ಬೆಂಗಳೂರು: ಬಾಲಿವುಡ್ ಮೋಹಕ ನಟಿ ವಿರುದ್ಧ ಮತ್ತೊಮ್ಮೆ ಬೆಂಗಳೂರಲ್ಲಿ ಪ್ರತಿಭಟನೆ ನಡೆದಿದೆ. ವೀರ ಮಹಾದೇವಿ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸಬಾರದು ಎಂದು ಸನ್ನಿ ಲಿಯೋನ್ ಹಾಗೂ ನಿರ್ಮಾಪಕ ಡಿ.ಸಿ ವಾಡಿ ಉದಯನ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ವೀರ ಮಹಾದೇವಿ ಐತಿಹಾಸಿಕ ಚಿತ್ರವಾಗಿದೆ. ಹೀಗಾಗಿ ಈ ಚಿತ್ರದಲ್ಲಿ ನೀಲಿ ತಾರೆ ಸನ್ನಿ ಲಿಯೋನ್ ನಟಿಸಬಾರದು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಸನ್ನಿಲಿಯೋನ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ವೀರ ಮಹಾದೇವಿ ಚಿತ್ರ ಪಂಚ ಭಾಷೆಗಳಲ್ಲಿ ತಯಾರಾಗುತ್ತಿದ್ದು, ಒಟ್ಟು 100 ಕೋಟಿ ವೆಚ್ಚದಲ್ಲಿ ಈ ಸಿನಿಮಾ ರೆಡಿಯಾಗುತ್ತಿದೆ.
ಹೊಸ ವರ್ಷ ಆಚರಣೆಗೆ ಸಿಲಿಕಾನ್ ಸಿಟಿಗೆ ಬಾಲಿವುಡ್ ಮೋಹಕ ನಟಿ ಸನ್ನಿಲಿಯೋನ್ ಅವರು ಬರುವುದನ್ನು ನಿಷೇಧಿಸಿದ್ದು, ಇತ್ತೀಚೆಗಷ್ಟೇ ಮತ್ತೆ ಅವರ ಎಂಟ್ರಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ನವೆಂಬರ್ 3 ರಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಸನ್ನಿ ನೈಟ್ ಹೆಸರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಸನ್ನಿ, ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಲಿದ್ದು, ಆದ್ರೆ ಇದೀಗ ಸನ್ನಿ ಎಂಟ್ರಿಗೆ ಕನ್ನಡ ರಕ್ಷಣಾ ವೇದಿಕೆ ಯುವಸೇನೆ ವಿರೋಧ ವ್ಯಕ್ತಪಡಿಸಿತ್ತು.

`ವೀರ ಮಹಾದೇವಿ’ ಚಿತ್ರದಲ್ಲಿ ಸನ್ನಿಲಿಯೋನ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇದು ಅಪರಾಧ ಯಾವುದೇ ಕಾರಣಕ್ಕೂ ಈ ಚಿತ್ರದಲ್ಲಿ ಸನ್ನಿ ನಟಿಸಬಾರದು. ಹೀಗಾಗಿ ಈ ಚಿತ್ರದ ವಿರುದ್ಧ ಹೋರಾಟ ಮಾಡುತ್ತೀವಿ. ಸನ್ನಿ ಲಿಯೋನ್ ಎಲ್ಲಿಗೆ ಬಂದರೂ ನಾವು ಅವರನ್ನ ತಡೆ ಮಾಡ್ತೀವಿ. ಇದು ನಮ್ಮ ಸಂಸ್ಕೃತಿ ವಿಚಾರ. ಹೀಗಾಗಿ ನಾವು ಅದನ್ನ ವಿರೋಧಿಸ್ತೀವಿ. ಆದ್ರೆ ನಾವು ಕಾರ್ಯಕ್ರಮವನ್ನ ವಿರೋಧ ಮಾಡುತ್ತಿಲ್ಲ. ಬದಲಾಗಿದೆ ಸನ್ನಿ ಲೀಯೊನ್ ಅವರನ್ನ ಮಾತ್ರ ವಿರೋಧಿಸುತ್ತೇವೆ ಅಂತ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕರವೇ ಯುವಸೇನೆಯ ಹರೀಶ್ ಹೇಳಿದ್ದರು.

ಸನ್ನಿ ಲಿಯೋನ್ ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬರಬಾರದು. ಅವರ ಹಿನ್ನೆಲೆ ನೋಡಿದ್ರೆ ಬರೋದು ಬೇಡ ಅನ್ನಿಸುತ್ತೆ. ಸನ್ನಿ ಲಿಯೋನ್ `ನೀಲಿ ಚಿತ್ರದ ತಾರೆ’. ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತದೆ. ನಮ್ಮದು ಸಂಸ್ಕೃತಿಯ ನಾಡು. ಇದ್ರಿಂದ ನಮ್ಮ ಹಿಂದೂ ಸಂಸ್ಕೃತಿಗೆ ಹಾಳಾಗುತ್ತೆ ಅಂತ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
