Tag: Suntikoppa

  • ಕಲ್ಲುಗಳನ್ನು ಕಟ್ಟಿಕೊಂಡು ಕೆರೆಗೆ ಹಾರಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ

    ಕಲ್ಲುಗಳನ್ನು ಕಟ್ಟಿಕೊಂಡು ಕೆರೆಗೆ ಹಾರಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ

    ಮಡಿಕೇರಿ: ಕಳೆದ ಭಾನುವಾರದಿಂದ ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ಗ್ರಾಮದ ಸಮೀಪದ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ (Kushalnagar) ತಾಲೂಕಿನ ಸುಂಟಿಕೊಪ್ಪ (Suntikoppa) ಸಮೀಪದ ಸೆವೆಂತ್ ಮೈಲ್‌ನಲ್ಲಿ ನಡೆದಿದೆ.

    ಸೆವೆಂತ್ ಮೈಲ್ ನಿವಾಸಿ ಪೌಲ್ ಡಿಸೋಜ ಎಂಬವರ ಮೃತದೇಹ ಇಂದು ಬೆಳಗ್ಗೆ ಸೌಭಾಗ್ಯ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಇವರು ನಾಲ್ಕು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದು, ಎಲ್ಲಿಯೂ ಕಂಡುಬಾರದ ಹಿನ್ನೆಲೆ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ಮನೆಯವರು, ಪೊಲೀಸರು ಸೇರಿದಂತೆ ಗ್ರಾಮಸ್ಥರು ಹುಡುಕಾಟ ನಡೆಸುತ್ತಿದ್ದರು. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ – ಓರ್ವ ಸಾವು, 8 ಮಂದಿ ಗಂಭೀರ

    ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಆದರೆ ಇಂದು ಕೆರೆಯಲ್ಲಿ ಪೌಲ್ ಡಿಸೋಜರವರ ಮೃತದೇಹ ಪತ್ತೆಯಾಗಿದೆ. ಪತ್ತೆಯಾದ ದೇಹದಲ್ಲಿ ಕಲ್ಲುಗಳನ್ನು ಕಟ್ಟಿಕೊಂಡಿರುವುದು ಗೋಚರಿಸಿದೆ. ಹೀಗಾಗಿ ಇವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಮ್ಮನನ್ನು ನಿಂದಿಸ್ತಿದ್ದ ಮಾವನನ್ನೇ ಕೊಂದ ಅಳಿಯ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎರಡು ದಿನದಿಂದ ನಾಪತ್ತೆಯಾಗಿದ್ದ ಯುವಕ ಆತ್ಮಹತ್ಯೆ

    ಎರಡು ದಿನದಿಂದ ನಾಪತ್ತೆಯಾಗಿದ್ದ ಯುವಕ ಆತ್ಮಹತ್ಯೆ

    ಮಡಿಕೇರಿ: ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು (Kodagu) ಜಿಲ್ಲೆ ಸುಂಟಿಕೊಪ್ಪದಲ್ಲಿ (Suntikoppa) ನಡೆದಿದೆ.

    ಬಾಳೆಕಾಡು (Balekadu) ತೋಟದ ನಿವಾಸಿ ಕಪಾಲಿ ಮುರುಗೇಶ್ ಅವರ ಪುತ್ರ ವಿಜಯ (23) ಮೃತ ದುರ್ದೈವಿ. ಈತ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ. ಸೋಮವಾರ ಸಂಜೆ ತೋಟದ ಮರ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ತುಮಕೂರಿನ ಎಪಿಎಂಸಿಯಲ್ಲಿ ಕತ್ತು ಸೀಳಿ ಯುವಕನ ಹತ್ಯೆ

    ಕಾರ್ಮಿಕರು ಕೆಲಸ ಮಾಡಿ ತೆರಳುವ ವೇಳೆ ಯುವಕ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡುಬಂದಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಧಾರವಾಡವನ್ನು ಬೆಚ್ಚಿ ಬೀಳಿಸಿದ್ದ ಮರ್ಡರ್ ಪ್ರಕರಣ: ಪಿಸ್ತೂಲ್ ಕೊಟ್ಟವ ಅರೆಸ್ಟ್

  • ಮನೆಮುಂದೆ ನಿಲ್ಲಿಸಿದ್ದ ಕಾರನ್ನು ಹೆದ್ದಾರಿಗೆ ತಳ್ಳಿಕೊಂಡು ಬಂದ ಕಾಡಾನೆ

    ಮನೆಮುಂದೆ ನಿಲ್ಲಿಸಿದ್ದ ಕಾರನ್ನು ಹೆದ್ದಾರಿಗೆ ತಳ್ಳಿಕೊಂಡು ಬಂದ ಕಾಡಾನೆ

    ಮಡಿಕೇರಿ: ಕಾಡಾನೆಯೊಂದು (Wild Elephant) ದಾಳಿ ಮಾಡಿ ಮನೆಮುಂದೆ ನಿಲ್ಲಿಸಿದ್ದ ಕಾರನ್ನು (Car) ಹೆದ್ದಾರಿಗೆ ತಳ್ಳಿಕೊಂಡು ಬಂದಿರುವ ಘಟನೆ ಕುಶಾಲನಗರ (Kushalnagara) ತಾಲೂಕಿನ ಸುಂಟಿಕೊಪ್ಪ (Suntikoppa) ಸಮೀಪದ 7ನೇ ಹೊಸಕೋಟೆಯ ಮೆಟ್ನಳ್ಳದಲ್ಲಿ ನಡೆದಿದೆ.

    ಶನಿವಾರ ಮುಂಜಾನೆ 4:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಮೆಟ್ನಳ್ಳದ ರಾಷ್ಟ್ರೀಯ ಹೆದ್ದಾರಿ (National Highway) ಬದಿಯ ಮನೆಯ ಸಮೀಪದ ಖಾಲಿ ಜಾಗದಲ್ಲಿ ಸ್ವಿಫ್ಟ್ ಮತ್ತು ಸ್ಯಾಂಟ್ರೋ ಕಾರುಗಳು ನಿಲುಗಡೆಗೊಳಿಸಲಾಗಿತ್ತು. ಮೊದಲು ಕಾಡಾನೆ ಸ್ಯಾಂಟ್ರೋ ಕಾರಿನ ಮೇಲೆರಗಿದೆ. ನಂತರ ಸಾನಿಪ್ ಎಂಬವರ ಸ್ವಿಫ್ಟ್ ಕಾರಿನ ಮೇಲೆ ದಾಳಿ (Attack) ಮಾಡಿ ಹೆದ್ದಾರಿವರೆಗೆ ತಳ್ಳಿಕೊಂಡು ಬಂದಿದೆ. ಬಳಿಕ ಕಾರನ್ನು ಅಲ್ಲಿಯೇ ಬಿಟ್ಟು ಕಾಡಾನೆ ಅಲ್ಲಿಂದ ಕಾಲ್ಕಿತ್ತಿದೆ. ಇದರಿಂದಾಗಿ ಕಾರಿಗೆ ಸಣ್ಣಪುಟ್ಟ ಡ್ಯಾಮೇಜ್ ಆಗಿದೆ. ಇದನ್ನೂ ಓದಿ: ಕುಖ್ಯಾತ ಮನೆಗಳ್ಳರ ಅರೆಸ್ಟ್ – 20 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ 

    ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಕಾರಿನ ಮಾಲಿಕರಿಗೆ ಪರಿಹಾರಕ್ಕೆ ಅರ್ಜಿ ಹಾಕುವಂತೆ ಹೇಳಿ ತೆರಳಿದ್ದಾರೆ. ಇದನ್ನೂ ಓದಿ: ಮತದಾರರಿಗೆ ಗಿಫ್ಟ್ ಆಮಿಷ ಆರೋಪ – ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಡಿ.ಕೆ ಸುರೇಶ್ ವಿರುದ್ಧ ಕೇಸ್

  • ಸೋಮವಾರಪೇಟೆ-ಸುಂಟಿಕೊಪ್ಪ ಮಾರ್ಗ ತಾತ್ಕಾಲಿಕ ಸ್ಥಗಿತ!

    ಸೋಮವಾರಪೇಟೆ-ಸುಂಟಿಕೊಪ್ಪ ಮಾರ್ಗ ತಾತ್ಕಾಲಿಕ ಸ್ಥಗಿತ!

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮಳೆ ಎಡೆಬಿಡದೆ ಸುರಿಯುತ್ತದೆ. ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ಅಂತರ್ಜಲದಮಟ್ಟ ಹೆಚ್ಚಾಗಿ ರಸ್ತೆಮಧ್ಯ ಭಾಗ ಗುಂಡಿ ಬಿದ್ದಿದ್ದು, ಕುಸಿಯುವ ಹಂತಕ್ಕೆ ತಲುಪಿದೆ.

    ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ – ಮಾದಾಪುರ ರಸ್ತೆಯ ಸ್ವಸ್ಥ ಶಾಲೆ ಸಮೀಪ ಭೂಕುಸಿತವಾಗಿರುವ ರಸ್ತೆಯ ನಡುವೆ ಜಲ ಉಕ್ಕುತ್ತಿದು ರಸ್ತೆ ಮದ್ಯ ಭಾಗವೇ ಸಂಪೂರ್ಣ ಕುಸಿಯುವ ಹಂತಕ್ಕೆ ತಲುಪಿದೆ. ಹೀಗಾಗಿ ಸುಂಟಿಕೊಪ್ಪ ಸೋಮವಾರಪೇಟೆಗೆ ಹೋಗುವ ಜನಸಾಮಾನ್ಯರಿಗೆ ನಾಲ್ಕು ಐದು ಕಿಲೋ ಮೀಟರ್ ಸುತ್ತಿಬಳಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಆಗಸ್ಟ್ ತಿಂಗಳ ಮೊದಲ ರಾತ್ರಿ ಸುರಿದ ಮಳೆಗೆ ಈ ರೀತಿಯಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಅತಂಕಕ್ಕೆ ಒಳಗಾಗಿದ್ದಾರೆ. ರಸ್ತೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಅಂತರ್ಜಲದ ಮಟ್ಟ ಎಲ್ಲಿ ಇದೆ ಎಂದು ಪರಿಶೀಲನೆ ನಡೆಸಿ ಪ್ರಾಥಮಿಕ ವರದಿ ನೋಡಿಕೊಂಡು ಅದಷ್ಟು ಬೇಗ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸನ್ನಿಲಿಯೋನ್ ಮನೆಯಲ್ಲಿ ಜಿರಳೆ ಕಾಟ- ದಂಪತಿಯನ್ನು ಕಂಡು ನಕ್ಕ ನೆಟ್ಟಿಗರು

    ಸದ್ಯದ ಮಟ್ಟಿಗೆ ಈ ಭಾಗದ ಜನರು ವಾಹನಗಳನ್ನು ಕಾನ್ ಬೈಲ್ – ನಾಕೂರು ಶಿರಂಗಾಲ – ಗುಂಡುಗುಟ್ಟಿ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಸ್ಥಳದಲ್ಲಿ ಸಂಬಂಧಿಸಿದ ಇಲಾಖೆಯ ಎಂಜಿನಿಯರ್ ಗಳು, ಪಿಡಿಓ ವೇಣುಗೋಪಾಲ್ ಮತ್ತು ಪಂಚಾಯ್ತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪರವರು ಮೊಕ್ಕಾಂ ಹೂಡಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರತರಾಗಿದ್ದಾರೆ.

    ತಾಯಿ-ಮಗಳು ಪ್ರಾಣಾಪಾಯದಿಂದ ಪಾರು:
    ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಸೋಮವಾರಪೇಟೆ ತಾಲೂಕಿನ ಕಾಂಡನಕೊಳ್ಳಿ ಹಾಲೇರಿ ಗ್ರಾಮದ ಕದಂಡಾಲು ಎಂಬಲ್ಲಿ ಒಡ್ಡಚೆಟ್ಟಿರ ಚೊನ್ದಕ್ಕಿ ಎಂಬುವವರ ಮನೆ ಸಂಪೂರ್ಣ ಕುಸಿದು ಹಾನಿಯುಂಟಾಗಿದೆ. ಮನೆಯಲ್ಲಿ ಒಡ್ಡಚೆಟ್ಟಿರ ಚೊನ್ದಕ್ಕಿ ತನ್ನ ಮಗಳೊಂದಿಗೆ ವಾಸವಿದ್ದು, ಮಳೆಯ ತೀವ್ರತೆಗೆ ಹೆದರಿ, ದಿನದ ಮುಂದೆಯೆ ಮುಕ್ಕೋಡ್ಲುವಿನ ತಮ್ಮ ಬಂದುಗಳ ಮನೆಗೆ ತೆರಳಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಅನಾಥ ಶವದ ವಿಧಿವಿಧಾನ ನೆರವೇರಿಸಿದ ಗ್ರಾಮ ಪಂಚಾಯಿತಿ ಸದಸ್ಯರು

    ಅನಾಥ ಶವದ ವಿಧಿವಿಧಾನ ನೆರವೇರಿಸಿದ ಗ್ರಾಮ ಪಂಚಾಯಿತಿ ಸದಸ್ಯರು

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮದ ಮಾರುಕಟ್ಟೆಯಲ್ಲಿ ಅನಾಥವಾಗಿ ಜೀವನ ನಡೆಸುತ್ತಿದ್ದ ಗೌರಮ್ಮ ಎಂಬವರು ಅನಾರೋಗ್ಯಕ್ಕೆ ತುತ್ತಾಗಿ ಗುರುವಾರ ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮಡಿಕೇರಿಯಲ್ಲಿ ಶವಸಂಸ್ಕಾರ ಮಾಡಲು ಹಿಂದೇಟು ಹಾಕಲಾಗಿತ್ತು.

    ಕಾರ್ಯಪ್ರವೃತ್ತರಾದ ಸುಂಟಿಕೊಪ್ಪ ಗ್ರಾಮ ಪಂಚಾಯತಿ ಪೌರಕಾರ್ಮಿಕ ರಾಮಚಂದ್ರ ಮತ್ತು ಇತರ ಸಿಬ್ಬಂದಿ ಮೃತದೇಹವನ್ನು ಶನಿವಾರ ಸುಂಟಿಕೊಪ್ಪಕ್ಕೆ ತಂದು ಹಿಂದೂ ರುದ್ರ ಭೂಮಿಯಲ್ಲಿ ಶವಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

    ಬೂದಿ ಮುಚ್ಚಿದ ಶಬೀರ್: ಹಿಂದೂ ಪದ್ಧತಿಯಂತೆ ಸತ್ತ ಮೂರನೇ ದಿನಕ್ಕೆ ಬೂದಿ ಮುಚ್ಚುವ ಕಾರ್ಯ ನಡೆಯಬೇಕು. ಗೌರಮ್ಮ ಅವರು ಅನಾಥರಾಗಿದ್ದರಿಂದ ಕುಟುಂಬಸ್ಥರ ಬದಲಾಗಿ ಗ್ರಾಮ ಪಂಚಾಯತಿಯೇ ಅದರ ಹೊಣೆಗಾರಿಕೆ ಹೊತ್ತುಕೊಂಡಿತು. ಭಾನುವಾರ ಬೆಳಗ್ಗೆ ಮುಸ್ಲಿಂ ಸಮುದಾಯದ ಗ್ರಾಮ ಪಂಚಾಯತಿ ಸದಸ್ಯ ಎ. ಶಬೀರ್ ಅವರು ಬೂದಿಯನ್ನು ರಾಶಿ ಮಾಡಿ ಹಿಂದೂ ಪದ್ದತಿಯಂತೆ ಕಾರ್ಯವನ್ನು ತಮಗೆ ಗೊತ್ತಿದ್ದ ಮಟ್ಟಿಗೆ ನೆರವೇರಿಸಿದರು. ಅಲ್ಲದೇ ಜಗತ್ತಿನಲ್ಲಿ ಎಲ್ಲರೂ ಒಂದೇ ಹಿಂದೂ ಮುಸ್ಲಿಂ ಎಂದು ಭೇದಭಾವ ಮಾಡಬರದು ಸತ್ತ ದೇಹದ ಗೌರವ ಕೊಡುವುದು ಮುಖ್ಯ ಎಂದು ಹೇಳಿ ವಿಧದ ನೇರವೇರಿದರು.

    ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್, ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಕೆ. ಪ್ರಸಾದ್, ಸದಸ್ಯ ಹೆಚ್.ಯು. ರಫೀಕ್ ಖಾನ್, ಪೌರಕಾರ್ಮಿಕ ರಾಮಚಂದ್ರ ರವರು ಈ ವಿಧಿವಿಧಾನದಲ್ಲಿ ಕೈ ಜೋಡಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

  • ಸುಂಟಿಕೊಪ್ಪ ಸುಲಿಗೆ ಪ್ರಕರಣದಲ್ಲಿ 3 ಆರೋಪಿಗಳು ಅಂದರ್- 5.2 ಲಕ್ಷ ಹಣ, ಕಾರು, ಬೈಕ್ ವಶ

    ಸುಂಟಿಕೊಪ್ಪ ಸುಲಿಗೆ ಪ್ರಕರಣದಲ್ಲಿ 3 ಆರೋಪಿಗಳು ಅಂದರ್- 5.2 ಲಕ್ಷ ಹಣ, ಕಾರು, ಬೈಕ್ ವಶ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದ ಗುಂಡುಕುಟ್ಟಿ ಎಸ್ಟೇಟ್ ಸಮೀಪ ನಡೆಸಿದ್ದ ಸುಲಿಗೆ ಪ್ರಕರಣ ಮೂವರು ಆರೋಪಗಳನ್ನು ಬಂಧಿಸಿವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ತಿಳಿಸಿದರು.

    ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಣಗಾಲ್ ನಿವಾಸಿ ಟಿ.ವಿ.ಹರೀಶ್ (57), ಸುಂಟಿಕೊಪ್ಪದ ವಿಜಯನಗರ ನಿವಾಸಿ ಕುಮರೇಶ್ (42) ಹಾಗೆಯೇ ಸುಲಿಗೆಯ ಮಾಸ್ಟರ್ ಮೈಂಡ್ ಇದಕ್ಕೂ ಮೊದಲು ಎಸ್ಟೇಟ್‍ನಲ್ಲಿ ರೈಟರ್ ಕೆಲಸ ಮಾಡಿಕೊಂಡಿದ್ದ ಇಗ್ಗೋಡ್ಲು ಗ್ರಾಮದ ಜಗ್ಗರಂಡ ಕಾವೇರಪ್ಪ (56) ಆರೋಪಗಳನ್ನು ಬಂಧಿಸಿ, ಅವರಿಂದ 5.2 ಲಕ್ಷ ಹಣ ಹಾಗೂ ಕಾರು, ಬೈಕ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ದರೋಡೆಗೂ ಮೊದಲೇ ಪೂರ್ವ ನಿಯೋಜಿತ ಸಂಚು ರೂಪಿಸಿದ್ದ ಖದೀಮರು ರೈಟರ್ ವಿಜಯ್ ಕುಮಾರ್ ಕಳ್ಳತನ ಮಾಡಿದ್ದಾನೆ ಎಂದು ಸುಳ್ಳು ವದಂತಿಗಳನ್ನು ವ್ಯವಸ್ಥಿತವಾಗಿ ಹಬ್ಬಿಸಿದ್ದರು. 2014 ರವರೆಗೆ ಜೈಲಿನಲ್ಲೇ ಇದ್ದು ಬಿಡುಗಡೆಯಾಗಿದ್ದ ಈ ಕೃತ್ಯದ ಎ(1) ಆರೋಪಿ ಹರೀಶ್ 2004 ರಲ್ಲಿ ಸೋಮವಾರಪೇಟೆಯಲ್ಲಿ ಬಂದೂಕು ಕಳವು ಪ್ರಕರಣ, ಸುಂಟಿಕೊಪ್ಪದಲ್ಲಿ ಟ್ಯಾಕ್ಸಿ ಡ್ರೈವರ್ ಒಬ್ಬರನ್ನು ಕೊಲೆ ಆರೋಪ, ಹಾಗೆಯೇ ಸೆಂಟ್ರಲ್ ಬ್ಯಾಂಕ್ ದರೋಡೆ ಸೇರಿದಂತೆ ಕುಶಾಲನಗರದ ಜೋಸ್ಕೊ ಜ್ಯುವೆಲರಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮತ್ತೊರ್ವ ಆರೋಪಿ ಕುಮಾರೇಶ್ ವಿರುದ್ಧವೂ ಹೆಬ್ಬಾಲೆಯಲ್ಲಿ ನಡೆದಿದ್ದ ಕೊಲೆ ಸುಫಾರಿ, ಬಿಜಾಪುರದಲ್ಲಿ ದರೋಡೆ ಪ್ರಕರಣ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿಸಿರು.

    ಏನಿದು ಪ್ರಕರಣ: ಮೇ 5 ರಂದು ಗುಂಡುಕುಟ್ಟಿ ಎಸ್ಟೇಟ್‍ನಲ್ಲಿ ಮಾಲೀಕರಾದ ಕರ್ನಲ್ ಕುಮಾರ್ ತೋಟದ ಕಾರ್ಮಿಕರಿಗೆ ಹಣವನ್ನು ಬಟವಾಡೆ ಮಾಡಲು ರೈಟರ್ ವಿಜಯ್ ಕುಮಾರ್ ಅವರಿಗೆ ಚೆಕ್ಕುಗಳನ್ನು ನೀಡಿ ಕಳುಹಿಸಿದ್ದರು. ಅದರಂತೆ ಸುಂಟಿಕೊಪ್ಪದ ಕೆನರಾ ಬ್ಯಾಂಕ್‍ನಲ್ಲಿ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಗುಂಡುಕುಟ್ಟಿ ಎಸ್ಟೇಟ್ ಸಮೀಪ ಅಡ್ಡಗಟ್ಟಿದ ಖದೀಮರು ವಿಜಯ್ ಕುಮಾರ್‍ಗೆ ಮಾರಣಾಂತಿಕ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.