Tag: sunlight

  • ತಾಯಿಯನ್ನು ನೋಡದೆ 32 ಆಯ್ತು, ತಂದೆಯ ಕೊನೆಗಾಲದಲ್ಲಿ ಜೊತೆ ಇರಲು ಆಗಲಿಲ್ಲ- ರಾಜೀವ್ ಗಾಂಧಿ ಹಂತಕನ ಭಾವನಾತ್ಮಕ ಪತ್ರ

    ತಾಯಿಯನ್ನು ನೋಡದೆ 32 ಆಯ್ತು, ತಂದೆಯ ಕೊನೆಗಾಲದಲ್ಲಿ ಜೊತೆ ಇರಲು ಆಗಲಿಲ್ಲ- ರಾಜೀವ್ ಗಾಂಧಿ ಹಂತಕನ ಭಾವನಾತ್ಮಕ ಪತ್ರ

    ಚೆನ್ನೈ: ನನ್ನ ತಾಯಿಯನ್ನು ನೋಡದೆ 32 ವರ್ಷಗಳು ಕಳೆದಿವೆ. ನನ್ನ ತಂದೆಯ ಕೊನೆಯ ದಿನಗಳಲ್ಲಿ ಅವರೊಂದಿಗೆ ಇರಲು ಸಾಧ್ಯವಾಗಲಿಲ್ಲ. ಅದು ನನ್ನನ್ನು ತುಂಬಾ ಕಾಡುತ್ತಿದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹಂತಕರಲ್ಲಿ ಒಬ್ಬನಾದ ಶ್ರೀಲಂಕಾದ (Sri Lanka) ಟಿ.ಸುಥೆಂತಿರರಾಜ ತಮಿಳುನಾಡಿನ (Tamil Nadu) ಕಾರಾಗೃಹದ ವಿಶೇಷ ಶಿಬಿರದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ.

    ಸೂರ್ಯನ ಬೆಳಕು (Sunlight) ಕೂಡ ನಮ್ಮ ದೇಹವನ್ನು ಸ್ಪರ್ಶಿಸುವುದಿಲ್ಲ. ನಮ್ಮ ತಾಯ್ನಾಡಿಗೆ ಮರಳಲು ಬೆಂಬಲವಾಗಿ ಪ್ರಪಂಚದಾದ್ಯಂತದ ಇರುವ ತಮಿಳಿಯನ್ನರು ಧ್ವನಿ ಎತ್ತಬೇಕು ಎಂದು ಬರೆದುಕೊಂಡಿದ್ದಾನೆ. ಅಲ್ಲದೇ ವಾಪಸ್ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವರಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಗುರುತಿನ ಪುರಾವೆಯನ್ನು ನವೀಕರಿಸಲು ಚೆನ್ನೈನಲ್ಲಿರುವ ಶ್ರೀಲಂಕಾ ಡೆಪ್ಯುಟಿ ಹೈಕಮಿಷನ್ ಕಚೇರಿಗೆ ಪ್ರವೇಶ ನೀಡುವಂತೆ ಆತ ಮನವಿ ಮಾಡಿದ್ದಾನೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಮಹಿಳೆ ಸೇರಿ ನಾಲ್ವರು ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರ ಅರೆಸ್ಟ್

    ಸುಪ್ರೀಂನಿಂದ ಬಿಡುಗಡೆಯಾದರೂ, ಕಳೆದ ಆರು ತಿಂಗಳಿನಿಂದ ತಿರುಚ್ಚಿ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ವಿಶೇಷ ಶಿಬಿರದಲ್ಲಿ (Trichy Central Prison campus) ನನ್ನನ್ನು ಇರಿಸಲಾಗಿದೆ. ವಿಶೇಷ ಶಿಬಿರದಲ್ಲಿ 120 ಕ್ಕೂ ಹೆಚ್ಚು ವಿದೇಶಿಯರು ವಾಸಿಸುತ್ತಿದ್ದಾರೆ. ಅವರಲ್ಲಿ ಸುಮಾರು 90 ಮಂದಿ ಶ್ರೀಲಂಕಾದಿಂದ ಬಂದವರು. ಇಲ್ಲಿ ತಮಿಳರು, ಶ್ರೀಲಂಕಾದವರು, ಮುಸ್ಲಿಮರು ಎಂಬ ಭೇದವಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.

    ಸಂಬಂಧಿಕರು ಮಾತ್ರ ಶಿಬಿರದಲ್ಲಿದ್ದವರನ್ನು ಭೇಟಿಯಾಗಬಹುದು. ಭಾರತದಲ್ಲಿ ನನ್ನ ಸಂಬಂಧಿ ಯಾರಿದ್ದಾರೆ? ನಮಗೆ ಫೋನ್‍ನಲ್ಲಿ ಮಾತಾಡಲು ಅವಕಾಶವಿಲ್ಲ. ನನ್ನ ಮನವಿ ತಪ್ಪಾಗಿದ್ದರೆ ನನ್ನನ್ನು ಯಾರೂ ಬೆಂಬಲಿಸುವ ಅಗತ್ಯವಿಲ್ಲ ಎಂದು ಬರೆದಿದ್ದಾನೆ.

    ಶ್ರೀಲಂಕಾದ ಪ್ರಜೆಯಾಗಿರುವ ಸಂತನ್ ಅಲಿಯಾಸ್ ಟಿ.ಸುಥೆಂತಿರರಾಜ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ 7 ಅಪರಾಧಿಗಳಲ್ಲಿ ಒಬ್ಬನಾಗಿದ್ದಾನೆ. ಆತನನ್ನು ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ 2022ರ ನ.11 ರಂದು ಮುರುಗನ್, ರಾಬರ್ಟ್ ಪಯಸ್ ಮತ್ತು ಜಯಕುಮಾರ್ ಜೊತೆಯಲ್ಲಿ ತಿರುಚ್ಚಿ ಕೇಂದ್ರ ಕಾರಾಗೃಹದ ಕ್ಯಾಂಪಸ್‍ನಲ್ಲಿರುವ ವಿಶೇಷ ಶಿಬಿರದಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ಗಡಿಯಲ್ಲಿ ಪಾಕಿಸ್ತಾನದ ನಿಗೂಢ ಬಲೂನ್ ಪತ್ತೆ – ಸೇನೆಯಿಂದ ಶೋಧ ಕಾರ್ಯ

  • ಪ್ರತಿದಿನ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳೋದು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

    ಪ್ರತಿದಿನ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳೋದು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

    ತ್ತಡದ ಜೀವನ ವಿಧಾನದಲ್ಲಿ ನಾವು ಹೆಚ್ಚಿನ ಸಮಯವನ್ನು ಮನೆಯೊಳಗೆ, ಕಚೇರಿ, ಕಂಪ್ಯೂಟರ್‌ ಮುಂದೆಯೇ ಕಳೆಯುತ್ತೇವೆ. ಹೊರಗಡೆ ಬರುವುದೇ ಅಪರೂಪ ಎನ್ನುವಂತಾಗಿದೆ. ಬೆಳಗ್ಗೆ ಬೇಗ ಎದ್ದು ಸೂರ್ಯೋದಯ ನೋಡುವುದು, ಸೂರ್ಯನ ಕಿರಣಗಳನ್ನು ಮೈಗೆ ತಾಗಿಸಿಕೊಳ್ಳುವ ಮಂದಿ ಈ ಆಧುನಿಕ ಕಾಲದಲ್ಲಿ ವಿರಳಾತಿ ವಿರಳ. ಬೆಳಗಿನ ಸೂರ್ಯನ ಕಿರಣಗಳು (Sunlight) ಮೈಗೆ ತಾಗುವುದರಿಂದ ಆರೋಗ್ಯಕ್ಕೆ ಒಳಿತು ಎಂಬುದು ಎಲ್ಲರಿಗೂ ತಿಳಿದಿದೆ. ಇದರಿಂದ ಅನೇಕ ಕಾಯಿಲೆಗಳನ್ನು ದೂರವಿಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಯಾವ ಸಂದರ್ಭದಲ್ಲಿ, ಎಷ್ಟು ಹೊತ್ತು ಸೂರ್ಯನ ಕಿರಣಗಳು ನಿಮ್ಮ ಮೈ ಮೇಲೆ ಬಿದ್ದರೆ ಉತ್ತಮ ಎಂಬ ಬಗ್ಗೆ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

    ಬೆಳಗ್ಗೆ 25 ರಿಂದ 30 ನಿಮಿಷಗಳ ಕಾಲ (ಸೂರ್ಯೋದಯದ ನಂತರ ಮತ್ತು ಬೆಳಗ್ಗೆ 8 ಗಂಟೆಗೆ ಮೊದಲು) ಮತ್ತು ಸಂಜೆ (ಸೂರ್ಯಾಸ್ತದ ಸಮಯದಲ್ಲಿ) ಸೂರ್ಯನ ಕಿರಣ ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ಆಯುರ್ವೇದ ತಜ್ಞ ಡಾ. ಡಿಕ್ಸಾ ಭಾವಸರ್ ತಿಳಿಸಿದ್ದಾರೆ. ಇದನ್ನೂ ಓದಿ: ಕೆಲವರ ಸಂಬಂಧ ಹೆಚ್ಚು ಕಾಲ ಉಳಿಯಲ್ಲ ಯಾಕೆ ಗೊತ್ತಾ? ಇಲ್ಲಿದೆ ಕಾರಣಗಳು..

    ವಿಟಮಿನ್‌ ಡಿ
    ನೈಸರ್ಗಿಕ ಬೆಳಕು ʻವಿಟಮಿನ್ ಡಿʼಯ (vitamin D) ಶ್ರೀಮಂತ ಮೂಲವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅದಕ್ಕಿಂತ ಹೆಚ್ಚಿನದು ಸಿಗುತ್ತದೆ. ʻವಿಟಮಿನ್ ಡಿʼ ಪ್ರತಿರಕ್ಷಣಾ ಮತ್ತು ಶಕ್ತಿಯನ್ನು ಹೆಚ್ಚಿಸುವ ಹಾರ್ಮೋನ್ ಆಗಿದ್ದು, ಅದು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

    ರಕ್ತದಲ್ಲಿನ ಗ್ಲೂಕೋಸ್‌ ನಿಯಂತ್ರಣ
    ಇದು ವಾಸೋಡಿಲೇಟರ್ ಆಗಿರುವ ನೈಟ್ರಿಕ್ ಆಕ್ಸೈಡ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತದ ಹರಿವು, ಆಮ್ಲಜನಕೀಕರಣವನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಡಾ. ಭಾವಸರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೃದಯಾಘಾತ – ಒಂದು ತಿಂಗಳ ಮುಂಚೆ ಈ 12 ರೋಗಲಕ್ಷಣಗಳು ಕಂಡುಬಂದ್ರೆ ಇರಲಿ ಎಚ್ಚರ!

    ಮಾನಸಿಕ ಆರೋಗ್ಯ
    ಪ್ರತಿದಿನ ಸೂರ್ಯನ ಬೆಳಕಿನಲ್ಲಿ ವ್ಯಾಯಾಮ ಮಾಡುವುದು ನಿಮಗೆ ಸಂತೋಷ ನೀಡುತ್ತದೆ. ನೈಸರ್ಗಿಕ ಬೆಳಕಿನಿಂದ ನ್ಯೂರೋಟ್ರಾನ್ಸ್ಮಿಟರ್‌ (ನರಕೋಶಗಳು) ದೇಹದಲ್ಲಿ ಸಿರೊಟೋನಿನ್‌ ಉತ್ಪಾದನೆಗೆ ಕಾರಣವಾಗುತ್ತದೆ. ಇದರಿಂದ ಆತಂಕ, ಖಿನ್ನತೆ ಕಡಿಮೆಯಾಗುತ್ತದೆ. ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ಭಾವಸರ್‌ ಹೇಳಿದ್ದಾರೆ.

    ಉತ್ತಮ ನಿದ್ರೆ
    ಸೂರ್ಯನ ಬೆಳಕಿನಲ್ಲಿ ನಾವು ಹೊತ್ತು ಕಳೆದಷ್ಟು ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಮಾಡಬಹುದು. ನೈಸರ್ಗಿಕ ಸೂರ್ಯನ ಬೆಳಕು ನಮ್ಮ ನಿದ್ರೆಗೆ ತುಂಬಾ ಸಹಕಾರಿ. ಹೊರಾಂಗಣದಲ್ಲಿ ಇರುವುದು ನಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    ಯಾವ್ಯಾವುದೋ ಹೊತ್ತಿನಲ್ಲಿ ಸೂರ್ಯನ ಬೆಳಕಿಗೆ ಮೈವೊಡ್ಡಿಕೊಳ್ಳುವುದು ಸರಿಯಲ್ಲ. ಇದು ಅಜಾಗರೂಕ ನಡೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಬೆಳಗ್ಗೆಯ ಎಳೆ ಬಿಸಿಲು ಮತ್ತು ಸಂಜೆ ಸೂರ್ಯಾಸ್ತದ ಬೆಳಕು ಆರೋಗ್ಯಕ್ಕೆ ಪೂರಕ ಎಂಬುದು ವೈದ್ಯರ ಅಭಿಪ್ರಾಯ.

    Live Tv
    [brid partner=56869869 player=32851 video=960834 autoplay=true]

  • ಶಾಸಕಿ ಅನಿತಾ ಕುಮಾರಸ್ವಾಮಿಗೆ ಛತ್ರಿ ಸೇವೆ ನೀಡಿದ ಶಾಲಾ ಸಿಬ್ಬಂದಿ

    ಶಾಸಕಿ ಅನಿತಾ ಕುಮಾರಸ್ವಾಮಿಗೆ ಛತ್ರಿ ಸೇವೆ ನೀಡಿದ ಶಾಲಾ ಸಿಬ್ಬಂದಿ

    ರಾಮನಗರ: ನಗರದ ಖಾಸಗಿ ಶಾಲೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕಿ ಅನಿತಾ ಕುಮಾರಸ್ವಾಮಿಯವರಿಗೆ ಸಿಬ್ಬಂದಿ ಛತ್ರಿ ಸೇವೆ ನೀಡಿದ್ದಾರೆ.

    ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾಗಿ ಬಂದ ಅನಿತಾ ಕುಮಾರಸ್ವಾಮಿಯವರು ಬಿಸಿಲಿಗೆ ಅಂಜಿ, ಸಿಬ್ಬಂದಿಯಿಂದ ಛತ್ರಿ ಸೇವೆ ಪಡೆದುಕೊಂಡಿದ್ದಾರೆ. ಅನಿತಾರವರು ನಗರದ ಖಾಸಗಿ ಶಾಲೆಯ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮ ಶಾಲಾ ಆವರಣದಲ್ಲೇ ನಡೆಯುತ್ತಿದ್ದರಿಂದ ಬಿಸಿಲ ಝಳ ನೇರವಾಗಿ ಅವರನ್ನು ಕುಟುಕುತ್ತಿತ್ತು.

    ಈ ವೇಳೆ ಇದನ್ನು ಗಮನಿಸಿದ ಶಾಲಾ ಆಡಳಿತ ಸಿಬ್ಬಂದಿ ಮೊದಲು ತಾವೇ ಛತ್ರಿ ಹಿಡಿದಿದ್ದರು, ಬಳಿಕ ಅನಿತಾರವರ ಗನ್ ಮ್ಯಾನ್ ಛತ್ರಿ ಹಿಡಿದು ಕಾರ್ಯಕ್ರಮ ಮುಗಿಯುವವರೆಗೂ ಬಿಸಿಲಿನಿಂದ ರಕ್ಷಿಸಿದ್ದಾರೆ. ನಂತರ ಅನಿತಾರವರು ಭಾಷಣ ಮಾಡುವ ವೇಳೆಯು ಸಿಬ್ಬಂದಿ ಛತ್ರಿ ಹಿಡಿದೇ ನಿಂತಿದ್ದರು. ವಿಪರ್ಯಾಸವೆಂದರೇ ಮಕ್ಕಳು ಹಾಗೂ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಎಲ್ಲರೂ ಸುಡು ಬಿಸಿಲಿನಲ್ಲೇ ಕುಳಿತಿದ್ದರೇ, ಶಾಸಕರು ಮಾತ್ರ ತಮ್ಮ ಸಿಬ್ಬಂದಿಯಿಂದ ಛತ್ರಿ ಸೇವೆ ಪಡೆದುಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯ ಕೈತೋಟದಲ್ಲಿ ಹಚ್ಚಹಸಿರ ಹೊದಿಕೆ – ಬಿರುಬಿಸಿಲಲ್ಲೂ ಕೂಲ್ ಕೂಲ್ ಹವಾ

    ಮನೆಯ ಕೈತೋಟದಲ್ಲಿ ಹಚ್ಚಹಸಿರ ಹೊದಿಕೆ – ಬಿರುಬಿಸಿಲಲ್ಲೂ ಕೂಲ್ ಕೂಲ್ ಹವಾ

    ಕಲಬುರಗಿ: ರಾಜ್ಯದಲ್ಲಿ ಗರಿಷ್ಠ ತಾಪಮಾನ ದಾಖಲಾಗೋ ಜಿಲ್ಲೆಗಳ ಪೈಕಿ ಕಲಬುರಗಿಯೂ ಒಂದು. ಆದ್ರೆ ಇಂದಿನ ಪಬ್ಲಿಕ್ ಹೀರೋ ಡಾಕ್ಟರ್ ಚೇತನ್ ಇಂತಹ ಬಿಸಿಲಿನ ನಡುವೆಯೂ ಎಸಿ, ಕೂಲರ್ ಇಟ್ಟುಕೊಳ್ಳದೆ ಮನೆಯನ್ನ ಕೂಲಾಗಿ ಇಟ್ಟುಕೊಂಡಿದ್ದಾರೆ.

    ಕಲಬುರಗಿ ನಗರದ ವೆಂಕಟೇಶ್ವರ ಬಡಾವಣೆಯ ನಿವಾಸಿ ಡಾ.ಚೇತನ ದುರ್ಗಿ ಅವರು ಬಿರುಬೇಸಿಗೆಯಲ್ಲೂ ತಮ್ಮ ಮನೆಗೆ ಎಸಿಯಾಗಲೀ ಅಥವಾ ಕೂಲರ್ ಆಗಲಿ ಅಳವಡಿಸಿಕೊಂಡಿಲ್ಲ. ಬದಲಿಗೆ ಮನೆಯ ಆವರಣದ ತೋಟಕ್ಕೇ ನೀರೆರೆದು ಪೋಷಿಸಿ ಪರಿಸರ ಸ್ನೇಹಿ ಮನೆ ಮಾಡಿಕೊಂಡಿದ್ದಾರೆ. ಈ ಗಾರ್ಡನ್‍ನ್ಲಲಿ 50ಕ್ಕೂ ಅಧಿಕ ವಿವಿಧ ತಳಿಯ ಗಿಡಗಳಿವೆ.

    ಮನೆಯ ಮುಂಭಾಗದಿಂದ ಹಿಡಿದು ಮನೆಯ ಯಾವುದೇ ಮೂಲೆ ನೋಡಿದ್ರೂ ಕಣ್ಣಿಗೆ ಹಸಿರೇ ಕಾಣುತ್ತೆ. ಹೊರಗೆ ಎಷ್ಟು ಬಿಸಿಲಿರುತ್ತೋ ಅದಕ್ಕಿಂತ ಮೂರ್ನಾಲ್ಕು ಡಿಗ್ರಿ ಕಡಿಮೆ ಉಷ್ಣತೆ ಇಲ್ಲಿರುತ್ತದೆ. ಡಾ.ಚೇತನ್ ಅವರ ಈ ಪರಿಸರ ಕಾಳಜಿಗೆ ಕುಟುಂಬದವರು ಸಾಥ್ ನೀಡಿದ್ದಾರೆ.

    ಈ ಮನೆಯ ಹಸಿರ ಸಿರಿ ಕಂಡ ನಗರದ ಇತರೆ ಜನ ಕೂಡ ಡಾ.ಚೇತನ್ ಅವರನ್ನೇ ಅನುಕರಣೆ ಮಾಡೋಕೆ ಶುರು ಮಾಡಿದ್ದಾರೆ.

    https://www.youtube.com/watch?v=SGd6XvsvjwY

     

     

  • ವಿಮಾನ ನಿಲ್ದಾಣದಲ್ಲಿ ಬುಸ್ ಬುಸ್: ಆತಂಕಗೊಂಡಿದ್ದ ಪ್ರಯಾಣಿಕರು

    ವಿಮಾನ ನಿಲ್ದಾಣದಲ್ಲಿ ಬುಸ್ ಬುಸ್: ಆತಂಕಗೊಂಡಿದ್ದ ಪ್ರಯಾಣಿಕರು

    ಹೈದ್ರಾಬಾದ್: ಬಿಸಿಲಿನ ತೀವ್ರತೆಗೆ ಹಾವುಗಳು ಎಲ್ಲಂದ್ರಲ್ಲಿ ಕಾಣಿಸಿಕೊಳ್ಳುತ್ತಿವೆ. ಇನ್ನೂ ಪ್ರಾಣಿಗಳ ವಾಸಸ್ಥಾನವನ್ನು ಮಾನವ ಸಂಕುಲ ದಿನೇ ದಿನೇ ಅತಿಕ್ರಮಿಸಿಕೊಳ್ಳುತ್ತಿದ್ದಾನೆ. ಆಹಾರ ಅರಸಿ ಪ್ರಾಣಿಗಳು ನಾಡಿನತ್ತ ಬರಲು ಆರಂಭಿಸಿವೆ. ಅದೇ ರೀತಿ ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ ಹಾವೊಂದು ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು.

    ಇದನ್ನೂ ಓದಿ: ಟಾಯ್ಲೆಟ್‍ನಲ್ಲಿ ಕಾಣಿಸಿದ್ದು 1 ಹಾವು, ಉರಗ ತಜ್ಞರು ಬಂದ್ಮೇಲೆ ಮನೆಯಲ್ಲೇ ಪತ್ತೆಯಾದ್ವು 24 ಹಾವುಗಳು!

    ಹೈದ್ರಾಬಾದ್‍ನ ಜಿಎಂಆರ್ ಏರ್‍ಪೋರ್ಟ್‍ನ ವಿಮಾನಗಳ ನಿಲುಗಡೆ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿತ್ತು. ಇದರಿಂದ ಸ್ಥಳದಲ್ಲಿದ್ದ ಪ್ರಯಾಣಿಕರನ್ನು ಭಯ ಬೀಳುವಂತೆ ಮಾಡಿತ್ತು.

    ಕೂಡಲೇ ಸ್ಥಳಕ್ಕಾಗಮಿಸಿದ ವಿಮಾನ ನಿಲ್ದಾಣದ ಸಿಬ್ಬಂದಿ ಹಾವನ್ನು ಹಿಡಿದು ಪ್ರಯಾಣಿಕರ ಆತಂಕವನ್ನು ನಿವಾರಣೆ ಮಾಡಿದ್ದಾರೆ.

    ಇದನ್ನೂ ಓದಿ: ಕಾಳಿಂಗ ಸರ್ಪ ನೀರು ಕುಡಿಯುವುದನ್ನ ನೋಡಿ

    ಇದನ್ನೂ ಓದಿ: ನೀರಿನ ಮೂಲ ಹುಡುಕಿ ನಾಡಿಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ 

     

  • ಮೇ ತಿಂಗಳಲ್ಲಿ ಹೆಚ್ಚಲಿದೆ ಬಿಸಿಲಿನ ತಾಪ- ಗರ್ಭಿಣಿಯರು, ಮಕ್ಕಳು, ಬಾಣಂತಿಯರಿಗೆ ಎಫೆಕ್ಟ್

    ಮೇ ತಿಂಗಳಲ್ಲಿ ಹೆಚ್ಚಲಿದೆ ಬಿಸಿಲಿನ ತಾಪ- ಗರ್ಭಿಣಿಯರು, ಮಕ್ಕಳು, ಬಾಣಂತಿಯರಿಗೆ ಎಫೆಕ್ಟ್

    ರಾಯಚೂರು: ಹೈದ್ರಾಬಾದ್ ಕರ್ನಾಟಕದಲ್ಲಿ ಬಿಸಿಲಿನ ಝಳ ಜೋರಾಗಿದೆ. ಗರ್ಭಿಣಿಯರು ಬಿಸಿಲ ತಾಪಕ್ಕೆ ಹಲವಾರು ಸಮಸ್ಯೆಗಳಿಗೆ ಒಳಗಾದ್ರೆ, ಹೆರಿಗೆಯಾದ ಬಳಿಕ ಮಕ್ಕಳು ಮಾರಣಾಂತಿಕ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಈಗಲೇ ಇಷ್ಟೊಂದು ತೊಂದರೆಗೆ ಒಳಗಾಗಿದ್ರೆ, ಮುಂದಿನ ತಿಂಗಳು ಕಾದಿದೆ ಅಪಾಯ ಅಂತಿದ್ದಾರೆ ಹವಾಮಾನ ತಜ್ಞರು.

    ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗ್ತಿದ್ದು, ರಾಯಚೂರು, ಬಳ್ಳಾರಿ, ಕಲಬುರಗಿ, ಯಾದಗಿರಿಯಲ್ಲಿ ನವಜಾತ ಶಿಶುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಶಿಶುಗಳ ತೂಕ ಕಡಿಮೆಯಾಗಿ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಜಾಸ್ತಿಯಾಗ್ತಿದ್ದು, ಜ್ವರ, ಕಾಮಾಲೆ, ಕಡಿಮೆ ಮೂತ್ರ, ನಿರ್ಜಲೀಕರಣ, ಕಿಡ್ನಿ ವೈಫಲ್ಯ ಸಮಸ್ಯೆ ಹೆಚ್ಚಾಗ್ತಿದೆ.

    ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನಕ್ಕೆ ಸಿಲುಕಿ 800ಕ್ಕೂ ಹೆಚ್ಚು ಶಿಶುಗಳು ಅಪಾಯದಲ್ಲಿ. ನಿರ್ಜಲೀಕರಣದಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಕೆಲವು ಮಕ್ಕಳ ಮೂತ್ರಪಿಂಡ ವೈಫಲ್ಯವಾಗಿದೆ. ರಾಯಚೂರು ಕೃಷಿ ವಿವಿಯ ಹವಾಮಾನ ತಜ್ಞರ ಮಾಹಿತಿ ಪ್ರಕಾರ ಮೇ ತಿಂಗಳಲ್ಲಿ ಬಿಸಿಲಿನ ತಾಪ 45 ಡಿಗ್ರಿ ಸೆಲ್ಸಿಯಸ್ ತಲುಪಲಿದ್ದು, ಮಕ್ಕಳು, ತಾಯಂದಿರು ಎಚ್ಚರಿಕೆ ವಹಿಸಬೇಕಿದೆ.

  • ರಾಜ್ಯದ ಈ ಭಾಗಗಳಲ್ಲಿ ಇಂದು, ನಾಳೆ ಮಳೆ ಸಾಧ್ಯತೆ

    ರಾಜ್ಯದ ಈ ಭಾಗಗಳಲ್ಲಿ ಇಂದು, ನಾಳೆ ಮಳೆ ಸಾಧ್ಯತೆ

    ಬೆಂಗಳೂರು: ಕಾದು ಕೆಂಡವಾಗಿದ್ದ ರಾಜ್ಯದಲ್ಲಿ ಸೋಮವಾರ ಸಂಜೆ ವೇಳೆ ಮಳೆರಾಯ ತಂಪೆರೆದಿದ್ದ. ಈ ಮೂಲಕ ಹಾಟ್ ಸಿಟಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳು ತಣ್ಣಗಾಗಿದ್ದವು.

    ಇದು ಮುಂಗಾರು ಪೂರ್ವ ಮಳೆಯಾಗಿದ್ದು, ಇಂದು ಮತ್ತು ನಾಳೆ ಕೂಡ ಕೆಲ ಪ್ರದೇಶಗಳಲ್ಲಿ ಮಳೆಯಾಗಲಿದೆ.

    ಬೆಂಗಳೂರು ನಗರ, ಗ್ರಾಮಾಂತರ, ಕೊಡಗು, ಮಡಿಕೇರಿ, ಹಾಸನ, ರಾಮನಗರದಲ್ಲಿ ಇಂದು ಮಳೆಯಾಗಲಿದೆ. ದಕ್ಷಿಣ ಒಳನಾಡು ಹಾಗೂ ಮಲೆನಾಡು ಪ್ರದೇಶದಲ್ಲಿ ಕೂಡ ಮಳೆಯಾಗಲಿದೆ. ಬಿಸಿಲ ನಾಡು ಬಳ್ಳಾರಿ ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಯಾವುದೇ ಮಳೆಯ ಮುನ್ಸೂಚನೆ ಇರುವುದು ಕಂಡುಬಂದಿಲ್ಲ.

  • ನೀರು.. ನೀರು.. ಎಂದು ಚಡಪಡಿಸುತ್ತಲೇ ಜೀವಬಿಟ್ಟ ಕೊಪ್ಪಳದ ಬಾಲಕ

    ನೀರು.. ನೀರು.. ಎಂದು ಚಡಪಡಿಸುತ್ತಲೇ ಜೀವಬಿಟ್ಟ ಕೊಪ್ಪಳದ ಬಾಲಕ

    ಕೊಪ್ಪಳ: ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕೊಪ್ಪಳದಲ್ಲಿ ಬಾಲಕನೊಬ್ಬ ಬಲಿಯಾಗಿದ್ದಾನೆ.

    ಕೊಪ್ಪಳದ ಕುಷ್ಟಗಿ ತಾಲೂಕಿನ ಸಾಸ್ವಿಹಾಳ ಗ್ರಾಮದಲ್ಲಿ ಬಿಸಿಲಿನ ತಾಪದಿಂದ ಬೇಸತ್ತ ಬಾಲಕನೊಬ್ಬ ನೀರು….ನೀರು…. ಅಂತಾ ಗೋಳಿಡುತ್ತಲೇ ಕೊನೆಯುಸಿರೆಳೆದಿದ್ದಾನೆ. 7ನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ದೊಡ್ಡ ಬಸವ ಮೃತ ದುರ್ದೈವಿ ಬಾಲಕ.

    ನಡೆದಿದ್ದೇನು?: ಬಾಲಕ ಶುಕ್ರವಾರ ಏಕಾಏಕಿ ನೀರು.. ನೀರು.. ಎಂದು ಚಡಪಡಿಸಿದ್ದಾನೆ. ಆಸ್ಪತ್ರೆಗೆ ದಾಖಲಿಸಿ, ಚಿಲಿತ್ಸೆ ಕೊಡಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ. ಸುತ್ತಲೂ ತಗಡಿನಿಂದ ನಿರ್ಮಿಸಿದ ಶೆಡ್ ನಲ್ಲಿ ಬಾಲಕನ ಕುಟುಂಬ ವಾಸಿಸುತ್ತಿದೆ. ಬಿಸಿಲಿನ ಬೇಗೆಗೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಮಧ್ಯಾಹ್ನ ಬಾವಿಯೊಂದರಲ್ಲಿ ಈಜಾಡಿ ಬಂದ ನಂತರ ಬಾಲಕ ನೀರು.. ನೀರು ಎಂದು ಪರಿತಪಿಸುತ್ತಿದ್ದನು ಅಂತಾ ಪೋಷಕರು ಹೇಳಿದ್ದಾರೆ. ಇದೀಗ ಬಾಲಕನ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.

    ಇತ್ತೀಚೆಗಷ್ಟೇ ಬಳ್ಳಾರಿಯಲ್ಲಿ ವೃದ್ಧೆ ಹಾಗೂ ಕಲಬುರಗಿಯಲ್ಲಿ ಭಿಕ್ಷುಕರೊಬ್ಬರು ಬಿಸಿಲಿನ ತಾಪಕ್ಕೆ ಬಲಿಯಾಗಿದ್ದರು.

    ಇದನ್ನೂ ಓದಿ: ಬಿಸಿಲ ಧಗೆ ಡೇಂಜರ್ – ಕೂಲ್ ಆಗೋಕೆ ನೀವೀ ಸುದ್ದಿ ಓದ್ಲೇಬೇಕು!

  • ಬಿಸಿಲಿನ ಝಳಕ್ಕೆ ಬೆಂದುಹೋದ ಬಳ್ಳಾರಿ – ಸೂಕ್ತ ಚಿಕಿತ್ಸೆ ಸಿಗದೆ ವೃದ್ಧೆ ಬಲಿ

    ಬಿಸಿಲಿನ ಝಳಕ್ಕೆ ಬೆಂದುಹೋದ ಬಳ್ಳಾರಿ – ಸೂಕ್ತ ಚಿಕಿತ್ಸೆ ಸಿಗದೆ ವೃದ್ಧೆ ಬಲಿ

    ಬಳ್ಳಾರಿ: ಬಿಸಿಲಿನ ಝಳಕ್ಕೆ ಬಳ್ಳಾರಿಯಲ್ಲಿ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಆದ್ರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ರೆ ಅವರನ್ನು ಬದುಕಿಸಿಕೊಳ್ಳಬಹುದಿತ್ತು.

    ಹೂವಿನ ಹಡಗಲಿಯಿಂದ ಹೊಸಪೇಟೆಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆ ಬಿಸಿಲಿನಿಂದ ಬಳಲಿ ಅಸ್ವಸ್ಥರಾದರು. ತಕ್ಷಣವೇ ಅವರನ್ನು ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆದ್ರೆ ವೈದ್ಯರು ಇಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೆ ಅವರು ಮೃತಪಟ್ಟರು.

    ಬಳ್ಳಾರಿಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಉಷ್ಣಾಂಶ 40 ಡಿಗ್ರಿಯಿಂದ 43 ಡಿಗ್ರಿಗೆ ಏರಿಕೆಯಾಗಿದೆ. ಹೀಗಾಗಿ ಮಕ್ಕಳು ನಿರ್ಜಲೀಕರಣದಿಂದ ಬಳಲುತ್ತಿದ್ದು ವಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಚಿಕ್ಕ ಮಕ್ಕಳಲ್ಲಿ ನೀರಿನಂಶ ಕಡಿಮೆಯಾಗುತ್ತಿದೆ. ನವಜಾತ ಶಿಶುಗಳನ್ನು ತ್ರೀವ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಮಗುವಿಗೆ ಎದೆಹಾಲು ಹೆಚ್ಚಿಗೆ ನೀಡಬೇಕು ಮತ್ತು ಮಕ್ಕಳ ದೇಹದಲ್ಲಿ ನೀರಿನಾಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಬಾಣಂತಿಯರು ನಿತ್ಯ ಎಳನೀರು ಸೇರಿದಂತೆ ತಂಪು ಪಾನೀಯಗಳನ್ನು ಸೇವಿಸಬೇಕು ಅಂತಾ ವೈದ್ಯರು ಸಲಹೆ ನೀಡುತ್ತಿದ್ದಾರೆ.

    ಭಿಕ್ಷುಕ ಸಾವು: ಕಲಬುರಗಿ ನಗರದ ಕೋಟೆಯಲ್ಲಿ ಬಿಸಿಲಿನ ತಾಪ ತಾಳಲಾರದೇ ಭಿಕ್ಷುಕ ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ಭಿಕ್ಷುಕನ ಶವ ಪತ್ತೆಯಾಗಿದ್ದು ರವಿವಾರ ಮೃತಪಟ್ಟಿರುವ ಶಂಕೆಯಿದೆ. ಮೃತ ಭಿಕ್ಷಕುಕನ ಹೆಸರು ಮತ್ತು ವಿಳಾಸದ ಬಗ್ಗೆ ಪೊಲೀಸರಿಗೆ ಲಭ್ಯವಾಗಿಲ್ಲ. ಸದ್ಯ ವೃದ್ಧ ಸತ್ತಿರುವ ಸ್ಥಿತಿ ನೋಡಿದ್ರೆ ಬಿಸಲಿನ ತಾಪಕ್ಕೆ ಬಲಿಯಾದಂತಿದೆ. ಸ್ಥಳಕ್ಕೆ ಚೌಕ್ ಪೊಲೀಸರು ಭೇಟಿ ನೀಡಿ ಶವದ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಕಲಬುರಗಿ ಪೊಲೀಸರಿಗೆ ಕೂಲಿಂಗ್ ಗ್ಲಾಸ್!

    ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಕಲಬುರಗಿ ಪೊಲೀಸರಿಗೆ ಕೂಲಿಂಗ್ ಗ್ಲಾಸ್!

    ಕಲಬುರಗಿ: ಬಿಸಿಲಿನ ತಾಪಕ್ಕೆ ಕಲಬುರಗಿ ದೇಶದಲ್ಲಿಯೇ ನಾಲ್ಕನೇ ಸ್ಥಾನ ಪಡೆದಿದೆ. ಕೇಂದ್ರ ಹವಾಮಾನ ಇಲಾಖೆಯ ಈ ಮಾಹಿತಿ ಪ್ರಕಾರ ಮಹಾರಾಷ್ಟ್ರ ನಂಬರ್ ಒನ್ ಜಾಗದಲ್ಲಿದೆ. ಹೀಗಾಗಿ 42 ಡಿಗ್ರಿ ಉಷ್ಣಾಂಶದಲ್ಲಿ ಕೆಲಸ ಮಾಡೋ ಪೊಲೀಸರಿಗೆ ಸರ್ಕಾರ ಕೂಲ್ ಡೌನ್ ಅಂತ ಧೈರ್ಯ ಹೇಳ್ತಿದೆ.

    ಹೌದು. ಬಿಸಿಲೂರು ಎಂದೇ ಪ್ರಸಿದ್ಧಿಯಾಗಿರೋ ಕಲಬುರಗಿ ಇದೀಗ ಪಕ್ಕಾ ಸನ್ ಸಿಟಿಯಾಗಿದೆ. ಕಾರಣ 42 ಡಿಗ್ರಿಗೂ ಅಧಿಕ ತಲುಪಿರೋ ಉಷ್ಣಾಂಶ. ಇಂತಹ ಬಿಸಿಲಿಗೆ ಹೈರಾಣಾಗದಿರಲಿ ಅಂತ ಪೊಲೀಸ್ ಇಲಾಖೆ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸೋ ಸಿಬ್ಬಂದಿಗೆ ತಂಪು ಕನ್ನಡಕ ನೀಡ್ತಿದೆ. ಖುದ್ದು ಎಸ್ಪಿ ಶಶಿಕುಮಾರ್ ತಮ್ಮ ಸಿಬ್ಬಂದಿಗೆ ಮಜ್ಜಿಗೆ ನೀಡಿ ಸಂತೈಸಿದ್ದಾರೆ.

    ಎಲ್ಲೆಲ್ಲಿ ಎಷ್ಟು ಉಷ್ಣಾಂಶ ಇದೆ?: 

    ಮಹಾರಾಷ್ಟ್ರ ಚಂದ್ರಾಪುರ- 44.2 ಡಿಗ್ರಿ ಸೆಲ್ಸಿಯಸ್.
    ಮಹಾರಾಷ್ಟ್ರ ಬ್ರಹ್ಮಪುರಿ- 43..3 ಡಿಗ್ರಿ ಸೆಲ್ಸಿಯಸ್
    ಓರಿಸ್ಸಾ ಜರ್ಸುಗುಡಾ- 42.8 ಡಿಗ್ರಿ ಸೆಲ್ಸಿಯಸ್

    ಕರ್ನಾಟಕ…ಕಲಬುರಗಿ- 42.1 ಡಿಗ್ರಿ ಸೆಲ್ಸಿಯಸ್

    ಇಂತಹ ಸುಡುಬಿಸಿಲಿಗೆ ದೇಹ ದಣಿಯುತ್ತೆ ಮಾತ್ರವಲ್ಲ ಬಾಡಿ ಡಿಹೈಡ್ರೇಷನ್ ಆಗುತ್ತೆ. ಆದ್ದರಿಂದ ಎಳೆನೀರು, ಮಜ್ಜಿಗೆ ನೀಡ್ತಿರೋ ಜಿಲ್ಲಾಡಳಿತದ ಕ್ರಮಕ್ಕೆ ಪೇದೆಗಳು ಫುಲ್ ಖುಷ್ ಆಗಿದ್ದಾರೆ. ಇದಿಷ್ಟು ಏಪ್ರಿಲ್ ಬಿಸಿಲಾದ್ರೆ ಇನ್ನೂ ಮೇ ತಿಂಗಳಲ್ಲಿ ನೆಲ ಅದೆಷ್ಟು ಗರಂ ಆಗುತ್ತೋ ಅನ್ನೋ ಲೆಕ್ಕದಲ್ಲಿದ್ದಾರೆ ಜನ. ಹೀಗಾಗಿ ಜನ ಮಟಮಟ ಮಧ್ಯಾಹ್ನ ಹೊರಗೆ ಬರೋದೆ ದುಸ್ತರವಾಗೋ ಸಾಧ್ಯತೆ ಇದೆ.