Tag: supari killers

  • ಬಿಕ್ಲು ಶಿವ ಮರ್ಡರ್ ಕೇಸ್ – ಕೋಲಾರ ಮೂಲದ ನಾಲ್ವರು ಸುಪಾರಿ ಕಿಲ್ಲರ್ಸ್ ಅರೆಸ್ಟ್

    ಬಿಕ್ಲು ಶಿವ ಮರ್ಡರ್ ಕೇಸ್ – ಕೋಲಾರ ಮೂಲದ ನಾಲ್ವರು ಸುಪಾರಿ ಕಿಲ್ಲರ್ಸ್ ಅರೆಸ್ಟ್

    ಕೋಲಾರ: ರೌಡಿಶೀಟರ್ ಬಿಕ್ಲು ಶಿವ ಮರ್ಡರ್ ಕೇಸ್‌ನಲ್ಲಿ (Biklu Shiva Murder Case) ಕೋಲಾರ (Kolar) ಮೂಲದ ನಾಲ್ವರು ಸುಪಾರಿ ಕಿಲ್ಲರ್‌ಗಳನ್ನು (Supari Killers) ಬಂಧಿಸಲಾಗಿದೆ.

    ರೌಡಿ ಶೀಟರ್ ಬಿಕ್ಲು ಶಿವ ಕೊಲೆಯಲ್ಲಿ ಸುಪಾರಿ ಪಡೆದಿದ್ದ ನಟೋರಿಯಸ್‌ಗಳ ಪೈಕಿ ಕೋಲಾರ ಜಿಲ್ಲೆಯ ನಾಲ್ಕು ಜನರು ಮಾಲೂರು ತಾಲೂಕಿನವರಾಗಿದ್ದಾರೆ. ದಿನ್ನಹಳ್ಳಿ ಗ್ರಾಮದ ಅಭಿಷೇಕ್, ಪೆಮ್ಮದೊಡ್ಡಿ ಗ್ರಾಮದ ನರಸಿಂಹ, ಚಿಕ್ಕದಾನವಹಳ್ಳಿ ಗ್ರಾಮದ ಮುರುಗೇಶ್ ಹಾಗೂ ಬಂಗಾರಪೇಟೆ ತಾಲೂಕು ಮಾರಾಂಡಹಳ್ಳಿ ಗ್ರಾಮದ ಸುದರ್ಶನ್ ಬಂಧಿತ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: ಸೇರ್ಪಡೆಯಾಗಿ 2 ವರ್ಷದ ನಂತ್ರ ಯುನೆಸ್ಕೋದಿಂದ ಹೊರ ಬಂದ ಅಮೆರಿಕ

    ಬಂಧಿತರ ಪೈಕಿ ಮುರುಗೇಶ್ ತಮಿಳುನಾಡಿನ ಬೇರಕಿ ಕಾರ್ತಿಕ್ ಎಂಬಾತನ ಮರ್ಡರ್ ಕೇಸ್‌ನಲ್ಲಿದ್ದಾನೆ. ಇನ್ನುಳಿದಂತೆ ಮೂರು ಜನರು ಸಹ ಕೂಲಿ, ವ್ಯವಸಾಯ ಮಾಡಿಕೊಂಡಿದ್ದ ಆರೋಪಿಗಳಾಗಿದ್ದಾರೆ. ಎಲ್ಲರೂ ಕಾಲೇಜು ಅರ್ಧಕ್ಕೆ ಬಿಟ್ಟು ಇತ್ತೀಚೆಗೆ ಗ್ಯಾಂಗ್ ಸೇರಿದ್ದರು ಎನ್ನಲಾಗಿದ್ದು, ಕಳೆದ ರಾತ್ರಿ ಎಸಿಪಿ ರಂಗಪ್ಪ ಅವರ ತಂಡದಿಂದ ನಾಲ್ವರನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ನ ಪ್ರಮುಖ ಆರೋಪಿ ಎಸ್ಕೇಪ್ – ಲುಕೌಟ್ ನೋಟಿಸ್‌ಗೆ ಸಿದ್ಧತೆ

  • ವಿಮೆ ಹಣಕ್ಕಾಗಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಮಗ

    ವಿಮೆ ಹಣಕ್ಕಾಗಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಮಗ

    ಭೋಪಾಲ್: ತಂದೆ ಹೆಸರಿನಲ್ಲಿರುವ ಅಪಘಾತ ವಿಮೆ ಹಣವನ್ನು ಪಡೆಯುವ ಸಲುವಾಗಿ ಸುಪಾರಿ ಕಿಲ್ಲರ್ಸ್‍ಗೆ ಹಣ ನೀಡಿ ತಂದೆಯನ್ನೇ ಮಗ ಕೊಲ್ಲಿಸಿರುವ ಘಟನೆ ಮಧ್ಯಪ್ರದೇಶದ (Madhya Pradesh) ಬರ್ವಾನಿ (Barwani) ಜಿಲ್ಲೆಯಲ್ಲಿ ನಡೆದಿದೆ.

    ನವೆಂಬರ್ 10 ರಂದು ತನ್ನ 52 ವರ್ಷದ ತಂದೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಸೆಂಧ್ವಾ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾನೆ. ನಂತರ ಅಪಘಾತ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಇದೊಂದು ಕೊಲೆ ಎಂಬ ತೀರ್ಮಾನಕ್ಕೆ ಬಂದರು. ಅಲ್ಲದೇ ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಾಗ ವ್ಯಕ್ತಿಗೆ ಡಿಕ್ಕಿ ಹೊಡೆದ ವಾಹನ ಕೆಲವು ಸಮಯದಿಂದಲೂ ಒಂದೇ ಸ್ಥಳದಲ್ಲಿ ಸುತ್ತಾಡಿರುವುದು ಕಂಡು ಬಂದಿದೆ.

    CRIME 2

    ವ್ಯಕ್ತಿ ಪ್ರತಿದಿನ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದರು. ಅದೇ ರೀತಿ ನವೆಂಬರ್ 10 ರಂದು ತನ್ನ ತಂದೆ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದಾರೆ ಎಂದು ಆರೋಪಿ ಸುಪಾರಿ ಕಿಲ್ಲರ್ಸ್‍ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ ಎಂದು ಸೆಂಧ್ವಾ ಪೊಲೀಸ್ ಠಾಣೆಯ ಉಸ್ತುವಾರಿ ರಾಜೇಶ್ ಯಾದವ್ ಹೇಳಿದ್ದಾರೆ. ಇದನ್ನೂ ಓದಿ: ‘ಪಾಕಿಸ್ತಾನ್ ಜಿಂದಾಬಾದ್’ ಎಂದವರನ್ನು ಬೆಂಬಲಿಸಿದ ನಟ ಚೇತನ್: ವಿವಾದಾತ್ಮಕ ಪೋಸ್ಟ್

    ಘಟನೆ ಬಳಿಕ ಪುಣೆಯಲ್ಲಿ ಕರಣ್ ಶಿಂಧೆ ಎಂಬ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ವ್ಯಕ್ತಿಯ ಮಗನೇ ತಂದೆಯನ್ನು ಕೊಲೆ ಮಾಡಲು 2.5 ಲಕ್ಷ ರೂಪಾಯಿ ಸುಪಾರಿ ನೀಡಿರುವ ವಿಚಾರ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಬೆಂಗ್ಳೂರಲ್ಲೂ ಮಾಡ್ತೇವೆ, ಅವರ ವಿಚಾರಗಳನ್ನು ಪಠ್ಯದಲ್ಲಿ ತರುತ್ತೇವೆ: ಬೊಮ್ಮಾಯಿ

    ನಂತರ ಮಗನನ್ನು ವಿಚಾರಣೆ ನಡೆಸಿದಾಗ ತನ್ನ ತಂದೆಯ ಹೆಸರಿನಲ್ಲಿ 10 ಲಕ್ಷ ರೂಪಾಯಿ ಅಪಘಾತ ವಿಮೆ ಮಾಡಿಸಲಾಗಿದ್ದು, ಹಣಕ್ಕಾಗಿ ತಂದೆಯನ್ನು ಕೊಲ್ಲಲು ಹಂತಕರಿಗೆ ಸುಪಾರಿ ಕೊಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯೋಗೇಶ್‍ಗೌಡ ಕೊಲೆ ಪ್ರಕರಣ – ಸುಪಾರಿ ಕಿಲ್ಲರ್ಸ್ 5 ದಿನ ಸಿಬಿಐ ವಶಕ್ಕೆ

    ಯೋಗೇಶ್‍ಗೌಡ ಕೊಲೆ ಪ್ರಕರಣ – ಸುಪಾರಿ ಕಿಲ್ಲರ್ಸ್ 5 ದಿನ ಸಿಬಿಐ ವಶಕ್ಕೆ

    ಧಾರವಾಡ: ಜಿಲ್ಲಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್‍ಗೌಡ ಕೊಲೆ ಪ್ರಕರಣದ ಸುಪಾರಿ ತೆಗೆದುಕೊಂಡಿದ್ದಾರೆ ಎನ್ನಲಾದ ಆರೋಪಿಗಳನ್ನು ನ್ಯಾಯಾಲಯ 5 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದೆ.

    ಭಾನುವಾರ ಸಿಬಿಐ ಅಧಿಕಾರಿಗಳು ಬೆಂಗಳೂರಿನಿಂದ ಈ ಸುಪಾರಿ ಕಿಲ್ಲರ್ಸ್‍ಗಳನ್ನು ಧಾರವಾಡಕ್ಕೆ ಕರೆ ತಂದು, ನ್ಯಾಯಾಧೀಶರ ಬಳಿ ಹಾಜರು ಪಡಿಸಿದ್ದರು. ನ್ಯಾಯಾಧೀಶರು ಆರೋಪಿಗಳನ್ನು ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಇವತ್ತು ಸಿಬಿಐ ಅಧಿಕಾರಿಗಳು ಮತ್ತೇ ಧಾರವಾಡ ಪ್ರಧಾನ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರ ಎದುರು 6 ಆರೋಪಿಗಳನ್ನ ಹಾಜರು ಪಡಿಸಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು.

    ಈ ಹಿನ್ನೆಲೆ ನ್ಯಾಯಾಲಯ 6 ಆರೋಪಿಗಳನ್ನು ಮಾರ್ಚ್ 7ರ ವರೆಗೆ 5 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದೆ. ಸದ್ಯ ದಿನೇಶ್, ಸುನೀಲ್ ಕುಮಾರ್, ನೂತನ್, ಅಶ್ವತ್, ಶಾನವಾಜ್, ನಜೀರ ಅಹ್ಮದನನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳಿಗೆ ಹೆಚ್ಚಿನ ವಿಚಾರಣೆಗೆ ಅವಕಾಶ ಸಿಕ್ಕಿದೆ.

    2016ರ ಜೂನ್ 15ರಂದು ನಡೆದಿದ್ದ ಯೋಗೇಶ್‍ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು 6 ಆರೋಪಿಗಳನ್ನು ಬಂಧಿಸಲಾಗಿತ್ತು. ಯೋಗೇಶ್‍ಗೌಡ ಸಹೋದರ ಕೂಡಾ ಈ ಪ್ರಕರಣದಲ್ಲಿ ಕಾಣದ ಕೈಗಳಿದ್ದು, ಅವರನ್ನು ಹಿಡಿದು ಸಿಬಿಐ ಅಧಿಕಾರಿಗಳು ನಮಗೆ ನ್ಯಾಯ ಕೊಡಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.

  • ಮಂಗಳೂರಿನಲ್ಲಿ ಬಾಂಬ್ – ಪತಿಯನ್ನು ಕೊಂದಿದ್ದ ಪತ್ನಿ ಅರೆಸ್ಟ್

    ಮಂಗಳೂರಿನಲ್ಲಿ ಬಾಂಬ್ – ಪತಿಯನ್ನು ಕೊಂದಿದ್ದ ಪತ್ನಿ ಅರೆಸ್ಟ್

    – ಪ್ರಿಯಕರ, ಸುಪಾರಿ ಕಿಲ್ಲರ್ಸ್ ಜೊತೆ ಸೇರಿ ಕೊಲೆ
    – ಪರಾರಿಯಾಗುತ್ತಿದ್ದಾಗ ಸೆರೆ ಸಿಕ್ಕ ಹಂತಕರು
    – ಕೊಲೆ ಮಾಡಿ ನಾಟಕ ಮಾಡಿದ್ದ ಪತ್ನಿ

    ಮಂಡ್ಯ: ಮಂಗಳೂರಿನಲ್ಲಿ ಇಟ್ಟಿದ್ದ ಬಾಂಬ್‍ನಿಂದ ಇಡೀ ರಾಜ್ಯವೇ ಆತಂಕಕ್ಕೆ ಒಳಗಾಗಿತ್ತು. ಈ ಆತಂಕದ ನಡುವೇ ಮಂಗಳೂರಿನ ಬಾಂಬ್ ಪ್ರಕರಣದಿಂದಾಗಿ ಕೊಲೆ ಮಾಡಿ ತಲೆ ಮರೆಸಿಕೊಳ್ಳುತ್ತಿದ್ದ ಕೊಲೆಗಾರರು ಸಿಕ್ಕಿಹಾಕಿಕೊಂಡಿದ್ದಾರೆ.

    ಮಂಡ್ಯದ ವಿದ್ಯಾನಗರದ 2 ನೇ ಕ್ರಾಸ್‍ನ ಮನೆಯೊಂದರಲ್ಲಿ ರಾಜಸ್ಥಾನ ಮೂಲದ ಬುಂಡಾರಾಮ್ ಎಂಬಾತನನ್ನು ಸೋಮವಾರ ರಾತ್ರಿ ಬರ್ಬರವಾಗಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ನನ್ನ ಹಾಗು ನನ್ನ ಮಕ್ಕಳ ಕೈ ಕಾಲನ್ನು ಕಟ್ಟಿಹಾಕಿ ನಾಲ್ವರು ದರೋಡೆಕೊರರು ನನ್ನ ಗಂಡನನ್ನು ಕೊಲೆ ಮಾಡಿ ನನ್ನ ಮೈ ಮೇಲೆ ಇದ್ದ ಚಿನ್ನಾಭರಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಕೊಲೆಯಾದ ಬುಂಡಾರಾಮ್ ಪತ್ನಿ ಚಂದ್ರಿಕಾ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಅಂದೇ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ?
    ಮಂಗಳೂರಿನಲ್ಲಿ ಬಾಂಬ್ ಇಟ್ಟಿದ್ದ ಹಿನ್ನೆಲೆಯಲ್ಲಿ ಇಡೀ ರಾಜ್ಯದ ಪೊಲೀಸರು ಆಯಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಬಸ್ ನಿಲ್ದಾಣ ಸೇರಿದಂತೆ ಹೆಚ್ಚು ಜನರು ಸೇರುವ ಪ್ರದೇಶದಲ್ಲಿ ಹದ್ದಿನ ಕಣ್ಣು ಇಟ್ಟಿದ್ದರು. ಸೋಮವಾರ ರಾತ್ರಿ ಮಂಡ್ಯದಲ್ಲಿ ಕೊಲೆ ಮಾಡಿ ಚನ್ನರಾಯಪಟ್ಟಣದವರೆಗೆ ಕೊಲೆಗಾರರು ಬಸ್‍ನಲ್ಲಿ ಪ್ರಯಾಣ ನಡೆಸಿದ್ದಾರೆ. ಈ ವೇಳೆ ಕೊಲೆ ಮಾಡಿರುವ ಹಂತಕರು ತಮ್ಮಲ್ಲಿ ಇದ್ದ ಬ್ಯಾಗ್‍ನ್ನು ಚನ್ನರಾಯಪಟ್ಟಣ ಬಸ್ ನಿಲ್ದಾಣದಲ್ಲಿ ಮರೆತು ಹೋಗಿದ್ದರು.

    ಅಪರಿಚಿತ ಬ್ಯಾಗ್ ನೋಡಿದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಬಾಂಬ್ ಎಂದು ಭಯಭೀತರಾಗಿ ಪೊಲೀಸ್‍ಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಬಂದ ಪೊಲೀಸರು ಬ್ಯಾಗ್‍ನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಬ್ಯಾಗ್‍ನಲ್ಲಿ ಬುಂಡಾರಾಮ್ ಕೊಲೆಗೆ ಬಳಸಿದ್ದ ಡ್ರಾಗನ್, ಚಾಕು ಹಾಗೂ ಗನ್ ಪತ್ತೆಯಾಗಿದೆ. ನಂತರ ಪೊಲೀಸರು ಬ್ಯಾಗ್ ಅಲ್ಲೇ ಇಟ್ಟು, ಬ್ಯಾಗ್‍ನ್ನು ವೀಕ್ಷಣೆ ಮಾಡಿದ್ದಾರೆ. ಕೊಲೆ ಮಾಡಿದ್ದ ಆರೋಪಿಗಳು ಬ್ಯಾಗ್‍ನ್ನು ಜ್ಞಾಪಕ ಮಾಡಿಕೊಂಡು ತೆಗೆದುಕೊಳ್ಳಲು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ನಾವು ಮಂಡ್ಯದಲ್ಲಿ ಬುಂಡಾರಾಮ್ ಎಂಬುವವರನ್ನು ಕೊಲೆ ಮಾಡಿ ಬಂದಿದ್ದೇವೆ ಎಂದು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.

    ಸುಪಾರಿ ನೀಡಿದ್ಳು ಪತ್ನಿ:
    ಚನ್ನರಾಯಪಟ್ಟಣ ಪೊಲೀಸರು ಬಂಧಿಸಿದ ಇಬ್ಬರು ಕೊಲೆಗಾರರು ಮನೀಶ್ ಮತ್ತು ಕಿಶನ್ ಇವರು ಸುಪಾರಿ ಕಿಲ್ಲರ್ಸ್ ಆಗಿದ್ದಾರೆ. ಇವರು ಮಂಡ್ಯದ ಕೊಲೆಗೆ ಸಂಬಂಧಪಟ್ಟ ಆರೋಪಿಗಳು ಆದ ಕಾರಣ ಚನ್ನರಾಯಪಟ್ಟಣ ಪೊಲೀಸರು ಮನೀಶ್ ಮತ್ತು ಕಿಶನ್ ಇಬ್ಬರನ್ನು ಮಂಡ್ಯ ಪೊಲೀಸರ ವಶಕ್ಕೆ ನೀಡಿದ್ದಾರೆ. ಮಂಡ್ಯ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಕೊಲೆ ಮಾಡಿಸಿದ್ದು, ಬುಂಡಾರಾಮ್ ಪತ್ನಿ ಚಂದ್ರಿಕಾ ಮತ್ತು ಆಕೆಯ ಪ್ರಿಯಕರ ಸುರೇಶ್ ಹಾಗೂ ಅವರಿಬ್ಬರೂ ಕೊಲೆ ಮಾಡುವಾಗ ಸಹಕರಿಸಿದ್ದಾರೆ ಎಂದು ಬಂಧಿತ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ನಂತರ ಚಂದ್ರಿಕಾ ಮತ್ತು ಸುರೇಶ್ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ ವೇಳೆ ನಾವೇ ಕೊಲೆ ಮಾಡಿಸಿದ್ದು ಎಂದು ಇಬ್ಬರು ಒಪ್ಪಿಕೊಂಡಿದ್ದಾರೆ.

    ಬಾಲ್ಯದ ಪ್ರೀತಿ
    ಚಂದ್ರಿಕಾ ಮತ್ತು ಸುರೇಶ್ ಇಬ್ಬರು ಸಹ ಬಾಲ್ಯದಿಂದ ಪ್ರೀತಿಸುತ್ತಿದ್ದರು. ಇವರು ಸಹ ರಾಜಸ್ಥಾನ ಮೂಲದವರಾಗಿದ್ದು, ಕುಣಿಗಲ್‍ನಲ್ಲಿ ಈ ಹಿಂದೆ ವಾಸವಿದ್ದರು. ಸುರೇಶ್ ಒಂದು ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಚಂದ್ರಿಕಾ ಆಕೆಯ ತಂದೆ ತಾಯಿಗಳೊಂದಿಗೆ ಇದ್ದಳು. ಈ ವೇಳೆ ಇವರಿಬ್ಬರಿಗೂ ಪ್ರೀತಿ ಬೆಳೆಯುತ್ತದೆ. ಇವರಿಬ್ಬರ ಪ್ರೀತಿಯನ್ನು ಮನೆಯವರು ನಿರಾಕರಿಸಿದ ಕಾರಣ ಚಂದ್ರಿಕಾ ಸುರೇಶ್ ಮನೆ ಬಿಟ್ಟು ಹೋಗುತ್ತಾರೆ. ಬಳಿಕ ಚಂದ್ರಿಕಾ ಮನೆಯವರು ಚಂದ್ರಿಕಾಳನ್ನು ಹುಡುಕಿಕೊಂಡು ಬಂದು ಬುಂಡಾರಾಮ್‍ನೊಂದಿಗೆ ಮದುವೆ ಮಾಡುತ್ತಾರೆ. ಬುಂಡಾರಾಮ್ ಮಂಡ್ಯದಲ್ಲಿ ಹಾರ್ಡ್‍ವೇರ್ ಅಂಗಡಿ ಇಟ್ಟುಕೊಂಡು ಆರ್ಥಿಕವಾಗಿ ಚನ್ನಾಗಿ ಇರುತ್ತಾನೆ. ಮದುವೆಯಾದ ನಂತರ ಬುಂಡಾರಾಮ್ ಹಾಗೂ ಚಂದ್ರಿಕಾಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಕೂಡ ಇದೆ. ಸಂಸಾರ ಎಲ್ಲವೂ ಸಹ ಚೆನ್ನಾಗಿ ನಡೆಯುತ್ತಿದ್ದಾಗ ಮತ್ತೆ ಸುರೇಶ್ ಚಂದ್ರಿಕಾಳ ಸಂಪರ್ಕಕ್ಕೆ ಬರುತ್ತಾನೆ. ಈ ನಡುವೆ ಸುರೇಶ್ ಒಬ್ಬಳನ್ನು ಮದುವೆಯಾಗಿದ್ದು, ಆಕೆ ಸಾವನ್ನಪ್ಪಿರುತ್ತಾಳೆ. ಬಳಿಕ ಸುರೇಶ್ ಮತ್ತು ಚಂದ್ರಿಕಾ ನಾವಿಬ್ಬರು ಮತ್ತೆ ಒಂದಾಗೋಣಾ ಎಂದು ನಿರ್ಧಾರ ಮಾಡುತ್ತಾರೆ. ಹೀಗಾಗಿ ಬುಂಡಾರಾಮ್ ಕೊಲೆ ಮಾಡಬೇಕು ಎಂದು ಇಬ್ಬರು ಸಂಚು ರೂಪಿಸುತ್ತಾರೆ.

    ರಾಜಸ್ಥಾನ ಮೂಲದ ಮನೀಶ್ ಮತ್ತು ಕಿಶನ್ ಇಬ್ಬರನ್ನು ಸುರೇಶ್ ಸಂಪರ್ಕ ಮಾಡಿ ಕರೆಸುತ್ತಾನೆ. ಇವರಿಗೆ ಸುರೇಶ್ 12 ಸಾವಿರ, ಚಂದ್ರಿಕಾ 50 ಸಾವಿರ ನೀಡುತ್ತಾರೆ. ನಂತರ ಕಳೆದ ಸೋಮವಾರ ರಾತ್ರಿ 11.30 ಗಂಟೆಗೆ ಪ್ರಿಯಕರ ಸುರೇಶ್ ಹಾಗೂ ಸುಪಾರಿ ಕಿಲ್ಲರ್ಸ್ ಮನೀಶ್ ಮತ್ತು ಕಿಶನ್ ಬುಂಡಾರಾಮ್ ಮನೆ ಬಾಗಿಲು ತಟ್ಟುತ್ತಾರೆ. ಈ ವೇಳೆ ಚಂದ್ರಿಕಾ ನಿಧಾನವಾಗಿ ಮನೆ ಬಾಗಿಲನ್ನು ತೆಗೆಯುತ್ತಾಳೆ. ಈ ವೇಳೆ ಇಬ್ಬರು ಮಕ್ಕಳು ಒಂದು ರೂಂನಲ್ಲಿ ಮಲಗಿರುತ್ತಾರೆ. ಆ ರೂಂನ ಬಾಗಿಲನ್ನು ಸಹ ಚಂದ್ರಿಕಾ ಹಾಕಿರುತ್ತಾಳೆ. ನಂತರ ಇನ್ನೊಂದು ರೂಂನಲ್ಲಿ ಬುಂಡಾರಾಮ್ ಮಲಗಿರುತ್ತಾನೆ. ಆ ರೂಂಗೆ ಹೋದ ನಾಲ್ವರು ಬುಂಡಾರಾಮ್‍ನ ಬಾಯಿ ಮುಚ್ಚಿ ಕುತ್ತಿಗೆ ಭಾಗವನ್ನು ಚಾಕುವಿನಿಂದ ಕುಯ್ದು, ಎದೆ ಭಾಗಕ್ಕೆ ಡ್ರಾಗನ್‍ನಲ್ಲಿ ಚುಚ್ಚುತ್ತಾರೆ. ನಂತರ ಚಂದ್ರಿಕಾಳೆ ತನ್ನ ಮೈ ಮೇಲೆ ಇದ್ದ ಮಾಂಗಲ್ಯ ಸರ ಹಾಗೂ ಇನ್ನೊಂದು ಚಿನ್ನದ ಸರವನ್ನು ಕೊಟ್ಟು ಕಳುಹಿಸುತ್ತಾಳೆ.

    ಪತ್ನಿಯಿಂದ ನಾಟಕ:
    ಆ ಮೂವರು ಮನೆಯಿಂದ ಜಾಗ ಖಾಲಿ ಮಾಡಿದ ಬಳಿಕ ಚಂದ್ರಿಕಾ ತನ್ನ ಮಕ್ಕಳನ್ನು ಕರೆದುಕೊಂಡು ಹೊರಗೆ ಬಂದು ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಕಿರುಚುತ್ತಾಳೆ. ನಂತರ ಅಕ್ಕ-ಪಕ್ಕದ ಮನೆಯವರು ಬಂದು ಪೊಲೀಸರಿಗೆ ಸುದ್ದಿ ಮುಟ್ಟಿಸುತ್ತಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಚಂದ್ರಿಕಾ ನಾಲ್ವರು ಮುಸುಕುಧಾರಿಗಳು ಬಂದು ನನ್ನ ಮತ್ತು ಮಕ್ಕಳ ಕೈಕಾಲು ಕಟ್ಟಿಹಾಕಿ ನನ್ನ ಗಂಡನನ್ನು ಕೊಂದರು. ಅವರು ದರೋಡೆಕೋರರು ನನ್ನ ಮೈ ಮೇಲಿದ್ದ ಚಿನ್ನಾಭರಣವನ್ನು ತೆಗೆದುಕೊಂಡು ಹೋದರು ಎಂದು ಕಥೆ ಕಟ್ಟುತ್ತಾಳೆ. ನಂತರ ಚಂದ್ರಿಕಾಳ ಹೇಳಿಕೆಯ ಮೇಲೆ ಪೊಲೀಸರು ಸಹ ದೂರು ದಾಖಲಿಸುತ್ತಾರೆ. ಈ ವೇಳೆ ಚಂದ್ರಿಕಾಳ ನಡವಳಿಕೆ ವಿಭಿನ್ನವಾಗಿರುತ್ತೆ. ಹೀಗಾಗಿ ಪೊಲೀಸರು ಈಕೆಯ ಮೇಲೂ ಅನುಮಾನ ವ್ಯಕ್ತಪಡಿಸಿ ಒಂದು ಕಣ್ಣು ಇಟ್ಟಿರುತ್ತಾರೆ. ಅಂತಿಮವಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು ನಿಜವಾಗಿದ್ದು, ಚಂದ್ರಿಕಾಳೇ ಈ ಕೊಲೆಯ ಮೂಲ ರೂವಾರಿ ಎಂದು ತಿಳಿದು ಬಂದಿದೆ.

  • ದಾವಣಗೆರೆಯಲ್ಲಿ ಮತ್ತೆ ಗ್ಯಾಂಗ್‍ವಾರ್- ರೌಡಿ ಬುಳ್ಳನಾಗನ ಮೇಲೆ ಸುಪಾರಿ ಅಟ್ಯಾಕ್

    ದಾವಣಗೆರೆಯಲ್ಲಿ ಮತ್ತೆ ಗ್ಯಾಂಗ್‍ವಾರ್- ರೌಡಿ ಬುಳ್ಳನಾಗನ ಮೇಲೆ ಸುಪಾರಿ ಅಟ್ಯಾಕ್

    ದಾವಣಗೆರೆ: ಜಿಲ್ಲೆಯಲ್ಲಿ ಮತ್ತೆ ಗ್ಯಾಂಗ್ ವಾರ್ ಶುರುವಾಗಿದೆ. ನಾಗರಾಜ್ ಅಲಿಯಾಸ್ ಬುಳ್ಳನಾಗ ಮತ್ತು ಸಹಚರರ ಮೇಲೆ ರಾತ್ರೋರಾತ್ರಿ ದಾಳಿ ನಡೆದಿದ್ದು, ಮತ್ತೊಮ್ಮೆ ಬೆಣ್ಣೆನಗರಿ ಜನ ಬೆಚ್ಚಿ ಬೀಳುವಂತಾಗಿದೆ.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಮಾರಪಟ್ಟಣಂ ಸಮೀಪದ ಸೇತುವೆ ಬಳಿ 15ಕ್ಕೂ ಹೆಚ್ಚು ಸುಪಾರಿ ಕಿಲ್ಲರ್ಸ್ ರೌಡಿ ಶೀಟರ್ ಬುಳ್ಳನಾಗನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಬುಳ್ಳನಾಗ ಮತ್ತು ಸಹಚರರು ಕುಮಾರಪಟ್ಟಣಂ ಮಾರ್ಗವಾಗಿ ದಾವಣಗೆರೆಗೆ ಬರುವಾಗ ಇನ್ನೋವಾ ಕಾರು ಅಡ್ಡಗಟ್ಟಿ ಒಮ್ಮೆಲೆ ಅಟ್ಯಾಕ್ ಮಾಡಿದ್ದಾರೆ.

    ಈ ವೇಳೆ ಬುಳ್ಳನಾಗ ಮತ್ತು ಇಬ್ಬರು ಸಹಚರರಿಗೆ ಗಂಭೀರ ಗಾಯಗಳಾಗಿವೆ. ಇನ್ನೋವಾ ಕಾರಿನ ಗಾಜುಗಳು ಜಖಂ ಆಗಿವೆ. ಅಟ್ಯಾಕ್ ಆಗುತ್ತಿದ್ದಂತೆ ಬುಳ್ಳನಾಗನ ಕಾರು ಚಾಲಕ ಕಾರು ಜೋರಾಗಿ ಚಲಾಯಿಸಿಕೊಂಡು ಬಂದು ಪರಾರಿಯಾಗಿದ್ದಾರೆ. ಈ ಹಿಂದೆ ಬುಳ್ಳನಾಗನನ್ನ ಕೊಲೆ ಮಾಡೋದಕ್ಕೆ ಸಂತೋಷ್ ಅಲಿಯಾಸ್ ಕಣುಮ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ರೌಡಿಗಳಿಗೆ ಸುಪಾರಿ ಕೊಟ್ಟಿದ್ದ.

    ಎರಡು ತಿಂಗಳ ಹಿಂದೆ ದಾವಣಗೆರೆ ಪೊಲೀಸರು 7 ಮಂದಿ ಸುಪಾರಿ ಕಿಲ್ಲರ್ಸ್ ಗಳನ್ನ ಬಂಧಿಸಿದ್ದರು. ಈಗಲೂ ಕೂಡ ಸಂತೋಷ್ ಅಲಿಯಾಸ್ ಕಣುಮ, ಶ್ರೀನಿವಾಸ್ ಅಲಿಯಾಸ್ ಮೋಟ್ ಬಳ್ ಸೀನ, ಗೋವಿಂದ ಎಂಬವರು ಅಟ್ಯಾಕ್ ಮಾಡಿಸಿದ್ದಾರೆ ಎಂದು ಹಲ್ಲೆಗೆ ಒಳಗಾದ ಬುಳ್ಳನಾಗ ಆರೋಪಿಸಿದ್ದಾನೆ.

  • ಗೌರಿ ಲಂಕೇಶ್ ಹತ್ಯೆಗೆ ಮುಂಬೈನಿಂದ ಬಂದಿದ್ರಾ ಸುಪಾರಿ ಕಿಲ್ಲರ್ಸ್?- ಎಸ್‍ಐಟಿ ಶಂಕೆ

    ಗೌರಿ ಲಂಕೇಶ್ ಹತ್ಯೆಗೆ ಮುಂಬೈನಿಂದ ಬಂದಿದ್ರಾ ಸುಪಾರಿ ಕಿಲ್ಲರ್ಸ್?- ಎಸ್‍ಐಟಿ ಶಂಕೆ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಾಂಬೆಯಿಂದ ಸುಪಾರಿ ಕಿಲ್ಲರ್ಸ್ ಬಂದಿದ್ರಾ? ಸ್ಪಾಟ್‍ನಲ್ಲಿ ಸಿಕ್ಕ ಸುಳಿವು ಇಟ್ಟುಕೊಂಡು ಅಖಾಡಕ್ಕೆ ಇಳಿದ ಎಸ್‍ಐಟಿ ತಂಡ ಈ ಅನುಮಾನ ವ್ಯಕ್ತಪಡಿಸಿದೆ.

    ಗುಂಡು ಹಾರಿಸಿದ ಹಂತಕ ಥೇಟ್ ಸಿನಿಮಾ ಸ್ಟೈಲ್‍ನಲ್ಲೇ ವರ್ತಿಸಿದ್ದಾನೆ. ಕಳೆದ ಎರಡು ಮೂರು ದಿನಗಳಿಂದ ಅದೇ ಐಡಿಯಲ್ ಹೋಮ್ಸ್ ಪ್ರದೇಶದಲ್ಲಿ ಓಡಾಟ ಮಾಡಿರೋ ಹಂತಕರು, ಕಾದು ಕೂತು ಗುಂಡು ಹಾರಿಸಿದ್ದಾರೆ. ಘಟನೆ ನಡೆಯೋದಕ್ಕೂ ಮುನ್ನ ಇಬ್ಬರು ಗೌರಿ ಅವರ ಮನೆಯ ಮುಂದೆ ಕಾದು ಕೂತಿದ್ದರು ಎನ್ನಲಾಗಿದೆ.

    ಗೌರಿ ಅವರು ಮನೆ ತಲುಪಿದ ಕೂಡಲೇ ಕಾದು ಕೂತಿದ್ದ ಸಂಚುಕೋರರು, ಗುಂಡು ಹಾರಿಸುವವನಿಗೆ ಮಾಹಿತಿ ಮುಟ್ಟಿಸಿದ್ದಾರೆ. ಆ ಬಳಿಕ ಬಂದ ಆ ಆಗಂತುಕ ಗುಂಡು ಹಾರಿಸಿ, ಸಾವು ಖಚಿತ ಪಡಿಸಿಕೊಂಡೇ ಮುಂದೆ ಹೋಗಿದ್ದಾನೆ. ಇದು ಮುಂಬೈ ಮೂಲದ ಸುಪಾರಿ ಕಿಲ್ಲರ್ಸ್ ಮೋಡ್ಸ್ ಅನ್ನುತ್ತೆ ಎಸ್‍ಐಟಿ ತಂಡ.

    ಇಷ್ಟರ ನಡುವೆ ಗಾಂಧೀ ಬಜಾರ್‍ನಿಂದ ಬಂದ ಗೌರಿ ಲಂಕೇಶ್ ಅವರು ಮನೆಯ ಮುಂಭಾಗ ಕಾರಿನಲ್ಲಿ ನಿಲ್ಲಿಸಿಕೊಂಡು ಒಂದೆರಡು ನಿಮಿಷ ಕಾರಿನಲ್ಲಿ ಕೂತು ಮೊಬೈಲ್ ನೋಡಿದ್ದಾರೆ. ಅದ್ಯಾರಿಗೋ ಮೆಸೇಜ್ ಕೂಡ ಕಳುಹಿಸಿದ್ದಾರೆ ಎನ್ನುತ್ತಿದೆ ಎಸ್‍ಐಟಿ ತಂಡ.

  • ಎಣ್ಣೆ ವ್ಯಾಪಾರಿ ಕೊಲೆಗೆ ಸುಪಾರಿ: 6 ಆರೋಪಿಗಳ ಬಂಧನ

    ಎಣ್ಣೆ ವ್ಯಾಪಾರಿ ಕೊಲೆಗೆ ಸುಪಾರಿ: 6 ಆರೋಪಿಗಳ ಬಂಧನ

    – ಎರಡು ಬಾರಿ ಮಾರಣಾಂತಿಕ ಹಲ್ಲೆ ಮಾಡಿದ ಸುಪಾರಿ ಕಿಲ್ಲರ್ಸ್

    ರಾಯಚೂರು: ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬರ ಮೇಲೆ ಹಾಡ ಹಗಲೇ ನಡೆದಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ರಾಯಚೂರಿನ ಅಡುಗೆ ಎಣ್ಣೆ ಅಂಗಡಿ ವ್ಯಾಪಾರಿ ತಿರುಮಲೇಶ ಸೇರಿ 6 ಜನರನ್ನು ಮಾರ್ಕೆಟ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

    ವ್ಯಾಪಾರದಲ್ಲಿನ ಅಹಿತಕರ ಪೈಪೋಟಿ ಹಾಗೂ ವೈಷಮ್ಯದಿಂದ ವೀರಭದ್ರೇಶ್ವರ ಎಣ್ಣೆ ಅಂಗಡಿ ಮಾಲೀಕ ನರಸಿಂಹ ಮೂರ್ತಿ ಮೇಲೆ ಎರಡು ಬಾರಿ ಮಾರಣಾಂತಿಕ ಹಲ್ಲೆ ನಡೆದಿತ್ತು. ತಿರುಮಲೇಶ್, ಆತನ ಸಹೋದರ ಮಂಜುನಾಥ್, ಮಾವ ದೇವದಾಸ್ ಸೇರಿ ನರಸಿಂಹ ಮೂರ್ತಿಯನ್ನು ಕೊಲೆ ಮಾಡಲು ಸುಪಾರಿ ನೀಡಿದ್ದರು. ಮೂರು ಲಕ್ಷ ರೂಪಾಯಿಗೆ ಕೊಲೆ ಸುಪಾರಿ ಪಡೆದ ರಾಯಚೂರಿನ ಶ್ರೀಕಾಂತ್, ರಾಜೇಶ್, ಸುದರ್ಶನ್ 2017 ಜನವರಿ 4 ಹಾಗೂ ಫೆಬ್ರವರಿ 9 ರಂದು ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ತನಿಖೆಯಲ್ಲಿ ಆರೋಪಿಗಳ ಸುಳಿವು ಸಿಕ್ಕಿದ್ದು ಈ ಆರು ಜನರನ್ನ ಬಂಧಿಸಲಾಗಿದೆ.

    ಬಂಧಿತರಿಂದ 4 ಬೈಕ್, ಎರಡು ಲಕ್ಷ ರೂಪಾಯಿ ನಗದು, ಒಂದು ಲಾಂಗ್ ಜಪ್ತಿ ಮಾಡಲಾಗಿದೆ. ಸುಪಾರಿ ಪಡೆದ ಮೂವರು ಆರೋಪಿಗಳು ಈ ಹಿಂದೆ ಕೊಲೆ ಯತ್ನ ಪ್ರಕರಣ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸಿ ಬಂದಿದ್ದಾರೆ.