Tag: Sunil Shetty

  • ಕೆ.ಎಲ್ ರಾಹುಲ್ -ಅಥಿಯಾ ಶೆಟ್ಟಿ ಮದುವೆ ಡೇಟ್ ಫೈನಲ್

    ಕೆ.ಎಲ್ ರಾಹುಲ್ -ಅಥಿಯಾ ಶೆಟ್ಟಿ ಮದುವೆ ಡೇಟ್ ಫೈನಲ್

    ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರಲು ರೆಡಿಯಾಗಿದ್ದಾರೆ.

    ಹಿಂದಿ ಚಿತ್ರರಂಗದ ಸ್ಟಾರ್ ನಟ ಸುನೀಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಕೂಡ ಬಾಲಿವುಡ್ ರಂಗದಲ್ಲಿ ಆಕ್ಟೀವ್ ಆಗಿದ್ದಾರೆ. 2015ರಲ್ಲಿ ಹೀರೋ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಈಗ ಸಿನಿಮಾಗಿಂತ ಕೆ.ಎಲ್ ರಾಹುಲ್ ಜತೆಗಿನ ಡೇಟಿಂಗ್ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಸದ್ಯ ತಮ್ಮ ಮದುವೆಯ ವಿಚಾರವಾಗಿ ಸೌಂಡ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಜ್ಯೂನಿಯರ್ ರಣ್‌ಬೀರ್ ಕಪೂರ್ ಆಗಮನದ ಮುಂಚೆಯೇ ಮಗುವಿಗೆ ಹೆಸರು ಫಿಕ್ಸ್

    ಕ್ರಿಕೆಟ್ ಕ್ಷೇತ್ರದಲ್ಲಿ ಗಮನ ಸೆಳೆದಿರುವ ಕೆ.ಎಲ್ ರಾಹುಲ್ ಜೊತೆ ಕಳೆದ ಮೂರು ವರ್ಷಗಳಿಂದ ಡೇಟಿಂಗ್‌ನಲ್ಲಿರುವ ಅಥಿಯಾ ಶೆಟ್ಟಿ ಮುಂದಿನ ವರ್ಷ ಜನವರಿಯಲ್ಲಿ ಹಸೆಮಣೆ ಏರಲಿದ್ದಾರೆ. ಹಾಗಂತ ಈ ಕುಟುಂಬ ನಿರ್ಧಾರ ಮಾಡಿದ್ದಾರೆ. 2023ರಲ್ಲಿ ರಾಹುಲ್ ಮತ್ತು ಅಥಿಯಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅದಕ್ಕಾಗಿ ಈಗಿಂದಲೇ ತೆರೆಮರೆಯಲ್ಲಿ ಸಾಕಷ್ಟು ತಯಾರಿ ನಡೆಯುತ್ತಿದೆ.

    ಬಾಲಿವುಡ್‌ ಮೂಲಗಳ ಪ್ರಕಾರ, ಮುಂಬೈನಲ್ಲಿ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮನೆಯ ಬಳಿಯೇ ರಾಹುಲ್ ಮತ್ತು ಅಥಿಯಾಗೆ ವಾಸಿಸಲು ಮನೆ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ನಲ್ಲಿ ಮುಂದಿನ ವರ್ಷ ನಿಜವಾಗಲೂ ಹಸೆಮಣೆ ಏರುತ್ತಾರಾ ಅಂತಾ ಈ ಜೋಡಿ ಅಧಿಕೃತವಾಗಿ ತಿಳಿಸುವವೆರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕೆ.ಎಲ್ ರಾಹುಲ್ ಜೊತೆ ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ಅಥಿಯಾ ಶೆಟ್ಟಿ

    ಕೆ.ಎಲ್ ರಾಹುಲ್ ಜೊತೆ ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ಅಥಿಯಾ ಶೆಟ್ಟಿ

    ಬಾಲಿವುಡ್ ಬ್ಯೂಟಿ ಅಥಿಯಾ ಶೆಟ್ಟಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗಿತ್ತಲೇ ಇರುತ್ತಾರೆ. ಇದೀಗ ಕ್ರಿಕೆಟಿಗ ಕೆ.ಎಲ್ ರಾಹುಲ್ ಜೊತೆ ಮುಂಬರುವ ಮೂರು ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಈ ವದಂತಿಯ ಕುರಿತು ನಟಿ ಅಥಿಯಾ ಟೀಕಿಸಿದ್ದಾರೆ. ಮದುವೆಯ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಬಿಟೌನ್‌ನ ಸ್ಟಾರ್ ನಟ ಸುನೀಲ್ ಶೆಟ್ಟಿ ಪುತ್ರಿ ಕಳೆದ ಮೂರು ವರ್ಷಗಳಿಂದ ಕೆ.ಎಲ್ ರಾಹುಲ್ ಜತೆ ಡೇಟಿಂಗ್‌ನಲ್ಲಿದ್ದಾರೆ. ಇಬ್ಬರು ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನೂ ಮೂರು ತಿಂಗಳಲ್ಲಿ ಈ ಜೋಡಿ ಹಸೆಮಣೆ ಏರಲಿದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ನಟಿ ಅಥಿಯಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ:ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ `ಪಂಚರಂಗಿ’ ಬೆಡಗಿ ನಿಧಿ ಸುಬ್ಬಯ್ಯ

    ಇನ್ನು ಮೂರು ತಿಂಗಳಲ್ಲಿ ನಡೆಯುವ ನನ್ನ ಮದುವೆಗೆ ನನ್ನನ್ನು ಆಹ್ವಾನಿಸಲಾಗುವುದು ಎಂದು ಭಾವಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲಿಗೆ ಈ ಮೂಲಕ ಮದುವೆ ಸುದ್ದಿ ಸುಳ್ಳು ಎಂದು ನಟಿ ಟೀಕಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕೆ.ಎಲ್ ರಾಹುಲ್ ಸದ್ಯ ಆರೋಗ್ಯದ ಕಡೆ ಗಮನ ಕೊಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಜೋಡಿ ಹಸೆಮಣೆ ಏರುತ್ತಾರಾ ಎಂಬ ಅಧಿಕೃತ ಮಾಹಿತಿ ಹೊರ ಬೀಳುವವರೆಗೂ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ಜರಿಗಾಗಿ ಸುನೀಲ್ ಶೆಟ್ಟಿ ಪುತ್ರಿ ಜೊತೆ ಜರ್ಮನಿಗೆ ಹಾರಿದ ಕ್ರಿಕೆಟಿಗ ಕೆ.ಎಲ್ ರಾಹುಲ್

    ಸರ್ಜರಿಗಾಗಿ ಸುನೀಲ್ ಶೆಟ್ಟಿ ಪುತ್ರಿ ಜೊತೆ ಜರ್ಮನಿಗೆ ಹಾರಿದ ಕ್ರಿಕೆಟಿಗ ಕೆ.ಎಲ್ ರಾಹುಲ್

    ಬಾಲಿವುಡ್‌ನ ಜೋಡಿ ಹಕ್ಕಿಗಳು ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟಿಗ ಕೆ.ಎಲ್ ರಾಹುಲ್ ಸರ್ಜರಿಗಾಗಿ ಅಥಿಯಾ ಶೆಟ್ಟಿ ಜತೆ ಜರ್ಮನಿಗೆ ಹಾರಿದ್ದಾರೆ. ಸದ್ಯ ಏರ್‌ಪೋರ್ಟ್‌ಗೆ ಆಗಮಿಸಿರುವ ವಿಡಿಯೋ ವೈರಲ್ ಆಗಿದೆ.

    ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜೊತೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಡೇಟಿಂಗ್‌ನಲ್ಲಿದ್ದಾರೆ. ಇವರೆಗೂ ಈ ಕುರಿತು ಯಾವುದೇ ಅಧಿಕೃತ ವಿಚಾರ ಹೊರಬಿದ್ದಿಲ್ಲ. ಇದೀಗ ಈ ಬೆನ್ನಲ್ಲೇ ಕೆ.ಎಲ್ ರಾಹುಲ್ ಶಸ್ತ್ರ ಚಿಕಿತ್ಸೆಗಾಗಿ ಈ ಜೋಡಿ ಜರ್ಮನಿಯತ್ತ ಮುಖ ಮಾಡಿದ್ದಾರೆ. ಈ ವೇಳೆ ಏರಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದು, ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್‌ಗೆ ವಿಶೇಷ ಉಡುಗೊರೆ ನೀಡಿದ ಕಪಿಲ್ ದೇವ್

     

    View this post on Instagram

     

    A post shared by Viral Bhayani (@viralbhayani)

    ಅಥಿಯಾ ಮತ್ತು ರಾಹುಲ್ ಜರ್ಮನಿಗೆ ತೆರಳುತ್ತಿದ್ದಾರೆ. ತನ್ನ ತೊಡೆಯ ಸಂದು ಗಾಯಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಗಾಯದ ಸಮಸ್ಯೆಯಿಂದ ಕೆ.ಎಲ್ ಕ್ರಿಕೆಟ್‌ಗೂ ಕೊಂಚ ಬ್ರೇಕ್ ಕೊಟ್ಟು, ಆರೋಗ್ಯದ ಕಡೆ ಗಮನ ಹರಸುತ್ತಿದ್ದಾರೆ. ಇನ್ನು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ರಾಹುಲ್ ಆರೈಕೆಗಾಗಿ, ಅಥಿಯಾ ಕೂಡ ಜರ್ಮನಿಯಲ್ಲೇ ಇದ್ದು, ರಾಹುಲ್ ಅವರನ್ನು ನೋಡಿಕೊಳ್ಳಲಿದ್ದಾರೆ.

    Live Tv

  • ಕೆ.ಎಲ್ ರಾಹುಲ್ ಜೊತೆ ಮಗಳ ಮದುವೆಗೆ ಸುನೀಲ್ ಶೆಟ್ಟಿ ಗ್ರೀನ್ ಸಿಗ್ನಲ್

    ಕೆ.ಎಲ್ ರಾಹುಲ್ ಜೊತೆ ಮಗಳ ಮದುವೆಗೆ ಸುನೀಲ್ ಶೆಟ್ಟಿ ಗ್ರೀನ್ ಸಿಗ್ನಲ್

    ಮುಂಬೈ: ಮಗಳು ಅಥಿಯಾ ಶೆಟ್ಟಿ ಮತ್ತು ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮ್ಯಾನ್ ಕೆಎಲ್ ರಾಹುಲ್ ಮದುವೆಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರ ಪ್ರೇಮ ಸಂಬಂಧದ ಗಾಸಿಪ್‍ಗಳು ಬಹಳ ದಿನಗಳಿದ ನಡೆಯುತ್ತಲೇ ಇವೆ. ಅವರ ಲವ್ವಿ-ಡವ್ವಿ ಪೋಸ್ಟ್‌ಗಳು ಸದಾ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತವೆ. ವರದಿಗಳ ಪ್ರಕಾರ, ಪ್ರೇಮಿಗಳು ಈ ವರ್ಷದ ಅಂತ್ಯದೊಳಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಸಂಭವಿದ್ದು, ಈ ಕುರಿತು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಸುನೀಲ್ ಶೆಟ್ಟಿ, ನನ್ನ ಆಶೀರ್ವಾದ ಯಾವಾಗಲೂ ಅವರೊಂದಿಗೆ ಇರುತ್ತದೆ ಎಂದು ಶುಭಹಾರೈಸಿದ್ದಾರೆ. ಕಾಲ ಬದಲಾಗಿದೆ ಅವರವರ ಇಚ್ಛೆಗೆ ಅನುಗುಣವಾಗಿ ಏನು ಮಾಡಬೇಕೆಂದು ಅವರೇ ನಿರ್ಧರಿಸುತ್ತಾರೆ. ನನ್ನ ಮಗಳು ಮತ್ತು ಮಗ ಇಬ್ಬರೂ ಜವಾಬ್ದಾರಿಯುತರಾಗಿದ್ದಾರೆ. ಅವರ ಭವಿಷ್ಯದ ನಿರ್ಧಾರ ಅವರೇ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನನ್ನ ಆಶೀರ್ವಾದ ಅವರಿಗೆ ಯಾವಾಗಲೂ ಇರುತ್ತದೆ ಎಂದಿದ್ದಾರೆ. ಇದನ್ನೂ ಓದಿ: `ಟಗರು’ ನಟಿ ಮಾನ್ವಿತಾ ಸ್ನಾತಕೋತ್ತರ ಪದವೀಧರೆ

    ಆಥಿಯಾ ಯುಕೆಯಲ್ಲಿ ರಾಹುಲ್ ಒಟ್ಟಿಗೆ ಸಮಯ ಕಳೆಯುತ್ತಿದ್ದಾಗಿನಿಂದ ಇವರಿಬ್ಬರ ಪ್ರೇಮ ಸಂಬಂಧದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲಗಳು ಪ್ರಾರಂಭವಾದವು. ನಂತರ ರಾಹುಲ್ ತನ್ನ ಪ್ರೇಯಸಿಯ ಸಹೋದರ ಅಹಾನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ತಡಪ್‍ನ ಪ್ರೀಮಿಯರ್ ನೈಟ್‍ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ವರದಿಗಳ ಪ್ರಕಾರ ಈ ವರ್ಷದ ಅಂತ್ಯದೊಳಗೆ ದಕ್ಷಿಣ ಭಾರತದ ಸಂಪ್ರದಾಯದಂತೆ ಈ ಕ್ಯೂಟ್ ಜೋಡಿ ಸಪ್ತಪದಿ ತುಳಿಯಲಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

    ಮಾರ್ಚ್ 15 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಅಥಿಯಾ ತನ್ನ ಪ್ರಿಯಕರ್‌ನನ್ನು ಕರೆದೊಯ್ಯಲು ಬಂದಾಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಐಪಿಎಲ್ 2022ರಲ್ಲಿ ಬಾಲಿವುಡ್ ಮತ್ತು ಕ್ರಿಕೆಟ್ ಅಭಿಮಾನಿಗಳು ಇಬ್ಬರನ್ನು ಒಟ್ಟಿಗೆ ನೋಡಲು ಬಹಳ ಉತ್ಸುಕರಾಗಿದ್ದರು.

  • ಶೀಘ್ರದಲ್ಲೇ ಕ್ರಿಕೆಟಿಗ ರಾಹುಲ್ ಜತೆ ಸುನಿಲ್ ಶೆಟ್ಟಿ ಮಗಳ ಮ್ಯಾರೇಜ್

    ಶೀಘ್ರದಲ್ಲೇ ಕ್ರಿಕೆಟಿಗ ರಾಹುಲ್ ಜತೆ ಸುನಿಲ್ ಶೆಟ್ಟಿ ಮಗಳ ಮ್ಯಾರೇಜ್

    ಗುಜರಾತ್ ಜೈಟ್ಸ್ ತಂಡದ ನಾಯಕ, ಟೀಮ್ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಲವ್ವಿಡ‍ವ್ವಿಗೆ ತೆರೆ ಬೀಳುವ ಸಮಯ ಬಂದಿದೆ. ಮೊನ್ನೆಯಷ್ಟೇ ರಾಹುಲ್ ಜತೆ ಇರುವ ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದ ಅತಿಯಾ ಶೆಟ್ಟಿ, ತಮ್ಮಿಬ್ಬರ ಪ್ರೀತಿಯ ಕುರಿತಾಗಿ ಹಂಚಿಕೊಂಡಿದ್ದರು. ಈ ಮೂಲಕ ರಾಹುಲ್ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯನ್ನು ನೀಡಿದ್ದರು. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    ಅಲ್ಲದೇ, ಈ ಹಿಂದೆಯೂ ರಾಹುಲ್ ಜತೆ ಅತಿಯಾ ಓಡಾಡುವ ದೃಶ್ಯಗಳು ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದ್ದವು. ತಡರಾತ್ರಿ ಈ ಜೋಡಿಗಳು ಕಾಣಿಸಿಕೊಂಡು ಕ್ಯಾಮೆರಾಗಳಿಗೆ ಆಹಾರವಾಗಿದ್ದರು. ಇದೀಗ ಈ ಜೋಡಿ ಮದುವೆ ಆಗುವ ಸುದ್ದಿ ಬಿಟೌನ್ ನಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ಕ್ರಿಕೆಟಿಗೆ ರಾಹುಲ್ ಜತೆ ಮಗಳ ಮದುವೆಗೆ ಸುನಿಲ್ ಶೆಟ್ಟಿ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಅಂದುಕೊಂಡಂತೆ ಆದರೆ, ಇದೇ ವರ್ಷದ ಕೊನೆಯಲ್ಲಿ ರಾಹುಲ್ ಮತ್ತು ಅತಿಯಾ ಹಸೆಮಣೆ ಏರಲಿದ್ದಾರೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

    ಮೊದ ಮೊದಲ ರಾಹುಲ್ ಮತ್ತು ಅತಿಯಾ ಸ್ನೇಹಿತರು ಎಂದು ಬಿಂಬಿಸಲಾಯಿತು. ರಾಹುಲ್ ಕ್ರಿಕೆಟ್ ಪಂದ್ಯ ಆಡುವಾಗೆಲ್ಲ ಅತಿಯಾ ಕ್ರೀಡಾಂಗಣದಲ್ಲಿ ಹಾಜರಿರುತ್ತಿದ್ದರು. ಅವರನ್ನು ಹುರುದುಂಬಿಸುತ್ತಿದ್ದರು. ಸ್ನೇಹಿತನನ್ನು ಹುರಿದುಂಬಿಸಲು ಅತಿಯಾ ಬರುತ್ತಿದ್ದಾರೆ ಎಂದೇ ಹೇಳಲಾಯಿತು. ಈ ಜೋಡಿ ತಡರಾತ್ರಿಯ ಪಾರ್ಟಿಗಳಲ್ಲಿ ಸಿಗುತ್ತಿದ್ದಂತೆಯೇ ಇಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂದು ಬಿಟೌನ್ ಮಾತಾಡಿಕೊಂಡಿತು. ಆನಂತರ  ತಾವಿಬ್ಬರೂ ಪ್ರೀತಿಸುವ ವಿಷಯವನ್ನು ಬೇರೆ ಬೇರೆ ರೀತಿಯಲ್ಲಿ ಇಬ್ಬರೂ ಹೇಳಿಕೊಂಡರು. ಇದೀಗ ಈ ಪ್ರೇಮಿಗಳು ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.

  • ತಂದೆಯ `ಧಡ್ಕನ್’ ಸಿನಿಮಾ ರಿಮೇಕ್‍ನಲ್ಲಿ ನಟಿಸಲು ಬಯಸುತ್ತೇನೆ: ಅಹಾನ್ ಶೆಟ್ಟಿ

    ತಂದೆಯ `ಧಡ್ಕನ್’ ಸಿನಿಮಾ ರಿಮೇಕ್‍ನಲ್ಲಿ ನಟಿಸಲು ಬಯಸುತ್ತೇನೆ: ಅಹಾನ್ ಶೆಟ್ಟಿ

    ಮುಂಬೈ: ನಟ ಅಹಾನ್ ಶೆಟ್ಟಿ ತನ್ನ ತಂದೆ ಸುನೀಲ್ ಶೆಟ್ಟಿ ಅವರ ‘ಧಡ್ಕನ್’ ಮತ್ತು ‘ಬಾರ್ಡರ್’ ಚಿತ್ರಗಳ ರೀಮೇಕ್‍ನಲ್ಲಿ ನಟಿಸಲು ಬಯಸುವುದಾಗಿ ಹೇಳಿದ್ದಾರೆ.

    2000ರಲ್ಲಿ ತೆರೆ ಕಂಡಿದ್ದ ಧಡ್ಕನ್ ಚಿತ್ರವು ತುಂಬಾ ಜನಪ್ರಿಯತೆ ಪಡೆದಿತ್ತು. ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಮತ್ತು ಅಕ್ಷಯ್ ಕುಮಾರ್ ಕೂಡ ನಟಿಸಿದ್ದಾರೆ. ‘ವೂದರಿಂಗ್ ಹೈಟ್ಸ್’ ಕಾದಂಬರಿ ಆಧರಿಸಿ ಸಿನಿಮಾ ನಿರ್ದೇಶಿಸಲಾಗಿತ್ತು.

     

    View this post on Instagram

     

    A post shared by Ahan Shetty (@ahan.shetty)

    ಬಾರ್ಡರ್, 1997 ರಲ್ಲಿ ಬಿಡುಗಡೆಯಾದ ಒಂದು ಮೆಗಾ ಹಿಟ್ ಚಿತ್ರವಾಗಿದೆ. 1971 ರ ಭಾರತ-ಪಾಕಿಸ್ತಾನ ಲೋಂಗೆವಾಲಾ ಕದನದ ಸಮಯದಲ್ಲಿ ನಡೆದ ನಿಜ ಜೀವನಾಧರಿತ ಸನ್ನಿವೇಶನಗಳನ್ನು ಸಿನಿಮಾದಲ್ಲಿ ಬಿಂಬಿಸಲಾಗಿದೆ. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್‌

    ತಂದೆಯ ಕೆಲ ಹಿಟ್ ಚಲನಚಿತ್ರಗಳ ಕುರಿತು ಐಎಎನ್‍ಎಸ್‍ನೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅಹಾನ್, ನಾನು ನಮ್ಮ ದೇಶದ ಗಡಿಯನ್ನು ಅತಿಯಾಗಿ ಪ್ರೀತಿಸುತ್ತೇನೆ. ಹೀಗಾಗಿ ಬಾರ್ಡರ್ ಚಿತ್ರದ ರಿಮೇಕ್ ಮಾಡಲು ನಾನು ಭಾವಿಸುತ್ತೇನೆ. ನನ್ನ ತಂದೆಯ ಮತ್ತೊಂದು ರೊಮ್ಯಾಂಟಿಕ್ ಲವ್‍ಸ್ಟೋರಿ ಚಿತ್ರವಾದ ಧಡ್ಕನ್ ಚಿತ್ರದಲ್ಲಿಯೂ ನಾನು ನಟಿಸಲು ಆಸಕ್ತಿದಾಯಕನಾಗಿದ್ದೇನೆ ಎಂದರು.

     

    View this post on Instagram

     

    A post shared by Suniel Shetty (@suniel.shetty)

    ತಮ್ಮ ಮುಂದಿನ ಚಿತ್ರಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾವು ಯೋಜಿಸಿರುವ ಕೆಲವು ಆಸಕ್ತಿದಾಯಕ ವಿಷಯಗಳು ಒಂದು ತಿಂಗಳೊಳಗೆ ಘೋಷಣೆಯಾಗಬೇಕಾಗಿದೆ. ಅದನ್ನು ಹೊರತುಪಡಿಸಿ ನಾನು ಸಾಜಿದ್ ನಾಡಿಯಾಡ್ವಾಲಾ ಅವರೊಂದಿಗೆ ನಾಲ್ಕು ಚಲನಚಿತ್ರಗಳ ಒಪ್ಪಂದವನ್ನು ಮಾಡಿಕೊಂಡಿದ್ದೇನೆ. ಆದ್ದರಿಂದ ನಾನು ಮತ್ತೆ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ:  ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ

    ಅಹಾನ್ ಶೆಟ್ಟಿಯು ಕಳೆದ ವರ್ಷ ತೆಲುಗಿನ ಆರ್‍ಎಕ್ಸ್ 100 ಚಿತ್ರದ ರಿಮೇಕ್ ಆದ ತಡಾಪ್ ಚಿತ್ರದಲ್ಲಿ ನಾಯಕ ನಟನಾಗಿ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರವನ್ನು ಸಾಜಿದ್ ನಾಡಿಯಾಡ್ವಾಲಾ ಅವರು ನಿರ್ದೇಶಿಸಿದ್ದಾರೆ.

  • ‘ನಿಮಗೆ ಕೃಜ್ಞರಾಗಿರಬೇಕು’ – ಕೆ.ಎಲ್ ರಾಹುಲ್‍ಗೆ ಹುಟ್ಟುಹಬ್ಬದ ಶುಭಕೋರಿದ ಅಥಿಯಾ ಶೆಟ್ಟಿ

    ‘ನಿಮಗೆ ಕೃಜ್ಞರಾಗಿರಬೇಕು’ – ಕೆ.ಎಲ್ ರಾಹುಲ್‍ಗೆ ಹುಟ್ಟುಹಬ್ಬದ ಶುಭಕೋರಿದ ಅಥಿಯಾ ಶೆಟ್ಟಿ

    ಬೆಂಗಳೂರು: ಭಾರತದ ಕ್ರಿಕೆಟ್ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಅವರ ಸ್ನೇಹಿತೆ ಸಿನಿಮಾ ನಟಿ ಅಥಿಯಾ ಶೆಟ್ಟಿ, ನಿಮಗೆ ಕೃತಜ್ಞರಾಗಿರಬೇಕು ಎಂದು ಬರೆದುಕೊಂಡು ಫೋಟೋ ಒಂದನ್ನು ಪೋಸ್ಟ್ ಮಾಡುವ ಮೂಲಕ ಹುಟ್ಟುಹಬ್ಬದ ಶುಭಕೋರಿದ್ದಾರೆ.

    ಕೆ.ಎಲ್ ರಾಹುಲ್ ಇಂದು 29ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಅಥಿಯಾ ಶೆಟ್ಟಿ, ರಾಹುಲ್ ಜೊತೆಗಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

    ಖ್ಯಾತ ಬಹುಭಾಷಾ ನಟ ಸುನೀಲ್ ಶೆಟ್ಟಿಯ ಮಗಳಾಗಿರುವ ಆಥಿಯಾ ಮತ್ತು ರಾಹುಲ್ ಪ್ರೀತಿಸುತ್ತಿದ್ದಾರೆ ಎಂಬ ವದಂತಿಯು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

     

    View this post on Instagram

     

    A post shared by Athiya Shetty (@athiyashetty)

    ಕೆ.ಎಲ್ ರಾಹುಲ್ ಇದೀಗ ಐಪಿಎಲ್‍ನಲ್ಲಿ ಬ್ಯೂಸಿ ಆಗಿದ್ದು, ಪಂಜಾಬ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈಗಾಗಲೇ ಎರಡು ಪಂದ್ಯವನ್ನು ಆಡಿರುವ ಪಂಜಾಬ್ ತಂಡ ಒಂದು ಪಂದ್ಯವನ್ನು ಗೆದ್ದು, ಒಂದು ಪಂದ್ಯವನ್ನು ಸೋತಿದೆ. ಇಂದು ಪಂಜಾಬ್ ತಂಡ ಮುಂಬೈನಲ್ಲಿ ಡೆಲ್ಲಿ ತಂಡದ ವಿರುದ್ಧ ಸೆಣಸಾಡಲಿದೆ.

    ರಾಹುಲ್ ಹುಟ್ಟುಹಬ್ಬಕ್ಕೆ ಈಗಾಗಲೇ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್, ಯುವರಾಜ್ ಸಿಂಗ್ ಸೇರಿದಂತೆ ಹಲವು ಕ್ರಿಕೆಟಿಗರು ಶುಭಹಾರೈಸಿದ್ದಾರೆ. ಹಾಗೆ ಬಿಸಿಸಿಐ ಮತ್ತು ಪಂಜಾಬ್ ಫ್ರಾಂಚೈಸಿ ಕೂಡ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸಿದೆ.

  • ದೇಸಿ ಕಥೆಯೊಂದಿಗೆ ಅಖಾಡಕ್ಕಿಳಿದ ಜಬರ್ಧಸ್ತ್ ಪೈಲ್ವಾನ್!

    ದೇಸಿ ಕಥೆಯೊಂದಿಗೆ ಅಖಾಡಕ್ಕಿಳಿದ ಜಬರ್ಧಸ್ತ್ ಪೈಲ್ವಾನ್!

    ಬೆಂಗಳೂರು: ಕರ್ನಾಟಕ ಮಾತ್ರವಲ್ಲದೇ ದೇಸಾದ್ಯಂತ ಅಗಾಧ ಕಾತರಕ್ಕೆ ಕಾರಣವಾಗಿದ್ದ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ತೆರೆ ಕಂಡಿದೆ. ಈ ಬಾರಿ ನಿರ್ದೇಶಕ ಕೃಷ್ಣ ಮತ್ತು ಸುದೀಪ್ ಜೋಡಿ ಬೆರಗಾಗಿಸುವಂಥಾ ಕಮಾಲ್ ಸೃಷ್ಟಿಸುತ್ತಾರೆಂಬ ಭರವಸೆಯೂ ಎಲ್ಲಡೆ ಮೂಡಿಕೊಂಡಿತ್ತು. ಅದಕ್ಕೆ ಎಲ್ಲ ದಿಕ್ಕಿನಲ್ಲಿಯೂ ಪೂರಕವಾಗಿರುವಂತೆಯೇ ಪೈಲ್ವಾನ್ ಪ್ರೇಕ್ಷಕರ ಮುಂದೆ ಬಂದಿದ್ದಾನೆ. ಎಲ್ಲಿಯೂ ಬಿಗುವು ಕಳೆದುಕೊಳ್ಳದ ಕಥೆ, ಪ್ರತೀ ಫ್ರೇಮಿನಲ್ಲಿಯೂ ಕಣ್ಣಿಗೆ ಹಬ್ಬ ಅನ್ನಿಸೋ ದೃಷ್ಯ ವೈಭವ, ಮೈ ನವಿರೇಳಿಸೋ ಸಾಹಸ ಸನ್ನಿವೇಶ ಮತ್ತು ಆಹ್ಲಾದಕರ ಪ್ರೇಮ… ಇವಿಷ್ಟು ಅಂಶಗಳೊಂದಿಗೆ ನಿರ್ದೇಶಕ ಕೃಷ್ಣ ಪೈಲ್ವಾನನನ್ನು ಪೊಗದಸ್ತಾಗಿಯೇ ಅಖಾಡಕ್ಕಿಳಿದಿದ್ದಾರೆ.

    ನಿರ್ದೇಶಕ ಕೃಷ್ಣ ಹಲವಾರು ಕೊಂಬೆ ಕೋವೆಗಳ ಸಂಕೀರ್ಣ ಕಥೆಯನ್ನು ಯಾವ ಗೊಂದಲಕ್ಕೂ ಆಸ್ಪದವಿಲ್ಲದಂತೆ, ಕ್ಷಣ ಕ್ಷಣವೂ ಕುತೂಹಲ ಕೊತಗುಡುವಂತೆ ಕಟ್ಟಿಕೊಟ್ಟಿದ್ದಾರೆ. ಕಿಚ್ಚಾ ಸುದೀಪ್ ಅನಾಥ ಹುಡುಗನಾಗಿ, ಅಖಾಡಕ್ಕಿಳಿಯೋ ಜಟ್ಟಿಯಾಗಿ, ಅಪ್ರತಿಮ ಪ್ರೇಮಿಯಾಗಿಯೂ ಕೃಷ್ಣನ ಪಾತ್ರದಲ್ಲಿ ಮುದ ನೀಡಿದ್ದಾರೆ. ಈ ಕಥೆ ತೆರೆದುಕೊಳ್ಳೋದೇ ಓರ್ವ ಅನಾಥ ಹುಡುಗನಿಂದ. ಚಿಕ್ಕಂದಿನಲ್ಲಿಯೇ ಎಲ್ಲ ಬಂಧಗಳನ್ನೂ ಕಳೆದುಕೊಂಡು ತಬ್ಬಲಿಯಾಗಿದ್ದ ಹುಡುಗ ಕೃಷ್ಣನಿಗೆ ಆಶ್ರಯ ನೀಡುವಾತ ಸರ್ಕಾರ್. ಈ ಸರ್ಕಾರ್‍ನದ್ದು ಪೈಲ್ವಾನರ ಮನೆತನ. ಕಟ್ಟುಮಸ್ತಾದ ಕೃಷ್ಣನನ್ನು ಮಗನಂತೆಯೇ ಪೊರೆಯೋ ಸರ್ಕಾರ್ ಪಾಲಿಗೆ ಆತನನ್ನು ಪೈಲ್ವಾನನಾಗಿ ರೂಪಿಸೋದೊಂದೇ ಗುರಿಯಾಗುತ್ತದೆ.

    ತನ್ನ ತಂದೆಯಂಥಾ ಸರ್ಕಾರ್ ಮತ್ತು ಪೈಲ್ವಾನನಾಗೋ ಕನಸುಗಳೇ ಕೃಷ್ಣನ ಜಗತ್ತಾಗಿ ಬಿಡುತ್ತದೆ. ಈ ಸರ್ಕಾರ್ ಮತ್ತು ಕೃಷ್ಣ ಇಬ್ಬರೂ ಸೇರಿ ಒಂದೇ ಕನಸು ಕಂಡು ಮುಂದುವರೆಯುವಾಗಲೇ ಕಿಚ್ಚನ ಬಾಳಲ್ಲಿ ಪ್ರೀತಿಯ ಬೆಳಕು ಮೂಡಿಕೊಳ್ಳುತ್ತೆ. ರುಕ್ಮಿಣಿ ಎಂಬ ಬ್ಯಸಿನೆಸ್‍ಮನ್ ಮಗಳ ಮೋಹಕ್ಕೆ ಬೀಳೋ ಕಿಚ್ಚನ ಗಮನ ಕುಸ್ತಿಯಿಂದ ಬೇರೆಡೆಗೆ ಹೊರಳಿಕೊಂಡಿದ್ದ ಸರ್ಕಾರ್ ಮನಸು ಕೆಡಿಸುತ್ತೆ. ಇದುವೇ ಜಗತ್ತೇ ಆಗಿದ್ದ ಸಾಕುತಂದೆಯಿಂದಲೂ ಕಿಚ್ಚನನ್ನು ದೂರಾಗಿಸುತ್ತೆ. ಆ ನಂತರದಲ್ಲಿ ಏನಾಗುತ್ತದೆ ಅನ್ನೋದನ್ನು ಥೇಟರಿನಲ್ಲಿಯೇ ನೋಡಿದರೆ ಚೆನ್ನ.

    ಇಡೀ ಸಿನಿಮಾ ಒಂದೇ ವೇಗದಲ್ಲಿ ಚಲಿಸುತ್ತದೆ ಅನ್ನೋದು ನಿಜವಾದ ಪ್ಲಸ್ ಪಾಯಿಂಟ್. ಕಿಚ್ಚ ಸುದೀಪ್ ಈ ಸಿನಿಮಾಗಾಗಿ ಅದೆಂಥಾ ತಯಾರಿ ಮಾಡಿಕೊಂಡಿದ್ದಾರೆಂಬುದು ಕುಸ್ತಿ ಅಖಾಡದಲ್ಲಿ, ಬಾಕ್ಸಿಂಗ್ ರಿಂಗ್‍ನೊಳಗೆ ಸ್ಪಷ್ಟವಾಗಿಯೇ ಗೊತ್ತಾಗುವಂತಿದೆ. ಸಾಮಾನ್ಯವಾಗಿ ಪರಭಾಷಾ ನಾಯಕಿಯರು ಗ್ಲಾಮರ್‍ಗಷ್ಟೇ ಸೀಮಿತವಾಗುತ್ತಾರೆ. ಆದರೆ ನಾಯಕಿ ಆಕಾಂಕ್ಷಾ ಸಿಂಗ್ ಗಟ್ಟಿತನ ಹೊಂದಿರೋ ಪಾತ್ರವನ್ನು ಅಷ್ಟೇ ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ. ಸುನೀ ಶೆಟ್ಟಿ ತಮ್ಮ ಪಾತ್ರಕ್ಕೆ ಪೈಲ್ವಾನ್ ಮನೆತನದ ಗತ್ತು ಗೈರತ್ತುಗಳನ್ನು ಆವಾಹಿಸಿಕೊಂಡಂತೆ ಜೀವ ತುಂಬಿದ್ದಾರೆ. ಎಲ್ಲ ಪಾತ್ರಗಳೂ ಕೂಡಾ ಇಂಥಾದ್ದೇ ಅಮೋಘ ನಟನೆಯಿಂದ ಕಥೆಗೆ ಜೊತೆಯಾಗಿ ಸಾಗಿವೆ.

    ಪೈಲ್ವಾನ್ ಕೃಷ್ಣ ಪೈಲ್ವಾನನನ್ನು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಕಾಲೂರಿ ಕಾದಾಡುವಷ್ಟು ಶಶಕ್ತವಾಗಿ ಕಟ್ಟಿ ಕೊಟ್ಟಿದ್ದಾರೆ. ಬಾಲಿವುಡ್ ಸಿನಿಮಾಗಳನ್ನೇ ಮೀರಿಸುವ ದೃಷ್ಯ ವೈಭವ, ನಿರೂಪಣೆಯಲ್ಲಿನ ಕಲಾತ್ಮಕತೆ ಮತ್ತು ಸುದೀಪ್ ಅವರ ನಟನೆಯ ಖದರ್‍ನಿಂದ ಪೈಲ್ವಾನ್ ಕಳೆಗಟ್ಟಿಕೊಂಡಿದೆ. ಅವರು ಜಟ್ಟಿಯಾಗಿ ಕಣಕ್ಕಿಳಿದು ಮೈನವಿರೇಳಿಸುತ್ತಾರೆ, ಭಾವನಾತ್ಮಕ ದೃಷ್ಯಗಳಲ್ಲಿ ಮನಸು ತೊಯ್ದಾಡುವಂತೆ ಮಾಡುತ್ತಾರೆ. ಒಟ್ಟಾರೆಯಾಗಿ ಎಲ್ಲ ಶೇಡುಗಳಲ್ಲಿಯೂ ಸುದೀಪ್ ಅದ್ಭುತವೆಂಬಂಥಾ ನಟನೆಯನ್ನೆ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಪೈಲ್ವಾನ್ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಚಿತ್ರ.

    ರೇಟಿಂಗ್: 4/5

  • ವಿಶ್ವಾದ್ಯಂತ ಪೈಲ್ವಾನ್ ರಿಲೀಸ್ – 3 ಸಾವಿರ ಥಿಯೇಟರ್‌ಗಳಲ್ಲಿ ಕಿಚ್ಚನ ಹವಾ

    ವಿಶ್ವಾದ್ಯಂತ ಪೈಲ್ವಾನ್ ರಿಲೀಸ್ – 3 ಸಾವಿರ ಥಿಯೇಟರ್‌ಗಳಲ್ಲಿ ಕಿಚ್ಚನ ಹವಾ

    – ಚಿತ್ರಮಂದಿರದ ಎದುರು 101 ತೆಂಗಿನಕಾಯಿ ಒಡೆದ ಅಭಿಮಾನಿ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ ಸ್ಯಾಂಡಲ್‍ವುಡ್ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರ ಇಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಿದೆ.

    ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಮುಂಜಾನೆ 5.30ರಿಂದ ಪ್ರದರ್ಶನ ಶುರುವಾಗಿದೆ. ಇತ್ತ ಮೆಜೆಸ್ಟಿಕ್‍ನ ಸಂತೋಷ್ ಚಿತ್ರಮಂದಿರದಲ್ಲಿ ಇದೇ ಮೊದಲ ಬಾರಿಗೆ ಬೆಳಗ್ಗೆ 7 ಗಂಟೆಗೆ ಶೋ ಆರಂಭವಾಗಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಚಿತ್ರಮಂದಿರದ ಎದುರು 101 ತೆಂಗಿನ ಕಾಯಿಯನ್ನು ಒಡೆದಿದ್ದಾರೆ.

    ಸುದೀಪ್ ಅವರ ಸಿನಿಮಾ ಇದೇ ಮೊದಲ ಬಾರಿಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಅಲ್ಲದೆ ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ಪೈಲ್ವಾನ್ ತನ್ನ ತಾಕತ್ತನ್ನು ಪ್ರದರ್ಶಿಸುತ್ತಿದ್ದು, ಅಭಿಮಾನಿಗಳು ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

    ಕರ್ನಾಟಕದಲ್ಲಿ ಪೈಲ್ವಾನ್ ಸಿನಿಮಾ 400 ಚಿತ್ರಮಂದಿರಗಳಲ್ಲಿ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ 450ಕ್ಕೂ ಹೆಚ್ಚು ಚಿತ್ರಮಂದಿರ ತಮಿಳುನಾಡಿನಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರ ಹಾಗೂ ವಿಶ್ವಾದ್ಯಂತ 3000 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿದೆ.

    ಪೈಲ್ವಾನ್ ಚಿತ್ರವನ್ನು ಎಸ್. ಕೃಷ್ಣ ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್‍ಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

  • ಪೈಲ್ವಾನ್ ಚಿತ್ರದ ಸುನಿಲ್ ಶೆಟ್ಟಿ ಫಸ್ಟ್ ಲುಕ್ ರಿವೀಲ್

    ಪೈಲ್ವಾನ್ ಚಿತ್ರದ ಸುನಿಲ್ ಶೆಟ್ಟಿ ಫಸ್ಟ್ ಲುಕ್ ರಿವೀಲ್

    ಬೆಂಗಳೂರು: ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಕನ್ನಡದ ‘ಪೈಲ್ವಾನ್’ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಸದ್ಯ ಪೈಲ್ವಾನ್ ಚಿತ್ರತಂಡ ಸಿನಿಮಾದಲ್ಲಿ ಸುನಿಲ್ ಅವರ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದು, ನಟ ಕಿಚ್ಚ ಸುದೀಪ್ ಫೋಟೋ ಟ್ವೀಟ್ ಮಾಡಿದ್ದಾರೆ.

    ಮಂಗಳೂರು ಮೂಲದ ತುಳು ಭಾಷಿಕರಾಗಿರುವ ಸುನಿಲ್ ಶೆಟ್ಟಿ ಅವರು ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಸಂಜೆ 6 ಗಂಟೆ ವೇಳೆಗೆ ಸುನಿಲ್ ಶೆಟ್ಟಿ ಫಸ್ಟ್ ಲುಕ್ ಪೋಸ್ಟರನ್ನು ಸುದೀಪ್ ಟ್ವೀಟ್ ಮಾಡಿದ್ದು, ಅವರು ತೆರೆ ಮೇಲೆ ಕಾಣಿಸಿಕೊಂಡರೆ ಅದರ ಮೌಲ್ಯ ಹೆಚ್ಚಾಗುತ್ತದೆ ಎಂದು ಹೇಳಿ ಮೆಚ್ಚುಗೆ ಸೂಚಿಸಿದ್ದಾರೆ.

    ಪೈಲ್ವಾನ್ ಚಿತ್ರದ ‘ಸರ್ಕಾರ್’ ಎಂಬ ಬಹು ಮುಖ್ಯ ಪಾತ್ರದಲ್ಲಿ ಸುನಿಲ್ ಶೆಟ್ಟಿ ನಟಿಸುತ್ತಿದ್ದಾರೆ. ಸದ್ಯ ಅವರ ಪಾತ್ರದ ಕುರಿತ ಹೆಚ್ಚಿನ ಮಾಹಿತಿಯನ್ನ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಚಿತ್ರದ ಫಸ್ಟ್ ಲುಕ್ ಟ್ವೀಟ್ ಮಾಡಿರುವ ಸುನಿಲ್ ಶೆಟ್ಟಿ, ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮತ್ತೊಮ್ಮೆ ನಿಮ್ಮೊಂದಿಗೆ ನಟಿಸುವ ಅವಕಾಶದತ್ತ ಎದುರು ನೋಡುತ್ತಿದ್ದೆನೆ ಎಂದು ನಟ ಸುದೀಪ್, ಚಿತ್ರದ ನಿರ್ದೇಶಕ ಎಸ್. ಕೃಷ್ಣ ಹಾಗೂ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

    ಪೈಲ್ವಾನ್ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.