Tag: Sunitha

  • ಗುಂಡೇಟಿನಿಂದ ಚೇತರಿಸಿಕೊಳ್ಳುತ್ತಿರುವ ಗೋವಿಂದರನ್ನು ನೋಡಲು ಆಸ್ಪತ್ರೆಗೆ ಬಂದ ಶಿಲ್ಪಾ ಶೆಟ್ಟಿ

    ಗುಂಡೇಟಿನಿಂದ ಚೇತರಿಸಿಕೊಳ್ಳುತ್ತಿರುವ ಗೋವಿಂದರನ್ನು ನೋಡಲು ಆಸ್ಪತ್ರೆಗೆ ಬಂದ ಶಿಲ್ಪಾ ಶೆಟ್ಟಿ

    ಬಾಲಿವುಡ್ ನಟ ಗೋವಿಂದಗೆ (Govinda) ಅ.1ರಂದು ಆಕಸ್ಮಿಕವಾಗಿ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗುಂಡೇಟಿನಿಂದ ಚೇತರಿಕೊಳ್ಳುತ್ತಿರುವ ನಟ ಗೋವಿಂದರನ್ನು ನೋಡಲು ಮುಂಬೈನ ಆಸ್ಪತ್ರೆಗೆ ನಟಿ ಶಿಲ್ಪಾ ಶೆಟ್ಟಿ (Shilpa Shetty) ಭೇಟಿ ನೀಡಿದ್ದಾರೆ.

    ಗುಂಡೇಟಿನ ಬಳಿಕ ನಟ ಗೋವಿಂದಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇದೀಗ ಅವರು ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿರುವ ಗೋವಿಂದರನ್ನು ಇದೀಗ ಶಿಲ್ಪಾ ಭೇಟಿಯಾಗಿ ಆರೋಗ್ಯದ ಬಗ್ಗೆ ಯೋಗಕ್ಷೇಮ ವಿಚಾರಿಸಿದ್ದಾರೆ. ಅಂದಹಾಗೆ, ಅಕ್ಟೋಬರ್ 4ರಂದು ಗೋವಿಂದ ಡಿಸ್ಚಾರ್ಜ್ ಆಗುತ್ತಿರುವ ಕುರಿತು ಅವರ ಪತ್ನಿ ಸುನೀತಾ ತಿಳಿಸಿದ್ದಾರೆ. ಇದನ್ನೂ ಓದಿ:BBK 11: ಧರ್ಮ ಕೀರ್ತಿರಾಜ್‌ ಮೇಲೆ ಲವ್‌ ಆಯ್ತಾ?- ದೊಡ್ಮನೆಯಲ್ಲಿ ತ್ರಿಕೋನ ಪ್ರೇಮಕಥೆ

     

    View this post on Instagram

     

    A post shared by Viral Bhayani (@viralbhayani)

    ಅಷ್ಟಕ್ಕೂ ಆಗಿದ್ದೇನು?

    ನಟ ಗೋವಿಂದ ಅವರು ಅ.1ರಂದು ಬೆಳಗ್ಗೆ ತಮ್ಮ ಮನೆಯಲ್ಲಿ ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಬೆಳಗ್ಗೆ 4:45ರ ಸುಮಾರಿಗೆ ಅವರ ಪರವಾನಗಿ ಪಡೆದ ರಿವಾಲ್ವರ್‌ನಿಂದ ಮಿಸ್‌ಫೈರ್ ಆಗಿ ಗಾಯವಾಗಿತ್ತು ಎಂದು ಮುಂಬೈ ಪೊಲೀಸರು ತಿಳಿಸಿದ್ದರು. ನಟ ಅಪಾಯದಿಂದ ಪಾರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದರು.

    ಘಟನೆ ವೇಳೆ ಮನೆಯಲ್ಲಿ ಗೋವಿಂದ ಒಬ್ಬರೇ ಇದ್ದರು. ಶಿವಸೇನೆ ನಾಯಕರಾಗಿರುವ ಗೋವಿಂದ ಅವರು ಅ.1ರ ಬೆಳಗ್ಗೆ ಕೋಲ್ಕತ್ತಾಗೆ ತೆರಳುವಾಗ ಈ ಘಟನೆ ನಡೆದಿತ್ತು. ಇನ್ನೂ ಮಾಧ್ಯಮಗಳಿಗೆ ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಪ್ರತಿಕ್ರಿಯಿಸಿದ್ದು, ಪರವಾನಗಿ ಪಡೆದ ರಿವಾಲ್ವರ್ ಅನ್ನು ಕೇಸ್‌ನಲ್ಲಿ ಇಟ್ಟುಕೊಂಡಿದ್ದರು. ಅಂದು ಕೇಸ್‌ನಿಂದ ತಗೆಯುವಾಗ ರಿವಾಲ್ವರ್ ಕೆಳಗೆ ಬಿದ್ದಾಗ ಫೈರ್ ಆಗಿ ಬುಲೆಟ್ ಕಾಲಿಗೆ ತಗುಲಿತ್ತು.

  • ಪತಿಯ ಬಂಧನದ ಬೆನ್ನಲ್ಲೇ ಮೋದಿ ವಿರುದ್ಧ ಸಿಡಿದೆದ್ದ ಕೇಜ್ರಿವಾಲ್‌ ಪತ್ನಿ

    ಪತಿಯ ಬಂಧನದ ಬೆನ್ನಲ್ಲೇ ಮೋದಿ ವಿರುದ್ಧ ಸಿಡಿದೆದ್ದ ಕೇಜ್ರಿವಾಲ್‌ ಪತ್ನಿ

    ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ (Delhi Excise Policy Case) ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ( Delhi CM Arvind Kejriwal) ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ. ಈ ಬೆನ್ನಲ್ಲೇ ಕೇಜ್ರಿವಾಲ್‌ ಪತ್ನಿ ಸುನೀತಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

    ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಅಧಿಕಾರದ ದುರಹಂಕಾರದಿಂದ ಮೋದಿಯವರು ಮೂರು ಬಾರಿ ಚುನಾಯಿತ ಮುಖ್ಯಮಂತ್ರಿಯನ್ನು ಬಂಧಿಸಿ ಎಲ್ಲರನ್ನೂ ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಇದು ದೆಹಲಿ ಜನತೆಗೆ ಮಾಡಿದ ದ್ರೋಹ. ನಿಮ್ಮ ಮುಖ್ಯಮಂತ್ರಿ ಸದಾ ನಿಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಅವರು ಜೈಲಿನ ಒಳಗಿರಲಿ, ಹೊರಗಿರಲಿ ಅವರ ಜೀವನ ದೇಶಕ್ಕೆ ಮುಡಿಪಾಗಿದೆ. ಅವರು ಜನರಿಗಾಗಿ, ಜನರಿಗೋಸ್ಕರ ಇದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

    ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಹಾಜರಾಗುವಂತೆ ಜಾರಿಗೊಳಿಸಿದ್ದ 9 ಸಮನ್ಸ್‌ಗೆ ಕೇಜ್ರಿವಾಲ್‌ ಗೈರಾಗಿದ್ದರು. ಹೈಕೋರ್ಟ್‌ನಲ್ಲೂ (High Court) ಇಡಿ ವಿಚಾರಣೆಯನ್ನು ಮುಂದೂಡವಂತೆ ಕೇಜ್ರಿವಾಲ್‌ ಪರ ವಕೀಲರು ಮನವಿ ಮಾಡಿದ್ದರು. ಆದರೆ ಹೈಕೋರ್ಟ್‌ ವಾದವನ್ನು ಪುರಸ್ಕರಿಸದೇ ಕೇಜ್ರಿವಾಲ್‌ಗೆ ರಕ್ಷಣೆ ನೀಡಲು ನಿರಾಕರಿಸಿತು. ಈ ಬೆನ್ನಲ್ಲೇ ಗುರುವಾರ ರಾತ್ರಿ ಇಡಿ ಕೇಜ್ರಿವಾಲ್‌ ನಿವಾಸಕ್ಕೆ ತೆರಳಿ ಬಂಧಿಸಿದೆ. ಇದನ್ನೂ ಓದಿ: ಏನಿದು ದೆಹಲಿ ಮದ್ಯ ಹಗರಣ? ಕೇಜ್ರಿವಾಲ್‌ ಮೇಲಿರುವ ಆರೋಪ ಏನು? ಬಂಧನವಾದ ಪ್ರಮುಖರು ಯಾರು?

    9 ಸಮನ್ಸ್‌ಗೆ ಗೈರು: 2023ರ ನವೆಂಬರ್‌ 23ಕ್ಕೆ ಮೊದಲ ಬಾರಿ ಕೇಜ್ರಿವಾಲ್‌ಗೆ ಸಮನ್ಸ್‌ ಜಾರಿ ಮಾಡಲಾಗಿತ್ತು. ಆದರೆ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಡಿ.23 ರಂದು ಮತ್ತೆ ಸಮನ್ಸ್‌ ಜಾರಿ ಮಾಡಲಾಗಿತ್ತು. ಈ ಸಮನ್ಸ್‌ಗೆ ಗೈರಾದ ನಂತರ 2024ರಲ್ಲಿ ಜ.3, ಜ.18, ಫೆ.2, ಫೆ.19, ಫೆ.26, ಮಾರ್ಚ್‌ 4 ರಂದು ಸಮನ್ಸ್‌ ಜಾರಿ ಮಾಡಲಾಗಿತ್ತು. ಈ ಎಲ್ಲಾ ಸಮನ್ಸ್‌ಗಳಿಗೆ ಗೈರಾದ ಹಿನ್ನೆಲೆಯಲ್ಲಿ ಮಾರ್ಚ್‌ 21 ರಂದು ಸಮನ್ಸ್‌ ಜಾರಿ ಮಾಡಿ ಕೇಜ್ರಿವಾಲ್‌ ಅವರನ್ನು ಇಡಿ ಬಂಧಿಸಿದೆ.

    ಬಂಧನಗೊಂಡವರು ಯಾರು?: ಈ ಪ್ರಕಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿ ಮನೀಶ್‌ ಸಿಸೋಡಿಯಾ‌ (ಆಪ್ ಡಿಸಿಎಂ), ಸತ್ಯೇಂದ್ರ ಜೈನ್‌(ಆಪ್‌ ಸಚಿವ), ಸಂಜಯ್‌ ಸಿಂಗ್‌(ಆಪ್‌ ಸಂಸದ), ಕೆ.ಕವಿತಾ(ಬಿಆರ್‌ಎಸ್‌ ಶಾಸಕಿ).

  • ಎಸ್‍ಎಂ ಕೃಷ್ಣಗೆ ಸಹೋದರಿ ವಿಯೋಗ – ಬಿಜೆಪಿ ಸೇರ್ಪಡೆ ಮುಂದೂಡಿಕೆ

    ಎಸ್‍ಎಂ ಕೃಷ್ಣಗೆ ಸಹೋದರಿ ವಿಯೋಗ – ಬಿಜೆಪಿ ಸೇರ್ಪಡೆ ಮುಂದೂಡಿಕೆ

    ಬೆಂಗಳೂರು: ಇವತ್ತು ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ಮಾಜಿ ಸಿಎಂ ಎಸ್.ಎಂ. ಕೃಷ್ಣ ಬಿಜೆಪಿ ಸೇರಬೇಕಿತ್ತು. ಆದ್ರೆ ಕೃಷ್ಣ ಅವರ ಸಹೋದರಿ ಸುನೀತಾ ಮಂಗಳವಾರ ರಾತ್ರಿ ವಿಧಿವಶರಾಗಿದ್ದಾರೆ. ಹೀಗಾಗಿ ಕೃಷ್ಣ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

    ಮಂಗಳವಾರದಂದು ಮಂಡ್ಯದ ಸೋಮನಹಳ್ಳಿಯಲ್ಲಿ ಕೃಷ್ಣ ಅವರ ಸಹೋದರಿ ಸುನೀತಾ ವಿಧಿವಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

    ಸುನೀತಾ ಅವರ ಮೃತದೇಹವನ್ನು ಅವರು ವಾಸವಾಗಿರುವ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸಕ್ಕೆ ಕರೆತರಲಾಗುತ್ತದೆ.