Tag: sunflower

  • ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೂರ್ಯಕಾಂತಿ ಖರೀದಿಗೆ ಕೇಂದ್ರದ ಸಮ್ಮತಿ: ಶಿವಾನಂದ ಪಾಟೀಲ್

    ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೂರ್ಯಕಾಂತಿ ಖರೀದಿಗೆ ಕೇಂದ್ರದ ಸಮ್ಮತಿ: ಶಿವಾನಂದ ಪಾಟೀಲ್

    ಬೆಂಗಳೂರು: ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ, ಬೆಂಬಲ ಬೆಲೆ (Support Price) ಯೋಜನೆಯಲ್ಲಿ ಹೆಸರುಕಾಳು ಮತ್ತು ಸೂರ್ಯಕಾಂತಿ (Sunflower) ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ (Shivanand Patil) ತಿಳಿಸಿದ್ದಾರೆ.

    ಮಾರುಕಟ್ಟೆಯಲ್ಲಿ ಹೆಸರುಕಾಳು ಮತ್ತು ಸೂರ್ಯಕಾಂತಿ ಧಾರಣೆ ಕುಸಿದ ಕಾರಣ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 22,215 ಮೆಟ್ರಿಕ್ ಟನ್ ಹೆಸರುಕಾಳು ಹಾಗೂ 13,210 ಮೆಟ್ರಿಕ್ ಟನ್ ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ. ಬೆಂಬಲ ಬೆಲೆ ಯೋಜನೆಯಲ್ಲಿ ಎಫ್‍ಎಕ್ಯೂ ಗುಣಮಟ್ಟದ ಹೆಸರುಕಾಳಿಗೆ ಪ್ರತಿ ಕ್ವಿಂಟಲ್‍ಗೆ 8,682 ರೂ. ಹಾಗೂ ಸೂರ್ಯಕಾಂತಿಗೆ 7,280 ರೂ. ಬೆಲೆ ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಲಾರಿ ಚಾಲಕನ ನಿರ್ಲಕ್ಷ್ಯ – 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ

    ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಗೆ ಸಮ್ಮತಿಸಿರುವುದರಿಂದ ಖರೀದಿ ಏಜನ್ಸಿ ನೇಮಕ ಮಾಡಿ ಆದೇಶ ಹೊರಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ ಧಾರಣೆ ಕುಸಿದಿದೆ ಎಂದು ರೈತರು ಆತಂಕ ಪಡುವ ಅಗತ್ಯವಿಲ್ಲ. ಖರೀದಿ ಕೇಂದ್ರಗಳನ್ನು ಆರಂಭಿಸುತ್ತಿದ್ದಂತೆ ನೋಂದಣಿ ಮಾಡಿಸಿಕೊಂಡು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬಹುದು ಎಂದು ತಿಳಿಸಿದ್ದಾರೆ.

    ಹೆಸರುಕಾಳು ಮತ್ತು ಸೂರ್ಯಕಾಂತಿ ಬೆಳೆಯುವ ಪ್ರಮುಖ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಟಾಸ್ಕ್ ಫೋರ್ಸ್ ಸಭೆ ನಡೆಸಿ ಅಗತ್ಯ ಇರುವ ಕಡೆ ಖರೀದಿ ಕೇಂದ್ರಗಳನ್ನು ಗುರುತಿಸಿ ನೋಂದಣಿ ಆರಂಭಿಸಲಿದ್ದಾರೆ. ನಂತರ ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ವಿಳಂಬ ಮಾಡದೆ ಟಾಸ್ಕ್ ಫೋರ್ಸ್ ಸಭೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ.

    ರೈತರ ಹಿತದೃಷ್ಟಿಯಿಂದ ತ್ವರಿತವಾಗಿ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: MUDA Scam | ಪ್ರಾಸಿಕ್ಯೂಷನ್ ಸಮರದಲ್ಲಿ ಸೈಲೆಂಟ್ ಅಸ್ತ್ರ ಪ್ರಯೋಗಿಸಿದ ರಾಹುಲ್‌ ಗಾಂಧಿ!

  • ಮತ್ತೆ ಬೀದಿಗಿಳಿದ ರೈತರು- ದೆಹಲಿ, ಚಂಡೀಗಢ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

    ಮತ್ತೆ ಬೀದಿಗಿಳಿದ ರೈತರು- ದೆಹಲಿ, ಚಂಡೀಗಢ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

    ಚಂಡೀಗಢ: ಬೆಂಬಲ ಬೆಲೆ ನೀಡಿ ಸೂರ್ಯಕಾಂತಿ (Sunflower Seeds) ಬೆಳೆ ಖರೀದಿಸದ ಹರಿಯಾಣ ಸರ್ಕಾರ (Haryana Government) ದ ವಿರುದ್ಧ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ರೈತ ನಾಯಕ ರಾಕೇಶ್ ಟಿಕಾಯತ್  ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಪ್ರಮುಖ ಕುಸ್ತಿಪಟುಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

    ಸೂರ್ಯಕಾಂತಿ ಬೆಳೆಗೆ ಬೆಂಬಲ ನೀಡುವಂತೆ ಆಗ್ರಹಿಸಿ ಸೋಮವಾರ ಕುರುಕ್ಷೇತ್ರ (flyover near Pipli in Kurukshetra district) ಜಿಲ್ಲೆಯ ಪಿಪ್ಲಿ ಬಳಿಯ ಫ್ಲೈಓವರ್ ಮೇಲೆ ರೈತರು (Farmers Protest) ಜಮಾಯಿಸಿದ್ದರು. ರೈತರ ಪ್ರತಿಭಟನೆಯಿಂದ ದೆಹಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.

    ಪ್ರತಿಭಟನೆಗೂ ಮುನ್ನ ಕುರುಕ್ಷೇತ್ರದಲ್ಲಿ ಮಹಾಪಂಚಾಯತ್ ನಡೆಸಲಾಯಿತು. ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ( Rakesh Tikait) ಸೇರಿದಂತೆ ಪ್ರಮುಖ ರೈತ ಮುಖಂಡರು, ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ( Brij Bhushan Sharan Singh) ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿರುವ ಕುಸ್ತಿಪಟುಗಳಲ್ಲಿ ಒಬ್ಬರಾದ ಬಜರಂಗ್ ಪುನಿಯಾ ( Bajrang Punia) ಇಲ್ಲಿ ಭಾಗಿಯಾಗಿದ್ದರು.

    ರಾಜ್ಯ ಸರ್ಕಾರವು ಸೂರ್ಯಕಾಂತಿ ಬೀಜಗಳನ್ನು MSPಯಲ್ಲಿ ಖರೀದಿಸುತ್ತಿಲ್ಲ, ಪ್ರತಿ ಕ್ವಿಂಟಾಲ್‍ಗೆ 6,400 ರೂ. ನೀಡಿ ಖರೀದಿಸಬೇಕಿದ್ದ ಸರ್ಕಾರ ಖಾಸಗಿ ಖರೀದಿದಾರರಿಗೆ ಕ್ವಿಂಟಾಲ್‍ಗೆ 4000ರೂ.ಗೆ ಮಾರಾಟ ಮಾಡಲು ಒತ್ತಾಯಿಸುತ್ತಿದೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದ್ದಾರೆ. ಇದನ್ನೂ ಓದಿ: ಅಪ್ಪ ತಿಹಾರ್ ಜೈಲಿನಲ್ಲಿ ಇದ್ದಾಗ ವೇಷ ಬದಲಿಸಿಕೊಂಡು ನೋಡಲು ಹೋಗಿದ್ದೆ : ಡಿಕೆಶಿ ಪುತ್ರಿ ಐಶ್ವರ್ಯಾ

    ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ರೈತರು ಜೂನ್ 6 ರಂದು ಕುರುಕ್ಷೇತ್ರದಲ್ಲಿ ದೆಹಲಿ-ಅಮೃತಸರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ರಸ್ತೆಯನ್ನು ತೆರವುಗೊಳಿಸಲು ಲಾಠಿಚಾರ್ಜ್ ಮಾಡಿದರು. ಅಧ್ಯಕ್ಷರು ಸೇರಿದಂತೆ ಒಂಬತ್ತು BKU ನಾಯಕರನ್ನು ಗಲಭೆ ಮತ್ತು ಕಾನೂನುಬಾಹಿರ ಸಭೆ ಸೇರಿದಂತೆ ವಿವಿಧ ಆರೋಪಗಳ ಮೇಲೆ ಬಂಧಿಸಲಾಗಿತ್ತು.

  • ಸೆಲ್ಫಿ ಹುಚ್ಚು- ಸೂರ್ಯಕಾಂತಿ ಜಮೀನುಗಳಿಗೆ ಪ್ರವಾಸಿಗರ ಲಗ್ಗೆ

    ಸೆಲ್ಫಿ ಹುಚ್ಚು- ಸೂರ್ಯಕಾಂತಿ ಜಮೀನುಗಳಿಗೆ ಪ್ರವಾಸಿಗರ ಲಗ್ಗೆ

    ಚಾಮರಾಜನಗರ: ರಸ್ತೆಯ ಇಕ್ಕೆಲ್ಲದ ಹಸಿರಿಗೆ ಹಳದಿ ಸೀರೆಯುಟ್ಟಂತೆ ಭಾಸವಾಗುವಂತೆ ಸೂರ್ಯಕಾಂತಿ ಬೆಳೆದು ನಿಂತಿದ್ದು, ಕೃಷಿ ಭೂಮಿಗಳು ಸೆಲ್ಫಿ ಸ್ಪಾಟಾಗಿ ಬದಲಾಗಿವೆ. ಆದರೆ ಬೆಳೆ ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ.

    ಕೊರೊನಾ ಭೀತಿ ನಡುವೆಯೂ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಹಿಮವದ್ ಗೋಪಾಲಸ್ವಾಮಿಗೆ ಬರುತ್ತಿರುವ ಪ್ರವಾಸಿಗರ ದಂಡು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೂರ್ಯಕಾಂತಿ ಜಮೀನುಗಳಿಗೆ ನುಗ್ಗಿ ಫೋಟೋ ಕ್ಲಿಕಿಸುತ್ತಿದ್ದಾರೆ. ಸೂರ್ಯಕಾಂತಿ ಫಸಲು ನಳನಳಿಸುತ್ತಿದ್ದು, ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಬಂಡೀಪುರ, ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ನೂರಾರು ಪ್ರವಾಸಿಗರು ಜಮೀನಿನಲ್ಲಿ 2-3 ತಾಸು ಸಮಯ ಕಳೆದು, ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ.

    ಪ್ರವಾಸಿಗರ ಸೆಲ್ಫಿ ಸಂಭ್ರಮಕ್ಕೆ ಜಮೀನು ಮಾಲೀಕ ಅಭಿಷೇಕ್ ಗಿಡಗಳನ್ನು ತುಳಿದು ಹಾಳು ಮಾಡಬೇಡಿ, ಹೂವುಗಳನ್ನು ಕೀಳಬೇಡಿ ಎನ್ನುತ್ತಿದ್ದಾರೆ. ಅಲ್ಲದೆ ಪ್ರವಾಸಿಗರ ಬಳಿ 50 ರೂ. ಶುಲ್ಕ ಪಡೆಯುತ್ತಿದ್ದಾರೆ.

    ಸೂರ್ಯನ ಕಿರಣಗಳತ್ತ ಮೋರೆ ತಿರುಗಿಸಿ ನಗು ಬೀರುವ ಸೂರ್ಯಕಾಂತಿ ಚೆಲುವಿಗೆ ಪ್ರವಾಸಿಗರು ಫಿದಾ ಆಗಿದ್ದಾರೆ. ವೀಕೆಂಡ್ ಟ್ರಿಪ್ಪಿಗಾಗಿ ಬಂಡೀಪುರಕ್ಕೆ ತೆರಳುತ್ತಿದ್ದಾಗ ಈ ಜಮೀನಿನ ಚೆಲುವು ಕಂಡು ಬಂದೆವು ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ. ಪ್ರವಾಸಿ ತಾಣಗಳು ಮತ್ತೆ ಜನರಿಂದ ಗಿಜಿಗಿಜಿ ಎನ್ನುವ ಜೊತೆಗೆ ಸೂರ್ಯಕಾಂತಿ ಜಮೀನುಗಳಲ್ಲಿ ಸೆಲ್ಫಿ ಕ್ಲಿಕ್ ಸದ್ದು ಜೋರಾಗಿದೆ.

  • ಸೆಲ್ಫೀಗಾಗಿ ಬರೋರಿಂದ ಸೂರ್ಯಕಾಂತಿ ಬೆಳೆ ಹಾನಿ- ರೈತ ಮಾಡಿದ ಉಪಾಯದಿಂದ ಈಗ ಪ್ರತಿದಿನ ಸಾವಿರಾರು ರೂ. ಸಂಪಾದನೆ

    ಸೆಲ್ಫೀಗಾಗಿ ಬರೋರಿಂದ ಸೂರ್ಯಕಾಂತಿ ಬೆಳೆ ಹಾನಿ- ರೈತ ಮಾಡಿದ ಉಪಾಯದಿಂದ ಈಗ ಪ್ರತಿದಿನ ಸಾವಿರಾರು ರೂ. ಸಂಪಾದನೆ

    ಚಾಮರಾಜನಗರ: ಸೂರ್ಯಕಾಂತಿ ಹೂ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ? ಆದರಲ್ಲೂ ಈ ಸೆಲ್ಫೀ ಯುಗದಲ್ಲಿ ಇಂತಹ ಆಕರ್ಷಣೆಯ ಹೂ ಕಂಡ್ರೆ ಮುಗಿದೇ ಹೋಯಿತು. ಯುವಕ ಯುವತಿಯರು ಹುಚ್ಚೆದ್ದು ಹೂವಿನ ಮುಂದೆ ಸೆಲ್ಫಿಗಳ ಸುರಿಮಳೆಯನ್ನೆ ಸುರಿಸಿ ಬಿಡುತ್ತಾರೆ. ಯುವ ಜನಾಂಗದ ಈ ಸೆಲ್ಫೀ ಕ್ರೇಜ್ ಬಳಸಿಕೊಂಡು ರೈತರೊಬ್ಬರು ಮಳೆ ಇಲ್ಲದಿದ್ದರೂ ಸಹ ಕೃಷಿಯಲ್ಲಿ ಸಾಕಷ್ಟು ಹಣ ಗಳಿಕೆ ಮಾಡ್ತಾ ಇದ್ದಾರೆ.

    ಹೌದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕುಮಾರ್ ಎಂಬ ರೈತ ಬೆಳೆದಿರುವ ಸೂರ್ಯಕಾಂತಿ ಬೆಳೆಯಿಂದ ದಿನನಿತ್ಯ 3 ರಿಂದ 4 ಸಾವಿರ ರೂ. ಹಣ ಸಂಪಾದನೆಯಾಗುತ್ತಿದೆ. ಅದು ಯುವ ಜನಾಂಗದ ಸೆಲ್ಫೀ ಕ್ರೇಜ್ ಬಳಕೆ ಮಾಡಿಕೊಂಡು. ದೃಶ್ಯದಲ್ಲಿ ಸೂರ್ಯಕಾಂತಿ ಹೂವಿನ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಾ ಇರುವ ಯುವಕರಿಗೆ ತಲಾ ಒಬ್ಬರಿಗೆ ಹತ್ತರಿಂದ ಇಪ್ಪತ್ತು ರೂಪಾಯಿ ಹಣವನ್ನು ನಿಗದಿ ಮಾಡಲಾಗಿದೆ.

    ಈ ರಸ್ತೆಯಲ್ಲಿ ಅತಿಯಾಗಿ ಕೇರಳ ಭಾಗದವರು ಸಂಚರಿಸುವುದರಿಂದ ಅವರು ಸೂರ್ಯಕಾಂತಿಗೆ ಮಾರು ಹೋಗಿ ಪ್ರತಿನಿತ್ಯ ಯಾರೂ ಇಲ್ಲದ ವೇಳೆ ಫೋಟೋ ತೆಗೆದುಕೊಳ್ಳಲು ಬಂದು ಬೆಳೆಯನ್ನು ಮುರಿದು ಹಾಕುತ್ತಿದ್ದರು. ಹೀಗಾಗಿ ಕುಮಾರ್ ಇದನ್ನು ತಡೆಯಬೇಕು ಎಂದು ಇಲ್ಲಿ ಫೋಟೋ ತೆಗೆದುಕೊಳ್ಳುವವರು ಹಣ ನೀಡಬೇಕು ಎಂದು ಬೋರ್ಡ್ ಹಾಕಿದ್ದಾರೆ. ಹೀಗಿದ್ದರೂ ಸಹ ಫೋಟೋ ತೆಗೆದುಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

    ಪ್ರತಿನಿತ್ಯ ನೂರಾರು ಮಂದಿ ಬಂದು ಹಣ ನೀಡಿ ಸೂರ್ಯಕಾಂತಿಯ ಮಧ್ಯೆ ಫೋಟೋ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಬೆಳೆಯ ಸಂರಕ್ಷಣೆ ಜೊತೆಗೆ ಆದಾಯವು ಕೂಡ ದೊರಕುತ್ತಿರುವುದು ಕುಮಾರ್ ಮುಖದಲ್ಲಿ ಮಂದಹಾಸ ಮೂಡಿದೆ.