Tag: Supari

  • ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿದೆ ಅಂತ ಮತ್ಸರ – ಅಂಗಡಿ ಮಾಲೀಕನ ಕೊಲೆಗೆ ಸುಪಾರಿ ಕೊಟ್ಟಿದ್ದವ ಅರೆಸ್ಟ್

    ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿದೆ ಅಂತ ಮತ್ಸರ – ಅಂಗಡಿ ಮಾಲೀಕನ ಕೊಲೆಗೆ ಸುಪಾರಿ ಕೊಟ್ಟಿದ್ದವ ಅರೆಸ್ಟ್

    ಬೆಂಗಳೂರು: ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ಮತ್ಸರ ಉಂಟಾಗಿ ಅಂಗಡಿ ಮಾಲೀಕನ ಕೊಲೆಗೆ ಸುಪಾರಿ ಕೊಟ್ಟಿದ್ದ ಆರೋಪಿಯನ್ನು ಬಾಗಲಗುಂಟೆ ಪೊಲೀಸರು (Bagalgunte Police) ಬಂಧಿಸಿದ್ದಾರೆ.

    ವೇನರಾಮ್ (45) ಕೊಲೆಗೆ ಸುಪಾರಿ ಕೊಟ್ಟಿದ್ದ ಆರೋಪಿ. ನೇಮರಾಮ್ ಎಂಬ ವ್ಯಕ್ತಿ ಬಾಗಲಗುಂಟೆ ಸಿಡೇದಹಳ್ಳಿ ಬಳಿ ಹ್ಯಾಪಿ ಟೆಕ್ಸ್‌ಟೈಲ್‌ ಅಂಗಡಿ (Textile Shop) ಇಟ್ಟುಕೊಂಡಿದ್ದರು. ಅಂಗಡಿ ಪಕ್ಕದಲ್ಲೇ ವೇನರಾಮ್ ಹೈ ಫ್ಯಾಷನ್ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ. ನೇಮರಾಮ್ ಅಂಗಡಿಯಲ್ಲಿ ವ್ಯಾಪಾರ ಹೆಚ್ಚಾಗಿ ನಡೆಯುತ್ತಿತ್ತು. ಅದರಿಂದ ಮತ್ಸರಗೊಂಡ ಆರೋಪಿ ವೇನರಾಮ್ ಆ ಅಂಗಡಿಯಲ್ಲಿ ಬಟ್ಟೆ ಸರಿ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದ. ವೇನರಾಮ್ ಅಂಗಡಿಯಲ್ಲಿದ್ದ ಹುಡುಗನನ್ನ ನೇಮರಾಮ್ ತನ್ನ ಅಂಗಡಿಗೆ ಸೇರಿಸಿಕೊಂಡಿದ್ದ. ಇದರಿಂದ ಕೋಪಗೊಂಡಿದ್ದ ವೇನರಾಮ್, ನೇಮರಾಮ್ ಕೊಲೆಗೆ ಸುಪಾರಿ ಕೊಟ್ಟಿದ್ದ. ಇದನ್ನೂ ಓದಿ: ವಿಶ್ವದಲ್ಲಿ ನಮಗೆ ಯಾರೂ ಶತ್ರುಗಳಿಲ್ಲ, ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರು – ಮೋದಿ

    ರಾಜಸ್ಥಾನದ ವಿನೋದ್ ಜಾಟ್ ಎಂಬಾತನಿಗೆ ವೇನರಾಮ್ 5 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ. ಅದರಂತೆ ವ್ಯಾಪಾರ ಮುಗಿಸಿ ಹೊರಟಿದ್ದ ನೇಮರಾಮ್ ಮೇಲೆ ಅಟ್ಯಾಕ್ ಮಾಡಲಾಗಿತ್ತು. ಎರಡು ಬೈಕ್‌ನಲ್ಲಿ ಬಂದು ವಿನೋದ್ ಟೀಂ ಅಟ್ಯಾಕ್ ಮಾಡಿತ್ತು. ಸದ್ಯ ಸುಪಾರಿ ಸಂಬಂಧ ವೇನರಾಮ್‌ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಸುಪಾರಿ ಪಡೆದ ಆರೋಪಿ ವಿನೋದ್ ಜಾಟ್‌ಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೆಹಲಿ | ಮಾದಕವಸ್ತು ಜಾಲದ ಮೇಲೆ 500 ಪೊಲೀಸರಿಂದ ರೇಡ್ – 63 ಮಂದಿ ಅರೆಸ್ಟ್

  • ನನ್ನನ್ನು ಕೊಲ್ಲಲು ನಟ ಅಕ್ಷಯ್ ಕುಮಾರ್ ಸುಪಾರಿ ಕೊಟ್ಟಿದ್ದಾರೆ: ಖಾನ್ ಟ್ವೀಟ್

    ನನ್ನನ್ನು ಕೊಲ್ಲಲು ನಟ ಅಕ್ಷಯ್ ಕುಮಾರ್ ಸುಪಾರಿ ಕೊಟ್ಟಿದ್ದಾರೆ: ಖಾನ್ ಟ್ವೀಟ್

    ಬಾಲಿವುಡ್ (Bollywood)  ನ ಖ್ಯಾತ ನಟ ಅಕ್ಷಯ್ ಕುಮಾರ್ ಮೇಲೆ ಗುರುತರ ಆರೋಪ ಮಾಡಿದ್ದಾರೆ ನಟ, ನಿರ್ಮಾಪಕ ಹಾಗೂ ಸ್ವಯಂ ಘೋಷಿತ ವಿಮರ್ಶಕ ಕಮಲ್ ಆರ್ ಖಾನ್ (Kamal R Khan). ಈ ಕುರಿತು ಟ್ವೀಟ್ ಮಾಡಿರುವ ಅವರು ‘ನನ್ನನ್ನು ಜೈಲಿಗೆ (Jail) ಕಳುಹಿಸಿ ಸಾಯಿಸಲು ಅಕ್ಷಯ್ ಕುಮಾರ್ ಸುಪಾರಿ ಕೊಟ್ಟಿದ್ದಾರೆ’ ಎಂದು ಅವರು ಬರೆದುಕೊಂಡಿದ್ದಾರೆ.

    ಬಾಲಿವುಡ್ ನಲ್ಲಿ ನನಗೆ ತುಂಬಾ ಜನ ಸ್ನೇಹಿತರು ಇದ್ದಾರೆ. ಅಕ್ಷಯ್ ಕುಮಾರ್ (Akshay Kumar) ಅವರನ್ನು ಹೊರತು ಪಡಿಸಿ ಎಲ್ಲರೂ ನನ್ನೊಂದಿಗೆ ಚೆನ್ನಾಗಿದ್ದಾರೆ. ಆದರೆ, ಅಕ್ಷಯ್ ಕುಮಾರ್ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ನನ್ನ ಸಾವು ಬಯಸುತ್ತಿದ್ದಾರೆ. ಜೈಲಿಗೆ ಕಳುಹಿಸಿ, ಅಲ್ಲಿಯೇ ಸಾಯಿಸಲು (Murder) ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮುಂಬೈನಿಂದ ಸ್ಯಾಂಡಲ್ ವುಡ್ ಗೆ ಬಂದ ಪ್ರಾಚಿ ಶರ್ಮಾ

    ಅವರನ್ನು ನಾನು ಅಕ್ಷಯ್ ಕುಮಾರ್ ಎಂದು ಕರೆಯಲಾರೆ. ಅವರು ನಮ್ಮ ಭಾರತದವರು ಅಲ್ಲ. ಆತ ಕೆನಡಿಯನ್. ಕೆನಡಾದ ಪೌರತ್ವ ಹೊಂದಿದ್ದಾರೆ. ಹಾಗಾಗಿ ನಾನು ಅವರನ್ನು ಕೆನಡಿಯನ್ ಕುಮಾರ್ ಎಂದು ಕರೆಯುತ್ತಾನೆ. ಹಾಗೆ ಕರೆದರೆ ಅವರಿಗೆ ಸಿಟ್ಟು ಬರುತ್ತದೆ. ಇದೇ ಕಾರಣಕ್ಕಾಗಿ ಅವರು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದರು.

     

    ಈ ರೀತಿಯಾಗಿ ಕಮಲ್ ಆರ್ ಖಾನ್ ಆರೋಪ ಮಾಡುತ್ತಿರುವುದು ಮೊದಲೇನೂ ಅಲ್ಲ. ಅನೇಕರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರು ಜೈಲಿಗೂ ಹೋಗಿದ್ದಾರೆ. ಆದರೂ, ನಟ-ನಟಿಯರ ಮೇಲೆ, ನಿರ್ದೇಶಕರ ಮೇಲೆ, ನಿರ್ಮಾಪಕರ ಮೇಲೆ ಆರೋಪ ಮಾಡುವುದನ್ನು ಅವರು ಬಿಟ್ಟಿಲ್ಲ.

  • ಕುಡಿಯಲು ಹಣ ಕೊಡಲ್ಲ ಅಂತಾ ಕಿರುಕುಳ ನೀಡ್ತಿದ್ದ ಮಗನ ಹತ್ಯೆಗೆ ಸುಪಾರಿ ಕೊಟ್ಟ ತಂದೆ-ತಾಯಿ!

    ಕುಡಿಯಲು ಹಣ ಕೊಡಲ್ಲ ಅಂತಾ ಕಿರುಕುಳ ನೀಡ್ತಿದ್ದ ಮಗನ ಹತ್ಯೆಗೆ ಸುಪಾರಿ ಕೊಟ್ಟ ತಂದೆ-ತಾಯಿ!

    ಹೈದರಾಬಾದ್: ಮದ್ಯ ವ್ಯಸನಿ ನಿರುದ್ಯೋಗಿ ಮಗನ ಕಿರುಕುಳದಿಂದ ಬೇಸತ್ತು, ಆತನ ಹತ್ಯೆಗೆ ತಂದೆ-ತಾಯಿಯೇ ಸುಪಾರಿ (Supari) ಕೊಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಸಾಯಿ ರಾಮ್‌ (26) ಕೊಲೆಯಾದ ಯುವಕ. ಸರ್ಕಾರಿ ಶಾಲೆಯ ಪ್ರಾಂಶುಪಾಲರು ಮತ್ತು ಅವರ ಪತ್ನಿ ಖಮ್ಮಂನಲ್ಲಿ ತಮ್ಮ ಮಗನನ್ನು ಹತ್ಯೆ ಮಾಡಲು 8 ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷತ್ರಿಯ ರಾಮ್ ಸಿಂಗ್ ಮತ್ತು ರಾಣಿ ಬಾಯಿ ಹಾಗೂ ನಾಲ್ವರು ಆರೋಪಿಗಳನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ವೈಫೈ ಪಾಸ್‍ವರ್ಡ್ ಹಂಚಿಕೊಳ್ಳದ್ದಕ್ಕೆ ನಡೆಯಿತು ಯುವಕನ ಭೀಕರ ಕೊಲೆ

    ಸಾಯಿ ರಾಮ್ ದೇಹವನ್ನು ಸೂರ್ಯಪೇಟೆಯ ಮೂಸಿಯಲ್ಲಿ ಎಸೆಯಲಾಗಿತ್ತು. ಒಂದು ದಿನದ ನಂತರ ಪತ್ತೆಯಾಗಿದೆ. ಆಪಾದಿತ ಹಂತಕರಲ್ಲಿ ಒಬ್ಬ ತಲೆಮರೆಸಿಕೊಂಡಿದ್ದಾನೆ. ಅಪರಾಧಕ್ಕೆ ಬಳಸಿದ ಕುಟುಂಬದ ಕಾರನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳಿಂದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ ಮಗ ಕಾಣೆಯಾಗಿದ್ದ ಬಗ್ಗೆ ಪೋಷಕರು ದೂರು ದಾಖಲಿಸಿರಲಿಲ್ಲ. ನಂತರ ಮಗನ ಹತ್ಯೆ ಬಗ್ಗೆ ತಿಳಿದು ಶವವನ್ನು ಗುರುತಿಸಲು ಶವಾಗಾರಕ್ಕೆ ಹೋಗಲು ಪೋಷಕರು ಅದೇ ಕಾರನ್ನು ಬಳಸಿದ್ದು ತನಿಖೆಯಿಂದ ತಿಳಿದುಬರಲಿದೆ.

    ರಾಮ್ ಸಿಂಗ್, ಮಾರಿಪೆಡಾ ಬಾಂಗ್ಲಾ ಗ್ರಾಮದ ಸರ್ಕಾರಿ ಗುರುಕುಲದ ಪ್ರಾಂಶುಪಾಲರಾಗಿದ್ದರು. ದಂಪತಿಯ ಪುತ್ರಿ ಯುಎಸ್‌ನಲ್ಲಿ ನೆಲೆಸಿದ್ದಾರೆ. ಸಾಯಿ ರಾಮ್ ತನ್ನ ಹೆತ್ತವರು ಮದ್ಯಪಾನಕ್ಕೆ ಹಣ ನಿರಾಕರಿಸಿದಾಗ ನಿಂದಿಸಿ ಥಳಿಸುತ್ತಿದ್ದ. ಆತನನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದರೂ ಪ್ರಯೋಜನವಾಗಿರಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೊರಗೆ ಬರದಿದ್ರೆ ಕಾಲು ಮುರಿಯುತ್ತೇವೆ- SFI ಕಾರ್ಯಕರ್ತರಿಂದ ಪ್ರಾಂಶುಪಾಲರಿಗೆ ಧಮ್ಕಿ

    ಹುಜೂರಾಬಾದ್ ಸರ್ಕಲ್ ಇನ್ಸ್‌ಪೆಕ್ಟರ್ ರಾಮಲಿಂಗ ರೆಡ್ಡಿ ಅವರ ಪ್ರಕಾರ, ದಂಪತಿ ತಮ್ಮ ಮಗನನ್ನು ಕೊಲ್ಲಲು ರಾಣಿ ಬಾಯಿಯ ಸಹೋದರ ಸತ್ಯನಾರಾಯಣರಿಂದ ಸಹಾಯವನ್ನು ಪಡೆದಿದ್ದರು. ಸತ್ಯನಾರಾಯಣ ಅವರು ಕೊಲೆ ಮಾಡಲು ಮಿರ್ಯಾಲಗೂಡು ಮಂಡಲದ ಆರ್ ರವಿ, ಡಿ ಧರ್ಮ, ಪಿ ಎನ್. ನಾಗರಾಜು, ಡಿ ಸಾಯಿ ಮತ್ತು ಬಿ ರಾಂಬಾಬು ಎಂಬುವರ ನೆರವು ಕೇಳಿದ್ದರು. ಎಂಟು ಲಕ್ಷಕ್ಕೆ ಸುಪಾರಿ ನೀಡಿ 1.5 ಲಕ್ಷ ಮುಂಗಡ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ

    2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ

    ಶಿವಮೊಗ್ಗ: ಯುವಕನ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಹರ್ಷನ ಕೊಲೆಗೆ ಎರಡು ವರ್ಷಗಳ ಹಿಂದೆಯೇ ಸುಪಾರಿ ಕೊಟ್ಟಿದ್ದರು ಎಂದು ಮೃತನ ಸಂಬಂಧಿ ಗಂಭೀರ ಆರೋಪ ಮಾಡಿದ್ದಾರೆ.

    ಮೆಗ್ಗಾನ್ ಆಸ್ಪತ್ರೆಯ ಬಳಿ ಹತ್ಯೆಯಾದ ಯುವಕನ ಸಂಬಂಧಿ ಪ್ರವೀಣ್ ಮಾತನಾಡಿದ್ದು, ಹೊಡೆದು ಹಾಕಿದ್ದಾರೆ ಅಷ್ಟೇ. ಇವನನ್ನು ಹೊಡೆದು ಹಾಕಿದರೆ 10 ಲಕ್ಷ ರೂ. ಕೊಡ್ತೀನಿ ಅಂತ 2 ವರ್ಷದಿಂದಲೂ‌ ಮುಸ್ಲಿಮರು ಹೇಳುತ್ತಿದ್ದರು. ಯಾರು ಹೊಡೆದು ಹಾಕಿದ್ದಾರೆ ಅಂತ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಯುವಕನ ಕೊಲೆ ಪ್ರಕರಣ- ಓರ್ವ ಆರೋಪಿ ವಶಕ್ಕೆ, ನಾಲ್ವರಿಗಾಗಿ ಹುಡುಕಾಟ

    ಪೊಲೀಸರು ಏನು ತನಿಖೆ ಮಾಡುತ್ತಾರೋ ಅದರ ಆಧಾರದ ಮೇಲೆ ನಮಗೆ ಗೊತ್ತಾಗಬೇಕು. ಎರಡು ವರ್ಷದಿಂದಲೂ ಈ ಜಿದ್ದು ಇದ್ದೇ ಇದೆ ಎಂದು ಪ್ರವೀಣ್‌ ಮಾಹಿತಿ ನೀಡಿದ್ದಾನೆ.

    ಹರ್ಷ ಎಂಬಾತ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಇದನ್ನೂ ಓದಿ: ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ, ಶೀಘ್ರವೇ ಬಂಧನ: ಆರಗ ಜ್ಞಾನೇಂದ್ರ

    ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಎರಡು ಕೋಮಿನ ಯುವಕರ ಗುಂಪು ಮೆಗ್ಗಾನ್ ಆಸ್ಪತ್ರೆ ಬಳಿ ಜಮಾಯಿಸಿತು. ಹೀಗಾಗಿ ಮೆಗ್ಗಾನ್ ಆಸ್ಪತ್ರೆ ಬಳಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

  • ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್‌ – ಸುಪಾರಿ ಕೊಡ್ತಿರೋ ವೀಡಿಯೋ, ಆಡಿಯೋ ವೈರಲ್‌

    ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್‌ – ಸುಪಾರಿ ಕೊಡ್ತಿರೋ ವೀಡಿಯೋ, ಆಡಿಯೋ ವೈರಲ್‌

    ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಅವರ ಕೊಲೆ ಸಂಚಿಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ, ಆಪ್ತನಿಗೆ ಸುಪಾರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ವೀಡಿಯೋ, ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಯಲಹಂಕದಿಂದ ಗೋಪಾಲಕೃಷ್ಣ ಅವರು ಎಸ್. ಆರ್ ವಿಶ್ವನಾಥ್ ಚುನಾವಣೆಯಲ್ಲಿ ವಿರುದ್ಧವಾಗಿ ನಿಂತು ಸೋತಿದ್ದರು. ಎಸ್. ಆರ್ ವಿಶ್ವನಾಥ್  ಅವರನ್ನು ಕೊಲೆ ಮಾಡಲು ಸುಪಾರಿ ನೀಡಿರುವ ಈ ವೀಡಿಯೋ 2 ತಿಂಗಳ ಹಿಂದೆ ಶೂಟ್‌ ಮಾಡಿದ್ದು ಎನ್ನಲಾಗಿದೆ. ಗೋಪಾಲಕೃಷ್ಣ ತನ್ನ ಆಪ್ತ ಕುಳ್ಳ ದೇವರಾಜ್‍ಗೆ  ಸುಪಾರಿ  ಕೊಟ್ಟಿರುವ ಎರಡು ವೀಡಿಯೋ ಹಾಗೂ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ವೀಡಿಯೋದಲ್ಲಿ ಏನಿದೆ?: 6 ತಿಂಗಳು ಬೇಕಾದರೂ ಆಗಲಿ, ಕಡಬಗೆರೆ ಸೀನನ್ನು ಎತ್ತಿದ ಹಾಗೇ ಎಸ್.ಆರ್ ವಿಶ್ವನಾಥ್ ಎತ್ತಬೇಕು. ಕಾರ್‌ನಲ್ಲಿ ಹೋಗುವಾಗ ಅಟ್ಯಾಕ್ ಮಾಡಬಾರದು, ನಾಗಶೆಟ್ಟಿಯಲ್ಲಿ ಮಾಡೋಣ. ತೋಟ ಇರುವ ಜಾಗ ನೋಡಿ ಮಾಡೋಣ ಎಂದು ಹೇಳಿದ್ದಾರೆ. ಜೊತೆಗೆ ವೀಡಿಯೋದಲ್ಲಿ 20 ಲಕ್ಷ ರೂಪಾಯಿ ಹಣವನ್ನು ಕೊಡುವ ದೃಶ್ಯವೂ ಇದೆ.

    ಕುಳ್ಳ ದೇವರಾಜ್ : ಹೇಳ್ತಿನಿ ಯಾರು ಅಂತ.. ಪಟ್ ಅಂತ ರೆಡಿ ಮಾಡಿ ಎಲ್ಲಾ ಮುಗಿಸಿಬಿಡೋಣ..
    ಗೋಪಾಲಕೃಷ್ಣ : ಯಾವ ತರ ಮಾಡುತ್ತಾರೋ ಸೈಲೆಂಟಾಗಿ ಮಾಡುತ್ತಾರೆ..
    ಕುಳ್ಳ ದೇವರಾಜ್ : ಸೈಲೆಂಟಾಗಿ ಮಾಡ್ತಾರೆ ನಿಂಗ್ ಯಾಕಣ್ಣ?
    ಗೋಪಾಲಕೃಷ್ಣ : ಪಕ್ಕಾ ತಾನೇ?
    ಕುಳ್ಳ ದೇವರಾಜ್ : ನಿನ್ನ ಕಥೆ ಕಟ್ಕೊ ನಾನು ಪಕ್ಕಾ ಮಾಡುಸ್ತೀನಿ. ಒಂದು ಹೊಡೆದವನಿಗೆ ಇನ್ನೊಂದು ಹೊಡೆಯೋದು ಕಷ್ಟಾನಾ? ಸಲ್ಪ ರಿಸ್ಕ್ ಆಗುತ್ತೆ. ಒಟ್ಟಿನಲ್ಲಿ ಡಿಪಾರ್ಟ್‍ಮೆಂಟದ್ದು ನಿನ್ನ ಇಂಚಾರ್ಜ್  ಡಿಪಾರ್ಟ್‍ಮೆಂಟ್ ಏನ್ ಮಾಡ್ತಾರೆ..
    ಗೋಪಾಲಕೃಷ್ಣ : ಡಿಪಾರ್ಟ್‍ಮೆಂಟ್‍ದು ಏನಿದೆ?

    ಕುಳ್ಳ ದೇವರಾಜ್ : ಒಂದೇಟು ಮುಟ್ಟಬಾರದು.. ಮಾಡಿ ಸೆರೆಂಡರ್ ಆಗ್ತಾರೆ.
    ಗೋಪಾಲಕೃಷ್ಣ : ಆದರೆ ಅವನು ಫಿನಿಶ್ ಆಗಿಬಿಡಬೇಕು. ಫುಲ್ಲು ಮರ್ಡರ್‌ ಅರ್ಧಂಬರ್ಧ ಇರಬಾರದು
    ಕುಳ್ಳ ದೇವರಾಜ್ : ಫಿನಿಶ್ ಆಗ್ತಾನೆ ಅಣ್ಣ, ಮಾಡಿ ಅವನ ಮೇಲೆ ಹೇಳೋ ತರ ಮಾಡೋಣ.
    ಗೋಪಾಲಕೃಷ್ಣ : ಅವನ ಮೇಲೆನೆ ಹೇಳಬೇಕು.
    ಕುಳ್ಳ ದೇವರಾಜ್ : ಅವರಿಗೂ ಅವನ ಮೇಲೆ ಕೋಪ ಇದೆ. ಅರ್ಥ ಆಯ್ತಾ. ಯಾವುದೋ 2-3 ಜಮೀನಿನ ಮೇಲೆ ಕೈ ಹಾಕಿ ಥಣಿಸಂದ್ರ ಕಡೆ ಇದು ಮಾಡವ್ರೆ.. ರೆಡಿ ಮಾಡ್ತಿನಿ ಅರ್ಥ ಆಯ್ತಾ.
    ಗೋಪಾಲಕೃಷ್ಣ : ಓಕೆ ಮಾಡಿಸು.
    ಕುಳ್ಳ ದೇವರಾಜ್ : ಕೊಡು ಅಡ್ವಾನ್ಸ್ ಎಷ್ಟು ಕೊಡ್ತಿಯಾ?

    ಗೋಪಾಲಕೃಷ್ಣ: ಮಾಡಿಸು ಕೊಡ್ತಿನಿ. ಅರೇಂಜ್ ಮಾಡ್ತಿನಿ, ಹೌದಾ, ಪ್ಲ್ಯಾನ್ ರೆಡಿನಾ ಹಾಗಾದ್ರೆ?
    ಗೋಪಾಲಕೃಷ್ಣ: ಗಾಂಜಾ ಪ್ಲೇಯರ್ ಆದರೂ ಫಂಕ್ಷನ್‍ನಲ್ಲಿ ಮಾಡೋದಲ್ಲ. ಇವನು ಹೊಡೆದು ಬಿಸಾಕೋದು ಎಷ್ಟೊತ್ತು ಅವರಿಗೆ.
    ಕುಳ್ಳ ದೇವರಾಜ್ : ಇವಾಗ ಏನು ಅಣ್ಣ ಕತ್ತು ಕುಯ್ಕೊಂತಾರಾ ಏನು? ಇಲ್ಲಿ ಆಯ್ತಲ್ಲ ಸಿಗ್ನಲ್ಲಲ್ಲಿ ಕಡಬುಗೆರೆ ಸೀನಂದು ಹಂಗೆ ರೆಡಿ ಮಾಡ್ಕೊ.. ಢಮ್ ಅನ್ನಿಸೋಣ.
    ಗೋಪಾಲಕೃಷ್ಣ : ಕಾರಲ್ಲಿ ಹೋಗೋವಾಗ ಮಾಡಬಾರದು.
    ಕುಳ್ಳ ದೇವರಾಜ್ : ಅದು ಸಕ್ಕತ್ತಾಗ್ ಮಾಡಿದೆ ನೀನು ಪ್ಲಾನ್, ಹೆಂಗೋ ನಮಗೆಲ್ಲಾ ಗೊತ್ತು ತಗೋ.. ನೋಡು ಹಂಗೆ ಮಾಡಬೇಕು, ಸೈಲೆಂಟಾಗಿ.

    ಗೋಪಾಲಕೃಷ್ಣ : ಉಳಿಬಾರ್ದು ಅರ್ಧಂಬರ್ಧ ಇದ್ರೆ ಕಷ್ಟ ಆಗುತ್ತೇ. ಫಿನಿಷ್ ಆಗಿಬಿಡಬೇಕು.
    ಕುಳ್ಳ ದೇವರಾಜ್ : ನೀನು ಎಲ್ಲಾ ಕರೆಕ್ಟಾಗಿ ಮಾಡಿದೆ ಲಾಸ್ಟ್ ಟೈಂ ಆದರೆ ಹಾಸ್ಪಿಟಲ್ ಅಲ್ಲಿ ಸ್ವಲ್ಪ ಯಾಮಾರ್ ಬಿಟ್ಟೆ ಅವನು ಕಡಬಗೆರೆ ಹತ್ತಿರ. ನೀನಾಗಿ ನೀನೇ ಹೆಸರು ಹೇಳ್ಬಿಟ್ಟೆ ಅವನು ಹೇಳಿಲ್ಲ. ಮಿ** ನನ್ನ ಮಗ ಆವಾಗ ಕೇಸ್ ಸ್ವಲ್ಪ ಲೂಸ್ ಆಯ್ತು.
    ಗೋಪಾಲಕೃಷ್ಣ : ಕೇಸ್ ಲೂಸ್ ಆಗಕ್ಕೆ ಪೊಲೀಸರಿಗೆ ಅವರ ಮೇಲೆ ನಂಬಿಕೆ ಇರಲಿಲ್ಲ. ಕಡಬಗೆರೆ ಅವರು ಬರೀ ಪೊಲೀಸ್ ಅವರ ಮೇಲೆ ಕೇಸ್ ಹಾಕ್ತಾ ಇದ್ದರು. ಎಸ್‍ಪಿ ಡಿಸಿಪಿ ಅಂತವರ ಮೇಲೆ ಕೇಸ್ ಹಾಕಿ ಬಿಟ್ಟಿದ್ದಾರೆ. ಅದಕ್ಕೆ ಪೊಲೀಸರು ಅಪೋಸಿಟ್ ಇದ್ದರು. ಹರ್ಷ ಡಿಸಿಪಿ ನನಗೆ ಹೇಳಿದ ಸರ್ ಯಾಕೆ ಹೋಗಿ ಹೋಗಿ ಈ ನನ್ನ ಮಕ್ಕಳಿಗೆ ಸಪೋರ್ಟ್ ಮಾಡುತ್ತೀರಾ ಸರ್, ಸರಿ ಇಲ್ಲ ಇವರು ಕಚಡಾ ನನ್ನ ಮಕ್ಕಳು. ಬ್ಯಾಗ್ರೌಂಡ್ ಗೊತ್ತಿಲ್ಲ ಸರ್ ನಿಮಗೆ. ಇಲ್ಲ ಅಂದಿದ್ರೆ ಇನ್ನಷ್ಟು ಮಾಡಿಸುತ್ತಿದ್ದೆ. ನೋಡು ಹುಷಾರಾಗಿ ಐಡಿಯಾ ಮಾಡು.

    ಕುಳ್ಳ ದೇವರಾಜ್ : ಮಾಡೋಣ ಒಂದ್ 15 ದಿವಸ ಅಲ್ಲ, 6 ತಿಂಗಳು ಆಗಲಿ. ನಿಧಾನಕ್ಕೆ ರೆಡಿ ಮಾಡಿ ಹುಡುಗರನ್ನು ಫಿಲ್ಟರ್ ಮಾಡಬೇಕು. ಎಣ್ಣೆ ಇರಬಾರದು, ಗಾಂಜಾ ಇರಬಾರದು ಅವರಿಗೆ ಜಿದ್ದು ಇರಬೇಕು.
    ಗೋಪಾಲಕೃಷ್ಣ : ಜಿದ್ದು ಇರಬೇಕು, ಆಮೇಲೆ ಒಳ್ಳೆಯ ಜಾಗ ನೋಡಿ ಕೊಂಡು ತೋಟ ಅಂತ ಜಾಗ ನೋಡಿಕೊಂಡು.. ಅಂತ ಕಡೆ ನೊಡ್ಕೊಬೇಕು.
    ಗೋಪಾಲಕೃಷ್ಣ: ಅದನ್ನೆಲ್ಲಾ ಒಂದು ತಿಂಗಳು 2 ತಿಂಗಳಾದ್ರೂ ಪರವಾಗಿಲ್ಲ
    ಕುಳ್ಳ ದೇವರಾಜ್: 3 ಜನ ಟೀಂ ಇದೆ ಅದರಲ್ಲಿ ಫಿಲ್ಟರ್ ಮಾಡ್ಕೊಬೇಕು. ಕರೆಕ್ಟಾಗಿ ಇರೋರನ್ನ ಖಡಕ್ಕಾಗಿ ಇರುವವರನ್ನು ಮಾಡ್ಕೊಂಡು.

    ಕುಳ್ಳ ದೇವರಾಜ್: ವಾಕಿಂಗ್ ಬರ್ತಾನಾ..
    ಗೋಪಾಲಕೃಷ್ಣ : ವಾಕಿಂಗ್ ಬರ್ತಾನೆ.. 7-8 ಗಂಟೆಗೆ.. ಅಲ್ಲಿ ಜಾಸ್ತಿ ಡೀಲಿಂಗ್ಸ್ ಇವಾಗ.. ತೋಟದಲ್ಲಿ..

    ಕುಳ್ಳ ದೇವರಾಜ್ : ಮಾಡೋಣ ಬಿಡು, ನೀನು ದುಡ್ಡು ರೆಡಿ ಮಾಡ್ಕೊ ಕೆಲಸ ನಮ್ಮದು ಇರಲಿ.

    ಗೋಪಾಲಕೃಷ್ಣ : ನೀನು ಫಸ್ಟ್ ಕ್ಲೀನಾಗಿ ಪ್ಲ್ಯಾನ್ ಮಾಡ್ಕೊ.

    ಗೋಪಾಲಕೃಷ್ಣ : ಎರಡು ಏಟಲ್ಲಿ ಹೋಗಬೇಕು..
    ಕುಳ್ಳ ದೇವರಾಜ್ : ಹೈದರಾಬಾದ್‌ನಿಂದ ಶಾರ್ಪ್‌ ಶೂಟರ್ ಕರೆಸುತ್ತಾರೆ, ಹೊಡೆಯುವುದು ಅವರು ಹೋಗುವುದು ಇವರು. ಶಾರ್ಪ್ ಶೂಟರ್ ಕರೆಸಿ ಬಿಟ್ಟು ಓಡ್ಸೋದು.

    ಗೋಪಾಲಕೃಷ್ಣ : ಆಯ್ತಣ್ಣ., ಹೊರಟೋಯ್ತು ಅಣ್ಣ ಅನ್ನಬೇಕು.
    ಕುಳ್ಳ ದೇವರಾಜ್ : ಫಸ್ಟ್ ಕೊಡಿಲ್ಲಿ ಕಾಸು.

    ಗೋಪಾಲಕೃಷ್ಣ : ಇವನು ಯಾವ ಲೆಕ್ಕ ಹೇಳು. ಸಿಲಿಂಡರ್ ತಗೊಂಡು ಬಂದು ಒಬ್ಬನೇ ತಗೊಂಡು ಬಂದ್ ಢಮ್ ಅನ್ಸಿದರೆ ಆಯ್ತು.
    ಕುಳ್ಳ ದೇವರಾಜ್ : ಆಗಲಿ ಕಾಸು ಬೇಡವಾ..?

    ಕುಳ್ಳ ದೇವರಾಜ್ : ಒಬ್ಬನೇ ಇದ್ದಾಗ ಮಾಡ್ತಿವೋ… 10 ಜನ ಇದ್ದಾಗ ಮಾಡುತ್ತಿವೋ ನಿನಗ್ಯಾಕೆ..
    ಗೋಪಾಲಕೃಷ್ಣ : 10 ಜನ ಬೇಡ ಸೈಲೆಂಟಾಗಿ ಮಾಡಿಸು, ತೋಟದಲ್ಲಿ ಕ್ಯಾಮೆರಾ ಇರಲ್ಲ.. ಟಿಂಗ್ ಟಿಂಗ್ ಟಿಂಗ್ ಅಂತ ಹಾರಿಸಬಹುದು.
    ಕುಳ್ಳ ದೇವರಾಜ್ : ಕ್ಯಾಮರಾ ಇರಲಿ, ಬಿಡಲಿ. ನೀನು ಪಟ್ಟಂತಾ ರೆಡಿ ಮಾಡು. 5 ಲಕ್ಷ ಕೊಡು ಅಡ್ವಾನ್ಸ್.
    ಗೋಪಾಲಕೃಷ್ಣ : ಆಯ್ತು. ಅಡ್ವಾನ್ಸ್ ಕೊಟ್ಟರೆ ಎಷ್ಟು ದಿನಕ್ಕೆ?

    ಕುಳ್ಳ ದೇವರಾಜ್ : 20 ಇದೆ..
    ಗೋಪಾಲಕೃಷ್ಣ : ಇದು ಎಲ್ಲಾ 2 ಲಕ್ಷ ಇದೆ.. ಇದು 1 ಲಕ್ಷ…
    ಕುಳ್ಳ ದೇವರಾಜ್ : ಪಕ್ಕಾನಾ..?  500 ಆದ್ರೂ ಎಣಿಸು.
    ಗೋಪಾಲಕೃಷ್ಣ : ಇಲ್ಲಾಪ್ಪ ಎಣಿಸು ಎಣಿಸು..
    ಕುಳ್ಳ ದೇವರಾಜ್ : ಯಾವುದು ಲೆಕ್ಕಾ ಹಾಕೋದು..
    ಗೋಪಾಲಕೃಷ್ಣ : ಅಲ್ಲೇ ಇದೆಯಲ್ಲ..

    ಕುಳ್ಳ ದೇವರಾಜ್ : ಇದು 20 ಸಾವಿರ ಇದೆಯಲ್ಲ.. ಮಿಷಿನ್ ಅಲ್ಲಿ ಲೆಕ್ಕಾ ಹಾಕಿಸಿಕೊಂಡು ಬರಲಾ..?
    ಗೋಪಾಲಕೃಷ್ಣ: ಏ.. ಹಾಕಪ್ಪ?
    ಗೋಪಾಲಕೃಷ್ಣ: 2 ಲಕ್ಷದ 40 ಆಯ್ತು.. ಅದು ಸೇರಿ. ಎರಡೂ ವರೆ.
    ಗೋಪಾಲಕೃಷ್ಣ: ಡಿಸಿಪಿ ಹರ್ಷ ಇದ್ದರು. ನಾನು ಹೇಳಿದಂತೆ ಕೇಳ್ತಾ ಇದ್ರು..
    ಕುಳ್ಳ ದೇವರಾಜ್: ಹರ್ಷ ಸರ್ ಅಲ್ವಾ? ಇನ್ನೊಬ್ಬರು ಯಾರು ನಾರಾಯಣ ಅಂತಾ ಹೇಳ್ತಾ ಇದ್ರಿ
    ಗೋಪಾಲಕೃಷ್ಣ: ಅವರು ಈ ಕೇಸಿಗೆ  ಎನ್‌ಕ್ವೈರಿ ಆಫೀಸರ್ ಆಗಿ ಬಂದಿದ್ದರು.
    ಕುಳ್ಳ ದೇವರಾಜ್ : ಅವರು ಫುಲ್ ಸಪೋರ್ಟ್ ಅಲ್ವಾ ನಿಮಗೆ. ಅದುಕ್ಕಾದ್ರೆ 25 ಲಕ್ಷ ಖರ್ಚು ಮಾಡಿದ್ದೀಯಾ? ಇದಕ್ಕೆ ಕೊಡು ಅಂದ್ರೆ ಅಳ್ತಿಯಾ?
    ಗೋಪಾಲಕೃಷ್ಣ: 25 ಅಲ್ಲ 50 ಕೊಡ್ತಿನಿ, ತಲೆ ಕೆಡಿಸ್ಕೊಬೇಡ.
    ಗೋಪಾಲಕೃಷ್ಣ: ನಾನು ಎಲ್ಲೂ ಬರಬಾರದು. ರಿಮೋಟ್ ಥರ ಆಗ್ಬೇಕು. ಕುತ್ತಿಗೆಗೆ ಬಂದರೂ ನಮ್ಮ ವಿಷಯ ಬರಬಾರದು. ನಾವು ಕರೆಕ್ಟಾಗ್ ಇದ್ದಾಗ ಎಲ್ಲಿ ಎಲ್ಲಿ ಏನು ಬೇಕು. ಎಲ್ಲಾ ಕಡೆ ಮುಚ್ಚಿ ಹಾಕಬಹುದು.

    ಕುಳ್ಳ ದೇವರಾಜ್: ಅಣ್ಣಾ ಇದು ಯಾವದೋ ಕೆಲ್ಸ ಸ್ಟಾರ್ಟ್ ಮಾಡಿಸಿ ಬಿಟ್ಟು ನೀನು
    ಗೋಪಾಲಕೃಷ್ಣ: ಮಾಡಯ್ಯ ಎಲ್ಲಿ ರಿಸಲ್ಟ್ ಬರಲಿಲ್ಲ ಇನ್ನ.
    ಕುಳ್ಳ ದೇವರಾಜ್: ಏನು ಹೊಡೆದ ಮೇಲೆ ಕಾಸ್ ಕೊಡ್ತಾರಾ? ಯಾರಾದ್ರೂ?
    ಗೋಪಾಲಕೃಷ್ಣ: ರಿಸಲ್ಟ್ ಇನ್ನೂ ಇಲ್ಲ.
    ಕುಳ್ಳ ದೇವರಾಜ್: ನಾವು ಕೈಯಿಂದ ಕೊಡಬೇಕು ಅಷ್ಟೆ. ನೀನ್ ಮಾಡೋ ಕೆಲಸ.
    ಗೋಪಾಲಕೃಷ್ಣ: ಕೊಡು, ಕೆಲಸ ಆದ ಮೇಲೆ ಅದರ ನೂರಷ್ಟು ತಗೊತಿಯಾ? ಅದು ಕಥೆನೇ ಬೇರೆ. ನೀನು ಎಲ್ಲೋ ಹೋಗ್ ಬಿಡ್ತಿಯಾ? ನನ್ನ ಜೊತೆ ಇಟ್ಟುಕೊಂಡು ಡಿಕೆ ಹತ್ತಿರ ಹೋಗ್ತಿನಿ.

  • ಪಕ್ಕಾ ಪ್ಲಾನ್ ಮರ್ಡರ್ – ಪತ್ನಿ, ಮಗ ಸೇರಿ ಆ್ಯಕ್ಸಿಡೆಂಟ್ ರೀತಿ ರೈತನ ಹತ್ಯೆ

    ಪಕ್ಕಾ ಪ್ಲಾನ್ ಮರ್ಡರ್ – ಪತ್ನಿ, ಮಗ ಸೇರಿ ಆ್ಯಕ್ಸಿಡೆಂಟ್ ರೀತಿ ರೈತನ ಹತ್ಯೆ

    – ಮರ್ಡರ್ ಮಿಸ್ಟರಿಯನ್ನು ಬೇಧಿಸಿದ ಪೊಲೀಸರು

    ಬೆಂಗಳೂರು: ಪತ್ನಿ ಹಾಗೂ ಮಗ ಸೇರಿ ಸುಪಾರಿ ಕೊಟ್ಟು ರೈತನನ್ನು ಕೊಲೆ ಮಾಡಿಸಿದ್ದಾರೆ. ಅಚ್ಚರಿ ವಿಚಾರ ಎಂಬಂತೆ ಕೊಲೆ ಬಗ್ಗೆ ಯಾರಿಗೂ ಸುಳಿವು ಸಿಗಬಾರದು, ಅಪಘಾತದ ರೀತಿ ಕೊಲೆಯಾಗಬೇಕು. ಇದಕ್ಕೆ ಆಯ್ಕೆ ಮಾಡಿಕೊಂಡಿದ್ದು ಸಿಸಿಟಿವಿ ಕ್ಯಾಮೆರಾಗಳಿಲ್ಲದ ರಸ್ತೆ. ಭಯಾನಕ ಕೊಲೆ ಪ್ರಕರಣವನ್ನು ವೈಟ್ ಫೀಲ್ಡ್ ಪೊಲೀಸರು ಬೇಧಿಸಿದ್ದಾರೆ.

    ಜನವರಿ 21ರಂದು 58 ವರ್ಷದ ರೈತ ಸುಬ್ಬರಾಯಪ್ಪ ಕೊಲೆಯಾಗಿದ್ದು, ವ್ಯಕ್ತಿಯೊಬ್ಬರನ್ನು ಭೇಟಿಯಾಗಲು ತೆರಳುವಾಗ ಕಾರ್ ಗುದ್ದಿಸಿ ಕೊಲೆ ಮಾಡಲಾಗಿದೆ. ಆದರೆ ಸುಬ್ಬರಾಯಪ್ಪ ಅವರ ಮಗ ದೇವರಾಜ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ಸಹ ಬೈಕ್‍ನಿಂದ ಬಿದ್ದು ಗಾಯಗೊಂಡು ಸುಬ್ಬರಾಯಪ್ಪ ಸಾವನ್ನಪ್ಪಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಬಳಿಕ ಪೊಲೀಸರು ಅಪಘಾತ ನಡೆದ ಸ್ಥಳ ಪರೀಕ್ಷೆಗೆ ತೆರಳಿದ್ದು, ಈ ವೇಳೆ ಅವರಿಗೆ ಅನುಮಾನ ಬಂದಿದೆ. ರಸ್ತೆಯಲ್ಲಿ ತುಂಬಾ ಪ್ಯಾಚ್‍ಗಳಿವೆ, ಅಲ್ಲದೆ ರೋಡ್ ಹಂಪ್ಸ್ ಗಳಿವೆ. ಅಲ್ಲದೆ ಈ ರಸ್ತೆಯಲ್ಲಿ ಯಾವುದೇ ರೀತಿಯ ಸಿಸಿಟಿವಿ ಕ್ಯಾಮರಾಗಳಿಲ್ಲ ಎಂಬುದನ್ನು ಪೊಲೀಸರು ಅರಿತಿದ್ದಾರೆ. ಬಳಿಕ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಳವಾದ ತನಿಖೆ ನಡೆಸಿದ್ದು, ಪ್ರಕರಣದ ಸತ್ಯವನ್ನು ಪತ್ತೆಹಚ್ಚಿದ್ದಾರೆ.

    ಅದೇ ರಸ್ತೆಯ ಇನ್ನೊಂದು ಬದಿಯಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಗಮನಿಸಿದ್ದು, ಈ ವೇಳೆ ಅಪಘಾತ ನಡೆದ ಸ್ಥಳಕ್ಕೆ ರಿಜಿಸ್ಟ್ರೇಶನ್ ನಂಬರ್ ಇಲ್ಲದ ಎಸ್‍ಯುವಿ ಕಾರ್ ಹೋಗಿರುವುದನ್ನು ಗಮನಿಸಿದ್ದಾರೆ. ಬಳಿಕ ಪೊಲೀಸರು ಕಾರ್ ಮಾಲೀಕನನ್ನು ಟ್ರೇಸ್ ಮಾಡಿದ್ದು, ಬಾಡಿಗೆ ಕಂಪನಿಯ ಸ್ಟಿಕ್ಕರ್ ಆಧಾರದ ಮೇಲೆ ಅನಿಲ್ ಕುಮಾರ್ ಹಾಗೂ ಕಾರನ್ನು ಪತ್ತೆ ಹಚ್ಚಿದ್ದಾರೆ.

    ಬಳಿಕ ಕಾಲ್ ರೆಕಾರ್ಡ್ ದಾಖಲೆಗಳನ್ನು ಪರಿಶೀಲಿಸಿದ್ದು, ಅನಿಲ್ ಕುಮಾರ್ ಸಂತ್ರಸ್ತ ಸುಬ್ಬರಾಯಪ್ಪ ಅವರಿಗೆ ಕರೆ ಮಾಡಿ, ಕೃಷಿ ಪರಿಕರಗಳನ್ನು ಖರೀದಿಸುವ ನೆಪದಲ್ಲಿ ಆ ರಸ್ತೆಗೆ ಕರೆಸಿರುವುದು ಬೆಳಕಿಗೆ ಬಂದಿದೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಅನಿಲ್ ಕುಮಾರ್ ಕರೆ ಮಾಡಿದ ಫೋನ್‍ನ್ನು ಸುಬ್ಬರಾಯಪ್ಪ ಪತ್ನಿ ಯಶೋಧಮ್ಮ ಅವರಿಂದ ಪಡೆದಿದ್ದ. ಬಳಿಕ ಅನಿಲ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಯಶೋಧಮ್ಮ ಹಾಗೂ ಮಗ ದೇವರಾಜ್ 6 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದರು ಎಂದು ಅನಿಲ್ ತಪ್ಪೊಪ್ಪಿಕೊಂಡಿದ್ದಾನೆ.

    ಸುಬ್ಬರಾಯಪ್ಪ ಅನೈತಿಕ ಸಂಬಂಧ ಹೊಂದಿದ್ದು, ಇದರಿಂದಾಗಿ ಆಸ್ತಿ ಕಡಿಮೆ ಸಿಗುತ್ತದೆ ಎಂಬ ಉದ್ದೇಶದಿಂದ ಯಶೋಧಮ್ಮ ಹಾಗೂ ಮಗ ದೇವರಾಜ್ ಕೊಲೆ ಮಾಡಲು ಪ್ಲಾನ್ ಮಾಡಿದ್ದಾರೆ. ಬಳಿಕ ಅನಿಲ್‍ಗೆ 6 ಲಕ್ಷ ರೂ.ಗೆ ಸುಪಾರಿ ನೀಡಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.

  • ಮಗನನ್ನೇ ಕೊಲ್ಲಲು 2 ಲಕ್ಷಕ್ಕೆ ಸುಪಾರಿ – ಪಾಪಿ ತಂದೆ ಸೇರಿ 6 ಮಂದಿ ಅರೆಸ್ಟ್

    ಮಗನನ್ನೇ ಕೊಲ್ಲಲು 2 ಲಕ್ಷಕ್ಕೆ ಸುಪಾರಿ – ಪಾಪಿ ತಂದೆ ಸೇರಿ 6 ಮಂದಿ ಅರೆಸ್ಟ್

    – ಏರಿ ಮೇಲೆ ಮಗನಿಗೆ ಗುಂಡು ಹೊಡೆಸಿದ್ದ ಅಪ್ಪ

    ಹಾಸನ: ಆಸ್ತಿ ವಿವಾದದ ವಿಚಾರವಾಗಿ ಮಗನನ್ನೇ ಕೊಲೆ ಮಾಡಿಸಿದ ಅಪ್ಪನನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಕೆರೆ ಏರಿ ಮೇಲೆ ಕಳೆದ ತಿಂಗಳು ಕೊಲೆಯಾಗಿತ್ತು. ಆಗಸ್ಟ್ 27ರ ರಾತ್ರಿ ಬೈಕಿನಲ್ಲಿ ಬರುತ್ತಿದ್ದ ಪುನೀತ್(26) ಎಂಬಾತನನ್ನು ಶೂಟೌಟ್ ಮಾಡಲಾಗಿತ್ತು. ಕುಟುಂಬ ಕಲಹ ಮತ್ತು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿದ್ದು, ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

    ಬಂಧಿತರನ್ನು ಪುನೀತ್ ತಂದೆ ಹೇಮಂತ್, ಕಾಂತರಾಜು, ಪ್ರಶಾಂತ್, ಸುನಿಲ್, ನಂದೀಶ, ನಾಗರಾಜ್ ಎಂದು ಗುರುತಿಸಲಾಗಿದೆ. ಮಗನ ಜೀವ ತೆಗೆಯಲು ನಾಲ್ಕೈದು ತಿಂಗಳಿಂದ ಪ್ಲಾನ್ ಮಾಡಿದ್ದ ತಂದೆ ಹೇಮಂತ್, ಇದಕ್ಕಾಗಿ 2 ಲಕ್ಷ ರೂಪಾಯಿಗೆ ಸುಪಾರಿ ಕೂಡ ನೀಡಿದ್ದ. ಕೆರೆ ಏರಿ ಮೇಲೆ ಆರೋಪಿಗಳಾದ ಸ್ವಾಮಿ, ನಂದೀಶ್ ಮತ್ತು ಕಾಂತರಾಜು ಬಂದೂಕಿನಿಂದ ಶೂಟ್ ಮಾಡಿ ಕೊಲೆ ಮಾಡಿದ್ದರು. ಇನ್ನಿಬ್ಬರು ಪುನೀತ್ ಬೈಕ್‍ನಲ್ಲಿ ಬರುತ್ತಿರುವ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡಿದ್ದರು.

    ಪುನೀತ್ ಕೊಲೆಯ ನಂತರ ಆತನ ತಾಯಿ ಯಶೋಧಮ್ಮ ದೂರು ನೀಡಿದ್ದು, ತಂದೆ ಹೇಮಂತ್ ಮತ್ತು ಪುನೀತ್ ನಡುವೆ ಕೆಲ ವರ್ಷಗಳಿಂದ ಆಸ್ತಿ ಹಂಚಿಕೆ ವಿಚಾರವಾಗಿ ವೈಷಮ್ಯ ಇತ್ತು. ಈ ಕಾರಣದಿಂದ ಪತಿ ಹಾಗೂ ಇನ್ನೊಬ್ಬ ಮಗ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಆರೋಪದ ಮೇರೆಗೆ ತಂದೆ ಹೇಮಂತ್ ಅನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆಯ ವಿಚಾರ ಹೊರಗೆ ಬಂದಿದೆ.

    2 ಲಕ್ಷ ರೂ.ಗೆ ಮಗನನ್ನೇ ಡೀಲ್ ಮಾಡಿದ್ದ ತಂದೆ ಮುಂಗಡವಾಗಿ 5 ಸಾವಿರ ನೀಡಿದ್ದ ಎನ್ನಲಾಗಿದೆ. ಈಗ ಪಾಪಿ ತಂದೆ ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 5 ಮೊಬೈಲ್, 1.88 ಲಕ್ಷ ರೂ ನಗದು ವಶಕ್ಕೆ ಪಡೆದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್.ಪಿ ಶ್ರೀನಿವಾಸ್ ಗೌಡ, ಕಗ್ಗಂಟಾಗಿದ್ದ ಪ್ರಕರಣ ಬೇಧಿಸಿದ ತನಿಖಾ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

  • ತಂದೆಯೇ ಸುಪಾರಿ ಕೊಟ್ಟು ಮಗನನ್ನು ಕೊಲೆ ಮಾಡಿಸಿದ್ದಾರೆ: ತಾಯಿ ಆರೋಪ

    ತಂದೆಯೇ ಸುಪಾರಿ ಕೊಟ್ಟು ಮಗನನ್ನು ಕೊಲೆ ಮಾಡಿಸಿದ್ದಾರೆ: ತಾಯಿ ಆರೋಪ

    – ತೆಂಗಿನಕಾಯಿ ಕೆಡವಿದ್ದೆ ತಪ್ಪಾಯ್ತಾ?

    ಹಾಸನ: ಚನ್ನರಾಯಪಟ್ಟಣದ ಬೇಡಿಗನಹಳ್ಳಿ ಸಮೀಪ ನಡೆದ ಪುನೀತ್ ಕೊಲೆಯ ಹಿಂದೆ ತಂದೆ ಹಾಗೂ ಸೋದರನ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಪುನೀತನ ತಾಯಿ ಯಶೋಧಮ್ಮ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ತಂದೆ ಹೇಮಂತ್ ಮತ್ತು ಪುನೀತ್ ನಡುವೆ ಕೆಲ ವರ್ಷಗಳಿಂದ ಆಸ್ತಿ ಹಂಚಿಕೆ ವಿಚಾರವಾಗಿ ವೈಷಮ್ಯ ಇತ್ತು. ಈ ಕಾರಣದಿಂದ ಪತಿ ಹಾಗೂ ಇನ್ನೊಬ್ಬ ಮಗ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ತಮ್ಮ ದೂರಿನಲ್ಲಿ ತಾಯಿ ಯಶೋಧಮ್ಮ ಮನವಿ ಮಾಡಿದ್ದಾರೆ.

    ಮೂರು ವರ್ಷಗಳಿಂದ ತಂದೆ ಮತ್ತು ಪುನೀತ್ ಬೇರೆಯಾಗಿದ್ದರು. ಪುನೀತನೊಂದಿಗೆ ತಾಯಿ ಯಶೋಧಮ್ಮ ವಾಸವಾಗಿದ್ದರು ಈ ನಡುವೆ ತೋಟದಲ್ಲಿ ತೆಂಗಿನಕಾಯಿ ಕೆಡವಿದ್ದರಿಂದ ತಂದೆ ಹೇಮಂತ್ ತಮ್ಮ ಹಿರಿಯ ಮಗ ಪುನೀತ್‍ಗೆ ವಾರ್ನಿಂಗ್ ಮಾಡಿದ್ದರು. ಈ ಕಾರಣದಿಂದಲೇ ಕೊಲೆ ಮಾಡಲಾಗಿದೆ ಎಂದು ಯಶೋಧಮ್ಮ ದೂರು ನೀಡಿದ್ದು, ತಂದೆಯಿಂದಲೇ ಮಗನ ಹತ್ಯೆ ಆಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಶಂಕಿತ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ಸುಪಾರಿಕೊಟ್ಟು ತಾಯಿಯ ಕೊಲೆ – ಮಗನ ಕೃತ್ಯಕ್ಕೆ ತಂದೆ ಸಾಥ್

    ಸುಪಾರಿಕೊಟ್ಟು ತಾಯಿಯ ಕೊಲೆ – ಮಗನ ಕೃತ್ಯಕ್ಕೆ ತಂದೆ ಸಾಥ್

    – ಅಪ್ಪ, ಮಗ ಸೇರಿ ಐವರು ಅರೆಸ್ಟ್

    ಬೆಂಗಳೂರು: ಸುಪಾರಿಕೊಟ್ಟು ತಾಯಿಯನ್ನು ಕೊಲೆ ಮಾಡಿಸಿದ್ದ ಮಗ ಮತ್ತು ಪುತ್ರನ ಕೃತ್ಯಕ್ಕೆ ಸಹಾಯ ಮಾಡಿದ್ದ ತಂದೆಯನ್ನು ಸೇರಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಗೀತಾ ಕೊಲೆಯಾದ ಮಹಿಳೆ. ವರುಣ್, ನವೀನ್ ಕುಮಾರ್, ನಾಗರಾಜು, ಪ್ರದೀಪ್ ಮತ್ತು ಅಂಜನಿ ಬಂಧಿತ ಆರೋಪಿಗಳು. ಆಸ್ತಿಗಾಗಿ ಪತಿ ಅಂಜನಿ ಮತ್ತು ಮಗ ವರುಣ್ ಸೇರಿ ಗೀತಾಳನ್ನು ಕೊಲೆ ಮಾಡಲು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದರು.

    ಇದೇ ತಿಂಗಳ 16 ರಂದು ಮುಂಜಾನೆ ಮನೆಗೆ ನುಗ್ಗಿ ಗೀತಾಳನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆ ಮಾಡಿದ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಈ ಘಟನೆ ಸಂಬಂಧ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿ ವರುಣ್ ತಾಯಿ ಗೀತಾಳಿಗೆ ಗೊತ್ತಿಲ್ಲದೇ ಆಸ್ತಿ ಮಾರಾಟ ಮಾಡಿಕೊಂಡಿದ್ದನು. ಅಲ್ಲದೇ ಮಾರಾಟ ಮಾಡಿದ ಆಸ್ತಿಯಲ್ಲಿ ಬಂದಂತಹ ಹಣವನ್ನು ಕೂಡ ತಾಯಿಗೆ ಕೊಡದೆ ವರುಣ್ ಬಳಸಿಕೊಂಡಿದ್ದ. ಹೀಗಾಗಿ ತಾಯಿ ಗೀತಾ ಮಗ ವರುಣ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.

    ತಾಯಿ ನಡೆಯಿಂದ ಕೋಪಗೊಂಡಿದ್ದ ಮಗ ವರುಣ್ ತಂದೆ ಅಂಜನಿಯ ಸಹಾಯ ಪಡೆದುಕೊಂಡು ಹೆತ್ತ ತಾಯಿ ಹತ್ಯೆಗೆ ನವೀನ್ ಕುಮಾರ್, ನಾಗರಾಜು, ಪ್ರದೀಪ್ ಮೂವರಿಗೆ ಸುಪಾರಿ ಕೊಟ್ಟಿದ್ದನು. ಅದರಂತೆಯೇ ಮೂವರು ಇದೇ ತಿಂಗಳು 16 ರಂದು ಮುಂಜಾನೆ ಮನೆಗೆ ನುಗ್ಗಿ ಗೀತಾಳನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

  • ಪತಿ ಕೊಂದವರ ಮುಗಿಸಲು 1 ಕೋಟಿಗೆ ಸುಪಾರಿ ಕೊಟ್ಟ ಪತ್ನಿ

    ಪತಿ ಕೊಂದವರ ಮುಗಿಸಲು 1 ಕೋಟಿಗೆ ಸುಪಾರಿ ಕೊಟ್ಟ ಪತ್ನಿ

    – ಜೈಲಿನಲ್ಲೇ ರೆಡಿ ಆಯ್ತು ಸ್ಕೆಚ್, 9 ಮಂದಿಯ ಬಂಧನ

    ಬೆಂಗಳೂರು: ತನ್ನ ಪತಿಯನ್ನು ಕೊಂದವರನ್ನು ಕೊಲೆ ಮಾಡಿಸಲು ಮಹಿಳೆಯೋರ್ವಳು ಒಂದು ಕೋಟಿಗೆ ಸುಪಾರಿ ಕೊಟ್ಟು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

    ಹೌದು 2018ರಲ್ಲಿ ಕೊಲೆಯಾದ ತನ್ನ ಪತಿ ಗೋವಿಂದೇಗೌಡನ ಸಾವಿಗೆ ಪ್ರತಿಕಾರ ತೀರಿಸಕೊಳ್ಳಲು ಪತ್ನಿ ವರಲಕ್ಷ್ಮಿ ಸುಪಾರಿ ನೀಡಿದ್ದಾಳೆ. ಈ ಸಂಬಂಧ ಈಗ ರಾಜಗೋಪಾಲ ನಗರ ರೌಡಿಶೀಟರ್ ರಾಜ ಅಲಿಯಾಸ್ ಕ್ಯಾಟ್ ರಾಜನ 9 ಜನ ಸಹಚರರ ಬಂಧನವಾಗಿದೆ.

    2018ರಲ್ಲಿ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಗೋವಿಂದೇಗೌಡ ಕೊಲೆಯಾಗಿದ್ದ. ಈ ಕೊಲೆ ಸಂಬಂಧ 2016ರಲ್ಲಿ ಸಂಚು ರೂಪಿಸಿ ಚಿಕ್ಕತಿಮ್ಮೇಗೌಡ ಎಂಬುವರನ್ನು ವರಲಕ್ಷ್ಮಿ ಕೊಲೆ ಮಾಡಿಸಿದ್ದಳು. ಈ ಕೊಲೆ ತನಿಖೆ ಮಾಡುವಂತೆ ಚಿಕ್ಕತಿಮ್ಮೇಗೌಡನ ಸಹೋದರ ನಟರಾಜ್ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ದೂರುದಾರ ನಟರಾಜ್ ಮತ್ತು ಆತನ ಜೊತೆಯಲ್ಲಿದ್ದ ಹೇಮಂತ್‍ನನ್ನು ಕೊಲೆ ಮಾಡಿಸಲು ವರಲಕ್ಷ್ಮಿ ಸುಪಾರಿ ನೀಡಿದ್ದಾಳೆ.

    ವರಲಕ್ಷ್ಮಿ ರಾಜಗೋಪಾಲ ನಗರ ರೌಡಿಶೀಟರ್ ರಾಜ ಅಲಿಯಾಸ್ ಕ್ಯಾಟ್ ರಾಜ ಮತ್ತು ಹೇಮಿ ಅಲಿಯಾಸ್ ಹೇಮಂತ್‍ಗೆ ಸುಪಾರಿ ನೀಡಿದ್ದಾಳೆ. ಜೈಲಿನಲ್ಲಿ ಇದ್ದುಕೊಂಡೆ ಒಂದು ಕೋಟಿಗೆ ಡೀಲ್ ಕುದಿರಿಸಿದ್ದ ಕ್ಯಾಟ್ ರಾಜ, ತನ್ನ ಜೊತೆ ಜೈಲಿನಲ್ಲಿದ್ದ ಹೇಮಂತ್ ಸೋದರ ಚೇತು ಮತ್ತು ಸಹಚರರಿಂದ ಕೊಲೆ ಮಾಡಿಸಲು ಸ್ಕೆಚ್ ರೂಪಿಸಿದ್ದ. ಆದರೆ ಈಗ ತನಿಖೆ ವೇಳೆ ಈ ವಿಷಯ ಬೆಳಕಿಗೆ ಬಂದಿದ್ದು, ಪೊಲೀಸರು ಕೊಲೆಗೆ ಸ್ಕೆಚ್ ಹಾಕಿದ್ದ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.