Tag: Sunil Hogaravalli

  • ಸಿಸಿಬಿ ಕಚೇರಿಯಿಂದ್ಲೇ ಸುನಿಲ್ ಹೆಗ್ಗರವಳ್ಳಿಗೆ ಬೆಳಗೆರೆ ಕರೆ- ಬೇಲ್‍ಗೆ ಅಡ್ಡಿಯಾಗುತ್ತಾ ಫೋನ್‍ಕಾಲ್?

    ಸಿಸಿಬಿ ಕಚೇರಿಯಿಂದ್ಲೇ ಸುನಿಲ್ ಹೆಗ್ಗರವಳ್ಳಿಗೆ ಬೆಳಗೆರೆ ಕರೆ- ಬೇಲ್‍ಗೆ ಅಡ್ಡಿಯಾಗುತ್ತಾ ಫೋನ್‍ಕಾಲ್?

    ಬೆಂಗಳೂರು: ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪವನ್ನು ಎದುರಿಸುತ್ತಿರುವ ಪತ್ರಕರ್ತ ರವಿ ಬೆಳಗೆರೆ, ಸಿಸಿಬಿ ವಶದಲ್ಲಿದ್ದುಕೊಂಡೇ ಸುನಿಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.

    ಭಾನುವಾರ ರಾತ್ರಿ ಸುಮಾರು 9.40ರ ವೇಳೆಗೆ ಮಧು ಎಂಬಾತ ಸುನಿಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದಾರೆ. ಸುನಿಲ್ ರಿಸೀವ್ ಮಾಡಿದಾಗ ಕರೆ ಮಾಡಿದ್ದ ಮಧು ಎಂಬಾತ ರವಿ ಬೆಳೆಗೆರೆಯವರಿಗೆ ಫೋನ್ ಕೊಟ್ಟಿದ್ದಾನೆ. ಈ ವೇಳೆ ಸುನಿಲ್ ಜೊತೆ ಮಾತನಾಡಿದ ರವಿ ಬೆಳಗೆರೆ, ಯಶೋಮತಿ ಜೊತೆ ಸಂಬಂಧ ಇದೆ ಅಂತಾ ಮಾಧ್ಯಮಗಳ ಮುಂದೆ ಹೇಳಿದ್ದೀಯಾ? ಅಂತಾ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸುನಿಲ್ , ನನಗೆ ಯಶೋಮತಿ ಜೊತೆ ಸಂಬಂಧವಿಲ್ಲ. ಹೀಗಿದ್ದಾಗ ನಾನ್ ಯಾಕೆ ಹಾಗೆ ಹೇಳಲಿ? ಅಂತಾ ಪ್ರಶ್ನಿಸಿದ್ದಾರೆ.

    ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಬೆಳಗೆರೆ ಪುತ್ರಿ ಚೇತನಾ ಬೆಳಗೆರೆ, ಸಿಸಿಬಿ ಕಚೇರಿಯಿಂದ ನಮ್ಮ ತಂದೆ ಕರೆ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಸುನಿಲ್ ಹೆಗ್ಗರವಳ್ಳಿಯವರೂ ದೂರು ನೀಡಲಿ. ನಾವೂ ದೂರು ನೀಡುತ್ತೇವೆ. ನಮ್ಮ ತಂದೆಗೆ ಬೇಲ್ ಸಿಗದಂತೆ ಮಾಡಲು ಮತ್ತೊಂದು ಷಡ್ಯಂತ್ರ ರಚಿಸಿದ್ದಾರೆ ಎಂದಿದ್ದಾರೆ.

    ನನಗೆ ಏನೇ ಆದರೂ ರವಿ ಬೆಳಗೆರೆ ಅವರೇ ಕಾರಣ ಅಂತ ಸುನಿಲ್ ಹೆಗ್ಗರವಳ್ಳಿ ಹೇಳಿದ್ದಾರೆ. ಸಿಸಿಬಿ ಕಚೇರಿಯಿಂದ ಕರೆ ಮಾಡುವ ಮೂಲಕ ತಾನು ಏನ್ ಬೇಕಾದ್ರೂ ಮಾಡ್ತೀನಿ ಅನ್ನೋ ಮೆಸೇಜ್ ಕೊಟ್ಟಿದ್ದಾರೆ. ಯಶೋಮತಿ ನನ್ನ ಗೆಳತಿಯಷ್ಟೇ. ಎಲ್ಲರೂ ರವಿ ಬೆಳಗೆರೆಯಂತೆ ಇರಲು ಆಗುತ್ತಾ? ಅವರಿಗಾದರೂ ಹತ್ತಾರು ಮಂದಿ ಗರ್ಲ್ ಫ್ರೆಂಡ್ಸ್ ಇದ್ದಾರೆ ಅಂತಾ ಸುನಿಲ್ ಹೇಳಿದ್ದಾರೆ.

     

  • ಸಿಸಿಬಿ ಪೊಲೀಸರ ಮೊದಲ ಪ್ರಶ್ನೆ ಕೇಳಿ ಮಧ್ಯರಾತ್ರಿ ಬೆಚ್ಚಿಬಿದ್ದ ರವಿ ಬೆಳಗೆರೆ

    ಸಿಸಿಬಿ ಪೊಲೀಸರ ಮೊದಲ ಪ್ರಶ್ನೆ ಕೇಳಿ ಮಧ್ಯರಾತ್ರಿ ಬೆಚ್ಚಿಬಿದ್ದ ರವಿ ಬೆಳಗೆರೆ

    ಬೆಂಗಳೂರು: ಪತ್ರಕರ್ತ ಸನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ರವಿ ಬೆಳಗೆರೆಗೆ ಸಿಸಿಬಿ ಪೊಲೀಸರು ವಿಚಾರಣೆ ವೇಳೆ ಸುಪಾರಿ ಬಗ್ಗೆ ಮೊದಲು ಪ್ರಶ್ನೆ ಕೇಳದೆ ಗೌರಿ ಹತ್ಯೆಗೆ ಸಂಬಂಧಿಸಿದಂತೆ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹೆಗ್ಗರವಳ್ಳಿ ಸುಪಾರಿ ಪ್ರಕರಣ ಬಿಟ್ಟು ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಸಿಸಿಬಿ ಪೊಲೀಸರು ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದೆ. ನಿಮಗೂ ಗೌರಿ ಲಂಕೇಶ್‍ಗೂ ಸಂಪರ್ಕ ಇತ್ತೇ? ಅದು ಯಾವ ರೀತಿಯ ಸಂಪರ್ಕ? ನಿಮ್ಮಿಬ್ಬರ ನಡುವೆ ಯಾವುದಾದರೂ ವಿಚಾರದಲ್ಲಿ ವೈಮನಸ್ಸು, ಅಸಮಾಧಾನ ಇತ್ತಾ? ಗೌರಿ ಲಂಕೇಶ್ ಬಳಿ ಯಾವ ವಿಚಾರಕ್ಕಾದ್ರೂ ನೀವು ಜಗಳ ಆಡಿದ್ರಾ? ಎಂದು ಸಿಸಿಬಿ ಪೊಲೀಸರು ಕೇಳಿದ ಸರಣಿ ಪ್ರಶ್ನೆಗಳಿಗೆ ಮಧ್ಯರಾತ್ರಿ ರವಿ ಬೆಳಗೆರೆ ಬೆಚ್ಚಿಬಿದ್ದಿದ್ದಾರೆ.

    ರವಿ ಬೆಳಗೆರೆ ಜೊತೆಗಿನ ಗುದ್ದಾಟದ ಬಳಿಕ ಸುನೀಲ್ ಹೆಗ್ಗರವಳ್ಳಿಗೆ ಗೌರಿ ಲಂಕೇಶ್ ಆಶ್ರಯ ನೀಡಿದ್ದರು. ರವಿ ಎರಡನೇ ಪತ್ನಿ ಯಶೋಮತಿ ಜೊತೆಯೂ ಗೌರಿ ಲಂಕೇಶ್ ನಿಕಟ ಸಂಪರ್ಕ ಹೊಂದಿದ್ದರು. ಈ ವಿಚಾರ ತಿಳಿದು ರವಿ ಬೆಳಗೆರೆ ಗೌರಿ ಬಗ್ಗೆ ಸಿಟ್ಟಾಗಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಗೌರಿ ಹತ್ಯೆ ಬಗ್ಗೆ ರವಿ ಬೆಳಗೆರೆಯನ್ನು ಸಿಸಿಬಿ ಪೊಲೀಸರು ಪ್ರಶ್ನಿಸಿದ್ದು, ಹಲವು ದೃಷ್ಟಿಕೋನಗಳಲ್ಲಿ ರವಿ ಬೆಳಗೆರೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    https://www.youtube.com/watch?v=tvAkOpM6ZZo

    https://www.youtube.com/watch?v=86k-IW3-boE

    https://www.youtube.com/watch?v=kJ5uYUEgVeM

    https://www.youtube.com/watch?v=bwXnj2XMWag