Tag: Sunita

  • ‘ಹೆಜ್ಜಾರು’ ಸಿನಿಮಾ ತಂಡದಿಂದ ನಟ ಶಂಕರ್ ನಾಗ್ ಅವರಿಗೆ ವಿಶೇಷ ಪತ್ರ

    ‘ಹೆಜ್ಜಾರು’ ಸಿನಿಮಾ ತಂಡದಿಂದ ನಟ ಶಂಕರ್ ನಾಗ್ ಅವರಿಗೆ ವಿಶೇಷ ಪತ್ರ

    ಕಿರುತೆರೆಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಲೇಖಕ, ನಿರ್ದೇಶಕ ಹರ್ಷಪ್ರಿಯ ಇದೇ ಮೊದಲ ಬಾರಿಗೆ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅವರು ಹೆಜ್ಜಾರು (Hejjaru) ಎಂದು ಹೆಸರಿಟ್ಟಿದ್ದಾರೆ. ಶೀರ್ಷಿಕೆಯ ಮೂಲಕವೇ ಕುತೂಹಲ ಮೂಡಿಸಿರುವ ಹರ್ಷಪ್ರಿಯಾ, ತಾವು ಮತ್ತು ತಮ್ಮ ತಂಡ ನಟ ಶಂಕರ್ ನಾಗ್ ಅವರನ್ನು ಮಾನಸ ಗುರುಗಳು ಎಂದು ಕರೆದಿದ್ದಾರೆ. ಹಾಗಾಗಿಯೇ ಶಂಕರ್ ನಾಗ್ (Shankar Nag) ಅವರ ಹುಟ್ಟು ಹಬ್ಬಕ್ಕೆ ವಿಶೇಷ ಪತ್ರವೊಂದನ್ನು ಬರೆದಿದ್ದಾರೆ.

    ಶಂಕ್ರಣ್ಣ ನಾಗರಕಟ್ಟೆ, ಸಿನಿಮಾ ಬೀದಿ, ಸ್ವರ್ಗ ಎಂಬ ಅಡ್ರೆಸ್ ಗೆ ಪೋಸ್ಟ್ ಮಾಡಿರುವ ನಿರ್ದೇಶಕರು, ‘ಇಲ್ಲಿ ನಾವೆಲ್ಲರೂ ಕ್ಷೇಮ. ಅಲ್ಲಿ ನೀವೂ ಸಹಾ ಕ್ಷೇಮವಾಗಿದ್ದೀರಿ ಎಂದು ನಂಬಿದ್ದೇವೆ. ಈ ಪತ್ರ ಬರೆಯಲು ಕಾರಣವೇನೆಂದರೆ, ಕನ್ನಡ ಚಿತ್ರರಂಗ ಈಗ ನೀವು ಕಂಡ ಕನಸಿನಂತೆಯೇ ಭವ್ಯವಾಗಿ ಬೆಳಗುತ್ತಿದೆ. ದೇಶದೆಲ್ಲೆಡೆ ಕನ್ನಡ ಚಿತ್ರಗಳು ಸದ್ದು, ಸುದ್ದಿ ಮಾಡುತ್ತಿವೆ ಎಂಬುದು ನಿಮಗೂ ಗೊತ್ತಿರುವ ವಿಚಾರವೆ. ನೀವು ನಡೆದ ರಾಜಬೀದಿಯಲ್ಲಿ ಪುಟ್ಟ ಹೆಜ್ಜೆಗಳನ್ನು ಇಟ್ಟು ಹೊರಟಿದ್ದೇವೆ. ಹೆಜ್ಜಾರು ಚಿತ್ರದ ಎಲ್ಲಾ ತಂತ್ರಜ್ಞರಿಗೂ, ಕಲಾವಿದರಿಗೂ ನೀವು ಸದಾ ಮಾನಸ ಗುರುಗಳು’ ಎಂದು ಪತ್ರವನ್ನು ಮುಂದುವರೆಸಿದ್ದಾರೆ.  ಇದನ್ನೂ ಓದಿ:ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕೇಳಿ ಬರಲಿದೆ ‘ಮೆಲ್ಲುಸಿರೆ ಸವಿಗಾನ’ ಹಾಡು

    ಪತ್ರವನ್ನು ಮುಂದುವರೆಸುತ್ತಾ, ‘ನಿಮ್ಮ ಪಾದರಸದಂತಹ ಉತ್ಸಾಹ, ಗುಲಗಂಜಿಯಷ್ಟಾದರೂ ನಮಗೂ ಸಿಗುವಂತೆ ಆಶೀರ್ವದಿಸಬೇಕೆಂದು ಈ ಮೂಲಕ ಬೇಡಿಕೊಳ್ಳುತ್ತೇವೆ. ಪ್ರತೀ ಕ್ಷಣವನ್ನೂ ಮರಳಿ ಬಾರದು ಎಂಬಂತೆ ಜೀವಿಸುವವರು ನೀವು. ಅಂತಹ ಕೆಲ ಕ್ಷಣಗಳನ್ನು ನಮ್ಮ ಹೆಜ್ಜಾರು ಕುರಿತಾದ ಮಾಹಿತಿಯಗಳನ್ನು ಓದಲು ಮೀಸಲಿಟ್ಟಿದ್ದು ನಮ್ಮ ಭಾಗ್ಯ. ನೀವು ಮೆಚ್ಚಿದ ಚಿತ್ರಕ್ಕೆ ಕನ್ನಡಿಗರ ಪ್ರೀತಿಯೂ ಸಿಗಲಿದೆ ಎಂಬ ನಂಬಿಕೆ ನಮ್ಮದು. ಸೃಜನಶೀಲತೆಯ ಸಾರ್ವಕಾಲಿಕ ಸಾರ್ವಭೌಮರಾದ ನಿಮಗೆ ಜನುಮದಿನದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

    ಹರ್ಷಪ್ರಿಯ (Harshapriya) ಕನ್ನಡ ಕಿರುತೆರೆ ಜಗತ್ತಿನಲ್ಲಿ ಗೆದ್ದ ಪ್ರತಿಭಾವಂತ ಬರಹಗಾರ, ಅವರು ಕಥೆಗಳನ್ನು ನೋಡುವ ರೀತಿಯೇ ಭಿನ್ನ. ನಿರ್ದೇಶನದಲ್ಲೂ ತಮ್ಮದೇ ಆದ ಕನಸು ಕಟ್ಟಿಕೊಂಡು ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಈ ಕಾರಣದಿಂದಾಗಿಯೇ ಹೆಜ್ಜಾರು ವಿಶೇಷ ಸಿನಿಮಾ ಆಗಲಿದೆ ಎನ್ನುವುದು ನಂಬಿಕೆ. ಇವರ ಕನಸಿಗೆ ವಿಮಲಾ ಎನ್ ಹಾಗೂ ಸುನೀತಾ ಟಿ.ಆರ್ ಸಾಥ್ ನೀಡಿದ್ದು, ಕೆ.ಎಸ್.ರಾಮ್ ಜಿ ಅವರು  ಈಸಿನಿಮಾವನ್ನು ಅರ್ಪಿಸಿದ್ದಾರೆ. ಅಮರ್.ಎಲ್ ಅವರ ಸಿನಿಮಾಟೋಗ್ರಫಿ ಮತ್ತು ನುರಿತ ತಂತ್ರಜ್ಞರ ತಂಡವು ಸಿನಿಮಾಗಾಗಿ ಕೆಲಸ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 17 ವರ್ಷ ಲವ್, 2 ಮಕ್ಕಳಾದ ನಂತರ ಮದುವೆಯಾದ ನಿರ್ದೇಶಕ ಹನ್ಸಲ್ ಮೆಹ್ತಾ, ಸಫೀನಾ ಹುಸೇನ್

    17 ವರ್ಷ ಲವ್, 2 ಮಕ್ಕಳಾದ ನಂತರ ಮದುವೆಯಾದ ನಿರ್ದೇಶಕ ಹನ್ಸಲ್ ಮೆಹ್ತಾ, ಸಫೀನಾ ಹುಸೇನ್

    ಬಾಲಿವುಡ್ ನಲ್ಲೂ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮತ್ತು ಕಿರುತೆರೆಯಲ್ಲೂ ಸಾಕಷ್ಟು ಧಾರಾವಾಹಿಗಳಿಗೆ ಆಕ್ಷನ್ ಕಟ್ ಹೇಳಿರುವ ಹನ್ಸಲ್ ಮೆಹ್ತಾ, ಹದಿನೇಳು ವರ್ಷದಿಂದ ಪ್ರೀತಿಸುತ್ತಿದ್ದ ಸಫೀನಾ ಹುಸೇನ್ ಅವರನ್ನು ಮದುವೆಯಾಗಿದ್ದಾರೆ. ಸಫೀನಾ ಹುಸೇನ್ ಮತ್ತು ಹನ್ಸಲ್ ಮೆಹ್ತಾ ಹದಿನೇಳು ವರ್ಷಗಳಿಂದ ಡೇಟ್ ಮಾಡುತ್ತಿದ್ದರು ಎನ್ನುವುದು ವಿಶೇಷ. ಇದನ್ನೂ ಓದಿ : ಕನ್ನಡದ ಖ್ಯಾತ ನಟಿಯೊಬ್ಬಳು ನಿರ್ದೇಶಕನನ್ನೇ ಮಂಚಕ್ಕೆ ಕರೆದ ಕಥೆಗೆ ಮೆಗಾ ಟ್ವಿಸ್ಟ್

    ಅಜಯ್ ದೇವಗನ್ ನಟನೆ ಛಲಾಂಗ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಇವರು ನಿರ್ದೇಶನ ಮಾಡಿದ್ದಾರೆ. ಹಲವಾರು ಟಿವಿ ಧಾರಾವಾಹಿಗಳಿಗೆ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಸಾಹಿದ್ ಚಿತ್ರಕ್ಕಾಗಿ ಇವರು ರಾಷ್ಟ್ರ ಪ್ರಶಸ್ತಿ ಕೂಡ ಸಂದಿದೆ. ಇಂತಹ ನಿರ್ದೇಶಕರು ಹದಿನೇಳು ವರ್ಷಗಳ ಪ್ರೀತಿಸಿ, ಎರಡು ಮಕ್ಕಳು ಆದ ನಂತರ ಮದುವೆಯಾಗಿ ಸುದ್ದಿಯಾಗಿದ್ದಾರೆ. ಇದನ್ನೂ ಓದಿ : ನಿಮ್ಮ ಬಾಡಿಯನ್ನು ನೀವೇ ಲವ್ ಮಾಡಬೇಕು : ರಾಗಿಣಿ

    ಸಫೀನಾ ಹುಸೇನ್ ಮತ್ತು ಮೆಹ್ತಾ ಅವರು ಡೇಟ್ ನಲ್ಲಿದ್ದರೂ ಸತಿ ಪತಿಗಳಂತೆಯೇ ಬದುಕುತ್ತಿದ್ದರು. ಹಾಗಾಗಿ ಈ ಜೋಡಿ ಎರಡು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಈ ಕುರಿತು ಮಾತನಾಡಿರುವ ಮೆಹ್ತಾ, ‘ನಾವಿಬ್ಬರೂ ಮದುವೆ ಆಗದೇ ಇದ್ದರೂ, ಪ್ರತಿಜ್ಞೆ ತಗೆದುಕೊಂಡಂತೆ ಬದುಕು ನಡೆಸಿದೆವು. ಮಕ್ಕಳು ಬೆಳೆಯುವುದನ್ನು ನೋಡುತ್ತಾ 17 ವರ್ಷಗಳು ಹೇಗೆ ಕಳೆದವು ಎನ್ನುವುದೇ ಗೊತ್ತಾಗಲಿಲ್ಲ. ಇದೀಗ ನಾವಿಬ್ಬರೂ ಮದುವೆಯಾಗುತ್ತಿದ್ದೇವೆ’ ಎಂದಿದ್ದಾರೆ. ಇದನ್ನೂ ಓದಿ : ಸದ್ದಿಲ್ಲದೇ ಶುರುವಾಯ್ತು ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ : ಮೊದಲ ದಿನವೇ ಫೋಟೋ ಲೀಕ್

    ಸಫೀನಾ ಮತ್ತು ಮೆಹ್ತಾ ಮದುವೆಯು ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಆಪ್ತರಷ್ಟೇ ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಸಫೀನಾ ಗುಲಾಬಿ ಬಣ್ಣದ ಕುರ್ತಾ ಧರಿಸಿದ್ದರೆ, ಹನ್ಸಲ್ ಜೀನ್ಸ್ ಪ್ಯಾಂಟ್ ಮತ್ತು ಕೋಟ್ ನಲ್ಲಿ ಮಿಂಚುತ್ತಿದ್ದರು. ಇದನ್ನೂ ಓದಿ : ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?

    ಹನ್ಸಲ್ ಮೆಹ್ತಾಗೆ ಇದು ಎರಡನೇ ಮದುವೆ. ಅವರು ತಮ್ಮ 20ನೇ ವಯಸ್ಸಿನಲ್ಲೇ ಸುನೀತಾ ಎನ್ನುವವರ ಜೊತೆ ಸಪ್ತಪದಿ ತುಳಿದಿದ್ದರು. ಈ ಜೋಡಿಗೆ ಪಲ್ಲವ ಮತ್ತು ಜಯ್ ಎಂಬಿಬ್ಬರು ಮಕ್ಕಳೂ ಇದ್ದಾರೆ. ಆನಂತರ ಸುನೀತಾ ಜೊತೆ ಮೆಹ್ತಾ ವಿಚ್ಛೇದನ ಪಡೆದುಕೊಂಡರು. ಸುನೀತಾ ಅವರಿಂದ ದೂರವಾದ ನಂತರ ನಟ ಯುಸೂಫ್ ಹುಸೇನ್ ಅವರ ಪುತ್ರ ಸಫೀನಾ ಜೊತೆ ಡೇಟ್‍ ಮಾಡಲು ಆರಂಭಿಸಿದ್ದರು. ಇದೀಗ ಇಬ್ಬರೂ ಮದುವೆಯಾಗಿದ್ದಾರೆ.

  • ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!

    ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!

    ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ತನ್ನ ‘ಸೋದರ ಮಾವ’ ಪಂಜಾಬ್ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಪರ ಪ್ರಚಾರಕ್ಕೆ ನಿಂತಿದ್ದಾರೆ.

    Punjab polls: AAP's CM face Bhagwant Mann files nomination from Dhuri | Deccan Herald

    ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಮತ್ತು ಪುತ್ರಿ ಹರ್ಷಿತಾ ಅವರು ಶುಕ್ರವಾರ ಪಂಜಾಬ್‍ಗೆ ಭೇಟಿ ನೀಡಲಿದ್ದು, ಮುಂದಿನ ವಾರ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?

    ಈ ಕುರಿತು ಸುನೀತಾ ಅವರು ಟ್ವಟ್ಟರ್‌ನಲ್ಲಿ, ನಾಳೆ ನನ್ನ ಸೋದರ ಮಾವ ಭಗವಂತ್ ಮಾನ್ ಅವರಿಗೆ ಮತ ಕೇಳಲು ನಾನು, ನನ್ನ ಮಗಳೊಂದಿಗೆ ಧುರಿಗೆ ಹೋಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಮಾನ್ ಅವರು 2022ರ ಪಂಜಾಬ್ ಚುನಾವಣೆಗೆ ಎಎಪಿ ಸಿಎಂ ಅಭ್ಯರ್ಥಿಯಾಗಿದ್ದು, ಧುರಿಯಿಂದ ಸ್ಪರ್ಧಿಸಲಿದ್ದಾರೆ. ಇವರು ಸಂಗ್ರೂರ್‍ನಿಂದ ಎರಡು ಬಾರಿ ಸಂಸದರಾಗಿದ್ದಾರೆ.

    ಕಳೆದ ತಿಂಗಳು ಕೇಜ್ರಿವಾಲ್ ಅವರು, ನಿಮ್ಮ ಸಿಎಂ ಅಭ್ಯರ್ಥಿಯನ್ನು ನೀವೇ ಆಯ್ಕೆ ಮಾಡಿ ಎಂದು ಫೋನ್ ನಂಬರ್ ಬಿಡುಗಡೆ ಮಾಡಿದ್ದರು. ಫೋನ್ ಮಾಡಿದ ಜನರಲ್ಲಿ 93% ಜನರು ಮಾನ್ ಅವರ ಹೆಸರನ್ನು ಸೂಚಿಸಿದ್ದರು. ಪರಿಣಾಮ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಮುಂದಿನ ಸಿಎಂ ಆಭ್ಯರ್ಥಿಯಾಗಿ ಮಾನ್ ಅವರನ್ನು ಘೋಷಿಸಿದರು. ಈ ವೇಳೆ ಕೇಜ್ರಿವಾನ್ ಅವರು, ಎಎಪಿ ಪಂಜಾಬ್ ಚುನಾವಣೆಯಲ್ಲಿ ಗೆಲ್ಲುವುದು ಸ್ಪಷ್ಟವಾಗಿದೆ ಎಂದಿದ್ದರು.

    ಸೋಮವಾರ ಈ ಕುರಿತು ಮಾತನಾಡಿದ ಮಾನ್ ಅವರು, ಪಂಜಾಬ್‍ನ ಜನರಿಂದ ಬೆಂಬಲ ಸಿಕ್ಕಿದ್ದು ಖುಷಿಯಾಗಿದೆ. ಈ ಮೂಲಕ ಜನರು ಕಾಂಗ್ರೆಸ್‍ಗೆ ಸೋಲಿನ ಮುನ್ಸೂಚನೆ ನೀಡಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

    ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿಂದೆ ಫೆಬ್ರವರಿ 14 ರಂದು ಚುನಾವಣೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಗುರು ರವಿದಾಸ್ ಜಯಂತಿ ಆಚರಣೆ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಪರಿಣಾಮ ಚುನಾವಣೆ ದಿನವನ್ನು ಮುಂದೂಡಲಾಗಿತ್ತು.