ಉಡುಪಿ: ಬಾಲಿವುಡ್‌ನ ಖ್ಯಾತ ನಟ ಸುನೀಲ್ ಶೆಟ್ಟಿ (Sunil Shetty) ಕುಟುಂಬ ಸಮೇತ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೊಸ ಮಾರಿಗುಡಿಗೆ ಭೇಟಿ ಕೊಟ್ಟರು.
ಇತ್ತೀಚೆಗಷ್ಟೇ ಬ್ರಹ್ಮಕಲಶೋತ್ಸವದ ಮೂಲಕ ಹೊಸ ಮೆರುಗು ಪಡೆದಿರುವ ದೇವಾಲಯವನ್ನು ಕಂಡು ಖುಷಿಪಟ್ಟರು. ದೇವಾಲಯದ ನಿರ್ಮಾಣ ಹಾಗೂ ಇಲ್ಲಿನ ಶಿಲ್ಪಗಳ ರಚನೆಯನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡಿನಲ್ಲಿ ನಡೆಯುತ್ತಿರುವ ಉತ್ಸವದ ಪ್ರಯುಕ್ತ ತಾಯಿಯ ಜೊತೆ ಸುನೀಲ್ ಶೆಟ್ಟಿ ತುಳುನಾಡಿಗೆ ಬಂದಿದ್ದರು. ಮೂಲತಃ ಮುಲ್ಕಿಯವರಾದ ಸುನೀಲ್ ಶೆಟ್ಟಿ ಇದೇ ವೇಳೆ ಕಾಪು ಕ್ಷೇತ್ರಕ್ಕೆ ಭೇಟಿಕೊಟ್ಟು, ತಾಯಿಗೆ ಮಾರಿಯಮ್ಮನ ದರ್ಶನ ಮಾಡಿಸಿದರು.
ಈ ವೇಳೆ ಸುನೀಲ್ ಶೆಟ್ಟಿಯ ಅನೇಕ ಬಂಧುಗಳು ಜೊತೆಗಿದ್ದರು. ಅವರು ದೇಗುಲಕ್ಕೆ ಭೇಟಿ ಕೊಟ್ಟ ವೇಳೆಯಲ್ಲಿ ಪೂಜೆ ಕೂಡ ನಡೆದು, ಅದರಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು. ದೇಗುಲದ ವತಿಯಿಂದ ಸುನೀಲ್ ಶೆಟ್ಟಿ ಹಾಗೂ ಅವರ ತಾಯಿಯನ್ನು ಗೌರವಿಸಲಾಯಿತು.
ಮುಂಬೈ: ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ (Sunil Shetty) ತನ್ನ ಫೇವ್ರೆಟ್ ಕ್ರಿಕೆಟರ್ ಯಾರೆಂಬುದನ್ನು ಹೆಸರಿಸಿದ್ದಾರೆ. ಈ ಹಿಂದೆ ಪ್ರತಿ ಪಂದ್ಯದಲ್ಲೂ ಕೆ.ಎಲ್ ರಾಹುಲ್ ಅವರನ್ನ ಹಾಡಿ ಹೊಗಳುತ್ತಿದ್ದ ಸುನೀಲ್ ಶೆಟ್ಟಿ ನನ್ನ ಫೆವ್ರೆಟ್ ಕ್ರಿಕೆಟರ್ ಕೆ.ಎಲ್ ರಾಹುಲ್ (KL Rahul) ಅಲ್ಲ ಎಂದಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕೆ.ಎಲ್ ರಾಹುಲ್ ನನ್ನ ಮಗ ಇದ್ದಂತೆ, ಆದ್ರೆ ನನ್ನ ಫೆವ್ರೆಟ್ ಸ್ಟಾರ್ ಕ್ರಿಕೆಟರ್ ಎಂದಿಗೂ ವಿರಾಟ್ ಕೊಹ್ಲಿ (Virat Kohli). ಆತ ನಿಜವಾದ ಚೇಸ್ ಮಾಸ್ಟರ್ ಎಂದು ಹೇಳಿದ್ದಾರೆ.
Sunil Shetty said, “KL Rahul is my son, but Virat Kohli is definitely my favourite cricketer. He is a master of chasing”. pic.twitter.com/l02Mnk9DI0
ಸಚಿನ್ ದಾಖಲೆ ಮುರಿಯುವ ಸನಿಹದಲ್ಲಿ ಕಿಂಗ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ (Virat Kohli) ಒಟ್ಟು 78 ಶತಕಗಳನ್ನು ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 48 ಶತಕ ಗಳಿಸಿರುವ ಕಿಂಗ್ ಕೊಹ್ಲಿ, ಈ ಟೂರ್ನಿಯಲ್ಲಿ ಇನ್ನೆರಡು ಶತಕಗಳನ್ನು ಸಿಡಿಸಿದರೆ, ಸಚಿನ್ ತೆಂಡೂಲ್ಕರ್ ಅವರ (49 ಶತಕ) ಶತಕಗಳ ದಾಖಲೆಯನ್ನು ಮುರಿಯಲಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್ ಮದುವೆ
ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿಗೆ ಶತಕ ಸಿಡಿಸುವ ಅವಕಾಶವಿತ್ತು. ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದ್ದ ಕೊಹ್ಲಿ, ಕೊನೆಯಲ್ಲಿ ಬಿರುಸಿನ ಆಟಕ್ಕೆ ತಿರುಗಿದರು. 103 ಎಸೆತಗಳಲ್ಲಿ 95 ರನ್ ಗಳಿಸಿ ಆಡುತ್ತಿದ್ದಾಗ ಗೆಲುವಿಗೆ ಇನ್ನೂ 5 ರನ್ ಬಾಕಿಯಿತ್ತು. ಕೊಹ್ಲಿಯ ಶತಕಕ್ಕೂ ಅಷ್ಟೇ ರನ್ ಬೇಕಿತ್ತು. ಈ ವೇಳೆ 104ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಕೊಹ್ಲಿ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು. ಇದನ್ನೂ ಓದಿ: ಕೊನೆಗೂ ಪಾಕಿಗೆ ಜಯ – ಸೆಮಿ ರೇಸ್‌ನಿಂದ ಬಾಂಗ್ಲಾ ಔಟ್
ಕೋಟ್ಯಂತರ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತಾಯಿತು. ಆದ್ದರಿಂದ ಕೊಹ್ಲಿ ಈ ಪಂದ್ಯದಲ್ಲಾದರೂ 49ನೇ ಶತಕ ಸಿಡಿಸಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ. ಪಾಕಿಸ್ತಾನ ತಂಡದ ಸ್ಟಾರ್ ಕ್ರಿಕೆಟರ್ ಮೊಹಮ್ಮದ್ ರಿಜ್ವಾನ್ ಸಹ ಕೊಹ್ಲಿ 49 ಮತ್ತು 50ನೇ ಶತಕವನ್ನು ಇದೇ ವಿಶ್ವಕಪ್‌ನಲ್ಲಿ ಸಿಡಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಕಿಂಗ್ ಕೊಹ್ಲಿ, ರೋಹಿತ್ ಬಯೋಪಿಕ್‌ನಲ್ಲಿ ನಟಿಸುತ್ತಾರಾ ಶಾಹಿದ್ ಕಪೂರ್?
ಗಗನಕ್ಕೇರಿದ ಟೊಮ್ಯಾಟೋ ಬೆಲೆ ಕುರಿತಾಗಿ ಈ ಹಿಂದೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿಕೆಯೊಂದನ್ನು ನೀಡಿದ್ದರು. ‘ಟೊಮ್ಯಾಟೋ ಬೆಲೆ ಕೇಳಿದ್ಮೇಲೆ ಊಟದಲ್ಲಿ ಟೊಮ್ಯಾಟೋ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ’ ಎನ್ನುವ ಮಾತುಗಳನ್ನು ಆಡಿದ್ದರು. ಆ ನಂತರ ಅನೇಕರು ಇವರ ಮಾತಿಗೆ ವಿರೋಧಿಸಿದ್ದರು. ಟ್ರೋಲ್ ಕೂಡ ಮಾಡಿದ್ದರು.
ಸುನೀಲ್ ಶೆಟ್ಟಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಟೊಮ್ಯಾಟೋ ಬೆಲೆಯಿಂದ ರೈತರಿಗೆ ಲಾಭವಾಗಿದೆ. ಇವರು ರೈತ ವಿರೋಧಿ. ರೈತರಿಗೆ ಕೊಂಚ ಸಹಾಯವಾಗುತ್ತದೆ ಎಂದರೆ, ಇವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಅನೇಕರು ಟೀಕಿಸಿದ್ದರು. ಈ ಕುರಿತು ಸುನೀಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ನಾನು ಕೂಡ ರೈತ ಕುಟುಂಬದಿಂದ ಬಂದವನು. ರೈತನ ಕಷ್ಟ ನಷ್ಟಗಳು ನನಗೆ ಗೊತ್ತಿದೆ. ನಾನು ರೈತ ವಿರೋಧಿ ಮಾತುಗಳನ್ನು ಆಡಿಲ್ಲ. ನನಗೂ ರೈತನ ಬಗ್ಗೆ ಕಾಳಜಿ ಇದೆ. ನನ್ನ ಮಾತುಗಳಿಂದ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದು ಅವರು ಹೇಳಿಕೊಂಡಿದ್ದಾರೆ. ತಮಗೂ ರೈತರ ಬಗ್ಗೆ ಕಾಳಜಿ ಇರುವ ಕುರಿತು ಮಾತನಾಡಿದ್ದಾರೆ.
ಏನಿದು ವಿವಾದ?
ದೇಶದಾದ್ಯಂತ ಟೊಮ್ಯಾಟೋ (Tomato) ಬೆಲೆ ಏರಿ ಕೂತಿದೆ. ಇದು ಮಧ್ಯಮ ಮತ್ತು ಕೆಳಮಧ್ಯಮ ವರ್ಗಕ್ಕೆ ಮಾತ್ರ ತಲೆಬಿಸಿ ತಂದಿಲ್ಲ, ಶ್ರೀಮಂತರು ಕೂಡ ಟೊಮ್ಯಾಟೋ ಬಗ್ಗೆ ಮಾತನಾಡುವಂತಾಗಿದೆ. ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿರುವ ಬಾಲಿವುಡ್ (Bollywood) ನಟ ಸುನೀಲ್ ಶೆಟ್ಟಿ (Sunil Shetty) ಟೊಮ್ಯಾಟೋ ಬೆಲೆ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಅಪಘಾತದಿಂದ ಚೇತರಿಸಿಕೊಂಡ್ರಾ ಸಾಯಿ ಧರಂ ತೇಜ್- ನಟ ಹೇಳೋದೇನು?
ನನ್ನ ಮನೆಯಲ್ಲಿ ಯಾವಾಗಲೂ ನಾವು ತಾಜಾ ತರಕಾರಿಯನ್ನೇ ತಂದು ಬಳಸುತ್ತೇವೆ. ದಿನಕ್ಕೆ ಎರಡ್ಮೂರು ರೀತಿಯ ತರಕಾರಿಗಳನ್ನು ನನ್ನ ಪತ್ನಿ ಖರೀದಿಸುತ್ತಾರೆ. ಅದರಲ್ಲೂ ಇತ್ತೀಚೆಗೆ ಟೊಮ್ಯಾಟೋ ದರ ಗಗನಕ್ಕೇರಿದೆ. ಹಾಗಾಗಿ ನಾನು ಟೊಮ್ಯಾಟೋ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಟೊಮ್ಯಾಟೋ ದರ ಏರಿಕೆಯಾಗುತ್ತಿದ್ದಂತೆಯೇ ಹಲವರು ಹಲವು ರೀತಿಯ ಪ್ರಯೋಗಗಳನ್ನು ಅಡುಗೆಯಲ್ಲಿ ಮಾಡುತ್ತಿದ್ದಾರೆ. ಅಲ್ಲದೇ, ತಮ್ಮ ಮನೆಯಲ್ಲೇ ಟೊಮ್ಯಾಟೋ ಬೆಳೆಯುವುದು ಹೇಗೆ ಎನ್ನುವುದನ್ನು ನಟಿ ರಾಖಿ ಸಾವಂತ್ ಹೇಳಿದ್ದರು. ಹದಿನೈದು ದಿನದ ಒಳಗೆ ಟೊಮ್ಯಾಟೋ ಬೆಳೆಯುವುದು ಹೇಗೆ ಎನ್ನುವುದನ್ನು ತೋರಿಸಿಕೊಟ್ಟಿದ್ದರು. ಆ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ದೇಶದಾದ್ಯಂತ ಟೊಮ್ಯಾಟೋ (Tomato) ಬೆಲೆ ಏರಿ ಕೂತಿದೆ. ಇದು ಮಧ್ಯಮ ಮತ್ತು ಕೆಳಮಧ್ಯಮ ವರ್ಗಕ್ಕೆ ಮಾತ್ರ ತಲೆಬಿಸಿ ತಂದಿಲ್ಲ, ಶ್ರೀಮಂತರು ಕೂಡ ಟೊಮ್ಯಾಟೋ ಬಗ್ಗೆ ಮಾತನಾಡುವಂತಾಗಿದೆ. ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿರುವ ಬಾಲಿವುಡ್ (Bollywood) ನಟ ಸುನೀಲ್ ಶೆಟ್ಟಿ (Sunil Shetty) ಟೊಮ್ಯಾಟೋ ಬೆಲೆ ಬಗ್ಗೆ ಮಾತನಾಡಿದ್ದಾರೆ.
ನನ್ನ ಮನೆಯಲ್ಲಿ ಯಾವಾಗಲೂ ನಾವು ತಾಜಾ ತರಕಾರಿಯನ್ನೇ ತಂದು ಬಳಸುತ್ತೇವೆ. ದಿನಕ್ಕೆ ಎರಡ್ಮೂರು ರೀತಿಯ ತರಕಾರಿಗಳನ್ನು ನನ್ನ ಪತ್ನಿ ಖರೀದಿಸುತ್ತಾರೆ. ಅದರಲ್ಲೂ ಇತ್ತೀಚೆಗೆ ಟೊಮ್ಯಾಟೋ ದರ ಗಗನಕ್ಕೇರಿದೆ. ಹಾಗಾಗಿ ನಾನು ಟೊಮ್ಯಾಟೋ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್
ಟೊಮ್ಯಾಟೋ ದರ ಏರಿಕೆಯಾಗುತ್ತಿದ್ದಂತೆಯೇ ಹಲವರು ಹಲವು ರೀತಿಯ ಪ್ರಯೋಗಗಳನ್ನು ಅಡುಗೆಯಲ್ಲಿ ಮಾಡುತ್ತಿದ್ದಾರೆ. ಅಲ್ಲದೇ, ತಮ್ಮ ಮನೆಯಲ್ಲೇ ಟೊಮ್ಯಾಟೋ ಬೆಳೆಯುವುದು ಹೇಗೆ ಎನ್ನುವುದನ್ನು ನಟಿ ರಾಖಿ ಸಾವಂತ್ ಹೇಳಿದ್ದರು. ಹದಿನೈದು ದಿನದ ಒಳಗೆ ಟೊಮ್ಯಾಟೋ ಬೆಳೆಯುವುದು ಹೇಗೆ ಎನ್ನುವುದನ್ನು ತೋರಿಸಿಕೊಟ್ಟಿದ್ದರು. ಆ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಮೂರು ದಿನಗಳ ಹಿಂದೆಯಷ್ಟೇ ತಮ್ಮ ಪುತ್ರಿ ಅಥಿಯಾ ಶೆಟ್ಟಿಯನ್ನು (Athiya Shetty), ಕ್ರಿಕೆಟಿಗ ಕೆ.ಎಲ್ ರಾಹುಲ್ (K.L Rahul) ಅವರಿಗೆ ಮದುವೆ (Marriage) ಮಾಡಿಕೊಟ್ಟಿದ್ದಾರೆ ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ (Sunil Shetty). ಈ ಅದ್ಧೂರಿ ಮದುವೆಯಲ್ಲಿ ಅಳಿಯನಿಗೆ ದುಬಾರಿ ಬೆಲೆಯ ಫ್ಲ್ಯಾಟ್ ಅನ್ನು ಸುನೀಲ್ ಶೆಟ್ಟಿ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಟೌನ್ ನಲ್ಲಿ ಈ ಉಡುಗೊರೆ ಬಗ್ಗೆಯೇ ಸಾಕಷ್ಟು ಚರ್ಚೆ ಕೂಡ ಆಗುತ್ತಿದೆ.
ಈ ಮದುವೆಯಲ್ಲಿ ಬಾಲಿವುಡ್ ತಾರೆಯರು ಮಾತ್ರವಲ್ಲ, ಕ್ರಿಕೆಟ್ ಆಟಗಾರರೂ ಕೂಡ ಭಾಗಿಯಾಗಿದ್ದರು. ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟ್ ತಾರೆಯರು ಕೂಡ ರಾಹುಲ್ ಗೆ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದೊಂದು ಉಡುಗೊರೆ ಕೂಡ ಕೋಟಿ ಲೆಕ್ಕದಲ್ಲಿ ಇವೆ ಎಂದು ಹೇಳಲಾಗುತ್ತಿದೆ. ವಿರಾಟ್ ಕೊಹ್ಲಿ ಕಾಸ್ಟ್ಲಿ ಕಾರನ್ನು ನೀಡಿದ್ದಾರೆ ಎನ್ನುವ ಸುದ್ದಿಯಿದೆ. ಇದನ್ನೂ ಓದಿ: ದುಶ್ಚಟಗಳಿಗೆ ದಾಸನಾಗಿದ್ದ ನನ್ನನ್ನು ಸರಿದಾರಿಗೆ ತಂದಿದ್ದು ನನ್ನ ಪತ್ನಿ: ರಜನಿಕಾಂತ್
ಸುನೀಲ್ ಶೆಟ್ಟಿ ಅಳಿಯನಿಗಾಗಿ ಮುಂಬೈನಲ್ಲಿ ಐವತ್ತು ಕೋಟಿಗೂ ಅಧಿಕ ಬಾಳುವಂತಹ ಫ್ಲ್ಯಾಟ್ ಅನ್ನು ಮದುವೆಯ ಗಿಫ್ಟ್ ಆಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರತಿಷ್ಠಿತ ಬಡಾವಣೆಯಲ್ಲೇ ಆ ಫ್ಲ್ಯಾಟ್ ಇದ್ದು, ಮದುವೆಯ ನಂತರ ರಾಹುಲ್ ಮತ್ತು ಅಥಿಯಾ ಅದೇ ಮನೆಯಲ್ಲೇ ವಾಸ ಇರಲಿದ್ದಾರಂತೆ. ಈ ದುಬಾರಿ ಗಿಫ್ಟ್ ಬಗ್ಗೆ ಸುನೀಲ್ ಅವರನ್ನು ಮಾಧ್ಯಮಗಳು ಕೂಡ ಪ್ರಶ್ನೆ ಮಾಡಿವೆ. ಆದರೆ, ಈ ಕುರಿತು ಅವರು ಮಾತನಾಡಲು ನಿರಾಕರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ (Sunil Shetty) ಪುತ್ರಿ ಅಥಿಯಾ ಶೆಟ್ಟಿ (Athiya Shetty) ಮತ್ತು ಕ್ರಿಕೆಟಿಗ ಕೆ.ಎಲ್.ರಾಹುಲ್ (KL Rahul) ಮದುವೆ (Marriage) ಕಾರ್ಯಕ್ರಮಗಳು ಇಂದಿನಿಂದ ಶುರುವಾಗಲಿವೆ. ಒಟ್ಟು ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಲ್ಲಿ ಹಲವು ಗಣ್ಯರು ಭಾಗಿ ಆಗುತ್ತಿದ್ದಾರೆ. ಇಂದು ಹಲವು ಕಾರ್ಯಕ್ರಮಗಳು ನಡೆದರೆ, ನಾಳೆ ಮೆಹಂದಿ ಸಮಾರಂಭ ನಡೆಯಲಿದೆ. ಜನವರಿ 23 ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ.
ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮಹೌಸ್ ಬಂಗಲೆಯಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿದ್ದು, ಕೆಲವೇ ಕೆಲವು ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಮೂಲಗಳ ಪ್ರಕಾರ ಕೇವಲ ನೂರು ಜನಕ್ಕೆ ಆಮಂತ್ರಣವನ್ನು ನೀಡಲಾಗಿದೆ. ಮದುವೆಗೆ ಬರುವ ಅತಿಥಿಗಳು ಕಡ್ಡಾಯವಾಗಿ ಮೊಬೈಲ್ ತರುವಂತಿಲ್ಲ ಎನ್ನುವ ಷರತ್ತನ್ನು ವಿಧಿಸಲಾಗಿದೆ. ಎರಡು ಕುಟುಂಬ ಸೇರಿ ಕೇವಲ ನೂರು ಜನಕ್ಕೆ ಮಾತ್ರ ಪ್ರವೇಶ ಕಲ್ಪಿಸಿರುವುದರಿಂದ ಬಾಲಿವುಡ್ ಬಹುತೇಕ ಗಣ್ಯರು ಮದುವೆ ಸಮಾರಂಭದಲ್ಲಿ ಗೈರು ಆಗಲಿದ್ದಾರೆ. ಇದನ್ನೂ ಓದಿ: ಬಾಲಯ್ಯ ಮುಂದೆ ಅಬ್ಬರಿಸಲು ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಮದುವೆಗೆ ಬಂದವರು ಮೊಬೈಲ್ ತರುವಂತಿಲ್ಲ, ತಂದವರು ಫೋಟೋ ಸೆರೆ ಹಿಡಿದು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚದಂತೆ ಮನವಿ ಮಾಡಲಾಗಿದೆ. ಮದುವೆ ಆದ ಕೆಲ ದಿನಗಳ ನಂತರ ಆರತಕ್ಷತೆ ಆಯೋಜನೆ ಮಾಡಿರುವುದರಿಂದ ಅವತ್ತು ಸಿನಿಮಾ ರಂಗದ ಗಣ್ಯರು, ರಾಜಕೀಯ ಮುಖಂಡರು ಮತ್ತು ಆಪ್ತರನ್ನು ಕರೆಯುವ ಕುರಿತು ಎರಡು ಕುಟುಂಬಗಳ ನಿರ್ಧಾರ ಮಾಡಿವೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಾಮೆಂಟ್ ನಲ್ಲಿ ರಾಹುಲ್ ಭಾಗಿ ಆಗಬೇಕಾಗಿದ್ದರಿಂದ ಈ ಟೂರ್ನಾಮೆಂಟ್ ಮುಗಿದ ನಂತರ ಆರತಕ್ಷತೆ ಇರಲಿದೆ ಎನ್ನಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಐವತ್ತು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಸಿನಿಮಾ ಟೀಮ್ 50ನೇ ಸಂಭ್ರಮದಲ್ಲಿ ಇರುವಾಗ ಕಮಲ್ ಹಾಸನ್ ಚಿತ್ರ ವೀಕ್ಷಿಸಿದ್ದಾರೆ. ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಸಿನಿಮಾದ ಕಥೆ, ಅದನ್ನು ನಿರೂಪಿಸಿದ ರೀತಿ ಹಾಗೂ ರಿಷಬ್ ಶೆಟ್ಟಿ ನಟನೆಯನ್ನು ಮೆಚ್ಚಿಕೊಂಡು ಬೆನ್ನು ತಟ್ಟಿದ್ದಾರೆ. ನವೆಂಬರ್ 18 ರಂದು ಕಾಂತಾರ ಸಿನಿಮಾ ನೋಡಿದ ಕಮಲ್ ಹಾನಸ್ ಅವರು ನಿರ್ದೇಶಕ ರಿಷಬ್ ಶೆಟ್ಟಿಗೆ ಕಾಲ್ ಮಾಡಿ, ಅಭಿನಂದಿಸಿದ್ದಾರೆ.
ಕಾಂತಾರ ಸಿನಿಮಾ ಐವತ್ತು ದಿನಗಳ ಪೂರೈಸಿದ ನಂತರವೂ ಅದರ ಕ್ರೇಜ್ ಮಾತ್ರ ಇನ್ನೂ ನಿಂತಿಲ್ಲ. ಬಿಡುವಾದಾಗೆಲ್ಲ ಸಿಲೆಬ್ರಿಟಿಗಳು ಸಿನಿಮಾ ನೋಡಿ, ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಕಾಂತಾರದ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ನೋಡಿ, ರಿಷಬ್ ಶೆಟ್ಟಿ ಅವರನ್ನೇ ಮನೆಗೆ ಕರೆಯಿಸಿಕೊಂಡು ಸತ್ಕರಿಸಿದ್ದರು. ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ತಿರುಪತಿಯಲ್ಲಿ ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯ ಜಗದೀಶ್ ದಂಪತಿ
‘ನಾನು ಕಾಂತಾರ ಸಿನಿಮಾ ನೋಡಿದೆ. ನನಗೆ ಅರಿವಿಲ್ಲದಂತೆ ಕಣ್ಣೀರು ಬಂತು. ತುಂಬಾ ಭಾವುಕನಾಗಿಬಿಟ್ಟೆ. ಯಾಕೆಂದರೆ, ನಾನು ಆ ನೆಲದವನು. ಅಲ್ಲಿ ಹುಟ್ಟಿ ಬೆಳೆದವನು. ಹಾಗಾಗಿ ಕಾಂತಾರ ಸಿನಿಮಾ ನನಗೆ ಬೇಗ ಕನೆಕ್ಟ್ ಆಯಿತು’ ಎಂದು ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಅವರ ನಿರ್ದೇಶನ ಹಾಗೂ ನಟನೆಯ ಬಗ್ಗೆಯೂ ಕೊಂಡಾಡಿದ್ದಾರೆ. ರಿಷಬ್ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಗ್ರೇಟ್ ಜಾಬ್ ಎಂದು ಹಾಡಿಹೊಗಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸುನೀಲ್ ಶೆಟ್ಟಿ, ಕನ್ನಡದ ಸಿನಿಮಾ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ.
‘ಕಾಂತಾರ’ ಚಿತ್ರವು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಸೆ. 30ರಂದು ಬಿಡುಗಡೆಯಾದ ಚಿತ್ರವು ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲದೆ, ವಿದೇಶಗಳಲ್ಲೂ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಮುಗಿಸಿ, 100ನೇ ದಿನದತ್ತ ದಾಪುಗಾಲಿಟ್ಟಿದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ‘ಕಾಂತರ’, ಅಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
Live Tv
[brid partner=56869869 player=32851 video=960834 autoplay=true]
ಕಾಂತಾರ ಸಿನಿಮಾ ಐವತ್ತು ದಿನಗಳ ಪೂರೈಸಿದ ನಂತರವೂ ಅದರ ಕ್ರೇಜ್ ಮಾತ್ರ ಇನ್ನೂ ನಿಂತಿಲ್ಲ. ಬಿಡುವಾದಾಗೆಲ್ಲ ಸಿಲೆಬ್ರಿಟಿಗಳು ಸಿನಿಮಾ ನೋಡಿ, ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಕಾಂತಾರದ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ನೋಡಿ, ರಿಷಬ್ ಶೆಟ್ಟಿ ಅವರನ್ನೇ ಮನೆಗೆ ಕರೆಯಿಸಿಕೊಂಡು ಸತ್ಕರಿಸಿದ್ದರು. ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
‘ನಾನು ಕಾಂತಾರ ಸಿನಿಮಾ ನೋಡಿದೆ. ನನಗೆ ಅರಿವಿಲ್ಲದಂತೆ ಕಣ್ಣೀರು ಬಂತು. ತುಂಬಾ ಭಾವುಕನಾಗಿಬಿಟ್ಟೆ. ಯಾಕೆಂದರೆ, ನಾನು ಆ ನೆಲದವನು. ಅಲ್ಲಿ ಹುಟ್ಟಿ ಬೆಳೆದವನು. ಹಾಗಾಗಿ ಕಾಂತಾರ ಸಿನಿಮಾ ನನಗೆ ಬೇಗ ಕನೆಕ್ಟ್ ಆಯಿತು’ ಎಂದು ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಅವರ ನಿರ್ದೇಶನ ಹಾಗೂ ನಟನೆಯ ಬಗ್ಗೆಯೂ ಕೊಂಡಾಡಿದ್ದಾರೆ. ರಿಷಬ್ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಗ್ರೇಟ್ ಜಾಬ್ ಎಂದು ಹಾಡಿಹೊಗಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸುನೀಲ್ ಶೆಟ್ಟಿ, ಕನ್ನಡದ ಸಿನಿಮಾ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ಇದನ್ನೂ ಓದಿ:ನಾವು ನಟರಿಗೆ ಹೆಚ್ಚು ಕ್ರೆಡಿಟ್ ನೀಡುತ್ತೇವೆ: ಪ್ರಿಯಾಂಕಾ ಚೋಪ್ರಾ
‘ಕಾಂತಾರ’ ಚಿತ್ರವು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಸೆ. 30ರಂದು ಬಿಡುಗಡೆಯಾದ ಚಿತ್ರವು ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲದೆ, ವಿದೇಶಗಳಲ್ಲೂ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಮುಗಿಸಿ, 100ನೇ ದಿನದತ್ತ ದಾಪುಗಾಲಿಟ್ಟಿದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ‘ಕಾಂತರ’, ಅಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಸದ್ಯದಲ್ಲೇ ಅಲ್ಲೂ 50 ದಿನಗಳನ್ನು ಪೂರೈಸಲಿದೆ.
‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ ಚಿತ್ರಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದು ಹೊಂಬಾಳೆ ಫಿಲಂಸ್. ಈಗ ಅದೇ ಸಂಸ್ಥೆಯಿಂದ ನಿರ್ಮಾಣವಾಗಿರುವ ‘ಕಾಂತಾರ’ ಚಿತ್ರವನ್ನು ಮನೆ ಮಂದಿಯೆಲ್ಲಾ ನೋಡಿ ಇಷ್ಟಪಟ್ಟಿದ್ದಾರೆ. ಹಿರಿಯರಿಂದ ಕಿರಿಯರವರೆಗೂ ಎಲ್ಲರೂ ಮೆಚ್ಚಿಕೊಂಡಿರುವ ಈ ಚಿತ್ರ ಎಲ್ಲರಿಗೂ ಇಷ್ಟವಾಗುವುದಕ್ಕೆ ಕಾರಣ ಚಿತ್ರದ ಕಥೆ ಮತ್ತು ಮೇಕಿಂಗ್. ಹೊಂಬಾಳೆ ಫಿಲಂಸ್ ಮೊದಲಿನಿಂದಲೂ ಕಥೆಗೆ ವಿಶೇಷವಾದ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು, ಈಗಾಗಲೇ ‘ರಾಜ್ಕುಮಾರ’, ‘ಯುವರತ್ನ’, ‘ಕೆಜಿಎಫ್’ ಮುಂತಾದ ಚಿತ್ರಗಳು ಈ ವಿಷಯವನ್ನು ನಿರೂಪಿಸಿದೆ. ಈಗ ‘ಕಾಂತಾರ’ ಸಹ ಇದೇ ನಿಟ್ಟಿನಲ್ಲಿ ಸಾಗಿರುವುದಷ್ಟೇ ಅಲ್ಲ, ‘ಕೆಜಿಎಫ್’ ಸರಣಿಯ ನಂತರ ಒಂದೇ ಸಂಸ್ಥೆಯ ಇನ್ನೊಂದು ಚಿತ್ರ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ವಿಶೇಷ.
ಬರೀ ಕನ್ನಡವಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಒಟ್ಟು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಹೊಂಬಾಳೆ ಫಿಲಂಸ್ ಸಂಸ್ಥೆಯು ಹಲವು ಚಿತ್ರಗಳನ್ನು ನಿರ್ಮಿಸುತ್ತಿದೆ. ಒಂದೇ ಸಂಸ್ಥೆಯಿಂದ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ.
Live Tv
[brid partner=56869869 player=32851 video=960834 autoplay=true]
ಕನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿರುವ `ಗಾಳಿಪಟ’ (Galipata) ಚಿತ್ರದ ನಟಿ ಭಾವನಾ ರಾವ್ (Bhavana Rao) ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಬಿಟೌನ್‌ನಲ್ಲಿ ಪವರ್‌ಫುಲ್ ಪಾತ್ರದ ಮೂಲಕ ನಟಿ ಲಗ್ಗೆ ಇಡುತ್ತಿದ್ದಾರೆ.
`ಗಾಳಿಪಟ’ ಖ್ಯಾತಿಯ ಭಾವನಾ ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. `ಧಾರಾವಿ ಬ್ಯಾಂಕ್'(Dharavi Bank) ಎಂಬ ಮುಂಬೈ ಕ್ರೈಮ್ ಲೋಕದ ಕಥೆಯಲ್ಲಿ ಭಾವನಾ ಬಣ್ಣಹಚ್ಚಿದ್ದಾರೆ. ಓಟಿಟಿಗಾಗಿಯೇ ಹೊಸ ಚಿತ್ರವೊಂದು ಮಾಡುತ್ತಿದ್ದು, ಸುನೀಲ್ ಶೆಟ್ಟಿ(Sunil Shetty) ಮತ್ತು ವಿವೇಕ್ ಓಬೆರಾಯ್ (Vivek Oberoi) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುನೀಲ್ ಶೆಟ್ಟಿ ಮುಂದೆ ಖಡಕ್ ಪೊಲೀಸ್ ಅಧಿಕಾರಿಯಾಗಿ ವಿವೇಕ್ ಅಬ್ಬರಿಸಲಿದ್ದಾರೆ. ಇದನ್ನೂ ಓದಿ:ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಶೋಕ್ ಕಶ್ಯಪ್
ಇನ್ನೂ ಸುನೀಲ್ ಶೆಟ್ಟಿ ಮಗಳ ಪಾತ್ರದಲ್ಲಿ ಭಾವನಾ ಕಾಣಿಸಿಕೊಂಡಿದ್ದಾರೆ. ಲಾಯರ್ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಧಾರಾವಿ ಬ್ಯಾಂಕ್ ಚಿತ್ರದ ಮೂಲಕ ಬಿಟೌನ್ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ಬ್ಯೂಟಿ ಅಥಿಯಾ ಶೆಟ್ಟಿ ಸಿನಿಮಾಗಿಂತ ತನ್ನ ವೈಯಕ್ತಿಕ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ಇದೀಗ ಹೊಸ ಫೋಟೋಶೂಟ್ ಮಾಡಿಸಿ, ನೆಟ್ಟಿಗರ ಗಮನ ಸೆಳೆದಿದ್ದಾರೆ.
ಹಿಂದಿಯಲ್ಲಿ ಕೆಲ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ, ಸಿನಿಮಾಗಿಂತ ಕೆ.ಎಲ್ ರಾಹುಲ್ ಜತೆಗಿನ ಡೇಟಿಂಗ್ ವಿಷ್ಯವಾಗಿ ಸಖತ್ ಹೈಲೈಟ್ ಆಗಿದ್ದವರು. ಈಗ ಹಾಟ್ ಲುಕ್‌ನಲ್ಲಿ ಫೋಟೋಶೂಟ್ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ. ಇದನ್ನೂ ಓದಿ:`ಲಾಲ್ ಸಿಂಗ್ ಚಡ್ಡಾ’ ಸಿನಿಮಾ ನಿಷೇಧದ ಬಗ್ಗೆ ಏಕ್ತಾ ಕಪೂರ್ ಪ್ರತಿಕ್ರಿಯೆ