಡ ಮಾಸ್ಟರ್ ಓಂ ಪಾಲಾಗಿದೆ.

    ಬಸವನಗುಡಿ ಆಚಾರ್ಯ ಪಾಠಶಾಲಾ 9 ನೇ ತರಗತಿಯ ವಿದ್ಯಾರ್ಥಿಯಾಗಿರುವ ಓಂ, ಚಿಕ್ಕ ಮಗುವವಾಗಿರುವಾಗಿನಿಂದಲೇ ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿ (Sandalwood)  ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ.  ಕೊವೀಡ್ಗೂ  ಮುನ್ನ ಇಂಟರ್ನ್ಯಾಷನಲ್ ಕಿಡ್ಸ್ ಫ್ಯಾಷನ್ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ , ಸಿನಿಮಾ ಹಾಗೂ  ಫ್ಯಾಷನ್ ಕ್ಷೇತ್ರ  ಎರಡರಲ್ಲೂ ದಶಕಗಳಿಂದ ಗುರುತಿಸಿಕೊಂಡಿರುವ ಏಕೈಕ ಸೌತ್ ಇಂಡಿಯನ್ ಸೂಪರ್ ಕಿಡ್ ಮಾಡೆಲ್ ಎಂಬ ಗೌರವಕ್ಕೂ ಪಾತ್ರನಾಗಿದ್ದಾನೆ.  “ನನ್ನ ಸಾಧನೆಗೆ ಅಮ್ಮನ ಹಾಗೂ ಆಚಾರ್ಯ ಪಾಠ ಶಾಲೆಯ ಪ್ರೋತ್ಸಾಹ ಜತೆಗಿದೆ” ಎಂದು ಹೇಳುತ್ತಾನೆ. ಇದನ್ನೂ ಓದಿ:ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್

    ಕಾಳಿದಾಸ ಕನ್ನಡ ಮೇಷ್ಟ್ರು ಹಾಗೂ ತಮಿಳಿನ ಕಾಫಿ ಚಿತ್ರ ಸೇರಿದಂತೆ ಈಗಾಗಲೇ ಮಾಸ್ಟರ್ ಓಂ ಸುಮಾರು 10 ಕ್ಕೂ ಚಲನಚಿತ್ರಗಳಲ್ಲಿ ನಟಿಸಿದ್ದಾನೆ. ಓದಿನ ಜತೆಜತೆಯೇ ಮಾಡೆಲಿಂಗ್ನಲ್ಲೂ ಬಿಝಿಯಾಗಿದ್ದು 35 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದು,  ಸುಮಾರು 30 ಕ್ಕೂ ಹೆಚ್ಚು ಫ್ಯಾಷನ್ ಶೋಗಳಲ್ಲಿ ಸೆಲೆಬ್ರಿಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಕ್ಯಾಮೆರಾ ಮುಂದೆ ನಿಂತ ಮೊದಲ ದಿನದ ಸವಿ ನೆನಪನ್ನು ಹಂಚಿಕೊಂಡ ಅನುಷ್ಕಾ ಶೆಟ್ಟಿ

    ಕ್ಯಾಮೆರಾ ಮುಂದೆ ನಿಂತ ಮೊದಲ ದಿನದ ಸವಿ ನೆನಪನ್ನು ಹಂಚಿಕೊಂಡ ಅನುಷ್ಕಾ ಶೆಟ್ಟಿ

    ಹೈದರಾಬಾದ್: ತನ್ನ ಮೊದಲ ಚಿತ್ರದ ಚಿತ್ರೀಕರಣದ ದಿನವನ್ನ ನೆನೆದ ನಟಿ ಅನುಷ್ಕಾ ಶೆಟ್ಟಿ ತಮ್ಮ ಫೇಸ್‍ಬುಕ್ ನಲ್ಲಿ ಚಿತ್ರ ತಂಡದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    “ಮಾರ್ಚ್ 12, 2005 ರಂದು ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ನನಗೆ `ಆಕ್ಷನ್’ ಎನ್ನುವ ಪದ ಕೇಳಿದಾಗ ಭಯ, ಉತ್ಸಾಹ, ಅರಿವಿಲ್ಲದ ಎಲ್ಲಾ ಭಾವನೆಗಳು ಒಂದೇ ಕ್ಷಣದಲ್ಲಿ ಅನುಭವವಾಗಿತ್ತು. ಈ ಭಾವನೆ ಮುಂದಿನ ನನ್ನ ಎಲ್ಲಾ ಹೊಸ ಚಿತ್ರಗಳಿಗೂ ಇದೇ ತರಹ ಇರುತ್ತದೆ. ಚಿತ್ರದ ನಿರ್ದೇಶಕರಾದ ಪೂರಿ ಜಗನ್ನಾಥ್, ಸುಪ್ರಿ ನಾಗಾರ್ಜುನ್, ಸಚಿನ್ (ಮೇಕಪ್ ಮತ್ತು ಹೇರ್ ಸ್ಟೈಲ್), ಸೋನು, ಅನ್ನಪೂರ್ಣ ಸ್ಟುಡಿಯೋ, ಮತ್ತು ಸೂಪರ್ ಚಿತ್ರ ತಂಡದವರಿಗೆಲ್ಲಾ ಅಭಿನಂದಿಸುತ್ತೇನೆ. ನನ್ನ ಮೇಲೆ ಇಟ್ಟ ನಂಬಿಕೆಗೆ, ನನಗಾಗಿ ನಿಂತಿದಕ್ಕೆ, ನನಗೆ ಸಹಕರಿಸಿದಕ್ಕೆ ಮತ್ತು ನನ್ನಲ್ಲಿರುವ ಪ್ರತಿಭೆಯನ್ನ ಹೊರ ತಂದಿದ್ದಕ್ಕೆ ಹೃತ್ಪೂರ್ವಕ ಅಭಿನಂದೆನೆಗಳನ್ನ ಸಲ್ಲಿಸುತ್ತೇನೆ. ನನ್ನ ಮುಂದಿನ ಹೊಸ ಚಿತ್ರಗಳ ಸಿಬ್ಬಂದಿಗಳು, ಸಹನಟರು, ಹೇಮ್‍ಚಂದ್, ಎಎಸ್‍ಎಫ್ ಮತ್ತು ಅಭಿಮಾನಿಗಳಿಗೂ ವಂದಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

    https://www.facebook.com/AnushkaShetty/photos/a.452351745192.374596.210302285192/10160289166095193/?type=3&theater

    ತೆಲುಗಿನ `ಸೂಪರ್’ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಮಾಡಿದ ನಟಿ ಅನುಷ್ಕಾ ಶೆಟ್ಟಿ, ತಮ್ಮ ನಿರಂತರ ಪರಿಶ್ರಮ ಮತ್ತು ಪ್ರತಿಭೆಯಿಂದ ಸಾಕಷ್ಟು ಅಭಿಮಾನಿ ಬಳಗವನ್ನ ಪಡೆದುಕೊಂಡಿದ್ದಾರೆ. `ಅರುಂಧತಿ’ ಸಿನಿಮಾದ ಮೂಲಕ ಜನಪ್ರಿಯತೆಯನ್ನ ಪಡೆದಿದ್ದ ಅನುಷ್ಕಾ ಶೆಟ್ಟಿ, ಇತ್ತೀಚಿನ ಬಾಹುಬಲಿ, ಭಾಗಮತಿ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.

    ಟಾಲಿವುಡ್‍ನ ನಾಗ್ ಆಶ್ವಿನ್ ನಿರ್ದೇಶನದ ತ್ರಿಭಾಷಾ ಚಿತ್ರವಾದ `ಮಹಾನಟಿ’ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದು, ಇದೇ ತಿಂಗಳ 31 ರಂದು ಚಿತ್ರವನ್ನ ಬಿಡುಗಡೆ ಮಾಡಲಿದೆ ಎಂದು ಚಿತ್ರ ತಂಡವು ತಿಳಿಸಿದೆ. ಈ ಚಿತ್ರದಲ್ಲಿ ಸಮಂತಾ ಅಕ್ಕಿನೇನಿ, ಮಲಯಾಳಂನ ದುಲ್ಕಾರ್ ಸಲ್ಮಾನ್, ಕೀರ್ತಿ ಸುರೇಶ್, ವಿಜಯ್ ದೇವಕರೊಂಡ ಮತ್ತು ಪ್ರಕಾಶ್ ರಾಜ್ ನಟಿಸುತ್ತಿದ್ದಾರೆ.   ಇದನ್ನೂ ಓದಿ: ಭಾಗಮತಿ ಬಳಿಕ ‘ಭಾನುಮತಿ’ ನೆರಳಲ್ಲಿ ಅನುಷ್ಕಾ ಶೆಟ್ಟಿ