Tag: Sunil Grover

  • ಕಪಿಲ್ ಶೋನಲ್ಲಿ ಸುನಿಲ್: ಒಂದಾದ ಹೊಡೆದಾಡಿಕೊಂಡಿದ್ದ ಜೋಡಿ

    ಕಪಿಲ್ ಶೋನಲ್ಲಿ ಸುನಿಲ್: ಒಂದಾದ ಹೊಡೆದಾಡಿಕೊಂಡಿದ್ದ ಜೋಡಿ

    ಹಿಂದಿಯ ಕಪಿಲ್ ಶರ್ಮಾ (Kapil Sharma) ಶೋನಲ್ಲಿ ಅತೀ ಹೆಚ್ಚು ನಗಿಸೋರು ಯಾರು ಅಂದರೆ ಥಟ್ಟನೆ ಹೇಳುತ್ತಿದ್ದ ಹೆಸರು ಸುನಿಲ್ ಗ್ರೋವರ್ (Sunil Grover) ಅವರದ್ದು. ಕಾಮಿಡಿ ಶೋನಲ್ಲಿ ಅವರು ಮಾಡದೇ ಇರುವಂತಹ ಪಾತ್ರ ಇರಲಿಲ್ಲ. ಪ್ರತಿ ಎಪಿಸೋಡಿನಲ್ಲೂ ಒಂದಲ್ಲ ಒಂದು ಹೊಸ ವೇಷ ಧರಿಸಿಕೊಂಡು ಜನರನ್ನು ರಂಚಿಸುತ್ತಿದ್ದಾರೆ. 2018ರಲ್ಲಿ ನಡೆದ ಗಲಾಟೆಯಿಂದಾಗಿ ಶೋನಿಂದ ಸುನಿಲ್ ದೂರವಾದರು.

    ಕಾರ್ಯಕ್ರಮಕ್ಕೆಂದು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿತ್ತು ಕಪಿಲ್ ಅಂಡ್ ಟೀಮ್. ಅದರಲ್ಲು ಸುನಿಲ್ ಕೂಡ ಇದ್ದರು. ಕಾರ್ಯಕ್ರಮ ಮುಗಿಸಿಕೊಂಡು ದೆಹಲಿ ವಿಮಾನ ಏರಿದಾಗ ಅಲ್ಲಿಯೇ ಎಡವಟ್ಟು ಆಗಿತ್ತು. ಬಾಲಿವುಡ್ ನಲ್ಲಿ ಹರಿದಾಡಿದ ಸುದ್ದಿಯ ಪ್ರಕಾರ ಕಪಿಲ್ ಶರ್ಮಾ ವಿಪರೀತ ಕುಡಿದಿದ್ದರು. ಅದೇ ಗಲಾಟೆಗೆ ಕಾರಣವಾಗಿತ್ತು.

    ವಿಪರೀತ ಕುಡಿದಿದ್ದ ಕಪಿಲ್ ಶರ್ಮಾ, ಅಲ್ಲಿದ್ದವರನ್ನು ರೇಗಿಸುತ್ತಿದ್ದರು. ಅದು ಎಲ್ಲರಿಗೂ ಕಿರಿಕಿರಿ ಮೂಡಿಸಿತ್ತು. ಅದೇ ವೇಳೆಯಲ್ಲೇ ವಿಮಾನದಲ್ಲಿ ಊಟ ತಂದುಕೊಟ್ಟಿದ್ದರ ಸಿಬ್ಬಂದಿ. ಶರ್ಮಾ ಬಿಟ್ಟು ಉಳಿದವರು ಊಟ ಮಾಡಲು ಶುರು ಮಾಡಿದರು. ನಾನು ಊಟ ಮಾಡದೇ ನೀವು ಹೇಗೆ ಮಾಡಿದ್ದೀರಿ ಎಂದು ಕಿರಿಕ್ ಮಾಡಿದ್ದರು ಕಪಿಲ್. ಜಗಳಕ್ಕೆ ಬಿದ್ದು ಬಿಟ್ಟಿದ್ದರು.

    ಜಗಳ ವಿಪರೀತಕ್ಕೆ ಹೋಗಬಾರದು ಎನ್ನುವ ಕಾರಣಕ್ಕಾಗಿ ಸುನಿಲ್, ನಡುವೆ ಬಂದು ಕಪಿಲ್ ಅವರನ್ನು ಸಮಾಧಾನಿಸಲು ಹೋದರಂತೆ. ಆದ ಸುನಿಲ್ ಅವರಿಗೆ ಬೂಟು ತೆಗೆದುಕೊಂಡು ಕಪಿಲ್ ಹೊಡೆದರು. ಅಲ್ಲಿಂದ ಈ ಗೆಳೆಯರು ಇಬ್ಬರೂ ದೂರ ದೂರ ಆದರು ಎನ್ನುವುದು ಸುದ್ದಿ. ಅಲ್ಲಿಂದ ಆರು ವರ್ಷಗಳ ಕಾಲ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳಲಿಲ್ಲ.

     

    ಸುನಿಲ್ ತಮ್ಮದೇ ಆದ ಹೊಸ ಕಾಮಿಡಿ ಶೋ ಶುರು ಮಾಡಿದಾಗ, ಕಪಿಲ್ ಕಾಲೆಳೆದರು. ಹೀಗೆ ಪರಸ್ಪರ ಇಬ್ಬರೂ ದ್ವೇಷ ಮಾಡುತ್ತಲೇ ಬಂದಿದ್ದರು. ಇದೀಗ ಕಪಿಲ್ ಅವರ ಹೊಸ ಕಾಮಿಡಿ ಶೋನಲ್ಲಿ ಈ ಕೆಂಡಕಾರಿದ್ದ ಜೋಡಿ ಜೊತೆಯಾಗಿ ನಗಿಸೋಕೆ ಬರುತ್ತದೆ. ಒಟಿಟಿಗಾಗಿ ಮಾಡಿರುವ ಶೋಗೆ ‘ದಿ ಗ್ರೇಟ್ ಇಂಡಿನ್ ಕಪಿಲ್ ಶೋ’ ಎಂದು ಹೆಸರಿಟಲಾಗಿದೆ. ಆಗಲೇ ಟ್ರೈಲರ್ ಕೂಡ ರಿಲೀಸ್ ಮಾಡಿದ್ದಾರೆ.

  • ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ಗುಣಮುಖ- ಹಿತೈಷಿಗಳಿಗೆ ಸುನಿಲ್ ಧನ್ಯವಾದ

    ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ಗುಣಮುಖ- ಹಿತೈಷಿಗಳಿಗೆ ಸುನಿಲ್ ಧನ್ಯವಾದ

    ಮುಂಬೈ: ಬಾಲಿವುಡ್ ಹಾಸ್ಯ ನಟ ಸುನಿಲ್ ಗ್ರೋವರ್ ಸೋಶಿಯಲ್ ಮೀಡಿಯಾದಲ್ಲಿ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಸುನಿಲ್ ಅವರು ಸಣ್ಣ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನ ಪರೀಕ್ಷಿಸಿದ ವೈದ್ಯರು ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದರು. ಪರಿಣಾಮ ಸುನಿಲ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿದ್ದು, ನಿನ್ನೆ ಟ್ವಟ್ಟರ್‌ನಲ್ಲಿ, ನನ್ನ ಚಿಕಿತ್ಸೆ ಮುಗಿದಿದೆ. ನಾನು ಈಗ ಗುಣವಾಗುತ್ತಿದ್ದೇನೆ. ನನಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾನು ನಿಮ್ಮೆಲ್ಲರಿಗೂ ಕೃತಜ್ಞನಾಗಿದ್ದೇನೆ! ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೊನೆಗೂ ನಮ್ಮ ಕನಸು ನನಸಾಗಿದೆ: ಆಲಿಯಾ ಹೀಗೆಂದಿದ್ದೇಕೆ?

    heart blockage symptoms: kapil sharma show actor sunil grover undergoes surgery for heart blockage know what is it warning signs and symptoms - Sunil Grover heart surgery: 'गुत्थी' बनकर हंसाने वाले सुनील

    44 ವರ್ಷದ ಈ ನಟನನ್ನು ಕಳೆದ ವಾರ ಮುಂಬೈನ ಏಷ್ಯನ್ ಹಾರ್ಟ್ ಇನ್‍ಸ್ಟಿಟ್ಯೂಟ್‍ಗೆ ದಾಖಲಿಸಲಾಗಿತ್ತು. ಜನವರಿ 27 ರಂದು ಸುನಿಲ್ ಚಿಕಿತ್ಸೆಗೆ ಒಳಗಾದರು. ಅಲ್ಲದೆ ಅವರಿಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿತ್ತು. ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಅವರನ್ನು ನಾಲ್ಕು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಫೆಬ್ರವರಿ 3 ರಂದು ಸುನಿಲ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

    ಸುನಿಲ್ ಅವರು ಕಾಮಿಡಿ ನೈಟ್ಸ್ ವಿತ್ ಕಪಿಲ್ ಮತ್ತು ದಿ ಕಪಿಲ್ ಶರ್ಮಾ ಶೋಗಳ್ಲಿ ಕಾಣಿಸಿಕೊಂಡಿದ್ದು, ಪ್ರಸಿದ್ಧ ಕಿರುತೆರೆ ನಟ. ಟೆಲಿಸಿಷನ್ ಕಾರ್ಯವನ್ನು ಹೊರತುಪಡಿಸಿ, ಸುನಿಲ್ ಇತ್ತೀಚೆಗೆ ಭಾರತ್, ಪಟಾಖಾ, ತಾಂಡವ್ ಮತ್ತು ಸೂರ್ಯಕಾಂತಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನೋಡಿದ ಜನರು ಸುನಿಲ್ ಅವರಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

    ಸುನಿಲ್ ಈ ಹಿಂದೆ ಅಮೀರ್ ಖಾನ್ ಅವರ 2008ರ ಹಿಟ್ ಚಿತ್ರ ‘ಗಜಿನಿ’, ಅಕ್ಷಯ್ ಕುಮಾರ್ ಅವರ ‘ಗಬ್ಬರ್ ಈಸ್ ಬ್ಯಾಕ್’ ಮತ್ತು ‘ದಿ ಲೆಜೆಂಡ್ ಆಫ್ ಭಗತ್ ಸಿಂಗ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಜನಪ್ರಿಯ ಕಾಮಿಡಿ ನಟರಲ್ಲಿ ಒಬ್ಬರಾಗಿದ್ದಾರೆ. ಈ ಹಿಂದೆ ಸುನಿಲ್ ಅವರ ಚಿಕಿತ್ಸೆಗೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸಹಾಯ ಮಾಡಿದ್ದಾರೆ. ಸಲ್ಲು ತಮ್ಮ ವೈದ್ಯ ತಂಡವನ್ನು ಸುನಿಲ್ ಅವರನ್ನು ನೋಡಿಕೊಳ್ಳಲು ಸೂಚಿಸಿದ್ದು ಸಹ ಸುದ್ದಿಯಾಗಿತ್ತು. ಇದನ್ನೂ ಓದಿ: ಸುನಿಲ್ ಗ್ರೋವರ್ ಆರೋಗ್ಯ ವಿಚಾರಿಸಲು ತನ್ನ ವೈದ್ಯ ತಂಡಕ್ಕೆ ಸೂಚಿಸಿದ ಸಲ್ಮಾನ್

  • ಸುನಿಲ್ ಗ್ರೋವರ್ ಆರೋಗ್ಯ ವಿಚಾರಿಸಲು ತನ್ನ ವೈದ್ಯ ತಂಡಕ್ಕೆ ಸೂಚಿಸಿದ ಸಲ್ಮಾನ್

    ಸುನಿಲ್ ಗ್ರೋವರ್ ಆರೋಗ್ಯ ವಿಚಾರಿಸಲು ತನ್ನ ವೈದ್ಯ ತಂಡಕ್ಕೆ ಸೂಚಿಸಿದ ಸಲ್ಮಾನ್

    ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್, ಖ್ಯಾತ ಹಾಸ್ಯನಟ ಸುನಿಲ್ ಗ್ರೋವರ್ ಆರೋಗ್ಯ ಸ್ಥಿತಿ ವಿಚಾರಿಸಿಕೊಳ್ಳಲು ತನ್ನ ವೈದ್ಯ ತಂಡಕ್ಕೆ ಸೂಚಿಸಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ಸಲ್ಮಾನ್ ತಮ್ಮ ಆಪ್ತರ ಆರೋಗ್ಯ ವಿಚಾರಿಸಿಕೊಳ್ಳಲು ಯಾವಾಗಲು ಸಿದ್ಧರಿರುತ್ತಾರೆ. ತಮ್ಮ ಸುತ್ತಮುತ್ತಲಿನವರಿಗೆ ಏನಾದರೂ ತೊಂದರೆ ಎಂದರೆ ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಈ ನಟ ವಹಿಸಿಕೊಳ್ಳುತ್ತಾರೆ. ಅದೇ ರೀತಿ ಸುನಿಲ್ ಗ್ರೋವರ್ ಅವರಿಗೆ ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆ ನಡೆದಿದ್ದು, ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಪರಿಣಾಮ ಸಲ್ಲು ತನ್ನ ವೈದ್ಯ ತಂಡಕ್ಕೆ ಸುನಿಲ್ ಆರೋಗ್ಯವನ್ನು ನೋಡಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ವರದಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ‘ಮರಳಿ ಬರುತ್ತಿದ್ದೇನೆ’ – 56ರ ಹರೆಯದಲ್ಲೂ ಜಿಮ್‍ನಲ್ಲಿ ಬೆವರಿಳಿಸುತ್ತಿದ್ದಾರೆ ಸಲ್ಲು

    ಸುನಿಲ್ ಗ್ರೋವರ್ ಅವರು ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಎಲ್ಲೆಡೆ ಸುದ್ದಿಯಲ್ಲಿದ್ದರು. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಏಷ್ಯನ್ ಹಾರ್ಟ್ ಇನ್‍ಸ್ಟಿಟ್ಯೂಟ್‍ಗೆ ದಾಖಲಿಸಲಾಗಿತ್ತು. ಪರೀಕ್ಷೆಗಳ ನಂತರ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಅಲ್ಲದೆ ಅವರಿಗೆ ಕೋವಿಡ್-19 ಪಾಸಿಟಿವ್ ಸಹ ಬಂದಿತ್ತು. ಈ ಹಿನ್ನೆಲೆ ವೈದ್ಯರು ಸುನಿಲ್ ಅವರ ಆರೋಗ್ಯ ಸ್ಥಿತಿ ಹದಗಟ್ಟಿದ್ದು, ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಸೂಚಿಸಿದ್ದಾರೆ.

    heart blockage symptoms: kapil sharma show actor sunil grover undergoes surgery for heart blockage know what is it warning signs and symptoms - Sunil Grover heart surgery: 'गुत्थी' बनकर हंसाने वाले सुनील

    ವಿಷಯ ತಿಳಿದ ಸುನಿಲ್ ಆತ್ಮೀಯ ಸ್ನೇಹಿತ, ಸಲ್ಮಾನ್ ಖಾನ್ ತಮ್ಮ ವೈದ್ಯರ ತಂಡವನ್ನು ಅವರ ಆರೋಗ್ಯ ಪರೀಕ್ಷಿಸಲು ಕೇಳಿದ್ದಾರೆ. ಚಿಕಿತ್ಸೆ ನಂತರವೂ ಸಲ್ಲು ವೈದ್ಯಕೀಯ ಸಿಬ್ಬಂದಿ ತಂಡವು ಸುನಿಲ್ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪ್ರಸ್ತುತ ಸುನಿಲ್ ಅವರು ಆಸ್ಪತ್ರೆಯಿದ್ದ ಡಿಸ್ಚಾರ್ಜ್ ಆಗಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇಡಲು ಸಲ್ಲು ವೈದ್ಯರ ತಂಡಕ್ಕೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ತಂಗಿ ಆರೋಗ್ಯ ಸರಿಯಿಲ್ಲವೆಂದು ಕ್ಯಾಬ್ ದರೋಡೆ ಮಾಡಿದ ಸಹೋದರರು..!

    2019 ರಲ್ಲಿ ತೆರೆಕಂಡ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ‘ಭಾರತ್’ ನಲ್ಲಿ ಸಲ್ಲು ಮತ್ತು ಸುನೀಲ್ ಒಟ್ಟಿಗೆ ಕೆಲಸ ಮಾಡಿದ್ದರು. ಇತ್ತೀಚೆಗೆ ಸುನಿಲ್ ತಮ್ಮ ಮುಂಬರುವ ವೆಬ್ ಸರಣಿಯ ಚಿತ್ರೀಕರಣದ ವೇಳೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಅನೇಕ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಹಾರೈಸಿದ್ದರು.

  • ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ಸುನಿಲ್ ಗ್ರೋವರ್

    ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ಸುನಿಲ್ ಗ್ರೋವರ್

    ಮುಂಬೈ: ಹಿಂದಿಯ ‘ದಿ ಕಪಿಲ್ ಶರ್ಮಾ ಶೋ’ ಖ್ಯಾತಿಯ ಜನಪ್ರಿಯ ಹಾಸ್ಯ ನಟ ಸುನಿಲ್ ಗ್ರೋವರ್ ನಗರದ ಏಷ್ಯನ್ ಹಾರ್ಟ್ ಇನ್‍ಸ್ಟಿಟ್ಯೂಟ್‍ನಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

    ಜನಪ್ರಿಯ ಹಾಸ್ಯ ಪಾಪ್ ಸೆಲೆಬ್ರೆಟಿಯಾದ ಭಯಾನಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸುನೀಲ್‍ರವರ ಹೆಲ್ತ್ ಅಪ್‍ಡೇಟ್ ಅನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟ ಸುನಿಲ್ ನಗರದ ಏಷ್ಯನ್ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಸುರಕ್ಷಿತವಾಗಿದ್ದು, ಯಾವುದೇ ರೀತಿಯ ಭಯ ಪಡುವ ಅವಶ್ಯಕತೆಯಿಲ್ಲ ಅಂತ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ:  ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ಕೋವಿಡ್ ಪಾಸಿಟಿವ್

     

    View this post on Instagram

     

    A post shared by Viral Bhayani (@viralbhayani)

    ಸುನೀಲ್ ಅವರು ಆದಷ್ಟೂ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಮುಂದೆ ಕಣ್ಣೀರಿಟ್ಟ ಶಕ್ತಿಧಾಮದ ಮಕ್ಕಳು

    ಸುನಿಲ್ ಗ್ರೋವರ್ ಹಲವಾರು ಸ್ಮರಣೀಯ ವೇದಿಕೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕಪಿಲ್ ಶರ್ಮಾ ಶೋ ಕಾರ್ಯಕ್ರಮದಲ್ಲಿ ಅವರ ಗುತ್ತಿ, ಡಾ ಮಶೂರ್ ಗುಲಾಟಿ ಹೀಗೆ ಮುಂತಾದ ಪಾತ್ರವನ್ನು ನಿರ್ವಹಿಸಿದ್ದಾರೆ.

     

    View this post on Instagram

     

    A post shared by Sunil Grover (@whosunilgrover)

    ಅವರು ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಭಾರತ್, ಪಟಾಖಾ, ಸೈಫ್ ಅಲಿ ಖಾನ್‍ರವರ ತಾಂಡವ್, ಸೂರ್ಯಕಾಂತಿ ಹೀಗೆ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುನಿಲ್ ಗ್ರೋವರ್ ತಮ್ಮ ಅನಾರೋಗ್ಯದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

  • ಕಪಿಲ್-ಸುನಿಲ್ ಗ್ರೋವರ್ ಮತ್ತೊಮ್ಮೆ ಜೊತೆಯಗ್ತಾರಾ? ಟ್ವಿಟ್ಟರ್ ನಲ್ಲಿ ಇಬ್ರು ನಟರೂ ಹೇಳಿದ್ದು ಹೀಗೆ

    ಕಪಿಲ್-ಸುನಿಲ್ ಗ್ರೋವರ್ ಮತ್ತೊಮ್ಮೆ ಜೊತೆಯಗ್ತಾರಾ? ಟ್ವಿಟ್ಟರ್ ನಲ್ಲಿ ಇಬ್ರು ನಟರೂ ಹೇಳಿದ್ದು ಹೀಗೆ

    ಮುಂಬೈ: ತಮ್ಮ ಹಾಸ್ಯದ ಜುಗಲ್‍ಬಂದಿಯ ಮೂಲಕವೇ ದೇಶಾದ್ಯಂತ ಪರಿಚಿತರಾಗಿರುವ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ಇಬ್ಬರನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದರೆ. ಆದ್ರೆ ಇಬ್ಬರ ನಡುವಿನ ಕಲಹದಿಂದಾಗಿ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿದ್ದ ಶೋ ಕೂಡ ಕೊನೆಯಾಯ್ತು. ಸದ್ಯ ಕಪಿಲ್ `ಫ್ಯಾಮಿಲಿ ಟೈಮ್ ವಿಥ್ ಕಪಿಲ್’ ಎಂಬ ಶೋ ಮಾಡ್ತಿದ್ದು, ಪ್ರೋಮೋ ವಿಡಿಯೋ ವೈರಲ್ ಆಗಿದೆ.

    ಕೆಲವು ದಿನಗಳ ಹಿಂದೆ ಸುನಿಲ್ ಗ್ರೋವರ್ ಅಭಿಮಾನಿಯೊಬ್ಬರು, ನಿಮ್ಮನ್ನು (ಕಪಿಲ್-ಸುನಿಲ್) ತೆರೆಯ ಮೇಲೆ ಜೊತೆಯಾಗಿ ನೋಡುವುದು ಯಾವಾಗ ಅಂತಾ ಪ್ರಶ್ನೆ ಮಾಡಿದ್ರು. ಅಭಿಮಾನಿ ಪ್ರಶ್ನೆಗೆ ಸುನಿಲ್ ಗ್ರೋವರ್ ಟ್ವಿಟ್ಟರ್ ನಲ್ಲಿಯೇ ಉತ್ತರಿಸಿದ್ದಾರೆ.

    ಹೀಗಿತ್ತು ಉತ್ತರ: ನಿಮ್ಮ ಹಾಗೆ ನನಗೆ ಹಲವರು ಇದೇ ರೀತಿಯ ಪ್ರಶ್ನೆಗಳನ್ನು ಮಾಡ್ತಾರೆ. ಆದ್ರೆ ನನಗೆ ಶೋಗಾಗಿ ಯಾರು ಕರೆದಿಲ್ಲ. ನನ್ನ ಮೊಬೈಲ್ ನಂಬರ್ ಸಹ ಬದಲಾಗಿಲ್ಲ. ಇಷ್ಟು ದಿನಗಳವರೆಗೆ ಕಾಯ್ದು, ಬೇರೆ ಪ್ರೊಜೆಕ್ಟ್ ಗೆ ಸಹಿ ಮಾಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಒಳ್ಳೆಯ ಪ್ರೊಜೆಕ್ಟ್ ನಲ್ಲಿ ಭಾಗಿಯಾಗಿದ್ದೇನೆ. ಆದಷ್ಟು ಬೇಗ ನಿಮ್ಮ ಮುಂದೆ ಬರಲಿದ್ದೇನೆ ನಮಸ್ಕಾರ ಅಂತಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಶುರುವಾಯ್ತು ಟ್ವೀಟ್ ವಾರ್: ಸುನಿಲ್ ಟ್ವೀಟ್ ನೋಡುತ್ತಿದ್ದಂತೆ ಕಪಿಲ್ ಅಭಿಮಾನಿಗಳು ಖಡಕ್ ತಿರುಗೇಟು ನೀಡಿದ್ದಾರೆ. ಒಬ್ಬ ಅಭಿಮಾನಿ `ಅಣ್ಣ ನೀವು ನಿಜವಾಗಿಯೂ ಸುನಿಲ್ ಗೆ ಕಾಲ್ ಮಾಡಿದ್ರಾ? ಈ ಹಿಂದಿನ ಶೋ ಬಗ್ಗೆ ಮಾತನಾಡ್ತಾ ಇದ್ದೀರಾ? ಅಥವಾ ಈಗ ಬರುತ್ತೀರೋ ಶೋ ಬಗ್ಗೆ ಹೇಳ್ತಾ ಇದ್ದೀರಾ? ಎಂಬುದರ ಬಗ್ಗೆ ಸ್ಪಷ್ಟನೆ ನೀಡಿ ಅಂತಾ ಇಬ್ಬರನ್ನೂ ಟ್ವಿಟ್ಟರ್ ನಲ್ಲಿಯೇ ಪ್ರಶ್ನಿಸಿದ್ದಾರೆ.

    ನಾನು ಸುನಿಲ್‍ಗೆ ನೂರಕ್ಕೂ ಹೆಚ್ಚು ಬಾರಿ ಕಾಲ್ ಮಾಡಿದ್ದೇನೆ. ಆತನ ಮನೆಗೆ ಹಲವರನ್ನು ಕಳುಹಿಸಿದ್ದೇನೆ. ನಾನು ಸಹ ಸುನಿಲ್ ಮನೆಗೆ ಹೋಗಿದ್ದೇನೆ. ಇನ್ಮುಂದೆ ತಮ್ಮ ಸ್ವಾರ್ಥಕ್ಕಾಗಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಇಷ್ಟು ದಿನ ಆಗಿದ್ದೇ ಸಾಕು. ನನಗೆ ಸುನಿಲ್ ಸಪೋರ್ಟ್ ಬೇಕಾಗಿಲ್ಲ. ಆದ್ರೆ ಈ ರೀತಿಯ ಸುಳ್ಳು ಸುದ್ದಿಗಳನ್ನು ಮಾತ್ರ ಹಬ್ಬಿಸಬೇಡಿ ಅಂತಾ ಕಪಿಲ್ ಬೇಸರ ವ್ಯಕ್ತಪಡಿಸಿದ್ದಾರೆ.

  • ಕೊನೆಗೂ ಎಲ್ಲಾ ಗಾಸಿಪ್ ಗಳಿಗೆ ಉತ್ತರ ಕೊಟ್ಟ ಕಪಿಲ್ ಶರ್ಮಾ

    ಕೊನೆಗೂ ಎಲ್ಲಾ ಗಾಸಿಪ್ ಗಳಿಗೆ ಉತ್ತರ ಕೊಟ್ಟ ಕಪಿಲ್ ಶರ್ಮಾ

    ಮುಂಬೈ: ಹಾಸ್ಯ ನಟ ಕಪಿಲ್ ಶರ್ಮಾ ಕೊನೆಗೂ ಮೌನ ಮುರಿದಿದ್ದು ನಾನು ಹೆಚ್ಚಾಗಿ ಮದ್ಯಪಾನ ಮಾಡುತ್ತಿದ್ದೇನೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

    ನನಗೆ ಸಾಕಷ್ಟು ನೋವಾಗಿದೆ. ನಾನು ಹೆಚ್ಚಾಗಿ ಕುಡಿಯುತ್ತಿದ್ದೇನೆ. ಇದು ಅವಶ್ಯಕವಲ್ಲ ಆದರೂ ನನಗೆ ಬಹಳ ನೋವುಂಟಾಗಿದೆ. ಸುನೀಲ್ ಗ್ರೋವರ್, ಚಂದನ್, ಅಲಿ ಅಸ್ಗರ್ ನನ್ನ ಒಳ್ಳೆಯ ಸ್ನೇಹಿತರು. ಇದು ಹೇಗೆ ಆಯ್ತು ಅಂತ ನನಗೆ ಗೊತ್ತಿಲ್ಲ ಎಂದು ಕಪಿಲ್ ಪ್ರತಿಕ್ರಿಸಿದ್ದಾರೆ.

    ನಾನು ಈಗ ಬೆಂಗಳೂರಿನಲ್ಲಿ ಇದ್ದೇನೆ ಹಾಗೂ ಆರ್ಯುವೇದ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ನನ್ನ ಆರೋಗ್ಯದ ಕಡೆ ಗಮನ ಕೊಡಬೇಕು. ಸೆಪ್ಟೆಂಬರ್ ಕೊನೆಯಲ್ಲಿ ನಾನು ಮುಂಬೈಗೆ ಹಿಂತಿರುಗುತ್ತಿದ್ದೇನೆ. ಇತ್ತೀಚಿಗೆ ನನ್ನ ಬಗ್ಗೆ ಬಂದ ಎಲ್ಲಾ ಸುದ್ದಿಗಳು ಸುಳ್ಳು. 10 ವರ್ಷದಿಂದ ಬ್ರೇಕ್ ಇಲ್ಲದೆ ದುಡಿಯುತ್ತಿದ್ದೇನೆ. ಬಿಪಿ ಮತ್ತು ಸಕ್ಕರೆ ಕಾಯಿಲೆ ಕಡೆ ನಾನು ಗಮನ ಕೊಡುತ್ತಿದ್ದೇನೆ ಎಂದು ಕಪಿಲ್ ತಿಳಿಸಿದ್ದಾರೆ.

    ಕಪಿಲ್ ಶರ್ಮಾ ಶೋ ತಂಡವು ಈ ಕಾರ್ಯಕ್ರಮವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಸುನೀಲ್ ಗ್ರೋವರ್ ಶೋನ ಮಧ್ಯದಲ್ಲೇ ಬಿಟ್ಟು ಹೋದ ಕಾರಣ ಕಪಿಲ್ ಸಾಕಷ್ಟು ಬೇಸರಗೊಂಡು ಕುಡಿಯಲು ಶುರು ಮಾಡಿದ್ದಾರೆ ಎನ್ನುವ ಸುದ್ದಿಗಳು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು.

    ಕಪಿಲ್ ಈಗ ರಾಜೀವ್ ದಿಂಗ್ರ ನಿರ್ದೇಶಿಸುತ್ತಿರುವ ಫಿರಂಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಹೊಟ್ಟೆ ಆಪರೇಷನ್‍ಗೆ ಒಳಗಾದ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್!

    ಹೊಟ್ಟೆ ಆಪರೇಷನ್‍ಗೆ ಒಳಗಾದ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್!

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಕಾಮಿಡಿ ಸ್ಟಾರ್ ಸುನಿಲ್ ಗ್ರೋವರ್‍ನಿಂದ ಹೊಟ್ಟೆ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಟ್ಯೂಬ್‍ಲೈಟ್ ಸಿನಿಮಾದ ಪ್ರಚಾರದ ವೇಳೆ ಸಲ್ಮಾನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

    ಸಲ್ಮಾನ್ ಖಾನ್ ತಮ್ಮ ಸಿನಿಮಾದ ಪ್ರಮೋಶನ್‍ಗಾಗಿ ಖಾಸಗಿ ಚಾನೆಲ್‍ನ ಕಾಮಿಡಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಕಾಮಿಡಿ ಸ್ಟಾರ್ ಸುನಿಲ್ ಗ್ರೋವರ್ ಡಾಕ್ಟರ್ ವೇಷದಲ್ಲಿ ಬಂದು ಸಲ್ಲುಗೆ ಆಪರೇಷನ್ ಮಾಡುವ ಮೂಲಕ ಎಲ್ಲರನ್ನು ನಗಿಸಿದ್ದಾರೆ.

    ಸೋನಿ ಚಾನೆಲ್ ಸಲ್ಮಾನ್ ಖಾನ್ ಅವರ ಟ್ಯೂಬ್‍ಲೈಟ್ ಸಿನಿಮಾದ ಪ್ರಚಾರಕ್ಕಾಗಿ `ಸೂಪರ್ ನೈಟ್ ವಿಥ್ ಟ್ಯೂಬ್‍ಲೈಟ್’ ಎಂಬ ವಿಶೇಷ ಕಾರ್ಯಕ್ರಮ ಏರ್ಪಡಿಸಿದೆ.

    ಸುನಿಲ್ ಗ್ರೋವರ್ ಇದಕ್ಕೂ ಮೊದಲು ಸೋನಿ ಚಾನೆಲ್ `ದಿ ಕಪಿಲ್ ಶರ್ಮಾ ಶೋ’ದಲ್ಲಿ ಡಾಕ್ಟರ್ ಮಶೂರ್ ಗುಲಾಟಿ ಹಾಗು ರಿಂಕು ಬಾಬಿ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರನ್ನು ನಗಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ಇಬ್ಬರ ನಡುವೆ ಜಗಳ ನಡೆದಿದ್ದು, ಸುನಿಲ್ ಕಾರ್ಯಕ್ರಮದಿಂದ ಹೊರ ಉಳಿದಿದ್ದಾರೆ.

    ಟ್ಯೂಬ್‍ಲೈಟ್ ಸಿನಿಮಾ ಇದೇ ತಿಂಗಳು ರಂಜಾನ್ ಹಬ್ಬದಂದು ತೆರೆಕಾಣಲಿದೆ. ಸಲ್ಮಾನ್ ಖಾನ್, ಸೋಹೆಲ್ ಖಾನ್ ಮತ್ತು ಚೀನಾ ನಟಿ ಝು ಝು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    https://www.youtube.com/watch?v=0cwrhTjjZJA

    https://www.youtube.com/watch?v=R21CzoBbmPE

    https://www.youtube.com/watch?v=wZu9tZ6Yph4

    https://www.youtube.com/watch?v=dPDjoC5ukuY

    https://www.youtube.com/watch?v=2ouZRkjBgxM

    https://www.youtube.com/watch?v=HChLxe1Qcsw

  • ರವೀನಾ ಟಂಡನ್‍ರನ್ನು ಸುನಿಲ್ ಗ್ರೊವರ್ ಇಂಪ್ರೆಸ್ ಮಾಡಿದ್ದು ಹೀಗೆ!

    ರವೀನಾ ಟಂಡನ್‍ರನ್ನು ಸುನಿಲ್ ಗ್ರೊವರ್ ಇಂಪ್ರೆಸ್ ಮಾಡಿದ್ದು ಹೀಗೆ!

    ಮುಂಬೈ: ಕಾಮಿಡಿಯನ್, ಡಾ.ಮಶೂರ್ ಗುಲಾಟಿ ಖ್ಯಾತಿಯ ಸುನಿಲ್ ಗ್ರೊವರ್ ಕಿಲಾಡಿ ಅಕ್ಷಯ್ ಕುಮಾರ್ ಗೆಟಪ್ ಹಾಕಿ `ತೂ ಚೀಜ್ ಬಡಿ ಹೈ ಮಸ್ತ್ ಮಸ್ತ್’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಬಾಲಿವುಡ್‍ನ ಮಸ್ತ ಹುಡುಗಿ ರವೀನಾ ಟಂಡನ್ ಅವರನ್ನು ಇಂಪ್ರೆಸ್ ಮಾಡಿದ್ದಾರೆ.

    ಸೋನಿ ಚಾನೆಲ್‍ನ ಸಬಸೇ ಬಡಾ ಕಲಾಕರ್ ಶೋನ ವೇದಿಕೆಯಲ್ಲಿ ಅಕ್ಷಯ್ ಕುಮಾರ್ ಅಭಿನಯದ ಮೊಹ್ರಾ ಫಿಲ್ಮ್ ಡ್ರೆಸ್ ಹಾಕಿ ತೂ ಚೀಜ್ ಬಡಿ ಹಾಡಿಗೆ ಡ್ಯಾನ್ಸ್ ಮಾಡಲಾರಂಭಿಸಿದರು. ಸುನಿಲ್ ಗ್ರೋವರ್ ಡ್ಯಾನ್ಸ್ ಆರಂಭಿಸುತ್ತಿದ್ದಂತೆ ಖುಷಿಯಾಗಿ ರವೀನಾ ಸ್ಟೇಜ್‍ಗೆ ಬಂದು ಡ್ಯಾನ್ಸ್ ಮಾಡಿದ್ದಾರೆ.

    ಸುನಿಲ್ ಗ್ರೋವರ್ ಮತ್ತು ಕಪಿಲ್ ಶರ್ಮಾ ನಡುವಿನ ಜಗಳದ ನಂತರ ಹೆಚ್ಚಾಗಿ ಯಾವುದೇ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಕಪಿಲ್ ಜೊತೆಗಿನ ವೈಮನಸ್ಸಿನ ನಂತರ ಸೋನಿ ಚಾನೆಲ್‍ನ `ಇಂಡಿಯನ್ ಐಡಲ್’ ಪೈನಲ್‍ನಲ್ಲಿ ಸುನಿಲ್ ಗ್ರೋವರ್ ಎಲ್ಲರನ್ನು ನಗಿಸಿದ್ದರು.

    ಆದರೆ ಕಪಿಲ್ ಶರ್ಮಾ ಶೋ ಜೊತೆಗಿನ ಅಗ್ರಿಮೆಂಟ್ ಮುರಿದುಕೊಂಡ ಸುನಿಲ್ ಗ್ರೊವರ್ ಅವರನ್ನು ಸೋನಿ ಮತ್ತೊಮ್ಮೆ ತಮ್ಮ ಚಾನೆಲ್ ಕರೆತಂದಿದೆ. ಸೋನಿಯಲ್ಲಿಯ `ಸಬಸೇ ಬಢಾ ಕಲಾಕರ್’ ರಿಯಾಲಿಟಿ ಶೋಗೆ ಬಂದಿದ್ದಾರೆ. ಸಬಸೇ ಬಡಾ ಕಲಾ ಕಲಾಕರ್ ಶೋದಲ್ಲಿ ಪುಟಾಣಿ ಮಕ್ಕಳು ತಮ್ಮಲ್ಲಿಯ ಕಲೆಯನ್ನು ತೋರಿಸುವ ರಿಯಾಲಿಟಿ ಶೋ ಆಗಿದ್ದು ರವೀನಾ ಟಂಡನ್, ಅರ್ಷದ್ ವಾರ್ಸಿ ಮತ್ತು ಬೊಮನ್ ಇರಾನಿ ಶೋ ಜಡ್ಜ್ ಗಳಾಗಿದ್ದಾರೆ.