Tag: Sunil Shetty

  • ಕಪಿಲ್ ಶರ್ಮಾ ಶೋದಲ್ಲಿ ಪೈಲ್ವಾನನ ಹವಾ!

    ಕಪಿಲ್ ಶರ್ಮಾ ಶೋದಲ್ಲಿ ಪೈಲ್ವಾನನ ಹವಾ!

    ಮುಂಬೈ: ದೇಶದ ಕಿರುತೆರೆಯಲ್ಲಿ ತನ್ನ ಮನರಂಜನೆಯ ಮೂಲಕ ಹೆಸರು ಪಡೆದಿರುವ ಕಪಿಲ್ ಶರ್ಮಾ ಶೋದಲ್ಲಿ ಮೊದಲ ಬಾರಿಗೆ ಕನ್ನಡದ ನಟ ಸುದೀಪ್ ತಮ್ಮ ಪೈಲ್ವಾನ ಚಿತ್ರದ ಪ್ರಚಾರಕ್ಕೆ ತೆರಳಿದ್ದಾರೆ.

    ಕಪಿಲ್ ಶರ್ಮಾ ಶೋದಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದು, ಕಾರ್ಯಕ್ರಮದ ಕುರಿತು ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಕಪಿಲ್ ಶೋನಲ್ಲಿ ಬಾಲಿವುಡ್ ಸಿನಿಮಾ ಸ್ಟಾರ್ ಗಳಿಂದ ಹಿಡಿದು ಹಲವು ರಾಜಕೀಯ ನಾಯಕರು, ಕ್ರೀಡಾಪಟುಗಳು, ಸಾಮಾಜಿಕ ಹೋರಾಟಗಾರರು ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದಾರೆ. ಇಂತಹ ಶೋನಲ್ಲಿ ಸುದೀಪ್ ಭಾಗವಹಿಸಿದ್ದು, ಕಪಿಲ್ ಅವರ ಶೋನಲ್ಲಿ ನಗು ಸಮೃದ್ಧವಾಗಿದ್ದು, ಅಪರೂಪ ಸಂದರ್ಭ ಎಂಬಂತೆ ಹೆಚ್ಚು ನಕ್ಕಿದ್ದೇನೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

    ಕಪಿಲ್ ಶರ್ಮಾ, ನವಜೋತ್ ಸಿಂಗ್ ಸಿಧು, ಸುನಿಲ್ ಶೆಟ್ಟಿ ಜೊತೆಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಸುದೀಪ್ ಹಂಚಿಕೊಂಡಿದ್ದಾರೆ. ಬಾಲಿವುಡ್ ಕಲಾವಿದರು ಸಿನಿಮಾ ಪ್ರಚಾರಕ್ಕಾಗಿ ಶೋದಲ್ಲಿ ಭಾಗವಹಿಸುತ್ತಾರೆ. ಕೆಲವೊಮ್ಮೆ ಕಾರ್ಯಕ್ರಮದ ಆಯೋಜಕರು ವಿಶೇಷ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಕರೆಸಿ ಶೋ ಮಾಡುತ್ತಾರೆ. ಸದ್ಯ ಸುದೀಪ್ ಪೈಲ್ವಾನ ಸಿನಿಮಾ ಪ್ರಚಾರಕ್ಕಾಗಿ ಶೋಗೆ ತೆರಳಿದ್ದಾರೆ.

    ಈ ಹಿಂದೆ ಕುಡ್ಲದ ಬೆಡಗಿ ತಮ್ಮ ಹಿಂದಿ ಸಿನಿಮಾ ಮೆಹೆಂಜೋದಾರೋ ಚಿತ್ರದ ಪ್ರಮೋಶನ್ ಗಾಗಿ ಹೃತಿಕ್ ರೋಷನ್ ಜೊತೆ ತೆರಳಿದ್ದರು. ಆದ್ರೆ ಕನ್ನಡದ ಖ್ಯಾತ ನಟರೊಬ್ಬರು ಇದೇ ಮೊದಲ ಬಾರಿಗೆ ಶೋ ನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ಬಳಿಕ ಎರಡನೇ ಸೀಸನ್ ಆರಂಭಿಸಿರುವ ಕಪಿಲ್ ಎಂದಿನಂತೆ ಸಾರ್ವಜನಿಕರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸ್ಯ ಕಾರ್ಯಕ್ರಮದ ಕಿರೀಟ್ ಅಂತಾನೇ ಕರೆಸಿಕೊಳ್ಳುವ ಸಚಿವ ನವಜೋತ್ ಸಿಂಗ್ ಸಿಧು ಕೆಲಸದ ಒತ್ತಡದ ನಡುವೆ ಶೋನಲ್ಲಿ ತಮ್ಮ ಸುಂದರ ಶಾಯರಿಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಪೈಲ್ವಾನ್ ಮತ್ತು ಸೈರಾ ಸಿನಿಮಾದಲ್ಲಿ ಬ್ಯುಸಿಯಾಗಿರುವ ಸುದೀಪ್, ಹಿಂದಿಯ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ದಬಾಂಗ್-3 ಚಿತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಹಿಂದಿಯ ಹಾರರ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕೇವಲ ಫೋಟೋ ಹಂಚಿಕೊಂಡಿರುವ ಸುದೀಪ್ ಸಂಚಿಕೆ ಯಾವಾಗ ಪ್ರಸಾರವಾಗಲಿದೆ ಎಂಬುದನ್ನು ತಿಳಿಸಿಲ್ಲ.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬಾಲಿವುಡ್ ನಟನನ್ನ ಅಣ್ಣ ಅಂತ ಕರೆದ್ರು ಕಿಚ್ಚ ಸುದೀಪ್

    ಬಾಲಿವುಡ್ ನಟನನ್ನ ಅಣ್ಣ ಅಂತ ಕರೆದ್ರು ಕಿಚ್ಚ ಸುದೀಪ್

    ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಸಂಬಂಧಗಳಿಗೆ ತುಂಬಾನೇ ಬೆಲೆ ಕೊಡುತ್ತಾರೆ. ಈಗ ಬಾಲಿವುಡ್ ಸೂಪರ್ ಸ್ಟಾರ್ ರನ್ನು ಅಣ್ಣ ಎಂದು ಕರೆದಿದ್ದಾರೆ.

    ಬಾಲಿವುಡ್ ಸೂಪರ್ ಸ್ಟಾರ್ ಸುನಿಲ್ ಶೆಟ್ಟಿ ಅವರನ್ನು ಸುದೀಪ್ ಅಣ್ಣ ಎಂದು ಕರೆದಿದ್ದಾರೆ. ಸಿಸಿಎಲ್‍ನಿಂದ ಸುದೀಪ್ ಮತ್ತು ಸುನಿಲ್ ಶೆಟ್ಟಿಯ ನಡುವೆ ಸ್ನೇಹ ಶುರುವಾಗಿತ್ತು. ಇದೀಗ ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಪೈಲ್ವಾನ್ ಸಿನಿಮಾದ ಫಸ್ಟ್ ಶಡ್ಯೂಲ್ಡ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಕಿಚ್ಚ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಎರಡನೇ ಹಂತದ ಶೂಟಿಂಗ್ ಗಾಗಿ ಎದುರು ನೋಡುತ್ತಿದ್ದು, ಸುನಿಲ್ ಅಣ್ಣನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿರುವುದಾಗಿ ಕಿಚ್ಚ ಟ್ವೀಟ್ ಮಾಡಿದ್ದಾರೆ. ಇದಕ್ಕೆ ನಟ ಸುನಿಲ್ ಶೆಟ್ಟಿ ಕೂಡ ರಿಟ್ವೀಟ್ ಮಾಡಿದ್ದು, ಪೈಲ್ವಾನ್ ಸಿನಿಮಾಗಾಗಿ ಕಾತುರದಿಂದ ಎದುರು ನೋಡುತ್ತಿರುದಾಗಿಯೂ ಹೇಳಿಕೊಂಡಿದ್ದಾರೆ.

    ಸುನಿಲ್ ಶೆಟ್ಟಿಯನ್ನ ಕಿಚ್ಚ ಅಣ್ಣಾ ಅಂತ ಕರೆಯೋಕು ಮುನ್ನ ಕಿಚ್ಚನನ್ನ ತನ್ನ ತಮ್ಮನೆಂದು ಸುನಿಲ್ ಕರೆದಿದ್ದಾರೆ. ಅದಕ್ಕೆ ಸಾಕ್ಷಿ ಪೈಲ್ವಾನ್ ಸಿನಿಮಾ ಶುರುವಾದಾಗ ನಟ ಸುನಿಲ್ ಟ್ವೀಟ್ ಮಾಡಿದ್ದಾರೆ. ಕೊನೆಗೂ ಜನ್ಮಭೂಮಿಗೆ ಎಂಟ್ರಿ ಕೊಡುತ್ತಿದ್ದೇನೆ. ನನ್ನ ತಮ್ಮ ಕಿಚ್ಚನ ಜತೆಗೆ ಪೈಲ್ವಾನ್ ಸಿನಿಮಾ ಮೂಲಕ ಡೆಬ್ಯೂಟ್ ಮಾಡುತ್ತಿರುವುದಕ್ಕೆ ಖುಷಿ ಇರುವುದಾಗಿ ಹೇಳಿಕೊಂಡಿದ್ದಾರೆ.

    ತೆರೆಯ ಹಿಂದಿನ ಸ್ನೇಹ ಇದೀಗ ಒಟ್ಟಿಗೆ ಸಿನಿಮಾ ಮಾಡುವುದಕ್ಕೆ ಸಹಕಾರಿಯಾಗಿದೆ. ಆದರೆ ಎಲ್ಲರ ತಲೆಯಲ್ಲಿರುವುದು ಒಂದೇ ಪ್ರಶ್ನೆ, ಪೈಲ್ವಾನ್ ಸಿನಿಮಾದಲ್ಲಿ ಸುನಿಲ್ ಶೆಟ್ಟಿಯದು ಯಾವ ಪಾತ್ರ ಅನ್ನೋದು. ಅಷ್ಟಕ್ಕೂ ಪೈಲ್ವಾನ್ ಚಿತ್ರತಂಡ ಸುನಿಲ್ ಶೆಟ್ಟಿಯ ಪಾತ್ರವನ್ನ ಗುಟ್ಟಾಗಿರಿಸಿದ್ದಾರೆ. ಇಲ್ಲಿವರೆಗೂ ಸ್ನೇಹಿತರಾಗಿದ್ದ ಸುದೀಪ್ ಹಾಗೂ ಸುನಿಲ್, ಪೈಲ್ವಾನ್ ಅಖಾಡದಲ್ಲಿ ಮುಖಾಮುಖಿಯಾಗುತ್ತಿದ್ದಾರೆ.