Tag: sunlight

  • ದಾವಣಗೆರೆ: ಬಿಸಿಲ ಬೇಗೆಗೆ ಸಾವನ್ನಪ್ಪುತ್ತಿರುವ ಮೀನುಗಳು-  ಆತಂಕದಲ್ಲಿ ಮೀನುಗಾರರು

    ದಾವಣಗೆರೆ: ಬಿಸಿಲ ಬೇಗೆಗೆ ಸಾವನ್ನಪ್ಪುತ್ತಿರುವ ಮೀನುಗಳು- ಆತಂಕದಲ್ಲಿ ಮೀನುಗಾರರು

    ದಾವಣಗೆರೆ: ಬಿಸಿಲ ಬೇಗೆಗೆ ಕೆರೆಯಲ್ಲಿನ ಮೀನುಗಳು ಸಾವನ್ನಪ್ಪುತ್ತಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ನಡೆದಿದೆ.

    ಕಳೆದ ಕೆಲ ದಿನಗಳಿಂದ ಬಿಸಿಲು ಹೆಚ್ಚಾಗಿದ್ದು ಬಿನಿಲಿನ ಶಾಖಕ್ಕೆ ದೇವರಬೆಳಕೆರೆ ಗ್ರಾಮದ ಕೆರೆಯ ನೀರಿನಲ್ಲಿದ್ದ ಮೀನುಗಳು ಪ್ರತಿನಿತ್ಯ ಸಾವನ್ನಪ್ಪಿ ದಡ ಸೇರುತ್ತಿವೆ. ಹರಿಹರ ತಾಲೂಕಿನ ದೊಡ್ಡ ಕೆರೆಯೆಂದು ಖ್ಯಾತಿ ಪಡೆದಿದ್ದ ಕೆರೆಯಲ್ಲಿ ಈ ವರ್ಷ ನೀರು ಕಡಿಮೆಯಾಗಿದ್ದು ಮೀನುಗಾರರಲ್ಲಿ ಆತಂಕ ಮೂಡಿದೆ.

    ಮೀನುಗಾರಿಕೆಯನ್ನೇ ನಂಬಿದ್ದ ಜನರಿಗೆ ಮೀನುಗಳು ಸಾವನ್ನಪ್ಪುತ್ತಿರುವುದರಿಂದ ಆತಂಕ ಮನೆ ಮಾಡಿದೆ.

  • ಸುಡುಬಿಸಿಲಿಗೆ ದ್ವಿಚಕ್ರ ವಾಹನಗಳಿಗೂ ಬಂತು ಛತ್ರಿ

    ಸುಡುಬಿಸಿಲಿಗೆ ದ್ವಿಚಕ್ರ ವಾಹನಗಳಿಗೂ ಬಂತು ಛತ್ರಿ

    ಬೆಂಗಳೂರು: ಈಗಂತೂ ನೆತ್ತಿ ಸುಡೋ ಬಿಸಿಲು. ಕಾರಿನಲ್ಲಿ ಹೋಗೋರೇನೂ ಏಸಿ ಹಾಕ್ಕೊಳ್ತಾರೆ. ನಡೆದುಕೊಂಡು ಹೋಗೋರು ಛತ್ರಿ ಹಿಡ್ಕೊಂಡು ಹೋಗಬಹುದು. ಆದ್ರೆ ದ್ವಿಚಕ್ರ ವಾಹನಗಳಲ್ಲಿ ಓಡಾಡೋರು ಏನ್ಮಾಡ್ಬೇಕು? ಇದಕ್ಕೂ ಒಂದು ಐಡಿಯಾ ಬಂದಿದೆ. ಬೆಂಗಳೂರಿನಲ್ಲಿ ಸ್ಪೆಷಲ್ ಬೈಕ್ ಛತ್ರಿ ಬಂದಿದೆ.

    ಬಿಸಿಲು ಕಾದ ಕೆಂಡದಂತಿರುವಾಗ ದ್ವಿಚಕ್ರ ವಾಹನಗಳಲ್ಲಿ ಹೋಗೋದು ಅಂದ್ರೆ ಸಿಕ್ಕಾಪಟ್ಟೆ ಕಷ್ಟ. ಇದಕ್ಕಾಗಿ ಈ ಸ್ಪೆಷಲ್ ಕೊಡೆ ಬಂದಿದೆ. ದಾಸರಹಳ್ಳಿಯ ಬ್ರೌನಿ ಅನ್ನೋರು ಈ ಕೊಡೆಯನ್ನು ದ್ವಿಚಕ್ರ ವಾಹನಕ್ಕೆ ಆಟ್ಯಾಚ್ ಮಾಡಿ ಹೊಸ ಅವಿಷ್ಕಾರ ಮಾಡಿದ್ದಾರೆ. ಸದ್ಯ ಈ ಸಮ್ಮರ್ ಸ್ಪೆಷಲ್ ಛತ್ರಿಗೆ ಫುಲ್ ಡಿಮ್ಯಾಂಡ್ ಇದೆ. ಇದನ್ನ ತೈವಾನ್‍ನಿಂದ ತರಿಸಲಾಗುತ್ತಿದ್ದು, ಎಷ್ಟೇ ವೇಗದಲ್ಲಿ ಹೋದ್ರೂ ಛತ್ರಿ ಅಲ್ಲಾಡಲ್ಲ. ಇಬ್ಬರು ಕುಳಿತುಕೊಳ್ಳಬಹುದಾದ ಜಾಗದಲ್ಲಿ ಛತ್ರಿಯ ನೆರಳು ಬೀಳುತ್ತೆ, ಜೊತೆಗೆ ಸೂರ್ಯನ ಕಿರಣವನ್ನೂ ತಡೆಯೋ ಶಕ್ತಿ ಈ ಛತ್ರಿಗಿದೆಯಂತೆ.

    ಇನ್ನು ಹುಡ್ಗೀರಂತೂ ಈ ಟೂ ವೀಲರ್ ಛತ್ರಿಗೆ ಫುಲ್ ಫಿದಾ ಆಗಿದ್ದಾರೆ. ಕೇವಲ ಸ್ಕೂಟಿ, ಸ್ಕೂಟರ್‍ಗಳಿಗೆ ಮಾತ್ರವಲ್ಲ ಬೈಕ್‍ಗಳಿಗೂ ಇದನ್ನು ಆಳವಡಿಸಬಹುದಾಗಿದೆ. ಸ್ಕೂಟಿ ಛತ್ರಿಗಾದ್ರೆ ಎರಡು ಸಾವಿರ, ಬೈಕಿಗಾದ್ರೇ ಮೂರು ಸಾವಿರ ರೂಪಾಯಿ ನೀಡಬೇಕಾಗುತ್ತೆ. ಸದ್ಯ ಈ ಟೂ ವೀಲರ್ ಛತ್ರಿ ಟ್ರೆಂಡ್ ಆಗಿದೆ. ವಾಹನ ಸವಾರರಿಗೂ ಖುಷಿ ಕೊಡುತ್ತಿದೆ.

    ಬೇಸಿಗೆಯಲ್ಲಿ ಕೂಲ್ ಆಗಿರಬೇಕು ಅಂತಾ ಅಂದುಕೊಳ್ಳೋರು ಈ ಸ್ಪೆಷಲ್ ಛತ್ರಿಯನ್ನ ದ್ವಿಚಕ್ರ ವಾಹನಕ್ಕೆ ಆಟ್ಯಾಚ್ ಮಾಡಿಕೊಂಡು ಹಾಯಾಗಿ ರೌಂಡ್ ಹೊಡೀಬಹುದು.

  • ರಾಯಚೂರಿನಲ್ಲಿ ಬಿಸಿಲಲ್ಲೇ ಪಾಠ ಮಾಡ್ತಾರೆ: ತಲೆ ಮೇಲೆ ಟವಲ್ ಹಾಕ್ಕೊಂಡು ಹುಡುಗ್ರು ಪಾಠ ಕೇಳ್ತಾರೆ

    ರಾಯಚೂರಿನಲ್ಲಿ ಬಿಸಿಲಲ್ಲೇ ಪಾಠ ಮಾಡ್ತಾರೆ: ತಲೆ ಮೇಲೆ ಟವಲ್ ಹಾಕ್ಕೊಂಡು ಹುಡುಗ್ರು ಪಾಠ ಕೇಳ್ತಾರೆ

    – ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ವಿದ್ಯಾರ್ಥಿಗಳಿಗೆ ಶಾಲಾ ಕಟ್ಟಡಗಳಿಲ್ಲ
    -ಪ್ರಾಣಭಯ, ಆರೋಗ್ಯ ಭಯದಲ್ಲೇ ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳು

    ರಾಯಚೂರು: ಬಿಸಿಲು ಅಂದ್ರೆ ಥಟ್ ಅಂತ ನೆನಪಾಗೋದು ರಾಯಚೂರು ಜಿಲ್ಲೆ. ಆದ್ರೆ ಇಂತಹ ಬಿಸಿಲನ್ನೇ ಲೆಕ್ಕಿಸದೇ ಇಲ್ಲಿನ ವಿದ್ಯಾರ್ಥಿಗಳು ಮೈದಾನದಲ್ಲಿ ಕುಳಿತು ಪ್ರತಿನಿತ್ಯ ಪಾಠ ಕೇಳ್ತಿದ್ದಾರೆ. ಇದು ತಪ್ಪು ಮಾಡಿದಕ್ಕೆ ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುತ್ತಿರೋ ಶಿಕ್ಷೆಯಲ್ಲ. ಬದಲಾಗಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಉಸ್ತುವಾರಿ ಜಿಲ್ಲೆಯಲ್ಲಿ ಸರ್ಕಾರ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಘೋರಾತಿಘೋರ ಶಿಕ್ಷೆ.

    ಮೈದಾನದಲ್ಲೇ ಪಾಠ: ರಾಯಚೂರು ತಾಲೂಕಿನ ಮಂಜರ್ಲಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಾಲಾ ಕಟ್ಟಡವಿಲ್ಲದೆ ಪ್ರತಿದಿನ ತಲೆ ಮೇಲೆ ಟವಲ್, ಕರ್ಚಿಫ್ ಹಾಕಿಕೊಂಡು ಬಿರುಬಿಸಿಲಿನಲ್ಲಿ ಪಾಠ ಕೇಳುತ್ತಿದ್ದಾರೆ. 1958 ರಲ್ಲಿ ನಿರ್ಮಿಸಲಾದ ಶಾಲೆ ಈಗ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ತಕ್ಕಮಟ್ಟಿಗೆ ಇರುವ ಎರಡು ಕೊಠಡಿಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಪಾಠಮಾಡಲು ಸಾಧ್ಯವಿಲ್ಲ. ಹೀಗಾಗಿ ಮರದ ಕೆಳಗೆ ಹಾಗೂ ಮೈದಾನದಲ್ಲೇ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಹೊತ್ತು ಕಳೆದಂತೆ ಬಿಸಿಲು ಏರುವುದರಿಂದ ಮಕ್ಕಳು ತಮ್ಮ ರಕ್ಷಣೆಗಾಗಿ ನಿತ್ಯ ಶಾಲೆಗೆ ಟವೆಲ್ ತರುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಆಗಾಗ ಮಕ್ಕಳು ಆರೋಗ್ಯ ಸಮಸ್ಯೆಗಳಿಗೂ ತುತ್ತಾಗುತ್ತಿದ್ದಾರೆ. 131 ಬಾಲಕರು, 139 ಬಾಲಕಿಯರು ಸೇರಿ ಒಟ್ಟು 270 ವಿದ್ಯಾರ್ಥಿಗಳು ಕಟ್ಟಡವಿಲ್ಲದ ಶಾಲೆಯಲ್ಲಿ ಓದುತ್ತಿದ್ದಾರೆ.

    ಶಾಲೆಗೆ ಜಾಗ ಕೊಡಲ್ಲ: ಇನ್ನೂ ಗ್ರಾಮದಲ್ಲಿ ಶಾಲೆಗೆ ಅಂತ ಯಾವ ಜಾಗವೂ ಇಲ್ಲ, ಸದ್ಯ ಇರುವ ಜಾಗವನ್ನ ಈ ಹಿಂದೆ ಯಾರೋ ದಾನ ಮಾಡಿದ್ದು. ಈಗ ಅವರ ಮಕ್ಕಳು ಇದ್ದ ಜಾಗದಲ್ಲೇ ಶಾಲೆ ಕಟ್ಟಿಕೊಳ್ಳಿ ಒಂದಿಂಚು ಹೆಚ್ಚು ಜಾಗವನ್ನೂ ಕೊಡುವುದಿಲ್ಲ ಅಂತಿದ್ದಾರೆ. ಶಾಲೆಯ ಮುಂದೆ ಮಾರಿಕಾಂಬ ದೇವಾಲಯವಿರುವುದರಿಂದ ಮೈದಾನ ಉಳಿದುಕೊಂಡಿದೆ. ಶಿಕ್ಷಣ ಇಲಾಖೆ ಹೆಸರಿನಲ್ಲಿ ಜಾಗವಿಲ್ಲದಿರುವುದರಿಂದ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ. ಎಚ್‍ಕೆಆರ್‍ಡಿಬಿ ಅನುದಾನಕ್ಕೆ ಅರ್ಜಿ ಹಾಕಿರುವ ಕೇತ್ರಶಿಕ್ಷಣಾಧಿಕಾರಿಗಳು, ಹಣ ಬಿಡುಗಡೆಯಾದ್ರೆ ಮುಂದುವರೆಯುವುದಾಗಿ ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಶಾಲೆಯ ಮರು ನಿರ್ಮಾಣ ನಡೆಯಬೇಕಿದೆ. ಅಧಿಕಾರಿಗಳು ಭೂದಾನಿಗಳ ಮನವೊಲಿಸಿ ಇಲ್ಲವೇ ಪರ್ಯಾಯ ಜಾಗದಲ್ಲಿ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲೆಯನ್ನ ನಿರ್ಮಿಸಬೇಕಿದೆ. ಜಿಲ್ಲಾ ಉಸ್ತುವಾರಿ ಹೊತ್ತಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್ ಕೂಡಲೇ ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕಿದೆ.